Tag: ವ್ಯಾಪಾರ

  • ಕುಕ್ಕೆಯ ಬಳಿಕ ಬೆಂಗಳೂರಿಗೆ ತಟ್ಟಿದ ಧರ್ಮ ದಂಗಲ್

    ಕುಕ್ಕೆಯ ಬಳಿಕ ಬೆಂಗಳೂರಿಗೆ ತಟ್ಟಿದ ಧರ್ಮ ದಂಗಲ್

    – ಉರುಸ್‌ಗಳಲ್ಲಿ ಹಿಂದೂಗಳಿಗೆ ಅವಕಾಶವಿಲ್ಲ
    – ಹಿಂದೂ ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅನುಮತಿ ಯಾಕೆ?

    ಬೆಂಗಳೂರು: ಮಂಗಳೂರು ಕುಕ್ಕರ್ ಬಾಂಬ್‌ ಸ್ಫೋಟದ(Mangaluru Bomb Blast) ಬಳಿಕ ರಾಜ್ಯದಲ್ಲಿ ವ್ಯಾಪಾರ ದಂಗಲ್ ಮತ್ತೆ ಆರಂಭವಾಗಿದ್ದು ಬೆಂಗಳೂರಿಗೂ(Bengaluru) ಕಾಲಿಟ್ಟಿದೆ.

    ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ ಬಳಿಯಿರುವ ವಿವಿ ಪುರಂನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ(Subramanya Swamy Temple) ಬೆಳ್ಳಿ ತೇರು ಜಾತ್ರೆಯಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್‌ ಮತ್ತು ಭಜರಂಗದಳ ಬಿಬಿಎಂಪಿ ಕಮೀಷನರ್ ಹಾಗೂ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. ಇದನ್ನೂ ಓದಿ: ಮತ್ತೆ ಧರ್ಮ ದಂಗಲ್ ಶುರು- ಕುಕ್ಕೆಯಲ್ಲಿ ಷಷ್ಠಿ ವೇಳೆ ಹಿಂದೂಯೇತರರ ವ್ಯಾಪಾರಕ್ಕೆ ನಿಷೇಧ

    ದೂರಿನಲ್ಲಿ ಏನಿದೆ?
    ಮುಸ್ಲಿಮರ ಉರುಸ್‌ಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಅವಕಾಶ ನೀಡುವುದಿಲ್ಲ. ದೇಶದ ಕಾನೂನಿಗೆ ಬೆಲೆ ಕೊಡುವುದಿಲ್ಲ. ಹಿಂದೂಗಳ ಧಾರ್ಮಿಕ ಭಾವನೆಗೆ ಬೆಲೆ ನೀಡದೇ ವ್ಯಾಪಾರದ ಹೆಸರಿನಲ್ಲಿ ಜಿಹಾದ್ ಮಾಡಲಾಗುತ್ತಿದೆ.

    ಮೂರ್ತಿ ಪೂಜೆಯನ್ನು ಇವರು ನಂಬುತ್ತಿಲ್ಲ. ಹಿಂದೂ ದೇವರನ್ನು ವಿಕೃತಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುತ್ತಾರೆ.  ಇದನ್ನೂ ಓದಿ: ಕದ್ರಿ ದೇವಸ್ಥಾನ ನಮ್ಮ ಟಾರ್ಗೆಟ್‌ – ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಉಗ್ರ ಸಂಘಟನೆ

    ನಾವು ಪೂಜಿಸುವ ಗೋವನ್ನು ಕಡಿದು ತಿನ್ನುವವರಿಗೆ ಪದೇಪದೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ, ನಮ್ಮ ಆಚರಣೆಗಳಲ್ಲಿ ನಂಬಿಕೆ ಇಲ್ಲದವರಿಗೆ ಹಿಂದೂ ಹಬ್ಬದಲ್ಲಿ ವ್ಯಾಪಾರ ಮಾಡಲು ಯಾವ ಅರ್ಹತೆ ಕೂಡ ಇಲ್ಲ. ಇವುಗಳನ್ನು ಪರಿಗಣಿಸಿ ಹಿಂದುಯೇತರರಿಗೆ ಬೆಳ್ಳಿ ತೇರಿನ ಜಾತ್ರೆಯ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು  ಮನವಿ ಮಾಡಿವೆ.

    kukke subramanya

    ಕುಕ್ಕೆ ಸುಬ್ರಹ್ಮಣ್ಯ (Kukke Sri Subrahmanya Swami Temple) ದೇವಸ್ಥಾನದ ಷಷ್ಠಿ ಮಹೋತ್ಸವದಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಡೆಸದಂತೆ ನಿಷೇಧ ಹೇರಬೇಕೆಂದು ಹಿಂದೂ ಜಾಗರಣ ವೇದಿಕೆಯ (Hindu Jagaran Vedike) ಸುಬ್ರಹ್ಮಣ್ಯ ಘಟಕ ಬ್ಯಾನರ್ ಅಳವಡಿಸಿದೆ. ಮಾತ್ರವಲ್ಲ ಸಂಘಟನೆಯ ಮುಖಂಡ ಹರಿಪ್ರಸಾದ್ ಎಂಬವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗ (Subrahmanya Police Station) ದೂರು ನೀಡಿದ್ದು ಕ್ಷೇತ್ರದ ಪಾವಿತ್ರ್ಯತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತದ ಜೊತೆ ವ್ಯಾಪಾರ –  ತನ್ನ ಹಳೆಯ ಪ್ರಸ್ತಾಪವನ್ನು ಮುಂದಿಟ್ಟ ರಷ್ಯಾ

    ಭಾರತದ ಜೊತೆ ವ್ಯಾಪಾರ – ತನ್ನ ಹಳೆಯ ಪ್ರಸ್ತಾಪವನ್ನು ಮುಂದಿಟ್ಟ ರಷ್ಯಾ

    ನವದೆಹಲಿ: ರಷ್ಯಾ ಈಗ ತನ್ನ ಹಳೆಯ ವ್ಯಾಪಾರ ಪ್ರಸ್ತಾಪವನ್ನು ಭಾರತದ ಮುಂದಿಟ್ಟಿದೆ.

    ಉಕ್ರೇನ್‌ ವಿರುದ್ಧ ಯುದ್ಧ ಸಾರಿದ ಬಳಿಕ ವಿಶ್ವದ ಹಲವು ರಾಷ್ಟ್ರಗಳು ರಷ್ಯಾದ ವಿರುದ್ಧ ದಿಗ್ಬಂಧನ ವಿಧಿಸಿದೆ. ಹಲವು ರಾಷ್ಟ್ರಗಳ ಕೆಂಗಣ್ಣಿಗೂ ಗುರಿಯಾಗಿದ್ದರೂ ಭಾರತ ರಷ್ಯಾದ ಜೊತೆ ವ್ಯಾಪಾರ ನಡೆಸಲು ಆಸಕ್ತಿ ತೋರಿಸಿದೆ.

    ಡಾಲರ್‌ ಮೂಲಕ ವ್ಯವಹಾರ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈಗ ರುಪಿ ರೂಬೆಲ್‌ ಮೂಲಕ ವ್ಯವಹಾರ ನಡೆಸಲು ರಷ್ಯಾ ಮುಂದಾಗಿದೆ. ರುಪಿ ರೂಬೆಲ್‌ ಮೂಲಕ ವ್ಯವಹಾರಕ್ಕೆ ರಷ್ಯಾ ಈಗ ಗ್ಯಾರಂಟಿ ಕೇಳುತ್ತಿದೆ. ಇದಕ್ಕಾಗಿ ಪೇಪರ್‌ ಎಲ್‌ಸಿ(ಲೆಟರ್‌ ಆಫ್‌ ಕ್ರೆಡಿಟ್‌) ನೀಡಬೇಕೆಂದು ಪ್ರಸ್ತಾಪ ಮಾಡಿದೆ.

    ಅಂತಾರಾಷ್ಟ್ರೀಯ ನಿರ್ಬಂಧ ಹೇರಿರುವ ಈ ಸಂದರ್ಭದಲ್ಲಿ ದಿ ಬ್ಯಾಂಕ್‌ ಆಫ್‌ ರಷ್ಯಾ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಸ್ತಾಪವನ್ನು ಪರಿಶೀಲಿಸುತ್ತಿದೆ. ಇದನ್ನೂ ಓದಿ: ಮತ್ತಷ್ಟು ಕಡಿಮೆ ಬೆಲೆಯಲ್ಲಿ ತೈಲ ನೀಡಿ – ರಷ್ಯಾ ಜೊತೆ ಭಾರತ ಚೌಕಾಶಿ

    ಈಗಾಗಲೇ ಎರಡು ಬ್ಯಾಂಕುಗಳ ಅಧಿಕಾರಿಗಳು ಎರಡು ಬಾರಿ ಈ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದರೆ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.

    ಯುಎಸ್‌ಎಸ್‌ಆರ್‌ ವಿಭಜನೆಯಾದ ಬಳಿಕ ಭಾರತ ಮತ್ತು ರಷ್ಯಾ ನಡುವೆ ರುಪಿ ಮತ್ತು ರೂಬೆಲ್‌ ಮಧ್ಯೆ ವ್ಯವಹಾರ ನಡೆದಿತ್ತು. ಈಗ ಮತ್ತೆ ಈ ವ್ಯವಹಾರ ಆರಂಭಿಸಲು ಎರಡು ರಾಷ್ಟ್ರಗಳು ಮುಂದಾಗುತ್ತಿವೆ. ಒಂದು ವೇಳೆ ಈ ಎಲ್‌ಸಿ ಪ್ರಸ್ತಾಪವನ್ನು ಒಪ್ಪಿಕೊಂಡರೆ ರಷ್ಯಾದಿಂದ ಭಾರತಕ್ಕೆ ಆಮದು ಹೆಚ್ಚಾಗಲಿದೆ.

    ರುಪಿ ರುಬೆಲ್‌ ವ್ಯವಹಾರ ಮಾಡಬೇಕಾದರೆ ರಷ್ಯನ್‌ ಬ್ಯಾಂಕು ಭಾರತದ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ಭಾರತದ ಬ್ಯಾಂಕ್‌ ರಷ್ಯನ್‌ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆಯಬೇಕಾಗುತ್ತದೆ. ಇದನ್ನೂ ಓದಿ: ರಷ್ಯಾ ತೈಲ ಖರೀದಿ ಯಾಕೆ – ವಿದೇಶಿ ಮಾಧ್ಯಮಕ್ಕೆ ಪಾಠ ಮಾಡಿ ಉತ್ತರ ಕೊಟ್ಟ ಜೈಶಂಕರ್

    ಏನಿದು ಎಲ್‌ಸಿ?
    ಎ ಲೆಟರ್ ಆಫ್ ಕ್ರೆಡಿಟ್ (LC) ಎನ್ನುವುದು ಮಾರಾಟಗಾರರಿಗೆ ಖರೀದಿದಾರನ ಪಾವತಿಯನ್ನು ಖಾತರಿಪಡಿಸುವ ದಾಖಲೆಯಾಗಿದೆ. ಇದನ್ನು ಬ್ಯಾಂಕು ನೀಡುತ್ತದೆ. ಇದು ಮಾರಾಟಗಾರರಿಗೆ ಸಕಾಲಿಕ ಮತ್ತು ಪೂರ್ಣ ಪಾವತಿಯನ್ನು ಖಚಿತಪಡಿಸುತ್ತದೆ. ಒಂದು ವೇಳೆ ಖರೀದಿದಾರನು ನೀಡಬೇಕಾದ ಹಣವನ್ನು ಪಾವತಿಸಲು ಸಾಧ್ಯವಾಗದೇ ಇದ್ದರೆ ಖರೀದಿದಾರನ ಪರವಾಗಿ ಬ್ಯಾಂಕ್ ಪೂರ್ಣ ಮೊತ್ತ ಅಥವಾ ಬಾಕಿ ಉಳಿಸಿಕೊಂಡ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.

    ಖರೀದಿದಾರ ಮತ್ತು ಮಾರಾಟಗಾರನು ಪರಸ್ಪರ ವೈಯಕ್ತಿಕವಾಗಿ ಪರಿಚಯ ಇಲ್ಲದೇ ಇರುವಾಗ ಮತ್ತು ದೇಶಗಳಲ್ಲಿ ವಿಭಿನ್ನ ಕಾನೂನುಗಳು, ವಿಭಿನ್ನ ವ್ಯಾಪಾರ ಪದ್ಧತಿಗಳಿದ್ದಾಗ ಇದು ಜಾರಿಯಾಗುತ್ತದೆ.

  • ಅಮೆರಿಕದ ಬಳಿಕ ಭಾರತದ ಜೊತೆ ವ್ಯಾಪಾರ, ತಂತ್ರಜ್ಞಾನ ಮಂಡಳಿ ಸ್ಥಾಪಿಸಿದ ಯುರೋಪ್ ಒಕ್ಕೂಟ

    ಅಮೆರಿಕದ ಬಳಿಕ ಭಾರತದ ಜೊತೆ ವ್ಯಾಪಾರ, ತಂತ್ರಜ್ಞಾನ ಮಂಡಳಿ ಸ್ಥಾಪಿಸಿದ ಯುರೋಪ್ ಒಕ್ಕೂಟ

    ನವದೆಹಲಿ: ಉಕ್ರೇನ್ ರಷ್ಯಾ ಯುದ್ಧದಲ್ಲಿ ಯಾರ ಪರವು ನಿಲ್ಲದ ತಟಸ್ಥ ಧೋರಣೆ ಅನುಸರಿಸಿದ ಭಾರತ ಜೊತೆ ಯುರೋಪಿಯನ್ ಒಕ್ಕೂಟ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಯುರೋಪಿಯನ್ ಒಕ್ಕೂಟ ಹಾಗೂ ಭಾರತ ತಮ್ಮ ವ್ಯಾಪಾರವನ್ನು ವಿಸ್ತರಿಸಲು ವ್ಯಾಪಾರ ಹಾಗೂ ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸಲು ಒಪ್ಪಿಕೊಂಡಿವೆ.

    ಸೋಮವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆ ಸುರ್ಸುಲಾ ವಾನ್ ಡೆರ್ ಲೇಯೆನ್ ಮಾತುಕತೆ ನಡೆಸಿದ್ದಾರೆ. ದ್ವಿಪಕ್ಷಿಯ ಮಾತುಕತೆಯಲ್ಲಿ ವ್ಯಾಪಾರ, ಹವಾಮಾನ, ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಗಳನ್ನು ಹೆಚ್ಚಿಸಿಕೊಳ್ಳುವುದಾಗಿ ಉಭಯ ರಾಷ್ಟ್ರಗಳು ಒಪ್ಪಂದಗಳನ್ನು ಮಾಡಿಕೊಂಡವು.

    ಈ ಮೊದಲು ಯುರೋಪಿಯನ್ ಒಕ್ಕೂಟ ವ್ಯಾಪಾರ, ತಂತ್ರಜ್ಞಾನ ಮಂಡಳಿಯನ್ನು ಅಮೆರಿಕದ ಜೊತೆ ಮಾಡಿಕೊಂಡಿತ್ತು. ಈಗ ಈ ರೀತಿ ಒಪ್ಪಂದ ಮಾಡಿಕೊಂಡ ಎರಡನೇ ದೇಶ ಭಾರತವಾಗಿರುವುದು ವಿಶೇಷ. ಅದರಲ್ಲೂ ರಷ್ಯಾ ವಿರೋಧಿ ನಿಲುವು ತೆಗೆದುಕೊಳ್ಳದೇ ಇರುವ ಸಮಯದಲ್ಲೇ ಈ ಮಹತ್ವದ ಒಪ್ಪಂದ ನಡೆದಿರುವುದು ಇನ್ನೊಂದು ವಿಶೇಷ. ಸೋಮವಾರ ಭಾರತದ ಈ ನಿರ್ಧಾರವನ್ನು ಯುರೋಪಿಯನ್ ಯೂನಿಯನ್ ಒಪ್ಪಿಕೊಂಡಿದೆ.

    ಡೆರ್ ಲೇಯೆನ್ ಹೇಳಿದ್ದೇನು?
    ಈ ವೇಳೆ ಮಾತನಾಡಿದ ವಾನ್ ಡೆರ್ ಲೇಯೆನ್, ಯುಇ ಇಲ್ಲಿವರೆಗೆ ಅಮೆರಿಕದೊಂದಿಗೆ ವ್ಯಾಪಾರ ಹಾಗೂ ತಂತ್ರಜ್ಞಾನಗಳಲ್ಲಿ ಒಕ್ಕೂಟವನ್ನು ಏರ್ಪಡಿಸಿಕೊಂಡಿತ್ತು. ಇದೀಗ ಬಹು ಮುಖ್ಯವಾದ ಹಾಗೂ ನಮ್ಮ ಎರಡನೇ ಒಕ್ಕೂಟವನ್ನು ಭಾರತದೊಂದಿಗೆ ಸ್ಥಾಪಿಸುವ ಸಮಯ ಎಂದರು. ಭಾರತ ಹಾಗೂ ಯುರೋಪಿಯನ್ ಯೂನಿಯನ್‌ನ ಅಂತರಾಷ್ಟ್ರೀಯ ಸಂಬಂಧದ 60ನೇ ವಾರ್ಷಿಕೋತ್ಸವದ ಸಮಯದಲ್ಲಿ ಈ ಹೊಸ ಒಕ್ಕೂಟ ಬಹು ಮುಖ್ಯವಾದುದು ಎಂದು ಹೇಳಿದರು. ಇದನ್ನೂ ಓದಿ: ಮುಗಿಯದ ವಿಚಾರಣೆ – BBMP ಚುನಾವಣೆ ಮತ್ತಷ್ಟು ವಿಳಂಬ

    ಭಾರತ ಹಾಗೂ ಯುರೋಪ್ ರಾಷ್ಟ್ರಗಳಿಗೆ ಶಕ್ತಿ ಸುರಕ್ಷತೆ ಒಂದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಯುರೋಪ್ ಈ ಹಿಂದೆ ರಷ್ಯಾದಿಂದ ಪಡೆಯುತ್ತಿದ್ದ ಇಂಧನಗಳಿಂದ ದೂರ ಉಳಿಯಲು ಇಷ್ಟಪಡುತ್ತಿದ್ದು, ಇದೀಗ ಹೊಸ, ಶುದ್ಧ ಹಾಗೂ ನವೀಕರಿಸಬಹುದಾದ ಶಕ್ತಿಗಳೆಡೆ ಗಮನ ಹರಿಸುತ್ತಿದ್ದೇವೆ. ಇದರಲ್ಲಿ ಸೌರ ಹಾಗೂ ಜಲಜನಕದ ಮೇಲೆ ಭಾರತ ಹಾಗೂ ಯುರೋಪ್‌ನ ಸಹಕಾರ ಪ್ರಮುಖವಾಗಿದೆ.

    ಈ ಸಹಕಾರದಲ್ಲಿ #GlobalGateway ನಿರ್ಣಾಯಕ ಪಾತ್ರ ವಹಿಸಲಿದೆ. ಯುರೋಪ್ ಭಾರತದ 3ನೇ ಪ್ರಮುಖ ವ್ಯಾಪಾರ ಪಾಲುದಾರ ಹಾಗೂ ಅದರ ಪ್ರಮುಖ ಹೂಡಿಕೆದಾರರಲ್ಲಿ ಒಂದಾಗಿದೆ. ನಾವು ಶೀಘ್ರದಲ್ಲೇ ಭಾರತದೊಂದಿಗೆ ವ್ಯಾಪಾರ ಹಾಗೂ ಹೂಡಿಕೆ ಒಪ್ಪಂದಗಳ ಕುರಿತು ಮಾತುಕತೆ ಪ್ರಾರಂಭಿಸಲಿದ್ದೇವೆ. ಇದನ್ನೂ ಓದಿ: ಬುಧವಾರ ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ತುರ್ತು ಸಭೆ

    ಭಾರತ ಹಾಗೂ ಯುರೋಪ್‌ನ ಪಾಲುದಾರಿಕೆಯನ್ನು ಬಲಪಡಿಸುವುದು ಈ ದಶಕದ ಪ್ರಮುಖ ಆದ್ಯತೆಯಾಗಿದೆ. ನಾವು ವ್ಯಾಪಾರ, ತಂತ್ರಜ್ಞಾನ ಹಾಗೂ ಭದ್ರತೆಯಲ್ಲಿ ಸಹಕಾರವನ್ನು ಹೆಚ್ಚಿಸುತ್ತೇವೆ. ಈ ವಿಚಾರವಾಗಿ ನಾನು ಅತ್ಯಂತ ಸಂತಸಗೊಂಡಿದ್ದೇನೆ ಹಾಗೂ ಭಾರತ-ಯುರೋಪ್‌ನ ವ್ಯಾಪಾರ ಮತ್ತು ತಂತ್ರಜ್ಞಾನ ಮಂಡಳಿಯನ್ನು ಸ್ಥಾಪಿಸುತ್ತೇನೆ.

    ಕಳೆದ ವಾರವಷ್ಟೇ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತಕ್ಕೆ ಆಗಮಿಸಿದ್ದರು. ಇವರು ಮರಳಿದ ಎರಡು ದಿನದಲ್ಲಿ ವಾನ್ ಡೆರ್ ಲೇಯೆನ್ ಭಾರತಕ್ಕೆ ಆಗಮಿಸಿ ಮಹತ್ವದ ಒಪ್ಪಂದ ಮಾಡಿದ್ದಾರೆ.

  • ಪಶ್ಚಿಮ ಬಂಗಾಳ ಅಂದರೆ ರಕ್ತ: ಮಮತಾ ಬ್ಯಾನರ್ಜಿಗೆ ಸುವೇಂದು ಟಾಂಗ್

    ಪಶ್ಚಿಮ ಬಂಗಾಳ ಅಂದರೆ ರಕ್ತ: ಮಮತಾ ಬ್ಯಾನರ್ಜಿಗೆ ಸುವೇಂದು ಟಾಂಗ್

    ಕೋಲ್ಕತ್ತಾ: ರಾಜ್ಯದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಘಟನೆಗಳನ್ನು ಉಲ್ಲೇಖಿಸಿ, ಬಿಜೆಪಿ ನಾಯಕ ಸುವೆಂದು ಅಧಿಕಾರಿ ಅವರು ಪಶ್ಚಿಮ ಬಂಗಾಳವನ್ನು ರಕ್ತಕ್ಕೆ ಸಮೀಕರಿಸಿದ್ದಾರೆ.

    ಈ ವರ್ಷದ ವ್ಯಾಪಾರ ಸಭೆಯ ಆರನೇ ಆವೃತ್ತಿಯಲ್ಲಿ ಬಂಗಾಳ ಎಂದರೆ ವ್ಯಾಪಾರ ಎಂದು ಜಗತ್ತಿಗೆ ತೋರಿಸಲು, ಹೆಚ್ಚಿನ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು, ಪಾಲುದಾರಿಕೆ ಮತ್ತು ಸಹಯೋಗವನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ ಎಂದು ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯು ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ: ಸಂತೋಷ್‌ ಪಾಟೀಲ್‌ ಕೇಸ್‌ಗೆ ಟ್ವಿಸ್ಟ್‌ – 2021ರಲ್ಲಿ ಬೆಳಗಾವಿ ZP ಅಧ್ಯಕ್ಷೆ ಬರೆದ ಪತ್ರ ಔಟ್‌

    ಸದ್ಯ ಈ ವಿಚಾರವಾಗಿ ಮಾತನಾಡಿರುವ ಸುವೇಂದು ಅವರು, ಬಂಗಾಳದಲ್ಲಿ ಕೈಗಾರಿಕೆಗಳನ್ನು ಹೊಂದಲು ಸಾಧ್ಯವಿಲ್ಲ, ಭೂ ನೀತಿ ಕೆಟ್ಟದಾಗಿದೆ. ಇಲ್ಲಿ ಸಿಂಡಿಕೇಟ್ ರಾಜ್ ಇದೆ. ಅದು ಕಲ್ಲಿದ್ದಲು. ಬಂಗಾಳ ವ್ಯಾಪಾರಕ್ಕಾಗಿ ಅಲ್ಲ, ಆದರೆ ರಕ್ತ ಮತ್ತು ಬಿರ್ಭೂಮ್ ಬಾಂಬ್‍ಗಳಿಗಾಗಿದೆ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

    ಇದೇ ತಿಂಗಳ ಆರಂಭದಲ್ಲಿ ಬಿರ್ಭೂಮ್‍ನ ಸಿಕಂದರ್‍ಪುರ ಗ್ರಾಮದ ಫುಟ್‍ಬಾಲ್ ಮೈದಾನದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಕಚ್ಚಾ ಬಾಂಬ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.ಬೊಗ್ಟುಯಿ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಸುಮಾರು ಎಂಟು ಮಂದಿ ಸುಟ್ಟು ಕರಕಲಾಗಿದ್ದರು. ಈ ಘಟನೆ ಸಂಬಂಧ ಕೇಂದ್ರೀಯ ತನಿಖಾ ದಳವು ತನಿಖೆ ನಡೆಸುತ್ತಿರುವ ಸಮಯದಲ್ಲಿ ಕಚ್ಚಾ ಬಾಂಬ್‍ಗಳನ್ನು ವಶಪಡಿಸಿಕೊಂಡಿದೆ.

  • ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ

    ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ

    ಬೆಂಗಳೂರು(ಆನೇಕಲ್): ಹೊಸತೊಡುಕು ಹಿನ್ನೆಲೆ, ನೇಕಲ್ ಪಟ್ಟಣದಲ್ಲಿ ಮಾಂಸ ಖರೀದಿ ಭರಾಟೆ ಭರ್ಜರಿಯಾಗಿದೆ. ಜಟ್ಕಾ ಕಟ್ ಅಂಗಡಿಗಳ ಮುಂದೆ ಕೇಸರಿ ಧ್ವಜ ಕಟ್ಟಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದಾರೆ.

    ಜಟ್ಕಾ ಕಟ್ ಅಂಗಡಿಗಳ ಮುಂದೆ ಕೇಸರಿ ಧ್ವಜ ಕಟ್ಟಿ ಬನ್ನೇರುಘಟ್ಟದಲ್ಲಿ ಭರ್ಜರಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಪಂಚಾಯಿತಿಯಿಂದ ನೋಟಿಸ್ ನೀಡಿ 650 ರೂ.ಗೆ ಮಾರಾಟ ಮಾಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಬನ್ನೇರುಘಟ್ಟದಲ್ಲಿ 800 ರೂ.ಗೆ ಮಟನ್ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇದೆಲ್ಲದರ ನಡುವೆ ಕೇಸರಿ ಧ್ವಜ ಅಂಗಡಿಗಳ ಮುಂದೆ ರಾರಾಜಿಸುತ್ತಿದೆ.

    ಹೊಸಕೋಟೆ ಮತ್ತು ಆನೇಕಲ್ ಪಟ್ಟಣದ ಹೊಸೂರು ರಸ್ತೆಯಲ್ಲಿರುವ ಮಾಂಸದ ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಮಾಂಸ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಹಬ್ಬದ ಬಾಡೂಟಕ್ಕೆ ಚಿಕನ್, ಮಟನ್ ಖರೀದಿಗೆ ಈ ಬಾರಿ ಆನೇಕಲ್‌ ಮತ್ತು ಹೊಸಕೋಟೆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ.

  • ವ್ಯಾಪಾರಕ್ಕೆ ಅವಕಾಶ ಕೊಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರಿಂದ ಮನವಿ

    ವ್ಯಾಪಾರಕ್ಕೆ ಅವಕಾಶ ಕೊಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರಿಂದ ಮನವಿ

    ಉಡುಪಿ: ಹಿಜಬ್ ಹೋರಾಟ ಆರಂಭವಾದ ನಂತರ ಉಡುಪಿಯಲ್ಲಿ ವ್ಯಾಪಾರ ಬಹಿಷ್ಕಾರ ನಡೆಯುತ್ತಿದೆ. ಮುಸಲ್ಮಾನ ವ್ಯಾಪಾರಿಗಳಿಗೆ ಜಾತ್ರೆ ಉತ್ಸವ ದೇವಸ್ಥಾನಗಳ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಜಾತ್ರೆ, ಬೀದಿ ವರ್ತಕರ ಸಂಘ ವ್ಯಾಪಾರ ಅವಕಾಶ ಮಾಡಿಕೊಡುವಂತೆ ಹಿಂದೂ ಸಮಾಜಕ್ಕೆ ಕರೆ ನೀಡುವಂತೆ ಮನವಿ ಮಾಡಿದರು.

    ಮುಸಲ್ಮಾನ ನಾಯಕರುಗಳು ಕ್ರೈಸ್ತ ಧರ್ಮಗುರುಗಳು ಪೇಜಾವರಶ್ರೀಗಳನ್ನು ಭೇಟಿಯಾಗಿ ಉಡುಪಿಯಲ್ಲಿ ಸೌಹಾರ್ದ ವಾತಾವರಣ ನೆಲೆಸುವಂತೆ, ಹಿಂದೂಗಳು ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡುವಂತೆ ಪೇಜಾವರ ಶ್ರೀಗಳನ್ನು ಭೇಟಿಯಾಗಿ ಮನವಿ ಸಲ್ಲಿಕೆ ಮಾಡಲಾಯ್ತು. ಉಡುಪಿಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಭೇಟಿಯಾಗಿದ್ದು, ಬೀದಿಬದಿ ಜಾತ್ರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ. ನೂರಾರು ವರ್ಷಗಳಿಂದ ಉಡುಪಿಯಲ್ಲಿ ಹಿಂದೂ ಮತ್ತು ಮುಸಲ್ಮಾನರ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದೇವೆ. ಕೆಲ ಬೆಳವಣಿಗೆಗಳಿಂದ ಎರಡು ಧರ್ಮಗಳ ನಡುವೆ ಭಿನ್ನಾಭಿಪ್ರಾಯಗಳು ಬಂದಿದೆ. ಸಮಸ್ಯೆಯನ್ನು ಬಗೆಹರಿಸಿ ಕೊಡಲು ತಾವು ನೇತೃತ್ವದ ಬೇಕು ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಮುಸಲ್ಮಾನ ವ್ಯಾಪಾರಿಗಳ ಮನವಿ ಮಾಡಿದರು. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ

    ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಧರ್ಮಗುರುಗಳು ಸಮಾಜದ ಸಾಮರಸ್ಯ ತೆಯ ಬಗ್ಗೆ ಮಾತನಾಡಿದರು. ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಅಬೂಬಕ್ಕರ್ ಆತ್ರಾಡಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ, ಮಹಮ್ಮದ್ ಆರಿಫ್ ಮತ್ತಿತರ ವ್ಯಾಪಾರಿಗಳು ಮನವಿ ಸಂದರ್ಭ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿಗಳು ಹಣ್ಣುಗಳನ್ನು ನೀಡಿದರು.

  • ಕೊಡಗಿನಲ್ಲೂ ಹೊತ್ತಿದ ಧರ್ಮದ ಕಿಡಿ – ಮುಸ್ಲಿಂ ವ್ಯಾಪಾರಸ್ಥ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ

    ಕೊಡಗಿನಲ್ಲೂ ಹೊತ್ತಿದ ಧರ್ಮದ ಕಿಡಿ – ಮುಸ್ಲಿಂ ವ್ಯಾಪಾರಸ್ಥ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ

    ಮಡಿಕೇರಿ: ರಾಜ್ಯದ ವಿವಿಧೆಡೆ ಈಗಾಗಲೇ ಹಿಂದೂ ದೇವಾಲಯದ ಆವರಣದಲ್ಲಿ ಮುಸ್ಲಿಂ ಸಮುದಾಯದ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಘಟನೆ ಹಾಗೂ ಭಜರಂಗದಳದ ಪ್ರಮುಖಕರು ಅಗ್ರಹ ಪಡಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ಕೋಡಬಾರದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ವೇಳೆಯಲ್ಲಿ ಇದೀಗಾ ಧರ್ಮದ ಕಿಡಿ ಕೊಡಗು ಜಿಲ್ಲೆಗೂ ವಿಸ್ತರಿಸಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ ಮನೆಹಳ್ಳಿ ಮಠದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಾವಯವ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿರುವ ಸಂದರ್ಭದಲ್ಲಿ ಸಮ್ಮೇಳನದಲ್ಲಿ ಇದ್ದ ಭಜರಂಗದಳದ ಯುವಕರು ಮುಸ್ಲಿಂ ಸಮುದಾಯದವರು ವ್ಯಾಪಾರಕ್ಕೆ ಹಾಕಿದ ಅಂಗಡಿ ಖಾಲಿ ಮಾಡಿಸಿದ್ರು. ಇದನ್ನೂ ಓದಿ:  ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ – ಸಚಿವ ಮುಖೇಶ್ ನಾಮಫಲಕ ನಾಪತ್ತೆ

    ಸಮ್ಮೇಳನದ ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದಿದ್ದ ಮುಸ್ಮಿಮರು ಟಾಯ್ಸ್, ಕಬ್ಬಿನ ಹಾಲು ಮತ್ತು ತಿಂಡಿ ತಿನಿಸುಗಳ ಅಂಗಡಿ ಹಾಕಿದ್ದ ಮುಸ್ಲಿಂರ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದ್ರು. ಅಲ್ಲದೇ ಗೋವುಗಳ ಕಡಿದು ತಿನ್ನುವ ಅವರು ಗೋ ಸಮ್ಮೇಳನಕ್ಕೆ ಯಾಕೆ ಬರಬೇಕು. ಗೋವುಗಳ ಕಡಿದು ತಿನ್ನುವವರಿಗೆ ಇಲ್ಲಿ ವ್ಯಾಪಾರ ಮಾತ್ರ ಬೇಕಾ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು.

    ಇದೇ ಸಂದರ್ಭ ಭಜರಂಗದಳದ ಸೋಮವಾರಪೇಟೆ ತಾಲೂಕು ಸಂಚಾಲಕ ಜೀವನ್ ಮಾತಾನಾಡಿದ್ದು, ಹಿಂದೂಗಳು ಜಾತ್ರೆ ಕಾರ್ಯಕ್ರಮಗಳನ್ನು ನಡೆಸುವ ಸಂದರ್ಭದಲ್ಲಿ ಮುಸ್ಲಿಮರು ಪಾಲ್ಗೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಇವರು ನಡೆಸುವ ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಳ್ಳಲಿ. ಆದ್ರೆ ನಮ್ಮ ಕಾರ್ಯಕ್ರಮಗಳಲ್ಲಿ ಅವರು ಬರುವುದು ಬೇಡ. ಇದು ಅವರಿಗೆ ಎಚ್ಚರಿಕೆ ಗಂಟೆ ಎಂದು ತಿಳಿಸಿದರು. ಇದನ್ನೂ ಓದಿ:  ಮಾಜಿ ಸಿಎಂ ಸಿದ್ದರಾಮಯ್ಯ ನಾಡಿನ ಮಠಾಧೀಶರ ಕ್ಷಮೆ ಕೇಳಬೇಕು: ಅಭಿನವ ಮಂಜುನಾಥ ಶ್ರೀ

  • ನಿಯಮವನ್ನು ಅಧಿಕಾರಿಗಳು ಸೇರಿಸಿರಬಹುದು: ಮಾಜಿ ಮುಜರಾಯಿ ಸಚಿವೆ ಸುಮಾ ವಸಂತ್

    ನಿಯಮವನ್ನು ಅಧಿಕಾರಿಗಳು ಸೇರಿಸಿರಬಹುದು: ಮಾಜಿ ಮುಜರಾಯಿ ಸಚಿವೆ ಸುಮಾ ವಸಂತ್

    ಮಡಿಕೇರಿ: ಹಿಂದೂಯೇತರರಿಗೆ ಹಿಂದೂ ದೇವಾಲಯಗಳ ವ್ಯಾಪಾರ ವಹಿವಾಟಿನ ಗುತ್ತಿಗೆ ನೀಡಬಾರದು ಎಂದು ನಿಯಮ ಮಾಡಿರುವುದು ನನಗೆ ಸರಿಯಾಗಿ ಗೊತ್ತಿಲ್ಲ ಎಂದು ಮಾಜಿ ಸಚಿವೆ ಮುಜರಾಯಿ ಖಾತೆಯ ಸಚಿವೆ ಸುಮಾ ವಸಂತ್ ಹೇಳಿದ್ದಾರೆ.

    ಹಿಂದೂ ದೇವಾಲಯಗಳಲ್ಲಿ ಹಿಂದೂಯೇತರ ವರ್ತಕರಿಗೆ ಜಾಗ ನೀಡಬಾರದು ಎಂಬ ಸರ್ಕಾರ ನಿಯಮಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಅಂದಿನ ಎಸ್.ಎಂ. ಕೃಷ್ಣ ಕ್ಯಾಬಿನೆಟ್‍ನಲ್ಲಿ ಮುಜರಾಯಿ ಖಾತೆ ಸಚಿವೆಯಾಗಿದ್ದ ಸುಮಾವಸಂತ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಹಿಜಬ್‍ಗೂ ಪರೀಕ್ಷೆಗೂ ಸಂಬಂಧವಿಲ್ಲ, ತುರ್ತು ವಿಚಾರಣೆ ನಡೆಸಲ್ಲ: ಸುಪ್ರೀಂ

    ಅಂದು 2001 ರಿಂದ 2004ರವರೆಗೆ ಮುಜರಾಯಿ ಇಲಾಖೆಯ ಸಚಿವೆಯಾಗಿ ಕೆಲಸ ಮಾಡಿದೆ. ಆದರೆ ಈ ಕಾಯ್ದೆ ರಚನೆಯಾಗಿರುವ ಬಗ್ಗೆ ನನಗೆ ಸರಿಯಾಗಿ ಗೊತ್ತಿಲ್ಲ. ಇದನ್ನು ಅಧಿಕಾರಿಗಳು ಸೇರಿಸಿರಬಹುದು. ಆದರೆ 2003 ರಲ್ಲಿ ರಾಜ್ಯದಲ್ಲಿ ಏಕರೂಪ ಕಾಯ್ದೆ ತಂದಿದ್ದೆವು. ರಾಜ್ಯ ಪುನರ್ ವಿಂಗಡನೆ ಪೂರ್ವದಲ್ಲಿದ್ದ ನಿಯಮಗಳಿಗೆ ತಿದ್ದುಪಡಿ ತಂದಿದ್ದೆವು. ಅದರಲ್ಲಿ ಹಿಂದೂಯೇತರರಿಗೆ ಅವಕಾಶವಿಲ್ಲ ಎಂಬ ನಿಯಮ ಮಾಡಿದ್ದೆವು. ಇದು ಕೂಡ ಕಾನೂನು ಇಲಾಖೆಯಲ್ಲಿ ಚರ್ಚಿಸಿ ಎರಡು ಸದನದಲ್ಲಿ ಒಪ್ಪಲಾಗಿತ್ತು. ಆದರೆ 2002ರಲ್ಲಿ ಆಗಿರುವ ನಿಯಮ ನನಗೆ ಗೊತ್ತಿಲ್ಲ. ಹಿಂದೂಯೇತರರಿಗೆ ಅಂದರೆ ಜೈನ, ಸಿಖ್, ಬೌದ್ಧ ಧರ್ಮಿಯರಿಗೆ ಅನ್ವಯಿಸುವುದಿಲ್ಲ ಎಂದು ನಿಯಮ ರಚಿಸಲಾಗಿತ್ತು. ಆದರೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ತಾಲೂಕು ಆಡಳಿತಗಳು ನಿಯಮ ಮಾಡುತ್ತವೆ. ಹಾಗೆ ಏನಾದರೂ ಮಾಡಿಕೊಂಡಿರಬಹುದು ಎಂದರು.

    ಈ ಹಿಂದಿನಿಂದಲೂ ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ಎಲ್ಲರೂ ಸೌಹಾರ್ದತೆಯಿಂದ ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಅಂದಿನಿಂದ ವ್ಯಾಪಾರ ವಹಿವಾಟಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದಿನಿಂದಲೂ ಸೌಹಾರ್ದತೆಯಿಂದ ನಡೆಯುತ್ತಿತ್ತು. ಹಾಗೇನಾದರೂ ಸಮಸ್ಯೆಗಳಿದ್ದರೆ ಈಗಲೂ ಅವರದೇ ಸರ್ಕಾರವಿದೆ. ಸಮಸ್ಯೆಯನ್ನು ಸರಿಮಾಡಿ ಶಾಂತಿ ಕಾಪಾಡಬಹುದಿತ್ತು. ಆದರೆ ಈಗ ಚುನಾವಣಾ ಕಾರಣಕ್ಕೆ ಶಾಂತಿ ಕದಡುವ ಕೆಲಸ ಬಿಜೆಪಿ ಹಾಗೂ ಸಂಘ ಪರಿವಾರದವರಿಂದ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ನಿಯಮ ಏನಿದೆ?
    ಮುಸ್ಲಿಮರಿಗೆ ಅಂಗಡಿ ಹಾಕಲು ಅವಕಾಶ ನಿರಾಕರಿಸುತ್ತಿರುವ ದೇಗುಲದ ಆಡಳಿತ ಮಂಡಳಿಗಳು, 2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿವೆ. ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮದಲ್ಲಿ, ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಮತ್ತು ನಿವೇಶನಗಳೂ ಸೇರಿದಂತೆ ಯಾವುದೇ ಸವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡತಕ್ಕದಲ್ಲ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದ ಗಣಿಗಾರಿಕೆ ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ ರಚನೆ – ಸುಪ್ರೀಂಕೋರ್ಟ್

    ಇದೀಗ ಇದೇ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಹಿಂದೂ ಸಂಘಟನೆಗಳು ಹೇಳುತ್ತಿದೆ. ಹಿಂದೂ ಸಂಘಟನೆಗಳು ಈ ನಿಯಮವನ್ನು ಮುಂದಿಟ್ಟುಕೊಂಡು ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಹಿಂದೂಯೇತರ ವ್ಯಕ್ತಿಗಳಿಗೆ ಅನುಮತಿ ನೀಡದಂತೆ ಮನವಿ ಮಾಡುತ್ತಿದೆ. ಈ ನಿಯಮ ಜಾರಿಯಾಗಿದ್ದು 2002ರಲ್ಲಿ. ಈ ವೇಳೆ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇದ್ದಿದ್ದು ಎಸ್‍ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ. ಇಂದು ಅದೇ ಕಾಂಗ್ರೆಸ್ಸಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ.

    ಹಿಜಬ್ ವಿವಾದ ಸೃಷ್ಟಿಯಾಗುವರೆಗೂ ಈ ನಿಯಮ ಇದೆ ಎನ್ನುವುದು ಬಹುತೇಕ ಮಂದಿಗೆ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿ ಇಲ್ಲಿಯವರೆಗೂ ಮುಸ್ಲಿಮ್ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯುತ್ತಿದ್ದರು. ಆದರೆ ಹಿಜಬ್ ವಿವಾದ, ಕರ್ನಾಟಕ ಬಂದ್ ಬಳಿಕ ಕರಾವಳಿಯ ಹಿಂದೂ-ಮುಸ್ಲಿಂ ಸಾಮರಸ್ಯದಲ್ಲಿ ಮತ್ತಷ್ಟು ಬಿರುಕಾಗಿದೆ.

  • ಗೋವು ಹಂತಕರು, ಹಲಾಲ್ ವ್ಯಾಪಾರಿಗಳಿಗೆ ಹಿಂದೂ ಶ್ರದ್ಧಾ ಕೇಂದ್ರದಲ್ಲಿ ಏನು ಕೆಲಸ: ಭಜರಂಗದಳ ಪ್ರಶ್ನೆ

    ಗೋವು ಹಂತಕರು, ಹಲಾಲ್ ವ್ಯಾಪಾರಿಗಳಿಗೆ ಹಿಂದೂ ಶ್ರದ್ಧಾ ಕೇಂದ್ರದಲ್ಲಿ ಏನು ಕೆಲಸ: ಭಜರಂಗದಳ ಪ್ರಶ್ನೆ

    ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿರುವುದು ಮುಸಲ್ಮಾನರಿಗೆ ಆರ್ಥಿಕ ನಿಷೇಧ ಚಟುವಟಿಕೆ ಅಲ್ಲ. ಗೋವು ಹಂತಕರು, ಹಲಾಲ್ ವ್ಯಾಪಾರಿಗಳಿಗೆ ಹಿಂದೂ ಶ್ರದ್ಧಾ ಕೇಂದ್ರದಲ್ಲಿ ಏನು ಕೆಲಸ? ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸಿದವರಿಗೆ ಹಿಂದೂ ಸಮಾಜ ಕೊಡುತ್ತಿರುವ ಉತ್ತರ ಎಂದು ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಗುಡುಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಭಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ. ಆರ್, ದೇಶದಲ್ಲಿ ಸಂವಿಧಾನ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ? ಹೈಕೋರ್ಟ್‍ನ್ನು, ಮೂವರು ನ್ಯಾಯಮೂರ್ತಿಗಳ ತೀರ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ಸಮಸ್ತ ಹಿಂದೂ ಸಮಾಜ ಜಾಗೃತವಾಗಿದೆ. ನೆಲದ ಕಾನೂನಿಗೆ ಗೌರವ ಕೊಡದಿರುವುದನ್ನು ಯಾರು ಸಹಿಸಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದೆ. ಧರ್ಮ ಮತ್ತು ಸಮಾಜದ ರಕ್ಷಣೆಯನ್ನು ಮಾಡಲು ಮುಂದಾಗಿದೆ ಎಂದರು. ಇದನ್ನೂ ಓದಿ: ಬಪ್ಪನಾಡಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ – ಸಾಮರಸ್ಯ ಎತ್ತಿಹಿಡಿದ ಕ್ಷೇತ್ರದ ಆಡಳಿತ ಮಂಡಳಿ

    ಧಾರ್ಮಿಕ ದತ್ತಿ ಇಲಾಖೆಯ ನಿಯಮದಲ್ಲಿ ಉಲ್ಲೇಖ ಇದೆ. ಇದನ್ನು ಹಿಂದೂ ಸಮಾಜ ಜಾರಿಗೆ ತರಲು ಹೊರಟಿದೆ. ಹಲವಾರು ದೇವಸ್ಥಾನದ ಸಮಿತಿಗಳು ಧಾರ್ಮಿಕ ದತ್ತಿ ಇಲಾಖೆಯ ನಿಯಮವನ್ನು ಒಪ್ಪಿಕೊಂಡಿವೆ. ಗೋವಿನ ಮಾಂಸ ತಿಂದವರು ನಮ್ಮ ಶ್ರದ್ಧಾ ಕೇಂದ್ರದಲ್ಲಿ ವ್ಯಾಪಾರ ಮಾಡುತ್ತೇವೆ ಎಂದು ನಾವು ಕೇಳಲು ತಯಾರಿಲ್ಲ. ಇಸ್ಲಾಂ ತತ್ವದಲ್ಲಿ ನಂಬಿಕೆ ಇದ್ದವರು, ಗೋವು ಮಾಂಸ ತಿನ್ನುವವರಿಗೆ ಹಿಂದೂ ಶ್ರದ್ಧಾ ಕೇಂದ್ರದಲ್ಲಿ ಏನಿದೆ ಕೆಲಸ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಮುಸ್ಲಿಮ್ ವ್ಯಾಪಾರಿಗಳಿಗೆ ನಿರ್ಬಂಧದ ಬ್ಯಾನರ್ ಹಾಕಿದವರು ಹೇಡಿಗಳು: ಖಾದರ್

    ಮುಸಲ್ಮಾನರು ಹಲವಾರು ವರ್ಷದಿಂದ ಹಲಾಲ್‍ನ ಮೂಲಕ ವ್ಯವಹಾರದ ಕ್ರೋಡೀಕರಣ ನಡೆಸುತ್ತಿದ್ದಾರೆ. ಹಲಾಲ್ ವಿಚಾರದಲ್ಲಿ ಮುಸಲ್ಮಾನ ವ್ಯಾಪಾರವನ್ನು ಕ್ರೋಡೀಕರಣ ಮಾಡಲಾಗುತ್ತಿದೆ. ಇದು ಸರಿಯಾ ಎಂದು ಪ್ರಶ್ನೆ ಮಾಡಿದರು. ಹಿಂದೂಗಳಲ್ಲಿ ಬಡ ವ್ಯಾಪಾರಿಗಳು ಇಲ್ಲವೇ ಅವರು ವ್ಯಾಪಾರ ಮಾಡಲಿ. ಅವರ ಕಷ್ಟ ಪರಿಹಾರವಾಗಲಿ. ಹಿಂದೂ ಸಮಾಜ ಮೊಗವೀರ ಸಮಾಜಕ್ಕೆ ಬಹಿಷ್ಕಾರ ಹಾಕಿದಾಗ ಸಿದ್ದರಾಮಯ್ಯ ಎಲ್ಲಿ ಹೋಗಿದ್ದರು?

    ಕಾಪುವಿನ ಬಗ್ಗೆ ಪ್ರಶ್ನೆ ಮಾಡಿದವರು ಗಂಗೊಳ್ಳಿಯ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ. ಮುಸಲ್ಮಾನರಿಗೆ ನೋವಾದರೆ ಮಾತ್ರ ನಿಮಗೆ ನೋವಾಗುವುದಾ? ಹಿಂದೂ ಸಮಾಜವನ್ನು ಯಾಕೆ ಟಾರ್ಗೆಟ್ ಮಾಡುತ್ತೀರಿ? ಕರಾವಳಿ ಬುದ್ಧಿವಂತರ ನಾಡು ಇಲ್ಲಿ ಸಂಘರ್ಷಕ್ಕೆ ದಾರಿ ಇಲ್ಲ. ಭಾರತದ ಮಣ್ಣಿನ ಗುಣ, ಕಾನೂನು ಮತ್ತು ಹಿಂದುತ್ವವನ್ನು ಒಪ್ಪಿಕೊಂಡು ಬಂದರೆ ಎಲ್ಲದಕ್ಕೂ ಪರಿಹಾರ ಇದೆ ಎಂದು ಭಜರಂಗದಳ ಹೇಳಿದೆ.

  • ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

    ಬಿಜೆಪಿ ಸರ್ಕಾರ ಮೌನವಾಗಿದೆ, ಒಳಗೊಳಗೆ ಖುಷಿ ಪಡುತ್ತಿದೆಯಾ?: ಯು.ಟಿ ಖಾದರ್

    ಬೆಂಗಳೂರು: ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸುವುದಕ್ಕೆ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಸರ್ಕಾರ ಮೌನವಾಗಿದ್ದು, ಒಳಗೊಳಗೆ ಖುಷಿ ಪಡುತ್ತಿದೆಯಾ? ಎಂದು ವಿಧಾನಸಭೆಯ ಕಾಂಗ್ರೆಸ್ ಉಪನಾಯಕ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಭಾರತ ದೇಶ ವಿವಿಧತೆಯಲ್ಲಿ ಏಕತೆ ಹೊಂದುರುವ ದೇಶವಾಗಿದೆ. ಇಲ್ಲಿ ಎಲ್ಲಾ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಆದರೆ ಕೆಲವರು ಧರ್ಮಗಳ ನಡುವೆ ಕಂದಕವನ್ನ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಎಚ್ಚೆತ್ತುಕೊಳ್ಳದಿದ್ದರೆ ನಮಗೂ ಕಾಶ್ಮೀರಿ ಪಂಡಿತರದ್ದೇ ಪರಿಸ್ಥಿತಿ ಬರಬಹುದು – ಪೇಜಾವರ ಶ್ರೀ ಎಚ್ಚರಿಕೆ

    ಕರಾವಳಿ ಭಾಗದಲ್ಲಿ ಕೆಲ ಹಿತಾಸಕ್ತಿಗಳು ಭಿತ್ತಿ ಪತ್ರಗಳನ್ನ ಹಾಕುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ದ್ವೇಷ ಸೃಷ್ಟಿಸಲು ಹೊರಟಿದ್ದಾರೆ. ಮುಲ್ಕಿ ಸೇರಿದಂತೆ ಕೆಲವೆಡೆ ಭಿತ್ತಿ ಪತ್ರಗಳನ್ನ ಹಾಕಲಾಗಿದೆ. ಇದೊಂದು ಅಸಹ್ಯ ಕೃತ್ಯವಾಗಿದೆ. ಹಿಂದೂ ಸಹೋದರರು ಬೆಂಬಲ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:  ಪಂಚರ್ ಹಾಕಿಲ್ಲ ಅಂದ್ರೆ ಗಾಡಿ ಓಡ್ಸೋದಾದ್ರೂ ಹೇಗೆ : ಡಿಕೆಶಿ ಪ್ರಶ್ನೆ

    ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸುವುದಕ್ಕೆ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತಪಡಿಸುತ್ತಿದೆ. ಈ ವಿಚಾರವಾಗಿ ಬಿಜೆಪಿ ಸರ್ಕಾರ ಈ ವಿಚಾರವಾಗಿ ಮೌನವಾಗಿದೆ. ಒಳಗೊಳಗೆ ಖುಷಿ ಪಡುತ್ತಿದೆಯಾ? ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆಢಳಿತ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.