Tag: ವ್ಯಾಪರಸ್ಥ

  • ಅತೀ ಹೆಚ್ಚು ಪಟಾಕಿ ಮಾರಾಟವಾಗ್ತಿದ್ದ ಮಂಗ್ಳೂರಲ್ಲಿ ಈಗ ಬಿಸಿನೆಸ್ ಡೆಲ್

    ಅತೀ ಹೆಚ್ಚು ಪಟಾಕಿ ಮಾರಾಟವಾಗ್ತಿದ್ದ ಮಂಗ್ಳೂರಲ್ಲಿ ಈಗ ಬಿಸಿನೆಸ್ ಡೆಲ್

    ಮಂಗಳೂರು: ದೀಪಾವಳಿ ಬಂದರೆ ಪಟಾಕಿ ಪ್ರಿಯರಿಗೆ ಗಮ್ಮತ್ತೇ ಗಮ್ಮತ್ತು. ಎಲ್ಲೆಡೆ ಪಟಾಕಿ ಸದ್ದು, ಗಿರಗಿಟ್ಲೆ ತಿರುಗೋ ನೆಲಚಕ್ರ ಹೊತ್ತಿಸಿ ಆಡುವ ಮಕ್ಕಳು. ಆದರೆ ಮಂಗಳೂರಿನಲ್ಲಿ ಪಟಾಕಿ ಸಂಭ್ರಮ ಈ ಬಾರಿ ತುಂಬಾನೇ ಕಮ್ಮಿಯಾಗಿದೆ. ಹೀಗಾಗಿ ಪಟಾಕಿ ಮಾರಾಟದ ಅಂಗಡಿಗಳಿಗೆ ಬೇಜಾನ್ ಲಾಸ್ ಆಗಿದೆ.

    ಹೀಗೆ ಸಾಲು ಸಾಲಾಗಿರೋ ಪಟಾಕಿ ಅಂಗಡಿಗಳಲ್ಲಿ ಹೆಚ್ಚಿನವರು ಧೂಳು ಹೊಡೆಯುತ್ತಿದ್ದಾರೆ. ಈ ಸಾರಿ ಪಟಾಕಿ ಬಿಸಿನೆಸ್ ಲಗಾಡಿ ಹೋಯ್ತು ಎಂದು ತಲೆಗೆ ಕೈ ಹೊತ್ತುಕೊಂಡವರು ಇದ್ದಾರೆ. ಹೌದು. ಈ ಬಾರಿ ದೀಪಾವಳಿಗೆ ಪಟಾಕಿಯ ಮೆರುಗು ಮರೆಯಾಗಿದೆ. ಹಿಂದಿನಂತೆ ಪಟಾಕಿಯ ಚಿತ್ತಾರವಂತೂ ನೋಡೋಕೆ ಸಿಗುತ್ತಿಲ್ಲ. ಅತೀ ಹೆಚ್ಚು ಪಟಾಕಿ ಮಾರಾಟಕ್ಕೆ ಹೆಸರಾಗಿದ್ದ ಮಂಗಳೂರು ನಗರದಲ್ಲಿ ಅರ್ಧಕ್ಕರ್ಧ ಬಿಸಿನೆಸ್ ಡೌನ್ ಆಗಿದೆಯಂತೆ. ನೋಟ್ ಬ್ಯಾನ್ ಮತ್ತು ಜನರಲ್ಲಿ ಪಟಾಕಿಯಿಂದ ಪರಿಸರ ನಾಶವಾಗುತ್ತಿದೆಯೆಂಬ ಜಾಗೃತಿ ಬಂದಿದ್ದರಿಂದ ಹಿಂದಿಗಿಂತ ವ್ಯಾಪಾರ ತುಂಬಾನೇ ಕಮ್ಮಿಯಾಗಿದೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.

    ಈ ಬಾರಿ ದೆಹಲಿ ನಗರ ವ್ಯಾಪ್ತಿಯಲ್ಲಿ ಪಟಾಕಿ ನಿಷೇಧ ಮಾಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನೊಂದೆಡೆ ಪರಿಸರ ಹೋರಾಟಗಾರರು ಕೂಡ ಜಾಲತಾಣದಲ್ಲಿ ಪಟಾಕಿ ವಿರುದ್ಧ ಅಭಿಯಾನ ನಡೆಸಿದ್ದರು. ಇವೆಲ್ಲದರ ಪರಿಣಾಮ ಪಟಾಕಿಯ ಮಾರಾಟದ ಮೇಲಾಗಿದ್ದು, ಸ್ವತಃ ಜನರೇ ಖರೀದಿಗೆ ಬರುತ್ತಿಲ್ಲ. ಇದರಿಂದಾಗಿ ದೀಪಾವಳಿಯ ಮೊದಲ ದಿನವೇ ಭರ್ಜರಿ ವ್ಯಾಪಾರ ನಿರೀಕ್ಷಿಸಿದ್ದ ವ್ಯಾಪಾರಸ್ಥರು ಬಿಸಿನೆಸ್ ಡಲ್ ಆಗಿದ್ದರಿಂದ ಸೊರಗಿದ್ದಾರೆ.

    ಇದರ ಜೊತೆ ಮಂಗಳೂರು ಮಹಾನಗರ ಪಾಲಿಕೆ ಮತ್ತು ಪೊಲೀಸರು ಪಟಾಕಿ ಮಾರಾಟಕ್ಕೆ ನಿಯಂತ್ರಣ ಹೇರಿದ್ದರಿಂದ ವ್ಯಾಪಾರ ಮತ್ತಷ್ಟು ಕಷ್ಟವಾಗಿದೆಯಂತೆ. ಕೆಲವರಂತೂ 20 ವರ್ಷಗಳಿಂದ ಪಟಾಕಿ ವ್ಯಾಪಾರ ನಡೆಸುತ್ತಿದ್ದವರಿಗೆ ಇದೇ ಮೊದಲ ಬಾರಿಗೆ ವ್ಯಾಪಾರದಲ್ಲಿ ಡಲ್ ಹೊಡೆದಿದೆ. ಹೊಸ ವರ್ಷ ಹಾಗೂ ಇತರೆ ಸಮಾರಂಭಗಳಿಗೆ ಸಿಕ್ಕಾಪಟ್ಟೆ ಪಟಾಕಿ ಹೊಡೆಯೋದನ್ನು ವಿರೋಧಿಸದವರು ಕೇವಲ ದೀಪಾವಳಿ ಹಬ್ಬದ ಪಟಾಕಿಗೆ ವಿರೋಧ ವ್ಯಕ್ತಪಡಿಸಿರೋದು ಸರಿಯಲ್ಲ ಎಂಬ ಮಾತು ಕೇಳಿಬರುತ್ತಿದೆ. ವರ್ಷಕ್ಕೊಮ್ಮೆ ಹಬ್ಬದ ಹೆಸರಲ್ಲಿ ಸಿಡಿಸೋ ಪಟಾಕಿಗೆ ಸರ್ಕಾರ ನಿಯಂತ್ರಣ ಹೇರಬಾರದು ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

  • ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

    ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣು

    ಹಾವೇರಿ: ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ವ್ಯಾಪರಸ್ಥರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನ ದೊಡ್ಡಕೊಟ್ರೇಶ ಸೊಪ್ಪಿನಬಾವಿಮಠ (48) ಎಂದು ಗುರುತಿಸಲಾಗಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಇರುವ ತನ್ನ ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗುಂಡು ಹಾರಿಸಿಕೊಂಡು ದೊಡ್ಡಕೊಟ್ರೇಶ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ರಾಣೇಬೆನ್ನೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.