Tag: ವೈರಸ್

  • ಶನಿವಾರ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ?

    ಶನಿವಾರ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ?

    ನವದೆಹಲಿ: ಲಾಕ್‍ಡೌನ್ ವಿಸ್ತರಿಸಬೇಕೇ ಬೇಡವೇ ಎನ್ನುವುದರ ಬಗ್ಗೆ ಶನಿವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆಯಿದೆ.

    ನಾಳೆ ಮೋದಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಏ.15ರ ನಂತರ ದೇಶವ್ಯಾಪಿ ಲಾಕ್‍ಡೌನ್ ವಿಸ್ತರಣೆಯಾಗುತ್ತಾ? ಇಲ್ಲವೋ ಎನ್ನುವ  ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಇಲ್ಲಿಯವರೆಗೆ ಒಡಿಶಾ ರಾಜ್ಯ ಏ.30ರ ವರೆಗೆ ಲಾಕ್‍ಡೌನ್ ವಿಸ್ತರಿಸಿದೆ. ಉತ್ತರ ಪ್ರದೇಶದ 15 ಜಿಲ್ಲೆಗಳಲ್ಲಿ ಲಾಕ್‍ಡೌನ್ 15 ದಿನಗಳ ಕಾಲ ವಿಸ್ತರಣೆಯಾಗಿದೆ. ಉಳಿದ ರಾಜ್ಯಗಳ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.

    ಈ ಹಿಂದೆ ಮಾರ್ಚ್ 19 ರಂದು ದೇಶವನ್ನು ಉದ್ದೇಶಿಸಿ ಮಾ.21 ರಂದು ಜನತಾ ಕರ್ಫ್ಯೂ ಮಾಡಬೇಕೆಂದು ಕೇಳಿಕೊಂಡಿದ್ದರು. ಇದಾದ ಬಳಿಕ ಮಾ.24 ರಂದು 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದರು.

    ಇದಾದ ಬಳಿಕ ಏ.5 ರಂದು ಕೊರೊನಾ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟು ಪ್ರದರ್ಶಿಸಲು ರಾತ್ರಿ 9 ಗಂಟೆಗೆ ವಿದ್ಯುತ್ ದೀಪ ಆಫ್ ಮಾಡಿ ದೀಪ/ ಕ್ಯಾಂಡಲ್ ಲೈಟ್/ ಮೊಬೈಲ್ ಟಾರ್ಚ್ ಬೆಳಗಿ ಎಂದು ಮನವಿ ಮಾಡಿದ್ದರು. ಇದಕ್ಕೂ ದೇಶದಲ್ಲಿ ಭಾರೀ ಬೆಂಬಲ ಸಿಕ್ಕಿತ್ತು.

     

  • ಜಮಾತ್‍ಗೆ ತೆರಳಿದ್ದ ವಿಷಯ ಮುಚ್ಚಿಟ್ಟ – ತಾಯಿಯ ಜೊತೆ ಮಗನೂ ಸೋಂಕಿಗೆ ಬಲಿ

    ಜಮಾತ್‍ಗೆ ತೆರಳಿದ್ದ ವಿಷಯ ಮುಚ್ಚಿಟ್ಟ – ತಾಯಿಯ ಜೊತೆ ಮಗನೂ ಸೋಂಕಿಗೆ ಬಲಿ

    – ಕುಟುಂಬದ 8 ಮಂದಿಗೆ ಕೊರೊನಾ ಸೋಂಕು

    ಭೋಪಾಲ್: ದೆಹಲಿಯ ನಿಜ್ಜಾಮುದ್ದೀನ್‍ಲ್ಲಿರುವ ತಬ್ಲಿಘಿ ಮರ್ಕಜ್ ಜಮಾತ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬ ತನ್ನ ಪ್ರಯಾಣ ಮಾಹಿತಿ ಗೌಪ್ಯವಾಗಿಟ್ಟು, ತನ್ನ ಜೊತೆ ಹೆತ್ತ ತಾಯಿಯನ್ನೇ ಬಲಿ ಪಡೆದುಕೊಂಡಿದ್ದಾನೆ.

    ಮಧ್ಯಪ್ರದೇಶದ ಖಾರ್ಗೊನ್‍ನಲ್ಲಿ ಈ ಘಟನೆ ನಡೆದಿದೆ. ಜಮಾತ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ವಿಷಯ ಮುಚ್ಚಿಟ್ಟ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ತಾಯಿಯೂ ಸೇರಿ ಕುಟುಂಬದ ಎಂಟು ಮಂದಿ ಸದಸ್ಯರಿಗೆ ಈಗ ಸೋಂಕು ತಗುಲಿದೆ. ಇಡೀ ಕುಟುಂಬ ಈಗ ಕೊರೊನಾ ಸೋಂಕಿನಿಂದ ಬಳಲುತ್ತಿದೆ.

    ಕಳೆದ ತಿಂಗಳು ಖಾರ್ಗೊನ್ ಮೂಲದ ವ್ಯಕ್ತಿ ಜಮಾತ್‍ನಲ್ಲಿ ಭಾಗಿಯಾಗಿ ಸ್ವ-ಗ್ರಾಮಕ್ಕೆ ವಾಪಸ್ ಆಗಿದ್ದ. ನಿಜ್ಜಾಮುದ್ದೀನ್ ಮರ್ಕಜ್ ಪ್ರಕರಣ ಬೆಳಕಿಗೆ ಬಂದ ಬಳಿಕವೂ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಲಿಲ್ಲ. ಅಲ್ಲದೇ ಕ್ವಾರಂಟೈನ್ ನಿಯಮಗಳನ್ನು ಪಾಲಿಸದೆ ತನ್ನ ಕುಟುಂಬ ಸದಸ್ಯರ ಜೊತೆ ವಾಸಿಸುತ್ತಿದ್ದ. ಪರಿಣಾಮ ಕುಟುಂಬದ ಎಲ್ಲ ಸದಸ್ಯರಿಗೆ ಸೋಂಕು ಹರಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಈ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಯಾಂಪಲ್ ಪಡೆದು ಲ್ಯಾಬ್ ವರದಿಗಳನ್ನು ಗಮನಿಸಿದಾಗ ಕೊರೊನಾ ಸೋಂಕು ದೃಢಪಟ್ಟಿದೆ. ಅಲ್ಲದೇ ವ್ಯಕ್ತಿಯ ಪ್ರಯಾಣ ಹಿನ್ನೆಲೆಯಲ್ಲಿ ತಬ್ಲಿಘಿ ಜಮಾತ್‍ನಲ್ಲಿ ಭಾಗಿಯಾಗಿದ್ದು ಸ್ಪಷ್ಟವಾಗಿತ್ತು.

    ಸೋಂಕು ಕಂಡ ಬಂದ ಬೆನ್ನಲ್ಲೇ ಇಡೀ ಕುಟುಂಬವನ್ನು ಕ್ವಾರಂಟೈನ್ ಮಾಡಿ ಟೆಸ್ಟ್ ಮಾಡಲಾಗಿತ್ತು. ಸೋಂಕಿತ ವ್ಯಕ್ತಿಯೂ ಸೇರಿ ಎಂಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ವೇಳೆಗೆ ಸೋಂಕಿತ ವ್ಯಕ್ತಿ ಹಾಗೂ ಅವನ ತಾಯಿ ಇಬ್ಬರು ಮಾರಕ ವೈರಸ್‍ಗೆ ಬಲಿಯಾಗಿದ್ದಾರೆ.

  • ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ರನ್ನಿಂಗ್ ಕ್ಯಾಚ್ ಹಿಡಿದು ಸ್ವಚ್ಛ ಕೈಗಳ ಸಂದೇಶ ಕೊಟ್ಟ ಕೈಫ್

    ಮುಂಬೈ: ತಮ್ಮ ಜೀವನದ ಬೆಸ್ಟ್ ಕ್ಯಾಚಿಂಗ್ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಸ್ವಚ್ಛ ಕೈಗಳ ಬಗ್ಗೆ ಉತ್ತಮ ಸಂದೇಶ ನೀಡಿದ್ದಾರೆ.

    ಕೊರೊನಾ ವೈರಸ್ ಹರಡು ಭೀತಿಯಲ್ಲಿ ಇಡೀ ದೇಶವೇ ಸ್ತಬ್ಧವಾಗಿದೆ. ಇಡೀ ದೇಶವೇ ಲಾಕ್‍ಡೌನ್ ಆದರೂ ಮಹಾಮಾರಿ ಕೊರೊನಾ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾದಿಂದ ಎಚ್ಚರವಹಿಸಲು ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅರಿವು ಮೂಡಿಸುತ್ತಲೇ ಇದ್ದಾರೆ. ಅಂತಯೇ ಮೊಹಮ್ಮದ್ ಕೈಫ್ ಕೂಡ ಟ್ವಿಟ್ಟರ್ ನಲ್ಲಿ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂದು ತಿಳಿ ಹೇಳಿದ್ದಾರೆ.

    ಈ ವಿಚಾರವಾಗಿ ಟ್ವೀಟ್‍ವೊಂದನ್ನು ಮಾಡಿರುವ ಕೈಫ್, ಇಂಗ್ಲೆಂಡ್ ತಂಡದ ವಿರುದ್ಧ ತಾವು ಹಿಡಿದಿರುವ ರನ್ನಿಂಗ್ ಕ್ಯಾಚ್‍ವೊಂದರ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯುವರಾಜ್ ಸಿಂಗ್ ಅವರು ಬೌಲಿಂಗ್ ಮಾಡಿದ್ದು, ಬ್ಯಾಟ್ಸ್ ಮ್ಯಾನ್ ಹೊಡೆದ ಬಾಲನ್ನು ಕೈಫ್ ತಮ್ಮ ಬಲಭಾಗಕ್ಕೆ ಓಡಿಹೋಗಿ ನಗೆದು ಕ್ಯಾಚ್ ಹಿಡಿಯುತ್ತಾರೆ. ಇದರ ಜೊತೆಗೆ ಉತ್ತಮ ಕೈಗಳು ಹೇಗೆ ಕ್ಯಾಚ್ ಬಿಡುವುದಿಲ್ಲವೋ ಹಾಗೇ ಸ್ವಚ್ಛ ಕೈಗಳಿಗೆ ವೈರಸ್ ಅಂಟುವುದಿಲ್ಲ ಎಂದು ಬರೆದು ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ ಎಂಬ ಸಂದೇಶ ನೀಡಿದ್ದಾರೆ.

    ಈ ಹಿಂದೆಯೂ ಕೂಡ ಮೋದಿ ಅವರ ಜನತಾ ಕರ್ಫ್ಯೂಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದ ಕೈಫ್ ಅವರು, ನರೇಂದ್ರ ಮೋದಿ ಅವರು ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಮೋದಿ ಜನತಾ ಕರ್ಫ್ಯೂ ಹಾಕಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಭಯಪಡಬೇಡಿ. ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದ ಜನರ ಯೋಗಕ್ಷೇಮದ ಜವಾಬ್ದಾರಿಯನ್ನು ನಾವು ತಗೆದುಕೊಳ್ಳುವ ಸಮಯವಿದು ಎಂದು ಬರೆದುಕೊಂಡಿದ್ದರು.

    ಜನತಾ ಕಫ್ರ್ಯೂ ಸಲುವಾಗಿ ಟ್ವೀಟ್ ಮಾಡಿದ್ದ ಕೈಫ್ ಮತ್ತು ಯುವರಾಜ್ ಇಬ್ಬರ ಟ್ವೀಟ್‍ಗೆ ರೀಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ ಅವರು, ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ ಅವರು ಹೇಳಿದಂತೆ ಇದು ಮತ್ತೊಂದು ಜೊತೆಯಾಟದ ಸಮಯ. ಈ ಬಾರಿ ಇಡೀ ಭಾರತವೇ ಒಂದು ಒಳ್ಳೆಯ ಜೊತೆಯಾಟವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಾಡಬೇಕು ಎಂದು ಹೇಳಿದ್ದರು.

  • ಲಾಕ್‍ಡೌನ್ ನಿರ್ಧಾರದಿಂದ ಕೊರೊನಾ ನಿಯಂತ್ರಣವಾಗುತ್ತಾ? ಗ್ರಾಫ್ ಏನು ಹೇಳುತ್ತೆ?

    ಲಾಕ್‍ಡೌನ್ ನಿರ್ಧಾರದಿಂದ ಕೊರೊನಾ ನಿಯಂತ್ರಣವಾಗುತ್ತಾ? ಗ್ರಾಫ್ ಏನು ಹೇಳುತ್ತೆ?

    ಬೆಂಗಳೂರು: 21 ದಿನಗಳ ಲಾಕ್‍ಡೌನ್ ನಿಂದ ಕೊರೊನಾ ನಿಯಂತ್ರಿಸಬಹುದೇ? ಕೊರೊನಾ ನಿಯಂತ್ರಣವಾಗದೇ ಇದ್ದರೆ ಮತ್ತೆ ಲಾಕ್‍ಡೌನ್ ಇರುತ್ತಾ ಈ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಣ್ಣ ಶುಭ ಸುದ್ದಿ ಸಿಕ್ಕಿದೆ. ಎರಡು ದಿನಗಳಿಂದ ಕೊರೊನಾ ಪ್ರಕರಣಗಳು ಕಡಿಮೆಯಾಗಿದೆ.

    ಸಾಧಾರಣವಾಗಿ ಕೊರೊನಾ ಕಂಡು ಬಂದ ಮೊದಲ ಎರಡು ವಾರದಲ್ಲಿ ಹರಡುವ ತೀವ್ರತೆ ಕಡಿಮೆ ಇರುತ್ತದೆ. ಮೂರು, ನಾಲ್ಕು ವಾರದಲ್ಲಿ ಸಂಖ್ಯೆ ದುಪ್ಪಟ್ಟು ಆಗುತ್ತದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಏರುತ್ತಲೇ ಹೋಗುತ್ತದೆ.

    ಶುಭ ಸುದ್ದಿ ಏನೆಂದರೆ ಶನಿವಾರ, ಭಾನುವಾರ ಕೊರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆ ದಾಖಲಾಗಿದೆ. ಶುಕ್ರವಾರ 151 ಪ್ರಕರಣ ದಾಖಲಾಗಿತ್ತು. ಶುಕ್ರವಾರ ಒಂದೇ ಬಾರಿಗೆ 151 ಪ್ರಕರಣ ಬೆಳಕಿಗೆ ಬಂದಿದ್ದನ್ನು ಗಮನಿಸಿದಾಗ ಶನಿವಾರ, ಭಾನುವಾರ ಏರಿಕೆ ಆಗಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಆದರೆ ಶನಿವಾರ, ಭಾನುವಾರ ಕಡಿಮೆ ಪ್ರಕರಣ ಬೆಳಕಿಗೆ ಬಂದಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಮೂರು, ನಾಲ್ಕು ವಾರಗಳಲ್ಲಿ ಪ್ರಕರಣಗಳು ಏರಿಕೆ ಆಗುತ್ತಲೇ ಹೋಗುತ್ತಿತ್ತು. ಆದರೆ ಭಾರತದಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಏರಿಕೆ ಆಗಿಲ್ಲ. ಹೀಗಾಗಿ ಇಲ್ಲಿ ಕೋವಿದ್19ಇಂಡಿಯಾ ವೆಬ್‍ಸೈಟ್ ನೀಡಿರುವ ಮಾಹಿತಿಯನ್ನು ನೀಡಲಾಗಿದೆ.

    ಯಾವ ದಿನ ಎಷ್ಟು ಪ್ರಕರಣ ಬಂದಿದೆ?
    ಮಾ.22 – 403(+69)
    ಮಾ.23 – 505(+102)
    ಮಾ.24 – 571(+66)
    ಮಾ.25 – 657(+86)
    ಮಾ.26 – 735(+78)
    ಮಾ.27 – 886(+151)
    ಮಾ.28 – 1029(+143)
    ಮಾ.29 – 1139(+110)

    ಕೊರೊನಾ ಸಾವಿನ ಪ್ರಕರಣಗಳು ಗಣನೆಗೆ ತೆಗೆದುಕೊಂಡಾಗ ಆತಂಕ ಎದುರಾಗುತ್ತದೆ. ಸೋಮವಾರ ಮಧ್ಯಾಹ್ನದವರೆಗೆ ಒಟ್ಟು ದೇಶದಲ್ಲಿ ಒಟ್ಟು 1192 ಮಂದಿಗೆ ಕೊರೊನಾ ಬಂದಿದ್ದು, 29 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 102 ಮಂದಿ ಗುಣಮುಖರಾಗಿದ್ದು, 1061 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರೂಕಿಂಗ್ ಇಂಡಿಯಾದ ಪ್ರಕಾರ ಒಂದು ವೇಳೆ ಲಾಕ್‍ಡೌನ್ ಘೋಷಣೆ ಮಾಡದೇ ಇದ್ದಲ್ಲಿ ಮಾರ್ಚ್ 2095 ಪ್ರಕರಣಗಳು ದಾಖಲಾಗಬೇಕಿತ್ತು.

    ಎರಡು ದಿನ ಪ್ರಕರಣ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ನಾವು ಅಪಾಯದಿಂದ ಪಾರಾಗಿದ್ದೇವೆ ಎಂದರ್ಥವಲ್ಲ. ಸೋಂಕು ತಗಲಿದ 10, 11 ದಿನದ ಬಳಿಕ ಕೊರೊನಾದ ಲಕ್ಷಣಗಳು ಕಾಣಿಸಲು ಆರಂಭಿಸುತ್ತದೆ. ಹೀಗಾಗಿ ಈ ವಾರ ಮತ್ತು ಮುಂದಿನ ವಾರ ಭಾರತದ ಪಾಲಿಗೆ ನಿರ್ಣಾಯಕವಾಗಿದೆ.

    ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ಭಾರತ ಮಾರ್ಚ್ 22 ರಿಂದ ರದ್ದು ಮಾಡಿತ್ತು. ಹೀಗಾಗಿ ಮಾರ್ಚ್ ಮೂರು ಮತ್ತು ನಾಲ್ಕನೇಯ ವಾರದಲ್ಲಿ ಹಲವು ಮಂದಿ ವಿದೇಶದಿಂದ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ಮಂದಿಗೆ ಕೊರೊನಾ ಬರುವ ಸಾಧ್ಯತೆಯಿದೆ. ಆದರೆ ಅವರು ಈಗಾಗಲೇ ಕ್ವಾರಂಟೈನಲ್ಲಿದ್ದು, ಕ್ವಾರಂಟೈನ್ ನಿಯಮಗಳನ್ನ ಸರಿಯಾಗಿ ಪಾಲಿಸಿದ್ದರೆ ಕೊರೊನಾ ಹರಡುವ ಸಾಧ್ಯತೆ ಕಡಿಮೆಯಿದೆ.

    ಲಾಕ್‍ಡೌನ್ ನಿರ್ಧಾರ ಪ್ರಕಟವಾಗುವ ಮೊದಲೇ ಭಾರತ ಸರ್ಕಾರ ಹಲವು ದೇಶಗಳ ಮೇಲೆ ನಿರ್ಬಂಧ ಹೇರಿತ್ತು. ಅಷ್ಟೇ ಅಲ್ಲದೇ ವಿದೇಶದಿಂದ ಬಂದವರು ಕಡ್ಡಾಯವಾಗಿ ಹೋಮ್ ಕ್ವಾರಂಟೈನ್‍ನಲ್ಲಿರಬೇಕೆಂದು ಸೂಚಿಸಿತ್ತು. ಇದಾದ ಬಳಿಕ ರಾಜ್ಯ ಸರ್ಕಾರಗಳು ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿ ಸಾರಿಗೆ ಸಂಚಾರಕ್ಕೆ ನಿಷೇಧ ಹೇರಿತ್ತು. ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿತ್ತು. ಇದಾದ ಬಳಿಕ ಜನತಾ ಕರ್ಫ್ಯೂ ಹೇರಿ ಬಳಿಕ ನರೇಂದ್ರ ಮೋದಿಯವರು 21 ದಿನಗಳ ಲಾಕ್‍ಡೌನ್ ಘೋಷಣೆ ಮಾಡಿದ್ದರು. ಈ ಎಲ್ಲ ಕ್ರಮಗಳಿಂದಾಗಿ ಕೊರೊನಾ ಹರಡುವ ತೀವ್ರತೆ ಸ್ವಲ್ಪ ಕಡಿಮೆಯಾಗಿದೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

  • ಕೆನಡಾ ಪ್ರಧಾನಿ ಟ್ರುಡೊ ಪತ್ನಿ ಕೊರೊನಾದಿಂದ ಗುಣಮುಖ

    ಕೆನಡಾ ಪ್ರಧಾನಿ ಟ್ರುಡೊ ಪತ್ನಿ ಕೊರೊನಾದಿಂದ ಗುಣಮುಖ

    ಒಟ್ಟಾವಾ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿ ಸೋಫಿ ಗೊಗ್ರೊಯಿರ್ ಕೊರೊನಾ ಸೋಂಕುವಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

    ಈ ಸಂಬಂಧ ಇನ್‍ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಸ್ಟೇಟಸ್ ಅಪ್ ಡೇಟ್ ಮಾಡಿ, ನನ್ನ ಆರೋಗ್ಯ ಬಹಳ ಸುಧಾರಿಸಿದೆ. ಒಟ್ಟಾವಾ ಸಾರ್ವಜನಿಕ ಆಸ್ಪತ್ರೆಯಿಂದ ನಾನು ಗುಣಮುಖನಾಗಿದ್ದನ್ನು ವೈದ್ಯರು ಖಚಿತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಮಾರ್ಚ್ 12 ರಂದು ಜಸ್ಟಿನ್ ಟ್ರುಡೊ ಅವರ ಕಚೇರಿ ಸೋಫಿ ಗೊಗ್ರೊಯಿರ್ ಅವರಿಗೆ ಕೊರೊನಾ ಸೋಂಕು ತಗಲಿರುವುದು ಖಚಿತವಾಗಿತ್ತು. ಲಂಡನ್ ನಿಂದ ಮರಳಿ ಬಳಿಕ ಇವರ ಆರೋಗ್ಯ ಹದಗೆಟ್ಟಿತ್ತು.

    ಪತ್ನಿಗೆ ಕೊರೊನಾ ಬಂದ ನಂತರ ಟ್ರುಡೊ ಮನೆಯಲ್ಲೇ ಪ್ರತ್ಯೇಕವಾಗಿದ್ದರು. ಮೂವರು ಮಕ್ಕಳಿಗೂ ಕೊರೊನಾ ಸೋಂಕು ಬಂದಿಲ್ಲ.

    ಕೆನಡಾದಲ್ಲಿ 5,607 ಮಂದಿಗೆ ಕೊರೊನಾ ಬಂದಿದ್ದು 61 ಮಂದಿ ಮೃತಪಟ್ಟಿದ್ದಾರೆ. ಒಂಟ್ಟು ಈಗ 5,067 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 479 ಮಂದಿ ಗುಣಮುಖರಾಗಿದ್ದಾರೆ.

    ಕೊರೊನಾ ಗುಣಪಡಿಸಲಾಗದ ಕಾಯಿಲೆ ಅಲ್ಲ. ಸ್ವಚ್ಛತೆಯ ಜೊತೆಗೆ ವೈದ್ಯರು ನೀಡಿದ ಔಷಧಿಯನ್ನು ಸರಿಯಾಗಿ ಸೇವಿಸಿದರೆ ಕೊರೊನಾ ಗುಣವಾಗುತ್ತದೆ.

  • ಕರ್ನಾಟಕದಲ್ಲಿ ಕರೋನ ವೈರಸ್ ಪತ್ತೆಯಾಗಿಲ್ಲ- ಸಚಿವ ಶ್ರೀರಾಮುಲು ಸ್ಪಷ್ಟನೆ

    ಕರ್ನಾಟಕದಲ್ಲಿ ಕರೋನ ವೈರಸ್ ಪತ್ತೆಯಾಗಿಲ್ಲ- ಸಚಿವ ಶ್ರೀರಾಮುಲು ಸ್ಪಷ್ಟನೆ

    ಮೈಸೂರು: ಕರ್ನಾಟಕದಲ್ಲಿ ಕರೋನ ವೈರಸ್ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು ಕರೋನ ವೈರಸ್ ಹರಡದಂತೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ವಿದೇಶದಿಂದ ಬಂದಿದ್ದ 44 ಮಂದಿ ಪ್ರವಾಸಿಗರ ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 29 ರಕ್ತದಲ್ಲಿ ಕರೋನ ವೈರಸ್ ನೆಗೆಟಿವ್ ಎಂಬ ವರದಿ ಬಂದಿದೆ. ಉಳಿದವರ ರಕ್ತ ಪರೀಕ್ಷೆ ನಡೆಯುತ್ತಿದೆ ಎಂದರು.

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದ್ದು, 10 ಹಾಸಿಗೆವುಳ್ಳ ವಾರ್ಡ್‍ಗಳನ್ನು ಕರೋನಾಗೆ ಮೀಸಲಿಡಲಾಗಿದೆ. ಈವರೆಗೂ ರಾಜ್ಯದಲ್ಲಿ ಒಂದು ಕರೋನ ಪ್ರಕರಣ ದಾಖಲಾಗಿಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಔಷಧಿಯನ್ನು ಹೊರ ದೇಶದಿಂದ ತರಿಸಲು ಸಿದ್ಧರಿದ್ದೇವೆ. ರೋಗಿಗಳ ಚಿಕಿತ್ಸಾ ವೆಚ್ಚ ಬರಿಸಲು ಸರ್ಕಾರ ಸಿದ್ಧವಿದೆ. ಈ ರೋಗಕ್ಕೆ ಆಯುರ್ವೇದದಲ್ಲಿ ಔಷಧವಿದ್ದು ಅದನ್ನು ಬಳಿಸಿಕೊಳ್ಳುತ್ತೇವೆ. ವಿಮಾನ ನಿಲ್ದಾಣಗಳಿಗೆ ಚೀನಾದಿಂದ ಬರುವ ಪ್ರವಾಸಿಗರಿಗೆ ಔಷಧಿ ಸಿಂಪಡಿಸಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ವಿವರಿಸಿದರು. ಇದನ್ನು ಓದಿ: ಭಾರತಕ್ಕೂ ವಕ್ಕರಿಸಿದ ಕರೋನಾ ವೈರಸ್ ಮಹಾಮಾರಿ

  • ಸಚಿನ್, ಧೋನಿ ಬಳಿಕವೇ ಸನ್ನಿ ಲಿಯೋನ್- ಸರ್ಚ್ ಮಾಡುವ ಮುನ್ನ ಒಮ್ಮೆ ಯೋಚಿಸಿ

    ಸಚಿನ್, ಧೋನಿ ಬಳಿಕವೇ ಸನ್ನಿ ಲಿಯೋನ್- ಸರ್ಚ್ ಮಾಡುವ ಮುನ್ನ ಒಮ್ಮೆ ಯೋಚಿಸಿ

    ಮುಂಬೈ: ಭಾರತ ಕ್ರಿಕೆಟ್ ತಂಡದ ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಅವರು ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರರಾಗಿದ್ದು, ಇಬ್ಬರ ನಡೆಗಳು ಅದೆಷ್ಟೋ ಅಭಿಮಾನಿಗಳನ್ನು ಸೆಳೆದಿದೆ. ಈ ಇಬ್ಬರ ಕುರಿತು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಆದರೆ ಇವರ ಕುರಿತ ಮಾಹಿತಿಗಾಗಿ ಸರ್ಚ್ ಮಾಡಿದ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ದೊರೆಯುತ್ತಿದೆ ಎಂದು ಪ್ರಮುಖ ಆ್ಯಂಟಿ ವೈರಸ್ ಮೆಕಾಫೆ ಸಂಸ್ಥೆ ತಿಳಿಸಿದೆ.

    ಹೌದು, ಸಚಿನ್ ಹಾಗೂ ಧೋನಿ ಅವರ ಬಗ್ಗೆ ಇಂಟರ್ ನೆಟ್‍ನಲ್ಲಿ ಮಾಹಿತಿ ಹುಡುಕಾಟ ವೇಳೆ ಅತಿ ಹೆಚ್ಚು ನಕಲಿ ಲಿಂಕ್ ಗಳು ಪತ್ತೆಯಾಗುತ್ತಿದ್ದು, ಇದನ್ನು ತಿಳಿಯದ ಅಭಿಮಾನಿಗಳು ಲಿಂಕ್ ಗಳನ್ನು ಕ್ಲಿಕ್ ಮಾಡಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮೆಕಾಫೆ ಸಂಸ್ಥೆ ತಿಳಿಸಿದೆ.

    ಸಾಮಾನ್ಯವಾಗಿ ಜನರು ಕ್ರೀಡಾಪಟುಗಳು, ಸಿನಿಮಾ ಸ್ಟಾರ್, ಟಿವಿ ಶೋಗಳ ಹೆಚ್ಚು ಇಂಟರ್ ನೆಟ್‍ನಲ್ಲಿ ಹುಡುಕಾಟ ನಡೆಸುತ್ತಾರೆ. ತಮ್ಮ ನೆಚ್ಚಿನ ಸೆಲೆಬ್ರಿಟಿಯ ಕುರಿತು ಅಭಿಮಾನಿಗಳು ಹೆಚ್ಚು ಸರ್ಚ್ ಮಾಡುತ್ತಾರೆ. ದಿನ್ನೇ ತಮ್ಮ ಕೃತ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಸೈಬರ್ ಕ್ರೈಂ ಆರೋಪಿಗಳು, ನಕಲಿ ಲಿಂಕ್ ಗಳನ್ನು ಸೃಷ್ಟಿ ಮಾಡಿ ಹರಿಬಿಡುತ್ತಿದ್ದಾರೆ. ಆ ಮೂಲಕ ವ್ಯಕ್ತಿಗಳ ಮಾಹಿತಿಯನ್ನು ಕಳ್ಳತನ ಮಾಡುತ್ತಿದ್ದಾರೆ. ಅಲ್ಲದೇ ಬಳಕೆದಾರರ ಮೊಬೈಲ್, ಲ್ಯಾಪ್‍ಟಾಪ್, ಕಂಪ್ಯೂಟರ್ ಗಳು ವೈರಸ್ ಗಳಿಗೂ ಒಳಗಾಗುತ್ತಿದೆ. ಪರಿಣಾಮ ನೆಟಿಜನ್ಸ್ ಎಚ್ಚರಿಕೆಯಿಂದ ಇರಬೇಕು ಎಂದು ಸಂಸ್ಥೆ ಹೇಳಿದೆ.

    ಸಂಸ್ಥೆ ನೀಡಿರುವ ಪ್ರಮಾದಕರ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಧೋನಿ, ಸಚಿನ್ ಮೊದಲ ಸ್ಥಾನ ಪಡೆದಿದ್ದು, ಆ ಬಳಿಕವೇ ಬಿಗ್ ಬಾಸ್-8ರ ವಿನ್ನರ್ ಗೌತಮ್, ಬಾಲಿವುಡ್ ನಟಿ ಸನ್ನಿ ಲಿಯೋನ್, ರಾಧಿಕಾ ಅಪ್ಟೆ, ಪಿವಿ ಸಿಂಧು, ಅವರು ಸ್ಥಾನ ಪಡೆದಿದ್ದಾರೆ.

  • ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ

    ಹಾಸನದಲ್ಲೂ ಮಂಗನ ಕಾಯಿಲೆ ವೈರಸ್ ಪತ್ತೆ

    ಹಾನಸ: ಮಲೆನಾಡಿಗರ ನಿದ್ದೆ ಗೆಡಿಸಿದ್ದ ಮಂಗನ ಕಾಯಿಲೆ ಭೀತಿ ಇದೀಗ ಹಾಸನ ಜಿಲ್ಲೆಯಲ್ಲಿಯೂ ಮಾರಕ ರೋಗದ ವೈರಸ್ ಪತ್ತೆಯಾಗಿದೆ.

    ಹಾಸನ ಜಿಲ್ಲೆಯ ಎರಡು ಗ್ರಾಮಗಳಲ್ಲಿ ದನ ಕರುಗಳ ಉಣ್ಣೆಯಲ್ಲಿ ವೈರಸ್ ಕಂಡು ಬಂದಿದೆ. ಹಾಸನ ತಾಲೂಕಿನ ಚಿಕ್ಕ ಬಸವನಹಳ್ಳಿ ಗ್ರಾಮ ಹಾಗೂ ಸಕಲೇಶಪುರ ಬಸವನಗುಡಿ ಗ್ರಾಮದಲ್ಲಿ ಮಂಗನ ಕಾಯಿಲೆ ವೈರಸ್ ಪತ್ತೆಯಾಗಿದೆ.

    ವೈರಸ್ ಪತ್ತೆಯಾದ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಸಿಇಓ ವಿಜಯ್ ಹಾಗೂ ಡಿಎಚ್‍ಓ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಗ್ರಾಮಸ್ಥರಿಗೆ ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

    ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ತಂಡ ಮನೆ ಮನೆಗೆ ಔಷಧ ನೀಡಿ, ಬಿತ್ತಿ ಪತ್ರ ಹಂಚಿ ಜಾಗೃತಿ ಮೂಡಿಸಲು ಗ್ರಾಮದಲ್ಲೇ ಬಿಡು ಬಿಟ್ಟಿದ್ದಾರೆ. ಈಗಾಗಲೇ ಜಿಲ್ಲೆಯ 625 ದನ-ಕರುಗಳು, ಕುರಿ, ಮೇಕೆಯ ರಕ್ತದ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಎರಡು ಸ್ಯಾಂಪಲ್ ಗಳಲ್ಲಿ ಮಂಗನ ಕಾಯಿಲೆ ವೈರಸ್ ಪಾಸಿಟಿವ್ ಆಗಿ ಬಂದಿದೆ.

    ಈಗಾಗಲೇ ಮಲೆನಾಡಿನ ಭಾಗದಲ್ಲಿ ಮಂಗನ ಕಾಯಿಲೆಯಿಂದ ಅನೇಕರು ಮೃತಪಟ್ಟಿದ್ದಾರೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಆರೋಗ್ಯ ಇಲಾಖೆ, ಜನರಿಗೆ ಒಂದು ಔಷಧಿ (Oil)ಯನ್ನು ಕೊಡುತ್ತಿದ್ದಾರೆ. ಅದನ್ನು ಪ್ರಾಣಿಗಳನ್ನು ಕಾಡಿನಲ್ಲಿ ಮೇಯಿಸಲು ಹೋದಾಗ ಅದನ್ನು ತಮ್ಮ ದೇಹಕ್ಕೆ ಹಂಚಿಕೊಂಡು ಹೋಗಬೇಕು ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ನಿಪಾ ವೈರಸ್ ಸುಳ್ಳು ಸುದ್ದಿ ಹರಡಿದ 7 ಮಂದಿ ಅರೆಸ್ಟ್

    ತಿರುವನಂತಪುರಂ: ಕೆಲವು ಸ್ಥಳಗಳಲ್ಲಿ ನಿಪಾ ವೈರಸ್ ಪತ್ತೆಯಾಗಿದೆ, ಅದು ಕೋಳಿ ಮಾಂಸದಿಂದ ಹರಡುತ್ತಿದೆ ಎಂಬ ಸುಳ್ಳು ಸುದ್ದಿ ಹರಡುತ್ತಿದ್ದ ಏಳು ಜನರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ನಿಪಾ ವೈರಸ್ ಕುರಿತು ವಾಟ್ಸಪ್ ಮೂಲಕ ಸುಳ್ಳು ಸುದ್ದಿಯನ್ನು ಧ್ವನಿ ಸಂದೇಶಗಳನ್ನು ರಚಿಸಿ ರವಾನಿಸುತ್ತಿದ್ದರು.

    ಈ ಕುರಿತಂತೆ ಕೊಝಿಕ್ಕೋಡು ಜಿಲ್ಲಾ ವ್ಯಾಪ್ತಿಯ ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ವೈಷ್ಣವ್, ನಿಮೇಶ್, ಬಿವಿಜ್, ದಿಲ್ಜಿತ್, ವಿಷ್ಣುದಾಸ್ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೇ ಈ ಧ್ವನಿ ಸಂದೇಶ ರಚಿಸಿದ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ನಿಪಾ ವೈರಸ್ ಕೋಳಿ ಮಾಂಸದಲ್ಲಿ ಪತ್ತೆಯಾದ ಕುರಿತು ಆರೋಗ್ಯ ಇಲಾಖೆಯ ವಿರುದ್ಧ ಸುಳ್ಳು ಸುದ್ದಿಯನ್ನೂ ಹಬ್ಬಿಸಲಾಗಿತ್ತು. ಹಾಗಾಗಿ ಯಾರೂ ಕೋಳಿ ಮಾಂಸವನ್ನು ಬಳಸಬಾರದೆಂದು ಕಿಡಿಗೇಡಿಗಳು ಹರಿಬಿಟ್ಟಿದ್ದರು. ಈ ಕುರಿತಂತೆಯೂ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ:ಕೋಳಿಯಿಂದ ನಿಪಾ ವೈರಸ್ ಹರಡಲ್ಲ: ಉಡುಪಿ ವೈದ್ಯ

    ಇದಕ್ಕೆ ಪ್ರತಿಕ್ರಿಯಿಸಿದ ಫರೂಕ್ ಪೊಲೀಸ್ ಠಾಣಾಧಿಕಾರಿ ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಐವರನ್ನು ಈಗಾಗಲೇ ಬಧಿಸಿದ್ದೇವೆ. ಅಲ್ಲದೇ ನಲ್ಲಾಲಂನಲ್ಲೂ ಇಬ್ಬರ ಬಂಧನವಾಗಿದೆ. ಫಿರೋಕ್ ಆಸ್ಪತ್ರೆಯ ಕಿರಿಯ ವೈದ್ಯಾಧಿಕಾರಿಗಳು ಈ ಕುರಿತಂತೆ ದೂರನ್ನೂ ಕೂಡಾ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ಬಾವಲಿ, ಮೊಲದಿಂದ ಹರಡಲ್ಲ ಜ್ವರ – ನಿಪಾ ಹಿಂದಿನ ಕಾರಣ ಇನ್ನಷ್ಟು ನಿಗೂಢ

    ಬಾವಲಿ, ಮೊಲದಿಂದ ಹರಡಲ್ಲ ಜ್ವರ – ನಿಪಾ ಹಿಂದಿನ ಕಾರಣ ಇನ್ನಷ್ಟು ನಿಗೂಢ

    ಬೆಂಗಳೂರು: ಬಾವಲಿ, ಕೋಳಿಯಿಂದ ಮಾತ್ರವಲ್ಲ ಇದೀಗ ಮೊಲದಿಂದಲೂ ನಿಪಾ ಜ್ವರ ಹರಡಲ್ಲ ಎನ್ನುವುದು ಸಾಬೀತಾಗಿದೆ.

    ದೇಶಾದ್ಯಂತ ನಿಪಾ ಸೋಂಕು ಬಗ್ಗೆ ಸುದ್ದಿಯಾಗುತ್ತಿದ್ದಂತೆಯೇ ಬಾವಲಿ ಕಚ್ಚಿದ್ದ ಹಣ್ಣುಗಳ ಪರೀಕ್ಷೆ ವೇಳೆ ನೆಗೆಟಿವ್ ಬಂದಿದೆ. ಪ್ರಾಣಿಗಳಿಂದ ಹರಡುವ ರೋಗ ಸಂಬಂಧಿತ ರಾಷ್ಟ್ರೀಯ ಸಂಸ್ಥೆಯ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು.

    ಮೊಲಗಳು ತಿಂದಿದ್ದ ಹಣ್ಣಿನ ಮಾದರಿಯನ್ನು ಕಳುಹಿಸಿಕೊಡಲಾಗಿತ್ತು. ಅದೂ ನೆಗೆಟಿವ್ ತೋರಿಸಿದೆ. ಇದು ಪ್ರಯೋಗಾಲಯಕ್ಕೆ ಕುಳುಹಿಸಿಕೊಡಲಾದ ಎರಡನೇ ಮಾದರಿ. ಈ ಹಿಂದೆ ಹಂದಿ, ಮೇಕೆ, ಜಾನುವಾರಗಳ ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು. ಆದ್ರೆ ಅದ್ಯಾವುದರಿಂದಲೂ ನಿಪಾ ವೈಎಸ್ ಹರಡಲ್ಲ ಅಂತ ವರದಿಯಾಗಿತ್ತು.

    ಈ ಹಿಂದೆ ಮಧ್ಯ ಪ್ರದೇಶ ರಾಜ್ಯದ ಭೋಪಾಲ ನಗರದ `ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಲ್ಯಾಬೊರೆಟರಿ’ ನಿಪಾ ವೈರಸ್ ಬಾವಲಿಗಳಿಂದ ಬರಲ್ಲ ಎಂದು ಸ್ಪಷ್ಟಪಡಿಸಿತ್ತು. ಕೇರಳದಿಂದ ಒಟ್ಟು ಸ್ಯಾಂಪಲ್ ರೂಪದಲ್ಲಿ 21 ಬಾವಲಿ ಮತ್ತು ಹಂದಿಗಳನ್ನು ಭೋಪಾಲ್ ನ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿತ್ತು. ಈ ಸ್ಯಾಂಪಲ್‍ಗಳ ವರದಿ ಬಂದಿದ್ದು, ಎಲ್ಲ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡುಬಂದಿಲ್ಲ.

    ಕೇಂದ್ರ ಪ್ರಾಣಿ-ಪಶು ಇಲಾಖೆಯ ಕಮಿಷನರ್ ಎಸ್‍ಪಿ ಸುರೇಶ್, ನಿಪಾ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಗಳ ಸುತ್ತಲಿನ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದ್ರು. ಆದ್ರೆ ಅಲ್ಲಿಯ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ತಿಳಿಸಿದ್ರು.

    ನಿಪಾ ವೈರಸ್ ದಾಳಿಗೆ ತುತ್ತಾಗಿರುವ ಕೇರಳದ ಪೆರಂಬರಾ ಗ್ರಾಮದಿಂದ ಕೆಲ ಪ್ರಾಣಿಗಳನ್ನು ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡು ಭೋಪಾಲ್‍ನ ಲ್ಯಾಬೋರೆಟರಿಗೆ ಕಳುಹಿಸಲಾಗಿತ್ತು. ಭೋಪಾಲ್ ಲ್ಯಾಬೊರೇಟರಿ ವರದಿಯ ಪ್ರಕಾರ, ನಿಪಾ ವೈರಸ್ ಬಾವಲಿಗಳಿಂದ ಬಂದಿಲ್ಲ ಅಂತಾ ಹೇಳಲಾಗಿತ್ತು. ಸದ್ಯ ಈ ಗೊಂದಲ ಇನ್ನು ಮುಂದುವರೆದಿದ್ದು, ಮತ್ತಷ್ಟು ನಿಪಾ ವೈರಸ್ ಪೀಡಿತ ಗ್ರಾಮಗಳಿಂದ ಪ್ರಾಣಿಗಳ ರಕ್ತವನ್ನು ಪಡೆದು ಪರೀಕ್ಷೆ ನಡೆಸಲಾಗುವುದು ಎಂದು ಲ್ಯಾಬೊರೇಟರಿ ಮೂಲಗಳು ತಿಳಿಸಿವೆ.