ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದ ಗಡಿ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರದಲ್ಲಿ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ (Karnataka Weekend Curfew) ಜಾರಿಯಾಗಲಿದೆ.
ರಾಜ್ಯ ಸರ್ಕಾರ ಇಂದು ಸಂಜೆ ಮಾರ್ಗಸೂಚಿಯನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವೆರೆಗೆ ನೈಟ್ ಕರ್ಫ್ಯೂ ಇರಲಿದೆ. ಇಂದಿನಿಂದ ಆಗಸ್ಟ್ 16ರವರೆಗೆ ಈ ಮಾರ್ಗಸೂಚಿ ಜಾರಿಯಲ್ಲಿ ಇರಲಿದೆ.
ದೇವಾಲಯ, ಮಸೀದಿ, ಚರ್ಚ್, ಗುರುದ್ವಾರದಲ್ಲಿ ಕೋವಿಡ್ 19 ನಿಯಮಗಳನ್ನು ಪಾಲನೆ ಮಾಡಿಕೊಂಡು ನಿತ್ಯದ ಪ್ರಾರ್ಥನೆಗೆ ಅನುಮತಿ ನೀಡಲಾಗಿದೆ. ರಾಜ್ಯಾದ್ಯಂತ ಜಾತ್ರೆ, ದೇವಾಲಯದ ಉತ್ಸವ, ಮೆರವಣಿಗೆ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ.
ಮದುವೆಗೆ ಗರಿಷ್ಠ 100 ಮಂದಿ ಅಂತ್ಯಸಂಸ್ಕಾರಕ್ಕೆ ಗರಿಷ್ಠ 20 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
8 ಜಿಲ್ಲೆಗಳಲ್ಲಿ ಹೇಗೆ?
– ಉದ್ಯೋಗಕ್ಕೆ ತೆರಳುವ ಉದ್ಯೋಗಿಗಳು ಐಡಿ ಕಾರ್ಡ್ ಧರಿಸುವುದು ಕಡ್ಡಾಯ.
– ಆಹಾರ, ತರಕಾರಿ, ದಿನಸಿ, ಮಾಂಸ, ಹಾಲು, ಪ್ರಾಣಿಗಳ ಆಹಾರ ನೀಡುವ ಅಂಗಡಿಗಳು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅನುಮತಿ.
– ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅನುಮತಿ
– ರೈಲ್ವೇ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸಾರಿಗೆ, ಖಾಸಗಿ ವಾಹನ, ಟ್ಯಾಕ್ಸಿಗಳ ಮೂಲಕ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣಕ್ಕೆ ತೆರಳುವ ಸಂದರ್ಭದಲ್ಲಿ ಪ್ರಯಾಣದ ದಾಖಲೆ ತೋರಿಸುವುದು ಕಡ್ಡಾಯ.
– ಮದುವೆಗೆ ಗರಿಷ್ಠ 100 ಮಂದಿ ಅಂತ್ಯಸಂಸ್ಕಾರಕ್ಕೆ ಗರಿಷ್ಠ 20 ಮಂದಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.
ಶ್ರೀನಗರ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಜಮ್ಮು-ಕಾಶ್ಮೀರದ ಆಡಳಿತವು ಯುಟಿಯ 20 ಜಿಲ್ಲೆಗಳಲ್ಲಿ ಒಂದು ವಾರ ಕೊರೊನಾ ಕರ್ಫ್ಯೂವನ್ನು ವಿಸ್ತರಿಸಿದೆ.
ಮೇ 17ರ ಬೆಳಗ್ಗೆ 7 ಗಂಟೆಯವರೆಗೆ ಜಮ್ಮು-ಕಾಶ್ಮೀರದ 20 ಜಿಲ್ಲೆಗಳಲ್ಲಿ ಕಫ್ರ್ಯೂವನ್ನು ವಿಧಿಸಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕರ್ಫ್ಯೂ ಕಟ್ಟುನಿಟ್ಟಾಗಿರುತ್ತದೆ ಎಂದು ಡಿಐಪಿಆರ್ ತನ್ನ ಟ್ವಿಟ್ಟರ್ ಖಾತೆ ಮೂಲಕ ತಿಳಿಸಿದೆ.
“CORONA CURFEW” imposed in the district is extended further by 07 days till 7 am on Monday 17-05-2021.
It will be more strict.
# Permissible gathering for marriage is reduced to 25 with immediate effect .
ALL ARE REQUESTED TO CO-OPERATE.@OfficeOfLGJandK@diprjk@PoonchPolice
ಅಷ್ಟೇ ಅಲ್ಲದೇ ಮದುವೆ ಸಮಾರಂಭಗಳಲ್ಲಿ 25 ಜನರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳಿದೆ ಷರತ್ತು ಬದ್ಧ ಅವಕಾಶ ನೀಡಲಾಗಿದೆ. ಜನರ ಅನಗತ್ಯ ಸಂಚಾರವನ್ನು ತಡೆಯಲು ಪೊಲೀಸರು ಮತ್ತು ಸೈನಿಕರ ಪಡೆಗಳನ್ನು ಯುಟಿಯ ಎಲ್ಲಾ ಜಿಲ್ಲೆಗಳ ರಸ್ತೆಯ ಚೆಕ್‍ಪೋಸ್ಟ್‍ಗಳಲ್ಲಿ ನಿಯೋಜಿಸಿದೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುಮಾರು 5 ಸಾವಿರಕ್ಕೂ ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 60 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ವಿಷಮವಾಗ್ತಿದೆ. ಕಳೆದ ವರ್ಷದ ಮಧ್ಯಭಾಗದಲ್ಲಿ ನಿರ್ಮಾಣವಾಗಿದ್ದ ಸನ್ನಿವೇಶ ಮರುಕಳಿಸುವ ದೃಶ್ಯವೊಂದು ಇವತ್ತು ಬೆಚ್ಚಿಬೀಳಿಸಿದೆ.
ಬಸವನಗುಡಿಯ 58 ವರ್ಷದ ಸೋಂಕಿತೆಯೊಬ್ಬರಿಗೆ ಬೆಡ್ ಸಿಗದೆ ಫುಟ್‍ಪಾತ್‍ನಲ್ಲಿ ನರಳಾಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾಗಿರುವ ಮಲ್ಯ ಆಸ್ಪತ್ರೆಯಲ್ಲಿ ಮಹಿಳೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ತಿದ್ರು. ಮೊನ್ನೆ ಕೊವಿಡ್ ಪರೀಕ್ಷೆಗೆ ಒಳಪಟ್ಟಿದ್ದ ಮಹಿಳೆಗೆ ನಿನ್ನೆ ಪಾಸಿಟಿವ್ ಬಂದಿದೆ.
ಆತಂಕಕ್ಕೊಳಗಾದ ಮಹಿಳೆ ಕಣ್ಣೀರು ಸುರಿಸಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರೂ ಮಲ್ಯ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಕಳೆದುಕೊಂಡು ಹೊರ ಹಾಕಿದೆ. ನಮ್ಮದು ನಾನ್-ಕೋವಿಡ್ ಆಸ್ಪತ್ರೆ ಅಂತ ಹೇಳಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆಗೆ ಚಿಕಿತ್ಸೆ ನೀಡದೆ, ಡಯಾಲಿಸಿಸ್ ಕೂಡಾ ಮಾಡದೆ ಹೊರ ಹಾಕಿದೆ. ಮಹಿಳೆಗೆ ಕಾಲು ಏಟಾಗಿದ್ದು ನಡೆಯಲು ಆಗದೆ ಇಡೀದಿನ ಫುಟ್‍ಪಾತ್‍ನಲ್ಲಿ ಊಟ, ನೀರು ಇಲ್ಲದೆ ಏಕಾಂಗಿಯಾಗಿ ಒದ್ದಾಡಿದ್ದಾರೆ.
ಇವರು ಮಾಜಿ ಎಂಎಲ್‍ಎ, ಮಾಜಿ ಮೇಯರ್ ಚಂದ್ರಶೇಖರ್ ಅವರ ಸಹೋದರಿಯಾಗಿದ್ದಾರೆ. ಸಹೋದರಿ ಒಬ್ಬರೇ ಹೋಗಿದ್ದು ನನಗೆ ತಿಳಿದಿರಲಿಲ್ಲ. ಸುದ್ದಿ ತಿಳಿದು ತೀವ್ರ ನೋವಾಯಿತು ಅಂತ ಮಲ್ಯ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಸದ್ಯಕ್ಕೆ ರಂಗಾದೊರೈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಮಧ್ಯೆ, ಪ್ರಕರಣವನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳೋದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಬೆಂಗಳೂರು: ಇಷ್ಟು ದಿನ ಕೂಲ್ ಆಗಿ ಆಟವಾಡಿದ ಬಿಗ್‍ಬಾಸ್ ಮನೆ ಸದಸ್ಯರ ನಡುವೆ ನಿನ್ನೆ ಆಕ್ರೋಶದ ಕಿಚ್ಚು ಹೊತ್ತಿಕೊಂಡಿದೆ. ವಿಶ್ವದೆಲ್ಲೆಡೆ ಕೇಕೆ ಹಾಕಿದ ಕೊರೊನಾ ಇದೀಗ ಬಿಗ್‍ಬಾಸ್ ಮನೆಗೆ ಎಂಟ್ರಿಕೊಟ್ಟಿದೆ. ಈ ವಿಚಾರವಾಗಿ ಬಿಗ್‍ಬಾಸ್ ಟಾಸ್ಕ್‍ವೊಂದನ್ನು ನೀಡಿದ್ದು, ಸದ್ಯ ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು ಜಿದ್ದಾ-ಜಿದ್ದಿ ನಡೆಸಿದ್ದಾರೆ.
ನಿನ್ನೆ ಬಿಗ್‍ಬಾಸ್ ಇಡೀ ಜಗತ್ತು ಕಳೆದ ವರ್ಷ ವೈರಸ್‍ನಿಂದ ಕಂಗಲಾಗಿದ್ದು ಎಲ್ಲರೂ ನೋಡಿದ್ದೀರಿ. ಇದೀಗ ನೀವೆಲ್ಲರೂ ಕೊರೊನಾ ವೈಸ್ ವಿರುದ್ಧ ಹೋರಾಡಲು ಸಿದ್ಧರಾಗಿ ಎಂದು ಘೋಷಿಸಿದರು. ಅದರಂತೆ ಮನೆಯ ಸದಸ್ಯರನ್ನು ಮನುಷ್ಯ ತಂಡ ಹಾಗೂ ವೈರಸ್ ತಂಡ ಎಂದು ಎರಡು ವಿಭಾಗಗಳಾಗಿ ಮಾಡಲಾಯಿತು. ಲ್ಯಾಂಗ್ ಮಂಜುರನ್ನು ಮನುಷ್ಯ ತಂಡದ ನಾಯಕರಾಗಿ ಹಾಗೂ ಪ್ರಶಾಂತ್ ಸಂಬರಗಿಯನ್ನು ವೈರಸ್ ತಂಡದ ನಾಯಕರಾಗಿ ನೇಮಿಸಿದರು. ಮನುಷ್ಯ ತಂಡದಲ್ಲಿ ಮಂಜು, ಅರವಿಂದ್, ಚಂದ್ರಕಲಾ, ಗೀತಾ, ದಿವ್ಯಾ ಉರುಡುಗ, ಶಮಂತ್ ಶುಭ, ವಿಶ್ವನಾಥ್ ಹಾಗೂ ವೈರಸ್ ತಂಡದ ಸದಸ್ಯರಾಗಿ ಪ್ರಶಾಂತ್, ದಿವ್ಯಾ, ಸುರೇಶ್, ನಿಧಿ, ನಿರ್ಮಲ, ರಾಜೀವ್, ಶಂಕರ್, ರಘು, ವೈಷ್ಣವಿ ಎಂದು ವಿಂಗಡಿಸಲಾಯಿತು.
ಕೊರೊನಾ ಟಾಸ್ಕ್ ಪ್ರಕಟಣೆಯನ್ನು ಓದಿದ ಲ್ಯಾಂಗ್ ಮಂಜು, ಬಿಗ್ ಕ್ಯಾಪ್ಟನ್ಸಿ ಕಂಟೆಂಟರ್ ಟಾಸ್ಕ್‍ವೊಂದನ್ನು ನೀಡುತ್ತಿದ್ದು, ಅದುವೇ ಲಾಕ್‍ಡೌನ್. ಬಜರ್ ಆಗುತ್ತಿದ್ದಂತೆಯೇ ಮನುಷ್ಯರ ಮೇಲೆ ವೈರಸ್ ದಾಳಿ ಮಾಡಬೇಕು. ಮನುಷ್ಯರು ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಬೇಕು. ದಾಳಿ ಮಾಡಿದಾಗ ವೈರಸ್ ಯಶಸ್ವಿಯಾದಲ್ಲಿ ಮನುಷ್ಯರು ಕ್ವಾರಂಟೈನ್‍ಗೆ ಹೋಗಬೇಕು. ಮನುಷ್ಯ ಕ್ವಾರಂಟೈನ್ ಅವಧಿಯಲ್ಲಿ ವೈರಸ್ ಹಿಂಸೆಯನ್ನು ಸಹಿಸಿಕೊಂಡು ಯಶಸ್ವಿಯಾದರೆ ಅವರು ಉಳಿಯುತ್ತಾರೆ ಎಂದು ತಿಳಿಸಲಾಯಿತು.
ಗಾರ್ಡನ್ ಏರಿಯಾದಲ್ಲಿ 6 ಮನುಷ್ಯಾಕೃತಿಗಳು ಅಂದರೆ ಮ್ಯಾನಿಕ್ವೀನ್‍ಗಳನ್ನು ಇರಿಸಲಾಗಿದೆ. ಈ ಮ್ಯಾನಿಕ್ವೀನ್‍ನ ಎದೆಯ ಭಾಗದಲ್ಲಿ ಎರಡು ಪೌಚ್‍ಗಳನ್ನು ಇರಿಸಲಾಗಿದ್ದು, ಅದು ಮನುಷ್ಯನ ಜೀವಂತಿಕೆಯನ್ನು ಸೂಚಿಸುತ್ತದೆ. ಒಂದು ಮ್ಯಾನಿಕ್ವೀನ್‍ನ ಎರಡು ಪೌಚ್‍ಗಳು ನಾಶವಾದರೆ, ಆ ಮ್ಯಾನಿಕ್ವೀನ್‍ನ ವೈರಸ್ ಸೋಂಕು ತಗುಲಿದಂತೆ ಎಂದರು. ಮ್ಯಾನಿಕ್ವೀನ್ ಮೇಲೆ ದಾಳಿ ಮಾಡಿ ಪೌಚ್ ನಾಶಪಡಿಸಲು ವೈರಸ್ ಬಳಿ 2 ಸ್ಟಾಂಪ್‍ಗಳನ್ನು ನೀಡಲಾಗಿರುತ್ತದೆ. ಈ ಸ್ಟಾಂಪ್‍ಗಳನ್ನು ಬಳಸಿ ವೈರಸ್ ಮ್ಯಾನಿಕ್ವೀನ್ ಮೇಲೆ ದಾಳಿ ನಡೆಸಬೇಕು. ಮ್ಯಾನಿಕ್ವೀನ್ ಸುತ್ತ ಕೆಂಪು ಹಾಗೂ ಹಳದಿ ಬೌಂಡರಿಗಳನ್ನು ಇರಿಸಲಾಗಿದ್ದು, ವೈರಸ್ ಹಳದಿ ಬಣ್ಣದ ಬೌಂಡರಿಯನ್ನು ದಾಟದಂತೆ ನೋಡಿಕೊಳ್ಳಬೇಕು. ಹಳದಿ ಬಣ್ಣ ಬೌಂಡರಿ ದಾಟಿ ಕೆಂಪು ಬೌಂಡರಿ ಒಳಗೆ ಹೋದರೆ ಆಗ ಮ್ಯಾನಿಕ್ವೀನ್ ಪೌಚ್‍ಗಳನ್ನು ನಾಶ ಮಾಡಬಹುದು ಎಂದು ಸೂಚಿಸಲಾಯಿತು.
ಅದರಂತೆ ಮೊದಲ ಬಜಾರ್ ಆದಾಗ ಆಟ ಶುರು ಮಾಡಿದ ಎರಡು ತಂಡ ಕಾದಾಡುತ್ತಾ, ಒಬ್ಬರಿಗೊಬ್ಬರು ತಳ್ಳಾಡುತ್ತಾ, ಕಿರುಚಾಡುತ್ತಾ ಜಗಳ ಮಾಡಿದರು. ಕೊನೆಗೆ ಮನುಷ್ಯ ತಂಡ ವೈರಸ್ ತಂಡದ ಬಳಿ ಇದ್ದ ಸ್ಟಾಂಪ್‍ನನ್ನು ವಶಪಡಿಸಿಕೊಂಡು ಗೆಲ್ಲುತ್ತಾರೆ. ಈ ವೇಳೆ ದಿವ್ಯಾ ಉರುಡುಗ ಕಾಲನ್ನು ಬಳಸಿ ಒದ್ದಿದ್ದಕ್ಕೆ ರಘು ಕಿಡಿಕಾರಿದರು.
ಎರಡನೇ ಸುತ್ತಿನ ಪಂದ್ಯದಲ್ಲಿ ವೈರಸ್ ತಂಡ ಸ್ಟಾಂಪ್‍ಗಳನ್ನು ಮ್ಯಾನಿಕ್ವೀನ್ ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಸೋತ ಮನುಷ್ಯ ತಂಡದಿಂದ ಚಂದ್ರಕಲಾ ಕ್ವಾರಂಟೈನ್‍ಗೆ ಬಂದರು. ಈ ವೇಳೆ ಹಗ್ಗದ ಮೇಲೆ ಕೈ ಇರಿಸಿದ್ದ ಚಂದ್ರಕಲಾ ಕೈ ಬಿಡಿಸಲು ವೈರಸ್ ತಂಡ ಬಟ್ಟೆಗಳ ರಾಶಿಯನ್ನು ಹಾಕಿದರು. ಮೈ ಮೇಲೆ ತಣ್ಣೀರು ಸುರಿದರು. ಅಲ್ಲದೆ ತಪ್ಪಲೆಯನ್ನು ಸೌಟಿನಿಂದ ಬಡಿಯುವ ಮೂಲಕ ಸದ್ದು ಮಾಡಿ ಕಿರಿಕಿರಿ ಮಾಡಿದರು. ಆದರೂ ದೃಢಗೆಡದೆ ಚಂದ್ರಕಲಾ ಅರ್ಧಗಂಟೆ ನಿಂತು ಕೊರೊನಾ ಗೆದ್ದು ಬಂದರು. ಈ ವೇಳೆ ಚಂದ್ರಕಲಾಗೆ ವೈರಸ್ ತಂಡ ನೀಡಿದ ಹಿಂಸೆಯನ್ನು ಖಂಡಿಸಿ ಮನುಷ್ಯ ತಂಡದವರು ಆಕ್ರೋಶ ವ್ಯಕ್ತಪಡಿಸಿದರು.
ಮೂರನೇ ಸುತ್ತಿನಲ್ಲಿ ಮನುಷ್ಯ ತಂಡ ವೈರಸ್ ತಂಡದ ಬಳಿ ಇದ್ದ ಸ್ಟಾಂಪ್‍ನನ್ನು ಮತ್ತೊಮ್ಮೆ ತಮ್ಮದಾಗಿಸಿಕೊಂಡು ಗೆದ್ದರು. ಈ ವೇಳೆ ನಿರ್ಮಲರವರ ಕತ್ತಿಗೆ ಪೆಟ್ಟಾಗಿ ಅವರನ್ನು ಮನೆಯ ಸದಸ್ಯರು ಕಾನ್ಫೆಷನ್ ರೂಮ್‍ಗೆ ಚಿಕಿತ್ಸೆಗಾಗಿ ಕರೆದೊಯ್ದರು. ಬಳಿಕ ಮನುಷ್ಯ ತಂಡ ಆಟದ ನಿಯಮ ಉಲ್ಲಂಘಿಸಿ ವೈರಸ್ ತಂಡದೊಂದಿಗೆ ಸ್ನೇಹದಿಂದ ನಡೆದುಕೊಂಡಿದ್ದರಿಂದ ಮನುಷ್ಯ ತಂಡದ ಕ್ಯಾಪ್ಟನ್ ಮಂಜು, ಶುಭ ಹಾಗೂ ಚಂದ್ರಕಲಾ ಆಟದಿಂದ ಹೊರ ನಡೆದರು.
ನಂತರ ನಾಲ್ಕನೇ ಸುತ್ತಿನಲ್ಲಿ ಮನುಷ್ಯ ತಂಡ ವೈರಸ್ ತಂಡದ ಬಳಿ ಇದ್ದ ಸ್ಟಾಂಪ್‍ಗಳನ್ನು ಮತ್ತೊಮ್ಮೆ ವಶಪಡಿಸಿಕೊಂಡರು ಆದರೂ ಹಠ ಬಿಡದ ವೈರಸ್ ತಂಡ ಸ್ಟಾಂಪ್‍ಗಳನ್ನು ಕಿತ್ತುಕೊಂಡು ಮ್ಯಾನಿಕ್ವೀನ್ ಮೇಲೆ ದಾಳಿ ನಡೆಸಿ ಜಯಶಾಲಿಯಾದರು. ಈ ವೇಳೆ ಬ್ರೋಗೌಡ ಪ್ರಶಾಂತ್‍ರಿಂದ ಹಾನಿಗೊಂಡಿರುವುದಾಗಿ ಆರೋಪಿಸಿ ಇಬ್ಬರು ಜಗಳವಾಡಿದರು. ಇದರಿಂದ ಮಾತಿಗೆ ಮಾತು ಬೆಳಸಿದ ಬ್ರೋ ಗೌಡ ಪ್ರಶಾಂತ್ ಸಂಬರಗಿಯವರಿಗೆ ಅವಾಚ್ಯ ಶಬ್ದಗಳಿಂದ ಬಾಯಿಗೆ ಬಂದಂತೆ ನಿಂದಿಸಿದರು.
ಈ ಸುತ್ತಿನಲ್ಲಿ ಮನುಷ್ಯ ತಂಡ ಸೋತ್ತಿದ್ದರಿಂದ ಗೀತಾ ಕ್ವಾರಂಟೈನ್‍ಗೆ ಬಂದರು. ಅವರ ಕೈಗಳನ್ನು ಹಗ್ಗದ ಮೇಲಿನಿಂದ ಬಿಡಿಸಲು ವೈರಸ್ ತಂಡ ಹಲವಾರು ರೀತಿ ಸರ್ಕಸ್ ನಡೆಸಿತು. ಆದರೆ ಕೊನೆಗೆ ಬಟ್ಟೆಗಳಿಗೆ ಡಾಂಬಲ್ಸ್‍ಗಳನ್ನು ಕಟ್ಟಿ ಗೀತಾ ಕೈ ಮೇಲೆ ಹಾಕಿದರು. ಹೀಗಾಗಿ ಡಾಂಬಲ್ಸ್ ತೂಕ ತಡಯಲಾರದೇ ಗೀತಾ ಕೊನೆಗೆ ಹಗ್ಗದ ಮೇಲಿನಿಂದ ಕೈ ಬಿಟ್ಟು ವೈರಸ್‍ಗೆ ಶರಣಾದರು.
ಒಟ್ಟಾರೆ ಇಷ್ಟು ದಿನ ವಿಶ್ವದಲ್ಲೆಲ್ಲಾ ಅಬ್ಬರಿಸಿದ್ದ ಕೊರೊನಾ ಇದೀಗಾ ಬಿಗ್‍ಬಾಸ್ ಮನೆ ಮಂದಿ ಮದ್ಯೆ ಮನಸ್ತಾಪ, ಕಾದಾಟ, ಆಕ್ರೋಶದ ಕಿಚ್ಚು ಹೊತ್ತಿಸಿದೆ ಎಂದರೆ ತಪ್ಪಾಗಲಾರದು.
ಬೆಂಗಳೂರು: ಇಂದು ಕರ್ನಾಟಕದಲ್ಲಿ 970 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 657 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 3 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,25,868ಕ್ಕೆ ಏರಿಕೆ ಆಗಿದೆ. ಈ ಪೈಕಿ 9,04,286 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 9,429 ಸಕ್ರಿಯ ಪ್ರಕರಣಗಳಿವೆ.
ಒಟ್ಟು ಇಲ್ಲಿಯವರೆಗೆ 12,134 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 203 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 10,377 ಆಂಟಿಜನ್ ಟೆಸ್ಟ್, 1,22,140 ಆರ್‌ಟಿ ಪಿಸಿಆರ್ ಸೇರಿದಂತೆ ಒಟ್ಟು 1,32,517 ಪರೀಕ್ಷೆ ಮಾಡಲಾಗಿದೆ. ಎಂದಿನಂತೆ ಬೆಂಗಳೂರು ನಗರದಲ್ಲಿ 479 ಮಂದಿಗೆ ಸೋಂಕು ಬಂದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ 62, ಮೈಸೂರು 45, ತುಮಕೂರು 39 ಮಂದಿಗೆ ಸೋಂಕು ಬಂದಿದೆ.
ಐಸಿಯುನಲ್ಲಿಒಟ್ಟು 203 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 88, ಕಲಬುರಗಿಯಲ್ಲಿ 14, ತುಮಕೂರಿನಲ್ಲಿ 13 ಮಂದಿ ಇದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯ ವಸಂತಪುರದಲ್ಲಿರುವ ಅಪಾರ್ಟ್‍ಮೆಂಟ್‍ವೊಂದರಲ್ಲಿ ಒಂದೇ ಕುಟುಂಬದ ಮೂವರಿಗೆ ಬ್ರಿಟನ್ ವೈರಸ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲೇ ಐಸೋಲೇಟ್ ಆಗುತ್ತೇವೆ. ಸರ್ಕಾರದ ಸೌಲಭ್ಯಗಳ ಮೇಲೆ ನಂಬಿಕೆ ಇಲ್ಲ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳ ಎದುರು ಅಪಾರ್ಟ್‍ಮೆಂಟ್ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ.
ಬೇಕಾದ್ರೆ ಅಪಾರ್ಟ್‍ಮೆಂಟ್ ಸೀಲ್‍ಡೌನ್ ಮಾಡಿ ನಾವು ಇಲ್ಲೇ ಇರುತ್ತೇವೆ. ಸರ್ಕಾರ ಕೊಡುವ ಊಟ, ಶೌಚಾಲಯ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ನಾವು ಬರುವುದಿಲ್ಲ ಅಪಾರ್ಟ್‍ಮೆಂಟ್‍ನಲ್ಲೇ ಇರುತ್ತೇವೆ. ನಮ್ಮ ಫ್ಲ್ಯಾಟ್ ಗಳಲ್ಲೇ ನಾವು ಐಸೋಲೇಟ್ ಆಗುತ್ತೇವೆ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.
ಅಪಾರ್ಟ್‍ಮೆಂಟ್‍ನಲ್ಲಿದ್ದ ಒಂದೇ ಕುಟುಂಬದ ಮೂವರಿಗೆ ಹೊಸ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಪಾರ್ಟ್‍ಮೆಂಟ್‍ನಲ್ಲಿದ್ದ ಎಲ್ಲರಿಗೂ ಕೋವಿಡ್ ಪತ್ತೆ ಪರೀಕ್ಷೆ ಮಾಡಲಾಗುತ್ತಿದೆ. ಇನ್ನು 28 ದಿನಗಳ ಕಾಲ ಅಪಾರ್ಟ್ ಮೆಂಟ್ ಸೀಲ್ ಡೌನ್ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ರೂಪಾಂತರಿ ಕೊರೊನಾ ಪತ್ತೆಯಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಕೆ. ಸುಧಾಕರ್, ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯುಕೆನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಕಳೆದ ಐದು ದಿನದಿಂದ ಬೆಂಗಳೂರಿಗೆ ಬಂದ 13 ಜನರಲ್ಲಿ ಪಾಸಿಟಿವ್ ವರದಿ ಬಂದಿದೆ. ಮಾಲ್ಡೀವ್ಸ್ ನಿಂದ ಬಂದವರಲ್ಲೂ ಹೆಚ್ಚು ಪಾಸಿಟಿವ್ ಸಂಖ್ಯೆ ಬರುತ್ತಿದೆ. ಇಟಲಿಯಿಂದ ಬಂದವರಲ್ಲೂ ಕೂಡ ಗುಣಲಕ್ಷಣಗಳು ಪತ್ತೆಯಾಗಿದ್ದು, ಕ್ವಾರಂಟೈನ್ ಆಗಬೇಕು ಎಂದು ಆರೋಗ್ಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
– ವುಹಾನ್ನಲ್ಲಿ ವೈರಸ್ ಸೃಷ್ಟಿಯಾಗಿಲ್ಲ – ಮೀನಿನ ಮೂಲಕ ವೈರಸ್ ಬಂದಿರಬಹುದು
ಬೀಜಿಂಗ್: ಇಡೀ ವಿಶ್ವಕ್ಕೆ ಕೊರೊನಾ ಹಬ್ಬಿಸಿ, ಸುಳ್ಳು ಮಾಹಿತಿಗಳನ್ನು ನೀಡಿದ್ದ ಚೀನಾ ಈಗ ಕೊರೊನಾ ವಿಚಾರದಲ್ಲಿ ಅತಿ ದೊಡ್ಡ ಸುಳ್ಳು ಹೇಳಿ ನಗೆಪಾಟಲಿಗೆ ಗುರಿಯಾಗಿದೆ.
ಕೊರೊನಾ ವೈರಸ್ ಚೀನಾದಲ್ಲಿ ಸೃಷ್ಟಿಯಾಗಿಲ್ಲ. ಈ ವೈರಸ್‌ನ ಮೂಲ ಭಾರತ ಎಂದು ಹೇಳಿ ತನ್ನ ಮೇಲೆ ಬಂದಿದ್ದ ಕಳಂಕವನ್ನು ತೊಳೆಯಲು ಮತ್ತೊಂದು ಸುಳ್ಳು ಹೇಳಿದೆ. 2019ರ ಬೇಸಿಗೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಅಶುದ್ಧ ನೀರಿನ ಮೂಲಕ ಮೊದಲು ವೈರಸ್ ಹರಡಿದೆ. ಈ ವೈರಸ್ ಹೇಗೋ ವುಹಾನ್ ತಲುಪಿದೆ ಎಂದು ಮೊಂಡುವಾದ ಮಂಡಿಸಿದೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್
ತನ್ನ ಮೇಲೆ ಬಂದಿರುವ ಕಳಂಕವನ್ನು ತೊಡೆದು ಹಾಕಲು ಚೀನಾ ಮಾಧ್ಯಮಗಳು ಈಗ ಕೊರೊನಾ ವಿಚಾರದಲ್ಲಿ ಸರಣಿ ಸುಳ್ಳು ವರದಿಗಳನ್ನು ಪ್ರಕಟಿಸಲು ಆರಂಭಿಸಿದ್ದು, ಭಾರತದಲ್ಲಿ ವೈರಸ್ ಸೃಷ್ಟಿಯಾಗಿದೆ ಎಂದು ಹೇಳಿದೆ.
ವಿಶ್ವದ ವಿವಿಧ ರಾಷ್ಟ್ರಗಳಿಂದ ಆಹಾರ ಉತ್ಪನ್ನಗಳನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ವಿಶೇಷವಾಗಿ ಭಾರತದಿಂದ ಮೀನುಗಳನ್ನು ತರಿಸಿಕೊಳ್ಳುತ್ತದೆ. ಈ ಮೂಲಕ ಚೀನಾಗೆ ವೈರಸ್ ಪ್ರವೇಶ ಆಗಿರುವ ಸಾಧ್ಯತೆಯಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಮೊಂಡುವಾದ ಏನು?
ಕೊರೊನಾ ವೈರಸ್‌ನ ಮೂಲ ಚೀನಾ ಅಲ್ಲವೇ ಅಲ್ಲ. ಅಮೆರಿಕ, ಆಸ್ಟ್ರೇಲಿಯಾ, ಭಾರತ, ಇಟಲಿ, ರಷ್ಯಾ, ಚೆಕ್ ಗಣರಾಜ್ಯ , ಸರ್ಬಿಯಾ ಆಗಿರಬಹುದು. ಈ ವಾದಕ್ಕೆ ಪೂರಕ ಅಂಶ ಎಂಬಂತಗೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಕಡಿಮೆ ರೂಪಾಂತರದ ವೈರಸ್ ಮಾದರಿಗಳು ಪತ್ತೆಯಾಗಿವೆ. ಈ ಕಾರಣಕ್ಕೆ ಈ ದೇಶಗಳಲ್ಲಿ ಕೊರೊನಾ ವೈರಸ್ ಆರಂಭದಲ್ಲಿ ಪತ್ತೆ ಆಗಿರಬಹುದು.
ನೀರಿನ ಕೊರತೆಯಿಂದ ಮಂಗಗಳಂತಹ ಜೀವಿಗಳು ಕಾದಾಟದಲ್ಲಿ ತೊಡಗಿದ್ದಾಗ ಮಾನವರ ಮಧ್ಯಪ್ರವೇಶದಿಂದಾಗಿ ಈ ವೈರಸ್ ಹರಡಿರಬಹುದು. ಭಾರತದಲ್ಲಿ ಆರೋಗ್ಯ ವ್ಯವಸ್ಥೆ ಮೊದಲೇ ಸರಿ ಇಲ್ಲ. ಅಷ್ಟೇ ಅಲ್ಲದೇ ಯುವಕರ ಸಂಖ್ಯೆ ಜಾಸ್ತಿ ಇರುವ ಕಾರಣ ವೈರಸ್ ಬಂದಿರುವ ವಿಚಾರ ಆರಂಭದಲ್ಲಿ ತಿಳಿದಿರಲಿಲ್ಲ ಎಂಬ ಮೊಂಡುವಾದವನ್ನು ಮಂಡಿಸಿದೆ. ಇದನ್ನೂ ಓದಿ:ಕೋವಿಡ್ 19 – ಬೆಳಕಿಗೆ ಬಂತು ಚೀನಾದ ಮತ್ತೊಂದು ಮಹಾ ಕಳ್ಳಾಟ
ಸುಳ್ಳು ಮೊದಲೆನಲ್ಲ:
ಗಲ್ವಾನ್ ಘರ್ಷಣೆಯ ಬಳಿಕ ಭಾರತ ಮತ್ತು ಚೀನಾದ ನಡುವಿನ ಸಂಬಂಧ ಹಾಳಾಗಿದೆ. ಈ ಕಾರಣಕ್ಕೆ ಚೀನಾ ಈ ಸುಳ್ಳು ಹೇಳಿರಬಹುದು ಎಂದು ವಿಶ್ಲೇಷಿಸಲಾಗುತ್ತದೆ.
ಚೀನಾ ಈ ರೀತಿ ಸುಳ್ಳು ಹೇಳುವುದು ಮೊದಲೆನಲ್ಲ. ಅಮೆರಿಕದ ಟ್ರಂಪ್ ಸರ್ಕಾರ ಕೊರೊನಾ ವಿಚಾರದ ಬಗ್ಗೆ ವಿಶ್ವಕ್ಕೆ ಸರಿಯಾದ ಮಾಹಿತಿ ನೀಡದ್ದಕ್ಕೆ ಚೀನಾದ ವಿರುದ್ಧ ವಾಗ್ದಾಳಿ ನಡೆಸಿತ್ತು. ಅಮೆರಿಕದ ಭದ್ರತಾ ಸಲಹೆಗಾರ ರಾಬರ್ಟ್ ಒಬ್ರಿಯಾನ್, ಕೊರೊನಾ ವೈರಸ್ ವಿಚಾರದಲ್ಲಿ ಚೀನಾ ತಡವಾಗಿ ಎಚ್ಚೆತ್ತ ಕಾರಣ ಈಗ ವಿಶ್ವವೇ ಇದಕ್ಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಚೀನಾ, ಅಮೆರಿಕ ಸಂಶೋಧನೆಯಿಂದ ವುಹಾನ್ ಮಾರುಕಟ್ಟೆಗೆ ಬಂತು ಕೊರೊನಾ
ಇದಕ್ಕೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್ ಈ ವೈರಸ್ ಚೀನಾದಲ್ಲಿ ಮೊದಲು ಸೃಷ್ಟಿಯಾಗಿಲ್ಲ ಮೊದಲು ಅಮೆರಿಕದಲ್ಲಿ ಸೃಷ್ಟಿಯಾಗಿದೆ ಎಂದು ತಿಳಿಸಲು ಕೆಲವೊಂದು ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೇ ಒಂದು ಅಮೆರಿಕ ಸೇನೆಯ ಲ್ಯಾಬ್ ಒಂದು ಮುಚ್ಚಲ್ಪಟ್ಟಿತ್ತು. ಅಪಾಯಕಾರಿ ವಸ್ತುಗಳು ಇದೆ ಎನ್ನುವ ಕಾರಣಕ್ಕೆ ಅಮರಿಕ ಲ್ಯಾಬ್ ಅನ್ನು ಸ್ಥಗಿತಗೊಳಿಸಿತ್ತು ಎನ್ನುವ ಸಂಶೋಧನಾ ವರದಿಯನ್ನು ಟ್ವೀಟ್ ಮಾಡಿ ಸುಳ್ಳನ್ನು ಸಮರ್ಥಿಸಿಕೊಂಡಿದ್ದರು.
– ಹಂದಿಯಿಂದ ಮಾನವನಿಗೆ ಹರಡುತ್ತದೆ ವೈರಸ್ – ನಿಯಂತ್ರಿಸದಿದ್ದರೆ ಕೋವಿಡ್-19ಗಿಂತಲೂ ಅಪಾಯಕಾರಿ
ಬೀಜಿಂಗ್: ಈಗಾಗಲೇ ಜಗತ್ತನ್ನೇ ಲಾಕ್‌ಡೌನ್ ಮಾಡಿ ಸಮಸ್ಯೆ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಮಧ್ಯೆ ಈಗ ಚೀನಾದಲ್ಲಿ ಮತ್ತೊಂದು ವೈರಸ್ ಸೃಷ್ಟಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು. ಸಾಕಾಣಿಕಾ ಕೇಂದ್ರದಲ್ಲಿರುವ ಹಂದಿಗಳಲ್ಲಿ ಜ್ವರದ ವೈರಸ್ ಇರುವುದು ಪತ್ತೆಯಾಗಿದೆ. ಈ ಜ್ವರದ ವೈರಸ್ ಹಂದಿಗಳಿಂದ ಮನುಷ್ಯನಿಗೆ ಬಳಿಕ ಮನುಷ್ಯನಿಂದ ಮನುಷ್ಯನಿಗೆ ಹರಡುವ ಎಲ್ಲ ಲಕ್ಷಣಗಳು ಇವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ಸಂಶೋಧಕರು, ಈ ಹಂದಿ ಜ್ವರವನ್ನು ನಿಯಂತ್ರಿಸದೇ ಇದ್ದರೆ ಕೋವಿಡ್ 19ನಂತೆ ಮತ್ತೊಂದು ಸಾಂಕ್ರಮಿಕ ರೋಗವಾಗುವ ಅಥವಾ ಇದಕ್ಕಿಂತಲೂ ಭೀಕರ ಪರಿಣಾಮ ಸೃಷ್ಟಿಸುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.
ಸಂಶೋಧಕರಾದ ಜಾರ್ಜ್ ಗಾವೋ ಮತ್ತು ಜಿನ್ಹುವಾ ಲಿಯು ನೇತೃತ್ವದ ತಂಡ 2011 ರಿಂದ 2018ರವರೆಗೆ 10 ಪ್ರಾಂತ್ಯಗಳ ಹಂದಿಗಳಿಂದ 179 ವೈರಸ್‌ಗಳನ್ನು ಪತ್ತೆ ಹಚ್ಚಿದ್ದರು.
ಈ ಅಪಾಯಕಾರಿ ವೈರಸ್‌ಗೆ ಜಿ4ಇಎ ಎಂದು ಹೆಸರನ್ನು ಇರಿಸಲಾಗಿದೆ. 2016ರಲ್ಲಿ 46 ವರ್ಷದ ವ್ಯಕ್ತಿಯಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿದ್ದರೆ ನಂತರ 2019ರಲ್ಲಿ 9 ವರ್ಷದ ಬಾಲಕನಲ್ಲಿ ವೈರಸ್ ಕಂಡು ಬಂದಿದೆ.
ಈ ಇಬ್ಬರು ರೋಗಿಗಳು ಹಂದಿ ಸಾಕಾಣಿಕೆ ಮಾಡುವ ನೆರೆಹೊರೆಯವರನ್ನು ಹೊಂದಿದ್ದರು. ಇಬ್ಬರಲ್ಲಿ ರೋಗ ನಿರೋಧಕ ಶಕ್ತಿ ಇಲ್ಲದ ಕಾರಣ ವೈರಸ್ ಹರಡಿರಬಹುದು. ಈ ರೀತಿಯಾಗಿ ಸೃಷ್ಟಿಯಾಗುವ ವೈರಸ್‌ಗೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಜ್ವರ, ಸೀನುವುದು, ಕೆಮ್ಮು, ಕಫ ಈ ಸಾಮಾನ್ಯ ಲಕ್ಷಣಗಳು ಇದರಲ್ಲೂ ಇದೆ. 2016ರ ನಂತರ ಅತಿ ಹೆಚ್ಚು ಸಂಖ್ಯೆ ವೈರಸ್ ಪತ್ತೆಯಾಗಿದೆ. 15 ಹಂದಿ ಸಾಕಾಣಿಕಾ ಕೇಂದ್ರದಲ್ಲಿರುವ 30 ಸಾವಿರ ಹಂದಿಗಳ ಮೂಗಿನಿಂದ ಸ್ವಾಬ್‌ಗಳನ್ನು ತೆಗೆದು ಅಧ್ಯಯನ ಮಾಡಲಾಗಿದೆ. ಶೇ. 10.4 ರಷ್ಟು ಜನ ಮಾತ್ರ ಈ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯ(ಆಂಟಿಬಾಡಿಸ್) ಹೊಂದಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳು ಈ ವೈರಸ್‌ಗೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಹಂದಿ ಸಾಕಾಣಿಕೆ ಸಾಕಾಣಿಕೆಯನ್ನು ಏಷ್ಯಾದಲ್ಲಿ ಹೆಚ್ಚಿನ ಕಡೆಗಳಲ್ಲಿ ಮಾಡಲಾಗುತ್ತಿದೆ. ಅದರಲ್ಲೂ ವಿಶ್ವದ ಅರ್ಧಕ್ಕೂ ಹೆಚ್ಚು ಹಂದಿ ಸಾಕಾಣಿಕಾ ಕೇಂದ್ರ ಚೀನಾದಲ್ಲಿದೆ. ನೈರ್ಮಲ್ಯ ಕಡಿಮೆಯಾಗಿರವುದರ ಜೊತೆಗೆ ಹಂದಿಗಳಿಗೆ ನೀಡುವ ಆಹಾರದಲ್ಲಿ ಬದಲಾವಣೆಯಾಗಿದೆ. ವಿಶೇಷವಾಗಿ ಸ್ಟೀರಾಯ್ಡ್‌ಗಳನ್ನು ನೀಡುವುದಿಂದ ದೇಹದಲ್ಲಿ ಬದಲಾವಣೆಯಾಗಿ ಈ ವೈರಸ್‌ಗಳು ಸೃಷ್ಟಿಯಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಹಂದಿ ಸಾಕಾಣಿಕಾ ಕೇಂದ್ರದಲ್ಲಿ ನೈರ್ಮಲ್ಯವನ್ನು ಕಾಪಾಡುವುದು ಮತ್ತು ಹಂದಿ ಸಾಕಾಣಿಕಾ ಕೇಂದ್ರದಲ್ಲಿ ಕೆಲಸ ಮಾಡುವರ ಮೇಲೆ ಹೆಚ್ಚಿನ ನಿಗಾ ಇಡಬೇಕು. ಈಗಲೇ ನಿಗಾ ಇಡದೇ ಇದ್ದರೆ ಭವಿಷ್ಯದಲ್ಲಿ ಜಾಗತಿಕವಾಗಿ ಈ ರೀತಿಯ ವೈರಸ್ ಹರಡಬಹುದು ಎಂದು ಸಂಶೋಧಕರು ಅಭಿಪ್ರಾಯ ತಿಳಿಸಿದ್ದಾರೆ. ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಜರ್ನಲ್‌ನಲ್ಲಿ ಚೀನಾ ಸಂಶೋಧಕರ ಅಧ್ಯಯನ ವರದಿ ಪ್ರಕಟವಾಗಿದೆ.
ವಾಷಿಂಗ್ಟನ್: ಕೊರೊನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ ವುಹಾನ್ ನಲ್ಲಿ ಎಲ್ಲಿ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ನಿಗೂಢ ರಹಸ್ಯವನ್ನು ಭೇದಿಸಲು ಅಮೆರಿಕ ಈಗ ಮುಂದಾಗಿದೆ.
ಅಮೆರಿಕ ಸರ್ಕಾರ ಈ ವೈರಸ್ ಮೊದಲು ವುಹಾನ್ ನಲ್ಲಿರುವ ವೆಟ್ ಮಾರುಕಟ್ಟೆಯಿಂದ ಮನುಷ್ಯರಿಗೆ ಬಂದಿದೆಯೋ ಅಥವಾ ವುಹಾನ್ ವೈರಾಲಜಿ ಲ್ಯಾಬ್ ನಿಂದ ಸೋರಿಕೆ ಆಗಿದೆಯೋ ಎನ್ನುವುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ.
ಈ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿ, ಸಂಭವಿಸಿರುವ ಈ ಭಯಾನಕ ಪರಿಸ್ಥಿತಿ ಯಾಕೆ ಸೃಷ್ಟಿ ಆಗಿದೆ ಎಂಬ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಪ್ರತಿಕ್ರಿಯೆಗೆ ಮಾಧ್ಯಮಗಳು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರ ಬಳಿ ಈ ಬಗ್ಗೆ ನೀವು ಮಾತನಾಡಿದ್ದೀರಾ ಎಂದು ಮರು ಪ್ರಶ್ನೆ ಹಾಕಿದ್ದಕ್ಕೆ, ಲ್ಯಾಬ್ ಬಗ್ಗೆ ಮಾತನಾಡಿದ ವಿಚಾರವನ್ನು ಚರ್ಚಿಸಲು ಇಷ್ಟ ಪಡುವುದಿಲ್ಲ. ಈ ವಿಚಾರವನ್ನು ಚರ್ಚಿಸುವ ಸರಿಯಾದ ಸಮಯ ಇದಲ್ಲ ಎಂದು ಉತ್ತರಿಸಿದರು.
ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಮೈಕ್ ಪಾಂಪಿಯೊ ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ, ಚೀನಾದ ವುಹಾನ್ ನಲ್ಲಿ ವೈರಸ್ ಸೃಷ್ಟಿಯಾಗಿದೆ ಎನ್ನುವುದು ತಿಳಿದಿದೆ. ಈ ವೈರಸ್ ಹೇಗೆ ಹರಡಿತು ಎನ್ನುವ ಬಗ್ಗೆ ಸ್ಪಷ್ಟಪಡಿಸಬೇಕು. ವೈರಾಲಜಿ ಪ್ರಯೋಗಾಲಯದ ಕೆಲವೇ ಮೈಲು ದೂರದಲ್ಲಿ ವೆಟ್ ಮಾರುಕಟ್ಟೆಯಿದೆ. ಈ ವಿಚಾರದ ಬಗ್ಗೆ ಚೀನಾ ಸರ್ಕಾರ ಶುದ್ಧ ಹಸ್ತವಾಗಿರಬೇಕು ಎಂದು ಆಗ್ರಹಿಸಿದ್ದಾರೆ.
ಬುಧವಾರ ಫಾಕ್ಸ್ ನ್ಯೂಸ್ ಚೀನಾದ ವೈರಾಲಜಿ ಪ್ರಯೋಗಾಲಯದಿಂದ ಹರಡಿದೆ. ಇದು ಜೈವಿಕ ಅಸ್ತ್ರವಲ್ಲ. ವೈರಸ್ ವಿರುದ್ಧ ಹೋರಾಡಲು ಅಮೆರಿಕಕ್ಕೆ ಸರಿಸಮಾನವಾಗಲು ಅಥವಾ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ ಎಂದು ತೋರಿಸಲು ಈ ವೈರಸ್ ಅಭಿವೃದ್ಧಿ ಪಡಿಸಿರಬಹುದು ಎಂದು ವರದಿ ಮಾಡಿತ್ತು.
ಈ ವಾರದ ಆರಂಭದಲ್ಲಿ ಡೈಲಿ ಮೇಲ್, ವುಹಾನ್ ವೈರಾಲಜಿ ಲ್ಯಾಬ್ ನಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂದು ಎಂದು ವರದಿ ಮಾಡಿತ್ತು.
ಬಾವಲಿಗಳ ಜೀನ್ ತೆಗೆದು ಸಂಶೋಧನೆ ನಡೆಸಲಾಗುತ್ತಿತ್ತು. ಈ ಸಂಶೋಧನೆಗೆ ಅಮೆರಿಕ ಹಣ ನೀಡುತ್ತಿತ್ತು. ವುಹಾನ್ ಲ್ಯಾಬ್ ವಿಜ್ಞಾನಿಗಳು 1 ಸಾವಿರ ಕಿ. ಮೀ ದೂರದಲ್ಲಿರುವ ಯುನಾನ್ ಗುಹೆಯಿಂದ ಬಾವಲಿಗಳನ್ನು ಹಿಡಿದು ಅಧ್ಯಯನಕ್ಕಾಗಿ ಸ್ವಾಬ್ ಸಂಗ್ರಹಿಸಿ ಹೊಸ ರೀತಿಯ ವೈರಸ್ ಸಂಶೋಧನೆ ನಡೆಸುತ್ತಿದ್ದರು. ಈ ವೇಳೆ ಪತ್ತೆಯಾದ ವೈರಸ್ಸನ್ನು ಹಂದಿಗಳಿಗೆ ಚುಚ್ಚಿ ಯಾವ ರೀತಿ ಸೋಂಕು ತಗಲುತ್ತದೆ ಎಂದು ಪರೀಕ್ಷಿಸಿದ್ದಾರೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್
ಈ ಅಧ್ಯಯನದ ಬಳಿಕ ಪ್ರಯೋಗಕ್ಕೆ ಬಳಸಲಾದ ಬಾವಲಿ ಮತ್ತು ಹಂದಿಗಳನ್ನು 10 ಕಿ.ಮೀ ದೂರದ ವೆಟ್ ಮಾರುಕಟ್ಟೆಗೆ ಮಾರಾಟ ಮಾಡಿದ್ದರಿಂದ ವೈರಸ್ ಹರಡಿದೆ. ಚೀನಾದ ಈ ಪ್ರಯೋಗಗಳಿಗೆ ಅಮೆರಿಕ ಸುಮಾರು 3.7 ದಶಲಕ್ಷ ಡಾಲರ್(28 ಕೋಟಿ ರೂ.) ಸಹಾಯ ಮಾಡಿದೆ ಎಂದು ವರದಿ ಉಲ್ಲೇಖಿಸಿತ್ತು.
2011 ರಿಂದ 2015ರ ಅಕ್ಟೋಬರ್ ವರೆಗೆ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಮೂರು ದಿನಗಳ ಹಂದಿಗಳ ಮೇಲೆ ಚುಚ್ಚಿ ಪ್ರಯೋಗ ನಡೆಸಲಾಗಿದೆ. ಪ್ರಯೋಗದ ಫಲಿತಾಂಶವನ್ನು 2017 ರಲ್ಲಿ “ಸಾರ್ಸ್ ಸಂಬಂಧಿಸಿದ ಕೊರೊನಾ ವೈರಸ್ಸಿನ ಮೂಲ ಪತ್ತೆ” ಪ್ರಬಂಧದಲ್ಲಿ ವಿವರಿಸಲಾಗಿದೆ.
ವಿಶೇಷ ಏನೆಂದರೆ ಕಳೆದ ವಾರ ವುಹಾನ್ ನಗರದಲ್ಲಿರುವ ಪ್ರಸಿದ್ಧ ವೈದ್ಯರೊಬ್ಬರು ವೆಟ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂಬ ವಾದವನ್ನು ತಿರಸ್ಕರಿಸಿದ್ದರು. ವುಹಾನ್ ನಲ್ಲಿ ಪತ್ತೆಯಾದ ಮೊದಲ 41 ಕೊರೊನಾ ಸೋಂಕಿತರ ಜೊತೆ ವೆಟ್ ಮಾರುಕಟ್ಟೆಗೆ ಸಂಬಂಧವಿಲ್ಲದ 10 ಮಂದಿಯೂ ಇದ್ದರು. ವೆಟ್ ಮಾರುಕಟ್ಟೆಯೇ ಮೂಲ ಎಂದ ಮೇಲೆ ಎಲ್ಲರೂ ಇಲ್ಲಿಯವರೇ ಆಗಬೇಕಿತ್ತು. ಉಳಿದ 10 ಮಂದಿ ಬೇರೆಯವರು ಆಗಿದ್ದ ಕಾರಣ ವೈರಸ್ ಮೂಲ ವೆಟ್ ಮಾರುಕಟ್ಟೆ ಅಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು.
– ಬಾವಲಿಗಳ ಬಗ್ಗೆ ವುಹಾನ್‍ನಲ್ಲಿ ಅಧ್ಯಯನ – ಹಂದಿಗಳಿಗೆ ವೈರಸ್ ಚುಚ್ಚಿ ವೆಟ್ ಮಾರುಕಟ್ಟೆಗೆ ಮಾರಾಟ – ಈ ಅಧ್ಯಯನಕ್ಕೆ ಅಮೆರಿಕದಿಂದ ಹಣ
ಲಂಡನ್: ಕೊರೊನಾ ವೈರಸ್ ಮೂಲ ಯಾವುದು ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ಈಗ ಚೀನಾ ಮತ್ತು ಅಮೆರಿಕ ಸಂಶೋಧನೆಯಿಂದ ಕೊರೊನಾ ‘ಸೋರಿಕೆ’ಯಾಗಿದೆ ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಹೌದು. ಇಲ್ಲಿಯವರಿಗೆ ಪ್ರಾಣಿಗಳ ಮಾಂಸ ಮಾರಾಟ ಮಾಡುತ್ತಿದ್ದ ವುಹಾನ್ ವೆಟ್ ಮಾರುಕಟ್ಟೆಯಿಂದ ಮನುಷ್ಯನಿಗೆ ಕೊರೊನಾ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ಈಗ ವುಹಾನ್ ವೈರಾಲಜಿ ಲ್ಯಾಬ್ ನಿಂದ ಬಾವಲಿಗಳ ಜೀನ್ ತೆಗೆದು ಸಂಶೋಧನೆ ನಡೆಸಲಾಗುತ್ತಿತ್ತು. ಈ ಸಂಶೋಧನೆಗೆ ಅಮೆರಿಕ ಹಣ ನೀಡುತ್ತಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಸೋಂಕು ಹರಡಿದ್ದು ಹೇಗೆ?
ವುಹಾನ್ ಲ್ಯಾಬ್ ವಿಜ್ಞಾನಿಗಳು 1 ಸಾವಿರ ಕಿ. ಮೀ ದೂರದಲ್ಲಿರುವ ಯುನಾನ್ ಗುಹೆಯಿಂದ ಬಾವಲಿಗಳನ್ನು ಹಿಡಿದು ಅಧ್ಯಯನಕ್ಕಾಗಿ ಸ್ವಾಬ್ ಸಂಗ್ರಹಿಸಿ ಹೊಸ ರೀತಿಯ ವೈರಸ್ ಸಂಶೋಧನೆ ನಡೆಸುತ್ತಿದ್ದರು. ಈ ವೇಳೆ ಪತ್ತೆಯಾದ ವೈರಸ್ಸನ್ನು ಹಂದಿಗಳಿಗೆ ಚುಚ್ಚಿ ಯಾವ ರೀತಿ ಸೋಂಕು ತಗಲುತ್ತದೆ ಎಂದು ಪರೀಕ್ಷಿಸಿದ್ದಾರೆ.
ಈ ಅಧ್ಯಯನದ ಬಳಿಕ ಪ್ರಯೋಗಕ್ಕೆ ಬಳಸಲಾದ ಬಾವಲಿ ಮತ್ತು ಹಂದಿಗಳನ್ನು 10 ಕಿ.ಮೀ ದೂರದ ವೆಟ್ ಮಾರುಕಟ್ಟೆಗೆ ಮಾರಾಟ ಮಾಡಿದ್ದರಿಂದ ವೈರಸ್ ಹರಡಿದೆ. ಚೀನಾದ ಈ ಪ್ರಯೋಗಗಳಿಗೆ ಅಮೆರಿಕ ಸುಮಾರು 3.7 ದಶಲಕ್ಷ ಡಾಲರ್(28 ಕೋಟಿ ರೂ.) ಸಹಾಯ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.
2011 ರಿಂದ 2015ರ ಅಕ್ಟೋಬರ್ ವರೆಗೆ ಈ ಅಧ್ಯಯನ ನಡೆಸಲಾಗಿದೆ. ಈ ಅಧ್ಯಯನದಲ್ಲಿ ಮೂರು ದಿನಗಳ ಹಂದಿಗಳ ಮೇಲೆ ಚುಚ್ಚಿ ಪ್ರಯೋಗ ನಡೆಸಲಾಗಿದೆ. ಪ್ರಯೋಗದ ಫಲಿತಾಂಶವನ್ನು 2017 ರಲ್ಲಿ “ಸಾರ್ಸ್ ಸಂಬಂಧಿಸಿದ ಕೊರೊನಾ ವೈರಸ್ಸಿನ ಮೂಲ ಪತ್ತೆ” ಪ್ರಬಂಧದಲ್ಲಿ ವಿವರಿಸಲಾಗಿದೆ.
ವಿಶೇಷ ಏನೆಂದರೆ ಕಳೆದ ವಾರ ವುಹಾನ್ ನಗರದಲ್ಲಿರುವ ಪ್ರಸಿದ್ಧ ವೈದ್ಯರೊಬ್ಬರು ವೆಟ್ ಮಾರುಕಟ್ಟೆಯಿಂದ ವೈರಸ್ ಹರಡಿದೆ ಎಂಬ ವಾದವನ್ನು ತಿರಸ್ಕರಿಸಿದ್ದರು. ವುಹಾನ್ ನಲ್ಲಿ ಪತ್ತೆಯಾದ ಮೊದಲ 41 ಕೊರೊನಾ ಸೋಂಕಿತರ ಜೊತೆ ವೆಟ್ ಮಾರುಕಟ್ಟೆಗೆ ಸಂಬಂಧವಿಲ್ಲದ 10 ಮಂದಿಯೂ ಇದ್ದರು. ವೆಟ್ ಮಾರುಕಟ್ಟೆಯೇ ಮೂಲ ಎಂದ ಮೇಲೆ ಎಲ್ಲರೂ ಇಲ್ಲಿಯವರೇ ಆಗಬೇಕಿತ್ತು. ಉಳಿದ 10 ಮಂದಿ ಬೇರೆಯವರು ಆಗಿದ್ದ ಕಾರಣ ವೈರಸ್ ಮೂಲ ವೆಟ್ ಮಾರುಕಟ್ಟೆ ಅಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’
ಚೀನಾದ ಪ್ರಯೋಗಾಲಯಗಳಿಗೆ ಅಮೆರಿಕ ಹಣ ನೀಡುವುದರ ಕುರಿತು ಅಮೆರಿಕದ ಸೆನೆಟ್ ಸದಸ್ಯರು ಕಿಡಿಕಾಡಿದ್ದಾರೆ. ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಟ್ ಗೇಟ್ಜ್ ಪ್ರತಿಕ್ರಿಯಿಸಿ, ಪ್ರಾಣಿಗಳ ಮೇಲೆ ನಡೆಯುತ್ತಿರುವ ಈ ಅಪಾಯಕಾರಿ ಕ್ರೂರ ಪ್ರಯೋಗಕ್ಕೆ ಅಮೆರಿಕ ಹಣ ನೀಡುತ್ತಿದೆ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಈ ಪ್ರಯೋಗಗಳಿಗೆ ಹಣ ನೀಡುವುದು ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಚೀನಾ ಡೈಲಿ 2018ರಲ್ಲಿ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಏಷ್ಯದ ಅತಿ ದೊಡ್ಡ ವೈರಸ್ ಬ್ಯಾಂಕಿನ ಚಿತ್ರವನ್ನು ವೀಕ್ಷಿಸಿ, ಮಧ್ಯ ಚೀನಾ ಹುಬೆ ಪ್ರಾಂತ್ಯದಲ್ಲಿರುವ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಾಜಿ ಕೇಂದ್ರದಲ್ಲಿ 1,500 ವಿವಿಧ ವೈರಸ್ ಗಳನ್ನು ರಕ್ಷಿಸಲಾಗಿದೆ ಎಂದು ಚೀನಾ ಡೈಲಿ 2018ರ ಮೇ 29 ಬೆಳಗ್ಗೆ 5:45 ಕ್ಕೆ ಟ್ವೀಟ್ ಮಾಡಿತ್ತು. ಕಳೆದ ತಿಂಗಳವರೆಗೆ ಈ ಟ್ವೀಟ್ ಇತ್ತು. ಆದರೆ ಈಗ ಈ ಟ್ವೀಟ್ ಅನ್ನು ಡಿಲೀಟ್ ಮಾಡಿದೆ. ಇದನ್ನೂ ಓದಿ: 76 ದಿನಗಳ ಲಾಕ್‍ಡೌನ್ ತೆರವು – ವುಹಾನ್‌ನಲ್ಲಿ ಲೈಟ್ ಶೋ, ಪ್ರಜೆಗಳ ಆನಂದ ಭಾಷ್ಪ
ಚೀನಾವೇ ಸೃಷ್ಟಿಸಿದ ವೈರಸ್?
ಕೊರೋನಾ ವೈರಸ್ ವೇಗವಾಗಿ ಹರಡುತ್ತಿರುವುದನ್ನು ಗಮನಿಸಿ ಈಗ ಚೀನಾವೇ ಈ ವೈರಸ್ ಸೃಷ್ಟಿ ಮಾಡಿತೇ ಎನ್ನುವ ಶಂಕೆ ಎದ್ದಿದೆ. ವೈರಸ್ ಅಧ್ಯಯನ ಮಾಡಲೆಂದೇ ವುಹಾನ್ ನಗರದಲ್ಲಿ ಚೀನಾ ಸರ್ಕಾರ ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಎಂಬ ಸಂಸ್ಥೆಯಲ್ಲಿ ಸಾರ್ಸ್ ಸೇರಿದಂತೆ ಹಲವು ವೈರಸ್ ಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈಗ ಕೊರೋನಾ ವೈರಸ್ ಸೃಷ್ಟಿಯಾದ ಕೇಂದ್ರ ಸ್ಥಳ ವುಹಾನ್ ಆಗಿದೆ. ವುಹಾನ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪೀಡಿತರಾಗಿದ್ದರು. ಭಾರತದಲ್ಲಿ ಮೊದಲು ಕೇರಳದ ಮೂರು ಮಂದಿ ವಿದ್ಯಾರ್ಥಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಈ ಮೂವರು ವುಹಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೇ ಆಗಿದ್ದರು ಎನ್ನುವುದು ವಿಶೇಷ.
ವೈರಾಲಜಿ ಸಂಸ್ಥೆಯಲ್ಲಿ ಏನು ಪ್ರಯೋಗ ಕೈಗೊಳ್ಳಲಾಗುತ್ತದೆ ಎನ್ನುವುದು ಈಗಲೂ ರಹಸ್ಯವಾಗಿದೆ. ಯುದ್ಧದ ಮೂಲಕ ದೇಶಗಳ ಜೊತೆ ಹೋರಾಡುವುದು ಇಂದು ಬಹಳ ಕಷ್ಟ. ಹೀಗಾಗಿ ಚೀನಾ ಜೈವಿಕ ಅಸ್ತ್ರವನ್ನು ತಯಾರು ಮಾಡುತ್ತದೆ ಎನ್ನುವ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಸಾರ್ಸ್ ಆರಂಭದಲ್ಲಿ ಕಂಡು ಬಂದಿದ್ದು ಇದೇ ವುಹಾನ್ ನಲ್ಲಿ. 2002ರಲ್ಲಿ ಕಾಣಿಸಿಕೊಂಡಾಗ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತ್ತು. ಆದರೆ ವಿದೇಶಗಳಿಗೆ ಹರಡಿದಾಗ ಕೊನೆಗೆ ಸತ್ಯವನ್ನು ಒಪ್ಪಿಕೊಂಡಿತ್ತು. ಈಗಲೂ ಕೆಲ ವಿಜ್ಞಾನಿಗಳು ಇದು ಯಾವುದೋ ಪ್ರಾಣಿಯಿಂದ, ಪಕ್ಷಿಯಿಂದ ಕೊರೋನಾ ವೈರಸ್ ಸೃಷ್ಟಿಯಾಗಿಲ್ಲ. ಜೈವಿಕ ಅಸ್ತ್ರವನ್ನು ಪರೀಕ್ಷೆ ಮಾಡುತ್ತಿದ್ದಾಗ ಹೇಗೋ ಸೋರಿಕೆಯಾಗಿ ಈಗ ಜಗತ್ತಿಗೆ ಹರಡುತ್ತಿದೆ ಎಂದು ವಾದವನ್ನು ಮುಂದಿಡುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ಮಿಲಿಟರಿ ವುಹಾನ್‍ನಲ್ಲಿ ಕೊರೊನಾ ವೈರಸ್ ತಂದಿರಬಹುದು – ಚೀನಾ
ವುಹಾನ್ ವಿಶೇಷತೆ ಏನು?
ಮಧ್ಯ ಚೀನಾದ ದೊಡ್ಡ ನಗರ ವುಹಾನ್ ಆಗಿದ್ದು ಇಲ್ಲಿ ಬಂದರು, ವಿಮಾನ ನಿಲ್ದಾಣಗಳಿವೆ. 35 ಶಿಕ್ಷಣ ಸಂಸ್ಥೆಗಳಿದ್ದು ಚೀನಾದ ಶೈಕ್ಷಣಿಕ ಹಬ್ ಎಂದು ವುಹಾನ್ ನಗರವನ್ನು ಕರೆಯಲಾಗುತ್ತದೆ. ಈ ಕಾರಣಕ್ಕೆ ಹಲವು ರಾಷ್ಟ್ರಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಚೀನಾ ಸರ್ಕಾರವೇ ಇಲ್ಲಿ ಹಲವು ಸಂಶೋಧನಾ ಕೇಂದ್ರಗಳನ್ನು ತೆರೆದಿದೆ. ಒಟ್ಟು ಇಲ್ಲಿ 350 ಸಂಶೋಧನಾ ಕೇಂದ್ರಗಳಿವೆ. ಇದನ್ನೂ ಓದಿ: ವುಹಾನ್‍ನಲ್ಲಿ ಕೊರೊನಾ ತಡೆಗಟ್ಟಲು ಬೆಂಗ್ಳೂರಿನ ಕಂಪನಿಯ ಸಹಾಯ ಪಡೆದ ಚೀನಾ