Tag: ವ್ಯಾಕ್ಸಿನ್

  • ನಾನು ಕುಡಿದಿದ್ದೇನೆ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ – ತಹಶೀಲ್ದಾರ್ ಮನವಿಗೆ ಡೋಂಟ್ ಕೇರ್

    ನಾನು ಕುಡಿದಿದ್ದೇನೆ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ – ತಹಶೀಲ್ದಾರ್ ಮನವಿಗೆ ಡೋಂಟ್ ಕೇರ್

    ಹಾಸನ: ಮನೆ ಬಳಿ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ ತಹಶೀಲ್ದಾರ್‌ಗೆ ಗ್ರಾಮಸ್ಥರೊಬ್ಬರು ನಾನು ಎಣ್ಣೆ ಹೊಡೆದಿದ್ದೇನೆ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದರೆ, ಮಹಿಳೆಯರು ಡೋಂಟ್ ಕೇರ್ ಎನ್ನುತ್ತಾ ತಮ್ಮ ಹಿಂದೆ ಊರೆಲ್ಲ ಸುತ್ತಾಡಿಸಿದ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ, ಚಿಕ್ಕ ಮಗ್ಗೆ ಗ್ರಾಮದಲ್ಲಿ ನಡೆದಿದೆ.

    ಗ್ರಾಮಕ್ಕೆ ವೈದ್ಯರ ಜೊತೆ ಭೇಟಿ ನೀಡಿದ ಅರಕಲಗೂಡು ತಹಶೀಲ್ದಾರ್ ರೇಣುಕುಮಾರ್, ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇರುವವರ ಮನೆಯ ಬಳಿ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ನನಗೆ ತಲೆನೋವಿದೆ. ನಾನು ಚೆಕಪ್ ಮಾಡಿಸುತ್ತಿರುವ ಡಾಕ್ಟರ್ ವ್ಯಾಕ್ಸಿನ್ ಹಾಕಿಸಿಕೊಳ್ಳದಂತೆ ಹೇಳಿದ್ದಾರೆ. ಹೀಗಾಗಿ ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದು ವಿವಿಧ ಸಬೂಬು ಹೇಳಿದ್ದಾರೆ. ಇದನ್ನೂ ಓದಿ: ಸಾಯೋ ವಯಸ್ಸಾಗಿದೆ, ನಮಗೆ ಲಸಿಕೆ ಬೇಡವೇ ಬೇಡ – ಬಳ್ಳಾರಿಯಲ್ಲೂ ವ್ಯಾಕ್ಸಿನ್‍ಗೆ ಹಿಂದೇಟು

    ಮಹಿಳೆಯರಿಗೆ ತಹಶೀಲ್ದಾರ್ ಮತ್ತು ವೈದ್ಯರು ಎಷ್ಟೇ ತಿಳಿಹೇಳಿದ್ರು ಪ್ರಯೋಜನವಾಗಿಲ್ಲ. ಮತ್ತೊಬ್ಬ ಮಹಿಳೆ ನಾನು ಚೀಟಿ ಕಟ್ಟಬೇಕು, ನನಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಟೈಮಿಲ್ಲ ಎಂದು ಒಂದು ಗಂಟೆ ಸತಾಯಿಸಿ, ಗ್ರಾಮವೆಲ್ಲ ಸುತ್ತಾಡಿಸಿ, ಕೊನೆಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಮತ್ತೊಬ್ಬ ಆಸಾಮಿಯಂತು ನಾನು ಎಣ್ಣೆ ಹೊಡೆದಿದ್ದೇನೆ. ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದಿದ್ದಾನೆ. ಹೀಗೆ ಮನೆ ಬಳಿ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವಿ ಮಾಡಿದ ತಹಶೀಲ್ದಾರ್‌ಗೆ ಗ್ರಾಮದ ಜನ ವಿವಿಧ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ರೆ, ವ್ಯಾಕ್ಸಿನ್ ಬಗ್ಗೆ ಇನ್ನೂ ಬಹುತೇಕರಿಗೆ ನಂಬಿಕೆಯೇ ಬಂದಿಲ್ಲ ಎಂಬುದು ಎದ್ದು ಕಾಣುತ್ತಿದೆ. ದನ್ನೂ ಓದಿ: ನಮ್ಗೆ ಲಸಿಕೆ ಕೊಡ್ಬೇಡಿ, ನಮ್ಮ ಮೇಲೆ ದೇವರು ಬಂದಿದ್ದಾರೆ – ಯಾದಗಿರಿಯಲ್ಲಿ ಹೈಡ್ರಾಮಾ

  • ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ಅನುಮಾನ

    ವರ್ಷಾಂತ್ಯಕ್ಕೆ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ಅನುಮಾನ

    ನವದೆಹಲಿ: ಮೂರನೇ ಅಲೆಯ ಭೀತಿಯಲ್ಲಿರುವ ಕೇಂದ್ರ ಸರ್ಕಾರ ಕೊರೊನಾ ನಿಗ್ರಹಕ್ಕಾಗಿ ವೇಗವಾಗಿ ವ್ಯಾಕ್ಸಿನೇಷನ್ ಮಾಡುತ್ತಿದೆ. ವರ್ಷಾಂತ್ಯಕ್ಕೆ ದೇಶದ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ವ್ಯಾಕ್ಸಿನ್ ನೀಡುವುದು ಅನುಮಾನ ಎಂದು ಅಧಿಕಾರಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಭಾರತದಲ್ಲಿ ವ್ಯಾಕ್ಸಿನೇಷನ್ ಪ್ರಗತಿ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು, ಭಾರತದ 94 ಕೋಟಿ ವಯಸ್ಕರಿಗೆ ಎರಡು ಡೋಸ್ ಈ ವರ್ಷಾಂತ್ಯಕ್ಕೆ ನೀಡಲು ಸಾಧ್ಯವಿಲ್ಲ. ಆದರೂ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್-19 ಲಸಿಕೆ ಪಡೆದು 7.4 ಕೋಟಿ ರೂ. ಗೆದ್ದ ಯುವತಿ

    ಇತ್ತೀಚೆಗೆ ಕೇಂದ್ರ ನೂರು ಕೋಟಿ ಡೋಸ್ ನೀಡುವ ಮೂಲಕ ದಾಖಲೆ ಮಾಡಿತ್ತು. ವೇಗವಾಗಿ ವ್ಯಾಕ್ಸಿನ್ ನೀಡುತ್ತಿರುವ ಆರೋಗ್ಯ ಇಲಾಖೆ 2021 ರ ಅಂತ್ಯಕ್ಕೆ ದೇಶದ ಎಲ್ಲ ವಯಸ್ಕರಿಗೆ ವ್ಯಾಕ್ಸಿನ್ ನೀಡುವ ಗುರಿ ಹೊಂದಿತ್ತು. ಅದರಂತೆಯೇ ಸದ್ಯ 74 ಕೋಟಿ ಜನರಿಗೆ ಮೊದಲ ಡೋಸ್ ನೀಡಿದ್ದು, 35 ಕೋಟಿ ಜನರಿಗೆ ಎರಡನೇ ಡೋಸ್ ನೀಡಲಾಗಿದೆ.

    ಸುಮಾರು 20 ಕೋಟಿಯಷ್ಟು ಜನರು ಇನ್ನು ಒಂದು ಡೋಸ್ ವ್ಯಾಕ್ಸಿನ್ ಕೂಡಾ ಪಡೆದಿಲ್ಲ. ಸಾಕಷ್ಟು ವ್ಯಾಕ್ಸಿನ್ ದಾಸ್ತನು ಇದ್ದರೂ, ವ್ಯಾಕ್ಸಿನ್ ಹಂಚಿಕೆಯ ವೇಗ ಕಡಿಮೆಯಾಗಿದೆ. ಈ ಪರಿಣಾಮ ವರ್ಷಾಂತ್ಯಕ್ಕೆ ನಮ್ಮ ಗುರಿ ತಲುಪಲು ಅಡ್ಡಿ ಉಂಟು ಮಾಡಲಿದೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ವಾಕಿಂಗ್ ಮುಗಿಸಿ ಮನೆಗೆ ಬಂದ DYSP ಹೃದಯಾಘಾತದಿಂದ ಸಾವು

    ಈವರೆಗೂ ಭಾರತದಲ್ಲಿ 109 ಕೋಟಿ ಡೋಸ್ ವ್ಯಾಕ್ಸಿನ್ ಹಂಚಿಕೆಯಾಗಿದ್ದು, ದೇಶದ ಎಲ್ಲ ವಯಸ್ಕರಿಗೂ ಡಬಲ್ ಡೋಸ್ ನೀಡಲು 188 ಕೋಟಿ ಡೋಸ್ ಲಸಿಕೆ ಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ 16 ಕೋಟಿ ಡೋಸ್ ನಷ್ಟು ದಾಸ್ತನು ರಾಜ್ಯಗಳಲ್ಲಿದ್ದು, ಎಲ್ಲ ಖಾಸಗಿ ಆಸ್ಪತ್ರೆಗಳೂ ಸೇರಿ ಒಟ್ಟು 3-4 ಕೋಟಿ ಡೋಸ್ ಲಸಿಕೆ ಲಭ್ಯವಿದೆ.

  • ವ್ಯಾಕ್ಸಿನೇಷನೇಷನ್ ಪ್ರಮಾಣ ಕಡಿಮೆ – 48 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮೋದಿ ಖಡಕ್ ಎಚ್ಚರಿಕೆ

    ವ್ಯಾಕ್ಸಿನೇಷನೇಷನ್ ಪ್ರಮಾಣ ಕಡಿಮೆ – 48 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮೋದಿ ಖಡಕ್ ಎಚ್ಚರಿಕೆ

    ನವದೆಹಲಿ: ಸ್ಥಳೀಯ ಮುಖಂಡರ ಸಹಾಯ ಪಡೆಯುವ ಮೂಲಕ ವ್ಯಾಕ್ಸಿನೇಷನ್ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಕಡಿಮೆ ವ್ಯಾಕ್ಸಿನೇಷನ್ ವರದಿ ಮಾಡಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ ಮೋದಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

    ಒಂದು ಕೋಟಿ ಡೋಸ್ ನೀಡಿದ ಬಳಿಕವೂ ಹಲವು ಜಿಲ್ಲೆಗಳು ವ್ಯಾಕ್ಸಿನೇಷನ್‍ನಲ್ಲಿ ಹಿಂದೆ ಬಿದ್ದಿದ್ದು, ಈ ಜಿಲ್ಲೆಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು. ಸಭೆಯಲ್ಲಿ ವ್ಯಾಕ್ಸಿನೇಷನ್ ಕಡಿಮೆ ಸಾಧನೆಗೆ ಬೇಸರ ವ್ಯಕ್ತಪಡಿಸಿದ ಅವರು ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಕಾರ್ಯಕರ್ತರಿಗೆ ಕರೆ ನೀಡಿದರು. ಇದನ್ನೂ ಓದಿ: ಚಪ್ಪಲಿ ತೆಗೆದು ಅಭಿಮಾನಿಗಳಿಂದ ಅಪ್ಪುಗೆ ಅಂತಿಮ ನಮನ- ಬಿಬಿಎಂಪಿಯಿಂದ ರಾಶಿ ರಾಶಿ ಸ್ಲಿಪ್ಪರ್ಸ್ ತೆರವು

    ವ್ಯಾಕ್ಸಿನೇಷನ್ ಹೆಚ್ಚಿಸಲು ಸಣ್ಣ ಸಣ್ಣ ತಂಡಗಳನ್ನು ರಚಿಸಲು ಸೂಚಿಸಿದ ಅವರು, ಪ್ರತಿ ಹಳ್ಳಿ, ಪಟ್ಟಣಗಳಿಗೆ ಪ್ರತ್ಯೇಕ ಕಾರ್ಯತಂತ್ರಗಳನ್ನು ರೂಪಿಸಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸಿ ಎಂದು ಮೋದಿ ಹೇಳಿದರು. ಅಲ್ಲದೇ ಪ್ರತಿ ಮನೆ ಮನೆಗೂ ತಲುಪಿ ಜನರನ್ನು ಕರೆ ತನ್ನಿ, ಅವಶ್ಯವಾದರೆನೆಗೆ ತೆರಳಿ ವ್ಯಾಕ್ಸಿನ್ ನೀಡಲು ಮೋದಿ ಸಭೆಯಲ್ಲಿ ಸೂಚನೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು

    ರೋಗ ಮತ್ತು ಶತ್ರುಗಳ ವಿರುದ್ಧ ಕಡೆಯವರೆಗೂ ಹೋರಾಡಬೇಕು, ಒಂದು ಕೋಟಿ ಡೋಸ್ ಆಯಿತು ಎಂದು ಸುಮ್ಮನೆ ಕೂರುವಂತಿಲ್ಲ ಎರಡನೇ ಡೋಸ್ ಅನ್ನು ಜನರಿಗೆ ಅಗತ್ಯವಾಗಿ ನೀಡಬೇಕು. ಈ ನಿಟ್ಟಿನಲ್ಲಿ ಜನರನ್ನು ಗುರುತಿಸಿ ವ್ಯಾಕ್ಸಿನ್ ಪಡೆಯಲು ಪ್ರೇರೆಪಿಸಲು ಮೋದಿ ಹೇಳಿದರು. ಇದನ್ನೂ ಓದಿ: ಶಿರವಾಳ ಗ್ರಾಮದ ವೃತ್ತಕ್ಕೆ ಪುನೀತ್ ಹೆಸರು ನಾಮಕರಣ

    ವ್ಯಾಕ್ಸಿನೇಷನಗೆ ಮೌಡ್ಯ ಅಡ್ಡಿ ಉಂಟು ಮಾಡುತ್ತಿದ್ದು ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ಮತ್ತು ಸ್ಥಳೀಯ ಧಾರ್ಮಿಕ ಮುಖಂಡರ ಸಹಾಯ ಪಡೆದು ವ್ಯಾಕ್ಸಿನೇಷನ್ ಹೆಚ್ಚು ಮಾಡಲು ಪ್ರಯತ್ನಿಸಿ ಎಂದ ಪ್ರಧಾನಿ ನರೇಂದ್ರ ಮೋದಿ ವಿದೇಶಗಳಲ್ಲೂ ಇದೇ ಪ್ರಯೋಗ ನಡೆದಿದೆ ಎಂದರು. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

  • ಕೊರೊನಾ ಇನ್ನೂ ಜೀವಂತವಾಗಿದೆ ನಿರ್ಲಕ್ಷ್ಯ ಬೇಡ: ಡಾ.ಮಂಜುನಾಥ್

    ಕೊರೊನಾ ಇನ್ನೂ ಜೀವಂತವಾಗಿದೆ ನಿರ್ಲಕ್ಷ್ಯ ಬೇಡ: ಡಾ.ಮಂಜುನಾಥ್

    ಬೆಂಗಳೂರು: ಕೊರೊನಾ ಮೂರನೇ ಅಲೆ ನಮ್ಮ ದೇಶಕ್ಕೆ ಇನ್ನೂ ಬಂದಿಲ್ಲ ನಿಜ. ಆದರೇ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ, ಕೊರೊನಾ ಇನ್ನೂ ಜೀವಂತವಾಗಿದೆ. ಕೇರಳದಲ್ಲಿ ಪ್ರತಿನಿತ್ಯ 6 ರಿಂದ 8 ಸಾವಿರ ಕೇಸ್‍ಗಳು ಬರುತ್ತಿದೆ. ಜನ ನಿರ್ಲಕ್ಷ್ಯ ಮಾಡಬಾರದು ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೆಶಕರಾದ ಡಾ. ಮಂಜುನಾಥ್ ಹೇಳಿದ್ದಾರೆ.

    ಈಗಾಗಲೇ ಕೊರೊನಾ ಮೂರನೇ ಅಲೆ ಬ್ರಿಟನ್, ರಷ್ಯಾ, ಅಮೆರಿಕಾ ಸೇರಿದಂತೆ ಹಲವೆಡೆ ಶುರುವಾಗಿದೆ. ರಷ್ಯಾದಲ್ಲಿ ಶೇ 75 ರಷ್ಟು ವ್ಯಾಕ್ಸಿನ್ ಆಗಿಲ್ಲದರ ಪರಿಣಾಮ ಅಲ್ಲಿ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಿದೆ. ಭಾರತಕ್ಕೂ ಮೂರನೇ ಅಲೆ ಬರುವುದು ಪಕ್ಕ, ಆದರೇ ಯಾವಾಗ ಎನ್ನುವುದನ್ನು ನಿಖರವಾಗಿ ಜ್ಯೋತಿಷ್ಯ ರೀತಿ ಹೇಳುವುದಕ್ಕೆ ಆಗುವುದಿಲ್ಲ. ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಲಾಭಿಯೊಂದಿಗೆ ಸರ್ಕಾರವೂ ಶಾಮೀಲಾಗಿತ್ತೇ: ಕಾಂಗ್ರೆಸ್ ಪ್ರಶ್ನೆ

    ಜನ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ಎಲ್ಲರೂ ವ್ಯಾಕ್ಸಿನ್ ಪಡೆಯಬೇಕು. ಇದರಿಂದ ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳವಣಿಗೆ ಆಗಲಿದೆ. ಹಾಗಂತ ವ್ಯಾಕ್ಸಿನ್ ಪಡೆದರೆ ಕೊರೊನಾ ಬರುವುದಿಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯುವತಿಯ ಹೊಟ್ಟೆಯಲ್ಲಿ ಒಂದೂವರೆ ಕೆಜಿ ಕೂದಲು – ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

    ವ್ಯಾಕ್ಸಿನ್ ಪಡೆದವರಿಗೂ ಸೋಂಕು ಬರಬಹುದು, ವ್ಯಾಕ್ಸಿನ್ ಪಡೆದವರು ಸಹ ಕೊರೊನಾದಿಂದ ಮೃತಪಟ್ಟ ದಾಖಲೆಗಳಿವೆ. ಆದರೇ ಆ ಸಂಖ್ಯೆ ಕಡಿಮೆ ಇದೆ. ಶೇ 90 ರಷ್ಟು ವ್ಯಾಕ್ಸಿನ್ ಕೊರೊನಾದಿಂದ ರಕ್ಷಣೆ ನೀಡಿದರೆ ಮಾಸ್ಕ್ ಕೊರೊನಾ ಬರದಂತೆ ತಡೆಯುವ ಒಂದೇ ಒಂದು ಅಸ್ತ್ರ. ಹಾಗಾಗಿ ಜನ ಮಾಸ್ಕ್ ಇಲ್ಲದೇ ಮನೆಯಿಂದ ಹೊರಬರಲೇ ಬಾರದು. ಕೊರೊನಾ ನಿಯಮಗಳ ಪಾಲನೆ ಮಾಡುವುದನ್ನು ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

  • ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಆರಂಭದಲ್ಲೇ ಹಿನ್ನಡೆ – ಮತ್ತಷ್ಟು ತಡ ಸಾಧ್ಯತೆ

    ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಆರಂಭದಲ್ಲೇ ಹಿನ್ನಡೆ – ಮತ್ತಷ್ಟು ತಡ ಸಾಧ್ಯತೆ

    ನವದೆಹಲಿ: ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ಮಕ್ಕಳಿಗೂ ನೀಡಬಹುದು ಎಂದು  ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ತಜ್ಞರು ಶಿಫಾರಸು ಮಾಡಿದ ಬಳಿಕವೂ ಅನುಮತಿ ನೀಡಲು ಭಾರತಿಯ ಔಷಧ ನಿಯಂತ್ರಣ ಪ್ರಾಧಿಕಾರ(ಡಿಸಿಜಿಐ) ಹಿಂದೇಟು ಹಾಕಿದೆ.

    ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ ಈ ನಡೆ ಮಕ್ಕಳ ಲಸಿಕೆ ವಿಚಾರದಲ್ಲಿ ಆರಂಭಿಕ ಹಿನ್ನಡೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಡಿಸಿಜಿಐ ಅನುಮತಿ ವಿಳಂಬ ಮಾಡುತ್ತಿರುವ ಹಿನ್ನಲೆ ಮಕ್ಕಳಿಗೆ ಲಸಿಕೆ ನೀಡುವ ಸಮಯ ಮತ್ತಷ್ಟು ವಿಳಂಬವಾಗಬಹುದು ಎನ್ನಲಾಗುತ್ತಿದೆ. ಇದನ್ನೂ ಓದಿ: ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಿದ ಭಾರತ – ಶಕ್ತಿಶಾಲಿ ಹೆರಾನ್ ಡ್ರೋನ್ ನಿಯೋಜನೆ

    ಸಾಧಾರಣವಾಗಿ ಸಿಡಿಎಸ್‍ಸಿಒ ತಜ್ಞರು ಶಿಫಾರಸು ಮಾಡಿದ ಎರಡು, ಮೂರು ದಿನಗಳಲ್ಲಿ ವ್ಯಾಕ್ಸಿನ್ ಬಳಕೆಗೆ ಡಿಸಿಜಿಐ ಅನುಮತಿ ನೀಡುತ್ತಿತ್ತು. ಆದರೆ ಈ ಬಾರಿ ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ಗಂಭೀರವಾಗಿರುವ ಡಿಸಿಜಿಐ ವಾರ ಕಳೆದರೂ ಅನುಮತಿ ನೀಡಲು ಇನ್ನೂ ತೀರ್ಮಾನಿಸಿಲ್ಲ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

    ಮೂಲಗಳ ಪ್ರಕಾರ ಮಕ್ಕಳ ವ್ಯಾಕ್ಸಿನ್ ವಿಚಾರದಲ್ಲಿ ತಜ್ಞರ ಶಿಫಾರಸು ಬಳಿಕವೂ ಡಿಸಿಜಿಐ ಹೆಚ್ಚುವರಿ ತಾಂತ್ರಿಕ ವರದಿ ಪಡೆಯುತ್ತಿದೆ ಎಂದು ವರದಿಯಾಗಿದೆ. ಮೊದಲ ಬಾರಿಗೆ 2-18 ವರ್ಷದೊಳಗಿನ ಮಕ್ಕಳಿಗೆ ಭಾರತೀಯ ವ್ಯಾಕ್ಸಿನ್ ನೀಡಲು ಅನುಮತಿ ನೀಡಲಾಗುತ್ತಿದೆ. ಈ ಹಿನ್ನಲೆ ತಪ್ಪುಗಳು ಆಗದಂತೆ ಎಚ್ಚರಿಕೆ ವಹಿಸಲು ಮತ್ತಷ್ಟು ಮಾಹಿತಿ ಸಂಗ್ರಹ ಮಾಡಲು ತೀರ್ಮಾನಿಸಿದ್ದು, ಪೂರ್ಣ ವರದಿಯ ಬಳಿಕ ಡಿಸಿಜಿಐನಿಂದ ಅನುಮತಿ ನೀಡುವ ಸಾಧ್ಯತೆ ಇದೆ.

  • ಸಾಮಾನ್ಯ ಶೀತವಾಗಲಿದೆ ಕೊರೊನಾ ವೈರಸ್ – ತಜ್ಞರ ಭವಿಷ್ಯ

    ಸಾಮಾನ್ಯ ಶೀತವಾಗಲಿದೆ ಕೊರೊನಾ ವೈರಸ್ – ತಜ್ಞರ ಭವಿಷ್ಯ

    ನವದೆಹಲಿ: ಕೋಟ್ಯಾಂತರ ಜನರ ಮೈ ಹೊಕ್ಕು, ಲಕ್ಷಾಂತರ ಜನರ ಸಾವಿಗೆ ಕಾರಣವಾದ ಕೊರೊನಾ ವೈರಸ್ ಅಂತ್ಯ ಕಾಲ ಸನ್ನಿಹಿತವಾಗಿದ್ದು, ಮುಂದಿನ ವರ್ಷದ ವೇಳೆಗೆ ಇದು ಸಾಮಾನ್ಯ ಶೀತವಾಗಿ ಬದಲಾಗಲಿದೆ ಎಂದು ಅಂತರಾಷ್ಟ್ರೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಮಾನಮರ್ಯಾದೆ ಇಲ್ಲದ ಸರ್ಕಾರದ ವಿರುದ್ಧ ಜನರ ಧ್ವನಿಯಾಗಿ ಹೋರಾಟ: ಡಿ.ಕೆ ಶಿವಕುಮಾರ್

    ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಪ್ರಾಧ್ಯಾಪಕ ಪ್ರೊಫೆಸರ್ ಸರ್ ಜಾನ್ ಬೆಲ್ ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದು, ವಿಶ್ವದ್ಯಾಂತ ವ್ಯಾಕ್ಸಿನ್ ಹಂಚಿಕೆಯಾಗುತ್ತಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇದರಿಂದ ಅದು ದೇಹಕ್ಕೆ ಹೆಚ್ಚು ಹಾನಿ ಮಾಡದ ಶೀತವಾಗಿ ಬದಲಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಆಯ್ಕೆಗೆ ಇನ್ನೊಂದು ಚಾನ್ಸ್ ಕಲ್ಪಿಸಿಕೊಡಬಹುದು ಐಪಿಎಲ್?

    ಆರು ತಿಂಗಳ ಹಿಂದೆಗೆ ಹೋಲಿಸಿಕೊಂಡರೆ ಈಗ ಬಹಳಷ್ಟು ಪರಿಸ್ಥಿತಿ ಸುಧಾರಿಸಿದೆ. ಚಳಿಗಾಲದ ಬಳಿಕ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬರಬಹುದು. ಆದರೆ ರೂಪಾಂತರಿ ವೈರಸ್ ತಳಿಯ ಬಗ್ಗೆ ಜಾಗೃತಿ ಮುಂದುವರಿಯಬೇಕಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಇದನ್ನೂ ಓದಿ: ಬರ್ತ್‍ಡೇ ಕ್ಯಾಂಡಲ್ ಉದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

    ಎರಡು ಡೋಸ್ ಲಸಿಕೆ ಪಡೆದ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು, ಬಲಿಷ್ಠ ಹಿಡಿತ ಹೊಂದಿದೆ. ಈಗ ವ್ಯಾಕ್ಸಿನ್ ಮಾರುಕಟ್ಟೆ ವಿಸ್ತಾರವಾಗಿದ್ದು, ಎಲ್ಲ ಕಡೆಗೆ ಲಭ್ಯವಾಗಿದೆ. ಹೀಗಾಗಿ ಕೊರೊನಾ ಇನ್ಮುಂದೆ ಹೆಚ್ಚು ಬಾಧಿಸದು, ಅವಶ್ಯಕತೆ ಬಂದಲ್ಲಿ ಬೂಸ್ಟರ್ ಶಾಟ್‍ಗೂ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿವಾದ – ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

  • ಲಸಿಕೆ ಪಡೆದವರಿಗೆ ನವೆಂಬರ್‌ನಿಂದ ಅಮೆರಿಕಾ ಪ್ರಯಾಣಕ್ಕೆ ಅವಕಾಶ

    ಲಸಿಕೆ ಪಡೆದವರಿಗೆ ನವೆಂಬರ್‌ನಿಂದ ಅಮೆರಿಕಾ ಪ್ರಯಾಣಕ್ಕೆ ಅವಕಾಶ

    ವಾಷಿಂಗ್ಟನ್: ಅಮೇರಿಕಾ ಪ್ರವಾಸಕ್ಕೆ ಹೋಗಲು ಪ್ಲಾನ್ ಹೊಂದಿರುವವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಕೊರೊನಾ ಸಾಂಕ್ರಮಿಕ ರೋಗದಿಂದಾಗಿ ಹೇರಲಾಗಿದ್ದ ನಿರ್ಬಂಧವನ್ನು ಇದೀಗ ದೇಶವು ಸಡಿಲಗೊಳಿಸಲಾಗಿದ್ದು, ಸಂಪೂರ್ಣ ವ್ಯಾಕ್ಸಿನ್ ಪಡೆದಿರುವವರು ನವೆಂಬರ್‌ನಿಂದ ಯುಎಸ್‍ಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.

    ಭಾರತದಿಂದ ಅಮೇರಿಕಾಗೆ ಪ್ರಯಾಣಿಸುವ ಪ್ರಯಾಣಿಕರು ಇನ್ನೂ ಮುಂದೆ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರದ ಜೊತೆಗೆ ಯುಎಸ್‍ಗೆ ಪ್ರಯಾಣಿಸಬಹುದಾಗಿದೆ ಎಂದು ವೈಟ್ ಹೌಸ್ ಅಧಿಕಾರಿಗಳು ತಿಳಿಸಿದ್ದಾರೆ. 2020 ಆರಂಭದಲ್ಲಿ ಕೊರೊನಾ ವೈರಸ್‍ನಿಂದಾಗಿ ಅಮೇರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಯುಎಸ್‍ಗೆ ವಿದೇಶಿ ಪ್ರಯಾಣಿಕರ ಪ್ರವೇಶವನ್ನು ನಿಷೇಧಿಸಿದ್ದರು. ಇದೀಗ ಈ ನಿಯಮಾವಳಿಗಳು ಬದಲಾಗಿದೆ. ಇದನ್ನೂ ಓದಿ: ಕಾಲಿನಲ್ಲಿ ತುಳಿಯುವುದಲ್ಲದೆ ನೆಕ್ಕಿ ರಸ್ಕ್ ಪ್ಯಾಕ್ – ವೀಡಿಯೋ ವೈರಲ್

    ಈ ಬಗ್ಗೆ ಜೆಫ್ ಜೈಂಟ್ಸ್ ವರ್ಚುವಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾವು ಅಂತರಾಷ್ಟ್ರೀಯ ವಿಮಾನ ಪ್ರಯಾಣ ವ್ಯವಸ್ಥೆಯ ಬಗ್ಗೆ ಘೋಷಿಸುತ್ತಿದ್ದೇವೆ. ಈ ವ್ಯವಸ್ಥೆಯು ಯುನೈಟೆಡ್ ಸ್ಟೇಟ್‍ಗೆ ಆಗಮಿಸುವ ಪ್ರಯಾಣಿಕರ ಮೇಲೆ ಕೋವಿಡ್-19 ಹರಡುವಿಕೆಯನ್ನು ತಡೆಯಲು ಕೆಲವು ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದು ಅಮೇರಿಕರನ್ನು ರಕ್ಷಿಸುವುದರ ಜೊತೆಗೆ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ಸುರಕ್ಷಿವಾಗಿರಿಸುತ್ತದೆ. ನವೆಂಬರ್ ನಿಂದ ಅಮೇರಿಕಾಕ್ಕೆ ಪ್ರಯಾಣಿಸುವವರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವುದನ್ನು ಖಡ್ಡಾಯವಾಗಿದೆ. ಯುಎಸ್‍ಗೆ ಹೋಗುವ ವಿಮಾನ ಹತ್ತುವ ಮುನ್ನ ಕೋವಿಡ್-19 ಲಸಿಕೆ ಪಡೆದಿದಕ್ಕೆ ಪುರಾವೆಗಳನ್ನು ತೋರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ ಸೆ.24 ರ ವರೆಗೆ ಭಾರೀ ಮಳೆ ಸಾಧ್ಯತೆ

  • 30 ನಿಮಿಷದಲ್ಲಿ 2 ಡೋಸ್ ವ್ಯಾಕ್ಸಿನ್ ಪಡೆದ 84ರ ವೃದ್ಧೆ

    30 ನಿಮಿಷದಲ್ಲಿ 2 ಡೋಸ್ ವ್ಯಾಕ್ಸಿನ್ ಪಡೆದ 84ರ ವೃದ್ಧೆ

    ತಿರುವನಂತಪುರ: 84 ವರ್ಷದ ಕೇರಳದ ವೃದ್ಧೆ 30 ನಿಮಿಷಗಳ ಅಂತರದಲ್ಲಿ ಎರಡು ಡೋಸ್ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿರುವ ಘಟನೆ ಎರ್ನಾಕುಲಂ ಜಿಲ್ಲೆಯ ಅಲುವಾಡದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ವ್ಯಾಕ್ಸಿನ್ ಪಡೆಯಲು ತನ್ನ ಮಗನೊಂದಿಗೆ ಹೊರಟಿದ್ದ ತಾಂಡಮ್ಮ ಪಪ್ಪು, ನನಗೆ ಮೊದಲ ಡೋಸ್ ನೀಡಲಾಯಿತು. ಹಾಗಾಗಿ ನಾನು ಕೊಠಡಿಯಿಂದ ಹಿಂದಿರುಗಿ ಹೊರಗೆ ನಿಂತಿದ್ದೆ. ಈ ವೇಳೆ ನಾನು ನನ್ನ ಪಾದರಕ್ಷೆಯನ್ನು ಮರೆತಿದ್ದೇನೆ ಎಂದು ನನ್ನ ಮಗನಿಗೆ ಹೇಳಿ. ಪಾದರಕ್ಷೆಯನ್ನು ತೆಗೆದುಕೊಳ್ಳಲು ಹೋಗಿದ್ದೆ. ಆಗ ಮಹಿಳಾ ಅಧಿಕಾರಿಯೊಬ್ಬರು ಪಾದರಕ್ಷೆಗಳನ್ನು ಬಿಟ್ಟು ಒಳಗೆ ಬರುವಂತೆ ಹೇಳಿದರು. ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

    ಈ ವೇಳೆ ನಾನು ಏನು ಹೇಳುತ್ತಿದ್ದೇನೆ ಎಂದು ಕೂಡ ಕೇಳದೇ ಒಳಗೆ ಕರೆದುಕೊಂಡು ಹೋಗಿ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ತಿಳಿಸಿದರು. ನಾನು ಇನ್ನೇನು ಕುಳಿತುಕೊಳ್ಳುತ್ತಿದ್ದಂತೆಯೇ ಇನ್ನೋರ್ವ ಮಹಿಳೆ ಬಂದು ನನಗೆ ಎರಡನೇ ಡೋಸ್ ಲಸಿಕೆ ನೀಡಿದ್ದಾರೆ. ನಂತರ ಈಗಾಗಲೇ ನಾನು ಲಸಿಕೆ ಪಡೆದುಕೊಂಡಿರುವುದಾಗಿ ಪದೇ, ಪದೇ ಹೇಳಿದ ಬಳಿಕ ಒಂದು ಗಂಟೆಗಳ ಕಾಲ ನನ್ನನ್ನು ಕೋಣೆಯೊಳಗೆ ಕುಳಿತುಕೊಳ್ಳುವಂತೆ ಹೇಳಿದರು. ಎಲ್ಲವೂ ಸರಿಯಾಗಿದೆ ಎಂದು ವೈದ್ಯರು ಖಚಿತ ಪಡಿಸಿದ ನಂತರ ಮರಳಿ ಹೋಗಲು ನನಗೆ ಅನುಮತಿ ನೀಡಿದರು ಎಂದಿದ್ದಾರೆ.

    ಈ ಘಟನೆ ನಂತರ ವೃದ್ಧೆ ಹೇಗಿದ್ದಾಳೆ ಎಂದು ತಿಳಿದುಕೊಳ್ಳಲು ಆರೋಗ್ಯ ಅಧಿಕಾರಿಗಳು ಕೆಲವು ಬಾರಿ ಮಹಿಳೆಯನ್ನು ಕರೆಸಿಕೊಂಡು ಪರೀಕ್ಷೆ ನಡೆಸಿದ್ದಾರೆ. ಆಗ ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ ಎಂದಿರುವುದಾಗಿ ವೃದ್ಧೆ ತಿಳಿಸಿದ್ದಾರೆ. ಇದನ್ನೂ ಓದಿ: ದಳ ತೊರೆದು ಕೈ ಹಿಡಿಯಲು ನಿರ್ಧರಿಸಿದ ಕೋಲಾರ ಶಾಸಕ ಶ್ರೀನಿವಾಸಗೌಡ

  • ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

    ಲಸಿಕೆಯಲ್ಲಿ ಭಾರತದ ವಿಶ್ವ ದಾಖಲೆ ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ: ಮೋದಿ

    ಪಣಜಿ: ಭಾರತವು ಲಸಿಕೆಯಲ್ಲಿ ವಿಶ್ವ ದಾಖಲೆಯನ್ನು ನಿರ್ಮಿಸುತ್ತಿರುವುದನ್ನು ನೋಡಿ ರಾಜಕೀಯ ಪಕ್ಷಕ್ಕೆ ಜ್ವರ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ್ದಾರೆ.

    ಲಸಿಕೆ ಪಡೆದ ನಂತರ ಜ್ವರ ಬಂದರೆ ಅದನ್ನು ಅಡ್ಡ ಪರಿಣಾಮವೆಂದು ಜನರು ಕರೆಯುತ್ತಾರೆ. ನನ್ನ ಜನ್ಮದಿನದಂದು 2.5 ಕೋಟಿ ಭಾರತೀಯರಿಗೆ ಲಸಿಕೆ ನೀಡಲಾಗಿದೆ. ಇದನ್ನು ನೋಡಿ ರಾಜಕೀಯ ಪಕ್ಷವೊಂದಕ್ಕೆ ಜ್ವರ ಬಂದಿದೆ ಎನ್ನುವ ಮೂಲಕ ವಿಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.  ಇದನ್ನೂ ಓದಿ: ಮೋದಿ ಬಗ್ಗೆ ಸ್ವಾಮಿ ವ್ಯಂಗ್ಯ – ಕುದುರೆಗೆ ನೀರು ಕುಡಿಯುವಂತೆ ಮಾಡೋದು ಹೇಗೆ?

    ನನ್ನ 71ನೇ ಜನ್ಮದಿನದಂದು 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಲಾಗಿದೆ. ಇದು ನನಗೆ ಮರೆಯಲಾಗದ ಹಾಗೂ ಭಾವನಾತ್ಮಕ ದಿನವೆಂದು ನರೇಂದ್ರ ಮೋದಿ ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರನ್ನು ಸ್ಮರಿಸಿರುವ ಮೋದಿ, ನಿಮ್ಮ ಪ್ರಯತ್ನಗಳಿಂದ ಭಾರತ ಒಂದೇ ದಿನದಲ್ಲಿ 2.5 ಕೋಟಿ ಲಸಿಕೆ ಡೋಸ್‍ಗಳನ್ನು ನೀಡಿ ವಿಶ್ವ ದಾಖಲೆ ಮಾಡಿದೆ. ಈ ಸಾಧನೆಯನ್ನು ಬಲಿಷ್ಠ ರಾಷ್ಟ್ರಗಳು ಸಹ ಮಾಡಲಾಗಲಿಲ್ಲ ಎಂದು ಹೇಳಿದ್ದಾರೆ.  ಇದನ್ನೂ ಓದಿ: ನಾಯಕತ್ವ ಬದಲಾವಣೆಗೆ ಮುಂದಾದ ಕಾಂಗ್ರೆಸ್- ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ರಾಜೀನಾಮೆ?

    ದೇಶವು ನಿನ್ನೆ ಕೋವಿನ್ ಡ್ಯಾಶ್‍ಬೋರ್ಡ್ ಅನ್ನು ಹೇಗೆ ನೋಡಿತು ಎಂಬುದು ನನಗೆ ಗೊತ್ತು. ಪ್ರತಿ ಗಂಟೆಗೆ 15 ಲಕ್ಷಕ್ಕೂ ಹೆಚ್ಚು ಲಸಿಕೆ, ಪ್ರತಿ ನಿಮಿಷಕ್ಕೆ 26 ಸಾವಿರ ವ್ಯಾಕ್ಸಿನೇಷನ್‍ಗಳು ನಿನ್ನೆ ನಡೆದಿದೆ. ಈ ಪ್ರಯತ್ನಕ್ಕಾಗಿ ದೇಶದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಡಳಿತದಲ್ಲಿರುವ ಜನರನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಈ ಕೆಲಸ ದೇಶದ ಮಾನವಶಕ್ತಿಯನ್ನು ದೇಶದ ಶಕ್ತಿಯನ್ನು ಜಗತ್ತಿಗೆ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಜನ್ಮದಿನಗಳು ಬಂದು ಹೋಗುತ್ತವೆ. ನಾನು ಇಂತಹ ವಿಷಯಗಳಿಂದ ದೂರ ಉಳಿದಿದ್ದೇನೆ. ಈ ಬಾರಿಯ ಜನ್ಮದಿನವನ್ನು ಮಾತ್ರ ಎಂದಿಗೂ ಮರೆಯಲಾರೆ ಎಂದು ಭಾವನಾತ್ಮಕವಾಗಿ ಮೋದಿ ತಿಳಿಸಿದ್ದಾರೆ.

     

  • ಕೊರೊನಾ 3ನೇ ಅಲೆ ಯಾವ ಸಮಯದಲ್ಲಾದರೂ ಬರಬಹುದು : ಮಂಡ್ಯ ಡಿಎಚ್‍ಓ ಧನಂಜಯ್

    ಕೊರೊನಾ 3ನೇ ಅಲೆ ಯಾವ ಸಮಯದಲ್ಲಾದರೂ ಬರಬಹುದು : ಮಂಡ್ಯ ಡಿಎಚ್‍ಓ ಧನಂಜಯ್

    ಮಂಡ್ಯ: ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ ನಮಗೆ ಕೊರೊನಾ ಬರುವುದಿಲ್ಲ ಎಂದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಬೇಡಿ, ಮೂರನೇ ಅಲೆ ಯಾವ ಸಮಯದಲ್ಲಿ ಆದರು ಬರಬಹುದು ಎಂದು ಮಂಡ್ಯ ಡಿಎಚ್‍ಓ ಧನಂಜಯ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜನರು ಕೊರೊನಾ ಮೊದಲನೇ, ಎರಡನೇ ಅಲೆ ಆಯ್ತು ಮೂರನೇ ಅಲೆ ಬರುವುದಿಲ್ಲ ಬಂದರು ನಾವು ವ್ಯಾಕ್ಸಿನ್ ಹಾಕಿಸಿಕೊಂಡಿದ್ದೇವೆ ನಮಗೆ ಬರುವುದಿಲ್ಲ ಎಂದು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಬೇಜವಾಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡರೆ ಕೊರೊನಾ ಬರುವುದಿಲ್ಲ ಎಂದು ತಿಳಿಯುವುದು ತಪ್ಪು ತಿಳುವಳಿಕೆ, ಲಸಿಕೆ ಪಡೆದರು ಸಹ ಕೊರೊನಾ ಬರುತ್ತದೆ. ವ್ಯಾಕ್ಸಿನ್ ನೀಡಿರುವುದು ಕೊರೊನಾದ ತೀವ್ರತೆ ಕಡಿಮೆಯಾಗಲಿ ಎಂದು, ಕೊರೊನಾ ಬರುವುದಿಲ್ಲ ಎಂದಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಬಡ ರೈತನ ಸಂಕಷ್ಟಕ್ಕೆ ಮಿಡಿದ ಜ್ಯೋತಿಷಿ ಹೃದಯ- ಎತ್ತುಗಳ ಕೊಡುಗೆ

    ಈಗಾಗಲೇ ವಿದೇಶಗಳಲ್ಲಿ ಕೊರೊನಾದ ಮೂರನೇ ಅಲೆಯ ತೀವ್ರತೆ ಹೆಚ್ಚಾಗಿದೆ, ನಮ್ಮಲ್ಲೂ ಯಾವಾಗ ಬೇಕಾದರೂ ಮೂರನೇ ಅಲೆ ಕಾಣಿಕೊಳ್ಳಬಹುದು. ಹೀಗಾಗಿ ದೇಶದಲ್ಲಿ ವ್ಯಾಕ್ಸಿನ್ ನೀಡುವುದನ್ನು ಹೆಚ್ಚಿಸಲಾಗಿದೆ. ಜನರು ಸಹ ಲಸಿಕೆ ತೆಗೆದುಕೊಂಡ ನಂತರವೂ ಕೊರೊನಾ ನಿಯಮಗಳನ್ನು ಪಾಲಿಸಬೇಕು. ಅನಗತ್ಯವಾಗಿ ಗುಂಪು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ಮಾಡುವುದು ಬೇಡಾ, ಒಂದು ವೇಳೆ ಹಾಗೆ ಮಾಡಿದಲ್ಲಿ ಸಾವು-ನೋವುಗಳ ಪ್ರಮಾಣ ಹೆಚ್ಚುತ್ತವೆ. ವಿಶ್ವ ಸಂಸ್ಥೆ ಕೊರೊನಾ ಸಾಂಕ್ರಾಮಿಕ ರೋಗ ಅಲ್ಲ ಎಂದು ಹೇಳುವವರೆಗೂ ಎಚ್ಚರಿಕೆಯಿಂದ ಇರಬೇಕು ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಬೆಲೆ ಏರಿಕೆ ಅನಿವಾರ್ಯ, ಖಜಾನೆ ತುಂಬಲು ಬೆಲೆ ಹೆಚ್ಚಳ ಮಾಡಲೇಬೇಕಾಗುತ್ತೆ: ಎಚ್‍ಡಿಕೆ