Tag: ಶಂಕರ್

  • ‘ಬ್ರಹ್ಮರಾಕ್ಷಸ’ನಿಗಾಗಿ ಐಟಂ ಸಾಂಗ್: ಸಂಜೆ ಹೊತ್ನಾಗ ಮೈಪುಳಕ

    ‘ಬ್ರಹ್ಮರಾಕ್ಷಸ’ನಿಗಾಗಿ ಐಟಂ ಸಾಂಗ್: ಸಂಜೆ ಹೊತ್ನಾಗ ಮೈಪುಳಕ

    ನ್ನಡ ಚಿತ್ರರಂಗದಲ್ಲೀಗ ಹೊಸ ಆಶಾಭಾವನೆ ಮೂಡಿದೆ. ಇತ್ತೀಚೆಗೆ ತೆರೆಕಂಡ ಚಿತ್ರಗಳ ಗೆಲುವು ಹೊಸಬರಿಗೆ  ನವಚೇತನ‌ ನೀಡಿದೆ. ಅದೇ ನಿಟ್ಟಿನಲ್ಲಿ  ಮತ್ತಷ್ಟು ಚಿತ್ರತಂಡಗಳು ಬಿಡುಗಡೆಯ ಸಿದ್ದತೆ ಮಾಡಕೊಳ್ಳುತ್ತಿವೆ.  ಅಂತಹ ಸಿನಿಮಾಗಳಲ್ಲಿ  ಬ್ರಹ್ಮರಾಕ್ಷಸ (Brahmarakshasa) ಕೂಡ ಒಂದು.  ಲೈಟ್‌ಮ್ಯಾನ್ ಆಗಿ ಚಿತ್ರರಂಗಕ್ಕೆ ಬಂದು ಹಲವಾರು ನಿರ್ದೇಶಕರ ಬಳಿ ಕೆಲಸ ಕಲಿತ ಶಂಕರ್.ವಿ. ಮೊದಲಬಾರಿಗೆ ಆ್ಯಕ್ಷನ್‌ಕಟ್ ಹೇಳಿರುವ ಚಿತ್ರ ಇದಾಗಿದ್ದು, ಜ್ಯೋತಿ ಆರ್ಟ್ಸ್ ಮೂಲಕ ಕೆಎಂಪಿ. ಶ್ರೀನಿವಾಸ್  ಅವರು ಈ ಚಿತ್ರವನ್ನು  ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ಐಟಂ ಸಾಂಗ್ (Item Song) ಬಿಡುಗಡೆ ಕಾರ್ಯಕ್ರಮ ನಡೆಯಿತು. 1980-90ರ ಕಾಲಘಟ್ಟದಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಅಂಕುಶ್ ಏಕಲವ್ಯ ಹಾಗೂ ಪಲ್ಲವಿಗೌಡ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ, ವಿಶೇಷ ಪಾತ್ರದಲ್ಲಿ ವೈಜನಾಥ್ ಬಿರಾದಾರ್ ಕಾಣಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ  ಸೇರಿದಂತೆ 5 ಭಾಷೆಯಲ್ಲಿ ಈ ಚಿತ್ರ ತಯಾರಾಗಿದ್ದು, ಈಗ ಕನ್ನಡ ವರ್ಷನ್ ಗೀತೆ ಮಾತ್ರ ಬಿಡುಗಡೆಯಾಗಿದೆ.

    ಚಿತ್ರದ ಟೀಸರ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದಲ್ಲಿ 5 ಹಾಡುಗಳಿದ್ದು ಎಂ.ಎಸ್.ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಆ ಪೈಕಿ ಒಂದು ಹಾಡು ಇದೀಗ ರಿಲೀಸ್ ಆಗಿದೆ. ವೇದಿಕೆಯಲ್ಲಿ ಹಿರಿಯನಟ ಬಿರಾದಾರ್ ಮಾತನಾಡುತ್ತ ಸಿನಿಮಾ ಚನ್ನಾಗಿ ಬಂದಿದೆ. ಕಥೆಗೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.. ನಿರ್ದೇಶಕರು ತುಂಬಾ ಶ್ರಮ ಹಾಕಿದ್ದಾರೆ. ಸಿನಿಮಾ  ಜನರಿಗೆ ಖಂಡಿತ  ಇಷ್ಟವಾಗುತ್ತದೆ ಎಂದು ಹೇಳಿದರು. ಮತ್ತೊಬ್ಬ‌ನಟ ಅರವಿಂದ್ ರಾವ್ ಮಾತನಾಡಿ ಅಂಕುಶ್ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಇಡೀ ಸಿನಿಮಾ ರೆಟ್ರೋ ಸ್ಟೈಲ್ ನಲ್ಲಿಯೇ ಇದ್ದು ಸಾಂಗ್ ಕೂಡ ಹಾಗೆ ಬಂದಿರುವುದು ವಿಶೇಷ‌  ಎಂದರು.

    ನಿರ್ಮಾಪಕ ಕೆಎಂಪಿ ಶ್ರೀನಿವಾಸ್  ಮಾತನಾಡುತ್ತ ನನ್ನ‌ ಮೊದಲ ಚಿತ್ರ ಕಲಿವೀರ. ಬ್ರಹ್ಮರಾಕ್ಷಸ ಎರಡನೇ ಚಿತ್ರ. ಎಲ್ಲರ ಸಹಕಾರದಿಂದ ಸಿನಿಮಾ ಚನ್ನಾಗಿ ಬಂದಿದೆ. ಯಾವುದೇ ತಪ್ಪುಗಳಿಲ್ಲದಂತೆ ಡೈರೆಕ್ಟರ್ ಸಿನಿಮಾ ಮಾಡಿದ್ದಾರೆ.‌ ಹೀರೋ ಸ್ಟಂಟ್ ಗಳನ್ನು ರಿಯಲ್ಲಾಗಿ ಮಾಡಿದ್ದರಿಂದ ಸಾಕಷ್ಟು ಪೆಟ್ಟು ತಿಂದಿದ್ದಾರೆ. ನಿರ್ದೇಶಕ, ನಾಯಕರ ಕಾಂಟ್ರಿಬ್ಯೂಷನ್ ನಿಂದ ಸಿನಿಮಾ ಕ್ವಾಲಿಟಿ ಇನ್ನೂ ಉತ್ತಮವಾಗಿದೆ. ಈ ಸಿನಿಮಾ  ನಮಗೆ ತೃಪ್ತಿ ಕೊಟ್ಟಿದೆ. ಬ್ರಹ್ಮ ಸೃಷ್ಟಿ ಮಾಡಿದ ಮನುಷ್ಯ ರಾಕ್ಷಸ ಹೇಗೆ ಆಗುತ್ತಾನೆ ಎಂಬುದನ್ನು ಚಿತ್ರದಲ್ಲಿ  ತೋರಿಸಿದ್ದೇವೆ ಎಂದರು.

        

    ನಿರ್ದೇಶಕ ಶಂಕರ್ ಮಾತನಾಡಿ ಒಬ್ಬ ನಿರ್ದೇಶಕ ಎಷ್ಟೇ ಕನಸು ಕಾಣಬಹುದು. ಆದರೆ ಅದಕ್ಕೆ ನಿರ್ಮಾಪಕರು ನೀಡುವ ಸಹಕಾರ ತುಂಬಾ ಮುಖ್ಯವಾಗಿರುತ್ತೆ. ಇದು ನನ್ನ  ಮೊದಲ‌ ಚಿತ್ರ. ಲಾಕ್ ಡೌನ್ ಸಂದರ್ಭದಲ್ಲಿ ಈ ಕಥೆ ಹೊಳೆಯಿತು. ಉಡುಪಿ, ಕುಂದಾಪುರ ಹಾಗೂ ಸೆಟ್ ಗಳಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ. ಚಿತ್ರಕ್ಕೆ 80% ಮಳೆ ಹಾಗೂ ರಾತ್ರಿ ವೇಳೆಯಲ್ಲೇ ಶೂಟಿಂಗ್ ಮಾಡಿದ್ದೇವೆ.  ಒಂದು ಸೋಶಿಯಲ್ ಮೆಸೇಜ್ ಚಿತ್ರದಲ್ಲಿದ್ದು, ತಪ್ಪು ಮಾಡದೆ ಇಬ್ಬರು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸುತ್ತಾರೆ. ಅದೇ ಸೇಡಿನಿಂದ ಹೇಗೆ ದ್ವೇಷ ತೀರಿಸಿಕೊಳ್ಳಲು ಹೊರಡುತ್ತಾರೆ ಎನ್ನುವುದೇ ಈ ಚಿತ್ರ. ಸೆನ್ಸಾರ್ ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇಡೀ ಫ್ಯಾಮಿಲಿ ಕುಳಿತು ನೋಡುವಂತ ಸಿನಿಮಾವಿದು ಎಂದರು.

     

    ಸಂಗೀತ ನಿರ್ದೇಶಕ ಎಂ.ಎಸ್. ತ್ಯಾಗರಾಜ್ ಮಾತನಾಡಿ ಇದು ಅದ್ಭುತವಾದ ಸಿನಿಮಾ, ಕ್ರಿಯೆಟೀವ್ ಆಗಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಈ ಗೀತೆಯನ್ನು ಮಮತಾ ಶರ್ಮಾ ಸಂತೋಷ ಹಾಡಿದ್ದು, ನಾನೇ ಸಾಹಿತ್ಯ ಬರೆದಿದ್ದೇನೆ ಎಂದರು. ನಾಯಕ ಅಂಕುಶ್ ಏಕಲವ್ಯ ಮಾತನಾಡಿ  ಈ ಹಿಂದೆ ಕಲಿವೀರ ಚಿತ್ರದಲ್ಲಿ  ಅಭಿನಯಿಸಿದ್ದೆ.ಇದು ಎರಡನೇ ಪ್ರಯತ್ನ. ನನ್ನ  ಕಲಿವೀರ ಸಿನಿಮಾ ರಿಲೀಸ್ ಹಿಂದಿನ‌ ದಿನ  ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ನಾನೇ ಪೋಸ್ಟರ್ ಅಂಟಿಸಿಕೊಂಡು ಹೋಗಿದ್ದೆ ಎಂದು ಹೇಳಿದರು.  ನಿರ್ಮಾಪಕರ ಸಂಘದ ಆಧ್ಯಕ್ಷ ಉಮೇಶ್ ಬಣಕಾರ್, ಹಾಗೂ ನಾಗೇಂದ್ರ ಅರಸ್ ಮಾತನಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಅನಿರುದ್ದ ಅವರ ಕ್ಯಾಮೆರಾವರ್ಕ್ ಈ ಚಿತ್ರದಲ್ಲಿದ್ದು, ಎಂ.ಎಸ್.ತ್ಯಾಗರಾಜ್ ಸಂಗೀತ, ಹಿನ್ನೆಲೆ ಸಂಗೀತ ಮಾಡಿದ್ದಾರೆ.  ಅರವಿಂದ್ ರಾವ್, ಸ್ವಪ್ನ, ಪುರುಷೋತ್ತಮ್, ಬಲ ರಾಜವಾಡಿ. ರಥಾವರ ದೇವು, ಭುವನ್‌ಗೌಡ, ಚಿಕ್ಕಹೆಜ್ಜಾಜಿ ಮಜದೇವ್, ಶಿವಾನಂದಪ್ಪ ಹಾವನೂರು ಸೇರಿದಂತೆ ಹಲವಾರು ಕಲಾವಿದರು  ಈ  ಚಿತ್ರದಲ್ಲಿ ನಟಿಸಿದ್ದಾರೆ,

  • ಕರ್ನಾಟಕದಲ್ಲಿ ‘ಇಂಡಿಯನ್ 2’ ವಿತರಣಾ ಹಕ್ಕು ಪಡೆದದ್ದು ಯಾರು?

    ಕರ್ನಾಟಕದಲ್ಲಿ ‘ಇಂಡಿಯನ್ 2’ ವಿತರಣಾ ಹಕ್ಕು ಪಡೆದದ್ದು ಯಾರು?

    ಮಲ್ ಹಾಸನ್ ನಾಯಕರಾಗಿ ನಟಿಸಿರುವ, ಆರ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ‘ಇಂಡಿಯನ್ 2’ ಚಿತ್ರ ಜುಲೈ 12 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈ ಚಿತ್ರ ಪ್ರತಿಷ್ಠಿತ  ROMEO PICTURES ಮೂಲಕ ಬಿಡುಗಡೆಯಾಗಲಿದೆ. ಹೆಸರಾಂತ ಸಂಸ್ಥೆಯು ಇಂಡಿಯನ್ 2 ಚಿತ್ರದ ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ.

    ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರವನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ರೋಮಿಯೋ ಪಿಕ್ಚರ್‍ನ ರಾಹುಲ್ ತಿಳಿಸಿದ್ದಾರೆ.  ಪ್ರಖ್ಯಾತ ವಿತರಣಾ ಸಂಸ್ಥೆಯಾದ  ಇದು  ಅಜಿತ್ ಕುಮಾರ್ ಅವರ ‘ನೆರ್ಕೊಂಡ ಪಾರವೈ’, ‘ಥುನಿವು’, ಉದಯನಿಧಿ ಸ್ಟಾಲಿನ್ ಅವರ “ನೆಂಜುಕು ನೀಧಿ”  ಮುಂತಾದ ಜನಪ್ರಿಯ ಚಿತ್ರಗಳನ್ನು ವಿತರಣೆ ಮಾಡಿದೆ.

    ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಹಾಗೂ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್  ಈ ಚಿತ್ರವನ್ನು ನಿರ್ಮಿಸಿದೆ. ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರವಾಲ್, ರಕುಲ್ ಪ್ರೀತ್ ಸಿಂಗ್ , ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಕನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು “ಇಂಡಿಯನ್ 2” ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಕಮಲ್ ನಟನೆಯ ‘ಇಂಡಿಯನ್ 2’ ಫಸ್ಟ್ ಸಾಂಗ್ ರಿಲೀಸ್

    ಕಮಲ್ ನಟನೆಯ ‘ಇಂಡಿಯನ್ 2’ ಫಸ್ಟ್ ಸಾಂಗ್ ರಿಲೀಸ್

    ಮಲ್ ಹಾಸನ್ ಹಾಗೂ ಆರ್ ಶಂಕರ್ ಜೋಡಿಯ ಇಂಡಿಯನ್ 2 (Indian 2) ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜುಲೈ 12ಕ್ಕೆ ಚಿತ್ರ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಇಂಡಿಯನ್ 2 ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.

    ಇಂಡಿಯನ್ 2 ಸಿನಿಮಾದ ಸೌರಾ ಎಂಬ ಹಾಡು ಅನಾವರಣಗೊಂಡಿದೆ. ಕುದುರೆ ಏರಿ ಬರುವ ಸೇನಾಪತಿ ಸಾಹಸ ಕಥೆಯನ್ನು ವರ್ಣಿಸುವ ಈ ಹಾಡಿಗೆ ಸುದ್ದಲ ಅಶೋಕ್ ತೇಜ ಸಾಹಿತ್ಯ ಬರೆದಿದ್ದಾರೆ. ರಿತೇಶ್ ಜಿ ರಾವ್ ಮತ್ತು ಶೃತಿಕಾ ಸಮುದ್ರಾ ಸೌರಾ ಹಾಡಿಗೆ ಧ್ವನಿಯಾಗಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸೇನಾಪತಿಯಾಗಿ ಕಮಲ್ ಹಾಸನ್ ನಟಿಸಿದ್ದು,‌ಅನಿರುದ್ಧ್ ಹಾಡಿಗೆ ಟ್ಯೂನ್ ಹಾಕಿದ್ದಾರೆ.

    ಇಂಡಿಯನ್ 1 ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ದ್ವಿಪಾತ್ರ ನಿಭಾಯಿಸಿದ್ದರು. ಇಂಡಿಯನ್ 2:  1996 ರ ಹಿಟ್ ಚಲನಚಿತ್ರ ಇಂಡಿಯನ್‌ನ ಮುಂದುವರಿದ ಭಾಗವಾಗಿದ್ದು, ಇದರಲ್ಲೂ ಕಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

    ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್ , ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

    ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ಜವಾಬ್ದಾರಿ ಹೊತ್ತಿದ್ದು, ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಸಂಕಲನದ ಕೆಲಸ ನಿಭಾಯಿಸಿದ್ದಾರೆ. ಈ ಚಲನಚಿತ್ರವನ್ನು ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ನಿರ್ಮಿಸಿದೆ.

  • ಅಂದು ಐದು, ಇಂದು ಮೂರೇ ಭಾಷೆ: ಏನಿದು ‘ಇಂಡಿಯನ್ 2’ ಪೋಸ್ಟರ್

    ಅಂದು ಐದು, ಇಂದು ಮೂರೇ ಭಾಷೆ: ಏನಿದು ‘ಇಂಡಿಯನ್ 2’ ಪೋಸ್ಟರ್

    ಮಲ್ ಹಾಸನ್ (Kamal Haasan) ನಟನೆಯ ಇಂಡಿಯನ್ 2 ಸಿನಿಮಾ ಮೂಲ ಭಾಷೆ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ರಿಲೀಸ್ ಮಾಡಲಾಗುವುದು ಎಂದು ಸ್ವತಃ ನಿರ್ಮಾಣ ಸಂಸ್ಥೆಯೇ ಹೇಳಿಕೊಂಡಿತ್ತು. ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಭಾಷೆಯಲ್ಲಿ ಟ್ರೈಲರ್ ಕೂಡ ರಿಲೀಸ್ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ಕೇವಲ ಮೂರು ಭಾಷೆ ಮಾತ್ರವಿದೆ. ಹಾಗಾಗಿ ಮೂರು ಭಾಷೆಯಲ್ಲಿ ಮಾತ್ರ ಸಿನಿಮಾ ಬರಲಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

    ಇಂಡಿಯನ್ -2 (Indian 2) ಸಿನಿಮಾ ಜೂನ್‌ನಲ್ಲಿ ಬಿಡುಗಡೆಯಾಗಲಿದ್ದು, ಹೀಗಾಗಿ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿದೆ. ಸದ್ಯ ‘ಇಂಡಿಯನ್ 2’ ಶೂಟಿಂಗ್ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿವೆ.

    ಇಂಡಿಯನ್ ಸೀಕ್ವೆಲ್‌ಗೆ ಎಸ್.ಶಂಕರ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು 1996ರ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿದೆ. ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸೇನಾಪಾತಿಯು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಸಿನಿಮಾದಲ್ಲಿದ್ದು, ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಕುಲ್ ಪ್ರೀತ್ ಸಿಂಗ್ (Rakul Preet Singh), ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಖನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು ನಟಿಸಿದ್ದಾರೆ.

     

    ಎಸ್. ಶಂಕರ್ (Kamal Haasan) ನಿರ್ದೇಶನದಲ್ಲಿ ‘ಇಂಡಿಯನ್ 2’ ಸಿನಿಮಾ ಮೂಡಿ ಬರುತ್ತಿದ್ದು, ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ರವಿವರ್ಮನ್ ಹಾಗೂ ರತ್ನವೇಲು ಅವರು ಛಾಯಾಗ್ರಹಣ ಮಾಡಿದ್ದಾರೆ. ಎ. ಶ್ರೀಕರ್ ಪ್ರಸಾದ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

  • ‘ಗೇಮ್ ಚೇಂಜರ್’ ಫೋಟೋ ಲೀಕ್ : ರಾಮ್ ಚರಣ್ ಲುಕ್ ಗೆ ಫ್ಯಾನ್ಸ್ ಜೈ ಹೋ

    ‘ಗೇಮ್ ಚೇಂಜರ್’ ಫೋಟೋ ಲೀಕ್ : ರಾಮ್ ಚರಣ್ ಲುಕ್ ಗೆ ಫ್ಯಾನ್ಸ್ ಜೈ ಹೋ

    ಗೇಮ್ ಚೇಂಜರ್ ಸಿನಿಮಾಗೆ ಒಂದಿಲ್ಲೊಂದು ಕಂಠಕ ಎದುರಾಗುತ್ತಲೇ ಇದೆ. ಇದೀಗ ರಾಮ್ ಚರಣ್ ಶೂಟಿಂಗ್ ಸ್ಪಾಟ್ ನಲ್ಲಿದ್ದ ಫೋಟೋವೊಂದು ಲೀಕ್ ಆಗಿದ್ದು, ಅವರ ಲುಕ್ (Look) ರಿವಿಲ್ ಆಗಿದೆ. ರಾಮ್ ಚರಣ್ ಲುಕ್ ಕಂಡು ಫ್ಯಾನ್ಸ್ ಸಂಭ್ರಮಸಿದ್ದಾರೆ. ಅಭಿಮಾನಿಗಳಿಗೆ ಇಂದು ಸಂಭ್ರಮದ ಸಂಗತಿಯಾದರೆ, ಚಿತ್ರತಂಡಕ್ಕೆ ಶಾಕ್ ನೀಡಿದೆ. ಎಷ್ಟೇ ಗೌಪ್ಯತೆಯನ್ನು ಕಾಪಾಡಿದರೂ, ಲೀಕ್ ಆಗುವುದನ್ನು ತಡೆಯೋಕೆ ಆಗುತ್ತಿಲ್ಲವೆಂದು ಚಿತ್ರತಂಡ ಬೇಸರ ವ್ಯಕ್ತ ಪಡಿಸಿದೆ.

    ಖ್ಯಾತ ನಿರ್ದೇಶಕ ಶಂಕರ್ (Shankar) ಮತ್ತು ರಾಮ್ ಚರಣ್ ಕಾಂಬಿನೇಷನ್ ನ ಗೇಮ್ ಚೇಂಜರ್ ಸಿನಿಮಾದ ಕಥೆ ಲೀಕ್ ಆಗಿದೆ ಎನ್ನುವ ಮಾಹಿತಿಯೂ ಈ ಹಿಂದೆ ಹರಿದಾಡಿತ್ತು. ಪವನ್ ಕಲ್ಯಾಣ್ (Pawan Kalyan) ಬದುಕಿನ ಕುರಿತಾದ ಕಥೆಯು ಸಿನಿಮಾದಲ್ಲಿದ್ದು, ಪವನ್ ಕಲ್ಯಾಣ್ ಪಾತ್ರವನ್ನು ರಾಮ್ ಚರಣ್ (Ram Charan) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಚಿತ್ರತಂಡ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಈ ನಡುವೆ ಮತ್ತೊಂದು ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದ್ದು, ‘ಗೇಮ್ ಜೇಂಜರ್’ (Game Changer) ಸಿನಿಮಾ ಎರಡು ಭಾಗಗಳಾಗಿ ತೆರೆಯ ಮೇಲೆ ಅಬ್ಬರಿಸಲಿದೆಯಂತೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಆದರೆ ಸಿನಿಮಾಗೂ ಮೈಸೂರಿಗೂ ಏನು ಲಿಂಕ್ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

    ‘ಬಾಹುಬಲಿ 2’ ರಿಲೀಸ್ ಆದ ಬಳಿಕ ಎರಡು ಭಾಗಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದೀಗ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಎರಡು ಭಾಗಗಳಾಗಿ ಬರುತ್ತಿವೆ. ಹಾಗಾಗಿ ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತರೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

  • ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಕಥೆ ಲೀಕ್?

    ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಕಥೆ ಲೀಕ್?

    ಖ್ಯಾತ ನಿರ್ದೇಶಕ ಶಂಕರ್ (Shankar) ಮತ್ತು ರಾಮ್ ಚರಣ್ ಕಾಂಬಿನೇಷನ್ ನ ಗೇಮ್ ಚೇಂಜರ್ ಕಥೆ ಲೀಕ್ ಆಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಪವನ್ ಕಲ್ಯಾಣ್ (Pawan Kalyan) ಬದುಕಿನ ಕುರಿತಾದ ಕಥೆಯು ಸಿನಿಮಾದಲ್ಲಿದ್ದು, ಪವನ್ ಕಲ್ಯಾಣ್ ಪಾತ್ರವನ್ನು ರಾಮ್ ಚರಣ್ (Ram Charan) ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತಂತೆ ಚಿತ್ರತಂಡ ಯಾವುದೇ ಮಾಹಿತಿ ಸಿಕ್ಕಿಲ್ಲ.

    ಈ ನಡುವೆ ಮತ್ತೊಂದು ಸುದ್ದಿ ಸಖತ್ ಚರ್ಚೆಗೆ ಗ್ರಾಸವಾಗಿದ್ದು, ‘ಗೇಮ್ ಜೇಂಜರ್’ (Game Changer) ಸಿನಿಮಾ ಎರಡು ಭಾಗಗಳಾಗಿ ತೆರೆಯ ಮೇಲೆ ಅಬ್ಬರಿಸಲಿದೆಯಂತೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ‘ಆರ್‌ಆರ್‌ಆರ್’ (RRR) ಸಿನಿಮಾದ ಸಕ್ಸಸ್ ನಂತರ ಎಸ್. ಶಂಕರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿತ್ತು. ಆದರೆ ಸಿನಿಮಾಗೂ ಮೈಸೂರಿಗೂ ಏನು ಲಿಂಕ್ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.

     

    ‘ಬಾಹುಬಲಿ 2’ ರಿಲೀಸ್ ಆದ ಬಳಿಕ ಎರಡು ಭಾಗಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ಇದೀಗ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಎರಡು ಭಾಗಗಳಾಗಿ ಬರುತ್ತಿವೆ. ಹಾಗಾಗಿ ‘ಗೇಮ್ ಚೇಂಜರ್’ ನಿರ್ಮಾಪಕ ದಿಲ್ ರಾಜು ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತರೋದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ನಾಯಕಿಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.

  • ಶೂಟಿಂಗ್ ದೃಶ್ಯ, ಫೋಟೋ ಸೋರಿಕೆ: ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ ಶಂಕರ್

    ಶೂಟಿಂಗ್ ದೃಶ್ಯ, ಫೋಟೋ ಸೋರಿಕೆ: ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಿದ ಶಂಕರ್

    ಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ನಿರ್ದೇಶಕ ಶಂಕರ್ ತಮ್ಮ ಸಿನಿಮಾ ಟೀಮ್ ಅನ್ನು ಮೈಸೂರಿಗೆ ಕರೆದುಕೊಂಡು ಬರಲು ಕಾರಣ, ಚಿತ್ರದ ಶೂಟಿಂಗ್ ದೃಶ್ಯಗಳು ಮತ್ತು ಫೋಟೋಗಳು ಸೋರಿಕೆ ಆಗುತ್ತಿರುವುದು. ಹಾಗಾಗಿ, ಸೇಫ್ ಅನಿಸುವಂತಹ ಜಾಗವನ್ನು ಅವರು ಹುಡುಕಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ನಿನ್ನೆಯಷ್ಟೇ ನಟ  ರಾಮ್ ಚರಣ್ (Ram Charan)  ಮೈಸೂರಿಗೆ ಬಂದಿಳಿದಿದ್ದಾರೆ. ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ನಿಂದ ಮೈಸೂರಿಗೆ ಖಾಸಗಿ ಜೆಟ್ ನಲ್ಲಿ ಆಗಮಿಸಿದ್ದಾರೆ. ಬೆಳಗ್ಗೆ ಮೈಸೂರು (Mysore) ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಟನಿಗೆ ಸ್ವಾಗತ ಕೋರಲಾಗಿದೆ. ಮೈಸೂರಿನಲ್ಲಿ ಅವರ ನಟನೆಯ ಸಿನಿಮಾ ಶೂಟ್ ಆಗುತ್ತಿದೆ.

    ಒಂದು ಕಡೆ ಸಿನಿಮಾದ ಭರ್ಜರಿ ಚಿತ್ರೀಕರಣ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸೋರಿಕೆಯ ಸಮಸ್ಯೆಯನ್ನು ಟೀಮ್ ಎದುರಿಸುತ್ತಿದೆ. ಸಿನಿಮಾದ ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಮೊನ್ನೆಯಷ್ಟೇ ಹಾಡಿಗೇ ಹಾಡೇ ಸೋರಿಕೆ (Song Leak) ಆಗಿ ಆತಂಕ ಮೂಡಿಸಿತ್ತು. ಈ ಕುರಿತಂತೆ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆದಿತ್ತು. ಆದರೆ, ಕಿಡಿಗೇಡಿಗಳು ಪತ್ತೆ ಆಗಿರಲಿಲ್ಲ.

     

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

  • ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿಳಿದ ರಾಮ್ ಚರಣ್

    ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿಳಿದ ರಾಮ್ ಚರಣ್

    ತೆಲುಗಿನ ಹೆಸರಾಂತ ನಟ ರಾಮ್ ಚರಣ್ (Ram Charan)  ಇದೀಗ ಮೈಸೂರಿನಲ್ಲಿದ್ದಾರೆ. ಅವರ ಗೇಮ್ ಚೇಂಜರ್ ಸಿನಿಮಾದ ಶೂಟಿಂಗ್ ಗಾಗಿ ಅವರು ಹೈದರಾಬಾದ್ ನಿಂದ ಮೈಸೂರಿಗೆ ಖಾಸಗಿ ಜೆಟ್ ನಲ್ಲಿ ಆಗಮಿಸಿದ್ದಾರೆ. ಬೆಳಗ್ಗೆ ಮೈಸೂರು (Mysore) ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಟನಿಗೆ ಸ್ವಾಗತ ಕೋರಲಾಗಿದೆ. ಮೈಸೂರಿನಲ್ಲಿ ಅವರ ನಟನೆಯ ಸಿನಿಮಾ ಶೂಟ್ ಆಗುತ್ತಿದೆ.

    ಒಂದು ಕಡೆ ಸಿನಿಮಾದ ಭರ್ಜರಿ ಚಿತ್ರೀಕರಣ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸೋರಿಕೆಯ ಸಮಸ್ಯೆಯನ್ನು ಟೀಮ್ ಎದುರಿಸುತ್ತಿದೆ. ಸಿನಿಮಾದ ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಮೊನ್ನೆಯಷ್ಟೇ ಹಾಡಿಗೇ ಹಾಡೇ ಸೋರಿಕೆ (Song Leak) ಆಗಿ ಆತಂಕ ಮೂಡಿಸಿತ್ತು. ಈ ಕುರಿತಂತೆ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆದಿತ್ತು. ಆದರೆ, ಕಿಡಿಗೇಡಿಗಳು ಪತ್ತೆ ಆಗಿರಲಿಲ್ಲ.

     

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

  • ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಟನೆಯ ಗೇಮ್ ಚೇಂಜರ್ ಸಿನಿಮಾದ ಹಾಡೊಂದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಯಾವುದೇ ವಿಷಯ ಸೋರಿಕೆ ಆಗದಂತೆ ಎಚ್ಚರಿಕೆ ತೆಗೆದುಕೊಂಡಿದ್ದರೂ, ಹಾಡಿಗೇ ಹಾಡೇ ಸೋರಿಕೆ (Song Leak) ಆಗಿರುವುದು ಚಿತ್ರತಂಡಕ್ಕೆ ತಲೆ ನೋವುದಾಗಿ ಈ ಕಾರಣದಿಂದಾಗಿಯೇ ನಿರ್ಮಾಪಕರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಒಬ್ಬರನ್ನು ಅರೆಸ್ಟ್ ಕೂಡ ಮಾಡಿದ್ದಾರೆ.

    ಈ ಹಿಂದೆ ಫೋಟೋ ಸೋರಿಕೆ

    ‘ಗೇಮ್ ಚೇಂಜರ್’ (Game Changer) ಸಿನಿಮಾದ ಯಾವ ವಿಷಯಗಳನ್ನೂ ಲೀಕ್ ಆಗಬಾರದು ಎಂದು ಎಷ್ಟೇ ಕಟ್ಟೆಚರಿಕೆ ತೆಗೆದುಕೊಂಡಿದ್ದರೂ, ಚಿತ್ರೀಕರಣ ಯಾವುದೇ ಫೋಟೋ ಲೀಕ್ ಆಗದಂತೆ ನೋಡಿಕೊಂಡಿದ್ರು ಕೂಡ ಎಲ್ಲವೂ ವ್ಯರ್ಥವಾಗಿದೆ. ಈ ಹಿಂದೆ ಚರಣ್- ಕಿಯಾರಾ ಲುಕ್ ರಿವೀಲ್ ಆಗಿತ್ತು.

    ಡೈರೆಕ್ಟರ್ ಶಂಕರ್ (Shankar) ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ(Game Changer) ಕಿಯಾರಾ ಅಡ್ವಾಣಿ- ರಾಮ್ ಚರಣ್ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾಗೆ ಸೋರಿಕೆ ಕಾಟ ಶುರುವಾಗಿದೆ. ಸಾಕಷ್ಟು ಎಚ್ಚರಿಕೆ ವಹಿಸಿದ ಹೊರತಾಗಿಯೂ ಸಿನಿಮಾ ಸೆಟ್‌ನ ಫೋಟೋ ಲೀಕ್ ಆಗಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆದಿತ್ತು. ಆದರೆ, ಕಿಡಿಗೇಡಿಗಳು ಪತ್ತೆ ಆಗಿರಲಿಲ್ಲ.

     

    ಸಮುದ್ರ ತೀರದಲ್ಲಿ ರಾಮ್ ಚರಣ್- ಕಿಯಾರಾ(Kiara Advani) ನಟಿಸುತ್ತಿರುವ ದೃಶ್ಯ ಲೀಕ್ ಆಗಿದೆ. ಇಬ್ಬರೂ ಕಪ್ಪು ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಮುಂದಿನ ವರ್ಷ ಹೊಸತರಲ್ಲಿ ಚಿತ್ರ ತೆರೆಗೆ ಬರಲಿದೆ.

  • ಶಂಕರ್ ಜೊತೆಗಿನ ಸಿನಿಮಾ ನಂತರ ಸಕ್ರಿಯ ರಾಜಕಾರಣಕ್ಕೆ ವಿಜಯ್

    ಶಂಕರ್ ಜೊತೆಗಿನ ಸಿನಿಮಾ ನಂತರ ಸಕ್ರಿಯ ರಾಜಕಾರಣಕ್ಕೆ ವಿಜಯ್

    ಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯಕ್ಕೆ ಬರುವುದು ಪಕ್ಕಾ ಎನ್ನುತ್ತಿದ್ದರೂ, ಶಂಕರ್ (Shankar)  ಜೊತೆಗಿನ ಸಿನಿಮಾ ಮುಗಿಸಿಕೊಂಡು ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಲಿದ್ದಾರಂತೆ. ಸದ್ಯ ಲಿಯೋ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದರ ಜೊತೆ ಜೊತೆಗೆ ರಾಜಕಾರಣದ ಕಣವನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಅವರು ಆಪ್ತ ಬಳಗದ ಮಾಹಿತಿ.

    ವಿಜಯ್ ರಾಜಕಾರಣಕ್ಕೆ ಬರುವುದು ಪಕ್ಕಾ ಆಗಿರುವುದರಿಂದ ಅಭಿಮಾನಿಗಳು ಮತ್ತು ಆಪ್ತರ ಜೊತೆ ವಿಜಯ್ ನಿರಂತರ ಮೀಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ. ಈ ನಡುವೆ ವಿಜಯ್ ರಾಜಕಾರಣಕ್ಕೆ ಬಂದರೆ, ಅವರನ್ನು ಬೆಂಬಲಿಸುವುದಾಗಿ ಅಜಿತ್ ಫ್ಯಾನ್ಸ್ ಹೇಳಿಕೊಂಡಿದ್ದಾರೆ. ಹಾಗಾಗಿ ವಿಜಯ್ ಎಂಟ್ರಿ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

    ತಮಿಳುನಾಡಿನ (Tamil Nadu) ರಾಜಕಾರಣದಲ್ಲಿ ಬಿರುಗಾಳಿ, ಸುನಾಮಿ ಏಕಕಾಲಕ್ಕೆ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಮತ್ತೊಂದು ಕಡೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Dalpati Vijay) ಕೂಡ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ದಳಪತಿ ವಿಜಯ್ ರಾಜಕಾರಣಕ್ಕೆ (Politics) ಬರುತ್ತಾರೆ ಎನ್ನುವ ಸುದ್ದಿ ಹೊಸದೇನೂ ಅಲ್ಲ. ಈಗಾಗಲೇ ಹಲವಾರು ಬಾರಿ ಅವರ ಹೆಸರು ತೇಲಿ ಬಂದಿದೆ. ವಿಜಯ್ ಅವರ ತಂದೆ ರಾಜಕಾರಣಿಯೂ ಆಗಿರುವುದರಿಂದ ಪದೇ ಪದೇ ವಿಜಯ್ ಹೆಸರು ಚುನಾವಣಾ ಕಣದಲ್ಲಿ ಕೇಳಿ ಬಂದಿದೆ. ಪ್ರತಿ ಸಲವೂ ಅದು ಠುಸ್ ಪಟಾಕಿ ಆಗಿದೆ. ಆದರೆ, ಈ ಬಾರಿ ಅವರು ಕಣಕ್ಕೆ ಇಳಿಯೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

    ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದ ವಿಜಯ್, ಇದೀಗ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗೆ ಬಂದಿದ್ದಾರೆ. ನಿರಂತರವಾಗಿ ಅಭಿಮಾನಿಗಳ ಜೊತೆ ಸಂವಹನ ಮಾಡುತ್ತಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ತಮಿಳುನಾಡಿನಾದ್ಯಂತ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಟಾಪ್ ಬಂದ ಮಕ್ಕಳಿಗೆ ಬಹುಮಾನ ನೀಡಿದ್ದಾರೆ. ಅದು ತಾಲ್ಲೂಕು  ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಗಣನೇ ತೆಗೆದುಕೊಳ್ಳದೇ ಮತಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಬಹುಮಾನ ನೀಡಿದ್ದಾರೆ.

     

    ವಿಜಯ್ ಮಕ್ಕಳ್ ಇಯಕ್ಕಮ್ (Vijay Makkal Iyakkam) ಎನ್ನುವ ಸಂಸ್ಥೆಯ ಮೂಲಕ ವಿಜಯ್ ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಒಟ್ಟು 235 ವಿಧಾನಸಭಾ ಕ್ಷೇತ್ರಗಳ ಮಕ್ಕಳಿಗೆ ಬಹುಮಾನ ನೀಡಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ ಮತ್ತು ಸನ್ಮಾನವನ್ನು ಹಮ್ಮಿಕೊಂಡಿದ್ದರು. ಹೀಗಾಗಿ ಈ ಬಾರಿ ಅಷ್ಟೂ ಕ್ಷೇತ್ರಗಳಲ್ಲೂ ವಿಜಯ್ ಅವರ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]