Tag: ವೈಲ್ಡ್ ಕಾರ್ಡ್ ಎಂಟ್ರಿ

  • BBK 11: ದೊಡ್ಮನೆಗೆ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ

    BBK 11: ದೊಡ್ಮನೆಗೆ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ

    ಬಿಗ್ ಬಾಸ್ ಮನೆಯ (Bigg Boss Kannada 11) ಆಟ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ಆಟ ಶುರುವಾಗಿ ಕೆಲವೇ ದಿನಕ್ಕೆ ಸ್ಪರ್ಧಿಯೊಬ್ಬರು ಮನೆಗೆ ವೈಲ್ಡ್ ಕಾರ್ಡ್ (Wild Card Entry) ಎಂಟ್ರಿ ಕೊಟ್ಟಿದ್ದಾರೆ. ಅದು ಬೇರೆ ಯಾರು ಅಲ್ಲ. ಸಂಗೀತದ ಮೂಲಕ ರಂಜಿಸಿದ್ದ ಗಾಯಕ ಹನುಮಂತ (Hanumantha) ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ನಟ ಕಿಚ್ಚ ಸುದೀಪ್ ತಾಯಿ ನಿಧನ

    ಹದಿನಾಲ್ಕು ಮಂದಿ ಇರುವ ಆಟದಲ್ಲಿ 15ನೇ ಸ್ಪರ್ಧಿಯ ಆಗಮನವಾಗಿದೆ. ಸಿಂಗರ್ ಆಗಿ ಗೆದ್ದು ಬೀಗಿದ್ದ ಜವಾರಿ ಹುಡುಗ ಹನುಮಂತ ಬೆಳ್ಳಿ ಮೂಡಿತೋ ಕೋಳಿ ಕೂಗಿತೋ ಎಂಬ ಹಾಡಿನ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಅವರ ಆಗಮನ ಕೆಲವರಿಗೆ ಖುಷಿ ಕೊಟ್ಟಿದ್ದರೆ, ಇನ್ನೂ ಕೆಲವರಿಗೆ ಅಚ್ಚರಿ ಮೂಡಿಸಿದೆ.

    ಇನ್ನೂ ಹನುಮಂತ ಊಟ ಮಾಡುವಾಗ, ಬಿಗ್ ಬಾಸ್ ಮಾತನಾಡಿಸಿದ್ದಾರೆ. ಇರಿ ಊಟ ಮಾಡಬೇಕಾದ್ರೆ, ನನಗೆ ತಲೆ ಓಡಲ್ಲ. ಆಮೇಲೆ ಮಾತನಾಡುತ್ತೇನೆ ಎಂದು ಬಿಗ್ ಬಾಸ್ ಗೆ ಹೇಳುತ್ತಾರೆ. ಅವರ ಮುಗ್ಧತೆ ನೋಡಿ ಮನೆಮಂದಿ ನಗುತ್ತಾರೆ. ಇನ್ನೂ ದೊಡ್ಮನೆಗೆ ಬಂದ ಮೊದಲ ದಿನವೇ ಹನುಮಂತ ಕ್ಯಾಪ್ಟನ್ ಆಗಿದ್ದಾರೆ. ಇನ್ನೂ ಅವರು ಕ್ಯಾಪ್ಟನ್ ಎಂದು ಘೋಷಿಸಿದ್ದೇ ಬಿಗ್ ಬಾಸ್. ಹಾಗಾಗಿ ಮನೆಮಂದಿ ದಂಗಾಗಿದ್ದಾರೆ. ಬಿಗ್ ಬಾಸ್ ಆದೇಶಕ್ಕೆ ಸ್ಪರ್ಧಿಗಳು ಸೈಲೆಂಟ್ ಆಗಿದ್ದಾರೆ. ಇನ್ನೂ ಸದಾ ಜಗಳಗಳ ಮೂಲಕ ಸುದ್ದಿ ಆಗೋ ಸ್ಪರ್ಧಿಗಳ ನಡುವೆ ಹನುಮಂತ ಸೆಡ್ಡು ಹೊಡೆಯುತ್ತಾರಾ? ಎಂದು ಕಾದುನೋಡಬೇಕಿದೆ.

  • ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

    ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

    ಬಿಗ್ ಬಾಸ್ ಮನೆ(Bigg Boss) ಇದೀಗ 60 ದಿನಗಳನ್ನ ಪೂರೈಸಿ, ಮುನ್ನುಗ್ಗುತ್ತಿದೆ. ಸಾಕಷ್ಟು ತಿರುವುಗಳನ್ನ ಪಡೆದುಕೊಳ್ಳುತ್ತಿವ ಈ ಮನೆಯಲ್ಲಿ ಇತ್ತೀಚೆಗೆ ದೊಡ್ಮನೆಯ ಏಳನೇ ಸ್ಪರ್ಧಿಯಾಗಿ ದೀಪಿಕಾ ದಾಸ್ ಔಟ್ ಆಗಿದ್ದರು. ಆದರೆ ಕಹಾನಿ ಮೇ ಟ್ವಿಸ್ಟ್ ಎಂಬಂತೆ ಮತ್ತೆ ದೀಪಿಕಾ ದಾಸ್ (Deepika Das) ಅವರ ರೀ ಎಂಟ್ರಿಯಾಗಿದೆ.

    ದೊಡ್ಮನೆಯ ಆಟದಲ್ಲಿ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಿಗ್ ಮನೆಯಲ್ಲಿ ಪ್ರತಿ ಸೀಸನ್‌ನಲ್ಲೂ ಅರ್ಧ ಆಟ ಆಗುತ್ತಿದ್ದಂತೆ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯನ್ನ ಕಳುಹಿಸಲಾಗುತ್ತದೆ. ಹಾಗಾಗಿ ಸಾನ್ಯ ಅಯ್ಯರ್, ಸೋನು, ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ದೀಪಿಕಾ ದಾಸ್ ಅವರೇ ರೀ (Wild Card Entry)ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದೀಗ ವಾಹಿನಿಯಲ್ಲಿ ಕಾಡಿನ ಟಾಸ್ಕ್ ಕುರಿತು ಒಂದು ಪ್ರೋಮೋ ಬಿಡಲಾಗಿದೆ. ಈ ಪ್ರೋಮೋದಲ್ಲಿ ರೀ ಎಂಟ್ರಿಯ ಬಗ್ಗೆ ಸೂಚನೆ ಕೊಡಲಾಗಿದೆ. ಅದು ದೀಪಿಕಾ ದಾಸ್ ಅವರೇ ಎಂದು ಅಭಿಮಾನಿಗಳು ಅಂದಾಜಿಸಿದ್ದಾರೆ. ಎಲಿಮಿನೇಟ್ ಆದ ಮೇಲೆ ದೀಪಿಕಾ ದಾಸ್ ಅವರ ಮನೆಗೆ ಬಂದಿಲ್ಲ. ಮಾಧ್ಯಮದ ಕಣ್ಣಿಗೂ ಬಿದ್ದಿಲ್ಲ. ಹಾಗಾಗಿ ದೀಪಿಕಾ ಅವರೇ ರೀ ಎಂಟ್ರಿ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ:ನಟ ಸೋಮಶೇಖರ್ ಪ್ರಚಾರಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾನೆ : ನಟಿ ನಯನಾ

    ಒಂದು ವೇಳೆ ದೀಪಿಕಾ ಅವರಿಗೆ ರೀ ಎಂಟ್ರಿ ಕೊಟ್ಟಿದಲ್ಲಿ ಆಟದಲ್ಲಿ ಮತ್ತಷ್ಟು ಟ್ವಿಸ್ಟ್ ಸಿಗಲಿದೆ. ದೀಪಿಕಾ ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿ ಕೇಳಿ ಶಾಕ್ ಆಗಿದ್ದ ಫ್ಯಾನ್ಸ್‌ಗೆ ಈ ಸುದ್ದಿ ಕೇಳಿ ಫುಲ್ ಥ್ರಿಲ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ‘ಬಿಗ್ ಬಾಸ್’ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ: ಅಚ್ಚರಿಯ ಮತ್ತೊಂದು ಹೆಸರು

    ಬಿಗ್ ಬಾಸ್ ಸೀಸನ್ 9 ಈಗಾಗಲೇ ಏಳು ವಾರಗಳನ್ನು ಮುಗಿಸಿ, ಎಂಟನೇ ವಾರಕ್ಕೆ ಕಾಲಿಡುತ್ತಿದೆ. ಈ ವೇಳೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಂತೆ ಹಲವು ದಿನಗಳಿಂದ ನಾನಾ ಹೆಸರುಗಳು ಕೇಳಿ ಬರುತ್ತಿವೆ. ಈ ಹಿಂದೆ ಸೋನು ಶ್ರೀನಿವಾಸ್ ಗೌಡ ದೊಡ್ಮನೆ ಮರು ಪ್ರವೇಶ ಮಾಡುತ್ತಾರೆ ಎಂದು ಹೇಳಲಾಗಿತ್ತು. ಓಟಿಟಿ ಸೀಸನ್ ನಲ್ಲಿದ್ದ ಸೋನು ಗೌಡಗೆ ಬಿಗ್ ಬಾಸ್ ಸೀಸನ್ 9ಕ್ಕೂ ಹೋಗುತ್ತಾರೆ ಎನ್ನುವ ಮಾಹಿತಿ ಇತ್ತು. ಆದರೆ, ಈವರೆಗೂ ಅದು ಆಗಲಿಲ್ಲ.

    ಸೋನು ಶ್ರೀನಿವಾಸ್ ಗೌಡ ಹೆಸರು ಕೇಳಿ ಬಂದ ಬೆನ್ನಲ್ಲೇ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಬಿಗ್ ಬಾಸ್ ಮನೆ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡಿತು. ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಅವರನ್ನು ಕಟ್ಟಿಹಾಕಲು ಚಕ್ರವರ್ತಿ ಚಂದ್ರಚೂಡ ಸರಿಯಾದ ಆಟಗಾರ. ಹಾಗಾಗಿ ಚಕ್ರವರ್ತಿ ಚಂದ್ರಚೂಡಗೆ ಈ ಬಾರಿ ಮತ್ತೊಮ್ಮೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಯಿತು. ಆದರೆ, ಈವರೆಗೂ ಅದು ಕೂಡ ಆಗಿಲ್ಲ. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ಇದೀಗ ಮತ್ತೊಂದು ಅಚ್ಚರಿಯ ಹೆಸರು ಕೇಳಿ ಬಂದಿದ್ದು, ಮೊನ್ನೆಯಷ್ಟೇ ಮನೆಯಿಂದ ಹೊರ ಬಂದಿರುವ ಸಾನ್ಯ  ಅಯ್ಯರ್ ಅವರನ್ನು ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಒಳಗೆ ಕಳುಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾನ್ಯ ಮತ್ತೆ ಹೋಗಲಿ ಎನ್ನುವ ಒತ್ತಾಯ ಕೂಡ ಕೇಳಿ ಬರುತ್ತಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದ ತಕ್ಷಣ ಹಲವು ಮಾಧ್ಯಮಗಳಿಗೆ ಸ್ಪರ್ಧಿಗಳು ಸಂದರ್ಶನ ನೀಡುತ್ತಿದ್ದರು. ಆದರೆ, ಸಾನ್ಯ ಈವರೆಗೂ ಯಾವುದೇ ಮಾಧ್ಯಮಕ್ಕೆ ಸಿಕ್ಕಿಲ್ಲ. ಹಾಗಾಗಿ ಇಂಥದ್ದೊಂದು ಮಾತು ಕೇಳಿ ಬಂದಿದೆ.

    ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಗಾಗಿ ಸಾನ್ಯ ಅಯ್ಯರ್, ಸೋನು ಶ್ರೀನಿವಾಸ್ ಗೌಡ, ಚಕ್ರವರ್ತಿ ಚಂದ್ರಚೂಡ ಮುಂತಾದವರ ಹೆಸರು ಕೇಳಿ ಬರುತ್ತಿವೆ ಹೊರತು, ಈವರೆಗೂ ಯಾರೂ ಮನೆ ಒಳಗೆ ಪ್ರವೇಶ ಮಾಡಿಲ್ಲ. ಈ ಸೀಸನ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಇರತ್ತಾ ಎನ್ನುವುದು ಗೊತ್ತಿಲ್ಲ. ಆದರೂ, ವಾರದಿಂದ ವಾರಕ್ಕೆ ಒಬ್ಬೊಬ್ಬರ ಹೊಸ ಹೆಸರಂತೂ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ

    ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೊಸ ಸ್ಪರ್ಧಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

    ಪ್ರತಿ ಸೀಸನ್‍ನಲ್ಲಿ ಬಿಗ್ ಬಾಸ್ ಮನೆಗೆ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡುತ್ತಾರೆ. ಹಾಗೆಯೇ ಈ ಬಾರಿಯೂ ಕೂಡ ಇಬ್ಬರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಆರ್ ಜೆ ಪೃಥ್ವಿ ಎಂಟ್ರಿ ಕೊಟ್ಟಿದ್ದು, ಈಗ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.

    ಖಾಸಗಿ ವಾಹಿನಿ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಯುವತಿಯೊಬ್ಬರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಗೆ ಪ್ರವೇಶಿಸಿದ ಸ್ಪರ್ಧಿ ಯಾರಿಗೂ ಪರಿಚಯ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ ವೈಲ್ಡ್ ಕಾರ್ಡ್ ಸ್ಪರ್ಧಿ ಕಿಶನ್ ಅವರಿಗೆ ಮಾತ್ರ ಪರಿಚಯ ಇದ್ದಾರೆ ಎಂಬುದು ಪ್ರೋಮೋ ನೋಡಿದರೆ ತಿಳಿಯುತ್ತಿದೆ. ಏಕೆಂದರೆ ಸ್ಪರ್ಧಿ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಕಿಶನ್ ಅವರನ್ನು ತಪ್ಪಿಕೊಂಡಿದ್ದಾರೆ. ಈ ವೇಳೆ ಮನೆಯ ಸದಸ್ಯರು ಹೊಸ ಎಂಟ್ರಿ ಯಾರು? ಎಂದು ಅಚ್ಚರಿಗೊಂಡಿದ್ದಾರೆ.

    ಮಾಹಿತಿ ಪ್ರಕಾರ, ವೈಲ್ಡ್ ಕಾರ್ಡ್ ಮೂಲಕ ನಟಿ ರಕ್ಷಾ ಸೋಮಶೇಖರ್ ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ. ರಕ್ಷಾ, ನಟ ಕಾರ್ತಿಕ್ ಜಯರಾಂ ನಟಿಸಿದ್ದ `ಮೇ 1′ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇವರೇ ಈಗ ಬಿಗ್ ಮನೆಗೆ ಎಂಟ್ರಿ ಕೊಟ್ಟಿರುವುದು ಎನ್ನಲಾಗಿದೆ.