Tag: ವೈರಸ್

  • ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಉಡುಪಿ: ಕೋಳಿಯಿಂದ ನಿಪಾ ವೈರಸ್ ಹರಡವುದಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಮಣಿಪಾಲ ವೈರಸ್ ರಿಸರ್ಚ್ ಇಲಾಖೆ ಮುಖ್ಯಸ್ಥ ಡಾ. ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಲಕ್ಷ ಬಾವಲಿಗಳಲ್ಲಿ ಕೇವಲ ಐದರಲ್ಲಿ ಮಾತ್ರ ಇಂತಹ ವೈರಸ್ ಕಾಣಲು ಸಾಧ್ಯ. ಮಣಿಪಾಲ ಸೆಂಟರ್ ನಲ್ಲಿ ನಿಪಾ ವೈರಸ್ ಮಾದರಿ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿಸಿದರು.

    ಕೇರಳ ಸರ್ಕಾರದ ಕೋರಿಕೆಯ ಮೇರೆಗೆ ನಿಫಾ ವೈರಸ್ ರೋಗಿಗಳನ್ನು ಪರೀಕ್ಷಿಸಲು ಮಣಿಪಾಲದ ವೈದ್ಯರ ತಂಡ ಕೇರಳಕ್ಕೆ ತೆರಳಿತ್ತು. ಬಾವಲಿ ಹೊರತಾಗಿ ಬೇರೆ ಯಾವ ಪ್ರಾಣಿ-ಪಕ್ಷಿಗಳಲ್ಲೂ ನಿಪಾ ವೈರಸ್ ಕಾಣಸಿಕ್ಕಿಲ್ಲ ಎಂದು ದೃಢಪಡಿಸಿದರು.

    ನಿಪಾ ಎನ್ನುವುದು ಸಾಂಕ್ರಾಮಿಕ ರೋಗವಲ್ಲ. ಆದರೆ ಮುನ್ನೆಚ್ಚರಿಕೆ ಅತ್ಯಗತ್ಯ. ಬಾವಲಿ ಕಚ್ಚಿದ ಹಣ್ಣುಗಳನ್ನು ತಿನ್ನದಿರುವುದು ಒಳಿತು. ಕೋಳಿಯಿಂದ ಹರಡುತ್ತದೆ ಅನ್ನೋದೆಲ್ಲ ಸುಳ್ಳು ಸುದ್ದಿ. ಈ ಬಗ್ಗೆ ಅನಗತ್ಯ ಭಯಪಡುವ ಅಗತ್ಯವೇ ಇಲ್ಲ. ಕೇರಳದಲ್ಲಿ ಈಗಾಗಲೇ ವಿದೇಶಗಳಿಂದ ಔಷಧಿಗಳನ್ನು ತರಲಾಗಿದೆ ಎಂದು ತಿಳಿಸಿದರು.

  • ಬಾವಲಿಯನ್ನು ಕೊಲ್ಲಿ ಎಂದು ಬೆಂಗ್ಳೂರಿನ ವಿವಿಧ ಕಡೆಯಿಂದ ಬಿಬಿಎಂಪಿಗೆ ಕರೆ!

    ಬಾವಲಿಯನ್ನು ಕೊಲ್ಲಿ ಎಂದು ಬೆಂಗ್ಳೂರಿನ ವಿವಿಧ ಕಡೆಯಿಂದ ಬಿಬಿಎಂಪಿಗೆ ಕರೆ!

    ಬೆಂಗಳೂರು: ನಿಪಾ ವೈರಸ್ ಸುದ್ದಿ ಎಷ್ಟರ ಮಟ್ಟಿಗೆ ಜನರ ಕಂಗೆಡಿಸಿದೆಯೋ ಗೊತ್ತಿಲ್ಲ. ಆದರೆ ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕರ ನಿದ್ದೆಗೆಡಿಸಿರೋದಂತೂ ಸತ್ಯ.

    ನಿಪಾ ವೈರಸ್ ಹರಡೋದು ಬಾವಲಿಗಳಿಂದ ಅಂತೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿದ್ದೇ ತಡ ಬೆಂಗಳೂರಿನ ಜನ ತಮ್ಮ ಸುತ್ತಮುತ್ತಲಿನ ಬಾವಲಿಗಳನ್ನ ಶತ್ರುಗಳಂತೆ ನೋಡೋಕೆ ಶುರು ಮಾಡಿದ್ದಾರೆ. ಅಷ್ಟೇ ಅಲ್ಲ ಬಾವಲಿಗಳನ್ನ ಕೊಲ್ಲಿ ಇಲ್ಲದಿದ್ದರೆ ನಾವು ಬಾವಲಿಗಳಿಂದ ಸತ್ತು ಹೋಗ್ತೇವೆ ಎಂದು ಬಿಬಿಎಂಪಿ ವನ್ಯಜೀವಿ ವಿಭಾಗದ ಸ್ವಯಂ ಸೇವಕರಿಗೆ ದೂರವಾಣಿ ಕರೆಗಳು ಬರುತ್ತಿವೆ.

    ಸ್ವಯಂ ಸೇವಕರು ಬಾವಲಿಯಿಂದ ನಿಪಾ ಸೋಂಕು ಹರಡಲ್ಲ ಎಂದರೂ ಜನ ಮಾತ್ರ ಒಪ್ಪೋಕೆ ತಯಾರಿಲ್ಲ. ಬಾವಲಿಯಿಂದ ರಕ್ಷಿಸಿ ಎಂದು ಬಸವನಗುಡಿ, ಜಯನಗರ, ಸ್ಯಾಂಕಿಟ್ಯಾಂಕ್, ಬನ್ನೇರುಘಟ್ಟ ಈ ಭಾಗದಿಂದ ಹೆಚ್ಚೆಚ್ಚು ಕರೆಗಳು ಬರ್ತಿವೆ.

    ಸ್ವಯಂ ಸೇವಕರು ಬಾವಲಿಗಳಿಂದ ಯಾವುದೇ ತೊಂದರೆ ಇಲ್ಲ ಎಂದು ಜಾಗೃತಿ ಮೂಡಿಸುತ್ತಿದ್ದರು. ಜನ ಒಂದು ಹೆಜ್ಜೆ ಮುಂದೆ ಹೋಗಿ ಸ್ಥಳೀಯ ಕಾರ್ಪೊರೇಟರ್ ಗಳ ಬಳಿ ಸ್ವಯಂ ಸೇವಕರ ವಿರುದ್ಧ ದೂರುತ್ತಿದ್ದಾರೆ. ಕರೆ ಮಾಡಿದರೆ ಯಾರೂ ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ ಎಂದು ಕಂಪ್ಲೇಂಟ್ ಮಾಡುತ್ತಿದ್ದಾರೆ. ಕಾರ್ಪೊರೇಟರ್ ಗಳ ಮೂಲಕ ಒತ್ತಡ ಹಾಕಿಸುವ ಪ್ರಯತ್ನವನ್ನೂ ಮುಂದುವರೆಸಿದ್ದಾರೆ. ಅಷ್ಟರಮಟ್ಟಿಗೆ ಬಾವಲಿಗಳು ಬೆಂಗಳೂರಿಗರನ್ನು ಬೆಚ್ಚಿಬೀಳಿಸಿವೆ. ಇದನ್ನೂ ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಜನರ ಭಯವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ನಕಲಿ ಸ್ವಯಂ ಸೇವಕರು ದುಡ್ಡು ಪಡೆದು ಬಾವಲಿಗಳನ್ನ ಕೊಂದಿರುವ ಘಟನೆಗಳು ನಡೆದಿವೆ. ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಬಾವಲಿಗಳಿಂದ ಸೋಂಕು ಹರಡುವುದಿಲ್ಲ ಎಂದು ವರದಿ ನೀಡಿದೆ. ಹೀಗಿದ್ದೂ ಬೆಂಗಳೂರು ಜನ ಮಾತ್ರ ಬಾವಲಿಗಳಿಂದ ಬದುಕಿಸಿ ಅಂತಿರೋದು ವಿಪರ್ಯಾಸ. ಇದನ್ನೂ ಓದಿ: ನಿಪಾ ಜ್ವರಕ್ಕೆ ಹೆದರಿ ಬಾವಲಿಗಳನ್ನು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧರಿಸಿದ ಗ್ರಾಮಸ್ಥರು

  • ರಾಹುಲ್ ಗಾಂಧಿಯವರನ್ನು ಡೆಡ್ಲಿ ನಿಪಾ ವೈರಸ್‍ಗೆ ಹೋಲಿಸಿದ ಹರ್ಯಾಣ ಸಚಿವ

    ರಾಹುಲ್ ಗಾಂಧಿಯವರನ್ನು ಡೆಡ್ಲಿ ನಿಪಾ ವೈರಸ್‍ಗೆ ಹೋಲಿಸಿದ ಹರ್ಯಾಣ ಸಚಿವ

    ಚಂಡೀಗಢ: ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಹೆಸರುವಾಸಿಯಾದ ಹರ್ಯಾಣ ಸಚಿವ ಅನಿಲ್ ವಿಜ್‍ರವರು ರಾಹುಲ್ ಗಾಂಧಿಯವರನ್ನು ದೇಶದಲ್ಲಿ ಬಲಿ ತೆಗೆದುಳ್ಳುತ್ತಿರುವ ನಿಪಾ ವೈರಸ್ ಸೋಂಕಿಗೆ ಹೋಲಿಕೆ ಮಾಡಿದ್ದಾರೆ.

    ಅನಿಲ್ ವಿಜ್ ಅವರು “ರಾಹುಲ್ ಗಾಂಧಿಯವರು ನಿಪಾ ವೈರಸ್ ಇದ್ದಂತೆ. ಯಾವ ಪಕ್ಷದ ಜೊತೆ ಅವರು ಮಾತುಕತೆ ನಡೆಸುತ್ತಾರೋ ಆ ಪಕ್ಷ ಬಲಿಯಾಗುತ್ತದೆ. ಮೈತ್ರಿಗಾಗಿ ಪಕ್ಷಗಳು ಸಂಪರ್ಕಸಿದರೂ ಆ ಪಕ್ಷಗಳು ಬಲಿಯಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡುವುದರ ಜೊತೆಗೆ ಆ ಟ್ವೀಟ್ ಅನ್ನು ಪಿನ್ ಮಾಡಿದ್ದಾರೆ.

    ಈ ರೀತಿಯ ವಿವಾದಾತ್ಮಕ ಹೇಳಕೆಗಳು ಅನಿಲ್ ವಿಜ್ ಇವರಿಗೆ ಹೊಸದೇನು ಅಲ್ಲ, ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ, ನರೇಂದ್ರ ಮೋದಿಯವರ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾಂಗ್ರೆಸ್‍ನವರೆ ಅಡಿಪಾಯ ಹಾಕಿಕೊಟ್ಟಿದ್ದಾರೆಂದು ಹೇಳಿಕೆ ನೀಡಿದ್ದರು.

    ಒಮ್ಮೆ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದಾಗ ಅವರು ತಮ್ಮ ನಾಯಿಗೆ ಬಳಸಿದ ತಟ್ಟೆಯನ್ನೇ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಾರೆ. ತಮ್ಮ ಮನೆಯ ನಾಯಿಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಗೂ ಯಾವುದೇ ವ್ಯತ್ಯಾಸವಿಲ್ಲವೆಂಬ ಹೇಳಿಕೆಯನ್ನು ನೀಡಿದ್ದರು.

    ಒಂದು ತಿಂಗಳ ಹಿಂದೆ ಅವರು ಭಗತ್‍ಸಿಂಗ್ ಮತ್ತು ಲಾಲಾ ಲಜಪತರಾಯ್‍ರವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಆದರೆ ನೆಹರು ಮತ್ತು ಗಾಂಧಿಯವರು ದೇಶಕ್ಕಾಗಿ ಒಂದು ಕಟ್ಟಿಗೆಯನ್ನು ನೀಡಿಲ್ಲವೆಂದು ಹೇಳಿಕೆ ನೀಡಿದ್ದರು.

    ಕಳೆದ ವರ್ಷ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಅವರು “ಭಾರತೀಯಳಾಗಿರುವುದು ನಿಮಗೆ ನಾಚಿಕೆಯಾಗಿದ್ದರೆ ಹೋಗಿ ಸಮುದ್ರಕ್ಕೆ ಹಾರಿ’ ಎಂದು ಹೇಳಿಕೆ ನೀಡಿದ್ದರು.

  • ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಶಿವಮೊಗ್ಗ: ಕೇರಳದಲ್ಲಿ ಹಲವರನ್ನು ಬಲಿ ಪಡೆದಿದ್ದ ನಿಪಾ ಸೋಂಕು ಸದ್ಯ ಕರಾವಳಿಯಿಂದ ಮಲೆನಾಡಿಗೂ ಹರಡಿರುವ ಶಂಕೆ ವ್ಯಕ್ತವಾಗಿದ್ದು, ನಿಪಾ ಸೋಕು ಶಂಕಿತ ವ್ಯಕ್ತಿಗೆ ಜಿಲ್ಲೆಯ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಯುವಕ ಮಿಥುನ್ ಗೆ ಸೋಂಕು ಹರಡಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಮೂಲತಃ ಸಾಗರದ ಮಿಥುನ್ ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕೇರಳದಲ್ಲಿ ನಿಪಾ ಸೋಂಕು ಹರಡಿದ ಹಿನ್ನೆಲೆಯಲ್ಲಿ ಸಾಗರಕ್ಕೆ ಮರಳಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ದನ್ನು ಓದಿ:   ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಮೊದಲು ಮಿಥುನ್ ಸಾಗರ ತಾಲೂಕಿನ ಶಿರವಂತೆ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಈಗ ಸಾಗರ ಸರ್ಕಾರಿ ಆಸ್ಪತ್ರೆಯ ವಿಶೇಷ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಿಥುನ್ ರಕ್ತ ಮಾದರಿ ಸಂಗ್ರಹಿಸಿ ಪುಣೆ ಆಸ್ಪತ್ರೆಗೆ ಕಳಿಸಲಾಗಿದೆ. ಇದನ್ನು ಓದಿ: ಮಂಗಳೂರಲ್ಲಿ ನಿಪಾ ಸೋಂಕು ಶಂಕೆ – ಹೈ ಅಲರ್ಟ್ ಜಾರಿ

    ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಶಿವಮೊಗ್ಗ ಡಿಎಚ್‍ಓ ಡಾ ವೆಂಕಟೇಶ್, ಮಿಥುನ್ ಅವರ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಚೇತರಿಕೆ ಕಾಣಿಸುತ್ತಿದೆ. ರಕ್ತದ ಪರೀಕ್ಷೆ ವರದಿ ಬಂದ ಬಳಿಕ ಈ ಕುರಿತು ಖಚಿತ ಮಾಡಲಾಗುತ್ತದೆ. ನಿಪಾ ಕುರಿತ ಜಾಗೃತಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

  • ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ತಿರುವನಂತಪುರಂ: ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಬಲಿಯಾವುದಕ್ಕೂ ಮುನ್ನ ಪತಿಗೆ ಕೇರಳದ ನರ್ಸ್ ಒಬ್ಬರು ಭಾವನಾತ್ಮಕ ಪತ್ರ ಬರೆದು, ತಾನು ಸಾಯುವುದು ಖಚಿತವಾಗಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.

    31 ವರ್ಷದ ಲಿನಿ ಅವರು ಕೇರಳದ್ಯಾಂತ ಹೆಚ್ಚಿನ ಮಂದಿಯನ್ನು ಬಲಿ ಪಡೆಯುತ್ತಿರುವ ನಿಪಾ ವೈರಸ್ ಸೋಂಕು ತಗಲಿದ್ದ ರೋಗಿಗೆ ಚಿಕಿತ್ಸೆ ನೀಡುವ ವೇಳೆ ವೈರಸ್ ಹರಡಿ ಸಾವನ್ನಪ್ಪಿದ್ದರು.

    ವೈರಸ್ ಸೋಂಕು ತಗಲಿದ ವೇಳೆ ತನ್ನ ಕುಟುಂಬವನ್ನು ನೋಡಲು ಸಾಧ್ಯವಾಗದ ಲಿನಿ ತಮ್ಮ ಪತಿಗೆ ಪತ್ರ ಬರೆದಿದ್ದರು. ಸೋಕಿನಿಂದ ಮೃತ ಪಟ್ಟ ಲಿನಿ ಅವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೇ ಆಸ್ಪತ್ರೆಯ ಆಡಳಿತ ಮಂಡಳಿ ಶವ ಸಂಸ್ಕಾರವನ್ನು ಮಾಡಿತ್ತು.

    ಲಿನಿ ಅವರಿಗೆ 7 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ದಾಖಲಾದ ಮೊದಲ ನಿಪಾ ವೈರಸ್ ಸೋಂಕು ತಗುಲಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದರು. ಈ ವೇಳೆ ಅವರಿಗೂ ಸೋಂಕು ಹರಡಿತ್ತು. ತಮಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಪತಿಗೆ ಪತ್ರ ಬರೆದಿರುವ ಅವರು ನಾನು ಬಹುತೇಕ ಸಾಯುವುದು ಖಚಿತವಾಗಿದ್ದು, ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಅನ್ನಿಸುತ್ತಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ. ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    https://twitter.com/deepusebin/status/998573629435727873?

    ಲಿನಿ ಅವರ ಮೃತ ದೇಹವನ್ನು ಕೊನೆಯ ಬಾರಿಗೆ ನೋಡಲು ಸಹ ಯಾರಿಗೂ ಅವಕಾಶ ನೀಡದೇ ಅಂತಿಮ ಸಂಸ್ಕಾರ ನಡೆಸಲಾಗಿದೆ. ಸೋಂಕು ಇತರೇ ವ್ಯಕ್ತಿಗಳಿಗೂ ಹರಡುವ ಕಾರಣದಿಂದ ಆರೋಗ್ಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಮೊದಲ ಬಾರಿಗೆ ನಿಪಾ ವೈರಸ್ ಗೆ ಬಲಿಯಾದ ಮೂವರು ಸಹ ಒಂದೇ ಕುಟುಂಬಕ್ಕೆ ಸೇರಿದ್ದು, ಅದರಲ್ಲಿ ಇಬ್ಬರು ಸಹೋದರರು ಹಾಗೂ ಆನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯೂ ಸಾವನ್ನಪ್ಪಿದ್ದಾರೆ. ಉಳಿದಂತೆ ಕುಟುಂಬದ ಸಹೋದರರ ತಂದೆಗೂ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೇರಾಂಬ್ರ ಆಸ್ಪತ್ರೆಯ ಮೂಲಗಳು ತಿಳಿಸಿದೆ. ಇದುವರೆಗೂ ಕೇರಳದಲ್ಲಿ 16ಕ್ಕೂ ಹೆಚ್ಚಿನ ಜನ ನಿಪಾ ವೈರಸ್ ಗೆ ಬಲಿಯಾಗಿದ್ದಾರೆ.

  • 1 ತಿಂಗಳಿಂದ ಬಂದಾಗಿದ್ದ ಮೈಸೂರು ಮೃಗಾಲಯ ಇಂದಿನಿಂದ ಓಪನ್

    ಮೈಸೂರು: ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯ ಇಂದಿನಿಂದ ತೆರೆಯಲಿದೆ. ಭೋಪಾಲ್ ಲ್ಯಾಬ್ ವರದಿ ಆಧಾರದ ಮೇಲೆ ಮೃಗಾಲಯ ರೀ ಓಪನ್ ಆಗುತ್ತಿದ್ದು ಪ್ರಾಣಿಪ್ರಿಯರ ಹಾಗೂ ಮೃಗಾಲಯ ಸಮೀಪದ ವ್ಯಾಪಾರಸ್ಥರ ಸಂತಸಕ್ಕೆ ಕಾರಣವಾಗಿದೆ.

    ಭೋಪಾಲ್ ಲ್ಯಾಬ್‍ನಲ್ಲಿ ಪಕ್ಷಿಗಳ ಎರಡನೇ ಮಾದರಿಯಲ್ಲೂ ಯಾವುದೇ ಸೊಂಕಿನ ಅಂಶ ಇಲ್ಲ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ಕಾರ್ಯದರ್ಶಿ ಹಾಗೂ ಸೆಂಟ್ರಲ್ ಝೂ ಅಥಾರಿಟಿ ಮೈಸೂರು ಮೃಗಾಲಯವನ್ನ ಪುನರಾರಂಭಿಸುವಂತೆ ಸೂಚನೆ ನೀಡಿದೆ. ಹಾಗಾಗಿ ಪ್ರವಾಸಿಗರು, ಸಾರ್ವಜನಿಕರು ಯಾವುದೇ ಅಳುಕಿಲ್ಲದೆ ಮೃಗಾಲಯಕ್ಕೆ ಹೋಗಿ ಬರಬಹುದು.

    ಹಕ್ಕಿ ಜ್ವರ ಭೀತಿ ಆವರಿಸಿರುವ ಹಿನ್ನಲೆಯಲ್ಲಿ ಸಮಾರು 125 ವರ್ಷಗಳ ಇತಿಹಾಸವಿರುವ ಮೈಸೂರಿನ ಐತಿಹಾಸಿಕ ಶ್ರೀಚಾಮರಾಜೇಂದ್ರ ಮೃಗಾಲಯವನ್ನು ಮುಂಜಾಗ್ರತಾ ಕ್ರಮವಾಗಿ ಒಂದು ತಿಂಗಳ ಕಾಲ ಮುಚ್ಚಲಾಗಿತ್ತು. ಮೃಗಾಲಯದ ಕೊಳ-3ರಲ್ಲಿ ವಲಸೆ ಹಕ್ಕಿಗಳು ಮೃತಪಟ್ಟಿದ್ದು, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಆಂಡ್ ಅನಿಮಲ್ ಡಿಸೀಸ್ (ಎನ್‍ಐಎಚ್‍ಎಸ್‍ಎಡಿ) ಸಂಸ್ಥೆಯು ಮೃತಪಟ್ಟ ಹಕ್ಕಿಗಳಲ್ಲಿ ಎಚ್5ಎನ್8 ವೈರಾಣು ಇರುವ ಬಗ್ಗೆ ದೃಢಪಟಿಸಿತ್ತು. ಈ ಹಿನ್ನೆಲೆಯಲ್ಲಿ ಜನವರಿ 4 ರಿಂದ ಫೆಬ್ರವರಿ 2ರವರೆಗೆ ಮೃಗಾಲಯವನ್ನು ಅಲ್ಲಿನ ಆಡಳಿತ ಮಂಡಳಿ ಬಂದ್ ಮಾಡಿತ್ತು.