Tag: ವ್ಯಂಗ್ಯ

  • ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

    ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

    ಚಂದ್ರಯಾನ 3 (Chandrayaan 3) ಯೋಜನೆ ಬಗ್ಗೆ ನಟ ಪ್ರಕಾಶ್ ರಾಜ್ (Prakash Raj) ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್  ಭಾರೀ ವೈರಲ್ ಆಗಿತ್ತು. ಜೊತೆಗೆ ಅನೇಕರು ಅದಕ್ಕೆ ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರು. ಇಡೀ ಭಾರತವೇ ಹೆಮ್ಮೆ ಪಡುತ್ತಿರುವಾಗ ಪ್ರಕಾಶ್ ರಾಜ್ ಈ ರೀತಿ ವ್ಯಂಗ್ಯ ಮಾಡುವುದು ಸರಿಯಲ್ಲ ಎಂದು ಹಲವರು ಬುದ್ದಿವಾದ ಹೇಳಿದ್ದರು. ನೆಗೆಟಿವ್ ಕಾಮೆಂಟ್ ಹೆಚ್ಚಾದ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ್ದರು ಪ್ರಕಾಶ್ ರಾಜ್. ಹಾಸ್ಯ ಪ್ರಜ್ಞೆ ಇಲ್ಲದವರು ಎಂದು ಟೀಕಿಸಿದ್ದರು.

    ಈ ಬೆಳವಣಿಗೆಯ ನಡುವೆಯೇ ಚಂದ್ರಯಾನ ಮತ್ತು ಭಾರತೀಯ ವಿಜ್ಞಾನಿಗಳನ್ನು ಅವಮಾನಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ (Banahatti) ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ರಾಜ್ ವಿರುದ್ದ ದೂರು (Complaint) ದಾಖಲಾಗಿದೆ. ಹಿಂದು ಸಂಘಟನೆ ಮುಖಂಡ ನಂದು ಗಾಯಕವಾಡ ಹಾಗೂ ಇತರರಿಂದ ದೂರು ಸಲ್ಲಿಸಿದ್ದಾರೆ. ನಮ್ಮ ಹೆಮ್ಮೆಯ ವಿಜ್ಞಾನಿಗಳ ಬಗ್ಗೆ ವ್ಯಂಗ್ಯವಾಗಿ ಫೋಸ್ಟ್ ಮಾಡಿ ಪ್ರಕಾಶ್ ರಾಜ್ ತಮ್ಮ ವಿಕೃತಿ ಮೆರೆದಿದ್ದಾರೆ. ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನ ಬಂಧಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಇಸ್ರೋ ಕಳುಹಿಸಿರುವ ಚಂದ್ರಯಾನ‌ ನೌಕೆಯಿಂದ ಭಾರತದ  ಶಕ್ತಿಯನ್ನು ಇಮ್ಮಡಿಗೊಳಿಸಿದ್ದಾರೆ. ಈ ಬಗ್ಗೆ ನಮ್ಮ ವಿಜ್ಞಾನಿಗಳನ್ನ ಎಲ್ಲರೂ ಹೊಗಳುತ್ತಿರುವಾಗ. ಪ್ರಕಾಶ್ ರಾಜ್ ವಿಜ್ಞಾನಿಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ ವಿಕೃತಿ ಮೆರೆದಿದ್ದಾರೆ. ಅವರ ವಿರುದ್ದ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

    ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ದ ಪ್ರಕಾಶ್ ರಾಜ್

    ಚಂದ್ರಯಾನ-3 (Chandrayaan-3) ಕುರಿತಂತೆ ಟ್ವೀಟ್ (Tweet) ಮಾಡಿ ವಿವಾದ (Controversy) ಮೈಮೇಲೆ ಎಳೆದುಕೊಂಡಿದ್ದ ದಕ್ಷಿಣ ಭಾರತದ ಹೆಸರಾಂತ ನಟ ಪ್ರಕಾಶ್ ರಾಜ್‌ ಮತ್ತೊಂದು ಟ್ವೀಟ್‌ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ, ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ, ಬಾಲಿಶವಾಗಿ ವರ್ತಿಸುವುದನ್ನ ನಿಲ್ಲಿಸಿ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.  ಚಂದ್ರಯಾನ ಇದೀಗ ಕಳುಹಿಸಿರುವ ಫೋಟೋ ಎಂದು ಕ್ಯಾಪ್ಷನ್ ನೀಡಿ ‘ಚಾಯ್‍ ವಾಲಾ’ ಫೋಟೋ ಹಾಕಿದ್ದ ಅವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ಇಡೀ ದೇಶವೇ ಹೆಮ್ಮೆ ಪಡುವಂತೆ ನಿಮ್ಮ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಜಗತ್ತೇ ಈ ಕೆಲಸಕ್ಕಾಗಿ ಕೊಂಡಾಡುತ್ತಿದೆ. ಆದರೆ ಪ್ರಕಾಶ್ ರೈ ಈ ರೀತಿ ಗೇಲಿ ಮಾಡುವುದು ಸರಿಯಲ್ಲ. ಭಾರತದ ಅಸ್ಮಿತೆಯನ್ನೇ ಪ್ರಶ್ನೆ ಮಾಡುವ ನಟನಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.  ಪ್ರಕಾಶ್ ರೈ ಅವರ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಹೆಸರಾಂತ ನಟನಾಗಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಸಬೇಕಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಪ್ರಕಾಶ್ ರೈ ಪರವಾಗಿ ಕಾಮೆಂಟ್ ಮಾಡಿದ್ದಾರೆ.

     

    ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಪ್ರಕಾಶ್‌ ರಾಜ್‌, ʻದ್ವೇಷಕ್ಕೆ ದ್ವೇಷ ಮಾತ್ರ ಕಾಣಿಸುತ್ತದೆ. ನಾನು ಉಲ್ಲೇಖಿಸಿದ್ದು ನಮ್ಮ ಕೇರಳದ ಚಾಯ್‌ವಾಲಾರನ್ನ ವಿಜೃಂಭಿಸುವ ಆರ್ಮ್‌ಸ್ಟ್ರಾಂಗ್ ಕಾಲದ ಜೋಕ್. ಟ್ರೋಲಿಗರ ಕಣ್ಣಿಗೆ ಕಾಣಿಸಿದ ಚಾಯ್‌ವಾಲಾ ಯಾರು? ನಿಮಗೆ ಜೋಕ್ ಅರ್ಥವಾಗದಿದ್ದರೆ, ಅದು ನಿಮ್ಮ ಮೇಲೆಯೇ ಮಾಡಿದ ಜೋಕ್ ಆಗುತ್ತದೆ. ಬಾಲಿಶವಾಗಿ ವರ್ತಿಸುವುದನ್ನು ನಿಲ್ಲಿಸಿʼ ಎಂದು ಸ್ಪಷ್ಟನೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜ್ಯದಲ್ಲಿ ಸರ್ಕಾರ ಇದ್ಯಾ? ಇದೆ ಎಂದು ಒಪ್ತಿರಾ? – ಮೈತ್ರಿ ಸರ್ಕಾರದ ವಿರುದ್ಧ ಈಶ್ವರಪ್ಪ ವ್ಯಂಗ್ಯ

    ರಾಜ್ಯದಲ್ಲಿ ಸರ್ಕಾರ ಇದ್ಯಾ? ಇದೆ ಎಂದು ಒಪ್ತಿರಾ? – ಮೈತ್ರಿ ಸರ್ಕಾರದ ವಿರುದ್ಧ ಈಶ್ವರಪ್ಪ ವ್ಯಂಗ್ಯ

    ಬಾಗಲಕೋಟೆ: ರಾಜ್ಯದಲ್ಲಿ ಸರ್ಕಾರ ಇದೆಯಾ, ಇದೇ ಎಂದು ನೀವು ಒಪ್ಪುತ್ತಿರಾ ಎಂದು ಪ್ರಶ್ನೆ ಮಾಡುವ ಮೂಲಕ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಅವರು ಮೈತ್ರಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಈಶ್ವರಪ್ಪ, ರೋಷನ್ ಬೇಗ್, ರಾಮಲಿಂಗಾರೆಡ್ಡಿ ಏನೇನು ಹೇಳುತ್ತಿದ್ದಾರೆ ಅದನ್ನು ನಾನು ರಿಪೀಟ್ ಮಾಡೋದಿಲ್ಲ. ಕಾಂಗ್ರೆಸ್ ಜೆಡಿಎಸ್‍ನವರೇ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ನಾವು ಸರ್ಕಾರ ಬೀಳಿಸುವುದಿಲ್ಲ. ಅದು ಬಿದ್ದು ಹೋದ ಸಂದರ್ಭದಲ್ಲಿ ನಮ್ಮ ರಾಜ್ಯ ಮತ್ತು ರಾಷ್ಟ್ರ ನಾಯಕರು ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

    ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಮುಖಂಡರ ಹೇಳಿಕೆ ವಿಚಾರದ ಬಗ್ಗೆ ಕೇಳಿದಾಗ, ರಾಜಕಾರಣದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಹೀರೋಗಳು ಆಗಿರುತ್ತಾರೆ. ವಿಶ್ವಾಸ ಕಳೆದುಕೊಂಡಾಗ ವಿಲನ್ ಆಗುತ್ತಾರೆ. ರಾಜಕಾರಣದಲ್ಲಿ ಒಳ್ಳೆಯ ಸ್ಥಾನಮಾನ ಸಿಕ್ಕಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಆಗ ಮುಂದೆಯೂ ಒಳ್ಳೆಯದಾಗುತ್ತದೆ ಎಂಬುದು ನನ್ನ ಭಾವನೆ ಎನ್ನುವ ಮೂಲಕ ಸಿದ್ದರಾಮಯ್ಯ ವಿಲನ್ ರೀತಿಯಲ್ಲಿ ಬಿಂಬಿತರಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು.

    ಜಿಂದಾಲ್ ಕಂಪನಿಗೆ ಜಾಗ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಿಂದಾಲ್‍ಗೆ ಭೂಮಿ ನೀಡುವ ಪ್ರಭಾವಿಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ನಮ್ಮ ಎಲ್ಲ ನಾಯಕರು ಸೇರಿ ಪ್ರತಿಭಟನೆ ಮಾಡುತ್ತೇವೆ. ಆದರೆ ಜಿಂದಾಲ್ ಕಂಪನಿ ಖುದ್ದಾಗಿ ಇದರಿಂದ ಹಿಂದೆ ಸರಿಯಬೇಕು. ಈ ಸರ್ಕಾರ ಎಷ್ಟು ದಿನ ಇರುತ್ತೋ ಬಿದ್ದ ಹೋಗುತ್ತೋ ಗೊತ್ತಿಲ್ಲ. ಆದ್ದರಿಂದ ಗೌರವ ಪೂರ್ವಕವಾಗಿ ಭೂಮಿ ಬಿಟ್ಟುಕೊಡಬೇಕು. ಯಾಕೆಂದರೆ ಮುಂದಿನ ಸರ್ಕಾರ ಯಾವುದೇ ಕಾರಣಕ್ಕೂ ಭೂಮಿ ಕೊಡೋದಿಲ್ಲ ಎಂದು ಎಚ್ಚರಿಸಿದರು.

    ಮಾಧ್ಯಮಗಳ ಮೇಲೆ ಸಿಎಂ ಧಮ್ಕಿ ಹಾಕಿರುವ ಬಗ್ಗೆ ಕೇಳಿದಾಗ, ಮಾಧ್ಯಮದವರ ಬಗ್ಗೆ ಸಿಎಂ ಮಾತನಾಡುವುದು ಮೂರ್ಖತನ, ಮಾಧ್ಯಮಕ್ಕೆ ಧಮ್ಕಿ ಹಾಕೋದು ಸರಿಯಲ್ಲ. ಕುಮಾರಸ್ವಾಮಿಯ ಮಾಧ್ಯಮದವರ ಮೇಲೆ ಧಮ್ಕಿ ಹಾಕೋ ಧೋರಣೆ ತಪ್ಪು. ಕೂಡಲೇ ಸಿಎಂ ಮಾಧ್ಯಮ ಹಾಗೂ ಜನರ ಕ್ಷಮಾಪಣೆ ಕೇಳಬೇಕೆಂದು ಆಗ್ರಹಿಸಿದರು.

  • ಅಭ್ಯರ್ಥಿಗಳ ಪಟ್ಟಿ ಪ್ರಕಟ: ಬಿಜೆಪಿ ವೆಬ್‍ಸೈಟ್ ಬಗ್ಗೆ ರಮ್ಯಾ ಲೇವಡಿ

    ಅಭ್ಯರ್ಥಿಗಳ ಪಟ್ಟಿ ಪ್ರಕಟ: ಬಿಜೆಪಿ ವೆಬ್‍ಸೈಟ್ ಬಗ್ಗೆ ರಮ್ಯಾ ಲೇವಡಿ

    ಬೆಂಗಳೂರು: ಬಿಜೆಪಿ ವೆಬ್‍ಸೈಟ್ ನಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗದ್ದಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

    ಬಹುಶಃ ವಿಜೇತರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಬಹುದು ಎಂದು ಬರೆದು ರಮ್ಯಾ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ವೆಬ್‍ಸೈಟಿನಲ್ಲಿ,”ನಾವು ಶೀಘ್ರವೇ ವಾಪಸ್ ಬರುತ್ತೇವೆ” ಎಂದು ಸಂದೇಶ ಪೇಜ್ ಲಿಂಕ್ ಓಪನ್ ಮಾಡಿದಾಗ ಕಾಣಸಿಗುತ್ತಿದೆ. ಈ ವಿಚಾರವನ್ನೇ ಮುಂದಿಟ್ಟುಕೊಂಡು ರಮ್ಯಾ ಬಿಜೆಪಿ ವೆಬ್‍ಸೈಟನ್ನು ಲೇವಡಿ ಮಾಡಿದ್ದಾರೆ.

    ಮಾರ್ಚ್ 5 ರಂದು ಬಿಜೆಪಿ ವೆಬ್‍ಸೈಟ್ ಹ್ಯಾಕ್ ಆಗಿತ್ತು. ಹ್ಯಾಕ್ ಆದ ವಿಚಾರವನ್ನು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಪ್ರಸ್ತಾಪಿಸಿ ಕಾಲೆಳೆದಿದ್ದಾರೆ.

    ಭಾಯಿ ಔರ್ ಬೆಹನೋ.. ಈಗ ಬಿಜೆಪಿ ವೆಬ್ ಸೈಟನ್ನು ಒಂದು ಬಾರಿ ನೋಡಿ ಎಂದು ಹೇಳಿ ಕಾಲೆಳೆದಿದ್ದರು. ಕೂಡಲೇ ಪ್ರತಿಕ್ರಿಯಿಸಿದ ಬಿಜೆಪಿ, ಕೆಲವೇ ಕ್ಷಣಗಳಲ್ಲಿ ಬಿಜೆಪಿ ವೆಬ್ ಸೈಟ್ ಸರಿಹೋಗಲಿದೆ ಎಂದು ಸ್ಪಷ್ಟಪಡಿಸಿತ್ತು.

     

  • ಹೋರಾಟ ಮಾಡೋಕೆ ಅವರು ಉಳಿಯಬೇಕಲ್ಲ: ಮಾತೆ ಮಹಾದೇವಿ ಬಗ್ಗೆ ಸಂಗನಬಸವ ಸ್ವಾಮೀಜಿ ವ್ಯಂಗ್ಯ

    ಹೋರಾಟ ಮಾಡೋಕೆ ಅವರು ಉಳಿಯಬೇಕಲ್ಲ: ಮಾತೆ ಮಹಾದೇವಿ ಬಗ್ಗೆ ಸಂಗನಬಸವ ಸ್ವಾಮೀಜಿ ವ್ಯಂಗ್ಯ

    ಬಾಗಲಕೋಟೆ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮಾಡಲು ಅವರು ಉಳಿಯಬೇಕಲ್ಲ. ಇನ್ನೇನು ಕೆಲ ದಿವಸದಲ್ಲಿ ಲಿಂಗೈಕ್ಯರಾಗುತ್ತಾರೆ ಎಂದು ಮಾತೆ ಮಹಾದೇವಿ ಅವರ ಕುರಿತು ಸಂಗನಬಸವ ಸ್ವಾಮೀಜಿ ವ್ಯಂಗ್ಯವಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

    ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕಳೆದ ಒಂದು ತಿಂಗಳಿಂದ ಕಿಡ್ನಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಮಧ್ಯೆಯೂ ಹುನಗುಂದ ತಾಲೂಕಿನ ಕೂಡಲಸಂಗಮದ ಶರಣಮೇಳದಲ್ಲಿ ಹಾಜರಾಗಿದ್ದರು. ಈ ವೇಳೆ ವೀರಶೈವರು ಜಾತಿ ವಿಷಬೀಜ ಬಿತ್ತುತ್ತಿದ್ದಾರೆ ನಾವಲ್ಲ. ಪಂಚಪೀಠಾಧೀಶ್ವರರು ಲಿಂಗಾಯತ ಜಂಗಮರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹೋರಾಟ ನಡೆಸಿದ್ದರು. ಇವರಿಗೆಲ್ಲ ನಾಚಿಕೆಯಾಗಬೇಕೆಂದು ಮಾತೆ ಮಹಾದೇವಿ ವಾಗ್ದಾಳಿ ನಡೆಸಿದ್ದರು.

    ಈ ಕುರಿತು ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಸೋಮವಾರ ಶಿವಯೋಗಮಂದಿರ ಸಂಸ್ಥೆ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಮಾತೆ ಮಹಾದೇವಿ ಕುರಿತು ವ್ಯಂಗ್ಯವಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜನವರಿ 13ರಂದು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮುಂದುವರಿಸುವುದಾಗಿ ಮಾತೆ ಮಹಾದೇವಿ ಹೇಳಿದ್ದಾರೆ. ಆದರೆ ಹೋರಾಟ ಮಾಡಲು ಅವರು ಉಳಿಯಬೇಕಲ್ಲ. ಅನಾರೊಗ್ಯದಿಂದ ಬಳಲುತ್ತಿರುವ ಮಾತೆ ಮಹಾದೇವಿ ಕೆಲ ದಿನಗಳಲ್ಲಿ ಲಿಂಗೈಕ್ಯರಾಗುತ್ತಾರೆ. ಇನ್ನು ಅವರೇನು ಹೋರಾಟ ಮಾಡ್ತಾರೆ ಅಂತ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv