– ದುಷ್ಕರ್ಮಿಗಳ ಪತ್ತೆಗೆ 8 ವಿಶೇಷ ತಂಡ ರಚನೆ
ಚಂಡೀಗಢ: ತನ್ನ ಎಸ್‌ಯುವಿ ಕಾರಿನಲ್ಲಿ ಮಲಗಿದ್ದ ವ್ಯಾಪಾರಿಯೊಬ್ಬನನ್ನು ಕಾರಿನಿಂದಾಚೆಗೆ ಎಳೆದು ಸುಮಾರು 35 ಸುತ್ತು ಗುಂಡು ಹಾರಿಸಿ ಕೊಂದಿರುವ ಘಟನೆ ಹರಿಯಾಣದ ಡಾಬಾವೊಂದರ (Haryana Dhaba) ಪಾರ್ಕಿಂಗ್ ಸ್ಥಳದಲ್ಲಿ ನಡೆದಿದೆ.
ಭಾನುವಾರ (ಇಂದು) ಬೆಳಗ್ಗೆ 8:30ರ ಸುಮಾರಿಗೆ ಹರಿಯಾಣದ ಮುರ್ತಾಲ್‌ನ ಗುಲ್ಶನ್ ಡಾಬಾದಲ್ಲಿ (Gulshan Dhaba) ಘಟನೆ ನಡೆದಿದ್ದು, ಗೊಹಾನಾದ ಸರಗ್ತಾಲ್ ಗ್ರಾಮದ ಸುಂದರ್ ಮಲಿಕ್ (38) ಎಂದು ಗುರುತಿಸಲಾಗಿದೆ. ಈತ ಮದ್ಯದ ವ್ಯಾಪಾರಿ ಎಂಬುದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭಾರೀ ಮಳೆ- 19 ಮಂದಿ ಸಾವು, ಹಲವರು ನಾಪತ್ತೆ

ಇಬ್ಬರು ದುಷ್ಕರ್ಮಿಗಳು ಗುಂಡಿನ ಮಳೆ ಸುರಿಸಿದ ದೃಶ್ಯಾವಳಿ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಕಾರಿನಲ್ಲಿ ಕುಳಿತಿದ್ದ ವ್ಯಾಪಾರಿಯನ್ನು ಕೆಳಗೆ ಎಳೆಯುತ್ತಿದ್ದಂತೆ ಆತ ಒಬ್ಬನೊಂದಿಗೆ ಗುದ್ದಾಟಕ್ಕೆ ಇಳಿದಿದ್ದಾನೆ. ಅಷ್ಟರಲ್ಲೇ ಮತ್ತೊಬ್ಬ ದುಷ್ಕರ್ಮಿ ಏಕಾಏಕಿ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಘಟನೆ ತಿಳಿದಕೂಡಲೇ ಡಾಬಾ ಮಾಲೀಕರು ಪೊಲೀಸರಿಗೆ (Haryana Police) ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಪೊಲೀಸರು ಒಂದು ಕ್ಷಣ ಶಾಕ್‌ಗೆ ಒಳಗಾಗಿದ್ದಾರೆ. ದುಷ್ಕರ್ಮಿಗಳು ಸುಮಾರು 30 ರಿಂದ 35 ಸುತ್ತು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ಪತ್ತೆಗಾಗಿ 8 ವಿಶೇಷ ತಂಡಗಳನ್ನು ರಚಿಸಿ, ಶೋಧ ಕಾರ್ಯ ನಡೆಸಲಾಗುತ್ತಿದೆ. ಅವರ ಕುಟುಂಬದ ಸದಸ್ಯರನ್ನೂ ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸ್ ಅಧಿಕಾರಿ ಗೌರವ್ ರಾಜಪುರೋಹಿತ್ ಹೇಳಿದ್ದಾರೆ.
ಈ ಘಟನೆಯು ಗ್ಯಾಂಗ್‌ವಾರ್ ದೃಷ್ಟಿಕೋನ ಒಳಗೊಂಡಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ ಎಂಬುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬಾರಿಗೆ ಬೀದರ್‌ನಲ್ಲಿ 15.50 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ!
ಕಳೆದ ಫೆಬ್ರವರಿ 26 ರಂದು ಭಾರತೀಯ ರಾಷ್ಟ್ರೀಯ ಲೋಕದಳ ಹರಿಯಾಣ ಘಟಕದ ಅಧ್ಯಕ್ಷ ನಫೆ ಸಿಂಗ್ ರಾಠಿ ಅವರನ್ನೂ ಇದೇ ರೀತಿ ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿತ್ತು. ಇದನ್ನೂ ಓದಿ: 2 ಸಾವಿರ ಕೋಟಿ ರೂ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ: ಖ್ಯಾತ ನಿರ್ಮಾಪಕ ಜಾಫರ್ ಬಂಧನ






















