ಬೆಂಗಳೂರು: ನಾಯಿಗಳಿಂದ ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಬಿಬಿಎಂಪಿಯು (BBMP) 5 ಕೋಟಿ ರೂ. ವೆಚ್ಚದಲ್ಲಿ ಬೀದಿನಾಯಿಗಳಿಗೆ (Streetdogs) ವ್ಯಾಕ್ಸಿನ್ (Vaccine) ನೀಡಲು ಪ್ಲ್ಯಾನ್ ಮಾಡಿದೆ.
ಬೀದಿ ನಾಯಿಗಳನ್ನು ಮಾರಣಾಂತಿಕ ಕಾಯಿಲೆಯಿಂದ ರಕ್ಷಿಸಲು ಹಾಗೂ ಮನುಷ್ಯರಿಗೂ ಈ ಕಾಯಿಲೆ ಹರಡದಂತೆ ತಡೆಗಟ್ಟಲು ವ್ಯಾಕ್ಸಿನ್ ನೀಡಲು ಮುಂದಾಗಿದೆ. ಬಿಬಿಎಂಪಿಯು 1.84 ಲಕ್ಷ ಬೀದಿ ನಾಯಿಗಳಿಗೆ ವ್ಯಾಕ್ಸಿನ್ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದನ್ನೂ ಓದಿ : ಕಳ್ಳರ ಹಾವಳಿಗೆ ಒನಕೆ ಒಬವ್ವನ ರೂಪ ತಾಳಿದ ಮಹಿಳೆಯರು – ರಾತ್ರಿ ಗಸ್ತು ಸಂಚಾರ
ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ರೀತಿಯ ಕ್ರಮಕ್ಕೆ ಮುಂದಾಗಿದೆ. ವ್ಯಾಕ್ಸಿನ್ ಮತ್ತು ಕೋಲ್ಡ್ ಸ್ಟೋರೇಜ್‌ಗಾಗಿ 4.98 ಕೋಟಿ ರೂ. ಖರ್ಚು ಮಾಡುತ್ತಿದೆ. ಪಶುಪಾಲನಾ ವಿಭಾಗವು ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳಿಗೆ ಸಂತಾನಹರಣ ಶ ಹಾಗೂ ರೇಬೀಸ್ ರೋಗ ನಿರೋಧಕ ಲಸಿಕೆಯನ್ನು ನಿಯಮಾನುಸಾರ ನಿರ್ವಹಣೆ ಮಾಡಲಿದೆ ಎಂದು ತಿಳಿಸಿದೆ. ಇದನ್ನೂ ಓದಿ : ಮೈಕ್ರೋ ಫೈನಾನ್ಸ್ ವಿರುದ್ಧ ಸುಗ್ರೀವಾಜ್ಞೆ – ಸಿಎಂ, ಸಚಿವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ
ಬೆಂಗಳೂರು/ಉಡುಪಿ: ಮಂಗನ ಕಾಯಿಲೆಗೆ (KFD) ಹೊಸ ವ್ಯಾಕ್ಸಿನ್ ಕುರಿತು ಐಸಿಎಂಆರ್ (ICMR) ಜೊತೆ ಚರ್ಚೆ ನಡೆಸಲಾಗಿದ್ದು, ವ್ಯಾಕ್ಸಿನ್ (Vaccine) ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಉಡುಪಿಯಲ್ಲಿ (Udupi) ಇಂದು ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ. ಮಾರ್ಚ್‌ವರೆಗೆ ಜನ ಬಹಳ ಎಚ್ಚರಿಕೆಯಿಂದ ಇರಬೇಕು. ಲಕ್ಷಣಗಳು ಬಂದ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮಂಗನ ಕಾಯಿಲೆಗೆ ಎಬಿಎಆರ್‌ಕೆ ಫಂಡ್‌ನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಕೆಎಫ್‌ಡಿ ಪಾಸಿಟಿವ್ ಬಂದವರನ್ನು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮದ ಕವಚದ ಒಳಗೆ ಪಾಪ, ಅನ್ಯಾಯದ ಕೆಲಸ ಬಿಜೆಪಿ ಮಾಡುತ್ತಿದೆ: ದಿನೇಶ್ ಗುಂಡೂರಾವ್
ರಾಜ್ಯದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಒಟ್ಟು 70 ಕೆಎಫ್‌ಡಿ ಪ್ರಕರಣ ದಾಖಲಾಗಿವೆ. ಹಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 20 ಸಕ್ರಿಯ ಪ್ರಕರಣಗಳು ಇವೆ. ಇಬ್ಬರು ಸಾವಿಗೀಡಾಗಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡುವುದಾಗಿ ಹೇಳಿದರು. ಇದನ್ನೂ ಓದಿ: ದೇಶಕ್ಕೆ ಒಂದೇ ಸಂವಿಧಾನ ಬೇಕೆಂಬ ಕನಸು ಸಾಕಾರಗೊಂಡಿದೆ – ಮೋದಿ ಬಣ್ಣನೆ
ಸಾವು ಆಗದೆ ಇರುವ ಬಗ್ಗೆ ಮುನ್ನೆಚ್ಚರಿಕೆ ಕಾರ್ಯಕ್ರಮ ಕೈಗೊಳ್ಳಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಿಂದೆ ಇರುವ ವ್ಯಾಕ್ಸಿನ್ ಬಳಕೆ ಮಾಡಬೇಡಿ ಎಂದು ಸೂಚಿಸಲಾಗಿದೆ. ಹೊಸ ವ್ಯಾಕ್ಸಿನ್ ಬಗ್ಗೆ ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದೆ. ಐಸಿಎಂಆರ್‌ನವರು ವ್ಯಾಕ್ಸಿನ್ ತಯಾರಿಕೆಗೆ ಒಪ್ಪಿಗೆ ನೀಡಿದ್ದು, ಹೈದರಾಬಾದ್ ಸಂಸ್ಥೆ ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸುತ್ತದೆ. ಮುಂದಿನ ವರ್ಷಕ್ಕೆ ಮಂಗನ ಕಾಯಿಲೆಗೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ರಾಮಮಂದಿರ ಮುಂದಿನ ತಲೆಮಾರಿಗೆ ಹೆಮ್ಮೆಯ ಸಂಕೇತ: ಮೋದಿ
ಉಣ್ಣೆ ಕಡಿತವನ್ನು ತಡೆಗಟ್ಟಲು ಬಳಸಲಾಗುವ ಡಿಇಪಿಎ ತೈಲವನ್ನು ಸಾರ್ವಜನಿಕರಿಗೆ ಬಳಸಲು ಉಚಿತವಾಗಿ ನೀಡಲಾಗಿದೆ. ರಾಜ್ಯಮಟ್ಟದಿಂದ ಈವರೆಗೆ 62794 ಡಿಇಪಿಎ ಬಾಟಲ್‌ಗಳನ್ನು ವಿತರಿಲಾಗಿದೆ. ರಾಜ್ಯ ಮಟ್ಟದಿಂದ ಅಧಿಕಾರಿಗಳು, ಆರ್‌ಆರ್‌ಟಿ ನಿಯಮಿತವಾಗಿ ಭೇಟಿ ನೀಡುತ್ತಿದ್ದು ಸಮಯೋಚಿತ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಪ್ರತಿ ದಿನ ವಿ.ಸಿ. ಮುಖೇನ ಸದರಿ ಕಾರ್ಯ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನಡೆಸಲಾಗುತ್ತಿದೆ. ವಿಡಿಎಲ್ ಶಿವಮೊಗ್ಗ ಮತ್ತು ಎಮ್‌ಐವಿ ಮಣಿಪಾಲದಲ್ಲಿನ ಪ್ರಯೋಗಾಲಯಗಳನ್ನು ಕೆಎಫ್‌ಡಿ ಪರೀಕ್ಷೆಗೆ ಗುರುತಿಸಲಾಗಿದ್ದು, ಶೀಘ್ರವಾಗಿ ಮಾದರಿಗಳನ್ನು ಸಂಸ್ಕರಿಸಿ ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ. ಕೆಎಫ್‌ಡಿ ಪಾಸಿಟಿವ್ ಪ್ರಕರಣಗಳನ್ನು ಮನೆಯಿಂದ ಆಸ್ಪತ್ರೆಗೆ ಸಾಗಿಸಲು ಮತ್ತು ಅಗತ್ಯವಿದ್ದರೆ, ಉನ್ನತ ರೆಫರಲ್ ಸೆಂಟರ್ ಸಾಗಿಸಲು ಉಚಿತ ಅಂಬುಲೆನ್ಸ್ ಸೌಲಭ್ಯ ಒದಗಿಸಿದೆ. ರೋಗ ಪ್ರಸರಣಾ ಋತುವಿನಲ್ಲಿ ತಾಲೂಕು ಆಸ್ಪತ್ರೆಗಳಾದ ಜಿಸಿಎಚ್ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಕೆಎಫ್‌ಡಿಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಐಸಿಯುನಲ್ಲಿ ದಾಖಲಾಗಿರುವ ರೋಗಿಗಳ ಆರೋಗ್ಯ ಸ್ಥಿತಿಗತಿಯನ್ನು ಪ್ರತಿದಿನ ಪರೀಶೀಲಿಸಲು ಟೆಲಿ-ಐಸಿಯುಸೇವೆಯನ್ನು ಕೆಎಫ್‌ಡಿಗೂ ವಿಸ್ತರಿಸಲಾಗಿದೆ ಎಂದು ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಗುಂಡೂರಾವ್ ವಿವರಿಸಿದರು. ಇದನ್ನೂ ಓದಿ: ರಾಮನಿಲ್ಲದೆ ಭಾರತವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ: ಅಮಿತ್ ಶಾ
ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕಣಗಳು ಮತ್ತೆ ಹೆಚ್ಚುತ್ತಿರುವ ಹೊತ್ತಲ್ಲೆ ವ್ಯಾಕ್ಸಿನ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ತಯಾರಿ ಆರಂಭಗೊಂಡಿದೆ. 12-14 ವರ್ಷದ ಮಕ್ಕಳಿಗೆ ನಡೆಯುತ್ತಿರುವ ವ್ಯಾಕ್ಸಿನೇಷನ್ ಅಭಿಯಾನ ಯಶಸ್ಸು ಕಂಡ ಬಳಿಕ ಈಗ 5-12 ವರೆಗಿನ ಮಕ್ಕಳಿಗೆ ವ್ಯಾಕ್ಸಿನ್ ಅಭಿಯಾನ ವಿಸ್ತರಿಸುವ ಚಿಂತನೆ ಶುರುವಾಗಿದೆ.
ಈ ಸಂಬಂಧ ಚರ್ಚಿಸಲು ಡಿಸಿಜಿಐನ ವಿಷಯ ತಜ್ಞರ ತಂಡ ಇಂದು ವಿಶೇಷ ಸಭೆಯನ್ನು ಕರೆದಿದೆ. ಈ ಸಭೆಯಲ್ಲಿ 5-12 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಬಗ್ಗೆ ಚರ್ಚೆ ನಡೆಯಲಿದೆ. ಕಾರ್ಬೆವಾಕ್ಸ್ ವ್ಯಾಕ್ಸಿನ್ ಮಕ್ಕಳಿಗೆ ನೀಡಲು ಚರ್ಚೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ: ರೇಣುಕಾಚಾರ್ಯ ವ್ಯಂಗ್ಯ
ಜನವರಿ 3 ರಿಂದ ಭಾರತದಲ್ಲಿ ಅಪ್ರಾಪ್ತ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಮೊದಲು 15-18 ಬಳಿಕ 12-15 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಯಿತು. ಈಗ 5-12 ವರ್ಷದ ಮಕ್ಕಳಿಗೆ ಕಾರ್ಬೆವಾಕ್ಸ್ ವ್ಯಾಕ್ಸಿನ್ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಹಣದುಬ್ಬರದ ಬಗ್ಗೆ ಅರ್ಥಹೀನ ಮಾತನಾಡಿದ್ದಾರೆ: ದಿನೇಶ್ ಗುಂಡೂರಾವ್
ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಕೋವಿಡ್ -19 ಸೋಂಕುಗಳು ಹೆಚ್ಚಾದ ಬಳಿಕ ದೆಹಲಿ, ಉತ್ತರ ಪ್ರದೇಶ ಮತ್ತು ಹರಿಯಾಣ ಸೇರಿದಂತೆ ಹಲವಾರು ರಾಜ್ಯಗಳು ಮತ್ತು ಮಹಾನಗರಗಳಲ್ಲಿ ಮತ್ತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ.
ನವದೆಹಲಿ: ಕೊರೊನಾ ವಿರುದ್ಧ ಲಸಿಕಾ ಅಭಿಯಾನ ನಡೆಸುತ್ತಿರುವ ಭಾರತ ಈವರೆಗೆ 165 ಕೋಟಿ ಡೋಸ್ ಲಸಿಕೆ ನೀಡಿದೆ. ಈ ಕುರಿತಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 56 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ. ಇದರೊಂದಿಗೆ ಶನಿವಾರದ ಹೊತ್ತಿಗೆ ಭಾರತದಲ್ಲಿ 165.04 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ:ಇನ್‌ಸ್ಟಾಗ್ರಾಮ್ ನಲ್ಲಿ ಟ್ರೆಂಡ್ ಆಯ್ತು ಕಡಲೆಕಾಯಿ ಮಾರುವವನ ಹಾಡು
ಟ್ವೀಟ್‍ನಲ್ಲಿ ಏನಿದೆ?: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಕೋವಿಡ್ ವಿರುದ್ಧದ ರಾಷ್ಟ್ರದ ಸಾಮೂಹಿಕ ಹೋರಾಟದೊಂದಿಗೆ, ಭಾರತವು ಈಗ 165 ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.
ಜನವರಿ 3 ರಂದು 15ರಿಂದ 18ರ ವರೆಗಿನ ವಯಸ್ಸಿನವರಿಗೂ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈವರೆಗೆ 4.5 ಕೋಟಿ ಮಕ್ಕಳು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದ ಯುವ ಸಮುದಾಯಕ್ಕೆ ಸಚಿವ ಮಾಂಡವೀಯ ಅವರು ಇದೇ ವೇಳೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ.
ನವದೆಹಲಿ: ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಿಂದ 12 ರಿಂದ 14 ವರ್ಷದ ಮಕ್ಕಳಿಗೂ ವ್ಯಾಕ್ಸಿನ್ ನೀಡಲಾಗುವುದು ಎಂದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಕೋವಿಡ್-19 ಕಾರ್ಯನಿರತ ಗುಂಪಿನ ಅಧ್ಯಕ್ಷ ಡಾ.ಎನ್.ಕೆ ಅರೋರಾ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, 15 ರಿಂದ 17 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ಕಾರ್ಯ ಯಶಸ್ವಿಯಾಗಿದೆ. ಹಲವು ರಾಜ್ಯಗಳು ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಮೊದಲ ಡೋಸ್ ನೀಡಿವೆ. ದೇಶದ್ಯಾಂತ ಈವರೆಗೂ 3.31 ಕೋಟಿ ಮಕ್ಕಳಿಗೆ ಮೊದಲ ಡೋಸ್ ಲಸಿಕೆ ನೀಡಿದೆ. 13 ದಿನಗಳಲ್ಲಿ 45% ಮಕ್ಕಳು ವ್ಯಾಕ್ಸಿನ್ ಪಡೆದಿದ್ದು, ಜನವರಿ ಅಂತ್ಯದ ವೇಳೆಗೆ 7.4 ಕೋಟಿ ಮಕ್ಕಳಿಗೆ ಮೊದಲ ಡೋಸ್ ನೀಡುವ ಗುರಿ ಹೊಂದಿದೆ ಎಂದಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಲಾಕ್‍ಡೌನ್ ಬೇಡ- ಸರ್ಕಾರಕ್ಕೆ ಪ್ರತಾಪ್ ಸಿಂಹ ಒತ್ತಾಯ
ಮೊದಲ ಡೋಸ್ ಬಳಿಕ ಫೆಬ್ರವರಿಯಲ್ಲಿ ಎರಡನೇ ಡೋಸ್‍ಗೂ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಫೆಬ್ರವರಿ ಅಂತ್ಯದ ವೇಳೆಗೆ ಎರಡನೇ ಡೋಸ್ ಕೂಡಾ ನೀಡಲಾಗುವುದು. ಈ ಪ್ರಕ್ರಿಯೆ ಬಳಿಕ 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುವುದು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸುತ್ತಿರುವ ಆಶಾ ಭೋಂಸ್ಲೆ
ಬ್ರೆಸಿಲಿಯಾ: ಅನಾರೋಗ್ಯದಿಂದ ತಂದೆಗೆ ವ್ಯಾಕ್ಸಿನ್ ಕೊಡಿಸಲು ಮಗ 6 ಗಂಟೆಗಳ ಕಾಲ ಬೆನ್ನಿನ ಮೇಲೆ ಹೊತ್ತೊಯ್ದು, ಲಸಿಕೆ ಕೊಡಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಂದೆ, ಮಗನ ಬಾಂಧವ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬ್ರೆಜಿಲ್‍ನ ಅಮೆಜಾನ್ ಪ್ರದೇಶದಲ್ಲಿ ಮಗ ತಂದೆಯನ್ನು ಬೆನ್ನಿನ ಮೇಲೆ ಹೊತ್ತೊಯ್ದ ವ್ಯಾಕ್ಸಿನ್ ಕೊಡಿಸಿದ್ದಾನೆ. 24 ವರ್ಷದ ಟಾವಿ, 67 ವರ್ಷದ ತಂದೆ ವಹು ಅವರನ್ನು ಬರೋಬ್ಬರಿ ಆರು ಗಂಟೆಗಳ ಕಾಲ ಹೊತ್ತು ಸಾಗಿ ವ್ಯಾಕ್ಸಿನ್ ಕೊಡಿಸಿದ್ದಾನೆ. ಅದೇ ರೀತಿ ಮನೆಗೆ ವಾಪಸ್ಸಾಗುವಾಗಲೂ ಆರು ಗಂಟೆಗಳ ಕಾಲ ಹೊತ್ತು ಸಾಗಿದ್ದಾನೆ. ಇದನ್ನೂ ಓದಿ: 50 ಕೋಟಿ ರೂ. ಜಾಗತಿಕ ಕ್ರೆಡಿಟ್ ಕಾರ್ಡ್ ಹಗರಣ ಭೇದಿಸಿದ ಪೊಲೀಸರು – 7 ಜನ ಅರೆಸ್ಟ್
ಒಂದು ಫೋಟೋ ನೂರು ಕತೆಗಳನ್ನು ಹೇಳುತ್ತವೆ. ಒಂದೆಡೆ ತಂದೆ ಮತ್ತು ಮಗನ ಬಾಂಧವ್ಯವನ್ನು ವಿವರಿಸಿದರೆ ಇನ್ನೊಂದೆಡೆ ಕುಗ್ರಾಮಗಳ ಜನರು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವುದನ್ನು ತೋರಿಸುತ್ತದೆ. ವ್ಯಾಕ್ಸಿನ್ ಪಡೆಯಲು ಜನರು ಪಡುವ ಕಷ್ಟಗಳನ್ನು ತೋರಿಸುವಂತಿದೆ ಎಂದು ಬರೆದುಕೊಂಡು ಡಾ ಎರಿಕ್ ಜೆನ್ನಿಂಗ್ಸ್ ಸಿಮೊಸ್, ಎನ್ನುವವರು ಇಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.
ಯುವಕನ ತಂದೆ ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದು, ನಡೆದಾಡಲು ಸಾಧ್ಯವಾಗದೇ ಇರುವ ಕಾರಣ ಮಗ ಬೆನ್ನಿನ ಮೇಲೆ ಹೊತ್ತೊಯ್ದಿದ್ದಾರೆ. ಈ ಫೋಟೋವನ್ನು ಡಾ. ಎರಿಕ್ 2022ರ ಜನವರಿ 1 ರಂದು ಹಂಚಿಕೊಂಡಿದ್ದು, 2021ರ ಅತ್ಯುತ್ತಮ ಕ್ಷಣ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮಗನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ:ಇಂದು ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಆಗಮನ
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಮಹಾಸ್ಫೋಟ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐವರು ಶಾಸಕರ ಸಭೆ ನಡೆದಿದೆ. ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನೇತೃತ್ವ ವಹಿಸಿದ್ದು, ಕೋವಿಡ್ ತಡೆಯುವ ಮತ್ತು ಸೋಂಕಿತರಿಗೆ ಚಿಕಿತ್ಸೆ ಕೊಡುವ ಬಗ್ಗೆ ಚರ್ಚೆ ನಡೆಸಲಾಯಿತ್ತು.
ಜನಪ್ರತಿನಿಧಿ, ಅಧಿಕಾರಿಗಳು, ವೈದ್ಯರ ಸಭೆ ನಂತರ ಮಾತನಾಡಿದ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲೆಯಲ್ಲಿ 979 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 61 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲಾ ಸೋಂಕಿತರ ಮನೆಯನ್ನು ಸೀಲ್ ಮಾಡಿದ್ದೇವೆ. ಪ್ರತಿದಿನ 8 ಸಾವಿರ ಜನರ ಕೊರೊನ ಟೆಸ್ಟ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 54 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ನೀಡುವ ಗುರಿಯಿದೆ. ಇದನ್ನೂ ಓದಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ – ಫೆ.10ರಿಂದ ಮತದಾನ, ಮಾ.10ರಂದು ಮತ ಎಣಿಕೆ
ಸಂಜೆ ಬೀಚ್‍ಗೆ ಪ್ರವಾಸಿಗರನ್ನು ತಡೆಯುವ ಹಿನ್ನೆಲೆಯಲ್ಲಿ ಸಂಜೆ 7 ಗಂಟೆ ನಂತರ ಬೀಚ್ ಪ್ರವೇಶ ನಿಷೇಧ ಮಾಡುತ್ತೇವೆ ಎಂದು ಸುನಿಲ್ ಕುಮಾರ್ ಹೇಳಿದರು. ಸಂಜೆ 6:30 ನಂತರ ಬೀಚಿನಲ್ಲಿ ಪೊಲೀಸ್ ಸಿಬ್ಬಂದಿಗಳ ನೇಮಕ ಮಾಡುತ್ತೇವೆ. 7 ಗಂಟೆ ನಂತರ ಬೀಚಿನಲ್ಲಿ ವಿಹರಿಸೋದದಕ್ಕೆ ನಿರ್ಬಂಧ ಹಾಕಲಾಗುವುದು ಎಂದರು. ಇದನ್ನೂ ಓದಿ:ಪಂಜಾಬ್ ಚುನಾವಣೆ – ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆ
ಅಹಮದಾಬಾದ್: ಓಮಿಕ್ರಾನ್ ಸೋಂಕು ಹಿನ್ನಲೆಯಲ್ಲಿ ಕೊರೊನಾ ವ್ಯಾಕ್ಸಿನ್ ಪಡೆಯುವಂತೆ ಆರೋಗ್ಯ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಹೊಲ, ಗದ್ದೆ, ಗ್ರಾಮ, ಮನೆಗೆ ಹೋಗಿ ಲಸಿಕೆ ನೀಡುತ್ತಿರುವ ಆರೋಗ್ಯ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಮನೆಯಲ್ಲಿ ಕೋವಿಡ್ ನೀಡುವ ಮೂಲಕವಗಿ ಸುದ್ದಿಯಾಗಿದೆ.
ಕೋವಿಡ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆಯಬೇಕೆಂಬ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ಆರೋಗ್ಯ ಇಲಾಖೆಯ ತಂಡವು ಮದುವೆ ಮಂಟಪಗಳಿಗೆ ತೆರಳಿ ವ್ಯಾಕ್ಸಿನ್ ಪಡೆದವರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಲಸಿಕೆ ಪಡೆಯದೇ ಇರುವಂಥವರಿಗೆ ಸ್ಥಳದಲ್ಲಿಯೇ ಲಸಿಕೆ ನೀಡುವ ಕೆಲಸವನ್ನು ಮಾಡುತ್ತಿದೆ. ಇದನ್ನೂ ಓದಿ: ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆದವರಿಗೆ ಹೊಸ ಗೈಡ್‌ಲೈನ್ಸ್
Gujarat | Health Dept teams of Ahmedabad Municipal Corporation checks Covid-19 vaccine certificates & vaccinate people in marriage halls
“To complete the 2nd dose coverage, we’re checking certificates & vaccinating ppl here at the spot only,” says a health official (09.12) pic.twitter.com/jmfmVrGwA9
ಅರ್ಬನ್ ಹೆಲ್ತ್‍ಕೇರ್ ಸೆಂಟರ್ ವೈದ್ಯ ಡಾ.ಫಲ್ಗುನ್ ಈ ಕುರಿತು ಮಾತನಾಡಿ, ಎಲ್ಲರೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದ ಕುರಿತು ಪರೀಕ್ಷೆ ಮಾಡುತ್ತಿದ್ದೇವೆ. ನಗರದಲ್ಲಿ 70-80 ಹೆಲ್ತ್ ಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ನಡೆಯುವ ಮುದುವೆಗಳ ಬಗ್ಗೆ ವರದಿ ಪಡೆದು ಅಲ್ಲಿಗೆ ತೆರಳಿ ಪರೀಕ್ಷಿಸುತ್ತಿದ್ದೇವೆ ಎಂದರು.
ಈ ತಂಡಗಳು ಗುರುವಾರ ವಿವಿಧ ವಿವಾಹ ಸ್ಥಳಗಳು ಮತ್ತು ಸಮುದಾಯ ಭವನಗಳಿಗೆ ತೆರಳಿ ಪರೀಕ್ಷೆ ಮಾಡುತ್ತಿವೆ. ಆರೋಗ್ಯ ಅಧಿಕಾರಿಗಳ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಜರಾತ್‍ನಲ್ಲಿ ಗುರುವಾರ 70 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ.
ಬೆಂಗಳೂರು: ವಿದೇಶಗಳಲ್ಲಿ ಕೊರೊನಾ ಹೊಸ ರೂಪಾಂತರ ತಳಿ ಓಮಿಕ್ರಾನ್ ತನ್ನ ಆರ್ಭಟ ಶುರು ಮಾಡಿದೆ. ಈ ನಡುವೆ ರಾಜ್ಯದಲ್ಲಿ 3ನೇ ಅಲೆ ಭೀತಿಯಿಂದಾಗಿ ಜನ ವ್ಯಾಕ್ಸಿನ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಈಗಾಗಲೇ ಒಮಿಕ್ರಾನ್ ರೂಪಾಂತರಿ ವೈರಸ್ ನಿಧಾನವಾಗಿ ಅನೇಕ ದೇಶಗಳಲ್ಲಿ ಕಾಣಿಸಿಕೊಂಡು ತನ್ನ ಅಬ್ಬರವನ್ನ ಶುರು ಮಾಡಿಕೊಳ್ಳುತ್ತಿದೆ. ದಕ್ಷಿಣ ಆಪ್ರಿಕಾ, ಲಂಡನ್, ಹಾಂಕಾಂಗ್, ಕೆನಡಾ ಸೇರಿದಂತೆ ಹಲವೆಡೆ ರೂಪಾಂತರಿ ವೈರಸ್ ರೂಪ ತಾಳಿ ಅನೇಕ ಸಾವು ನೋವುಗಳನ್ನು ಉಂಟುಮಾಡುತ್ತಿದೆ.
ಈಗ ಭಾರತವೂ ಹೈ ಅಲರ್ಟ್ ಆಗಿದ್ದು ನಮ್ಮ ದೇಶಕ್ಕೆ ಈ ರೂಪಾಂತರಿ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಮೂರನೇ ಅಲೆ ಶುರುವಾಗಿರುವ ಸಾಧ್ಯತೆ ಹೆಚ್ಚಾಗಿದ್ದು, ಕೊರೊನಾ ತಡೆಯಲು ಇರುವ ಮಾರ್ಗದಲ್ಲಿ ವ್ಯಾಕ್ಸಿನ್ ಕೂಡ ಬಹಳ ಪ್ರಮುಖವಾದ ಅಸ್ತ್ರ. ಇಷ್ಟು ದಿನ ಖಾಲಿ, ಖಾಲಿಯಾಗಿದ್ದ ವ್ಯಾಕ್ಸಿನ್ ಸೆಂಟರ್‌ಗಳು ಈಗ ಹೌಸ್ ಪುಲ್ ಆಗಿದ್ದು, ಜನ ಮೂರನೇ ಅಲೆಯ ಭೀತಿಯಿಂದ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ತಡೆಗೆ ರಾಜ್ಯದಲ್ಲಿ ಕಟ್ಟೆಚ್ಚರ – ಇಂದು ಸುಧಾಕರ್ ನೇತೃತ್ವದಲ್ಲಿ ಸಭೆ
ಚಾಮರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಷ್ಟು ದಿನ 50 ರಿಂದ 60 ಜನ ಬಂದು ವ್ಯಾಕ್ಸಿನ್ ಪಡೆಯುತ್ತಿದ್ದರು. ಒಮಿಕ್ರಾನ್ ಆತಂಕ ಶುರುವಾಗಿರುವ ಕಾರಣ ಇಂದು ವ್ಯಾಕ್ಸಿನ್ ಡ್ರೈವ್ ಶುರುವಾಗಿ ಕೇವಲ 2 ಗಂಟೆಯೊಳಗೆ 120ಕ್ಕೂ ಹೆಚ್ಚು ಜನ ವ್ಯಾಕ್ಸಿನ್ ಪಡೆದಿದ್ದಾರೆ. ಇನ್ನೂ ನೂರಾರು ಜನ ವ್ಯಾಕ್ಸಿನ್ ಪಡೆಯಲು ಕ್ಯೂ ನಿಂತು ಕಾಯುತ್ತಿದ್ದಾರೆ.
ಮುಂಬೈ: ಕೋವಿಡ್ ಲಸಿಕೆ ಪಡದುಕೊಳ್ಳುವಂತೆ ಜನರನ್ನು ಉತ್ತೇಜಿಸಲು ಮಹಾರಾಷ್ಟ್ರದ ಚಂದ್ರಾಪುರ ನಗರಸಭೆ ಲಕ್ಕಿಡ್ರಾ ಬಹುಮಾನವನ್ನು ಘೋಷಿಸಿದೆ.
ಎಲ್‍ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಶೀನ್ ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಿದೆ. ನವೆಂಬರ್ 12 ರಿಂದ 24ರವರೆಗೆ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುವವರು ಈ ಉಡುಗೊರೆ ಪಡೆಯಬಹುದಾದಿದೆ. ಇದನ್ನೂ ಓದಿ ಲಸಿಕೆ ಪಡೆಯದಿದ್ದರೆ ರೇಷನ್, ಗ್ಯಾಸ್, ಪೆಟ್ರೋಲ್ ಇಲ್ಲ
ಈ ಅವಧಿಯಲ್ಲಿ ಲಸಿಕೆ ಪಡೆಯುವವರು ಲಕ್ಕಿ ಡ್ರಾನಲ್ಲಿ ಭಾಗವಹಿಸಬಹುದು. ಮೊದಲ ಬಹುಮಾನವಾಗಿ ರೆಫ್ರಿಜರೇಟರ್, 2ನೇ ಬಹುಮಾನವಾಗಿ ವಾಷಿಂಗ್ ಮಶೀನ್ ಮತ್ತು ಮೂರನೇ ಬಹುಮಾನವಾಗಿ ಎಲ್‍ಇಡಿ ಟಿವಿಗಳನ್ನು ಗೆಲ್ಲಬಹುದು. ಸಮಾಧಾನಕರ ಬಹುಮಾನವಾಗಿ 10ಜನರಿಗೆ ಮಿಕ್ಸರ್-ಗ್ರೈಂಡರ್ ನೀಡಲಾಗುವುದು ಎಂದು ಚಂದ್ರಾಪುರ ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ. ಚಂದ್ರಾಪುರದಲ್ಲಿ 1.93ಲಕ್ಷ ಜನ ಮೊದಲ ಡೋಸ್, 99000 ಜನ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಇದನ್ನೂ ಓದಿ: ಹಿಂದೂ ಪುರಾತನ ದೇವಾಲಯವನ್ನು ಪುನರ್‌ನಿರ್ಮಿಸಲು ಆದೇಶಿದ ಪಾಕ್ ನ್ಯಾಯಮೂರ್ತಿ