Tag: ಶಂಕರೇಗೌಡ

  • 5 ರೂ. ಡಾಕ್ಟರ್ ಶಂಕರೇಗೌಡರಿಗೆ ಓಪನ್ ಹಾರ್ಟ್ ಸರ್ಜರಿ

    5 ರೂ. ಡಾಕ್ಟರ್ ಶಂಕರೇಗೌಡರಿಗೆ ಓಪನ್ ಹಾರ್ಟ್ ಸರ್ಜರಿ

    ಬೆಂಗಳೂರು: ಲಘು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ 5 ರೂಪಾಯಿ ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡ ಅವರಿಗೆ ಇಂದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿದೆ.

    ನಗರದ ಪೋರ್ಟೀಸ್ ಆಸ್ಪತ್ರೆಯಲ್ಲಿ ಬೆಳಗ್ಗೆ 8 ಗಂಟೆಗೆ ಶಂಕರೇಗೌಡರನ್ನು ಆಪರೇಷನ್ ಥೇಟರ್‍ಗೆ ಕರೆದುಕೊಂಡು ಹೋದ 8 ಮಂದಿ ನುರಿತ ವೈದ್ಯರ ತಂಡ ಸರ್ಜರಿ ಮಾಡಿದೆ. ಕಳೆದ ಒಂದು ತಿಂಗಳ ಹಿಂದೆ ಶಂಕರೇಗೌಡರಿಗೆ ಲಘು ಹೃದಯಾಘಾತವಾಗಿತ್ತು. ಈ ಹಿನ್ನೆಲೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆಗಿದ್ದರಿಂದ ತಾತ್ಕಾಲಿಕವಾಗಿ ಸ್ಟಂಟ್ ಅಳವಡಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಬೈಪಾಸ್ ಸರ್ಜರಿ ಮಾಡುವುದಾಗಿ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು. 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

    ಇಷ್ಟು ದಿನ ಲವಲವಿಕೆಯಿಂದ ಚಿಕಿತ್ಸೆಗೆ ಸ್ಪಂದಿಸಿ ಆರಾಮವಾಗಿದ್ದ ಶಂಕರೇಗೌಡ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡ ಹಿನ್ನೆಲೆ ಮೇ 30ರಂದು ಡಿಸ್ಚಾರ್ಜ್ ಆಗಿದ್ದರು. ಹೃದ್ರೋಗ ತಜ್ಞರ ಸಲಹೆ ಮೇರೆಗೆ ಇದೀಗ ಶಂಕರೇಗೌಡರು ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಂಡಿದ್ದಾರೆ.

    Live Tv

  • 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

    5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

    ಮೈಸೂರು: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ 5 ರೂ. ವೈದ್ಯರು ಎಂದೇ ಫೇಮಸ್ ಆಗಿರುವ ಡಾ. ಶಂಕರೇಗೌಡ ಅವರಿಗೆ ಸೋಮವಾರ ಹೃದಯಘಾತವಾಗಿದೆ.

    ನಿನ್ನೆ ಸಂಜೆ ಶಂಕರೇಗೌಡ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಕೂಡಲೇ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆಗಿದ್ದರಿಂದ ಸದ್ಯ ತಾತ್ಕಾಲಿಕವಾಗಿ ಸ್ಟಂಟ್ ಅಳವಡಿಸಲಾಗಿದೆ. ಆದರೆ ಒಂದು ವಾರದ ಬಳಿಕ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅದೃಷ್ಟವಶಾತ್ ಶಂಕರೇಗೌಡರು ಪ್ರಾಣಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಹಣದ ಆಸೆಯೇ ಇಲ್ಲ, ರೋಗಿಗಳ ಸೇವೆ ಎಲ್ಲ – 5 ರೂ.ಗೆ ಟ್ರೀಟ್‍ಮೆಂಟ್ ಕೊಡ್ತಾರೆ ಮಂಡ್ಯದ ಡಾಕ್ಟರ್

    ಚರ್ಮ ಮತ್ತು ಲೈಂಗಿಕ ರೋಗ ತಜ್ಞರಾಗಿ ಹತ್ತಾರು ವರ್ಷಗಳಿಂದ ನಿರಂತರವಾಗಿ ಬಡ ಜನರಿಗೆ ಅನುಕೂಲವಾಗುವಂತೆ ಸೇವೆ ಸಲ್ಲಿಸುತ್ತಿರುವ ಶಂಕರೇಗೌಡರು 5 ರೂಪಾಯಿ ಡಾಕ್ಟರ್ ಎಂದೇ ಚಿರಪರಿಚಿತರು. ಇವರು ಸ್ವಗ್ರಾಮ ಶಿವಳ್ಳಿಯಲ್ಲಿ ಉಚಿತವಾಗಿ ರೋಗಿಗಳನ್ನು ಪರೀಕ್ಷೆ ಮಾಡುತ್ತಾರೆ. ಮಂಡ್ಯದ ತಮ್ಮ ಕ್ಲಿನಿಕ್‍ನಲ್ಲಿ ಮಾತ್ರ ಪ್ರತಿಯೊಬ್ಬರಿಗೆ 5 ರೂಪಾಯಿ ಪಡೆಯುತ್ತಾರೆ. ಹೀಗಾಗಿ ಇವರ ಸೇವೆಗೆ ಮಂಡ್ಯ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಪರಿಷತ್‌ ಪಟ್ಟಿ ಪ್ರಕಟ – ಲಕ್ಷ್ಮಣ ಸವದಿಗೆ ಟಿಕೆಟ್

  • 5 ರೂಪಾಯಿ ಡಾಕ್ಟ್ರು 5 ರೂ. ಕಾಯಿನ್ ಗಳನ್ನು ಕೊಟ್ಟು ನಾಮಪತ್ರ ಸಲ್ಲಿಸಿದ್ರು!

    5 ರೂಪಾಯಿ ಡಾಕ್ಟ್ರು 5 ರೂ. ಕಾಯಿನ್ ಗಳನ್ನು ಕೊಟ್ಟು ನಾಮಪತ್ರ ಸಲ್ಲಿಸಿದ್ರು!

    ಮಂಡ್ಯ: ಜಿಲ್ಲೆಯಲ್ಲಿ 5 ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಮಂಡ್ಯದ ಡಾಕ್ಟರ್ ಶಂಕರೇಗೌಡರು ಕರ್ನಾಟಕ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧೆಗಿಳಿದಿದ್ದಾರೆ.

    ಡಾಕ್ಟರ್ ಶಂಕರೇಗೌಡ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಜೆಡಿಎಸ್ ಪಕ್ಷದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿಯೂ ಶಂಕರೇಗೌಡ ಆಯ್ಕೆಯಾಗಿದ್ದರು. ಆದರೆ ಜೆಡಿಎಸ್ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

    ಪತ್ನಿ ರುಕ್ಮಿಣಿ, ಪುತ್ರಿ ಉಜ್ವಲ, ವಕೀಲ ಕೇಶವಮೂರ್ತಿ ಹಾಗೂ ಬೆಂಬಲಿಗರ ಜೊತೆ ಆಗಮಿಸಿದ ವೈದ್ಯರು ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಪಕ್ಷೇತರರಾಗಿ ಚುನಾವಣಾ ಕಣಕ್ಕಿಳಿದಿರುವ ಅವರು ಠೇವಣಿ ಕಟ್ಟಲು 5 ರೂಪಾಯಿ ಕಾಯಿನ್ ಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ತೆಗೆದುಕೊಂಡು ಬಂದಿದ್ದು ವಿಶೇಷವಾಗಿತ್ತು.