Tag: ವೈರಸ್

  • ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲ, ಆದರೆ ಹರಡುವ ಭೀತಿಯಿದೆ: WHO

    ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲ, ಆದರೆ ಹರಡುವ ಭೀತಿಯಿದೆ: WHO

    ಬರ್ನ್: ಮಂಕಿಪಾಕ್ಸ್ ಪ್ರಸ್ತುತ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯಲ್ಲ ಆದರೆ, ಇದು ವಿಕಸನಗೊಳ್ಳುತ್ತಿರುವುದು ಭೀತಿಗೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(WHO) ತಿಳಿಸಿದೆ.

    WHO ಡೈರೆಕ್ಟರ್ ಜನರಲ್, ಹಲವು ದೇಶಗಳಲ್ಲಿ ಏಕಾಏಕಿ ಹರಡುತ್ತಿರುವ ಮಂಕಿಪಾಕ್ಸ್ ಕುರಿತು ಐಹೆಚ್‌ಆರ್ ತುರ್ತು ಸಮಿತಿ ನೀಡಿದ ಸಲಹೆಯನ್ನು ಒಪ್ಪುತ್ತದೆ ಹಾಗೂ ಪ್ರಸ್ತುತ ಇದು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಯವಿಟ್ಟು ಸಹಾಯ ಮಾಡೋದನ್ನ ನಿಲ್ಲಿಸಬೇಡಿ- ಅಮೆರಿಕಾಗೆ ತಾಲಿಬಾನ್ ಬೇಡಿಕೆ

    who

    ಆದರೂ WHO ಮಹಾನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಈ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ಮಂಕಿಪಾಕ್ಸ್ ವೈರಸ್ ಹರಡುವುದನ್ನು ತಡೆಯಲು ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಬಳಸಿಕೊಳ್ಳಬೇಕು, ಅಪಾಯದಲ್ಲಿರುವ ಪ್ರದೇಶಗಳಲ್ಲಿ ಆರೋಗ್ಯದ ಉಪಕರಣಗಳು ಲಭ್ಯವಿದೆ. ಇದನ್ನು ತುರ್ತಾಗಿ ಹಂಚಿಕೊಳ್ಳುವ ಮೂಲಕ ರೋಗದಿಂದ ಪಾರಾಗುವ ಅಗತ್ಯವಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಸ್ಕೂಲ್ ಡೇಸ್‍ನಿಂದ ಪ್ರೀತಿಸಿದವಳ ಮೇಲೆ ಗುಂಡು ಹಾರಿಸಿದ – ಯುವತಿಗೆ ಗಂಭೀರ ಗಾಯ

    ಮಂಕಿಪಾಕ್ಸ್ ಇದೀಗ 50ಕ್ಕೂ ಹೆಚ್ಚು ದೇಶಗಳಲ್ಲಿ ಕಂಡುಬಂದಿದ್ದು, ಮೇ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಸುಮಾರು 3,000 ಪ್ರಕರಣಗಳು ವರದಿಯಾಗಿದೆ.

    Live Tv

  • ಬೆಂಗ್ಳೂರಿಗೆ ಬಂದಿದ್ದ ಕೇರಳದ 12 ವರ್ಷದ ಹುಡುಗಿ ಹಂದಿ ಜ್ವರಕ್ಕೆ ಬಲಿ – ರಾಜಧಾನಿಗೆ ಆತಂಕ

    ಬೆಂಗ್ಳೂರಿಗೆ ಬಂದಿದ್ದ ಕೇರಳದ 12 ವರ್ಷದ ಹುಡುಗಿ ಹಂದಿ ಜ್ವರಕ್ಕೆ ಬಲಿ – ರಾಜಧಾನಿಗೆ ಆತಂಕ

    ತಿರುವನಂತಪುರಂ: ಈಗಾಗಲೇ ಕೋವಿಡ್ 4ನೇ ಅಲೆ ಭಾರತದ ಕೆಲ ರಾಜ್ಯಗಳಿಗೆ ಅಪ್ಪಳಿಸಿದೆ. ಓಮಿಕ್ರಾನ್ ಉಪತಳಿಗಳಾದ ಬಿಎ-1, 2, 3, 4, 5 ತಳಿಗಳು ಸಾವಿರಾರು ಜನರನ್ನು ಬಾದಿಸುತ್ತಿವೆ. ಈ ಬೆನ್ನಲ್ಲೇ ಕೇರಳಕ್ಕೆ ಹಂದಿಜ್ವರ ಮತ್ತೆ ಲಗ್ಗೆಯಿಟ್ಟಿದೆ. ಇಲ್ಲಿನ ಕೋಯಿಕ್ಕೋಡ್‌ನ ಉಲಿಯೇರಿ ಪ್ರದೇಶದಲ್ಲಿ 12 ವರ್ಷದ ಹುಡುಗಿಯೊಬ್ಬರಿಗೆ ಎಚ್1-ಎನ್1 ಹಂದಿಜ್ವರ ಕಾಣಿಸಿಕೊಂಡಿದ್ದು, ನಿನ್ನೆ ಮೃತಪಟ್ಟಿದ್ದಾರೆ.

    H1N1

    ಈಚೆಗಷ್ಟೇ ಕೇರಳದ ಈ ಹುಡುಗಿ ಬೆಂಗಳೂರಿಗೆ ಭೇಟಿ ನೀಡಿದ್ದರು. ಬೆಂಗಳೂರಿನಿಂದ ಹಿಂದಿರುಗಿದ ಬಳಿಕ ಕೇರಳದ ಕೋಯಿಲಂಡಿ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಎಚ್1-ಎನ್1 ಸೋಂಕು ಇರುವುದು ದೃಢಪಟ್ಟಿತು. ತಕ್ಷಣ ಹುಡುಗಿಯನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ವರ್ಗಾಯಿಸಲಾಯಿತು. ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ನಿನ್ನೆ ಮೃತಪಟ್ಟಿದ್ದಾಳೆ. ಬಾಲಕಿ ಸಂಪರ್ಕದಲ್ಲಿದ್ದ ಅವಳಿ ಸಹೋದರಿಗೂ ಎಚ್1-ಎನ್1 ಇರುವುದು ಪತ್ತೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ

    H1N1

    1918-1919 ರಲ್ಲಿ ಕಾಣಿಸಿಕೊಂಡಿದ್ದ ಹಂದಿಜ್ವರ ಎಚ್1-ಎನ್1 ಇನ್‌ಫ್ಲುಯೆನ್ಸ್ ವೈರಸ್ 2009 ರಲ್ಲಿ ದೇಶದ ಅನೇಕ ಕಡೆ ವ್ಯಾಪಕವಾಗಿ ಹರಡಿತ್ತು. ಸುಮಾರು 2.84 ಲಕ್ಷ ಜನರನ್ನು ಬಲಿ ಪಡೆದಿತ್ತು. ಇದರಿಂದ ವಿಶ್ವಸಂಸ್ಥೆ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ಸಮನ್ಸ್

    ಬೆಂಗಳೂರಿಗೂ ಆತಂಕ: ಕಳೆದ ಮರ‍್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ 150ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಇದರ ಬೆನ್ನಲ್ಲೇ ಕೇರಳದಲ್ಲಿ ಹಂದಿ ಜ್ವರಕ್ಕೆ ಬಲಿಯಾದ ಬಾಲಕಿ ಈಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು ಎಂಬುದು ಅನೇಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರಿನಲ್ಲೂ ಹಂದಿಜ್ವರ ಕಾಣಿಸಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.

  • 30 ದೇಶಗಳಲ್ಲಿ 550 ಮಂಕಿಪಾಕ್ಸ್ ಪ್ರಕರಣ – WHO ಕಳವಳ

    ಬರ್ನ್: ಯುರೋಪ್ ಸೇರಿದಂತೆ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ(WHO) ಕಳವಳ ವ್ಯಕ್ತಪಡಿಸಿದೆ. ವೈರಸ್ ಹರಡದಂತೆ ಕಣ್ಗಾವಲು ಹೆಚ್ಚಿಸುವಂತೆ ರೋಗ ಪೀಡಿತ ದೇಶಗಳಿಗೆ ಮನವಿ ಮಾಡಿದೆ.

    ರೋಗ ಹರಡುವಿಕೆ ಬಗ್ಗೆ ತನಿಖೆ ನಡೆಯುತ್ತಿದೆ. ಆದರೂ ಒಂದೇ ಸಮಯದಲ್ಲಿ ಏಕಾಏಕಿಯಾಗಿ ಹಲವು ದೇಶಗಳಿಗೆ ವೈರಸ್ ಹರಡುತ್ತಿರುವುದು ಆತಂಕಕಾರಿಯಾಗಿದೆ. ವೈರಸ್‌ನ ಹಠಾತ್ತನೆಯ ಗೋಚರಿಸುವಿಕೆ ಹೀಗೆಯೇ ಸ್ವಲ್ಪ ಸಮಯದ ವರೆಗೆ ಮುಂದುವರಿಯುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸ್ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಆಸ್ಪತ್ರೆ ಆವರಣದಲ್ಲಿಯೇ ಗುಂಡಿನ ದಾಳಿ – ನಾಲ್ವರು ಸಾವು

    ಮೇ 7 ರಂದು ಬ್ರಿಟನ್‌ನಲ್ಲಿ ಮಂಕಿಪಾಕ್ಸ್ ಮೊದಲ ಪ್ರಕರಣ ವರದಿಯಾಗಿತ್ತು. ಇದೀಗ ಪಶ್ಚಿಮ ಹಾಗೂ ಮಧ್ಯ ಆಫ್ರಿಕಾದ 30 ದೇಶಗಳಲ್ಲಿ 550ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು WHO ತಿಳಿಸಿದೆ.

    ಸಲಿಂಗಕಾಮಿ ಪುರುಷರಲ್ಲಿ ಹೆಚ್ಚಿನ ಮಂಕಿಪಾಕ್ಸ್ ಪ್ರಕರಣಗಳು ಕಂಡುಬಂದಿವೆ ಎಂಬುದಾಗಿ ವರದಿಯಾದರೂ ಇದು ಲೈಂಗಿಕ ಸಂಬಂಧಗಳ ಮೂಲಕ ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಕಿಪಾಕ್ಸ್ ತಡೆಯಬೇಕಾದ್ರೆ ಸೆಕ್ಸ್ ಮಾಡೋದು ನಿಲ್ಲಿಸಿ, ಇಲ್ಲವೇ 8 ವಾರ ಕಾಂಡೋಮ್ ಬಳಸಿ – UK

    MONKEY (1)

    ಮಂಕಿಪಾಕ್ಸ್ ಗುಣಪಡಿಸಲು ಸಿಡುಬಿಗೆ ಅಭಿವೃದ್ಧಿಪಡಿಸಿರುವ ಲಸಿಕೆ ಶೇ.85 ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಲಸಿಕೆಯ ಪೂರೈಕೆ ಪ್ರಸ್ತುತ ಕಡಿಮೆಯಿದೆ.

  • 20 ದೇಶಗಳಲ್ಲಿ 200 ಮಂಕಿಪಾಕ್ಸ್ ಪ್ರಕರಣ: ಡಬ್ಲ್ಯೂಹೆಚ್‌ಒ

    20 ದೇಶಗಳಲ್ಲಿ 200 ಮಂಕಿಪಾಕ್ಸ್ ಪ್ರಕರಣ: ಡಬ್ಲ್ಯೂಹೆಚ್‌ಒ

    ಬರ್ನ್: ಕೊರೊನಾ ಬಳಿಕ ಇದೀಗ ಮಂಕಿಪಾಕ್ಸ್ ವೈರಸ್ ವಿಶ್ವದಾದ್ಯಂತ ಆತಂಕ ಮೂಡಿಸುತ್ತಿದೆ. ಈಗಾಗಲೇ ಮಂಕಿಪಾಕ್ಸ್ 20 ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, ಸುಮಾರು 200 ಪ್ರಕರಣಗಳು ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಶುಕ್ರವಾರ ತಿಳಿಸಿದೆ.

    ಮಂಕಿಪಾಕ್ಸ್ ವೈರಸ್ ದಂಶಕಗಳು ಹಾಗೂ ಮಂಗಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ. ಸಾಂದರ್ಭಿಕವಾಗಿ ಜನರಿಗೂ ಹರಡುವ ವೈರಸ್, ಸಿಡುಬಿನ ಜಾತಿಗೆ ಸೇರುತ್ತದೆ. ಇದನ್ನೂ ಓದಿ: ಸೊಳ್ಳೆ ಉತ್ಪಾದನೆಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ – 50 ಸಾವಿರ ರೂ. ದಂಡ ವಿಧಿಸಿ: ಡೆಲ್ಲಿ ಹೈಕೋರ್ಟ್

    ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. 1958ರಲ್ಲಿ ಇದನ್ನು ಮೊದಲ ಬಾರಿಗೆ ಮಂಗಗಳಲ್ಲಿ ಕಂಡುಹಿಡಿಯಲಾಗಿತ್ತು. ಹೀಗಾಗಿ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. 1970ರಲ್ಲಿ ಮೊದಲ ಬಾರಿಗೆ ಕಾಂಗೋದ ಬಾಲಕನಲ್ಲಿ ರೋಗ ಪತ್ತೆಯಾಗಿತ್ತು. ಇದನ್ನೂ ಓದಿ: ಮಂಕಿಪಾಕ್ಸ್ ಆತಂಕ – ಬೆಂಗಳೂರಿನಲ್ಲಿ ಹೈ ಅಲರ್ಟ್

    ಕೋವಿಡ್ 4ನೇ ಅಲೆಯ ಭೀತಿಯಲ್ಲಿರುವ ಭಾರತಕ್ಕೂ ಮಂಕಿಪಾಕ್ಸ್ ಆತಂಕ ಶುರುವಾಗಿದೆ. ವೈರಸ್ ದೇಶದೊಳಗೆ ನುಸುಳದಂತೆ ತಡೆಗಟ್ಟಲು ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಸದ್ಯ ಮಂಕಿಪಾಕ್ಸ್ ವೈರಸ್ ಜನರಲ್ಲಿ ಅಷ್ಟು ಸುಲಭವಾಗಿ ಹರಡುವುದಿಲ್ಲ. ಹರಡಿದರೂ ಇದನ್ನು ಕೆಲವೇ ವಾರಗಳಲ್ಲಿ ಗುಣಪಡಿಸಬಹುದು. ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಎಂದು ವರದಿಗಳು ತಿಳಿಸಿವೆ.

  • 12 ದೇಶಗಳಲ್ಲಿ 92 ಮಂಕಿಪಾಕ್ಸ್ ಪ್ರಕರಣ ಪತ್ತೆ – ಭಾರತಕ್ಕೆ ಆತಂಕ?

    12 ದೇಶಗಳಲ್ಲಿ 92 ಮಂಕಿಪಾಕ್ಸ್ ಪ್ರಕರಣ ಪತ್ತೆ – ಭಾರತಕ್ಕೆ ಆತಂಕ?

    ಲಂಡನ್: ಯುರೋಪ್, ಅಮೆರಿಕ ದೇಶಗಳಲ್ಲಿ ಗಣನೀಯವಾಗಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೋವಿಡ್-19 ನಾಲ್ಕನೇ ಅಲೆಯ ಭೀತಿಯಲ್ಲಿರುವ ಭಾರತಕ್ಕೂ ಇದರ ಆತಂಕ ಶುರುವಾಗಿದೆ.

    ಕಳೆದ 10 ದಿನಗಳಲ್ಲಿ ಸ್ಥಳೀಯವಲ್ಲದ 12 ದೇಶಗಳಲ್ಲಿ 92 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದೆ. ಶಂಕಿತ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ದೆಹಲಿಗೆ ರೊಬೋಟಿಕ್ ಅಗ್ನಿಶಾಮಕ ವಾಹನ ಎಂಟ್ರಿ – ಏನೆಲ್ಲಾ ಇದೆ ವಿಶೇಷ?

    VIRUS

    ಅನೇಕ ದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಿರುವುದರಿಂದ ಹೆಚ್ಚಿನ ಪ್ರಕರಣಗಳನ್ನು ಗುರುತಿಸಲು ಸಾಧ್ಯವಾಗುತ್ತಿದೆ. ಹೆಚ್ಚು ಸಮಸ್ಯೆಗೆ ಒಳಗಾಗುವವರನ್ನು ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಹಾಗೂ ಯುರೋಪ್‌ನ 9 ದೇಶಗಳಲ್ಲಿ ಸೋಂಕು ಖಚಿತವಾಗಿದೆ. ಇದನ್ನೂ ಓದಿ: ಜಮ್ಮು ಸುರಂಗ ಕುಸಿತ – 10 ಮೃತದೇಹಗಳು ಪತ್ತೆ

    ಮಂಕಿಪಾಕ್ಸ್ ಸಾಮಾನ್ಯವಾಗಿ ಸೌಮ್ಯ ಸ್ವಭಾವದ್ದಾಗಿರುವುದರಿಂದ ಹೆಚ್ಚಿನ ಜನರು ಕೆಲ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಜನರ ನಡುವೆ ವೈರಸ್ ಅಷ್ಟು ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಎಂದು ವರದಿ ಹೇಳಿದೆ.

    MONKEY (1)

    ಸ್ಮಾಲ್‌ಪಾಕ್ಸ್‌ ಲಸಿಕೆಯಿಂದ ರಕ್ಷಣೆ: ಮಂಕಿಪಾಕ್ಸ್ ವೈರಸ್‌ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ ಸ್ಮಾಲ್‌ಪಾಕ್ಸ್‌ಗೆ ಬಳಸುವ ಲಸಿಕೆಯು ಶೇ.85 ರಷ್ಟು ರಕ್ಷಣೆ ನೀಡುತ್ತದೆ. ಈ ಎರಡೂ ವೈರಸ್‌ಗಳ ಮಧ್ಯೆ ಬಹಳ ಸಾಮ್ಯತೆ ಇದೆ. ಇಲ್ಲಿಯವರೆಗೆ, ವೈರಸ್ ಹೆಚ್ಚಾಗಿ ಆಫ್ರಿಕಾಕ್ಕೆ ಸೀಮಿತವಾಗಿತ್ತು. ಈಗ ಯುರೋಪ್‌ನ ಬ್ರಿಟನ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಇಟಲಿ ಮತ್ತು ಸ್ವೀಡನ್‌ಗಳಲ್ಲಿ ಖಚಿತವಾಗಿದೆ.

    ಗಾಳಿಯಲ್ಲಿ ಹರಡುವುದಿಲ್ಲ: ಮಂಕಿಪಾಕ್ಸ್ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಇದಕ್ಕೆ ವೈಜ್ಞಾನಿಕ ಆಧಾರವೂ ಇಲ್ಲ. ಅಲ್ಲದೆ ಲೈಂಗಿಕ ಸಂಪರ್ಕ ಇದ್ದವರಲ್ಲೂ ಪತ್ತೆಯಾಗುತ್ತದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಆದರೆ ಗಾಯಗಳು, ದೇಹದಿಂದ ಹೊರಬರುವ ದ್ರವಾಂಶ, ಉಸಿರಾಟ ಹಾಗೂ ಕಲುಷಿತ ವಸ್ತುಗಳೊಂದಿಗೆ ನಿಕಟ ಸಂಪರ್ಕದಿಂದ ವೈರಸ್ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

  • ಮಂಕಿಪಾಕ್ಸ್ ಎಚ್ಚರಿಕೆ – ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಣ್ಗಾವಲು

    ಮಂಕಿಪಾಕ್ಸ್ ಎಚ್ಚರಿಕೆ – ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಣ್ಗಾವಲು

    ನವದೆಹಲಿ: ಪ್ರಪಂಚದ ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ವೈರಸ್ ಪ್ರಕರಣಗಳಿಂದ ಎಲ್ಲೆಡೆ ಆತಂಕ ಹೆಚ್ಚುತ್ತಿದೆ. ಇದೀಗ ಭಾರತದಲ್ಲಿ ಮಂಕಿಪಾಕ್ಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಎಲ್ಲಾ ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಣ್ಗಾವಲನ್ನು ಇಟ್ಟಿದೆ.

    ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಾದ ವಿಮಾನ ನಿಲ್ದಾಣ, ಬಂದರುಗಳು ಹಾಗೂ ಭೂ ಗಡಿ ಪ್ರದೇಶಗಳಲ್ಲಿ ಕೇಂದ್ರ ವಿದೇಶದಿಂದ ಬರುವವರ ಮಾದರಿಗಳನ್ನು ಪರಿಶೀಲಿಸಲು ಆದೇಶ ನೀಡಿದೆ. ಆಫ್ರಿಕಾದಿಂದ ಬಂದ ಪ್ರಯಾಣಿಕರಲ್ಲಿ ರೋಗದ ಲಕ್ಷಣ ಕಂಡುಬಂದಲ್ಲಿ, ಅವರ ಮಾದರಿಗಳನ್ನು ಹೆಚ್ಚಿನ ತನಿಖೆಗೆ ಪುಣೆಯ ಅಂತರಾಷ್ಟ್ರೀಯ ವೈರಾಲಜಿ ಸಂಸ್ಥೆ(ಎನ್‌ಐವಿ)ಗೆ ಕಳುಹಿಸಲಾಗುತ್ತಿದೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ

    ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಮಂಕಿಪಾಕ್ಸ್ ಕಾಯಿಲೆ ಬಗ್ಗೆ ಚರ್ಚಿಸಲು ತುರ್ತು ಸಭೆಯನ್ನು ಕರೆದಿದೆ. ವೈರಸ್ ಹರಡಲು ಕಾರಣ ಹಾಗೂ ಅದನ್ನು ತಡೆಗಟ್ಟುವ ವಿಧಾನದ ಬಗ್ಗೆ ಡಬ್ಲ್ಯುಹೆಚ್‌ಒ ಚರ್ಚಿಸಲಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ

    ವರದಿಗಳ ಪ್ರಕಾರ ಈ ವೈರಸ್ ಸಲಿಂಗಕಾಮಿಗಳಲ್ಲಿ ಹರಡುವ ಅಪಾಯ ಹೆಚ್ಚಾಗಿದೆ. ಮೇ ತಿಂಗಳ ಆರಂಭದಲ್ಲಿ ಬ್ರಿಟನ್, ಸ್ಪೇನ್, ಬೆಲ್ಜಿಯಂ, ಇಟಲಿ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಪ್ರಕರಣಗಳು ಕಂಡುಬಂದಿವೆ.

    ಮೇ 7 ರಂದು ಇಂಗ್ಲೆಂಡ್‌ನಲ್ಲಿ ಮಂಕಿಪಾಕ್ಸ್ ವೈರಸ್‌ನ ಮೊದಲ ಪ್ರಕರಣ ಪತ್ತೆಹಚ್ಚಲಾಗಿತ್ತು.

  • ರಾಜ್ಯದಲ್ಲಿಂದು 129 ಮಂದಿಗೆ ಕೊರೊನಾ ಸೋಂಕು – 128 ಮಂದಿ ಗುಣಮುಖ

    ರಾಜ್ಯದಲ್ಲಿಂದು 129 ಮಂದಿಗೆ ಕೊರೊನಾ ಸೋಂಕು – 128 ಮಂದಿ ಗುಣಮುಖ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಳಿತವಾಗುತ್ತಿದ್ದು, ಇಂದು ಸೋಂಕಿತರ ಸಂಖ್ಯೆ ಹಾಗೂ ಗುಣಮುಖರ ಸಂಖ್ಯೆ ಎರಡರಲ್ಲೂ ಸಮಬಲ ಸಾಧಿಸಿದೆ. ಕಳೆದ 24 ಗಂಟೆಯಲ್ಲಿ 129 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 128 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆದರೆ, ಒಬ್ಬರೂ ಮೃತಪಟ್ಟಿಲ್ಲ ಎನ್ನುವುದು ಆರೋಗ್ಯಾಧಿಕಾರಿಗಳಲ್ಲಿ ಸಮಾಧಾನ ತರಿಸಿದೆ.

    COVID 1

    ಕೊರೊನಾ ಸೋಂಕು ಸುಧಾರಿಸುತ್ತಿರುವ ವೇಳೆ ಈ ವಾರದಲ್ಲಿ ಸೋಂಕಿನಿಂದ ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಕೊರೊನಾ ಮುನ್ನೆಚರಿಕೆ ಕ್ರಮಗಳ ಕಡೆ ಹೆಚ್ಚು ಗಮನ ಹರಿಸಿದೆ. ಇಂದು 13,542 ಜನರು ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ.

    COVID 1

    ಇಲ್ಲಿವರೆಗೂ 40,063 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. 0.95% ಸೋಂಕು ಪ್ರಮಾಣ ಇದೆ. 1.15% ಮರಣ ಪ್ರಮಾಣ ದಾಖಲಾಗಿದೆ. ರಾಜ್ಯದಲ್ಲಿ ಇಂದು 54,652 ಜನರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಒಟ್ಟು 13,542 ಸ್ಯಾಂಪಲ್ (ಆರ್‌ಟಿಪಿಸಿಆರ್ 8747, 4,795 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

    ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ ಒಂದರಲ್ಲೇ 121 ಪ್ರಕರಣಗಳು ವರದಿಯಾಗಿದ್ದು, ಮೈಸೂರು ಮತ್ತು ದಕ್ಷಿಣ ಕನ್ನಡದಲ್ಲಿ ತಲಾ 2 ಹಾಗೂ ಬಾಗಲಕೋಟೆ, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿದೆ.

  • ರಾಜ್ಯದಲ್ಲಿ ಕೊರೊನಾ ಏರಿಳಿತ – 90 ಮಂದಿಗೆ ಸೋಂಕು, 128 ಮಂದಿ ಗುಣಮುಖ

    ರಾಜ್ಯದಲ್ಲಿ ಕೊರೊನಾ ಏರಿಳಿತ – 90 ಮಂದಿಗೆ ಸೋಂಕು, 128 ಮಂದಿ ಗುಣಮುಖ

    ಬೆಂಗಳೂರು: ಇಂದು ರಾಜ್ಯದಲ್ಲಿ ಕೊರೊನಾ ಸೋಂಕಿತರಿಗಿಂತ ಗುಣಮುಖರ ಸಂಖ್ಯೆಯಲ್ಲೇ ಏರಿಕೆ ಕಂಡುಬಂದಿದೆ. ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, 128 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    COVID REPORT 1

    ಕೊರೊನಾ ಸೋಂಕು ಸುಧಾರಿಸುತ್ತಿರುವ ವೇಳೆ ಈ ವಾರದಲ್ಲಿ ಸೋಂಕಿನಿಂದ ಜನರು ಮೃತಪಡುತ್ತಿದ್ದಾರೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಕೊರೊನಾ ಮುನ್ನೆಚರಿಕೆ ಕ್ರಮಗಳ ಕಡೆ ಹೆಚ್ಚು ಗಮನ ಹರಿಸಿದೆ. ಇಂದು 11,142 ಜನರು ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ. ಇಂದು 90 ಮಂದಿಗೆ ಸೋಂಕು ತಗುಲಿದೆ. ಇದನ್ನೂ ಓದಿ: ಭಾರತದಲ್ಲಿ ಕೋವಿಡ್‍ಗೆ ಬಲಿಯಾದವರೆಷ್ಟು?- ವಿಶ್ವಸಂಸ್ಥೆ ವರದಿಯಿಂದ ದೇಶದಲ್ಲಿ ರಾಜಕೀಯ ಸಮರ

    COVID REPORT 2

    ಇಲ್ಲಿವರೆಗೂ 40,063 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. 0.80% ಸೋಂಕು ಪ್ರಮಾಣ ಇದೆ. 1.11% ಮರಣ ಪ್ರಮಾಣ ದಾಖಲಾಗಿದೆ. ರಾಜ್ಯದಲ್ಲಿ ಇಂದು 63,180 ಜನರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಒಟ್ಟು 11,142 ಸ್ಯಾಂಪಲ್ (ಆರ್‌ಟಿಪಿಸಿಆರ್ 9,434 + 1,708 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಕೋವಿಡ್‌ನಿಂದ 47 ಲಕ್ಷ ಮಂದಿ ಸಾವು – WHO ವರದಿ

    COVID REPORT 2

    ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 88, ದ.ಕನ್ನಡ 01, ಮೈಸೂರಿನ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ದಾಖಲಾಗಿದೆ.

  • ಚೀನಾದಲ್ಲಿ 1ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿಗೆ ಬಲಿ

    ಚೀನಾದಲ್ಲಿ 1ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿಗೆ ಬಲಿ

    ಬೀಜಿಂಗ್: ಚೀನಾದಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಒಂದು ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    ಕೊರೊನಾ ಮೊಟ್ಟಮೊದಲಿಗೆ ಹುಟ್ಟಿದ ದೇಶವಾದ ಚೀನಾದಲ್ಲಿ ಮತ್ತೆ ಕೊರೊನಾ ಅಲೆ ಎದ್ದಿದ್ದು, ಈ ಬಾರಿ ಜಾಸ್ತಿ ಪ್ರಮಾಣದಲ್ಲಿಯೇ ತೊಂದರೆಕೊಡುತ್ತಿದೆ. ಕೊರೊನಾ ವೈರಸ್‍ನಿಂದ ಇಂದು ಇಬ್ಬರು ಮೃತಪಟ್ಟಿದ್ದು, 2021ರ ಜನವರಿಯ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ ಇಬ್ಬರು ಕೊರೊನಾದಿಂದ ಸಾವನ್ನಪಿದ್ದಾರೆ.

    ಚೀನಾದಲ್ಲಿ ಇಂದು ಕೊಟ್ಟು 2157 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅದರಲ್ಲಿ ಅತ್ಯಂತ ಹೆಚ್ಚು ಸೋಂಕಿತರು ಇರುವುದು ಜಿಲಿನ್ ಪ್ರಾಂತ್ಯದಲ್ಲಿ. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾದ ಹಲವು ಕಡೆಗಳಲ್ಲಿ ಲಾಕ್‍ಡೌನ್, ಸೀಲ್‍ಡೌನ್‍ಗಳನ್ನು ಮಾಡಲಾಗಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನಿಬರ್ಂಧ, ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿತದಂಥ ಕ್ರಮಗಳಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದೂ ಸ್ಪಷ್ಟಪಡಿಸಿದೆ. ಇದೀಗ ಕೊರೊನಾದಿಂದ ಮೃತಪಟ್ಟ ಇಬ್ಬರೂ ಜಿಲಿನ್ ಪ್ರಾಂತ್ಯದವರೇ ಆಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 4,638ಕ್ಕೆ ಏರಿಕೆಯಾಗಿದೆ.


    ಕೊರೊನಾ ಸೋಂಕಿತರ ಪ್ರಮಾಣ ಸ್ವಲ್ಪ ಇಳಿಮುಖವಾಗುತ್ತಿದೆ ಎನ್ನುವಾಗಲೇ ಹಲವು ರಾಷ್ಟ್ರಗಳಲ್ಲಿ ಸೋಂಕಿನ ಅಬ್ಬರ ಹೆಚ್ಚಾಗುತ್ತಿದೆ. ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರ, ಯುಕೆ, ಯುಎಸ್‍ಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ. ಒಮಿಕ್ರಾನ್ ರೂಪಾಂತರಿ ವೈರಸ್‌ನಿಂದಲೇ ಕೊರೊನಾ ಹೆಚ್ಚಾಗುತ್ತಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

    ಕೊರೊನಾ ಲಾಕ್‍ಡೌನ್: ಚೀನಾ ಕೊವಿಡ್ 19 ನಿಯಂತ್ರಕ್ಕಾಗಿ ಶೂನ್ಯ ಕೊರೊನಾ ತಂತ್ರ ರೂಪಿಸಿದೆ. ಸಾಮೂಹಿಕ ತಪಾಸಣೆ, ಕಟ್ಟುನಿಟ್ಟಿನ ಲಾಕ್‍ಡೌನ್ ಮತ್ತಿತರ ನಿಯಮಗಳನ್ನು ಈ ಶೂನ್ಯ ಕೊರೊನಾ ಕಾರ್ಯತಂತ್ರ ಒಳಗೊಂಡಿದೆ. ಲಾಕ್‍ಡೌನ್ ಅದೆಷ್ಟು ಕಠಿಣವಾಗಿರುತ್ತದೆಯೆಂದರೆ, ಜನರು ಮನೆ ಬಿಟ್ಟು ಹೊರಗಡೆ ಬರುವಂತೆಯೇ ಇರುವುದಿಲ್ಲ. ಈ ನೀತಿ ಸ್ವಲ್ಪ ಮಟ್ಟಿಗೆ ಟೀಕೆಗೆ ಒಳಗಾಗಿದ್ದರೂ ಚೀನಾ ಮಾತ್ರ ಅದನ್ನು ಸಡಿಲಿಕೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದೆ. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

  • ಅಮೆರಿಕದಲ್ಲಿ ಮಾರಕ ಟಿಕ್ ವೈರಸ್ ಪತ್ತೆ – ಒಮ್ಮೆ ಕಚ್ಚಿದರೆ ಸಾವು ಖಚಿತ

    ಅಮೆರಿಕದಲ್ಲಿ ಮಾರಕ ಟಿಕ್ ವೈರಸ್ ಪತ್ತೆ – ಒಮ್ಮೆ ಕಚ್ಚಿದರೆ ಸಾವು ಖಚಿತ

    ವಾಷಿಂಗ್ಟನ್: ಅಮೆರಿಕದ 6 ಪ್ರದೇಶಗಳಲ್ಲಿ ಮಾರಕ ಟಿಕ್ ವೈರಸ್ ಮತ್ತೆಯಾಗಿ ಆತಂಕ ಮೂಡಿಸಿದೆ.

    ಟಿಕ್ ಎಂಬ ಕೀಟ ಹಾರ್ಟ್‍ಲ್ಯಾಂಡ್ ವೈರಸ್‍ನ್ನು ಒಡಲಲ್ಲಿ ತುಂಬಿಕೊಂಡು ಓಡಾಡುತ್ತಿದೆ. ಇದು ಮನುಷ್ಯನಿಗೆ ಒಮ್ಮೆ ಕಚ್ಚಿದರೆ, ನಿಗೂಢ ಕಾಯಿಲೆಯಿಂದ ಬಳಲುವಂತಾಗಿಸುತ್ತದೆ. ವಯಸ್ಕರನ್ನು ಅಸ್ವಸ್ಥಗೊಳಿಸಿ, ಸಾಯಿಸುವಷ್ಟು ಈ ವೈರಸ್ ಅಪಾಯಕಾರಿ ಎಂದು ಅಮೆರಿಕದ ಸಂಶೋಧಕರ ತಂಡವೊಂದು ವರದಿ ಮಾಡಿದೆ. ಇದನ್ನೂ ಓದಿ: ತರಗತಿಯಲ್ಲಿ ಅವಮಾನ – 30 ವರ್ಷದ ಬಳಿಕ ಶಿಕ್ಷಕಿಯನ್ನು 101 ಬಾರಿ ಇರಿದು ಹತ್ಯೆಗೈದ ವಿದ್ಯಾರ್ಥಿ

    ಅಮೆರಿಕದ ಎಮೋರಿ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಟಿಕ್ ವೈರಸ್ ಬಗ್ಗೆ ಮಾಹಿತಿ ಕಳೆಹಾಕಿದ್ದು, ಟಿಕ್ ಬಗ್ಗೆ ಎಲ್ಲೆಡೆ ಅರಿವು ಮೂಡಿಸುತ್ತಿದ್ದಾರೆ. ಟಿಕ್ ಕಚ್ಚಿದರೆ ಮನುಷ್ಯನ ಜೀವಕ್ಕೆ ಅಪಾಯವಾಗಿದ್ದು, ಟಿಕ್ ವೈರಸ್‍ನಿಂದಾಗಿ ಹಲವು ಕಾಯಿಲೆಗಳು ಕಂಡುಬಂದಿರುವ ಬಗ್ಗೆ ಸಂಶೋಧನಾ ವರದಿಯಿಂದ ಮಾಹಿತಿ ಹೊರಬಿದ್ದಿದೆ.

    ಸಂಶೋಧಕರು ತಿಳಿಸಿರುವ ಪ್ರಕಾರ, ಅಮೆರಿಕದ 6 ಪ್ರದೇಶಗಳಲ್ಲಿ ಈ ಟಿಕ್ ವೈರಸ್ ಕಂಡುಬಂದಿದ್ದು, ಮನುಷ್ಯನಿಗೆ ಕಚ್ಚಿದ ಬಳಿಕ ವಿಪರೀತ ಜ್ವರ, ತಲೆನೋವು, ಮೈಕೈನೋವು, ಮಾಂಸಖಂಡಗಳಲ್ಲಿ ನೋವು ಇದರ ಲಕ್ಷಣವಾಗಿದ್ದು, ಒಂದು ಬಾರಿ ಕಚ್ಚಿದರೆ ಮನುಷ್ಯ ಬದುಕುವುದು ಕಷ್ಟ ಎಂಬ ಬಗ್ಗೆ ಮಾಹಿತಿ ನೀಡಿದೆ. ಅಲ್ಲದೆ ಈ ವೈರಸ್ ಹರಡುವ ಲಕ್ಷಣಗಳನ್ನು ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಸಾರಿ ಕೈಸುಟ್ಟುಕೊಂಡ ರಷ್ಯಾ

    ಅಲ್ಲದೇ ಈ ಟಿಕ್ ವೈರಸ್ 2009ರಲ್ಲಿ ಮೊಟ್ಟ ಮೊದಲು ಮಿಸೌರಿಯಲ್ಲಿ ಪತ್ತೆಯಾಗಿದ್ದು, ಈವರೆಗೆ ಒಟ್ಟು 50 ಕೇಸ್ ಪತ್ತೆಯಾಗಿರುವ ಬಗ್ಗೆ ಸಂಶೋಧಕರ ತಂಡ ನಡೆಸಿದ ಸರ್ವೇಯಲ್ಲಿ ತಿಳಿದುಬಂದಿದೆ. ಅಲ್ಲದೆ ಈ ಟಿಕ್ ವೈರಸ್‍ಗಾಗಿ ಔಷಧಿ ಸಂಶೋಧನೆ ಕೂಡ ನಡೆಯುತ್ತಿರುವುದಾಗಿ ವರದಿಯಾಗಿದೆ.