Tag: ವ್ಯಾಪಾರ

  • ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಮಾರುಕಟ್ಟೆಯಲ್ಲಿ ಪ್ರತೀ ವ್ಯಾಪಾರಿಗಳಿಗೆ ಗುಲಾಬಿ ಕೊಟ್ಟ ವರ್ತಕರ ಸಂಘ!

    ಧಾರವಾಡ: ನಗರದ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚೆಲ್ಲುವುದರ ವಿರುದ್ಧ ಅರಿವು ಮೂಡಿಸಿದ ಧಾರವಾಡ ಕಿರಾಣಿ ಮತ್ತು ಕಾಯಿಪಲ್ಲೆ ವರ್ತಕರ ಸಂಘ, ಸಾರ್ವಜನಿಕರಿಗೆ ಗುಲಾಬಿ ಹೂವು ನೀಡಿ ಜಾಗೃತಿ ಮೂಡಿಸಿದೆ.

    ಧಾರವಾಡ ನಗರದ ಸೂಪರ್ ಮಾರುಕಟ್ಟೆ ಯಾವತ್ತೂ ಕಸದಿಂದ ತುಂಬಿರುತ್ತೆ ಇದರ ಅರಿವನ್ನ ಮೂಡಿಸಲು ವರ್ತಕರ ಸಂಘದ ಸದಸ್ಯರು ಮಾರುಕಟ್ಟೆಗೆ ಕಾಯಿಪಲ್ಲೆ ವ್ಯಾಪಾರಿಗಳಿಗೆ ಒಂದೊಂದು ಗುಲಾಬಿ ಹೂವನ್ನ ನೀಡುವ ಮೂಲಕ ವಿನೂತನ ಜಾಗೃತಿ ಮೂಡಿಸಿದ್ದಾರೆ.

    ಬೀದಿ ಬದಿ ವ್ಯಾಪಾರ ಮುಗಿದ ನಂತರ ಉಳಿದ ಕಾಯಿಪಲ್ಲೆ ಜಾಗದಲ್ಲೇ ಬಿಟ್ಟು ಹೋಗುತ್ತಿದ್ದ ವ್ಯಾಪಾರಿಗಳಿಗೆ, ಕಸ ಬುಟ್ಟಿಗೆ ಅದನ್ನ ಹಾಕಬೇಕು ಎಂದು ಅರಿವು ಮೂಡಿಸಲಾಯಿತು. ಅಷ್ಟೇ ಅಲ್ಲದೇ ಸಂಘದಿಂದ ಪ್ರತಿ ದಿನ ಇದರ ಬಗ್ಗೆ ನಿಗಾವಹಿಸಲು ಜನರನ್ನು ಕೂಡಾ ವರ್ತಕರ ಸಂಘದಿಂದಲೇ ನೇಮಿಸಲಾಗುವುದು ಎಂದು ತಿಳಿಸಿದರು.

     

  • ತಾನು ಕುಳ್ಳಿ ಅಂತಾ ಬೇಸರಿಸದೆ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಕಲಬುರಗಿಯ ಪಬ್ಲಿಕ್ ಹೀರೋ

    ತಾನು ಕುಳ್ಳಿ ಅಂತಾ ಬೇಸರಿಸದೆ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಕಲಬುರಗಿಯ ಪಬ್ಲಿಕ್ ಹೀರೋ

    ಕಲಬುರಗಿ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಇರೋದು ಕೇವಲ ಎರಡೂವರೆ ಅಡಿ ಎತ್ತರ. ಆದರೆ ತಾನು ಕುಬ್ಜೆ ಅಂತಾ ಕೈ ಕೊಟ್ಟಿ ಕೂರಲಿಲ್ಲ. ಇಡೀ ಸಂಸಾರದ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಉತ್ತಮ ಜೀವನ ಕಟ್ಟಿಕೊಂಡು ಇತರೆ ಮಹಿಳೆಯರಿಗೂ ಮಾದರಿಯಾಗಿದ್ದಾರೆ.

    ಕಲಬುರಗಿ ನಗರದ ಜೇವರ್ಗಿ ಕಾಲೋನಿಯ ನಿವಾಸಿ ಲಕ್ಷ್ಮಿ ಕುಲಕರ್ಣಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ತಮ್ಮ ಕಾಲೋನಿಯ ಗುರುರಾಯರ ಮಠದ ಪ್ರಾಂಗಣದಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಈ ಮೂಲಕ ಮಹಿಳೆ ಅಬಲೆಯಲ್ಲ, ಸಬಲೆ ಅಂತಾ ತೋರಿಸಿ ಕೊಟ್ಟಿದ್ದಾರೆ.

    ಇನ್ನು ಲಕ್ಷ್ಮಿ ಸಹೋದರ ಲಿಂಗರಾಜ್ ನಿರುದ್ಯೋಗಿಯಾಗಿದ್ದರು. ಆಗ ಲಕ್ಷ್ಮೀ ತನ್ನ ಸಹೋದರನಿಗೆ ಕೋಲಾರದ ಮುಳುಬಾಗಿಲು ಶ್ರೀಪಾದರಾಜರ ಮಠದಂಗಳದಲ್ಲಿ ಒಂದು ಅಂಗಡಿ ಹಾಕಿಕೊಟ್ಟಿದ್ದಾರೆ.ಚಿಕ್ಕ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡ ಲಕ್ಷ್ಮಿ ಇತರೆ ಮಹಿಳೆಯರಂತೆ ಧೃತಿಗೆಡದೇ ಜೀವನ ಕಟ್ಟಿಕೊಂಡಿದ್ದಾರೆ.

    https://www.youtube.com/watch?v=XhdlxgIXOp8

  • ಕೂಲ್ ಡ್ರಿಂಕ್ಸ್ ರದ್ದು ಮಾಡಿ ಎಳನೀರು ಮಾರಾಟವನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲವೇ: ಪರಿಷತ್‍ನಲ್ಲಿ ಚರ್ಚೆ

    ಕೂಲ್ ಡ್ರಿಂಕ್ಸ್ ರದ್ದು ಮಾಡಿ ಎಳನೀರು ಮಾರಾಟವನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲವೇ: ಪರಿಷತ್‍ನಲ್ಲಿ ಚರ್ಚೆ

    ಬೆಂಗಳೂರು: ಮಲ್ಟಿಪ್ಲೆಕ್ಸ್ ಮತ್ತು ಚಿತ್ರ ಮಂದಿರಗಳಲ್ಲಿ ಎಳನೀರು ಮಾರಾಟ ಸಂಬಂಧ ಇಂದು ವಿಧಾನ ಪರಿಷತ್‍ನಲ್ಲಿ ಚರ್ಚೆ ನಡೆಯಿತು.

    ರೈತರ ಪರ ಸರ್ಕಾರ ಅಂತ ನೀವು ಹೇಳುತ್ತಿದ್ದೀರಿ. ಆದರೆ ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲ. ಹೀಗಾಗಿ ತಮಿಳುನಾಡು ಮಾದರಿಯಂತೆ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಎಳನೀರನ್ನು ಮಾರಾಟ ಮಾಡಲು ಸರ್ಕಾರ ಯಾಕೆ ಆದೇಶ ನೀಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದರು.

    ಈ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಈಶ್ವರ್ ಖಂಡ್ರೆ, ಕೂಲ್ ಡಿಂಕ್ಸ್ ಮಾರಾಟವನ್ನು ರದ್ದು ಮಾಡಿ ಎಳನೀರನ್ನು ಕಡ್ಡಾಯವಾಗಿ ಮಾರುವಂತೆ ಆದೇಶ ಹೊರಡಿಸಲು ಸಾಧ್ಯವಿಲ್ಲ. ಮಲ್ಟಿಪ್ಲೆಕ್ಸ್ ಹಾಗೂ ಚಲನ ಚಿತ್ರ ಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್, ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆ ಅನುಮತಿ ನೀಡಲಾಗುತ್ತಿದೆ. ಕರ್ನಾಟಕ ಮಹಾನಗರ ಪಾಲಿಕೆ ಗಳ ಅಧಿನಿಯಮ ಪ್ರಕಾರ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಕೂಲ್ ಡ್ರಿಂಕ್ಸ್ ರದ್ದು ಮಾಡುವ ಆದೇಶ ಮಾಡಲು ನಿಯಮದಲ್ಲಿ ಅವಕಾಶ ಇಲ್ಲ. ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅರ್ಹ ಪದಾರ್ಥಗಳ ಜೊತೆಗೆ ಎಳನೀರು ಮಾರಾಟ ಮಾಡಲು ಬೇಡಿಕೆ ಬಂದ್ರೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

    ತಮಿಳುನಾಡಿನಲ್ಲಿ ನಿಷೇಧವಾಗಿದ್ದು ಯಾಕೆ?
    ಜಲ್ಲಿಕಟ್ಟಿಗೆ ಆಗ್ರಹಿಸಿ ಪೇಟಾ ನಡೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ನದಿ ನೀರನ್ನು ಬಳಸಿಕೊಂಡು ಲಾಭ ಮಾಡುತ್ತಿವೆ. ಹೀಗಾಗಿ ವಿದೇಶಿ ಕಂಪೆನಿಗಳ ಪಾನೀಯಗಳನ್ನು ನಿಷೇಧಿಸಬೇಕೆಂಬೆಂಬ ಕೂಗು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ವ್ಯಾಪಾರಿ ಸಂಘ ಮಾರ್ಚ್ ಒಂದರಿಂದ ವಿದೇಶಿ ತಂಪು ಪಾನೀಯವನ್ನು ಮಾರಾಟ ಮಾಡದೇ ಇರುವ ನಿರ್ಧಾರವನ್ನು ಕೈಗೊಂಡಿದೆ.

    ಇದನ್ನೂ ಓದಿ: ಸ್ಯಾಂಡಲ್‍ವುಡ್ ಮಂದಿಗೆ ನಿನ್ನೆ ಸಿಹಿ, ಇಂದು ಕಹಿ ಸುದ್ದಿ: ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ ಕಡಿಮೆಯಾಗಿದ್ದು ಯಾಕೆ?