Tag: ವ್ಯಾಯಾಮ

  • ಆರೋಗ್ಯಕ್ಕಾಗಿ ತಾಯಿ ಲೀಲಾವತಿ ಜೊತೆ ಸ್ಟೆಪ್ ಹಾಕಿದ ನಟ ವಿನೋದ್ ರಾಜ್

    ಆರೋಗ್ಯಕ್ಕಾಗಿ ತಾಯಿ ಲೀಲಾವತಿ ಜೊತೆ ಸ್ಟೆಪ್ ಹಾಕಿದ ನಟ ವಿನೋದ್ ರಾಜ್

    ನೇಕ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಮರೆತು ಬೇರೆ ಇದ್ದು ತಮ್ಮ ಜೀವನವನ್ನು ಕೊಳ್ಳುತ್ತಾರೆ.  ಆದರೆ ನಟ ವಿನೋದ್ ರಾಜ್ (Vinod Raj) ತಮ್ಮ ತಾಯಿ, ಹಿರಿಯ ನಟಿ ಎಂ.ಲೀಲಾವತಿಯವರ (Leelavathi) ಆರೋಗ್ಯವನ್ನು ಕಾಪಾಡುವ ಸಲುವಾಗಿ  ಬೆಳಗಿನ ವ್ಯಾಯಾಮಕ್ಕೆ (Exercise) ಹಾಡಿನ ಜೊತೆಯಲ್ಲಿ ಹೆಜ್ಜೆ  ಹಾಕಿಸಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಸಾಕಷ್ಟು ವರ್ಷಗಳಿಂದ ತಾಯಿ-ಮಗ ಜೀವನ ನಡೆಸುತಿದ್ದಾರೆ. ಈ ನಡುವೆ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಅವರು ನಿರ್ಮಿಸಿದ್ದಾರೆ. ಈಗ ಮತ್ತೊಂದು ಪಶು ಆಸ್ಪತ್ರೆ ನಿರ್ಮಾಣ ಕಾರ್ಯದಲ್ಲೂ ಬ್ಯುಸಿಯಾಗಿದ್ದಾರೆ.  ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್

    ಸಮಾಜಮುಖಿ ಕೆಲಸಗಳುಮತ್ತು ಕೃಷಿ ಜೊತೆಗೆ ವಿನೋದ್ ರಾಜ್ ಅವರಿಗೆ ತಾಯಿಯ ಯೋಗಕ್ಷೇಮವೂ ಅಷ್ಟೇ ಮುಖ್ಯ. ಹೀಗಾಗಿ ಪ್ರತಿನಿತ್ಯ ಬೆಳಿಗ್ಗೆ ತಾಯಿಯ ಆಸೆಯಂತೆ ವಿನೋದ್ ರಾಜ್ ಅಮ್ಮನ ಆರೋಗ್ಯವನ್ನು (Health) ನೋಡಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಪ್ರತಿದಿನವೂ ಬೇರೆ ಬೇರೆ ಹಾಡುಗಳಿಗೆ ಹೆಜ್ಜೆ (Dance) ಹಾಕುತ್ತಾರೆ.

     

    ಎಂದಿನಂತೆ ಇಂದೂ ಕೂಡ ತಾಯಿಯ ಜೊತೆ ಜೊತೆಯಲೇ ಹಾಡಿಗೆ ಹೆಜ್ಜೆ ಹಾಕಿಸಿ ವ್ಯಾಯಾಮ ಮಾಡಿದ್ದಾರೆ. ಇನ್ನೂ ಈ ಇಳಿ ವಯಸ್ಸಿನಲ್ಲಿ ಅಮ್ಮನ ಉತ್ಸಾಹವನ್ನು ನೋಡಿದ ಮಗ ವಿನೋದ್ ರಾಜ್  ಖುಷ್ ಹಾಗಿದ್ದಾರೆ. ಸದಾ ಕಾಲ ಅಮ್ಮ ಆರೋಗ್ಯವಂಥಳಾಗಿ ಇರಬೇಕು ಎಂದು ನಿತ್ಯ ಪ್ರಾರ್ಥನೆ ಮಾಡುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಿಮರಿ ಹಿಡ್ಕೊಂಡು ವರ್ಕೌಟ್ ಮಾಡಿದ ಮಮತಾ ಬ್ಯಾನರ್ಜಿ

    ನಾಯಿಮರಿ ಹಿಡ್ಕೊಂಡು ವರ್ಕೌಟ್ ಮಾಡಿದ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ನಾಯಿಮರಿಯನ್ನು (Puppy) ಹಿಡಿದುಕೊಂಡು, ಟ್ರೆಡ್‍ಮಿಲ್‍ನಲ್ಲಿ (Treadmill) ನಡೆಯುವ ವೀಡಿಯೋವೊಂದು ಹರಿದಾಡುತ್ತಿದೆ.

    ಈ ಬಗ್ಗೆ ಮಮತಾ ಬ್ಯಾನರ್ಜಿ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಕೆಲವೊಮ್ಮೆ ಹೆಚ್ಚಿನ ಪ್ರೇರೇಪಣೆ ಅಗತ್ಯವಿರುತ್ತೆ ಎಂದು ಅಭಿಪ್ರಾಯಪಟ್ಟಿದ್ದಾರೆ.

     

    View this post on Instagram

     

    A post shared by Mamata Banerjee (@mamataofficial)

    ವೀಡಿಯೋದಲ್ಲಿ ಏನಿದೆ?: ಮಮತಾ ಬ್ಯಾನರ್ಜಿ ಅವರು ಬಿಳಿ ಸೀರೆಯಲ್ಲಿ ಟ್ರೆಡ್‍ಮಿಲ್‍ನಲ್ಲಿ ವಾಕಿಂಗ್ ಮಾಡುತ್ತಾ, ಒಂದು ನಾಯಿಮರಿಯನ್ನು ತಮ್ಮ ಮುಂದೆ ಹಿಡಿದುಕೊಂಡಿದ್ದಾರೆ. ನಾಯಿ ಮರಿಯನ್ನೇ ನೋಡುತ್ತಾ ವಾಕಿಂಗ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಭಿವೃದ್ಧಿ ಮಾಡಿ ನಿಮ್ಮ ಪ್ರೀತಿನಾ ಬಡ್ಡಿ ಸಮೇತ ತೀರಿಸುತ್ತೇನೆ: ಮೋದಿ

    ಕಾಮೆಂಟ್‍ಗಳನ್ನು ಆಫ್ ಮಾಡಲಾಗಿದೆ, ವೀಡಿಯೊವನ್ನು 15,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಮಮತಾ ಬ್ಯಾನರ್ಜಿ ಅವರು ಪ್ರತಿನಿತ್ಯ ವ್ಯಾಯಾಮವನ್ನು ಮಾಡುತ್ತಾರೆ. ಇವರು 2019ರಲ್ಲಿ ಜಾಗೃತಿ ಮೂಡಿಸಲು ಡಾರ್ಜಿಲಿಂಗ್‍ನಲ್ಲಿ 10 ಕಿಮೀ ದೂರ ಜಾಗಿಂಗ್ ಮಾಡಿದ್ದರು. ಇದನ್ನೂ ಓದಿ: ಸೀತೆ ಯಾರು, ಶೂರ್ಪನಖಿ ಯಾರು ಅಂತಾ ಎಲ್ಲರಿಗೂ ಗೊತ್ತಿದೆ: ಶೋಭಾ ವಾಗ್ದಾಳಿ

  • ಅಸ್ತಮಾ, ಉಸಿರಾಟದ ತೊಂದರೆ ಇದೆಯೇ? ಹಾಗಾದ್ರೆ ಈ ವ್ಯಾಯಾಮಗಳನ್ನು ಮಾಡಿ

    ಅಸ್ತಮಾ, ಉಸಿರಾಟದ ತೊಂದರೆ ಇದೆಯೇ? ಹಾಗಾದ್ರೆ ಈ ವ್ಯಾಯಾಮಗಳನ್ನು ಮಾಡಿ

    ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಅಸ್ತಮಾ (Asthma) ಸಮಸ್ಯೆ ಕಾಡುತ್ತದೆ. ಕಲುಷಿತ ವಾತಾವರಣ ಹಾಗೂ ಗಾಳಿಯಿಂದ ಹಬ್ಬುವ ಕಾಯಿಲೆ ಇದಾಗಿದೆ. ಅಸ್ತಮಾ, ಉಸಿರಾಟದ ತೊಂದರೆ (breathing problems) ಇರುವವರು, ಅದರ ನಿವಾರಣೆಗೆ ನಾನಾ ಕಸರತ್ತು ಮಾಡಿರುತ್ತಾರೆ. ಆದರೆ ಯಾವುದೇ ಪ್ರಯೋಜನವಾಗಿರುವುದಿಲ್ಲ.

    ಅಸ್ತಮಾ, ಉಸಿರಾಟದ ತೊಂದರೆ ಇರುವವರು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವ ಮೂಲಕ ಮತ್ತು ಕೆಲವು ಜೀವನಶೈಲಿಯನ್ನು ಬದಲಾಯಿಸುವ ಮೂಲಕ ನಿಮ್ಮ ಶ್ವಾಸಕೋಶವನ್ನು ಅನಾರೋಗ್ಯದಿಂದ ಕಾಪಾಡಬಹುದು. ನಿಮ್ಮ ಶ್ವಾಸಕೋಶದ ಆರೋಗ್ಯವನ್ನು ಹೆಚ್ಚಿಸಬಹುದು. ಪ್ರತಿದಿನ ಈ ವ್ಯಾಯಾಮಗಳನ್ನು ಮಾಡಿದರೆ ಖಂಡಿತ ಅಸ್ತಮಾ, ಉಸಿರಾಟದ ಸಮಸ್ಯೆ ದೂರವಾಗುತ್ತದೆ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    1) ಭ್ರಮರಿ ಪ್ರಾಣಾಯಾಮ
    ಈ ಪ್ರಾಣಾಯಾಮ ಉಸಿರಾಟದ ವ್ಯವಸ್ಥೆಯನ್ನು ವೃದ್ಧಿಸುವ ಯೋಗಾಭ್ಯಾಸವಾಗಿದೆ. ನೈಟ್ರಿಕ್‌ ಆಕ್ಸೈಡ್‌ ಅಂಶವನ್ನು ಬಿಡುಗಡೆ ಮಾಡುವ ಮೂಲಕ ಶ್ವಾಸಕೋಶದ ಸೋಂಕನ್ನು ದೂರ ಮಾಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಬಹಳ ವೇಗವಾಗಿ ವೈರಸ್‌ ಸೋಂಕಿನ ಸಂತತಿಯನ್ನು ತಗ್ಗಿಸುತ್ತದೆ. ನಿತ್ಯ 2ರಿಂದ 3 ಬಾರಿ ಸುಮಾರು ಹತ್ತು ನಿಮಿಷಗಳ ಕಾಲ ಇದನ್ನು ಅಭ್ಯಾಸ ಮಾಡುವುದು ಒಳ್ಳೆಯದು.

    2) ಸೂರ್ಯ ನಾಡಿ ಶೋಧನ
    ಪ್ರಾಚೀನ ಯೋಗ ತಂತ್ರವಾಗಿರುವ ಇದು, ನಮ್ಮ ದೇಹದಲ್ಲಿರುವ ಸೂರ್ಯ ನಾಡಿಯನ್ನು ಸಕ್ರಿಯವಾಗಿರುಸುತ್ತದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಸೂರ್ಯ ನಾಡಿ ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಇದು ದೇಹದ ಆಂತರಿಕ ವ್ಯವಸ್ಥೆಯನ್ನು ಉತ್ತೇಜಿಸುವ ಉಸಿರಾಟದ ಅಭ್ಯಾಸಗಳನ್ನು ಒಳಗೊಳ್ಳುತ್ತದೆ. ಸೂರ್ಯ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಈ ಯೋಗಾಭ್ಯಾಸ ಸಹಾಯ ಮಾಡುತ್ತದೆ.

    3) ಚಂದ್ರ ನಾಡಿ ಶೋಧನ
    ಚಂದ್ರ ನಾಡಿ ಶೋಧನ ಯೋಗಾಭ್ಯಾಸವು ನಮ್ಮ ದೇಹದ ಎಡಭಾಗದಲ್ಲಿ ಹಾದುಹೋಗುವ ಚಂದ್ರ ನಾಡಿಯನ್ನು ಸಕ್ರಿಯಗೊಳಿಸಲು ಸಹಕಾರಿಯಾಗಿದೆ. ನಮ್ಮ ದೇಹದೊಳಗೆ ಕಾರ್ಯನಿರ್ವಹಿಸುವ ಚಂದ್ರ ನಾಡಿಯು ಈ ಚಟುವಟಿಕೆಯಿಂದ ಪುನಶ್ಚೇತನಗೊಳ್ಳುತ್ತದೆ. ಈ ಯೋಗಾಭ್ಯಾಸ ಮಾಡುವುದರಿಂದ ಚಂದ್ರ ನಾಡಿಯನ್ನು ಶುದ್ಧೀಕರಿಸಲು ಮತ್ತು ಶಕ್ತಿಯುತಗೊಳಿಸಲು ಸಹಾಯವಾಗುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    4) ಭಸ್ತ್ರಿಕಾ ಪ್ರಾಣಾಯಾಮ
    ಈ ಪ್ರಾಣಾಯಾಮ ಅಭ್ಯಾಸದಿಂದ ಮೂಗಿನ ಹೊಳ್ಳೆಗಳು ಶುದ್ಧಗೊಳ್ಳುತ್ತವೆ. ನಾಭಿಯ ಅವಯವಗಳು ಉತ್ತೇಜನಗೊಳ್ಳುತ್ತವೆ. ಮೆದುಳಿನ ಭಾಗ ಮತ್ತು ನರಮಂಡಲಗಳು ಚುರುಕುಗೊಳ್ಳುತ್ತವೆ. ಕಿವಿ, ಮೂಗು, ಕಣ್ಣಿನ ದೋಷ ಇರುವವರು ಮತ್ತು ಗರ್ಭಿಣಿಯರು ಈ ಪ್ರಾಣಾಯಾಮ ಮಾಡಬಾರದು.

    5) ಕಪಾಲಬಾತಿ ಪ್ರಾಣಾಯಾಮ
    ಅನ್ನನಾಳ, ಶ್ವಾಸನಾಳಗಳನ್ನು ಶುಚಿಗೊಳಿಸಿ ಶ್ವಾಸಕ್ಕೆ ಸಂಬಂಧಿಸಿದ ರೋಗಗಳನ್ನು ನಿರ್ಮೂಲಗೊಳಿಸುತ್ತದೆ. ಮೂಗಿಗೆ ಸಂಬಂಧಿಸಿದ ಸಮಸ್ಯೆಗಳು, ಉದರಕ್ಕೆ ಸಂಬಂಧಿಸಿದ ರೋಗಗಳು ನಿವಾರಣೆಯಾಗುತ್ತವೆ. ಗಂಟಲು ಶುದ್ಧಿಯಾಗುತ್ತದೆ. ಶರೀರದ ಶಾಖ ಹೆಚ್ಚಾಗಿ ಶೀತಕ್ಕೆ ಸಂಬಂಧಿಸಿದ ರೋಗಗಳೂ ಗುಣವಾಗುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಸೌಂದರ್ಯಕ್ಕಿಂತ ಆರೋಗ್ಯವೇ ಮುಖ್ಯ: ರಮ್ಯಾ

    ಸೌಂದರ್ಯಕ್ಕಿಂತ ಆರೋಗ್ಯವೇ ಮುಖ್ಯ: ರಮ್ಯಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಮ್ಯ ಅವರು ಆರೋಗ್ಯವೇ ಸಂಪತ್ತು, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಎನ್ನುವ ಸಂದೇಶದೊಂದಿಗೆ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಟಿಪ್ಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    ಆರೋಗ್ಯವೇ ಸಂಪತ್ತಾಗಿದೆ. ನಿಮ್ಮ ನೈಜ ಸೌಂದರ್ಯದಲ್ಲಿ ಆರಾಮವಾಗಿರಿ. ಜೀವನವನ್ನು ಆನಂದಿಸಲು ನಿಮಗೆ ಆರೋಗ್ಯ ಇಲ್ಲದಿದ್ದರೆ ಜೀವನದ ಪ್ರಯೋಜನವೇನು? ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ನಿಲ್ಲಿಸಿ. ಮಹಿಳೆಯರಿಗೆ ಕಬ್ಬಿಣಾಂಶಗಳು ದೇಹಕ್ಕೆ ಅಗತ್ಯವಾಗಿರುತ್ತದೆ. ಯಾವುದೇ ಆರೋಗ್ಯ ಸಲಹೆಗಳು ಇದ್ದರೆ ದಯವಿಟ್ಟು ಕಾಮೆಂಟ್‍ಗಳಲ್ಲಿ ಹಂಚಿಕೊಳ್ಳಿ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?

    ಆರೋಗ್ಯದ ಕುರಿತಾಗಿ ನಾವು ಎಚ್ಚರಿಕೆಯಿಂದ ಇರಬೇಕು. ಆರೋಗ್ಯವೇ ಭಾಗ್ಯವಾಗಿದೆ. ಕೆಲಸವನ್ನು ಮಾಡಿ ಹಣ ಮಾಡುತ್ತೇವೆ. ಆದರೆ ನಮ್ಮ ಜೀವನವನ್ನು ಎಂಜಾಯ್ ಮಾಡಲು ನಾವು ಆರೋಗ್ಯವನ್ನು ಕಾಪಾಡಿಕೊಳ್ಳುವುದಿಲ್ಲ ಎಂದರೆ ಏನು ಪ್ರಯೋಜನ. ನಾನು ಈ ಹಿಂದೆ ಸಿನಿಮಾ ಎಂದು ಬ್ಯುಸಿಯಾಗಿರುತ್ತದ್ದೆನು. ಸರಿಯಾದ ಸಮಯಕ್ಕೆ ಊಟ ಮಾಡಲು ಆಗುತ್ತಿರಲಿಲ್ಲ ಹೀಗಾಗಿ ಆರೋಗ್ಯ ಹಾಳಾಗುತ್ತಿತ್ತು. ನನ್ನ ಪೋಷಕರು ಇಷ್ಟು ಕೆಸಲ ಮಾಡುತ್ತೀಯ, ಫೇಮಸ್ ಆಗುತ್ತೀಯ ಆದರೆ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳದೆ ಎಂಜಾಯ್ ಮಾಡೋದು ಯಾವಾಗ ಎಂದು ಕೇಳುತ್ತಿದ್ದರು. ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀಯ ಎಂದು ಹೇಳುತ್ತೀದ್ದರು. ಹೀಗಾಗಿ ನಾನು ಆರೋಗ್ಯ ಕುರಿತಾಗಿ ಕಾಳಜಿಯನ್ನು ತೆಗೆದುಕೊಂಡೆ ಎಂದಿದ್ದಾರೆ. ಇದನ್ನೂ ಓದಿ:  ಬಿಜೆಪಿ ಓಕೆ, ಕಾಂಗ್ರೆಸ್ ಯಾಕೆ?:ಆರ್. ಅಶೋಕ್

     

    View this post on Instagram

     

    A post shared by Ramya/Divya Spandana (@divyaspandana)

    ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ. ವ್ಯಾಯಾಮ ಮಾಡುತ್ತೇನೆ, ಹೆಚ್ಚಾಗಿ ನೀರು ಕುಡಿಯುತ್ತೇನೆ. ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸುತ್ತೇನೆ. ಮಹಿಳೆಯರು ಹೆಚ್ಚಾಗಿ ಪ್ರೋಟಿನ್ ಅಂಶ ಇರುವ ಆಹಾರವನ್ನು ಸೇವಿಸುವುದು ಮುಖ್ಯವಾಗುತ್ತದೆ. ನಾವು ಮಹಿಳೆಯರು ಬೆಳ್ಳಗೆ ಇರಬೇಕು ಎಂದು ನಾವು ಎಲ್ಲರೂ ಅಂದುಕೊಳ್ಳುತ್ತೇವೆ. ಕಪ್ಪು ಇರುವವರೆ ಹೆಚ್ಚು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ನಾನು ಅವರಂತೆ ಇರಬೇಕು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂದು ಕೆಲವು ರಾಸಾಯನಿಕ ಕ್ರೀಮ್‍ಗಳನ್ನು ನಾವು ಬಳಸುತ್ತೇವೆ. ನಾನು ಹಾಗೆ ಇರಬೇಕು, ಹೀಗೆ ಇರಬೇಕು ಎನ್ನುವುದನ್ನು ತಲೆಯಿಂದ ಮೊದಲು ತೆಗೆದುಹಾಕಬೇಕು. ಇರುವ ನಮ್ಮ ಸೌಂದರ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ನಮ್ಮ ಹತ್ತಿರ ಇಲ್ಲದಿರುವುದರ ಕುರಿತಾಗಿ ಯೋಚನೆ ಮಾಡುವ ಬದಲು ಇರುವುದರಲ್ಲಿಯೆ ಹೆಮ್ಮೆ ಪಡಬೇಕು. ನನಗೆ ಸೌಂದರ್ಯಕ್ಕಿಂತ ಆರೋಗ್ಯನೆ ಮುಖ್ಯ ಎಂದು ಹೆಂಗಳೆಯರಿಗೆ ಸೌಂದರ್ಯದ ಕುರಿತಾಗಿ ಕಿವಿ ಮಾತು ಹೇಳಿದ್ದಾರೆ.

  • ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಗರ್ಭಿಣಿಯರು ಪಾಲಿಸಲೇಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

    ಸುನಿತಾ ಎ.ಎನ್.

    ರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವ ಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ.

    ಏನು ತಿನ್ನಬೇಕು? ಏನು ತಿನ್ನಬಾರದು? ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ ಸೇವಿಸಬೇಕು. ನಿಮಗಿಷ್ಟವಿದ್ದರೂ ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಕೆಲವು ಆಹಾರಗಳನ್ನು ಕೆಲವೊಂದು ಚಟುವಟಿಕೆಗಳನ್ನು ನೀವು ಮಾಡಲೇಬಾರದು. ವೈದ್ಯರ ಸಲಹೆಯನ್ನು ಪ್ರತಿಯೊಂದು ಹೆಜ್ಜೆ ಹೆಜ್ಜೆಯಲ್ಲೂ ಪಡೆದುಕೊಳ್ಳುತ್ತಿರಬೇಕಾಗುತ್ತದೆ.

    ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ಮನೆಯ ಇತರ ಸದಸ್ಯರುಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ಗರ್ಭದೊಳಗಿರುವ ಕಂದನಿಗೆ ಹೆಚ್ಚಿನ ಅಸ್ಥೆ ಕಾಳಜಿಯನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸುವುದರ ಜೊತೆಗೆ ಮದ್ಯಪಾನ, ಧೂಮಪಾನ, ಹೆಚ್ಚಿನ ಕೆಫೀನ್ ಅಂಶಗಳ ಸೇವನೆಯನ್ನು ನೀವು ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡುತ್ತಿದ್ದಲ್ಲಿ ಅದಕ್ಕೆಲ್ಲಾ ಪೂರ್ಣ ವಿರಾಮ ಇಡುವ ಸಮಯ ಇದಾಗಿದೆ. ಹೀಗಾಗಿ ಇಲ್ಲಿ ನಿಮ್ಮ ಮತ್ತು ಮಗುವಿನ ಉತ್ತಮ ಆರೋಗ್ಯಕ್ಕಾಗಿ ನೀವು ಏನು ಮಾಡಬೇಕು ಏನು ಮಾಡಬಾರದು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಗರ್ಭಿಣಿಯರು ಸೇವಿಸಬೇಕಾದ 10 ಸಸ್ಯಹಾರಿ ಆಹಾರ

    ಮಗುವಿನ ಉತ್ತಮ ಆರೋಗ್ಯಕ್ಕಾಗಿ ಏನು ಮಾಡಬೇಕು?

    1. ಸಾಹಸ ಕ್ರಿಯೆಗಳಲ್ಲಿ ಭಾಗವಹಿಸುವುದು ಅಮ್ಯೂಸ್‍ಮೆಂಟ್ ಪಾರ್ಕ್ ಗಳಲ್ಲಿ ಸಾಹಸ ಕ್ರೀಡೆಗಳು, ಏರುವುದು, ಹತ್ತುವುದು, ನೀರಾಟ ಮೊದಲಾದ ಚಟುವಟಿಕೆಗಳಿರುತ್ತವೆ. ನಿಮ್ಮ ಗರ್ಭಾವಸ್ಥೆಯಲ್ಲಿ ಇಂತಹ ಕ್ರಿಯೆಗಳನ್ನು ನೀವು ಮಾಡಲೇಬಾರದು. ರೋಲರ್ ಕೋಸ್ಟರ್ ಸವಾರಿ, ನೀರಿನಾಟ ಮತ್ತು ಒಮ್ಮೆಲೆ ನಿಲ್ಲುವಿಕೆಗಳನ್ನು ಒಳಗೊಂಡಿರುವ ಚಟುವಟಿಕೆಗಳನ್ನು ಮಾಡಬೇಡಿ. ಇದರಿಂದ ಗರ್ಭಪಾತ ಅಥವಾ ನಿಮ್ಮ ಮಗುವಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

    2. ಕ್ರೀಡೆಗಳಲ್ಲಿ ಭಾಗವಹಿಸದಿರಿ ಎಲ್ಲಾ ರೀತಿಯ ಕ್ರೀಡೆಗಳು ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚು ಹಾನಿಕಾರಕವಾಗಿರುತ್ತವೆ. ಕ್ರೀಡೆಗಳಲ್ಲಿ ಭಾಗವಹಿಸದಿರಿ. ಫುಟ್‍ಬಾಲ್, ಕ್ರಿಕೆಟ್ ಮತ್ತು ವಾಲಿಬಾಲ್‍ನಂತಹ ಕ್ರೀಡೆಗಳನ್ನು ಗರ್ಭಾವಸ್ಥೆಯಲ್ಲಿ ಆಡಲೇಬಾರದು.

    3. ಸೈಕಲ್ ಸವಾರಿ ಮಾಡಬೇಡಿ. ಮೂರನೇ ತ್ರೈಮಾಸಿಕದಲ್ಲಿ ನಿಮಗೆ ಸೈಕಲ್ ಸವಾರಿಯ ಹುಚ್ಚಿದ್ದರೂ ಈ ಕ್ರಿಯೆಗೆ ಇಳಿಯಬೇಡಿ. ಸೈಕಲ್ ಸವಾರಿ ಮಾಡುವಾಗ ಸೈಕಲ್ ನಿರ್ವಹಣೆಯನ್ನು ಮಾಡುವುದು ಗರ್ಭಕ್ಕೆ ದುಷ್ಪರಿಣಾಮವನ್ನುಂಟು ಮಾಡಬಹುದು. ಅದಲ್ಲದೆ ನೀವು ನಿಯಂತ್ರಣ ತಪ್ಪಿ ಕೆಳಕ್ಕೆ ಬೀಳುವ ಸಾಧ್ಯತೆ ಕೂಡ ಇರುತ್ತದೆ.

    5. ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಗರ್ಭಾವಸ್ಥೆಯಲ್ಲಿ ಸಕ್ರಿಯರಾಗಿರುವುದು ಒಳ್ಳೆಯ ವಿಷಯವೇ. ಆದರೆ ಈ ಸಮಯದಲ್ಲಿ ಯಾವುದೇ ಭಾರ ಎತ್ತುವ ವ್ಯಾಯಾಮಗಳನ್ನು ಮಾಡಬೇಡಿ. ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಅನುಸರಿಸದಿರಿ. ಹೆಚ್ಚು ನೋವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

    6. ಬಿಸಿ ಬಿಸಿ ನೀರಿನ ಸ್ನಾನ ಮಾಡದಿರಿ. ಹಾಟ್ ಟಬ್‍ನಲ್ಲಿ ಸ್ನಾನ ಮಾಡುವುದು ಅನಾರೋಗ್ಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ನಿಮ್ಮ ಮಗುವಿನ ಆರೋಗ್ಯದ ಮೇಲೆ ಇದು ಹಾನಿಯನ್ನುಂಟು ಮಾಡಬಹುದು. ಸೌನಾ ಅಥವಾ ಹಾಟ್ ಬಾತ್ ನಿಮ್ಮ ಆರೋಗ್ಯದ ಮೇಲೆ ಹಾನಿಯನ್ನು ಉಂಟು ಮಾಡಿ ಮಗುವಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಉಗುರು ಬೆಚ್ಚಗಿನ ನೀರಿನ ಸ್ನಾನ ಉತ್ತಮ.

    7. ಜಾಗಿಂಗ್ ಬೇಡ ಎರಡನೆಯ ಮತ್ತು ಮೂರನೆಯ ಮಾಸಿಕದಲ್ಲಿ ಓಡುವುದು, ನೆಗೆಯುವುದು ಮೊದಲಾದ ಕ್ರಿಯೆಗಳನ್ನು ಮಾಡಬೇಡಿ. ಓಟದಲ್ಲಿ ಹೆಚ್ಚಿನ ನಿಯಂತ್ರಣ ಬೇಕಾಗಿರುತ್ತದೆ ಈ ಸಮಯದಲ್ಲಿ ನಮ್ಮ ದೇಹ ಒಗ್ಗುವುದಿಲ್ಲ. ಆದ್ದರಿಂದ ಓಡುವುದನ್ನು ಮಾಡದಿರಿ. ಇದರಿಂದ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ.

    8. ಯೋಗ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹಾಗೆಂದ ಮಾತ್ರಕ್ಕೆ ಯೋಗದಲ್ಲಿ ಕಷ್ಟದ ಭಂಗಿಗಳನ್ನು ಅಭ್ಯಸಿಸಬೇಡಿ. ಗರ್ಭಾವಸ್ಥೆಯಲ್ಲಿ ನೀವು ಯೋಗವನ್ನು ಮಾಡದಿರಿ. ಆದರೆ ಕಷ್ಟವಾಗಿರುವ ಭಂಗಿಗಳನ್ನು ಮಾಡದಿರಿ.

    9. ಮನೆಯ ಸ್ವಚ್ಛತೆ ಮಾಡದಿರಿ. ಗರ್ಭಾವಸ್ಥೆಯಲ್ಲಿ ಎಲ್ಲಾ ಕೆಲಸಗಳನ್ನು ಮಾಡುವುದು ಸರಳ ಹೆರಿಗೆಗೆ ಅನುಕೂಲವಾಗಿರುತ್ತದೆ. ಆದರೆ ಮನೆಗೆಲಸ ಮಾಡುವಾಗ ಎತ್ತುವುದು, ಎಳೆಯುವುದು ಮೊದಲಾದ ಕೆಲಸಗಳನ್ನು ಮಾಡದಿರಿ. ಮನೆಯ ಇತರ ಸದಸ್ಯರು ಈ ಕೆಲಸಗಳನ್ನು ಮಾಡುತ್ತಾರೆ. ನೀವು ಆದಷ್ಟು ನಿಮ್ಮ ಆರೋಗ್ಯಕ್ಕೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಮನೆಯ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಅತಿ ಹೆಚ್ಚಾಗಿ ಬಗ್ಗುವಂತಹ ಕೆಲಸಗಳನ್ನು ಮಾಡಕೂಡದು. ಏಕೆಂದರೆ ಈ ಪರಿ ಬಗ್ಗುವುದರಿಂದ (sciatic nerve) ಅಥವಾ ಬೆನ್ನುಮೂಳೆಯ ಕೆಳಭಾಗದಿಂದ ಕಾಲಿಗೆ ಧಾವಿಸುವ ನರದ ಮೇಲೆ ಹೆಚ್ಚಿನ ಒತ್ತಡ ಬಿದ್ದು ಈ ನರವನ್ನು ಘಾಸಿಗೊಳಿಸಬಹುದು.

    10. ಕೆಲವರಿಗೆ ಕುದುರೆ ಸವಾರಿ ಮಾಡುವ ಅಭ್ಯಾಸವಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಕುದುರೆ ಸವಾರಿ ಮಾಡುವುದು ನಿಮ್ಮ ಗರ್ಭಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚು.

    11. ಹೈಕಿಂಗ್ ನಮ್ಮ ದೇಹಕ್ಕೆ ಉತ್ತಮ ಚಟುವಕೆಯನ್ನು ನೀಡುವ ಕ್ರಿಯೆಯಾಗಿದೆ ಹೈಕಿಂಗ್. ಆದರೆ ಹೈಕಿಂಗ್ ಸಮಯದಲ್ಲಿ ನೀವು ಬೀಳುವ, ಏಟು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ನಿಮ್ಮ ಮಗುವಿಗೆ ಹಾನಿಯುಂಟಾಗುವುದು ಹೆಚ್ಚು.

    12. ಗುಡಿಸುವುದು, ಬಟ್ಟೆ ಒಣಗಿಸುವುದು ಇವುಗಳನ್ನೆಲ್ಲಾ ಮಾಡಬೇಡಿ. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಗರ್ಭಾವಸ್ಥೆಯಲ್ಲಿ ದೇಹದ ಪ್ರಮುಖ ಗಂಟುಗಳು ಮತ್ತು ಮಡಚುವ ಮೂಳೆಗಳ ಭಾಗಗಳು ಕೊಂಚ ಮೆತ್ತಗಾಗುತ್ತವೆ. ಆದ್ದರಿಂದ ಇತರ ಸಮಯದಲ್ಲಿ ಸುಲಭವಾಗುತ್ತಿದ್ದ ಕೆಲಸಗಳು ಈಗ ಕಷ್ಟವಾಗುತ್ತವೆ. ಆದ್ದರಿಂದ ಈ ಕೆಲಸಗಳಿಗೆಲ್ಲಾ ಮನೆಯವರ ಅಥವಾ ಕೆಲಸದವರ ಸಹಾಯ ಪಡೆಯುವುದು ಒಳ್ಳೆಯದು. ಗುಡಿಸುವುದು, ಭಾರವಾದ ವಸ್ತುಗಳನ್ನು ಮೇಲಿಡುವುದು, ಬಟ್ಟೆ ಒಣಗಿಸುವುದು ಮೊದಲಾದ ಕೆಲಸಗಳಿಗೆ ಸಹಾಯ ಪಡೆದುಕೊಳ್ಳುವುದೇ ಜಾಣತನವಾಗಿದೆ.

     

    13. ಬೆಕ್ಕಿನ ಸಂಗ ಬಿಟ್ಟು ಬಿಡಿ! ಒಂದು ವೇಳೆ ನಿಮ್ಮ ಮನೆಯಲ್ಲಿ ಸಾಕಿರುವ ಬೆಕ್ಕು ಇದ್ದರೆ ಬೆಕ್ಕಿನ ಸಂಗ ಈ ಸಮಯದಲ್ಲಿ ಸಲ್ಲದು. ವಿಶೇಷವಾಗಿ ಬೆಕ್ಕಿನ ಮಲವನ್ನು ಸ್ವಚ್ಛಗೊಳಿಸುವುದಿರಲಿ, ಬಳಿಗೂ ಸುಳಿಯಕೂಡದು. ಏಕೆಂದರೆ ಇದರಲ್ಲಿ ಕೆಲವು ಪರಾವಲಂಬಿ ಕ್ರಿಮಿಗಳಿದ್ದು ಗರ್ಭಿಣಿಗೆ ಮಾರಕವಾಗುತ್ತವೆ. ಅಷ್ಟೇ ಅಲ್ಲ, ಬೆಕ್ಕಿನ ಕೂದಲು ಯಾವುದೇ ಕಾರಣಕ್ಕೂ ಆಹಾರ ಅಥವಾ ನೀರಿನ ಮೂಲಕ ದೇಹ ಪ್ರವೇಶಿಸಬಾರದು. ಇದು ಭಾರೀ ಅಲರ್ಜಿಕಾರಕವಾಗಿದ್ದು ಗರ್ಭಿಣಿಯ ಆರೋಗ್ಯವನ್ನು ಕೆಡಿಸಬಹುದು.

    ಧ್ಯಾನ ಮಾಡಿ
    * ನಿಮಗೆ ಆರಾಮವೆನಿಸುವ ಭಂಗಿಯಲ್ಲಿ ಚಕ್ಕಲೆಮಕ್ಕಲೆ ಕುಳಿತುಕೊಳ್ಳಿ. ಆರಾಮ ಅನ್ನಿಸದಿದ್ದರೆ ಕುರ್ಚಿಯ ಮೇಲೂ ಕುಳಿತುಕೊಳ್ಳಹುದು. ಸಾಧ್ಯವಾದಷ್ಟು ಬೆನ್ನುಮೂಳೆ ನೆಟ್ಟಗೇ ಇರಲಿ.
    * ಮನಸ್ಸು ಸೆಳೆಯುವ ಯಾವುದೇ ವಸ್ತು ಎದುರಿಗಿರದಂತೆ ನೋಡಿಕೂಳ್ಳಿ. ಕಣ್ಣುಮುಚ್ಚಿಕೊಂಡು ನಿಮ್ಮ ಗಮನವನ್ನು ಒಂದು ವಿಷಯದತ್ತ ಕೇಂದ್ರೀಕರಿಸಿ.
    * ಈ ಸಮಯದಲ್ಲಿ ಕೇವಲ ಧನಾತ್ಮಕ ವಿಚಾರಗಳು ಆವರಿಸಲಿ. ಉದಾಹರಣೆಗೆ ನನಗೆ ಹುಟ್ಟಲಿರುವ ಮಗು ಉತ್ತಮ ವ್ಯಕ್ತಿಯಾಗಿದ್ದು ಸಮಾಜದಲ್ಲಿ ಮನ್ನಣೆ ಮತ್ತು ಗೌರವ ಪಡೆಯುತ್ತಾನೆ/ತ್ತಾಳೆ ಇತ್ಯಾದಿ.
    * ಪ್ರತಿದಿನ ಒಂದೇ ಸಮಯವನ್ನು ಆಯ್ದುಕೊಂಡು ಆ ಪ್ರಕಾರವೇ ಅನುಸರಿಸಿ. ಇದರಿಂದ ಹೆರಿಗೆಯ ಸಮಯದಲ್ಲಿ ಮಾತ್ರವಲ್ಲ ಮುಂದಿನ ಜೀವನದಲ್ಲಿಯೂ ಒತ್ತಡವನ್ನು ಸಮರ್ಥವಾಗಿ ಎದುರಿಸಲು ಸಾಧ್ಯ.

    ಗರ್ಭಪಾತದ ಸಾಧ್ಯತೆ:
    ಗರ್ಭಾವಸ್ಥೆಯಲ್ಲಿ ಉಂಟಾಗುವ ಒತ್ತಡವು ಗರ್ಭಕೋಶದಲ್ಲಿ ರಾಸಾಯನಿಕ ಹಾನಿಯನ್ನುಂಟುಮಾಡುವುದು ಎಂದು ವೈದ್ಯರು ಹೇಳುತ್ತಾರೆ. ಒತ್ತಡ ಉಂಟಾದಾಗ ಕಾರ್ಟಿಕೋಟ್ರೋಪಿನ್ ಎನ್ನುವ ಹಾರ್ಮೋನ್ ಬಿಡುಗಡೆಯಾಗುವುದು. ಈ ಹಾರ್ಮೋನ್‍ಗಳ ಬದಲಾವಣೆಯಿಂದ ಗರ್ಭಕೋಶದಲ್ಲಿ ಅಧಿಕ ಸಂಕೋಚನವನ್ನು ಉಂಟುಮಾಡುವುದು. ಇದು ಬಹುತೇಕ ಸಂದರ್ಭದಲ್ಲಿ ಗರ್ಭವನ್ನು ಕುಗ್ಗಿಸುವುದು ಅಥವಾ ಗರ್ಭಪಾತಕ್ಕೆ ಕಾರಣವಾಗುವುದು. ಹಾಗಾಗಿ ಬಾಹ್ಯ ಪರಿಸ್ಥಿತಿ ಹೇಗೇ ಇರಲಿ, ನಿಮ್ಮ ಮಗುವಿನ ಬೆಳವಣಿಗೆ ಉತ್ತಮವಾಗಿರಬೇಕು ಎಂದು ನೀವು ಬಯಸುವುದಾದರೆ ಒತ್ತಡದಿಂದ ದೂರ ಇರಲು ಪ್ರಯತ್ನಿಸಿ. ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಹೇಗಿರಬೇಕು ಎನ್ನುವುದರ ಕುರಿತು ಚಿಂತಿಸಿ.

    ಭ್ರೂಣದ ಮೆದುಳು ಬೆಳವಣಿಗೆ:
    ತಾಯಿಯಲ್ಲಾಗುವ ಒತ್ತಡವು ಮಗುವಿನ ಮಿದುಳು ಬೆಳವಣಿಗೆಯ ಮೇಲೆ ನೇರವಾದ ಪ್ರಭಾವ ಉಂಟಾಗುವುದು ಎಂದು ವೈದ್ಯರು ಹೇಳುತ್ತಾರೆ. ಇದು ಮಗುವಿನ ಮೇಲೆ ದೀರ್ಘ ಕಾಲದ ಪರಿಣಾಮ ಬೀರುವುದು ಎಂದು ಹೇಳಲಾಗುವುದು. ಮಗುವಿನ ಮೆದುಳಿನ ಮೇಲೆ ಉಂಟಾದ ಪ್ರಭಾವಗಳು ಮಗು ಹುಟ್ಟಿದ ತಕ್ಷಣ ತಿಳಿಯದು. ದಿನಕಳೆದಂತೆ ಮಗುವಿನ ಬೆಳವಣಿಗೆ ನಡೆಯುವುದು. ಆಗ ಸಮಸ್ಯೆಗಳನ್ನು ಗುರುತಿಸಬಹುದು. ಇಂತಹ ಮಕ್ಕಳಲ್ಲಿ ಅಧಿಕ ರಕ್ತದ ಒತ್ತಡದಂತಹ ಅಪಾಯ ಉಂಟಾಗಬಹುದು. ಮಕ್ಕಳಲ್ಲಿ ಮಾನಸಿಕ ಬದಲಾವಣೆಗಳು ಚಿಂತನೀಯ ರೀತಿಯಲ್ಲಿ ಉಂಟಾಗುವುದು. ಅಲ್ಲದೆ ಮಕ್ಕಳು ಬೆಳವಣಿಗೆ ಹೊಂದಿದ ನಂತರ ಜೀವನದಲ್ಲೂ ಬಹುಬೇಗ ಅಧಿಕ ಒತ್ತಡಕ್ಕೆ ಒಳಗಾಗುವ ಮಾನಸಿಕ ಶಕ್ತಿಯನ್ನು ಪಡೆದುಕೊಳ್ಳುವರು.