Tag: ವ್ಯಾಲೆಂಟೈನ್

  • ವ್ಯಾಲೆಂಟೈನ್ ದಿನದಂದು ವಿಶ್ ಮಾಡಿ ನಟಿ ಜಾಕ್ವೆಲಿನ್ ಗೆ ಶಾಕ್ ಕೊಟ್ಟ ಸುಕೇಶ್

    ವ್ಯಾಲೆಂಟೈನ್ ದಿನದಂದು ವಿಶ್ ಮಾಡಿ ನಟಿ ಜಾಕ್ವೆಲಿನ್ ಗೆ ಶಾಕ್ ಕೊಟ್ಟ ಸುಕೇಶ್

    ಹುಕೋಟಿ ವಂಚನೆ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್ ಪ್ರೇಮಿಗಳ ದಿನದಂದು ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಶುಭಾಶಯ ಕೋರಿ ಶಾಕ್ ಕೊಟ್ಟಿದ್ದಾರೆ. ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರವೇನೂ ಗುಟ್ಟಾಗಿ ಉಳಿದಿರಲಿಲ್ಲ. ಆದರೆ, ಜಾರಿ ನಿರ್ದೇಶನಾಲಯ ಸುಕೇಶ್ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು.

    ವಂಚನೆ ಮಾಡಿರುವ ಬಹುಕೋಟಿ ಹಣದಲ್ಲಿ ನಟಿ, ಗೆಳತಿ ಜಾಕ್ವೆಲಿನ್ ಗೆ ಆರೋಪಿ ಸುಕೇಶ್ ಹಲವು ವಸ್ತುಗಳನ್ನು ಉಡುಗೊರೆಯಾಗಿ ಕೊಡಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯ ಪತ್ತೆ ಮಾಡಿತ್ತು. ವಿಚಾರಣೆಗೆ ಬರುವಂತೆ ಜಾಕ್ವೆಲಿನ್ ಗೂ ನೋಟಿಸ್ ಜಾರಿ ಮಾಡಿತ್ತು. ಕೋರ್ಟಿಗೂ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಜಾಮೀನು ಕೂಡ ಪಡೆದುಕೊಂಡಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸುಕೇಶ್ ನಿಂದ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು. ಇದನ್ನೂ ಓದಿ: ವಿಶೇಷ ಫೋಟೋ ಶೇರ್‌ ಮಾಡಿ ತಮನ್ನಾ ಜೊತೆಗಿನ ಪ್ರೀತಿ ಅಧಿಕೃತಗೊಳಿಸಿದ ವಿಜಯ್ ವರ್ಮಾ

    ಸುಕೇಶ್ ಹಾಗೂ ಆತನ ಮತ್ತೋರ್ವ ಗೆಳತಿಯಿಂದಾಗಿ ತನಗೆ ಮೋಸವಾಗಿದೆ ಎಂದು ಮೊನ್ನೆಯಷ್ಟೇ ಜಾಕ್ವೆಲಿನ್ ಹೇಳಿಕೆ ನೀಡಿದ್ದರು. ಹಲವು ಆರೋಪಗಳನ್ನೂ ಮಾಡಿದ್ದರು. ಸುಕೇಶ್ ಮೇಲೆ ಏನೇ ಆರೋಪ ಮಾಡಿದರೂ, ಇನ್ನೂ ತಾನು ಜಾಕ್ವೆಲಿನ್ ನನ್ನು ಪ್ರೀತಿಸುತ್ತಿರುವ ವಿಚಾರವನ್ನು ವಿಶ್ ಮಾಡುವ ಮೂಲಕ ಸುಕೇಶ್ ಸಾಬೀತು ಪಡಿಸಿದ್ದಾರೆ. ಮಾಧ್ಯಮಗಳ ಮುಂದೆಯೇ ಶುಭಾಶಯ ಕೋರಿದ್ದಾರೆ.

    ಸುಕೇಶ್ ಹೇಳಿರುವ ಶುಭಾಶಯವನ್ನು ಜಾಕ್ವೆಲಿನ್ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ, ಸುಕೇಶ್ ನಿಂದಾಗಿ ತಮಗೆ ಸಾಕಷ್ಟು ತೊಂದರೆ ಆಗಿದೆ ಎನ್ನುವುದನ್ನು ಪದೇ ಪದೇ ಅವರು ಹೇಳುತ್ತಲೇ ಇರುತ್ತಾರೆ. ಸುಕೇಶ್ ಮಾತಿಗೆ ಜಾಕ್ವೆಲಿನ್ ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೇಮಿಗಳ ದಿನಾಚರಣೆ – ಕೊಹ್ಲಿಗೆ ವಿಶೇಷವಾಗಿ ಶುಭಕೋರಿದ ಅನುಷ್ಕಾ

    ಪ್ರೇಮಿಗಳ ದಿನಾಚರಣೆ – ಕೊಹ್ಲಿಗೆ ವಿಶೇಷವಾಗಿ ಶುಭಕೋರಿದ ಅನುಷ್ಕಾ

    ಮುಂಬೈ: ಪತಿ ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಪ್ರೇಮಿಗಳದಿನದ ಶುಭಕೋರಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

    ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪ್ರೇಮಿಗಳ ದಿನದಂದು ಪತಿ ಮತ್ತು ಭಾರತದ ನಾಯಕ ವಿರಾಟ್ ಕೊಹ್ಲಿಗೆ ಮುದ್ದಾದ  ಪೊಸ್ಟ್‌‌‌ನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಪ್ರೇಮಿಗಳ ದಿನಕ್ಕೆ ವಿಶ್ ಮಾಡಿದ್ದಾರೆ.

    ಈ ದಿನದಂದು ಸೂರ್ಯಾಸ್ತದ ಫೋಟೋಗಳನ್ನು ಪೊಸ್ಟ್ ಮಾಡಲು ಉತ್ತಮ ದಿನವೆಂದು ತೋರುತ್ತಿದೆ. ನನ್ನ ವ್ಯಾಲೆಂಟೈನ್ ಯಾವಾಗಲೂ ಶಾಶ್ವತ ಎಂದು ಬರೆದುಕೊಂಡು ಹೃದಯ ಎಮೋಜಿಯೊಂದಿಗೆ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಶುಭ ಕೋರಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ಮಧ್ಯೆ ಕೊಹ್ಲಿ ಪ್ರಸ್ತುತ ಚೆನ್ನೈನಲ್ಲಿದ್ದಾರೆ. ಉಭಯ ತಂಡಗಳು ಎರಡನೇ ಟೆಸ್ಟ್‍ನ 2 ನೇ ದಿನ ಆಡುತ್ತಿವೆ. ಕಳೆದ ತಿಂಗಳು ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ವಿರಾಟ್ ದಂಪತಿ ಮಗಳಿಗೆ ವಮಿಕಾ ಎಂದು ಹೆಸರು ಇಟ್ಟಿರುವ ಸುದ್ದಿಯನ್ನು ಹಂಚಿಕೊಂಡಿದ್ದರು.