Tag: ವೈ.ಎಸ್.ವಿ. ದತ್ತ

  • ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ಕಾಲಾವಕಾಶ ಕೇಳಿದ ದತ್ತಣ್ಣ

    ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ಕಾಲಾವಕಾಶ ಕೇಳಿದ ದತ್ತಣ್ಣ

    ಚಿಕ್ಕಮಗಳೂರು: ಪಕ್ಷೇತರರಾಗಿ ನಿಲ್ಲಲು ಸಲಹೆ ನೀಡಿದ ಅಭಿಮಾನಿಗಳಲ್ಲಿ ವೈ.ಎಸ್.ವಿ.ದತ್ತ (Y S V Datta) ಅವರು ಕಾಲಾವಕಾಶ ಕೇಳಿದ್ದಾರೆ.

    ಕಾಂಗ್ರೆಸ್ ಟಿಕೆಟ್ (Congress Ticket) ಕೈತಪ್ಪಿದ್ದಕ್ಕೆ ಬೇಸರಗೊಂಡ ದತ್ತ, ಇಂದು ನನ್ನ-ನಿಮ್ಮ ಆತ್ಮಗೌರವ, ಸ್ವಾಭಿಮಾನಕ್ಕೆ ಅಪಮಾನವಾಗಿದೆ ಎಂದ ಅವರು, ಆತ್ಮಗೌರವ ಹಾಗೂ ಸ್ವಾಭಿಮಾನಕ್ಕಾಗಿ ಕಡೂರಿನಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆ ಕರೆದಿದ್ದಾರೆ.

    ನನ್ನ ಬಳಿ ಹಣ-ಜಾತಿ ಇಲ್ಲದಿದ್ದರೂ ದತ್ತಣ್ಣ ಎಂದು ಕರೆದಿದ್ದೀರಿ. ಆತ್ಮೀಯತೆಯಿಂದ ತಬ್ಬಿಕೊಂಡು ಬೆಳೆಸಿದ್ದೀರಿ. ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಒಬ್ಬರ ಜೊತೆ ಒಬ್ಬರಿರಬೇಕು. ನನ್ನ ಜೊತೆ ನೀವು, ನಿಮ್ಮ ಜೊತೆ ನಾನಿರಬೇಕು ಎಂದು ಮತದಾರರ ಆಶೀರ್ವಾದಕ್ಕಾಗಿ ಸಭೆ ಕರೆದಿರುವ ಬಗ್ಗೆ ತಿಳಿಸಿದರು. ಇದನ್ನೂ ಓದಿ: Congress List: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ಯಾರಿಗೆ ಎಲ್ಲಿ ಟಿಕೆಟ್?

    ದತ್ತ ಕಡೂರಿನ ಕಾಂಗ್ರೆಸ್ ಟಿಕೆಟ್ (Kadoor Congress Ticket) ಆಕಾಂಕ್ಷಿಯಾಗಿದ್ದರು. ಕಡೂರಿನ ಕಾಂಗ್ರೆಸ್ ಟಿಕೆಟ್ ದತ್ತ ಅವರಿಗೆ ಎಂದು ಹೇಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆ.ಎಸ್. ಆನಂದ್ ಹೆಸರು ಘೋಷಿಸಿದೆ. ಹೀಗಾಗಿ ದತ್ತ ಅವರಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

    ಗುರುವಾರ ತಡರಾತ್ರಿವರೆಗೆ ದತ್ತ ಮನೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪಕ್ಷೇತರವಾಗಿ ನಿಲ್ಲುವಂತೆ ದತ್ತಗೆ ಅಭಿಮಾನಿಗಳು ಸಲಹೆ ನೀಡಿದರು. ಈ ವೇಳೆ ಅಭಿಮಾನಿಗಳಿಗೆ ಎರಡು ದಿನ ಅವಕಾಶ ಕೇಳಿದರು. ಈ ಹಿನ್ನೆಲೆಯಲ್ಲಿ ಭಾನುವಾರದ ಸಭೆ ಬಳಿಕ ದತ್ತ ಅವರ ಮುಂದಿನ ತೀರ್ಮಾನ ಪ್ರಕಟಗೊಳಿಸುವ ಸಾಧ್ಯತೆ ಇದೆ.

  • ಪಿಎಸ್‍ಐ ಅಕ್ರಮ – ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ: ವೈ.ಎಸ್.ವಿ ದತ್ತ

    ಪಿಎಸ್‍ಐ ಅಕ್ರಮ – ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ: ವೈ.ಎಸ್.ವಿ ದತ್ತ

    ಚಿಕ್ಕಮಗಳೂರು: ಪಿಎಸ್‌ಐ ಪರೀಕ್ಷೆ ಪ್ರಾಮಾಣಿಕವಾಗಿ ಬರೆದವರು ಮತ್ತು ಪರೀಕ್ಷೆಯ ಅಕ್ರಮದಲ್ಲಿ ಪಾಲ್ಗೊಂಡವರ ಪಟ್ಟಿಯನ್ನು ಪ್ರತ್ಯೇಕಿಸಿ ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಜಿಲ್ಲೆಯ ಕಡೂರಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಆಗ್ರಹಿಸಿದ್ದಾರೆ.

    KARNATAKA PSI EXAM

    ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ತಲೆಗೆಲ್ಲಾ ಒಂದೇ ಮಂತ್ರ ಎಂಬಂತೆ ನಡೆದುಕೊಳ್ಳಬಾರದು. ಸರ್ಕಾರ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸುವುದಕ್ಕಿಂತ ಬೇರೆ ಮಾರ್ಗ ಯೋಚಿಸಲಿ, ಸರ್ಕಾರಕ್ಕೆ ಅದ್ಯಾವುದು ದೊಡ್ಡ ಕೆಲಸವಲ್ಲ. ಪ್ರಮಾಣಿಕವಾಗಿ ಓದಿ, ಪರೀಕ್ಷೆ ಬರೆದವರಿಗೆ ಮೋಸ ಆಗಬಾರದು. ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಪ್ರಾಮಾಣಿಕರು ಹಾಗೂ ಅಕ್ರಮವೆಸಗಿದವರನ್ನು ಪ್ರತ್ಯೇಕ ಮಾಡಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ವೈಎಸ್‍ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯಿಸಿ, ಎಲ್ಲದಕ್ಕೂ ಕಾಲ ಬರಬೇಕು. ನಾನು ಜೆಡಿಎಸ್‍ನಲ್ಲೇ ಇರುತ್ತೇನೆ ಎಂದು ಹೇಳಲು, ಜೆಡಿಎಸ್ ಬಿಡುತ್ತೇನೆ ಎಂದು ಹೇಳಲು ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಆ ಕಾಲ ಬಂದಾಗ ನಿಮಗೆ ಖಂಡಿತ ನನ್ನ ನಿರ್ಧಾರ ಹೇಳುತ್ತೇನೆ ಎಂದರು. ಇದನ್ನೂ ಓದಿ: ಉಕ್ರೇನ್ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್- ಡಾಕ್ಟರ್ ಆಗುವ ಕನಸಿಗೆ ನೀರೆರದ ಸಿದ್ದಗಂಗಾ

  • ಮಣೇವು ಕುಣಿತಕ್ಕೆ ಹಳ್ಳಿಗರ ಜೊತೆ ಹೆಜ್ಜೆ ಹಾಕಿದ ವೈ.ಎಸ್.ವಿ.ದತ್ತ

    ಮಣೇವು ಕುಣಿತಕ್ಕೆ ಹಳ್ಳಿಗರ ಜೊತೆ ಹೆಜ್ಜೆ ಹಾಕಿದ ವೈ.ಎಸ್.ವಿ.ದತ್ತ

    ಚಿಕ್ಕಮಗಳೂರು: ದೇವರಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹಳ್ಳಿಗರ ಜೊತೆ ಮಣೇವು ಕುಣಿತಕ್ಕೆ ಹೆಜ್ಜೆಹಾಕಿ ಸಂಭ್ರಮಿಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಬಿದಿರೆ ಗ್ರಾಮದ ಕರಾಳಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ದತ್ತ ಕುಣಿದು ಕುಪ್ಪಳಿಸಿದ್ದಾರೆ. ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಅವರು ಈ ಹಿಂದೆ ಕೂಡ ಹಲವು ಬಾರಿ ಮಕ್ಕಳಿಗೆ ಪಾಠ ಮಾಡಿ, ಗಾಂಧಿ ಜಯಂತಿಯಂದು ದಲಿತರ ಮನೆ ಶೌಚಾಲಯಗಳನ್ನು ಶುಚಿ ಮಾಡಿ ಗಮನ ಸೆಳೆದಿದ್ದರು. ನಾನು ಮಕ್ಕಳಿಗೆ ಪಾಠ ಮಾಡುವುದಕ್ಕೂ ಸೈ, ರಸ್ತೆ ಮಧ್ಯೆ ಕುಣಿಯುವುದಕ್ಕೂ ಸೈ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಇದನ್ನೂ ಓದಿ: ಇಂದಿನಿಂದ ಐಪಿಎಲ್ ಆರಂಭ – ಅತಿ ಹೆಚ್ಚು ರನ್ ಸಿಡಿಸಿದದ ಟಾಪ್ ತಂಡಗಳು

    ಆಧುನಿಕ ಭಾರತದಲ್ಲಿ ಬಹುತೇಕ ರೂಢಿ ಸಂಪ್ರದಾಯಗಳು ಕ್ರಮೇಣ ಕಣ್ಮರೆಯಾಗುತ್ತಿದೆ. ಅದರಲ್ಲಿ ಮಣೇವು ಕುಣಿತ ಕೂಡ ಒಂದು. ಗ್ರಾಮೀಣ ಭಾಗದ ಅಲ್ಲಲ್ಲೇ ಜೀವಂತವಾಗಿದೆ. ದೇವರ ಉತ್ಸವಮೂರ್ತಿ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಶಾಸಕ ದತ್ತ ದೇವರಿಗೆ ಕಾಣಿಕೆ ನೀಡಿ ಹೆಗಲಮೇಲಿದ್ದ ಟವೆಲ್‍ನ ಕೈನಲ್ಲಿಟ್ಟುಕೊಂಡು ಸ್ಥಳೀಯರ ಜೊತೆ ರಸ್ತೆ ಮಧ್ಯೆಯೇ ಹೆಜ್ಜೆ ಹಾಕಿದ್ದಾರೆ. ತಮಟೆ ಸದ್ದನ್ನು ಆಲಿಸಿ ತಮಟೆಯ ಸದ್ದಿಗೆ ಕರೆಕ್ಟ್ ಆಗಿ ಸ್ಟೆಪ್ ಹಾಕಿ ನೆರೆದಿದ್ದವರನ್ನು ರಂಜಿಸಿದ್ದಾರೆ. ಮಣೇವು ಕುಣಿತ ಮುಗಿದ ಬಳಿಕ ಮತ್ತೆ ದೇವರಿಗೆ ನಮಸ್ಕರಿಸಿದ್ದಾರೆ. ಬಿದರೆ ಗ್ರಾಮದಲ್ಲಿ ಪ್ರತಿವರ್ಷ ನಡೆಯುವ ಜಾತ್ರೆಯಲ್ಲಿ ದತ್ತ ಮಣೇವು ಕುಣಿತಕ್ಕೆ ಸ್ಥಳೀಯರ ಜೊತೆ ಹೆಜ್ಜೆ ಹಾಕುತ್ತಾರೆ. ಇದನ್ನೂ ಓದಿ:  ಬೀದರ್‌ನ ಬ್ರಿಮ್ಸ್‌ನಲ್ಲಿ ಮಾರಾಮಾರಿ ಪ್ರಕರಣ – ಮೂವರು ಬಂಧನ

  • ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ- JDS ವಿರುದ್ಧ ದತ್ತ ಅಸಮಾಧಾನ

    ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ- JDS ವಿರುದ್ಧ ದತ್ತ ಅಸಮಾಧಾನ

    ಬೆಂಗಳೂರು: ಪಕ್ಷದಲ್ಲಿನ ನಿಲುವು ಸ್ಪಷ್ಟವಾಗಿರಬೇಕು. ಕಾಲಕಾಲಕ್ಕೆ ಬದಲಾಗಬಾರದು. ಜಾತ್ಯಾತೀತವಾದ, ಸಾಮಾಜಿಕವಾದ ನ್ಯಾಯಕ್ಕೆ ಬದ್ಧವಾಗಿಬೇಕು. ಆದರೆ ಪಕ್ಷದಲ್ಲಿ ಈ ನಿಲುವು ಶಿಥಿಲವಾಗುತ್ತಿದೆ ಎನ್ನುವ ಗೊಂದಲ ಮತದಾರರನ್ನು ಕಾಡುತ್ತಿದೆ ಎಂದು ಪಕ್ಷದ ಕುರಿತಾಗಿ ಪರೋಕ್ಷವಾಗಿ ಮಾಜಿ ಶಾಸಕ ವೈ.ಎಸ್.ವಿ ದತ್ತ ಬೇಸರ ಹೊರ ಹಾಕಿದ್ದಾರೆ.

    ವಿಧಾನಸೌಧದಲ್ಲಿ ಮಾಜಿ ಶಾಸಕ ವೈ.ಎಸ್.ವಿ ದತ್ತ ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದು, ಬಿಜೆಪಿ ವಿರುದ್ಧ ಹೆಚ್ಚು ಹೋರಾಟ ಮಾಡುತ್ತಿಲ್ಲ. ಜಾತ್ಯಾತೀತ ನಿಲುವು ಶಿಥಿಲವಾಗುತ್ತಿದೆ. ಯಾವುದೇ ಕಾರಣಕ್ಕೂ ಸಿದ್ಧಾಂತದಲ್ಲಿ ಬದಲಾವಣೆಯಾಗಬಾರದು. ನಾವು ಯಾಕೆ ಪ್ರಾದೇಶಿಕ ಪಕ್ಷದಲ್ಲಿ ದುಡಿಯುತ್ತಿದ್ದೇವೆ? ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳೆರಡನ್ನೂ ಸಮಾನ ದೂರದಲ್ಲಿ ಇಡಬೇಕು. ಆ ಮೂಲಕ ಜಾತ್ಯಾತೀತ ನಿಲುವಿಗೆ ಬದ್ಧವಾಗಿರಬೇಕು. ಬಿಜೆಪಿ ವಿರುದ್ಧ ಸ್ಪಷ್ಟವಾಗಿ ಹೋರಾಟ ಮಾಡುತ್ತಿಲ್ಲ ಎಂಬ ಭಾವನೆ ಮೂಡುತ್ತಿದೆ. ಇದನ್ನ ಪಕ್ಷದ ವೇದಿಕೆಯಲ್ಲಿ ನಾನು ಚರ್ಚಿಸಿದ್ದೇನೆ. ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ಸ್ಪಷ್ಟ ನಿಲುವು ಇರಬೇಕು ಎಂದು ಜೆಡಿಎಸ್ ಪಕ್ಷದ ನಿಲುವಿನ ಬಗ್ಗೆ ದತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜಾತ್ಯಾತೀತ ವಿಚಾರದಲ್ಲಿ ದೇವೇಗೌಡ ಬಗ್ಗೆ ಯಾವುದೇ ಅನುಮಾನ ಇಲ್ಲ. ಅವರು ಪಕ್ಕಾ ಜಾತ್ಯಾತೀತವಾಗಿ ತೀರ್ಮಾನ ಕೈಗೊಂಡಿದ್ದಾರೆ. ನಮಗೆ ಈಗಲೂ ದೇವೇಗೌಡರ ಬಗ್ಗೆ ಆಶಾಭಾವನೆ ಇದೆ. ನಾನು 20 ವರ್ಷ ಹುಡುಗನಾಗಿದ್ದಾಗಲೇ ದೇವೇಗೌಡರ ಜೊತೆ ಸೇರಿಕೊಂಡವನು. ದೇವೇಗೌಡರ ಜೊತೆ ನನಗೆ ಸಂಪರ್ಕ ಹೆಚ್ಚಾಗಿ ಇದೆ ಎಂದು ಹೇಳುತ್ತಾ ಕುಮಾರಸ್ವಾಮಿ ಹೆಸರು ಹೇಳದೆ ಅವರ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    ಬಯಲು ಸೀಮೆಯ ರಾಗಿ ಬೆಳೆಯೋ ರೈತರ ಸಮಸ್ಯೆ ಗಂಭೀರವಾಗಿದೆ. ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಕಡು ಕಷ್ಟ ಅನುಭವಿಸುವಂತಾಗಿದೆ. ನಮ್ಮ ಜಿಲ್ಲೆ ರೈತರ ಕರೆದುಕೊಂಡು ಹೋಗಿ, ಚಿಕ್ಕಮಗಳೂರು ಜಿಲ್ಲೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದೆವು. ಆದರೆ ಬೆಂಗಳೂರಿನ ವಿಧಾನಸೌಧದಲ್ಲಿ ಆರ್ಡರ್ ಬೇಂಜ್ ಮಾಡಿಸಿಕೊಳ್ಳಿ ಅಂತ ಜಿಲ್ಲಾಧಿಕಾರಿ ನುಣಿಚಿಕೊಂಡಿದ್ದಾರೆ. ನಮ್ಮ ರೈತ ಮುಖಂಡರು ಒಂದು ತೀರ್ಮಾನ ಮಾಡಿದ್ದಾರೆ. ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಬೇಕಿದೆ. ಅಧಿವೇಶನ ಬರುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಿ ಬಂದಿದ್ದೇವೆ. ಸಾಧ್ಯವಾದರೆ ಆಹಾರ ಸಚಿವರ ಭೇಟಿ ಮಾಡಲೂ ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

  • ರಾಮ, ಅಯೋಧ್ಯೆ, ಹಿಂದುತ್ವ ಅಂದ್ರೆ ರಾಜಕಾರಣಿಗಳು ನೆಟ್ಟಗಾಗ್ತಾರೆ ಅಷ್ಟೇ – ದತ್ತ

    ರಾಮ, ಅಯೋಧ್ಯೆ, ಹಿಂದುತ್ವ ಅಂದ್ರೆ ರಾಜಕಾರಣಿಗಳು ನೆಟ್ಟಗಾಗ್ತಾರೆ ಅಷ್ಟೇ – ದತ್ತ

    – ನಮ್ಮ ಅಕ್ಕ ತಂಗಿಯರನ್ನು ಕಳೆದುಕೊಳ್ತೇವೆ

    ಚಿಕ್ಕಮಗಳೂರು: ರಾಮ, ಅಯೋಧ್ಯೆ, ಹಿಂದುತ್ವ ಅಂದ್ರೆ ಪ್ರಪಂಚ ನೆಟ್ಟಗೆ ಆಗುತ್ತೆ ಅಂತ ನಮ್ಮ ಯುವ ಸಮೂಹ ತಿಳಿದಿದೆ. ಆದರೆ ಪ್ರಪಂಚ ನೆಟ್ಟಗೆ ಆಗುತ್ತೊ ಇಲ್ವೋ ರಾಜಕಾರಣಿಗಳು ನೆಟ್ಟಗಾಗುತ್ತಾರೆ ಎಂದು ವೈ.ಎಸ್.ವಿ.ದತ್ತ ಆತಂಕ ವ್ಯಕ್ತಪಡಿಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಹೋಚಿಹಳ್ಳಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನದ ಬಳಿಕ ಮಾತನಾಡಿದ ಅವರು, ಹೀಗೆ ನಮ್ಮ ಅಕ್ಕತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತೆ ಎಂದು ನಮ್ಮ ಯುವಕರಿಗೆ ತಿಳುವಳಿಕೆ ಕೊಡಬೇಕಿದೆ ಎಂದು ತಿಳಿಸಿದರು.

    ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ರಾಮರಾಜ್ಯ ಅಂತಾರೆ, ಮರ್ಯಾದೆ ಪುರುಷೋತ್ತಮ ರಾಮ ಅಂತಾರೆ. ರಾಮನಿಗೆ ದೇವಸ್ಥಾನ ಕಟ್ಟಿಸಿದ್ದಕ್ಕೆ ಸಂಭ್ರಮಿಸ್ತಾರೆ. ರಾಮ ದೇವಾಲಯ ಬಿಡುಗಡೆಯಾಗಿದ್ದಕ್ಕೆ ಸಿಹಿ ಹಂಚುತ್ತಾರೆ. ಆದರೆ ಓರ್ವ ದಲಿತ ಹೆಣ್ಣು ಮಗಳನ್ನು ರಾತ್ರಿ ಆತ್ಯಾಚಾರ ಮಾಡಿ ಅವಳನ್ನು ಕೊಂದು ಶಿಕ್ಷೆಯನ್ನು ತಪ್ಪಿಸೋದಕ್ಕೆ ರಾತ್ರೋರಾತ್ರಿ ಗುಟ್ಟಾಗಿ ಕುಟುಂಬಕ್ಕೂ ಹೇಳದೇ ಅಂತ್ಯಕ್ರಿಯೆ ಮಾಡುತ್ತಾರೆ ಎಂದು ಕಿಡಿಕಾರಿದರು.

    ಈ ರೀತಿಯ ಕೆಲಸಕ್ಕೆ ಸರ್ಕಾರವೇ ಬೆಂಬಲವಾಗಿ ನಿಲ್ಲುತ್ತೆ ಅಂದ್ರೆ ಇಂತಹಾ ಸರ್ಕಾರವನ್ನ ಮನುಷ್ಯ ಸರ್ಕಾರ ಅನ್ನಬೇಕೋ ಅಥವ ಮೃಗಿಯ ಸರ್ಕಾರ ಅನ್ನಬೇಕೋ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ರೈತರು ಹೇಳಿದ್ದೇ ದರ – ಈರುಳ್ಳಿ, ಟೊಮಾಟೊ, ಕಲ್ಲಂಗಡಿ ಖರೀದಿಸಿದ ವೈ.ಎಸ್.ವಿ.ದತ್ತ

    ರೈತರು ಹೇಳಿದ್ದೇ ದರ – ಈರುಳ್ಳಿ, ಟೊಮಾಟೊ, ಕಲ್ಲಂಗಡಿ ಖರೀದಿಸಿದ ವೈ.ಎಸ್.ವಿ.ದತ್ತ

    – ಮೇಷ್ಟ್ರು ಸರಳತೆಗೆ ರೈತರು ಪಿಧಾ

    ಚಿಕ್ಕಮಗಳೂರು: ಬದುಕಿಗಾಗಿ ಬೆಳೆ ಬೆಳೆದು ಲಾಕ್‍ಡೌನ್‍ನಿಂದ ಕೊಳ್ಳುವವರಿಲ್ಲದೆ ಕಂಗಾಲಾಗಿದ್ದ ರೈತರ ಹೊಲಗಳಿಗೆ ಹೋಗಿ ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಸಾಂಕೇತಿಕವಾಗಿ ರೈತರು ಹೇಳಿದ ಬೆಲೆಗೆ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದಾರೆ.

    ಒಂದೆರಡು ಎಕ್ರೆಯಲ್ಲಿ ರೈತರು ಬದುಕಿಗಾಗಿ ನಾನಾ ಬೆಳೆ ಬೆಳೆದಿರುತ್ತಾರೆ. ಬೆಲೆ ಇದ್ದಾಗ ಬೆಳೆ ಇರಲ್ಲ. ಬೆಳೆ ಇದ್ದಾಗ ಬೆಲೆ ಇರಲ್ಲ. ರಾಜ್ಯದ ರೈತರದ್ದು ಶೋಚನಿಯ ಪರಿಸ್ಥಿತಿ. ರೈತರ ಬಹುಪಾಲು ಜೀವನ ಮಧ್ಯವರ್ತಿಗಳ ಜೇಬು ಸೇರುತ್ತೆ. ಅದರಲ್ಲೂ ಲಾಕ್‍ಡೌನ್ ವೇಳೆಯಲ್ಲಂತೂ ರೈತರ ಸ್ಥಿತಿ ಹೇಳತೀರದ್ದಾಗಿದೆ. ಎಲ್ಲದಕ್ಕೂ ಸರ್ಕಾರದ ಕೈ ಕಾಯದೆ, ಜನಪ್ರತಿನಿಧಿಗಳ ನಮ್ಮ ಸಾಮಾಜಿಕ ಜವಾಬ್ದಾರಿಯೂ ಇದೆ. ಎಲ್ಲದಕ್ಕೂ ಸರ್ಕಾರವನ್ನೇ ಕಾಯೋದು ಸೂಕ್ತವಲ್ಲ. ಹಾಗಾಗಿ, ನಮ್ಮ ಅಳಿಲೂ ಸೇವೆಯೂ ಇರಲೆಂದು ರೈತರ ಹೊಲಗಳಿಗೆ ಹೋದ ಮಾಜಿ ಶಾಸಕ ವೈ.ಎಸ್.ವಿ.ದತ್ತ ರೈತರಿಂದ 15 ಟನ್ ಕಲ್ಲಂಗಡಿ, 15 ಟನ್ ಟೊಮಾಟೊ ಹಾಗೂ 10 ಟನ್ ಈರುಳ್ಳಿ ಖರೀದಿಸಿದ್ದಾರೆ.

    ಸುಮಾರು ಒಂದೂವರೆ ಲಕ್ಷ ಮೌಲ್ಯದ ಈರುಳ್ಳಿ, ಟೊಮಾಟೊ ಹಾಗೂ ಕಲ್ಲಂಗಡಿ ಖರೀದಿಸಿದ್ದು, ನಾಳೆಯಿಂದ ಕಡೂರು ಹಾಗೂ ಬೀರೂರಿನಿ ಬಡವರಿಗೆ ಈ ಬೆಳೆಯನ್ನ ಹಂಚಲು ಮುಂದಾಗಿದ್ದಾರೆ. ರೈತರ ಹೊಲಗಳಿಗೆ ಭೇಟಿ ನೀಡಿದ್ದ ವೈ.ಎಸ್.ವಿ.ದತ್ತ, ರೈತರಿಂದ ನೇರವಾಗಿ ಖರೀದಿಸಿದ್ದಾರೆ. ಅದೂ ರೈತರು ಹೇಳಿದ ದರಕ್ಕೆ. ಒಂದು ರೂಪಾಯಿ ಹಿಂದೆ-ಮುಂದೆ ಚೌಕಾಸಿ ಮಾಡದೆ ಅವರು ಹೇಳಿದ ದರಕ್ಕೆ ಖರೀದಿಸಿದ್ದಾರೆ. ಒಂದು ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದ ರೈತ, ಕೊಳ್ಳುವವರಿಲ್ಲದೆ ಹೊಲದಲ್ಲೇ ಬಿಟ್ಟು ಕಂಗಾಲಾಗಿದ್ದ. ಇಂದು ವೈ.ಎಸ್.ವಿ.ದತ್ತ ಹೊಲಕ್ಕೆ ಹೋಗಿ ಕೆ.ಜಿ.ಗೆ ಏಳು ರೂಪಾಯಿಯಂತೆ 15 ಟನ್ ಕಲ್ಲಂಗಡಿ ಖರೀದಿಸಿರೊದು ರೈತನ ಆರ್ಥಿಕ ನಷ್ಟವನ್ನು ಒಂದಷ್ಟು ಕಡಿಮೆ ಮಾಡಿದೆ.

    ಸರಳ ರಾಜಕಾರಣಿ ದತ್ತ: ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಧಿಕಾರದಲ್ಲಿರಲಿ ಇಲ್ಲದಿರಲಿ. ಸರಳ ಶಾಸಕ ಎಂದೇ ಖ್ಯಾತಿ. ಎಲ್ಲೆಂದರಲ್ಲಿ ಕುಳಿತುಕೊಳ್ಳುವುದು, ಊಟ-ತಿಂಡಿ ಮಾಡೋದು ಅವರ ಸರಳತನಕ್ಕೆ ಹಿಡಿದ ಕೈಗನ್ನಡಿ. ದತ್ತ ಮೇಷ್ಟ್ರ ಇಂತಹ ಸರಳತನಕ್ಕೆ ಹಲವು ಉದಾಹರಣೆಗಳಿವೆ. ಇಂದೂ ಕೂಡ ತಾಲೂಕಿನ ಎರಡು ಹಳ್ಳಿಗಳಿಗೆ ಭೇಟಿ ನೀಡಿ ರೈತರ ಬೆಳೆ ಖರೀದಿಸಿ ರೈತರೊಂದಿಗೆ ಮಾತನಾಡಿದ ಅವರ ಕಷ್ಟ-ಸುಖ ಆಲಿಸಿದ ದತ್ತ, ಗೌಡನಕಟ್ಟೆಹಳ್ಳಿಯಲ್ಲಿ ಜನರೇ ತಯಾರಿಸಿದ್ದ ಚಿತ್ರಾನ್ನ ಹಾಗೂ ಬಜ್ಜಿಯನ್ನ ಅದೇ ಜನರ ಮಧ್ಯೆ ಗೋಡಾನ್‍ನಲ್ಲಿ ಕೂತು ಊಟ ಮಾಡಿದರು. ದತ್ತ ಅವರ ಈ ನಡೆ ಹೊಸತೇನಲ್ಲದಿದ್ದರೂ, ಈ ಸರಳತನಕ್ಕೆ ಹಳ್ಳಿಯ ಜನ ಕೂಡ ಫಿದಾ ಆಗಿದ್ದಾರೆ.

  • ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    ಲಾಕ್‍ಡೌನ್ ಎಫೆಕ್ಟ್ – ಮೇಷ್ಟ್ರಾದ ಮಾಜಿ ಶಾಸಕ ವೈ.ಎಸ್.ವಿ. ದತ್ತ

    – ನನಗೆ ಶಿಕ್ಷಕ ಎಂದು ಹೇಳಿಕೊಳ್ಳಲು ಹೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ. ದತ್ತ ಲಾಕ್‍ಡೌನ್ ಹಿನ್ನೆಲೆ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಫೇಸ್ ಬುಕ್ ಲೈವ್‍ನಲ್ಲಿ ಪ್ರತಿ ದಿನ ಸಂಜೆ 7.30 ರಿಂದ 8.30ರವೆಗೆ ಪಾಠ ಮಾಡುತ್ತಿದ್ದಾರೆ.

    ಒಂದು ವಾರ ಗಣಿತ, ಮತ್ತೊಂದು ವಾರ ಭೌತಶಾಸ್ತ್ರ ಪಾಠ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಜೂನ್ ಮೊದಲ ವಾರದಲ್ಲಿ ಪರೀಕ್ಷೆ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪರೀಕ್ಷೆ ನಡೆಸಲು ಸರ್ಕಾರ ಕೂಡ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗಾಗಿ ಶೀಘ್ರದಲ್ಲೇ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಪರೀಕ್ಷೆ ನಡೆಯುವ ಹಿನ್ನೆಲೆ, ದತ್ತ ಮೇಷ್ಟ್ರು ಫೇಸ್‍ಬುಕ್ ನಲ್ಲಿ ಈಗಾಗ್ಲೇ ಮಕ್ಕಳಿಗೆ ಗಣಿತ ಪಾಠವನ್ನು ಆರಂಭಿಸಿದ್ದಾರೆ.

    https://www.facebook.com/ysvDattaofficial/videos/1161467544194546/

    ಎರಡು ವಾರಗಳ ಕಾಲ ಮಕ್ಕಳಿಗೆ ಫೇಸ್‍ಬುಕ್ ಲೈವ್‍ನಲ್ಲಿ ಪಾಠ ಮಾಡಲಿದ್ದಾರೆ. ವೈ.ಎಸ್.ವಿ ದತ್ತ ಫೇಸ್‍ಬುಕ್ ಖಾತೆಯಿಂದ ದಿನ ಸಂಜೆ 7.30 ರಿಂದ 8.30ರವರಗೆ ಒಂದು ಗಂಟೆ ಮಕ್ಕಳಿಗೆ ಪಾಠ ಮಾಡಲಿದ್ದಾರೆ. ಜೆಡಿಎಸ್ ಮುಖಂಡ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತ ಮೂಲತಃ ಶಿಕ್ಷಕರು. ನಂತರ ಶಿಕ್ಷಕ ವೃತ್ತಿಯಿಂದ ರಾಜಕಾರಣಕ್ಕೆ ಬಂದಿದ್ದರು. ಈ ಹಿಂದೆ ಅವರು ಶಾಸಕರಾಗಿದ್ದಾಗಲೂ ಕೂಡ ಶಿಕ್ಷಕರ ದಿನಾಚರಣೆಯಂದು ಮಕ್ಕಳಿಗೆ ಪಾಠ ಮಾಡಿದ್ದರು.

    ಈಗ ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಮೇಲೆ 10ನೇ ತರಗತಿಯ ಪರೀಕ್ಷೆ ಕೂಡ ಮುಂದೂಡಲಾಗಿತ್ತು. ಈಗ ಜೂನ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇರುವ ಕಾರಣ ಮಕ್ಕಳಿಗೆ ಪುನರ್ ಮನನ ತರಗತಿ ಅಗತ್ಯವೆಂದು ವರ್ಷಗಳ ಬಳಿಕ ಕೈಯಲ್ಲಿ ಮತ್ತೆ ಚಾಕ್‍ಪೀಸ್ ಹಿಡಿದು ಬದಲಾದ ಜಗದಲ್ಲಿ ಫೇಸ್‍ಬುಕ್ ಮೂಲಕ ಮತ್ತೆ ಶಿಕ್ಷಕ ವೃತ್ತಿಗೆ ಕಾಲಿಟ್ಟಿದ್ದಾರೆ.