Tag: ಶಂಕರ್ ಅಶ್ವಥ್

  • ಬಿಗ್ ಮನೆಯಿಂದ ಹೊರ ಬಂದ್ರು ಶಂಕರ್ ಅಶ್ವಥ್

    ಬಿಗ್ ಮನೆಯಿಂದ ಹೊರ ಬಂದ್ರು ಶಂಕರ್ ಅಶ್ವಥ್

    ದನೇ ವಾರ ಮನೆಯಿಂದ ಯಾರು ಹೊರ ಹೋಗ್ತಾರೆ ಅನ್ನೋ ತವಕಕ್ಕೆ ತೆರೆ ಬಿದ್ದಿದೆ. ಮನೆಯ ಹಿರಿಯ ಸ್ಪರ್ಧಿ ಶಂಕರ್ ಅಶ್ವಥ್ ಈ ಬಿಗ್‍ಬಾಸ್ ನಿಂದ ಹೊರ ಬಂದಿದ್ದಾರೆ.

    ಮನೆಯಿಂದ ಹೊರ ಬಂದ ಬಳಿಕ ಮಾತನಾಡಿದ ಶಂಕರ್ ಅಶ್ವಥ್, 35 ದಿನ ಸಾಕಾಯ್ತಾ ಅನ್ನಿಸಲ್ಲ. ಆದ್ರೆ ಮನೆಯಲ್ಲಿ ಮನಸ್ಸಿದೆ. ಶಕ್ತಿ ಮೀರಿ ನೀಡಿದ ಟಾಸ್ಕ್ ಮಾಡಿದೆ. ನನಗೆ ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ. ಟಾಸ್ಕ್ ವೇಳೆ ಏನಾದ್ರೂ ಆದ್ರೆ ಅನ್ನೋ ಭಯ. 82 ವಯಸ್ಸಿನ ತಾಯಿ ಇದ್ದಾರೆ. ಹೆಂಡ್ತಿ ಇದ್ದಾರೆ. ಇವರಿಗೆಲ್ಲ ನಾನು ಭಾರ ಆಗ್ತೀನಿ ಅನ್ನೋ ಭಯ ಶುರುವಾಗಿತ್ತು ಎಂದರು.

    ನಿಧಿ ಸುಬ್ಬಯ್ಯ, ಶಮಂತ್ ಗೌಡ, ನಿಧಿ ಸುಬ್ಬಯ್ಯ, ಅರವಿಂದ್ ಮತ್ತು ಶಂಕರ್ ಅಶ್ವಥ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಅಂತಿಮವಾಗಿ ಶಂಕರ್ ಅಶ್ವಥ್ ಹೊರ ಬಂದಿದ್ದು, ಕಳೆದ ವಾರ ಕೇಳಿ ಬಂದಿದ್ದ ಗಾಳಿ ಸುದ್ದಿಗಳಿಗೆ ಪೂರ್ಣ ವಿರಾಮ ಬಿದ್ದಿದೆ. ನಾಲ್ಕನೇ ವಾರ ಎಲಿಮಿನೇಟ್ ಆಗಿದ್ದ ಚಂದ್ರಕಲಾ ಮೋಹನ್ ಪ್ರಕಾರ ತಮ್ಮ ನಂತರ ನಿಧಿ ಔಟ್ ಆಗ್ತಾರೆ ಎಂದು ಗೆಸ್ ಮಾಡಿದ್ದರು.

    ಮೊದಲ ವಾರ ಟಿಕ್‍ಟಾಕ್ ಚೆಲುವೆ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ, ಮೂರನೇ ವಾರ ಗೀತಾ ಭಾರತಿ ಮತ್ತು ನಾಲ್ಕನೇ ವಾರ ಚಂದ್ರಕಲಾ ಮೋಹನ್ ಹೊರ ಬಂದಿದ್ದರು. ಸತತವಾಗಿ ಮಹಿಳಾ ಸ್ಪರ್ಧಿಗಳೇ ಹೊರ ಬಂದಿದ್ದರಿಂದ ಸೇವ್ ಆಗಿದ್ದವರು ನಾವು ಸ್ಟ್ರಾಂಗ್ ಆಗಬೇಕೆಂದು ಮಾತಾಡಿಕೊಂಡಿದ್ದರು.

    ಈ ವಾರ ಕಳಪೆ ಪ್ರದರ್ಶನ ನೀಡಿದ್ದ ಸ್ಪರ್ಧಿಯೆಂದು ಶಂಕರ್ ಅಶ್ವಥ್ ಅವರನ್ನ ಮನೆ ಮಂದಿ ಆಯ್ಕೆ ಮಾಡಿದ್ದರು. ಇತ್ತ ದಿವ್ಯಾ ಸುರೇಶ್ ಬೆಸ್ಟ್ ಪ್ಲೇಯರ್ ಆಗಿದ್ದರು. ಈ ವಾರ ಮಂಜು ಪಾವಗಡ ಮನೆಯ ಕ್ಯಾಪ್ಟನ್ ಆಗಿದ್ದಾರೆ.

  • ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ಬೆಂಗಳೂರು: ಬಿಗ್‍ಬಾಸ್ ಮನೆ ಎಂದರೆ ಹೈ ಡ್ರಾಮಾ ಎಂದು ಗೊತ್ತು. ಪ್ರತಿಯೊಬ್ಬರು ಒಂದೊಂದು ಮುಖವಾಡ ತೊಟ್ಟು ನಾಟಕವಾಡುತ್ತಾರೆ ಅಂತ ಅಲ್ಲಿಯವರೇ ಹೇಳುತ್ತಿರುತ್ತಾರೆ. ಒಬ್ಬೊಬ್ಬರ ಮುಖವಾಡ ಕಳಚಿ ಬೀಳುತ್ತಿದೆ. ಹೀಗಿರುವಾಗ ಮನೆಯವರ ದೃಷ್ಟಿಯಲ್ಲಿ ನಿರ್ಮಲಾ ಎಂದರೆ ಕೊಂಚ ವಿಭಿನ್ನ. ಇವರ ಕುರಿತಾಗಿ ಅವರದ್ದೇ ಟೀಮ್‍ನವರು ಮಾತನಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಥೀಮ್‍ನಲ್ಲೊಂದು ಆಟವನ್ನು ಆಡಿಸಲಾಗುತ್ತಿದೆ. ವೈರಸ್ ಹಾಗೂ ಮನುಷ್ಯರ ಎಂದು ಆಟವಾಡುತ್ತಿದ್ದಾರೆ. ಆಟದ ವೇಳೆ ನಿರ್ಮಲಾ ಗಾಯಗೊಂಡಿದ್ದಾರೆ. ಆದರೆ ನಾನು ಆಟವಾಡುತ್ತೇನೆ ಎಂದು ಅವರ ತಂಡವದರ ಬಳಿ ನಿರ್ಮಲಾ ಕೇಳಿದ್ದಾರೆ. ಈ ವೇಳೆ ಶಂಕರ್ ಅಶ್ವಥ್, ನಿಧಿ ಸುಬ್ಬಯ್ಯ, ರಘು, ರಾಜೀವ್ ಅವರು ನಿರ್ಮಲಾ ಅವರ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಮಾಡುತ್ತಿದ್ದಾರೆ..!
    ನಿರ್ಮಲಾ ಅವರು ತಲೆಯನ್ನು ಯಾರೋ ಆಪರೇಟ್ ಮಾಡುತ್ತಿದ್ದಾರೆ. ಯಾರೋ ಕ್ರೇಜಿ ಅವರು ಎಂದು ಹೇಳಿ ನಕ್ಕಿದ್ದಾರೆ. ನಿರ್ಮಲಾ ಅವರು ಸಖತ್ ಟ್ಯಾಲೆಂಟ್. ಏನಾದರೂ ಹೇಳಿ ಸುಮ್ಮನಾಗಲ್ಲ ಕೈ ಬಾಯಿ ಆಡಿಸುತ್ತಾರೆ. ಆದರೆ ಜಗತ್ತಿನಲ್ಲಿ ಮುಖ್ಯವಾಗಿ ಕೈ, ಬಾಯಿ ಹಿಡಿತ ಇರಬೇಕು ಎಂದು ಹೇಳಿ ರಘು ಹೇಳಿದ್ದಾರೆ.

    ನಿರ್ಮಲಾನಂತೆ ಮಿಮಿಕ್ರಿ ಮಾಡಿದ ಶಂಕರ್ ಅಶ್ವಥ್!
    ಹೋಗು ಮನೆಗೆ ನಿನ್ನ ಹಣೆಬರ ಮನೆಗೆ ಹೋಗಬೇಕು ಎಂದೆ ಇದೆ, ದೇವರು ಇಲ್ಲಿವರೆಗೂ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಮನಸ್ಸು ಒಳ್ಳೆಯದು ಆದರೆ ಏನೊ ಹೊಸ ತರ ಮಾಡಲು ಹೋಗುತ್ತಾರೆ. ಈ ವೇಳೆ ನಿನ್ನ ಹೆಸರು ಏನು ಎಂದು ನಿರ್ಮಲಾ ಬಳಿ ಕೇಳಿದರೆ ಅವರ ಹೇಗೆ ಮತನಾಡುತ್ತಾರೆ ಎಂಬುದನ್ನು ಆ್ಯಕ್ಟ್ ಮಾಡಿ ಶಂಕರ್ ತೋರಿಸಿದ್ದಾರೆ ಈ ವೇಳೆ ಅಲ್ಲಿದ್ದ ವೈರಸ್ ಟೀಮ್ ತಂಡದ ಸದಸ್ಯರು ಅವರದ್ದೇ ಸದಸ್ಯರ ಕುರಿತಾಗಿ ಮಾತನಾಡಿ ಜೋರಾಗಿ ನಕ್ಕಿದ್ದಾರೆ.

    ಬಿಗ್ ಬಾಸ್ ಮನೆ ಒಂದು ವಾರ ಶಾಂತವಾಗಿತ್ತು. ಯಾವುದೇ ಜಗಳ ಎಂದು ಇರಲಿಲ್ಲಲ. ಆದರೆ ಬಿಗ್‍ಬಾಸ್ ಅಸಲಿ ಆಟ ಶುರುವಾಗಿದೆ. ಎಲ್ಲರ ನಗುಮುಖದ ಹಿಂದಿರುವ ಮುಖವಾಡ ಒಂದೊಂದಾಗಿಯೇ ಹೊರ ಬರುತ್ತಿದೆ. ಈ ಎಲ್ಲರ ನಗು, ಜಗಳ, ಆಟದ ಹಿಂದೆ ಇರುವವರು ಬಿಗ್‍ಬಾಸ್

  • ಬಿಗ್ ಮನೆಗೆ ಬಂತು ವಿಶೇಷ ಗಿಫ್ಟ್

    ಬಿಗ್ ಮನೆಗೆ ಬಂತು ವಿಶೇಷ ಗಿಫ್ಟ್

    ಬೆಂಗಳೂರು: ವಾರದ ಕಟ್ಟೆ ಪಂಚಾಯ್ತಿಯಲ್ಲಿ ಮನೆಯ ಸದಸ್ಯರಿಗೆ ಕೆಲವು ಬುದ್ದಿಮಾತುಗಳನ್ನು ಸುದೀಪ್ ಹೇಳಿದ್ದಾರೆ. ಮನೆಯಿಂದ ಒಬ್ಬರು ಹೊರ ಹೋಗಿದ್ದಾರೆ. ಮುಂದಿನವಾರದ ಯೋಚನೆಯೊಂದಿಗೆ ಒಂಟಿ ಮನೆಯ ಸದಸ್ಯರು ದಿನವನ್ನು ಆರಂಭಿಸಿದ್ದಾರೆ. ಬೆಳ್ಳಂಬೆಳಗ್ಗೆನೆ ಬಿಗ್‍ಬಾಸ್ ಮನೆಗೆ ಒಂದು ವಿಶೇಷ ಗಿಫ್ಟ್ ಕಳುಹಿಸಿಕೊಟ್ಟಿದ್ದಾರೆ.

    ವಾರದ ಕಟ್ಟೆ ಪಂಚಾಯ್ತಿಯಲ್ಲಿ ಕಿಚ್ಚನಿಂದ ಚಪ್ಪಾಳೆ ಪಡೆದ ಬಿಗ್ ಮನೆಯ ಸದಸ್ಯರಾದ ಶಂಕರ್ ಅಶ್ವಥ ಅವರಿಗೆ ಬಿಗ್ ಬಾಸ್ ನಿಂದ ವಿಶೇಷವಾದ ಗಿಫ್ಟ್ ಬಂದಿದೆ. ಮನೆಯ ಸದಸ್ಯರು ನಗು ಮುಖದಿಂದ ಶುಭ ಕೋರಿದ್ದಾರೆ. ಆದರೆ ನಗು ಮುಖದ ಹಿಂದೆ ನಾವು ಮುಂದಿನವಾರ ಚಪ್ಪಾಳೆ ಪಡೆಯಬೇಕು ಹಂಬಲ ಪ್ರತಿಯೊಬ್ಬರಲ್ಲಿಯೂ ಇದೆ.

    ಬ್ರೋ ಗೌಡಾ ಇದೆಲ್ಲಾ ನಿಮ್ಮಿಂದ..!
    ಲಿವಿಂಗ್ ಏರಿಯಾದಲ್ಲಿ ಇರುವ ಫೋಟೋ ಪ್ರೇಮ್‍ಗಳಲ್ಲಿ ಈ ಫೋಟೋವನ್ನು ಜೋಡಿಸಿ ಎಂದು ಬಿಗ್ ಬಾಸ್ ಸೂಚಿಸಿದ್ದರು. ಫೋಟೋವನ್ನು ನೋಡುತ್ತಿದ್ದಂತೆ ಮನೆಯ ಸದಸ್ಯರು ಸಂತೋಷ ಪಟ್ಟಿದ್ದಾರೆ. ಈ ಚಪ್ಪಾಳೆಗೆ ಕಾರಣರಾದ ಮನೆಯ ಸದಸ್ಯರಿಗೆ ಶಂಕರ್ ಆಶ್ವಥ್ ಧನ್ಯವಾದವನ್ನು ಹೇಳಿದ್ದಾರೆ. ಹಾಗೇ ಬ್ರೋ ಗೌಡಾ ಅವರಿಗೆ ನೀವು ನನ್ನ ನಾಮಿನೇಟ್ ಮಾಡಿರುವುದು ಎಂದು ಹೇಳಿದ್ದಾರೆ. ಆಗ ಬ್ರೋ ಗೌಡಾ ತಮ್ಮದೇ ಆಗಿರುವ ಮುಗ್ದತೆಯಿಂದ ಅಶ್ವಥ್ ಅವರನ್ನು ತಬ್ಬಿಕೊಂಡಿದ್ದಾರೆ.

    ಬಾ ದಿ ಎಂದರೆ ಏನ್ ಅರ್ಥ ಗೊತ್ತಾ?
    ಗಾರ್ಡ್‍ನ್ ಏರಿಯಾದಲ್ಲಿ ಎಲ್ಲರೂ ಕುಳಿತ್ತಿದ್ದರು. ಈ ವೇಳೆ ದಿವ್ಯ ಉರುಡುಗ ಅವರು ಅರುಣ್ ಮತ್ತು ಮಂಜು ಇರುವ ಸ್ಥಳಕ್ಕೆ ಬರುತ್ತಾರೆ ಆಗ ಮಂಜು ಬಾ ದಿ ಎನ್ನುತ್ತಾರೆ. ಓ ಏನು ಕಾಫಿ ಏನಾದರೂ ಬೇಕಾ.. ದಿ ಎಂದರೆ ನೀವು ಅದಕ್ಕೆ ಕರೆಯುತ್ತಿರಾ ಹೇಳಿ ಎಂದು ದಿವ್ಯಾ ಹೇಳಿದ್ದಾರೆ. ಈ ವೇಳೆ ಮಂಜು, ಅರುಣ್ ಕೆಲವೆ ದಿನದಲ್ಲಿ ದಿವ್ಯ ಎಷ್ಟೊಂದು ಹುಶಾರಾಗಿ ಬಿಟ್ಟಿದ್ದಾರೆ ಎಂದು ಹೇಳಿ ನಕ್ಕಿದ್ದಾರೆ.

    ನಿಜವಾದ ಪ್ರೀತಿಗೆ ಕಣ್ಣಿಲ್ಲ..!
    ಪ್ರೀತಿ ಮಾಡೋದ್ ಗೊತ್ತಿಲ್ಲ ನನಗೆ.. ಪ್ರೀತಿ ಹುಟ್ಟೋದು ಒಳಗಿಂದಾನೆ ಗೊತ್ತಿಲ್ಲವಾ ನಿನಗೆ ಎಂದು ದಿವ್ಯನಿಗೆ ಹಾಡು ಹೇಳಿ ನಿಜವಾದ ಪ್ರೀತಿಗೆ ಕಣ್ಣಿಲ್ಲ ಎಂದಿದ್ದಾರೆ. ಇದನ್ನು ಕೇಳಿದ ದಿವ್ಯ ಉರುಡುಗ ಮಂಜಾ ನಿನಗೆ ಎಷ್ಟು ಪ್ರೀತಿ ಇದೆಯೋ ಎಂದು ಹೇಳಿ ನಕ್ಕಿದ್ದಾರೆ.

    ಬಿಗ್ ಮನೆಯಲ್ಲಿ ಜಗಳ, ಕಣ್ಣೀರು, ಕಾಮಿಡಿ ಎಲ್ಲ ಕಾಮನ್. ಬಿಗ್ ಬಾಸ್ ಹೌಸ್ ನಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣಕ್ಕಂತೂ ಕಮ್ಮಿ ಇಲ್ಲ. ಪ್ರತಿನಿತ್ಯ ಮನೆಯಲ್ಲಿ ಬಣ್ಣ ಬಣ್ಣದ ಕಥೆಗಳು ಸಿಗುತ್ತಲೆ ಇರುತ್ತವೆ. ಬಿಗ್ ಮನೆಯ ಸೂತ್ರದಗೊಂಬೆಗಳನ್ನು ಆಡಿಸುವಾತ ಬಿಗ್‍ಬಾಸ್ ಇವರೆಲ್ಲ ನೆಪ ಮಾತ್ರ.

  • ಬಿಗ್‍ಬಾಸ್ ಮನೆಯಲ್ಲಿ ಐಕ್ಯತೆ ಒಡೆದಿದೆ ಎಂದ ಶಂಕರ್ ಅಶ್ವಥ್

    ಬಿಗ್‍ಬಾಸ್ ಮನೆಯಲ್ಲಿ ಐಕ್ಯತೆ ಒಡೆದಿದೆ ಎಂದ ಶಂಕರ್ ಅಶ್ವಥ್

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ದಿನದಿನೇ ಸ್ಪರ್ಧಾ ಕಣ ರಂಗೇರುತ್ತಿದ್ದಂತೆ ಸ್ಪರ್ಧಿಗಳು ತಮ್ಮ ತಮ್ಮೊಳಗೆ ತಮ್ಮ ಐಕ್ಯತೆಯನ್ನು ಒಡೆಯುವ ರೀತಿಯಲ್ಲಿ ಮುನ್ನುಗ್ಗುತ್ತಿದ್ದಾರೆ ಎನ್ನುವ ಗುಮಾನಿಯೊಂದನ್ನು ಶಂಕರ್ ಅಶ್ವಥ್ ಬಿಚ್ಚಿಟ್ಟಿದ್ದಾರೆ.

    ಬಗೆ ಬಗೆಯ ಟಾಸ್ಕ್ ಗಳನ್ನು ಪ್ರತಿದಿನ ಬಿಗ್ ಬಾಸ್ ಕೊಟ್ಟಾಗ ಕೆಲವು ಸ್ಪರ್ಧಿಗಳ ಅಸಲಿ ಮುಖವಾಡ ಕಳಚುತ್ತಿದೆ. ಕೆಲವರು ನಮ್ಮೊಂದಿಗೆ ಹೊರಮನಸ್ಸಿನಿಂದ ಚೆನ್ನಾಗಿ ಮಾತನಾಡಿಸಿ ನಮ್ಮ ಆಶೀರ್ವಾದ ಪಡೆದರೆ ಒಳಮನಸ್ಸಿನಲ್ಲಿ ನಮ್ಮನ್ನೇ ಸೊಲಿಸಿ ಗೆಲುವನ್ನು ಮುಡಿಗೇರಿಸಬೇಕೆಂಬ ಹಂಬಲ ಕೆಲವರಲ್ಲಿ ಕಾಣುತ್ತಿದ್ದೇನೆ ಎಂದು ಅಶ್ವಥ್ ಬಿಗ್ ಬಾಸ್ ಕ್ಯಾಪ್ಟನ್ ಬ್ರೋ ಗೌಡ ಜೊತೆ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.

    ಅಶ್ವಥ್ ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಂತೆ ಹತ್ತಿರವಿದ್ದ ಗೀತಾ ಭಾವುಕರಾಗಿದ್ದಾರೆ. ಈ ವೇಳೆ ಮತ್ತೆ ಬಂದ ಅಶ್ವಥ್ ನೀನು ಯಾಕಮ್ಮ ಕೂಗುತ್ತಿದ್ದೀಯ ನಿನಗೆ ಹೇಳಿದ್ದಲ್ಲ ನಿನ್ನ ಭಕ್ತಿಯೇ ನಿನ್ನ ಶಕ್ತಿ ಎಂದು ಸಮಾಧಾನ ಮಾಡಿ ಮಾತು ಮುಂದುವರಿಸಿದರು. ಕೆಲವರು ನಮ್ಮೊಂದಿಗೆ ಬಂದು ನಿಮ್ಮಿಂದ ತಿಳಿದುಕೊಳ್ಳಲು ತುಂಬಾ ಇದೆ ಎಂದು ಹೇಳಿ ನಮ್ಮನ್ನೇ ಪರೀಕ್ಷಿಸುತ್ತಿದ್ದಾರೆ. ಆದರೆ ಅವರ ಪರೀಕ್ಷೆ ನನಗೆ ಅರ್ಥವಾಗುತ್ತಿದೆ ಅವರನ್ನು ಯಾವಾಗ ಹಿಡಿದು ನಿಲ್ಲಿಸಬೇಕು ಆಗ ನಿಲ್ಲಿಸುತ್ತೇನೆ ಎಂದು ಸೇಡು ತೀರಿಸಿಕೊಳ್ಳೋ ಹಿಂಟ್ ನೀಡಿದ್ರು.

    ನಾವೆಲ್ಲ ಒಂದೇ ಎಂದು ಬಿಗ್ ಬಾಸ್ ಮನೆಗೆ ಬಂದ ಎಲ್ಲರೂ, ಇದೀಗ ಒಬ್ಬೊಬ್ಬರೆ ಸ್ಪರ್ಧೆಯ ರೋಚಕತೆಯನ್ನು ಮೂಡಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರಿಗೆ ತಮ್ಮ ಮನಸ್ಸಿನ ಮಾತು ಅರಿಯುವಂತೆ ನಡೆದುಕೊಳ್ಳುತ್ತಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಹಿರಿಯ ನಟ ಶಂಕರ್ ಅಶ್ವಥ್..!

    ಬಿಗ್‍ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಹಿರಿಯ ನಟ ಶಂಕರ್ ಅಶ್ವಥ್..!

    ಬೆಂಗಳೂರು: ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಬಿಗ್‍ಬಾಸ್ ಈಗಾಗಲೇ ಆರಂಭಗೊಂಡು ಮೂರು ದಿನ ಕಳೆದಿದೆ. ಸ್ಪರ್ಧಿಗಳು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಆರಂಭಿಸಿದ್ದಾರೆ. ತಮ್ಮ ಜೀವನದಲ್ಲಿ ನಡೆದಿರುವ ಘಟನೆಗಳು, ಹೆತ್ತವರ ಬಗ್ಗೆಯೂ ಮೆಲುಕು ಹಾಕಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಶಂಕರ್ ಅಶ್ವಥ್ ಅವರು ಕೂಡ ತಮ್ಮ ತಂದೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ.

    ಹೌದು. ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿರುವ ಹಿರಿಯ ನಟ ಅಶ್ವಥ್ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಹಾಗೆಯೇ ಅವರ ನಾಗರ ಹಾವು ಚಿತ್ರದ ಡೈಲಾಗ್ ಹೇಳುವಂತೆ ರಘು ಶಂಕರ್‍ಗೆ ಹೇಳುತ್ತಾರೆ. ಈ ವೇಳೆ ಡೈಲಾಗ್ ನೆನಪಿಲ್ಲ ಅಂತ ಹೇಳಿದ ಶಂಕರ್ ಅವರು ತಮ್ಮ ತಂದೆಯನ್ನು ನೆನಪು ಮಾಡಿಕೊಂಡು ಕಣ್ಣೀರಾದರು.

    ಸಾವಿಗೂ ಮುನ್ನ ಕೊನೆ ದಿನಗಳಲ್ಲಿ ಅವರಿದ್ದ ಸ್ಥಿತಿಯನ್ನು ಶಂಕರ್ ಅವರು ಇತರ ಸ್ಪರ್ಧಿಗಳ ಜೊತೆ ಹಂಚಿಕೊಂಡರು. ಶ್ಲೋಕಗಳನ್ನು ಹೇಳ್ತೀನಿ ಆದ್ರೆ ಧ್ಯಾನ ಮಾತ್ರ ನಮ್ಮ ಅಪ್ಪ ಅಂತ ಅಶ್ವಥ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾದ್ರು. ಇದನ್ನೂ ಓದಿ: ಕಣ್ಣೊಡೆದು ಕರೆದ ದಿವ್ಯಾ ಸುರೇಶ್ – ನಾಚಿ ನೀರಾದ ಮಂಜು

    ಅಪ್ಪ ತುಂಬಾ ಫೇಮಸ್ಸಾಗಿದ್ದರಿಂದ ಇಂದು ನಮಗೆ ಒಬ್ಬನ ವಿರುದ್ಧ ಕೆಟ್ಟದಾಗಿ ಬೈಯೋಕ್ಕಾಗಲ್ಲ, ಸಿಗರೇಟು ಸೇದುವಂತಿಲ್ಲ. ಕೋಮ ಮಾಡಿಕೊಳ್ಳುವಂತಿಲ್ಲ. ಏಯ್ ಅಶ್ವಥ್ ಅವರ ಮಗ ಹಿಂಗ್ ಮಾಡ್ತಾನಲ್ವಾ ಅಂತ ಟೀಕೆ ಮಾಡುತ್ತಾರೆ ಎಂದು ಶಂಕರ್ ಕಣ್ಣೀರಾದ್ರು.

    ಒಟ್ಟಿನಲ್ಲಿ ಈ ಬಾರಿಯ ಬಿಗ್ ಬಾಸ್ ಮನರಂಜನೆ ನೀಡುತ್ತಿದ್ದು, ಟಾಸ್ಕ್ ಗಳು ಆರಂಭವಾಗುತ್ತಿದ್ದಂತೆಯೇ ಕಿತ್ತಾಟವೂ ಶುರುವಾಗಿದೆ. ಅಲ್ಲದೆ ಸ್ಪರ್ಧಿಗಳು ತಮ್ಮ ತಮ್ಮ ಕಥೆಗಳನ್ನು ಹೇಳುತ್ತಾ ಇತರರನ್ನು ನಗಿಸುವ ಜೊತೆಗೆ ಕಣ್ಣೀರು ಹಾಕಿಸುತ್ತಿದ್ದಾರೆ.

  • ತಂದೆ ಹೇಳಿದ್ದನ್ನ ಅಪ್ಪು ಸರ್ ನಿರೂಪಿಸಿದ್ರು: ಶಂಕರ್ ಅಶ್ವಥ್

    ತಂದೆ ಹೇಳಿದ್ದನ್ನ ಅಪ್ಪು ಸರ್ ನಿರೂಪಿಸಿದ್ರು: ಶಂಕರ್ ಅಶ್ವಥ್

    ಮೈಸೂರು: ನಟ ಪುನೀತ್ ರಾಜ್‍ಕುಮಾರ್ ಅವರು ಶನಿವಾರ ಹಿರಿಯ ನಟ ಶಂಕರ್ ಅಶ್ವಥ್ ಮನೆಗೆ ಭೇಟಿ ನೀಡಿದ್ದರು. ಆ ಸಂತಸದ ಕ್ಷಣವನ್ನು ತಮ್ಮ ತಂದೆ ಮತ್ತು ಡಾ.ರಾಜ್‍ಕುಮಾರ್ ಬಗ್ಗೆ ನೆನೆದು ಫೇಸ್‍ಬುಕ್ ಪೋಸ್ಟ್ ಮಾಡಿದ್ದಾರೆ.

    ಮೈಸೂರಿನ ಸರಸ್ವತಿ ಪುರಂನಲ್ಲಿನ ನಟ ಶಂಕರ್ ಅಶ್ವಥ್ ಮನೆಗೆ ಶನಿವಾರ ಬೆಳಗ್ಗೆ ಪುನೀತ್ ಹೋಗಿದ್ದು, ಅವರ ಮೆನೆಯಲ್ಲಿಯೇ ಉಪ್ಪಿಟ್ಟು ಕೇಸರಿಬಾತ್ ಸವಿದಿದ್ದರು.

    ಫೇಸ್‍ಬುಕ್ ಪೋಸ್ಟ್:
    ಇದು ನಾ ಕಂಡ ಸತ್ಯ ಎಂದು ಮೊದಲಿಗೆ ಶುರು ಮಾಡಿದ್ದು, ತಂದೆ ಮಹಾರಾಜ, ಮಗ ರಾಜಕುಮಾರ, ಡಾ.ರಾಜ್ ಅವರಲ್ಲಿ ಇದ್ದ ಅತಿ ದೊಡ್ಡ ಶಕ್ತಿ ಎಂದರೆ ವಿನಯ, ತಾಳ್ಮೆ, ಸಹನೆ, ಸೈರಣೆ, ವಿಶಾಲತೆ, ಬಹುಶಃ ಅದು ಅವರ ಹುಟ್ಟಿನಿಂದಲೇ ಬಂದಿರಬಹುದು ಎಂದು ನಾನು ಹೇಳುತ್ತಿರುವುದಲ್ಲಾ ಇದು ನನ್ನ ತಂದೆ ನನಗೆ ಹೇಳಿದ್ದು. ಒಬ್ಬ ಮಹಾರಾಜನಿಗೆ ಇರಬೇಕಾದ ಗುಣಗಳ ಕೆಲವೊಂದು ಅಂಶಗಳು ಅವರ ವಂಶದ ಕುಡಿಯಲ್ಲೂ ಕಾಣಬಹುದು.

    ನನ್ನ ತಂದೆ ಅಪ್ಪು ಸರ್ ಜೊತೆಯಲ್ಲಿ ಮೊದಲನೆಯ ಬಾರಿಗೆ ನಟಿಸುವಾಗ “ಈ ಮಗುವಿಗೆ ಅಣ್ಣಾ ಅವರ ಎಲ್ಲಾ ಅಂಶಗಳು ಇದೆ. ಮುಂದೆ ಇನ್ನೊಬ್ಬ ರಾಜಕುಮಾರ ಆಗುತ್ತಾನೆ” ಎಂದು ಹೇಳಿದ್ದರು. ಅದನ್ನು ಇಂದು ಅಪ್ಪು ಸರ್ ನಿರೂಪಿಸಿದರು. ಮೇಲಿರುವ ಆ ಎರಡು ಜೀವಗಳು ಇದನ್ನು ನೋಡಿ ಎಷ್ಟು ಸಂತುಷ್ಟರಾಗಿರಬಹುದು ಎಂದು ತಮ್ಮ ತಂದೆ ಮತ್ತು ರಾಜ್‍ಕುಮಾರ್ ಬಗ್ಗೆ ನೆನೆದು ಬರೆದುಕೊಂಡಿದ್ದಾರೆ.

    https://www.facebook.com/shankaraswath7/photos/a.873271889456171/2185407634909250/?type=3&theater

    ಮೈಸೂರಿನಲ್ಲಿ ನಡೆಯುತ್ತಿದ್ದ `ಯುವರತ್ನ’ ಸಿನಿಮಾ ಶೂಟಿಂಗ್‍ನಲ್ಲಿ ಪುನೀತ್ ಭಾಗಿಯಾಗಿದ್ದರು. ಈ ವಿಚಾರ ತಿಳಿದ ಶಂಕರ್ ಅಶ್ವಥ್, ಪುನೀತ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದರು. ಅವರ ಮನವಿ ಮೇರೆಗೆ ಪುನೀತ್ ನಿನ್ನೆ ಶಂಕರ್ ಅವರ ಮನೆಗೆ ಭೇಟಿ ನೀಡಿದ್ದರು.

    ಮನೆಗೆ ಹೋದಾಗ ಶಂಕರ್ ಅಶ್ವಥ್ ತಾಯಿ ಶಾರದಮ್ಮ ಅವರ ಕಾಲಿಗೆ ನಮಸ್ಕಾರ ಮಾಡಿ ಪುನೀತ್ ಆಶೀರ್ವಾದ ಪಡೆದುಕೊಂಡಿದ್ದಾರೆ. ನಂತರ ಅರ್ಧ ಗಂಟೆಗಳ ಕಾಲ ಶಂಕರ್ ಅಶ್ವಥ್ ಮನೆಯವರ ಜೊತೆ ಕಾಲ ಕಳೆದಿದ್ದರು.

  • ಶಂಕರ್ ಅಶ್ವಥ್‌ರ ಪೋಸ್ಟ್‌‌ಗೆ ಅಭಿಮಾನಿಗಳಿಂದ ಮೆಚ್ಚುಗೆ

    ಶಂಕರ್ ಅಶ್ವಥ್‌ರ ಪೋಸ್ಟ್‌‌ಗೆ ಅಭಿಮಾನಿಗಳಿಂದ ಮೆಚ್ಚುಗೆ

    ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ಫೇಸ್‍ಬುಕ್‍ನಲ್ಲಿ ತಂದೆಯ ಬಗ್ಗೆ ಒಂದು ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    “ನನ್ನ ತಂದೆ ನನ್ನನ್ನು ನೋಡಿ ಶಭಾಷ್ ಮಗನೆ ನ್ಯಾಯವಾಗಿ ಧರ್ಮವಾಗಿ ನನಗೆ ಇಷ್ಟವಾದ ರೀತಿಯಲ್ಲಿ ಬದುಕುತ್ತಿದ್ದೀಯಾ”, ಅಂದರೆನೋ ಅನ್ನಿಸಿತು. ಊಬರ್ ಸೇವೆಯಲ್ಲಿ ತೊಡಗಿದ್ದಾಗ ದಾರಿಯಲ್ಲಿ ಯಾರೋ ಮಹಾನುಭಾವರು ನನ್ನ ತಂದೆಯ ಫೋಟೋವನ್ನು ಗೋಡೆ ಮೇಲೆ ಲ್ಯಾಮಿನೇಟ್ ಮಾಡಿ ಹಾಕಿಸಿದ್ದಾರೆ. ಅಲ್ಲಿ ಒಂದು ಕ್ಷಣ ನಿಂತು ಹೃದಯಪೂರ್ವಕವಾಗಿ ನಮಿಸಿ ಮುಂದೆ ಹೊರಟೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಶಂಕರ್ ಅಶ್ವಥ್ ಅವರು ಪೋಸ್ಟ್‌‌ಗೆ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. “ನಿಮ್ಮ ತಂದೆಯವರು ತುಂಬಾ ಒಳ್ಳೆಯ ವ್ಯಕ್ತಿ. ಅವರ ಮಗನಾಗಿ ನೀವು ಒಳ್ಳೆಯವರೆ. ಜೀವನದಲ್ಲಿ ಸ್ವಲ್ಪ ಎಡವಿರಬಹುದು ಆದರೆ ಎಂದಿಗೂ ಹೆದರಬೇಡಿ ಒಂದಿಲ್ಲೊಂದು ದಿನಾ ನಿಮಗೂ ಒಳ್ಳೆಯ ಕಾಲ ಬರುತ್ತದೆ. ನಿಮ್ಮನ್ನು ಮರೆತ ಚಿತ್ರರಂಗ ಒಂದಿನ ನಿಮ್ಮ ಕಾಲಿನ ಬಳಿ ಬರುತ್ತದೆ ನೀವು ಕರ್ನಾಟಕದ ಅತಿ ದೋಡ್ಡ ಚಿತ್ರ ನಿರ್ಮಾಪಕರಾಗಲಿ ಎಂದು ಹರಸುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.

    “ಶ್ರೀ ಅಶ್ವಥ್ ಸರ್ ಅವರು ಕರ್ನಾಟಕ ಕಂಡ ಮೇರು ನಟ ಅವರ ಸುಪುತ್ರರಾದ ತಾವುಗಳೂ ಸಹ ಪ್ರತಿಭಾವಂತರು ಎನ್ನುವುದರಲ್ಲಿ ಅನುಮಾನವಿಲ್ಲ” ಎಂದಿದ್ದಾರೆ. “ಬರೀಯ ಪೋಷಕನಟರಲ್ಲ ಅವರು ನಮ್ಮಲ್ಲೇ ಒಬ್ಬರಾಗಿದ್ದಾರೆ. ಅವರ ಚಿತ್ರಗಳನ್ನು ನೋಡಿ ಬೆಳೆದವರು ನಾವು. ಅವರ ಅಭಿನಯದಲ್ಲಿನ ತಲ್ಲೀನತೆ, ಪಾತ್ರಪೋಷಣೆ ಇದೆ. ಇಂದಿನ ನಟರು ಮತ್ತು ಮುಂದಿನ ನಟರಿಗೆ ಮಾದರಿ ಯಾಗಿರುತ್ತಾರೆ” ಎಂದು ಹೇಳಿದ್ದಾರೆ.


    ಇದೇ ರೀತಿ ನೂರಾರು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಕೆಲ ಸಿನಿಮಾದಲ್ಲಿ ಅಭಿನಯಿಸಿದ್ದ ಶಂಕರ್ ಅಶ್ವಥ್ ಈಗ ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಕೆಲವು ಸಿನಿಮಾಗಳಲ್ಲಿ ಅವಕಾಶಗಳು ಸಿಗುತ್ತಿದೆ.

  • ಗ್ರೇಟ್ ಅರ್ಜುನ್ – ಈ ಗುಣಕ್ಕೆ ಏನೆಂದು ನಾ ಹೇಳಲಿ: ಸರ್ಜಾರನ್ನು ಹೊಗಳಿದ ಶಂಕರ್ ಅಶ್ವಥ್

    ಗ್ರೇಟ್ ಅರ್ಜುನ್ – ಈ ಗುಣಕ್ಕೆ ಏನೆಂದು ನಾ ಹೇಳಲಿ: ಸರ್ಜಾರನ್ನು ಹೊಗಳಿದ ಶಂಕರ್ ಅಶ್ವಥ್

    ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ನಟ ಅರ್ಜುನ್ ಸರ್ಜಾ ಅವರನ್ನು ಹೊಗಳಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಇತ್ತೀಚೆಗೆ ಶಂಕರ್ ಅಶ್ವಥ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ‘ಪೊಗರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಇಬ್ಬರು ಮಾತುಕತೆ ನಡೆಸುವಾಗ ಅರ್ಜುನ್ ಸರ್ಜಾ ಅವರ ಬಗ್ಗೆ ಮಾತನಾಡಿದ್ದಾರೆ. ಧ್ರುವ ಜೊತೆ ಮಾತನಾಡಿದ ಬಳಿಕ ಶಂಕರ್ ಅಶ್ವಥ್ ಅವರು ತಮ್ಮ ಅನುಭವವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಗ್ರೇಟ್ ಅರ್ಜುನ್ ಸರ್ಜಾ – ಈ ಗುಣಕ್ಕೆ ಏನೆಂದು ನಾ ಹೇಳಲಿ. ಇದು ಸತ್ಯ ನಾನು ಹೈದರಾಬಾದ್ ನಲ್ಲಿ ಪೊಗರು ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ನಡೆದ ನೈಜಸಂಗತಿ ಇದರಲ್ಲಿ ಯಾವ ಉಪ್ಪು ಸೊಪ್ಪು ಬೆರತಿಲ್ಲ. ನಾಯಕ ನಟರಾದ ಧೃವ ಸರ್ಜಾ “ನಾನು ಚಿಕ್ಕವನಿದ್ದಾಗ ನಿಮ್ಮ ಮನೆಗೆ ಮಾಮ ಅರ್ಜುನ್ ಸರ್ಜಾ ಜೊತೆಯಲ್ಲಿ ಬಂದಿದ್ದೆ” ಅಂದಾಗ ನನಗೆ ಜ್ಞಾಪಕ ಬರಲಿಲ್ಲ. ಅದಕ್ಕೆ “ನಾಳೆ ನೀವು ಇರ್ತೀರಾ ಮಾಮನೂ ಇಲ್ಲಿ ಬೇರೆ ಚಿತ್ರೀಕರಣಕ್ಕೆ ಬಂದಿದ್ದಾರೆ ಅವರ ಹತ್ತಿರ ಆ ಫೋಟೋ ಇದೆ ತೋರಿಸ್ತೇನೆ” ಎಂದಾಗ ಇಲ್ಲಾ ನಾನು ಬೇರೆ ಚಿತ್ರೀಕರಣಕ್ಕೆ ಕೋಲಾರಕ್ಕೆ ಹೋಗಬೇಕೆಂದೆ. ಆಗ ತಕ್ಷಣವೇ ಅರ್ಜುನ್ ಸರ್ಜಾಗೆ ಫೋನ್ ಮಾಡಿ ಅವರ ಮೊಬೈಲ್ ನಲ್ಲಿದ್ದ ಈ ಫೋಟೋ ತರಿಸಿಕೊಂಡು ನನಗೆ ಕಳುಹಿಸಿದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2006ನೇ ಇಸವಿಯಲ್ಲಿ ನಮ್ಮ ತಂದೆಯನ್ನು ನೋಡಲು ಬಂದಾಗ ತೆಗೆದ ಈ ಫೋಟೋ 13 ವರ್ಷಗಳ ನಂತರವೂ ಅರ್ಜುನ್ ಸರ್ಜಾರ ಮೊಬೈಲ್ ನಲ್ಲಿದೆ ಎಂದರೆ ಆತ ನನ್ನ ತಂದೆಗೆ ಎಷ್ಟು ಗೌರವ ಕೊಡುತ್ತಾರೆ, ಎಂತಹ ದೊಡ್ಡ ಮನುಷ್ಯ ಎಂದು ಬರೆದು ಹಾಕಿದ್ದಾರೆ.

    ಸಿನಿಮಾ ಅವಕಾಶ ಇಲ್ಲದೇ ಕ್ಯಾಬ್ ಚಾಲಕರಾಗಿದ್ದ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಸಿಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ ‘ಯಜಮಾನ’ ಚಿತ್ರದಲ್ಲಿ ಶಂಕರ್ ಅಶ್ವಥ್ ನಟಿಸಿದ್ದರು. ಈಗ ಅವರು ಧ್ರುವ ನಟನೆಯ ‘ಪೊಗರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರಶ್ಮಿಕಾಳಂತ ಮಗ್ಳನ್ನು ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರಾರೂ ಇರ್ತಿಲಿಲ್ಲ: ಶಂಕರ್ ಅಶ್ವಥ್

    ರಶ್ಮಿಕಾಳಂತ ಮಗ್ಳನ್ನು ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರಾರೂ ಇರ್ತಿಲಿಲ್ಲ: ಶಂಕರ್ ಅಶ್ವಥ್

    ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರನ್ನು ತಮ್ಮ ಮಗಳು ಎಂದು ಹೇಳಿಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ಜೊತೆಗಿರುವ ಫೋಟೋವನ್ನು ಶಂಕರ್ ಅಶ್ವಥ್ ಅವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ರಶ್ಮಿಕಾ ತಮ್ಮ ಮಗಳಂತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಪೋಸ್ಟ್ ನಲ್ಲಿ ಏನಿದೆ?
    ನಾನು ಚಲನಚಿತ್ರರಂಗ ಪ್ರವೇಶ ಮಾಡಿ ಮೂರು ದಶಕಗಳಾದರೂ ಈ ಅನುಭವ ಎಂದು ಹೊಂದಿರಲಿಲ್ಲ. ಒಬ್ಬ ಪ್ರಖ್ಯಾತ ನಾಯಕ ನಟಿ, ನನ್ನನ್ನು ತಂದೆಯಂತೆ ಕಂಡಿದ್ದಳು. ಕತ್ತುಭುಜ ನೋವೆಂದು ಕುಳಿತಿದ್ದಾಗ ಹಿಂದಿನಿಂದ ಬಂದು ಭುಜವನ್ನು ಒತ್ತಿದ್ದು ಒಬ್ಬ ಮಗಳೇ ಸರಿ, ಇಂತಹ ಮಗಳನ್ನು ನಾನು ನಿಜ ಜೀವನದಲ್ಲಿ ಪಡೆದಿದ್ದರೆ ನನ್ನಂತಹ ಅದೃಷ್ಟಶಾಲಿ ಬೇರೆ ಯಾರೂ ಇರುತ್ತಿರಲಿಲ್ಲ, ಧನ್ಯವಾದಗಳು ರಶ್ಮಿಕಾ ಮಂದಣ್ಣ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಶಂಕರ್ ಅಶ್ವಥ್ ಅವರು ಸಿನಿಮಾ ಆಫರ್ ಸಿಗದೇ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ‘ಯಜಮಾನ’ ಚಿತ್ರದ ಪಾತ್ರವೊಂದಕ್ಕೆ ನಟಿಸಲು ಶಂಕರ್ ಅಶ್ವಥ್ ಅವರಿಗೆ ಅವಕಾಶ ನೀಡಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಲೆಂಜಿಂಗ್ ಸ್ಟಾರ್ ರಾಜ್, ವಿಷ್ಣು ಅವರಿಗೆ ಸಮ ಎಂದ್ರು ಶಂಕರ್ ಅಶ್ವಥ್!

    ಚಾಲೆಂಜಿಂಗ್ ಸ್ಟಾರ್ ರಾಜ್, ವಿಷ್ಣು ಅವರಿಗೆ ಸಮ ಎಂದ್ರು ಶಂಕರ್ ಅಶ್ವಥ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಾ.ರಾಜ್‍ಕುಮಾರ್ ಹಾಗೂ ವಿಷ್ಣುವರ್ಧನ್‍ಗೆ ಸಮ ಎಂದು ಹಿರಿಯ ನಟ ಶಂಕರ್ ಅಶ್ವಥ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಜೀವನೋಪಯಕ್ಕಾಗಿ ಉಬರ್ ಕ್ಯಾಬ್ ಡ್ರೈವರ್ ಆಗಿದ್ದ ಶಂಕರ್ ಅಶ್ವಥ್ ದರ್ಶನ್ ಅವರ ಯಜಮಾನ ಸಿನಿಮಾದಲ್ಲಿ ಕಮ್‍ಬ್ಯಾಕ್ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜ್‍ಕುಮಾರ್, ವಿಷ್ಣುವರ್ಧನ್‍ಗೆ ಸಮ ಎನ್ನುವುದ್ದನ್ನು ಫೇಸ್‍ಬುಕ್ ಪೇಜ್‍ವೊಂದರಲ್ಲಿ ರಾಜ್‍ಕುಮಾರ್, ವಿಷ್ಣುವರ್ಧನ್, ದರ್ಶನ್‍ರ ಫೋಟೋವನ್ನು ಅಪ್‍ಲೋಡ್ ಮಾಡಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಎಲ್ಲರಲ್ಲೂ ಪರಮಾತ್ಮ ಇರುತ್ತಾನೆ. ಆತನನ್ನು ಮುಟ್ಟಲು ಸುಲಭವಾದ ಮಾರ್ಗ ಅಂದರೆ ತಿನ್ನಲು ಏನಾದರೂ ಕೊಟ್ಟು ಸಂತೃಪ್ತಿ ಪಡಿಸುವುದು ಎಂದು ನನ್ನ ತಂದೆ ಹೇಳುತ್ತಿದ್ದರು. ಆ ಮೂರು ವ್ಯಕ್ತಿಗಳಿಗೆ ನಮ್ಮಿಂದ ಸೇರಿದ ಅಲ್ಪ ತಿನಿಸಿನಿಂದ ಸಂತೃಪ್ತರಾದರೆಂದು ತಿಳಿಸಲು ಹರ್ಷಪಡುತ್ತೇನೆ ಎಂದು ಶಂಕರ್ ಅಶ್ವಥ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಕೊಟ್ಟ ಮಾತಿನಂತೆ ಶಂಕರ್ ಅಶ್ವಥ್ ಮುಖದಲ್ಲಿ ನಗು ಮೂಡಿಸಿದ ದರ್ಶನ್

    ಅಂದು ಡಾ. ರಾಜ್‍ಕುಮಾರ್ ತಮ್ಮ ಜತೆಯಲ್ಲಿ ನಟಿಸುತ್ತಿದ್ದ ಕಲಾವಿದರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದರು. ನಂತರ ಸಾಹಸಸಿಂಹ ವಿಷ್ಣುವರ್ಧನ್ ಕೂಡ ಕಲಾವಿದರಿಗೆ ಮಾತ್ರವಲ್ಲ ಕಷ್ಟದಲ್ಲಿರುವ ಅದೆಷ್ಟೊ ಕುಟುಂಬಗಳಿಗೆ ಬೆಳಕಾಗಿದ್ದರು. ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್‍ರನ್ನು ಹೊಗಳಿದ ಶಂಕರ್ ಅಶ್ವಥ್

    ಈ ಹಿಂದೆ ಶಂಕರ್ ಅಶ್ವಥ್ ಒಬ್ಬ ಮೇರು ನಟ ಅತ್ಯಂತ ಉನ್ನತ ಮಟ್ಟಕ್ಕೆ ಬೆಳೆದರೂ ನಾನು ಎಲ್ಲರಂತೆ ಸಾಮಾನ್ಯ ಎಂದು ನಿರೂಪಿಸಿ ಇನ್ನೂ ಎತ್ತರಕ್ಕೆ ಬೆಳೆದ ವ್ಯಕ್ತಿ ಶ್ರೀಯುತ ದರ್ಶನ್ ಅವರು ಎಂದು ಚಾಲೆಂಜಿಂಗ್ ಸ್ಟಾರ್ ಬಗ್ಗೆ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು.