Tag: ವೋಲ್ವೋ

  • ವೋಲ್ವೋ ಬಸ್‌ಗಳಿಗೆ ‘ಶಕ್ತಿ’ ತುಂಬಿದ ಪುರುಷರು

    ವೋಲ್ವೋ ಬಸ್‌ಗಳಿಗೆ ‘ಶಕ್ತಿ’ ತುಂಬಿದ ಪುರುಷರು

    ಬೆಂಗಳೂರು: ಉಚಿತ ಬಸ್ ಪ್ರಯಾಣ (Free Bus Travel) ಆರಂಭವಾಗಿದ್ದೇ ತಡ ಮಹಿಳಾಮಣಿಗಳು ನಾ ಮುಂದು ತಾ ಮುಂದು ಎಂದು ಸರ್ಕಾರಿ ಬಸ್ ಏರಿ ಪ್ರಯಾಣಿಸಲು ಆರಂಭಿಸಿದ್ದಾರೆ. ಬಿಎಂಟಿಸಿ (BMTC) ಬಸ್‌ಗಳು ಫುಲ್ ರಶ್ ಆಗಿದ್ದು, ಪುರುಷರಿಗೆ ಸೀಟ್ ಸಿಗೋದೇ ಕಷ್ಟವಾಗಿದೆ. ಈ ಹಿನ್ನೆಲೆ ಪುರುಷರು ವೋಲ್ವೋ (Volvo) ಬಸ್‌ಗಳ ಮೊರೆ ಹೋಗಿದ್ದಾರೆ.

    ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಮೇಲೆ ಐಷಾರಾಮಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಐಷಾರಾಮಿ ಬಸ್ ಮತ್ತು ವೋಲ್ವೋ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಇಳಿಕೆಯ ಆತಂಕ ವ್ಯಕ್ತವಾಗಿತ್ತು. ಆದರೆ ಬಿಎಂಟಿಸಿಯ ಐಷಾರಾಮಿ ಬಸ್‌ಗಳಿಗೆ ಶಕ್ತಿ ಯೋಜನೆ ಬೊಕ್ಕಸ ತುಂಬಿಸುತ್ತಿದೆ. ಕಳೆದ ಒಂದು ವಾರದಲ್ಲಿ ವೋಲ್ವೋ ಮತ್ತು ವಜ್ರ (Vajra) ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿರುವುದರಿಂದ ಪುರುಷ ಪ್ರಯಾಣಿಕರು ವೋಲ್ವೋ ಬಸ್‌ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆಯಲ್ಲಿ 10,000 ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ. ಇದನ್ನೂ ಓದಿ: 2ನೇ ವೀಕೆಂಡ್ – ಮೆಜೆಸ್ಟಿಕ್‌, ಸ್ಯಾಟಲೈಟ್ ಬಸ್ ನಿಲ್ದಾಣ ಖಾಲಿ, ಖಾಲಿ

    ಪ್ರತಿನಿತ್ಯ ಬೆಂಗಳೂರಿನಲ್ಲಿ (Bengaluru) ಬಿಎಂಟಿಸಿಯ 470 ವೋಲ್ವೋ ಬಸ್‌ಗಳು ಓಡಾಡುತ್ತಿವೆ. ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ 3-5% ಏರಿಕೆಯಾಗಿದ್ದು, ಜೂನ್ ತಿಂಗಳ 21 ದಿನಗಳ ಲೆಕ್ಕಾಚಾರದ ಪ್ರಕಾರದ ಪ್ರತಿದಿನ 1,16,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿಯೇ ಅತಿಹೆಚ್ಚು ಪ್ರಯಾಣಿಕರು ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರೇ ಅತಿಹೆಚ್ಚು ಪ್ರಯಾಣಿಸಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಅನ್ನಭಾಗ್ಯಕ್ಕೆ ಮತ್ತಷ್ಟು ಸಂಕಷ್ಟ- ರಾಜ್ಯಗಳು ಹೇಳಿದ್ದೇನು?

    ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಗೆ ವೋಲ್ಬೋ ಬಸ್‌ಗಳು ಹೊರೆಯಾಗಿದ್ದವು. ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿಯೂ ಗಣನೀಯವಾಗಿ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾಯದಲ್ಲಿ ಕೂಡಾ ಬಿಎಂಟಿಸಿ ಸುಧಾರಣೆ ಕಂಡಿದೆ. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿಗೆ ಕೇಂದ್ರದ ಬಾಗಿಲು ಬಂದ್ – ಸರ್ಕಾರದ ಮುಂದಿರುವ ಆಯ್ಕೆಗಳೇನು?

  • ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಕೊಡೆ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು!

    ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಕೊಡೆ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು!

    ಬೆಂಗಳೂರು: ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿ ನೀರು ಸೋರಿದ್ದರ ಪರಿಣಾಮ ಪ್ರಯಾಣಿಕರು ಬಸ್‌ನೊಳಗೆ ಛತ್ರಿ ಹಿಡಿದು ಪ್ರಯಾಣಿಸಿರುವ ಘಟನೆ ಮೆಜೆಸ್ಟಿಕ್ ಹಾಗೂ ಬನಶಂಕರಿಯಲ್ಲಿ ವರದಿಯಾಗಿದೆ.

    ಹೌದು, ತಡರಾತ್ರಿಯಿಂದಲೂ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರಯಾಣಿಕರು ಬಸ್‌ಗಳಲ್ಲಿ ಆರಾಮಾಗಿ ಪ್ರಯಾಣಿಸೋಣ ಎಂದು ಯೋಚಿಸಿದ್ದವರಿಗೆ ಬೆಳಗ್ಗೆ ಬಿಎಂಟಿಸಿಯ ವೋಲ್ವೋ ಬಸ್‌ಗಳು ಶಾಕ್ ನೀಡಿವೆ. ಮಳೆಯಿಂದಾಗಿ ಬಸ್‌ನೊಳಗೂ ನೀರು ಸೋರುತ್ತಿದ್ದರಿಂದ ಪ್ರಯಾಣಿಕರು ಛತ್ರಿ ಹಿಡಿದು ಪ್ರಯಾಣಿಸಬೇಕಾಯಿತು.

    ಇಂದು ಬೆಳಗ್ಗಿನ ಜಾವ 4.35ರ ಸುಮಾರಿಗೆ ಬನಶಂಕರಿಯಿಂದ ಐಟಿಪಿಎಲ್ ಹಾಗೂ ಮೆಜೆಸ್ಟಿಕ್‍ನಿಂದ ಐಟಿಪಿಎಲ್‍ಗೆ ಹೊರಟಿದ್ದ ಕೆಎ 57 ಎಫ್ 02 ಮತ್ತು ಕೆಎ 01 ಎಫ್ 9111 ವೋಲ್ವೋ ಬಸ್‌ಗಳಲ್ಲಿ ನೀರು ಸೋರಿದ್ದರಿಂದ ಪ್ರಯಾಣಿಕರು ಛತ್ರಿ ಹಿಡಿದುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಈ ಬಗ್ಗೆ ಕಂಡಕ್ಟರ್ ಹಾಗೂ ಡ್ರೈವರ್ ಗೆ  ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ.

    ಬಸ್‌ಗಳಲ್ಲಿ ಸೀಟ್ ಇದ್ದರೂ ಸಹ, ನೀರು ಸೋರುತ್ತಿದ್ದರಿಂದ ಹೆಚ್ಚಿನ ಪ್ರಯಾಣಿಕರು ನಿಂತುಕೊಂಡೇ ಪ್ರಯಾಣ ಬೆಳೆಸಿದರು. ಈ ಬಗ್ಗೆ ಪ್ರಯಾಣಿಕರಾದ ಪ್ರಶಸ್ತಿ ಎಂಬವರು ಟ್ವಿಟ್ಟರ್ ಮೂಲಕ ಸಿಎಂ ಕುಮಾರಸ್ವಾಮಿಯವರಿಗೆ ಬಸ್‌ನ ಫೋಟೋ ತೆಗೆದು ಕಳುಹಿಸಿ ಕೊಟ್ಟಿದ್ದಾರೆ. ಇನ್ನಾದರೂ ಈ ರೀತಿಯಾಗದಂತೆ ಕ್ರಮವಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv