Tag: ವ್ಯಕ್ತಿ ಫುಟ್ ಪಾತ್

  • ಫುಟ್ ಪಾತ್ ನಲ್ಲೇ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಫುಟ್ ಪಾತ್ ನಲ್ಲೇ ಕತ್ತು ಕೊಯ್ದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ!

    ಬೆಂಗಳೂರು: ವ್ಯಕ್ತಿಯೊಬ್ಬರು ಫುಟ್ ಪಾತ್ ನಲ್ಲೇ ಕುಳಿತುಕೊಂಡು ಕತ್ತು ಕೊಯ್ಯುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳು ಯತ್ನಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು 30 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಯಾಕೆ ಎಂಬುದು ತಿಳಿದುಬಂದಿಲ್ಲ.

    ಪ್ರದೀಪ್ ಕೆಂಗೇರಿಯ ನೈಸ್ ಮುಖ್ಯ ರಸ್ತೆಯ ಹೆಮ್ಮಿಗೆಪುರ ಫುಟ್ ಪಾತ್ ಮೇಲೆ ಕುಳಿತು ಕತ್ತು ಕೊಯ್ದುಕೊಂಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಕೃತ್ಯವನ್ನು ತಡೆದು ಕೂಡಲೇ ಪ್ರದೀಪ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಪ್ರದೀಪ್ ಸ್ಥಿತಿ ಚಿಂತಾನಜಕವಾಗಿದೆ.

    ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರದೀಪ್ ಆತ್ಮಹತ್ಯೆಗೆ ಯತ್ನಿಸಿದ ಚಾಕುವನ್ನು ವಶಕ್ಕೆ ಪಡೆದಿದ್ದಾರೆ. ಈ ಚಾಕು ಫುಟ್ ಪಾತ್ ನಲ್ಲೇ ಬಿದ್ದಿತ್ತು. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv