Tag: ವೋಟ್

  • ಮುಸ್ಲಿಂ ಮತಗಳಿಂದ ಜೆಡಿಎಸ್‌ಗೆ ಈ ಬಾರಿ ಸೋಲಾಗಿಲ್ಲ: ಸಿಎಂ ಇಬ್ರಾಹಿಂ

    ಮುಸ್ಲಿಂ ಮತಗಳಿಂದ ಜೆಡಿಎಸ್‌ಗೆ ಈ ಬಾರಿ ಸೋಲಾಗಿಲ್ಲ: ಸಿಎಂ ಇಬ್ರಾಹಿಂ

    ಬೆಂಗಳೂರು: ಈ ಬಾರಿ ವಿಧಾನಸಭೆಯಲ್ಲಿ ಜೆಡಿಎಸ್‌ಗೆ (JDS) ಸೋಲು ಆಗಿದ್ದು ಮುಸ್ಲಿಂ ಮತಗಳಿಂದ (Muslim Vote) ಅಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಮುಸ್ಲಿಮರಿಂದ ಜೆಡಿಎಸ್‌ಗೆ ಸೋಲು ಆಗಿಲ್ಲ. ಈ ಬಾರಿ ಹಳ್ಳಿಗಾಡಿನ ಜನ ಜೆಡಿಎಸ್ ಬಿಟ್ಟು ಹೋದರು. ಕಳೆದ ಬಾರಿ 38 ಸೀಟು ಬಂದಿದ್ದಾಗ ಒಂದು ಮುಸ್ಲಿಂ ವೋಟ್ ಬಂದಿರಲಿಲ್ಲ. ಈಗ 13% ಮುಸ್ಲಿಂ ವೋಟ್ ಬಂದಿದ್ದರು 19 ಸೀಟು ಮಾತ್ರ ಬಂದಿದೆ. ಹಾಗಾದರೆ 20 ಸೀಟು ಯಾವುವು? ಯಾವ ವೋಟ್ ಜೆಡಿಎಸ್ ಬಿಟ್ಟು ಹೋಯ್ತು? ಇದರ ಬಗ್ಗೆ ಚರ್ಚೆ ಆಗಬೇಕು ಎಂದರು.

    ಕಳೆದ ಬಾರಿ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ 22 ಸಾವಿರ ವೋಟ್‌ನಿಂದ ಗೆದ್ದಿದ್ದರು. ಒಂದೇ ಒಂದು ಮುಸ್ಲಿಮರ ವೋಟ್ ಬಿದ್ದಿರಲಿಲ್ಲ. ಈ ಬಾರಿ ನಿಖಿಲ್‌ಗೆ 3400 ಮುಸ್ಲಿಮರ ವೋಟ್ ಬಿದ್ದಿದ್ದರೂ ಸೋತಿದ್ದಾರೆ. ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗ್ರಾಮಾಂತರದಲ್ಲಿ ಕಡಿಮೆ ಆದಾಗ ನಗರದಲ್ಲಿ ಕೊಟ್ಟಿದ್ದಾರೆ. ಕೆಲವು ಬಾರಿ ಸಮುದಾಯದವರು ಮತ ಕೊಡ್ತಾರೆ. ದಲಿತರು, ಕುರುಬರು ಕೊಟ್ಟಿಲ್ಲ. ಇದನ್ನು ಹೇಳೋದು ಸರಿಯಲ್ಲ. ಬಿಟ್ಟು ಹೋದ ಮತ ಹೇಗೆ ವಾಪಸ್ ಪಡೆಯಬೇಕು ಎಂಬುದನ್ನು ನೋಡಬೇಕು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮೂರನೇ ಪರ್ಯಾಯ ಶಕ್ತಿ ಸ್ಥಾಪನೆಗೆ ಮುಸ್ಲಿಂ ಸಂಘಗಳ ಪ್ರವಾಸ- ಸಿಎಂ ಇಬ್ರಾಹಿಂ

    ಈಗ ಜನ ಕಾಂಗ್ರೆಸ್‌ಗೆ ಮತ ಕೊಟ್ಟು ಪಶ್ಚಾತ್ತಾಪ ಪಡುತ್ತಿದ್ದಾರೆ. ಡಿಕೆ ಶಿವಕುಮಾರ್ ನೋಡಿ ಮತ ಕೊಟ್ಟರು. ಈಗ ನಂಬಿಕೆ ದ್ರೋಹ ಆಗಿದೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಅವರಿಗೇ ಗೊತ್ತಿರಲಿಲ್ಲ ಇಷ್ಟು ಮತ ಬರುತ್ತೆ ಅಂತ. ಬಿಜೆಪಿ ಕಾಂಗ್ರೆಸ್ ವಿರುದ್ಧ ಹೋರಾಡದೇ ನಮ್ಮ ವಿರುದ್ಧ ಹೋರಾಡಿದರು. ಅದು ಸಮಸ್ಯೆ ಆಯ್ತು. 27 ಕಡೆ ಮೋದಿ ಹೋದರು. ಜೆಡಿಎಸ್ ಬಲ ಇರೋ ಕಡೆ ಮೋದಿ ಹೋಗಿ ಅವರ ತಲೆ ಮೇಲೆ ಅವರೇ ಕಲ್ಲು ಹಾಕಿಕೊಂಡರು. ಈಗ ನಮ್ಮನ್ನು ದೂರಿದ್ರೆ ಪ್ರಯೋಜನ ಏನು? ಎಂದು ಬಿಜೆಪಿ ವಿರುದ್ಧವೂ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಇಲ್ಲ, ಐ ಲವ್ ಮೋದಿ : ಸಿಎಂ ಇಬ್ರಾಹಿಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಚಾಲಕನಿಗೆ ಥಳಿತ, ಆಟೋ ಜಖಂ

    ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಚಾಲಕನಿಗೆ ಥಳಿತ, ಆಟೋ ಜಖಂ

    – ರಕ್ಷಣೆ ಕೇಳಿ ಈಶ್ವರಪ್ಪ ಕಾಲಿಗೆ ಬಿದ್ದ ಹರೀಶ್

    ಶಿವಮೊಗ್ಗ: ಬಿಜೆಪಿಗೆ ವೋಟ್ ಹಾಕಿದೆ ಎಂದು ಹೇಳಿದ್ದಕ್ಕೆ ಆಟೋ ಚಾಲಕನೊಬ್ಬನ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ (Shivamogga) ದ ಸೋಮಿನಕೊಪ್ಪ ಬಡಾವಣೆಯಲ್ಲಿ ಇಂದು (ಸೋಮವಾರ) ಬೆಳಗ್ಗೆ ನಡೆದಿದೆ.

    ಆಟೋ ಚಾಲಕ ಹರೀಶ್ ರಾವ್ (Auto Driver Harish Rao) ಎಂಬಾತ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಯಾರಿಗೆ ವೋಟ್ ಹಾಕಿದೆ ಎಂದು ದುಷ್ಕರ್ಮಿಗಳು ಹರೀಶ್‍ನನ್ನು ಕೇಳಿದ್ದಾರೆ. ಈ ವೇಳೆ ಆತ ಬಿಜೆಪಿಗೆ ಎಂದಿದ್ದಾನೆ. ಇದೇ ಕಾರಣಕ್ಕೆ ಹರೀಶ್‍ಗೆ ಹಿಗ್ಗಾಮುಗ್ ಥಳಿಸಿದ ದುಷ್ಕರ್ಮಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಅಲ್ಲದೆ ರಾಡ್ ನಿಂದ ಆಟೋ ಗಾಜು ಜಖಂಗೊಳಿಸಿ, ಮೇಲ್ಭಾಗದ ಶೀಟ್ ಅನ್ನು ಹರಿದು ಹಾಕಿದ್ದಾರೆ.

    ಸೋಮಿನಕೊಪ್ಪ ನಿವಾಸಿಗಳಾಗಿರುವ ಡಬ್ಬ ಅಲಿಯಾಸ್ ನಜ್ರು, ಇಡ್ಲಿ ಅಲಿಯಾಸ್ ಅಬ್ರಾರ್ ಹಾಗೂ ಮತ್ತೊಬ್ಬ ಯುವಕ ಹಲ್ಲೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ ಎಂದು ಹರೀಶ್ ರಾವ್ ಆರೋಪಿಸಿದ್ದಾರೆ. ಎಸ್.ಪಿ. ಕಚೇರಿಗೆ ಆಟೋ ಚಾಲಕ ಹರೀಶ್ ರಾವ್ ಕಣ್ಣೀರಿಡುತ್ತಾ ಆಗಮಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಹಿಂಸಾ ಗ್ಯಾರಂಟಿ ಸ್ಕೀಮ್ ಸಹಿಸುವುದಿಲ್ಲ: ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ

    ದೂರು ನೀಡಲು ಬಂದ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (K S Eshwarappa) ಕೂಡ ಎಸ್ ಪಿ ಕಚೇರಿಯಲ್ಲಿ ಎದುರಾಗಿದ್ದು, ಈ ವೇಳೆ ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆ ನೀಡುವಂತೆ ಕೋರಿದ್ದಾರೆ. ತಕ್ಷಣವೇ ಈಶ್ವರಪ್ಪ ಜಿಲ್ಲಾ ರಕ್ಷಣಾಧಿಕಾರಿಗಳ ಬಳಿ ಮಾತನಾಡಿ, ಆಟೋ ಚಾಲಕನಿಗೆ ರಕ್ಷಣೆ ನೀಡುವಂತೆ ಹಾಗೂ ಹಲ್ಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಪರಿಹಾರವಾಗಿ 20 ಸಾವಿರ ರೂ. ಹಣವನ್ನು ನೀಡಿದ್ದಾರೆ.

  • ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಹಾಸನ: ವಿಧಾನಸಭಾ ಚುನಾವಣೆ (Assembly Election) ದಿನವೇ ತನ್ನ ಮದುವೆಯಿದ್ದರೂ ವರನೊಬ್ಬ (Groom) ಮದುವೆ ಮುಗಿಸಿಕೊಂಡು ಬಂದು ಮತ ಚಲಾಯಿಸಿ (Vote) ಮತಾಭಿಮಾನ ಮೆರೆದಿರುವ ಘಟನೆ ಹಾಸನ (Hassana) ಜಿಲ್ಲೆಯಲ್ಲಿ ನಡೆದಿದೆ.

    ನವ ವಿವಾಹಿತ ರೋಹಿತ್ ಧರ್ಮಸ್ಥಳದಲ್ಲಿ ವಿವಾಹವಾಗಿ, ಬಳಿಕ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಮಳೆ – ತುಂತುರು ಮಳೆಯಲ್ಲೇ ಮತಗಟ್ಟೆಗೆ ಬಂದ ಮತದಾರ

    ರೋಹಿತ್ ಸಕಲೇಶಪುರದ ಮಹೇಶ್ವರಿ ನಗರದ ನಿವಾಸಿ. ಬುಧವಾರ ನಂದಿನಿ ಜೊತೆ ವಿವಾಹವಾದ ರೋಹಿತ್ ತಕ್ಷಣವೇ ಸಕಲೇಶಪುರಕ್ಕೆ ವಾಪಸಾಗಿ ಮತ ಚಲಾಯಿಸಿದ್ದಾರೆ. ನವವಿವಾಹಿತನ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತದಾನ ಕೇಂದ್ರದ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

  • ವೋಟರ್ ಕಾರ್ಡ್‌ ತಗೊಳ್ಳೋಕೆ 9 ತಿಂಗಳ ನಂತರ ಮನೆಗೆ ಬಂದ ಪತಿಯನ್ನ ಕೂಡಿ ಹಾಕಿದ ಪತ್ನಿ

    ವೋಟರ್ ಕಾರ್ಡ್‌ ತಗೊಳ್ಳೋಕೆ 9 ತಿಂಗಳ ನಂತರ ಮನೆಗೆ ಬಂದ ಪತಿಯನ್ನ ಕೂಡಿ ಹಾಕಿದ ಪತ್ನಿ

    ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ (Election) ವೋಟ್‌ ಹಾಕಬೇಕು ಎಂದರೆ ಅದಕ್ಕೆ ವೋಟರ್‌ ಐಡಿ (Voter ID) ಕಡ್ಡಾಯವಾಗಿದೆ. ಹಾಗಾಗಿ ಮನೆಯಲ್ಲಿದ್ದ ವೋಟರ್‌ ಐಡಿ ಕಾರ್ಡ್‌ ತೆಗೆದುಕೊಳ್ಳಲೆಂದು 9 ತಿಂಗಳ ನಂತರ ಮನೆಗೆ ಬಂದ ಪತಿಯನ್ನು ಪತ್ನಿ ಕೂಡಿ ಹಾಕಿ ಬೀಗ ಹಾಕಿರುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಬಾಗೇಪಲ್ಲಿ (Bagepalli) ತಾಲೂಕಿನ ಏಟಿಗಡ್ಡಪಲ್ಲಿಯಲ್ಲಿ ನಡೆದಿದೆ.

    ಬಾಗೇಪಲ್ಲಿ ತಾಲೂಕಿನ ಏಟಿಗಡ್ಡಪಲ್ಲಿಯ ಗಂಗರಾಜೇಶ್ವರಿ ಎಂಬಾಕೆ ತನ್ನ ಪತಿ ವೈ.ಎಸ್. ಮಹೇಶ್‌ ಎಂಬಾತನನ್ನು ಕೂಡಿ ಹಾಕಿದ್ದಾಳೆ. ಮಹೇಶ್‌ ಕೆ.ಎಸ್‌.ಆರ್‌.ಟಿ.ಸಿಯಲ್ಲಿ ಕಂಡಕ್ಟರ್‌ ಕಂ ಡ್ರೈವರ್‌ (Driver) ಆಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರಿಗೂ ಮದುವೆಯಾಗಿ 20 ವರ್ಷಗಳು ಕಳೆದಿವೆ. ಆದರೆ ಇಬ್ಬರು ಮಧ್ಯೆ ಅನುಮಾನ ಸಂಶಯ ಮೂಡಿದ್ದು, ಒಬ್ಬರಿಗೊಬ್ಬರು ಅಕ್ರಮ ಸಂಬಂಧದ ಬಗ್ಗೆ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕೊನೆಗೆ ಸುಖ, ಸಂಸಾರ ಹಾಳು ಮಾಡಿಕೊಂಡಿದ್ದಾರೆ.

    ಬಾಗೇಪಲ್ಲಿ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಮಹೇಶ್‌ ಕೆಲಸ ಮಾಡುತ್ತಿದ್ದು, ಕೆಲವು ತಿಂಗಳುಗಳಿಂದ ಪತ್ನಿ ಇರುವ ಮನೆಗೆ ಹೋಗದೆ ಮಕ್ಕಳ ಮುಖವನ್ನು ನೋಡದೆ, ಚಿಕ್ಕಬಳ್ಳಾಪುರದಲ್ಲಿ ಬೇರೊಂದು ಮನೆ ಮಾಡಿಕೊಂಡು‌ ಇನ್ನೊಬ್ಬಳ ಜೊತೆ ಸಂಸಾರ ಮಾಡ್ತಿದ್ದಾನಂತೆ. ಆದರೆ ಗಂಗರಾಜೇಶ್ವರಿ 9 ತಿಂಗಳ ನಂತರ ಮನೆಗೆ ಬಂದ ಗಂಡನನ್ನು ರೂಮ್‌ನಲ್ಲಿ ಕೂಡಿ ಹಾಕಿ ಜೋರು ಗಲಾಟೆ ಮಾಡಿದ್ದಾಳೆ. ನಂತರ ಪೊಲೀಸರು ಆಗಮಿಸಿ ಮಹೇಶ್‌ನನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸವದಿ ರಾಜೀನಾಮೆ

    ಪತ್ನಿ ಆರೋಪಕ್ಕೆ ತಿರುಗೇಟು ನೀಡಿರುವ ಮಹೇಶ್‌, ನನ್ನ ಪತ್ನಿಯೇ ಸರಿ ಇಲ್ಲ, ಈ ಹಿನ್ನೆಲೆಯಲ್ಲಿ ತನ್ನ ನೆಮ್ಮದಿ ಹಾಳು ಆಗಿದೆ. ಅಷ್ಟೇ ಅಲ್ಲದೇ ವಿಚ್ಛೇದನಕ್ಕಾಗಿ ನ್ಯಾಯಾಲಯ ಮೊರೆ ಹೋಗಿದ್ದಾನೆ. ಜೊತೆಗೆ ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ರಾಜಕೀಯ ನಿವೃತ್ತಿ ಹೇಳಿಕೆ ಹಿಂಪಡೆದ ಶಾಸಕ ಎಸ್.ಅಂಗಾರ

  • ವೋಟಿಗಾಗಿ ಫ್ರೀ ಸ್ಕೀಂಗಳ ಆಮಿಷ- ಉಚಿತ ಸೈಟ್ ನೀಡಲು ಮುಂದಾದ ಬಿಜೆಪಿ ಟಿಕೆಟ್ ಆಕಾಂಕ್ಷಿ

    ವೋಟಿಗಾಗಿ ಫ್ರೀ ಸ್ಕೀಂಗಳ ಆಮಿಷ- ಉಚಿತ ಸೈಟ್ ನೀಡಲು ಮುಂದಾದ ಬಿಜೆಪಿ ಟಿಕೆಟ್ ಆಕಾಂಕ್ಷಿ

    ರಾಮನಗರ: 2023ರ ರಾಜ್ಯ ವಿಧಾನಸಭಾ ಚುನಾವಣೆ (Karnataka Vidhanasabha Election 2023) ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹೊತ್ತಲ್ಲಿ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ಕುಕ್ಕರ್, ಸೀರೆ, ಹಣ, ಬಾಡೂಟದ ಪಾಲಿಟಿಕ್ಸ್ ನಡೆಯುತ್ತಿದ್ದರೆ, ಇತ್ತ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಕಾಸ್ಟ್ಲಿ ಗಿಫ್ಟ್ ನೀಡಲು ಬಿಜೆಪಿ (BJP) ಸಂಭಾವ್ಯ ಅಭ್ಯರ್ಥಿ ಮುಂದಾಗಿದ್ದಾರೆ.

    ರೇಷ್ಮೆ ನಾಡಲ್ಲಿ ಚುನಾವಣಾ ರಣಕಣ ರಂಗೇರಿದೆ. ಇತ್ತ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ (Congress Parajadwani Yatre) ನಡೆಯುತ್ತಿದ್ದರೆ. ಅತ್ತ ಫ್ರೀ ಸೈಟ್ (Free Site) ನೀಡಲು ಬಿಜೆಪಿ ಟಿಕೆಟ್ ಆಕಾಂಕ್ಷಿ ಮುಂದಾಗಿದ್ದಾರೆ. ಮಾಗಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಸಾದ್ ಗೌಡ (Prasad Gowda) ಹೀಗೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. 1 ಸಾವಿರ ಮಹಿಳೆಯರಿಗೆ ಉಚಿತವಾಗಿ 15*20 ಅಳತೆ ಸೈಟ್ ನೀಡಲು ಸಿದ್ಧತೆ ನಡೆಸಿದ್ದು, ಬಿಡದಿ ಹೋಬಳಿಯಲ್ಲಿ 6 ಎಕರೆ ಜಾಗದಲ್ಲಿ ಫ್ರೀ ಸೈಟ್ ನೀಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್

    ಸೈಟ್ ಹಂಚಿಕೆಯಲ್ಲಿ ಅಂಗವಿಕಲರು, ವಿಧವೆಯರು ಮತ್ತು ಅನಾಥರಿಗೆ ಮೊದಲ ಆದ್ಯತೆ ನೀಡುವುದಾಗಿ ಪ್ರಸಾದ್ ಗೌಡ ತಿಳಿಸಿದ್ದಾರೆ. ಜಮೀನು ಅಥವಾ ನಿವೇಶನ ಇಲ್ಲದವರ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮಾಹಿತಿ ಸಂಗ್ರಹಿಸಿ ಸೈಟ್ ಹಂಚಿಕೆಗೆ ಸಿದ್ಧತೆ ನಡೆಸಿದ್ದಾರೆ. ಈ ಯೋಜನೆ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕರೆ ಕೊಟ್ಟಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಮಂಚನಬೆಲೆ ಬಳಿ ಇರುವ ತಮ್ಮದೇ ಜಮೀನಿನಲ್ಲಿ ಬಡಾವಣೆ ನಿರ್ಮಿಸಿ ಒಟ್ಟು 3 ಸಾವಿರ ಕುಟುಂಬಗಳಿಗೆ ನಿವೇಶನ ಹಂಚುವುದಾಗಿ ಘೋಷಿಸಿದ್ದಾರೆ.

    ಒಟ್ಟಾರೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳ ಮುಖಂಡರು ನಾನಾ ಆಮಿಷಗಳನ್ನ ಒಡ್ಡುತ್ತಿದ್ದಾರೆ. ಮತದಾರರ ಗಮನಸೆಳೆಯಲು ಜಿದ್ದಿಗೆ ಬಿದ್ದಿರುವ ರಾಜಕೀಯ ಮುಖಂಡರು ಕೇವಲ ಚುನಾವಣಾ ಪ್ರಚಾರಕ್ಕೋಸ್ಕರ ಇಂತಹ ಆಮಿಷ ನೀಡದೇ ಬಡಜನರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕಿದೆ. ಮತದಾರರು ಕೂಡಾ ಆಮಿಷಗಳಿಗೆ ಬಲಿಯಾಗದೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕಿದೆ.

  • ಇನ್ಮುಂದೆ ಬಿಜೆಪಿಗೆ ವೋಟ್ ಹಾಕ್ತಾ ಇರಿ, ಪ್ರತಿ ವರ್ಷ ಸೈಟ್ ಕೊಡ್ತೀವಿ – ವಿ.ಸೋಮಣ್ಣ

    ಇನ್ಮುಂದೆ ಬಿಜೆಪಿಗೆ ವೋಟ್ ಹಾಕ್ತಾ ಇರಿ, ಪ್ರತಿ ವರ್ಷ ಸೈಟ್ ಕೊಡ್ತೀವಿ – ವಿ.ಸೋಮಣ್ಣ

    ಚಾಮರಾಜನಗರ: ಇನ್ಮುಂದೆ ಬಿಜೆಪಿಗೆ (BJP) ವೋಟ್ ಹಾಕ್ತಾ ಇರಿ, ವರ್ಷಾವರ್ಷ ಸೈಟ್ ಕೊಡ್ತೀವಿ ಎಂದು ಸಚಿವ ವಿ.ಸೋಮಣ್ಣ (V Somanna) ಭರವಸೆ ನೀಡಿದ್ದಾರೆ.

    ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮುಖ್ಯಮಂತ್ರಿ ನಗರ ನಿವೇಶನ ಯೋಜನೆಯಡಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆಯಲ್ಲಿ ಕಳೆದ 30 ವರ್ಷಗಳಿಂದ ಯಾರಿಗೂ ನಿವೇಶನ ಹಂಚಿಕೆ ಮಾಡಿಲ್ಲ. ಇನ್ಮುಂದೆ ಬಿಜೆಪಿಗೆ ವೋಟ್ (Vote) ಹಾಕ್ತಾ ಇರಿ, ವರ್ಷಾವರ್ಷ ಸೈಟ್ ಹಂಚಿಕೆ ಮಾಡ್ತೀವಿ ಎಂದು ಆಶ್ವಾಸನೆ ನೀಡಿದ್ದಾರೆ. ಇದನ್ನೂ ಓದಿ: WPL 2023: `ಕಮಲ’ ಮುಂಬೈ ಇಂಡಿಯನ್ಸ್ ಜೆರ್ಸಿ ಅನಾವರಣ 

    ಈ ಹಿಂದೆ ಬೆಂಗಳೂರಿನಲ್ಲಿ (Bengaluru) 1 ಲಕ್ಷ ಮನೆ ನಿರ್ಮಿಸಲು ಪ್ರಧಾನಿ ಮೋದಿ (Narendra Modi) 600 ಕೋಟಿ ಕೊಟ್ಟಿದ್ದರು. ಆದರೆ ಅಂದಿನ ಸರ್ಕಾರ ಅದಕ್ಕೆ ಬೇಕಾದ ಜಾಗವನ್ನು ಹುಡುಕಲೇ ಇಲ್ಲ. ನಾನು ಸಚಿವನಾದ ಮೇಲೆ ಜಾಗ ಹುಡುಕಿ ಬೆಂಗಳೂರಿನಲ್ಲಿ 52 ಸಾವಿರ ಮನೆಗಳನ್ನ ನಿರ್ಮಾಣ ಮಾಡಲಾಗಿದೆ. ಈ ಪೈಕಿ ಈಗಾಗಲೇ 5 ಸಾವಿರ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕುಮಾರಣ್ಣನ ಸರ್ಕಾರ ಹೋದ್ಮೇಲೆ ಜೆಡಿಎಸ್ ಕಾರ್ಯಕರ್ತರಿಗೆ ಕಿರುಕುಳ – ಹೆಚ್.ಡಿ.ರೇವಣ್ಣ ಬೇಸರ

    ಇದೇ ವೇಳೆ ಯಡಿಯೂರಪ್ಪ (BS Yediyurappa) ವಿಧಾನಸಭೆಗೆ ವಿದಾಯ ಹೇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲರೂ ಒಂದು ದಿನ ವಿದಾಯ ಹೇಳಲೇಬೇಕಲ್ವಾ? ಒಂದು ಏಜ್ ಆದ ಮೇಲೆ ಹೋಗಲೇಬೇಕಲ್ವಾ? ದೇಶದಲ್ಲಿ ಬಹುತೇಕ ಮಂದಿ ಈ ರೀತಿ ಬಂದು ಹೋಗಿದ್ದಾರೆ. ನಾವೂ ಮುಂದೊಂದು ದಿನ ವಿದಾಯ ಹೇಳಲೇಬೇಕು. ಯಡಿಯೂರಪ್ಪ ತಮ್ಮ ವಯಸ್ಸಿನ ಇತಿಮಿತಿ ಅರ್ಥಮಾಡಿಕೊಂಡು ತೀರ್ಮಾನ ಮಾಡಿದ್ದಾರೆ. ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವುದು ಒಳ್ಳೆಯದು ಅನಿಸಿರಬೇಕು. ಹಾಗಾಗಿ ವಿದಾಯ ಹೇಳಿದ್ದಾರೆ ಎಂದು ಸೋಮಣ್ಣ ತಿಳಿಸಿದ್ದಾರೆ.

  • ಬರಲಿದೆ ರಿಮೋಟ್ ವೋಟಿಂಗ್ ಮೆಷಿನ್ – ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ ಮಾಸ್ಟರ್ ಪ್ಲ್ಯಾನ್

    ಬರಲಿದೆ ರಿಮೋಟ್ ವೋಟಿಂಗ್ ಮೆಷಿನ್ – ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ ಮಾಸ್ಟರ್ ಪ್ಲ್ಯಾನ್

    ನವದೆಹಲಿ: ಚುನಾವಣೆಗಳಲ್ಲಿ (Election) ದೇಶಾದ್ಯಂತ ವಯಸ್ಕರ ಮೂರನೇ ಒಂದು ಭಾಗಷ್ಟು ಮತದಾನದಲ್ಲಿ ಕೊರತೆಯಾಗುತ್ತಿದೆ. ಅಲ್ಲದೇ ಕೆಲಸಗಳಿಗಾಗಿ ವಲಸೆ ಹೋಗಿರುವ ಎಷ್ಟೋ ಜನರು ರಜೆಯ ಕೊರತೆಯ ಕಾರಣ ಮತದಾನ ಮಾಡೋದನ್ನೇ ತಪ್ಪಿಸುತ್ತಿದ್ದಾರೆ. ಆದ್ದರಿಂದ ಬರುವ ಚುನಾವಣೆಗಳಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ (Election Commission) ಮಾಸ್ಟರ್ ಪ್ಲ್ಯಾನ್ ಮಾಡಿದೆ.

    ದೂರದ ಪ್ರದೇಶಗಳಲ್ಲಿರುವ ಜನರು ತಾವಿದ್ದ ಸ್ಥಳದಿಂದಲೇ ಮತ ಚಲಾಯಿಸಲು ಅನುಕೂಲ ಮಾಡಿಕೊಡುವಂತೆ ಹೊಸ ರೀತಿಯ ಎಲೆಕ್ಟ್ರಾನಿಕ್ ಮತದಾನ ಯಂತ್ರ (EVM) ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚೆ ನಡೆಸಲು ರಾಜಕೀಯ ಪಕ್ಷಗಳನ್ನು ಆಹ್ವಾನಿಸಿದೆ. ಸುಮಾರು 72 ಕ್ಷೇತ್ರಗಳಲ್ಲಿ ಮತದಾನ ಸಂಗ್ರಹ ಮಾಡಲು ಈ ಮಿಷಿನ್‌ನಲ್ಲಿ ಪ್ರೋಗ್ರಾಮ್ ಮಾಡಬಹುದಾಗಿದೆ. ಇದರಿಂದ ದೂರದಲ್ಲಿರುವ ವ್ಯಕ್ತಿಗಳಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ.

    ರಿಮೋಟ್ ಮತದಾನದ (Remote Voting Machine) ಪರಿಕಲ್ಪನೆಯ ಬಗ್ಗೆ ಅರಿತುಕೊಳ್ಳಲು ತೆಗೆದುಕೊಳ್ಳಬೇಕಾದ ಕಾನೂನು ಹಾಗೂ ತಾಂತ್ರಿಕ ಕ್ರಮಗಳ ಬಗ್ಗೆ ಚುನಾವಣಾ ಆಯೋಗ ಟಿಪ್ಪಣಿ ಮಾಡಲಿದೆ. ಇದನ್ನೂ ಓದಿ: ಗ್ಯಾಂಬಿಯಾ ಬಳಿಕ ಈಗ ಉಜ್ಬೇಕಿಸ್ತಾನದಿಂದ ಆರೋಪ – 18 ಮಕ್ಕಳ ಸಾವಿಗೆ ಭಾರತದ ಸಿರಪ್ ಕಾರಣ

    2019ರ ಚುನಾವಣೆಯಲ್ಲಿ ಮತದಾನದ ಪ್ರಮಾಣವು ಶೇ.67.4 ಆಗಿತ್ತು. ಆದ್ರೆ ಈ ಚುನಾವಣೆಯಲ್ಲಿ 30 ಕೋಟಿಗೂ ಅಧಿಕ ಮಂದಿ ಮತ ಚಲಾಯಿಸಿರಲಿಲ್ಲ ಎಂಬ ಅಂಶವನ್ನು ಚುನಾವಣಾ ಆಯೋಗ ಮನಗಂಡಿತು. ಆಂತರಿಕ ವಲಸೆ ಸೇರಿದಂತೆ ನಾನಾ ಕಾರಣದಿಂದಾಗಿ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೂ ಕಳವಳ ವ್ಯಕ್ತಪಡಿಸಿತ್ತು. ಆದ್ದರಿಂದ ಚುನಾವಣಾ ಆಯೋಗ ರಿಮೋಟ್ ವೋಟಿಂಗ್ ಮಿಷಿನ್ ಅನ್ನು ಅನುಷ್ಠಾನಕ್ಕೆ ತರಲು ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಹಲವರಿಗೆ T20 ಯಿಂದ ಬ್ರೇಕ್?

    Live Tv
    [brid partner=56869869 player=32851 video=960834 autoplay=true]

  • ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಪ್ರೀತಂಗೌಡ ನಮಗೆ ಅಣ್ಣನ ಸಮಾನ – ವೀಡಿಯೋವನ್ನು ತಿರುಚಿ ವೈರಲ್ ಮಾಡಿದ್ದಾರೆ: ಸ್ಥಳೀಯರ ಆಕ್ರೋಶ

    ಹಾಸನ: ಶ್ರೀನಗರ ಬಡಾವಣೆಯಲ್ಲಿ ಶಾಸಕ ಪ್ರೀತಂಗೌಡ (Preetham Gowda) ತಮಗೆ ಮತ (Vote) ಹಾಕುವಂತೆ ಬೆದರಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ನಿವಾಸಿಗಳು ಶಾಸಕರ ಪರವಾಗಿ ನಿಂತಿದ್ದಾರೆ. ಶಾಸಕರು ನಮ್ಮನ್ನು ಸಹೋದರಿಯರು ಎಂದುಕೊಂಡಿದ್ದಾರೆ. ಅವರು ನಮಗೆ ಅಣ್ಣನ ಸಮಾನ. ಯಾರೋ ಕೆಲವರು ಶಾಸಕರ ವೀಡಿಯೋ ಮಾಡಿ ತಿರುಚಿ ಅದನ್ನು ವೈರಲ್ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳ ಕಿಡಿಕಾರಿದ್ದಾರೆ.

    ನಮ್ಮ ಬಡಾವಣೆಯಲ್ಲಿ ಹಿಂದೂ, ಮುಸ್ಲಿಂ ಎನ್ನುವ ಭೇದಭಾವ ಇಲ್ಲ. ಎಲ್ಲರೂ ಒಂದಾಗಿ ಇದ್ದೇವೆ, ಇರ್ತೇವೆ. ಶಾಸಕರು ನಮ್ಮನ್ನು ಸಹೋದರಿಯರು ಎಂದುಕೊಂಡಿದ್ದಾರೆ. ಅವರು ನಮಗೆ ಅಣ್ಣನ ಸಮಾನ, ಆದರೆ ಇಂತಹವರಿಗೆ ವೋಟ್ ಹಾಕಿ ಎಂದು ನಮಗೆ ಯಾರ ಹೇಳುವಂತಿಲ್ಲ. ಅವರು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. 28 ವರ್ಷಗಳಿಂದ ನಮಗೆ ಯಾರು ಹಕ್ಕು ಪತ್ರ ನೀಡುವುದಾಗಿ ಬಂದಿಲ್ಲ. ಅಷ್ಟು ವರ್ಷಗಳಿಂದಲೂ ಇದೇ ಕೊಳಚೆ, ವಾಸನೆ, ಗಲೀಜು ನಡುವೆ ನಾವು ಬದುಕಿದ್ದೇವೆ. ಇದುವರೆಗೆ ಬಂದವರೆಲ್ಲಾ ಕೇವಲ ಭರವಸೆ ಕೊಟ್ಟು ವೋಟ್ ಹಾಕಿಸಿಕೊಂಡು ಹೋಗಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ: ಶಾಸಕ ಪ್ರೀತಂಗೌಡ

    ಶಾಸಕ ಪ್ರೀತಂಗೌಡ ಅವರು ನಮ್ಮ ಕೆಲಸ ಮಾಡ್ತೀವಿ ಎಂದು ಬಂದಿದ್ದಾರೆ. ಅವರು ಮತ ನೀಡಿ ಎಂದು ಯಾವುದೇ ಬೆದರಿಕೆ ಹಾಕಿಲ್ಲ. ಯಾರೋ ಕೆಲವರು ಶಾಸಕರ ವೀಡಿಯೋ ಮಾಡಿ ತಿರುಚಿ ಅದನ್ನು ವೈರಲ್ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಧಿಕಾರಿಗೆ ಹಲ್ಲೆ ನಡೆಸಲು ಮಚ್ಚು ಹಿಡಿದು ಬಂದ ಮಹಿಳೆ

    Live Tv
    [brid partner=56869869 player=32851 video=960834 autoplay=true]

  • ಚುನಾವಣೆಗೆ ನಿಂತವರಲ್ಲಿ ಒಳ್ಳೆಯವರು ಕಾಣದಿದ್ರೆ ನೋಟಾಗೆ ಒತ್ತಿ: ಕಾಗೇರಿ ಕರೆ

    ಚುನಾವಣೆಗೆ ನಿಂತವರಲ್ಲಿ ಒಳ್ಳೆಯವರು ಕಾಣದಿದ್ರೆ ನೋಟಾಗೆ ಒತ್ತಿ: ಕಾಗೇರಿ ಕರೆ

    ಕಲಬುರಗಿ: ಚುನಾವಣೆಗೆ (Elections) ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾಗೆ ಒತ್ತಿ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಕರೆ ನೀಡಿದ್ದಾರೆ.

    ಬುಧವಾರ ನಗರದ ಡಾ.ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ `ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಈ ವೇಳೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ `ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಆತ್ಮಸಾಕ್ಷಿಯ ಅಭಿಯಾನ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    ಚುನಾವಣೆಯಲ್ಲಿಂದು ಹಣ, ತೋಳ್ಬಲ ಹಾಗೂ ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಮತದಾರರು ಅರಿಯಬೇಕು. ಮತ ಮಾರಾಟ ಮಾಡದೇ ಸ್ಫರ್ಧಾಳುಗಳಲ್ಲಿ ಉತ್ತಮರನ್ನು ಆಯ್ಕೆ ಮಾಡಿ. ಒಂದು ವೇಳೆ ಚುನಾವಣೆ ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾಗೆ ಒತ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ. ಭ್ರಷ್ಟಾಚಾರ ವ್ಯಾಪಿಸಿದೆ. ಜನಪ್ರತಿನಿಧಿಗಳು ಜನರಿಗೆ ನೀಡಿದ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾರ್ಯಾಂಗದಲ್ಲಿ ಮಾನವೀಯತೆ ಮರೆತ ಪರಿಣಾಮ ಜನರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಿ ರೋಸಿ ಹೋಗಿದ್ದಾರೆ. ನ್ಯಾಯಾಲಯಗಳು (Court) ನ್ಯಾಯ ನೀಡುವ ಬದಲಾಗಿ ನಿರ್ಣಯ ನೀಡುತ್ತಿವೆ. ಇನ್ನು ಮಾಧ್ಯಮ ಕ್ಷೇತ್ರವೂ ಸಾಮಾಜಿಕ ಹೊಣೆಗಾರಿಕೆ ಮರೆತಿದ್ದು, ಇಲ್ಲಿಯೂ ಭ್ರಷ್ಟಾಚಾರ ಕಾಲಿಟ್ಟಿದೆ. ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯತೆಯನ್ನು ಮರೆತಂತಿವೆ ಎಂದಿದ್ದಾರೆ.

    ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈಗಾಗಲೇ ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷಾಂತರ ಕಾಯ್ದೆಗೆ ಮತ್ತಷ್ಟು ಬಲ ನೀಡಲು ಚಿಂತನೆ ನಡೆದಿದೆ. ಪ್ರಣಾಳಿಕೆ ಈಡೇರಿಸುವತ್ತ ಆಡಳಿತ ಪಕ್ಷ ಗಮನಹರಿಸಬೇಕಿದೆ. ಇವೆಲ್ಲದರ ಬಗ್ಗೆ ಜನಾಭಿಪ್ರಾಯ ಮೂಡಿಸಲು ಜನರೊಂದಿಗೆ ಸಂವಾದ ನಡೆಸಲಾಗುತ್ತಿದೆ. ಈಗಾಗಲೇ ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ವಿಜಯಪುರ, ಕೋಲಾರ ಸೇರಿ ಹಲವು ಕಡೆ ಸಂವಾದ ನಡೆಸಿದ್ದು, ಇಂದು ಕಲಬುರಗಿಯಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ ಕನ್ನ ಆರೋಪ- ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ

    ಮತ ಕನ್ನ ಆರೋಪ- ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾದ ಬಿಬಿಎಂಪಿ

    ಬೆಂಗಳೂರು: ಕಾಂಗ್ರೆಸ್ (Congress) ಮಾಡಿರುವ ಮತ ಕನ್ನ ಆರೋಪಕ್ಕೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪ್ರತಿಕ್ರಿಯಿಸಿದೆ.

    ಖಾಸಗಿ ಸಂಸ್ಥೆಯಿಂದ ಮತದಾರ ಮಾಹಿತಿ ಸಂಗ್ರಹ ಆರೋಪದ ಮೇಲೆ ಇದೀಗ ಬಿಬಿಎಂಪಿ ಚಿಲುಮೆ ಸಂಸ್ಥೆ ವಿರುದ್ಧ ತನಿಖೆಗೆ ಮುಂದಾಗಿರುವುದಾಗಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಚಿಲುಮೆ (Chilume) ಸಂಸ್ಥೆಗೆ ಜಾಗೃತಿ ಮೂಡಿಸೋದಕ್ಕೆ ಅಷ್ಟೇ ನಾವು ಅನುಮತಿ ಕೊಟ್ಟಿದ್ದೇವೆ. ಡೇಟಾ ಕಲೆಕ್ಟ್ ಮಾಡಿ ಅಂತಾ ಅನುಮತಿ ಕೊಟ್ಟಿರಲಿಲ್ಲ. ಆದರೆ ಡೇಟಾ ಕಲೆಕ್ಟ್ ಮಾಡ್ತಾ ಇದ್ದಾರೆ ಅಂತಾ ದೂರು ದಾಖಲಾಗಿದೆ. ಹಾಗಾಗಿ ನಾವು ಅವರಿಗೆ ನೀಡಿದ್ದ ಅನುಮತಿಯನ್ನ ಕ್ಯಾನ್ಸಲ್ ಮಾಡಿದ್ದೇವೆ. ಬಿಬಿಎಂಪಿ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರದಲ್ಲಿ ಶೆ. 26 ಮಾತ್ರ ವೋಟರ್ ಐಡಿ ಆಧಾರ್ ಲಿಂಕ್ ಆಗಿದೆ. ರಾಜ್ಯಾದ್ಯಂತ ಶೇ.60 ವೋಟರ್ ಐಡಿ ಆಧಾರ್ ಲಿಂಕ್ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ. 26 ಅಗಿದೆ ಅಷ್ಟೇ. ಬಿಬಿಎಂಪಿ ಬಿಎಲ್ ಓ ಗಳು ಮಾಹಿತಿ ಕಲೆ ಹಾಕಿದ್ದಾರೆ. ಚಿಲುಮೆ ಸಂಸ್ಥೆಯವರು ಮಾಹಿತಿ ಕಲೆ ಹಾಕಿದ್ದಾರೆ ಎಂಬ ಆರೋಪ ಬಂದಿದೆ ಎಂದರು.

    ಚಿಲುಮೆ ಸಂಸ್ಥೆ ವಿರುದ್ಧ ನಾವು ತನಿಖೆ ಮಾಡಿಸುತ್ತೇವೆ. ತನಿಖೆ ಮಾಡಿಸಿ ಡೇಟಾ ಕಲೆಕ್ಟ್ ಮಾಡಿದ್ದಾರಾ ಇಲ್ವ ಅಂತಾ ಪತ್ತೆ ಮಾಡುತ್ತೇವೆ. ಮತದಾರರ ಮಾಹಿತಿ, ಆಧಾರ್ ಲಿಂಕ್ ಕೇಂದ್ರ ಚುನಾವಣಾ ಆಯೋಗಕ್ಕೆ ಮಾತ್ರ ಮಾಹಿತಿ ಹೋಗುತ್ತೆ. ಕೇಂದ್ರ ಚುನಾವಣಾ ಆಯೋಗಕ್ಕೆ ಬಿಟ್ಟು ಬೇರೆ ಎಲ್ಲೂ ಮಾಹಿತಿ ಲೀಕ್ ಆಗಲ್ಲ. ಇದರ ಬಗ್ಗೆ ತನಿಖೆ ಮಾಡುವುದಾಗಿ ರಂಗಪ್ಪ ಭರವಸೆ ನೀಡಿದರು. ಇದನ್ನೂ ಓದಿ: ಹೊಂಬಾಳೆ ಸಂಸ್ಥೆಗೂ ಚಿಲುಮೆಗೂ ಸಂಬಂಧ ಇಲ್ಲ: ಕೈ ಆರೋಪಕ್ಕೆ ಅಶ್ವಥ್ ನಾರಾಯಣ್ ತಿರುಗೇಟು

    ಇದೇ ವೇಳೆ ಚಿಲುವೆ ಸಂಸ್ಥೆ ಅವರ ವಿರುದ್ಧ ದೂರು ನೀಡಲು ಆರ್. ಓ ಮತ್ತು ಆರ್. ಡಿ ಅಧಿಕಾರಿಗಳಿಗೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಸೂಚನೆ ನೀಡಿದರು. ಚೆಲುವೆ ಸಂಸ್ಥೆಯವರಿಂದ ಅಕ್ರಮ ಆಗಿದ್ರೆ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಮಗೆ 9ನೇ ತಿಂಗಳಲ್ಲೇ ದೂರು ಬಂದಿದೆ. ನಾವು ಟೀಂ ನಿಂದ ತನಿಖೆ ಮಾಡಿಸಿದ್ದೇವೆ. ತನಿಖೆ ಮಾಡಿಸುವುದಕ್ಕೆ ಇಷ್ಟು ಟೈಂ ತಗೊಂಡಿದೆ. ನವೆಂಬರ್ 2ಕ್ಕೆ ನಾವು ರದ್ದು ಮಾಡಿದ್ದೇವೆ ಎಂದರು.

    ಅನುಮತಿ ರದ್ದು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ಇದೀಗ ರದ್ದು ಮಾಡಿದೆ. ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು ಮಾಡಿದೆ. ಆನ್ ಲೈನ್ ಮೂಲಕ ಅಥವಾ ಅರ್ಜಿ ಮುಖೇನ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಜವಾಬ್ದಾರಿ ನೀಡಲಾಗಿತ್ತು. ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ಮತ ಮಾಹಿತಿಗೆ ಕನ್ನ: ಕಾಂಗ್ರೆಸ್ ಹೊಸ ಬಾಂಬ್

    ಸದರಿ ಸಂಸ್ಥೆ ಷರತ್ತುಗಳ ಉಲ್ಲಂಘನೆ ಆದ ಹಿನ್ನೆಲೆ ಅನುಮತಿ ರದ್ದು ಮಾಡಿದ್ದೆವೆ. ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಮತದಾರರ ಚೀಟಿ ಮತ್ತು ಯಾವುದೇ ಮಾಹಿತಿ ನೀಡಬೇಡಿ. ಸಂಸ್ಥೆಗೆ ನೀಡಿದ್ದ ಷರತ್ತುಗಳನ್ನ ಉಲ್ಲಂಘನೆ ಮಾಡಿರೋ ಹಿನ್ನೆಲೆ ಮಾಹಿತಿ ನೀಡದಂತೆ ಬಿಬಿಎಂಪಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]