Tag: ವೈರಸ್

  • ರಾಜ್ಯದಲ್ಲಿಂದು 2 ಸಾವಿರ ಮಂದಿಗೆ ಕೊರೊನಾ – ಎರಡೇ ದಿನಗಳಲ್ಲಿ 11 ಜೀವ ಬಲಿ

    ರಾಜ್ಯದಲ್ಲಿಂದು 2 ಸಾವಿರ ಮಂದಿಗೆ ಕೊರೊನಾ – ಎರಡೇ ದಿನಗಳಲ್ಲಿ 11 ಜೀವ ಬಲಿ

    ಬೆಂಗಳೂರು: ಕಳೆದ ಎರಡು ವಾರಗಳ ಹಿಂದೆ ಸಮತೋಲನದಲ್ಲಿದ್ದ ಕೊರೊನಾ ಸೋಂಕಿನ ಪ್ರಕರಣ ದಿಢೀರ್‌ ಏರಿಕೆಯಾಗುತ್ತಿದೆ. ನಿನ್ನೆ 1,691 ಇದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 2,032ಕ್ಕೇ ಏರಿಕೆಯಾಗಿದೆ. ನಿನ್ನೆ 6 ಮಂದಿ ಮೃತಪಟ್ಟಿದ್ದು, ಇಂದು 5 ಜೀವಗಳು ಕೊರೊನಾ ಸೋಂಕಿಗೆ ಬಲಿಯಾಗಿವೆ.

    ಇಂದು ರಾಜ್ಯದಲ್ಲಿ 1,686 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,77,541 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 30,638 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,81,49,328 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಶೀಘ್ರವೇ ಉದ್ಘಾಟನೆಗೊಳ್ಳಲಿದೆ ದೆಹಲಿ-ಕಾಶ್ಮೀರಕ್ಕೆ ಸಂಪರ್ಕ ಕಲ್ಪಿಸುವ ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆ

    ಕೋವಿಡ್‌ನಿಂದ ಇಂದು 5 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,139 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.6.63 ಇದೆ. 10,395 ಸಕ್ರಿಯ ಪ್ರಕರಣಗಳಿವೆ. ಇಂದು 3.,638 ಮಂದಿಯನ್ನು (9,213 ರ‍್ಯಾಪಿಡ್ ಆಂಟಿಜನ್, 21,425 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 86,105 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕುಂದಾನಗರಿಯಲ್ಲಿ ಮೂರು ಚಿರತೆ ಪ್ರತ್ಯಕ್ಷ – ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಹರಸಾಹಸ, ಡ್ರೋನ್ ಕ್ಯಾಮೆರಾ ಬಳಕೆ

    ಬೆಂಗಳೂರು ನಗರದಲ್ಲೇ 1,202 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 60, ಬಾಗಲಕೋಟೆ 18, ಬಳ್ಳಾರಿ 63, ಬೆಳಗಾವಿ 45, ಬೀದರ್ 0, ಚಾಮರಾಜನಗರ 17, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರಿ 1, ಚಿತ್ರದುರ್ಗ 6, ದಕ್ಷಿಣ ಕನ್ನಡ 14, ದಾವಣಗೆರೆ 39, ಧಾರವಾಡ 75, ಗದಗ 1, ಹಾಸನ 77, ಹಾವೇರಿ 12, ಕಲಬುರಗಿ 34, ಕೊಡಗು 25, ಕೋಲಾರ 36, ಕೊಪ್ಪಳ 15, ಮಂಡ್ಯ 31, ಮೈಸೂರು 132, ರಾಯಚೂರು 35, ರಾಮನಗರ 17, ಶಿವಮೊಗ್ಗ 29, ತುಮಕೂರು 13, ಉಡುಪಿ 7, ಉತ್ತರ ಕನ್ನಡ 12, ವಿಜಯಪುರ 1 ಹಾಗೂ ಯಾದಗಿರಿಯಲ್ಲಿ 3 ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,691 ಮಂದಿಗೆ ಕೊರೊನಾ – ಸೋಂಕಿಗೆ 6 ಬಲಿ

    ರಾಜ್ಯದಲ್ಲಿಂದು 1,691 ಮಂದಿಗೆ ಕೊರೊನಾ – ಸೋಂಕಿಗೆ 6 ಬಲಿ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ದಿನೇ -ದಿನೇ ಹೆಚ್ಚಳವಾಗುತ್ತಿದ್ದು, ಪಾಸಿಟಿವಿಟಿ ದರ ಹೇಚ್ಚಾಗುತ್ತಿದೆ. ರಾಜ್ಯದಲ್ಲಿಂದು 1,691 ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,982 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,75,855 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 27,725 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,81,18,690 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಬೀದಿ ಬದಿ ಪಾನಿಪುರಿ ತಿಂದು 100ಕ್ಕೂ ಹೆಚ್ಚು ಜನ ಅಸ್ವಸ್ಥ

    ಕೋವಿಡ್‌ನಿಂದ ಇಂದು 6 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,134 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.6.09 ಇದೆ. 10,054 ಸಕ್ರಿಯ ಪ್ರಕರಣಗಳಿವೆ. ಇಂದು 27,725 ಮಂದಿಯನ್ನು (9,193 ರ‍್ಯಾಪಿಡ್ ಆಂಟಿಜನ್, 18,532 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 50,950 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ರಚಿಸಿದ್ದ ಎಸಿಬಿ ರದ್ದು – ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಮರುಜೀವ

    ಬೆಂಳೂರು ನಗರದಲ್ಲೇ 1,225 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 11, ಬಾಗಲಕೋಟೆ 6, ಬಳ್ಳಾರಿ 58, ಬೆಳಗಾವಿ 29, ಬೀದರ್‌ 2, ಚಾಮರಾಜನಗರ 27, ಚಿಕ್ಕಬಳ್ಳಾಪುರ 12, ಚಿಕ್ಕಮಗಳೂರಿ 19, ಚಿತ್ರದುರ್ಗ 4, ದಕ್ಷಿಣ ಕನ್ನಡ 6, ದಾವಣಗೆರೆ 19, ಧಾರವಾಡ 42, ಗದಗ 2, ಹಾಸನ 14, ಹಾವೇರಿ 10, ಕಲಬುರಗಿ 15, ಕೊಡಗು 7, ಕೋಲಾರ 7, ಕೊಪ್ಪಳ 3, ಮಂಡ್ಯ 24, ಮೈಸೂರು 88, ರಾಯಚೂರು 9, ರಾಮನಗರ 5, ಶಿವಮೊಗ್ಗ 22, ತುಮಕೂರು 7, ಉಡುಪಿ 8, ಉತ್ತರ ಕನ್ನಡ 7, ವಿಜಯಪುರ 3 ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ಆರೋಗ್ಯ ಇಲಾಖೆ ಕಚೇರಿಗಳಿಗೆ ಮಾಸ್ಕ್‌ ಕಡ್ಡಾಯ: ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೌಧದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆರೋಗ್ಯ ಸೌಧಕ್ಕೆ ಭೇಟಿ ನೀಡುವ ಎಲ್ಲರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರೋಗ್ಯ ಸೌಧದ ಆವರಣ ಹಾಗೂ ಕಚೇರಿಯಲ್ಲಿ ಮಾಸ್‌ ಧರಿಸದಿದ್ದರೆ ಅಂಥವರಿಗೆ 250 ರೂ. ದಂಡ ವಿಧಿಸಲಾಗುವುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆದೇಶಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

    ಲಿಂಪಿ ವೈರಸ್‌ಗೆ 5 ಸಾವಿರಕ್ಕೂ ಅಧಿಕ ಹಸುಗಳ ಮಾರಣ ಹೋಮ – ಹೆದರಿ ವಲಸೆ ಹಾದಿ ಹಿಡಿದ ಜನ

    ಜೈಪುರ: ರಾಜಾಸ್ಥಾನದ 16 ಜಿಲ್ಲೆಗಳು ಹಾಗೂ ಗುಜರಾತಿನ 20 ಜಿಲ್ಲೆಗಳಲ್ಲಿ ಹಸುಗಳಲ್ಲಿ ಲಿಂಪಿ ಚಮರೋಗ (LSD) ವೈರಸ್ ಕಾಣಿಸಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು ಹಸುಗಳ ಮಾರಣಹೋಮ ನಡೆದಿದೆ.

    ಲಿಂಪಿ ವೈರಸ್ (ಲಿಂಪಿ ಚರ್ಮರೋಗ) ಹರಡುತ್ತಿರುವ ಹಿನ್ನೆಲೆಯಲ್ಲಿ, ಸತ್ತ ದನಗಳ ಮೃತದೇಹಗಳಿಂದ ವಿಪರೀತ ದುರ್ವಾಸನೆ ಬರುತ್ತಿದೆ. ಇದರಿಂದಾಗಿ ಜನರು ತಮ್ಮ ಮನೆಗಳನ್ನು ತೊರೆದು ಬೇರೆಡೆ ವಾಸಿಸಲು ತೆರಳುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಧಾನಿ ನಿವಾಸಕ್ಕೆ ಘೆರಾವ್? – ಬೆಲೆ ಏರಿಕೆ ವಿರುದ್ಧ ಹೆಚ್ಚಿದ ಕಿಚ್ಚು

    ರಾಜಾಸ್ಥಾನದ 16 ಜಿಲ್ಲೆಗಲ್ಲಿ ಲಿಂಪಿ ವೈರಸ್ ಕಾಣಿಸಿಕೊಂಡಿದ್ದು ಸುಮಾರು 4,000 ಹಸುಗಳು ಮೃತಪಟ್ಟಿವೆ. ಗುಜರಾತ್ 20 ಜಿಲ್ಲೆಗಳಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದ್ದು, 1,431 ಹಸುಗಳು ಮೃತಪಟ್ಟಿವೆ. 54,161 ಹಸುಗಳು ವೈರಸ್ ಭೀತಿ ಎದುರಿಸುತ್ತಿವೆ. ಕಾಯಿಲೆ ವಿರುದ್ಧ ಹೋರಾಡಲು ಹಸುಗಳಿಗೆ ಲಸಿಕೆ ನೀಡಲಾಗುತ್ತಿದ್ದು, ಈಗಾಗಲೇ 8 ಲಕ್ಷ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ.

    ಇಲ್ಲಿನ ಜೋಧ್‌ಪುರದ ಸಮೀಪದಲ್ಲಿರುವ ಹಲವು ಹಳ್ಳಿಗಳಲ್ಲಿ ಈಗಾಗಲೇ ನೂರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ. ಲಿಂಪಿ ವೈರಸ್ ಹರಡುವಿಕೆಯಿಂದ ಹಲವಾರು ಹಸುಗಳು, ಎತ್ತುಗಳು ಮತ್ತು ಎಮ್ಮೆಗಳೂ ಸಾವನ್ನಪ್ಪಿವೆ, ಅವುಗಳನ್ನು ಹೂಳಲು ಸ್ಥಳಾವಕಾಶದ ಕೊರತೆಯಾಗಿದೆ ಎಂದು ವರದಿಗಳು ಹೇಳುತ್ತಿವೆ.

    ಮಳೆಗಾಲ ಇರುವುದರಿಂದ ಇದು ಕೃಷಿಗೆ ಸೂಕ್ತವಾದ ಸಮಯ. ಆದರೆ ಕೆಲಸ ಮಾಡಲು ಯಾರೂ ಸಿದ್ಧರಿಲ್ಲ. ಹೊರಗಿನಿಂದ ಯುವಕರನ್ನು ಕೆಲಸ ಮಾಡಲು ಕರೆಸಲಾಗುತ್ತಿದೆ. ಆದರೆ ಇಲ್ಲಿನ ಪರಿಸ್ಥಿತಿ ನೋಡುತ್ತಿದ್ದಂತೆ ತಾವೂ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂಬ ಆತಂಕದಿಂದ ಕೆಲಸಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನೂ ಓದಿ: ನಾಲ್ಕೈದು ಉದ್ಯಮಿಗಳಿಗಾಗಿ ರಾಜಕಾರಣಿಗಳಿಬ್ಬರು ಕೆಲಸ ಮಾಡ್ತಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ

    ಹಸುವಿನ ಹಾಲನ್ನೂ ಕುಡಿಯುತ್ತಿಲ್ಲ: ಹಸುಗಳಲ್ಲಿ ಲಿಂಪಿ ವೈರಸ್ ಕಂಡುಬರುತ್ತಿರುವುದರಿಂದ ಇಲ್ಲಿನ ಜನ ಹಸುವಿನ ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ಇದರಿಂದ ಪ್ಯಾಕೆಟ್ ಹಾಲಿನ ಪೌಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಕ್ಕಳಿಗೂ ಇದನ್ನೇ ಕುಡಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,692 ಮಂದಿಗೆ ಕೊರೊನಾ ಸೋಂಕು – ಇಬ್ಬರು ಸಾವು

    ರಾಜ್ಯದಲ್ಲಿಂದು 1,692 ಮಂದಿಗೆ ಕೊರೊನಾ ಸೋಂಕು – ಇಬ್ಬರು ಸಾವು

    ಬೆಂಗಳೂರು: ಕಳೆದ ಎರಡು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ನಿನ್ನೆ 1,886 ಇದ್ದ ಕೊರೊನಾ ಸೋಂಕಿತರ ಸಂಖ್ಯೆ ಇಂದು 1,692ಕ್ಕೆ ಇಳಿಕೆಯಾಗಿದೆ. ಇಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,094 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,56,112 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 33,320 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,78,01,921 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ನಿವೃತ್ತಿ ಅಂಚಿನಲ್ಲಿರೋ ಸಿದ್ದು, ಯೋಗ್ಯತೆಯಿಲ್ಲದ ಡಿಕೆಶಿನ ಸಿಎಂ ಮಾಡಿ ಏನ್ ಮಾಡ್ಬೇಕು – ಅಶ್ವಥ್ ನಾರಾಯಣ

    ಕೋವಿಡ್‌ನಿಂದ ಇಂದು ಎರಡು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,104 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.5.07 ಇದೆ. 11,105 ಸಕ್ರಿಯ ಪ್ರಕರಣಗಳಿವೆ. ಇಂದು 33,320 ಮಂದಿಯನ್ನು (25,779 ರ‍್ಯಾಪಿಡ್ ಆಂಟಿಜನ್, 7,541 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 7,092 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಸತಿ ಶಾಲೆಯಲ್ಲಿ ‘ವಿಕ್ರಾಂತ್ ರೋಣ ‘ ಪೈರಸಿ ಸಿನಿಮಾ ವೀಕ್ಷಣೆ : ಕ್ರಮಕ್ಕೆ ಒತ್ತಾಯ

    ಬೆಂಗಳೂರು ನಗರದಲ್ಲೇ 1,154 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 22, ಬಾಗಲಕೋಟೆ 22, ಬಳ್ಳಾರಿ 17, ಬೆಳಗಾವಿ 41, ಬೀದರ್ 17, ಚಾಮರಾಜನಗರ 7, ಚಿಕ್ಕಬಳ್ಳಾಪುರ 5, ಚಿಕ್ಕಮಗಳೂರು 9, ಚಿತ್ರದುರ್ಗ 2, ದಕ್ಷಿಣ ಕನ್ನಡ 15, ದಾವಣಗೆರೆ 10, ಧಾರವಾಡ 73, ಗದಗ 2, ಹಾಸನ 48, ಹಾವೇರಿ 19, ಕಲಬುರಗಿ 31, ಕೊಡಗು 4, ಕೋಲಾರ 22, ಕೊಪ್ಪಳ 10, ಮಂಡ್ಯ 24, ಮೈಸೂರು 47, ರಾಯಚೂರು 7, ಶಿವಮೊಗ್ಗ 16, ತುಮಕೂರು 26, ಉಡುಪಿ 13, ಉತ್ತರ ಕನ್ನಡ 26, ವಿಜಯಪುರದಲ್ಲಿ 3 ಪ್ರಕರಣಗಳು ಪತ್ತೆಯಾಗಿದ್ದು ರಾಮನಗರ ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,886 ಕೊರೊನಾ ಕೇಸ್‌ ಪತ್ತೆ – ಸೋಂಕಿಗೆ ಓರ್ವ ಬಲಿ

    ರಾಜ್ಯದಲ್ಲಿಂದು 1,886 ಕೊರೊನಾ ಕೇಸ್‌ ಪತ್ತೆ – ಸೋಂಕಿಗೆ ಓರ್ವ ಬಲಿ

    ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ ಇಂದು ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಆರೋಗ್ಯಾಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಿನ್ನೆ 2 ಸಾವಿರಕ್ಕೂ ಹೆಚ್ಚಿದ್ದ ಕೊರೊನಾ ಸೋಂಕಿನ ಪ್ರಕರಣ ಇಂದು 1,886ಕ್ಕೆ ಇಳಿಕೆಯಾಗಿದೆ. ಓರ್ವ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,242 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,55,018 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 32,379 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,77,68,601 ಮಂದಿಯನ್ನು ಟೆಸ್ಟ್ ಮಾಡಲಾಗಿದೆ.

    ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,102 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.5.82 ಇದೆ. 10,509 ಸಕ್ರಿಯ ಪ್ರಕರಣಗಳಿವೆ. ಇಂದು 32,379 ಮಂದಿಯನ್ನು (23,348 ರ‍್ಯಾಪಿಡ್ ಆಂಟಿಜನ್, 9,031 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 92,376 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ನಗರದಲ್ಲೇ 1,342 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 60, ಬಾಗಲಕೋಟೆ 8, ಬಳ್ಳಾರಿ 28, ಬೆಳಗಾವಿ 34, ಬೀದರ್ 11, ಚಾಮರಾಜನಗರ 14, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 15, ಚಿತ್ರದುರ್ಗ 3, ದಕ್ಷಿಣ ಕನ್ನಡ 13, ದಾವಣಗೆರೆ 8, ಧಾರವಾಡ 40, ಗದಗ 5, ಹಾಸನ 40, ಹಾವೇರಿ 5, ಕಲಬುರಗಿ 30, ಕೊಡಗು 32, ಕೋಲಾರ 21, ಕೊಪ್ಪಳ 5, ಮಂಡ್ಯ 19, ಮೈಸೂರು 58, ರಾಯಚೂರು 13, ರಾಮನಗರ 3, ಶಿವಮೊಗ್ಗ 12, ತುಮಕೂರು 29, ಉಡುಪಿ 15, ಉತ್ತರ ಕನ್ನಡ 17, ವಿಜಯಪುರ 3 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

    ರಾಜ್ಯದಲ್ಲಿಂದು 2 ಸಾವಿರಕ್ಕೂ ಅಧಿಕ ಮಂದಿಗೆ ಕೊರೊನಾ – ನಾಲ್ವರು ಸಾವು

    ಬೆಂಗಳೂರು: ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನಿನ್ನೆ 1,800 ಇದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು ದಿಢೀರನೆ 2 ಸಾವಿರ ಗಡಿ ದಾಟಿದೆ. ರಾಜ್ಯದಲ್ಲಿಂದು 2,130 ಹೊಸ ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

    ಇಂದು ರಾಜ್ಯದಲ್ಲಿ 1,395 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,53,776 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 32,685 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,77,36,222 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಸಿಂಗಾಪುರ ಭೇಟಿ ರದ್ದು – ನಾನು ಯಾರನ್ನೂ ದೂಷಿಸಲ್ಲ: ಕೇಜ್ರಿವಾಲ್ 

    ಕೋವಿಡ್‌ನಿಂದ ಇಂದು 4 ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,101 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.6.51 ಇದೆ. 9,866 ಸಕ್ರಿಯ ಪ್ರಕರಣಗಳಿವೆ. ಇಂದು 32,685 ಮಂದಿಯನ್ನು (24,496 ರ‍್ಯಾಪಿಡ್ ಆಂಟಿಜನ್, 8,189 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 95,524 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ:  MIG-21 ವಿಮಾನವನ್ನು ಸೇವೆಯಿಂದ ವಜಾಗೊಳಿಸೋದು ಯಾವಾಗ? – ವರುಣ್ ಗಾಂಧಿ

    ಬೆಂಗಳೂರು ನಗರದಲ್ಲೇ 1,615 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 6, ಬಾಗಲಕೋಟೆ 15, ಬಳ್ಳಾರಿ 27, ಬೆಳಗಾವಿ 34, ಬೀದರ್ 13, ಚಾಮರಾಜನಗರ 7, ಚಿಕ್ಕಬಳ್ಳಾಪುರ 15, ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ತಲಾ ಒಂದೊಂದು ಪ್ರಕರಣ, ದಕ್ಷಿಣ ಕನ್ನಡ 20, ದಾವಣಗೆರೆ 6, ಧಾರವಾಡ 70, ಗದಗ 1, ಹಾಸನ 40, ಹಾವೇರಿ 8, ಕಲಬುರಗಿ 33, ಕೊಡಗು 47, ಕೋಲಾರ 18, ಕೊಪ್ಪಳ 3, ಮಂಡ್ಯ 22, ಮೈಸೂರು 51, ರಾಯಚೂರು 6, ರಾಮನಗರ 3, ಶಿವಮೊಗ್ಗ 12, ತುಮಕೂರು 41, ಉಡುಪಿ 7, ಉತ್ತರ ಕನ್ನಡ 6, ವಿಜಯಪುರ 2 ಹಾಗೂ ಯಾದಗಿರಿಯಲ್ಲಿ ಶೂನ್ಯ ಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 2 ಸಾವಿರ ಸಮೀಪದತ್ತ ಕೊರೊನಾ ಸೋಂಕಿನ ಪ್ರಕರಣ – ಮೂವರು ಬಲಿ

    ರಾಜ್ಯದಲ್ಲಿಂದು 2 ಸಾವಿರ ಸಮೀಪದತ್ತ ಕೊರೊನಾ ಸೋಂಕಿನ ಪ್ರಕರಣ – ಮೂವರು ಬಲಿ

    ಬೆಂಗಳೂರು: ಸತತ ಒಂದು ವಾರದಿಂದಲೂ 1,500ರ ಮಿತಿಯಲ್ಲಿದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 2 ಸಾವಿರ ಸಮೀಪಿಸಿದೆ. ರಾಜ್ಯದಲ್ಲಿಂದು 1,889 ಪ್ರಕರಣಗಳು ದಾಖಲಾಗಿದ್ದು, ಮೂರು ಮರಣ ಪ್ರಕರಣ ದಾಖಲಾಗಿದೆ.

    ಇಂದು ರಾಜ್ಯದಲ್ಲಿ 1,587 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,52,381 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 31,706 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,77,03,537 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಮಹಮ್ಮದ್ ಫಾಜಿಲ್ ಬರ್ಬರ ಹತ್ಯೆ- ಮಂಗಳೂರಿನ ಬಜ್ಬೆ, ಪಣಂಬೂರು, ಸುರತ್ಕಲ್, ಮುಲ್ಕಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

    ಕೋವಿಡ್‌ನಿಂದ ಇಂದು ಮೂರು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,097 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.5.95 ಇದೆ. 9,135 ಸಕ್ರಿಯ ಪ್ರಕರಣಗಳಿವೆ. ಇಂದು 31,706 ಮಂದಿಯನ್ನು (26,110 ರ‍್ಯಾಪಿಡ್ ಆಂಟಿಜನ್, 5,596 ಆರ್‌ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 70,567 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರವೀಣ್‌ ಹತ್ಯೆ ಬೆನ್ನಲ್ಲೇ ಮಂಗಳೂರಲ್ಲಿ ಮತ್ತೊಬ್ಬ ಯುವಕನ ಬರ್ಬರ ಹತ್ಯೆ

    ಬೆಂಗಳೂರು ನಗರದಲ್ಲೇ 1,475 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 5, ಬಾಗಲಕೋಟೆಯಲ್ಲಿ 38, ಬಳ್ಳಾರಿಯಲ್ಲಿ 26, ಬೆಳಗಾವಿ 20, ಬೀದರ್‌ನಲ್ಲಿ 9, ಚಾಮರಾಜನಗರದಲ್ಲಿ 12, ಚಿಕ್ಕಬಳ್ಳಾಪುರದಲ್ಲಿ 13, ಚಿಕ್ಕಮಗಳೂರಿನಲ್ಲಿ 6, ಚಿತ್ರದುರ್ಗದಲ್ಲಿ 4, ದಕ್ಷಿಣ ಕನ್ನಡದಲ್ಲಿ 20, ದಾವಣಗೆರೆಯಲ್ಲಿ 6, ಧಾರವಾಡದಲ್ಲಿ 46, ಗದಗದಲ್ಲಿ 1, ಹಾಸನದಲ್ಲಿ 17 ಹಾವೇರಿಯಲ್ಲಿ 3, ಕಲಬುರಗಿಯಲ್ಲಿ 24, ಕೊಡಗಿನಲ್ಲಿ 21, ಕೋಲಾರದಲ್ಲಿ 23, ಕೊಪ್ಪಳದಲ್ಲಿ 9, ಮಂಡ್ಯದಲ್ಲಿ 19, ಮೈಸೂರಿನಲ್ಲಿ 39, ರಾಯಚೂರಿನಲ್ಲಿ 9, ರಾಮನಗರದಲ್ಲಿ 1, ಶಿವಮೊಗ್ಗದಲ್ಲಿ 11, ತುಮಕೂರಿನಲ್ಲಿ 12, ಉಡುಪಿಯಲ್ಲಿ 8, ಉತ್ತರ ಕನ್ನಡದಲ್ಲಿ 5, ವಿಜಯಪುರದಲ್ಲಿ 7 ಹಾಗೂ ಯಾದಗಿರಿಯಲ್ಲಿ ಶೂನ್ಯಪ್ರಕರಣ ವರದಿಯಾಗಿರುವುದಾಗಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿಂದು 1,425 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ರಾಜ್ಯದಲ್ಲಿಂದು 1,425 ಮಂದಿಗೆ ಕೊರೊನಾ ಸೋಂಕು – ಓರ್ವ ಸಾವು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಆಗುತ್ತಿದೆ. ನಿನ್ನೆ 939 ಇದ್ದ ಸೋಂಕಿನ ಪ್ರಕರಣಗಳ ಸಂಖ್ಯೆ ಇಂದು 1,425ಕ್ಕೆ ಏರಿಕೆಯಾಗಿದೆ. ನಿನ್ನೆಯಂತೆ ಇಂದೂ ಒಂದು ಮರಣ ಪ್ರಕರಣ ದಾಖಲಾಗಿದೆ.

    ಇಂದು ರಾಜ್ಯದಲ್ಲಿ 1,459 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,49,147 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇಂದು 23,150 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,76,38,495 ಮಂದಿಗೆ ಟೆಸ್ಟ್ ಮಾಡಲಾಗಿದೆ.

    ಕೋವಿಡ್‌ನಿಂದ ಇಂದು ಒಂದೇ ಒಂದು ಮರಣ ಪ್ರಕರಣ ದಾಖಲಾಗಿದ್ದು, ಇದುವೆರೆಗೆ ಒಟ್ಟು 40,092 ಮಂದಿ ಜೀವ ಕಳೆದುಕೊಂಡಿದ್ದಾರೆ. ಇಂದಿನ ಪಾಸಿಟಿವಿಟಿ ಶೇ.6.15 ಇದೆ. 8,861 ಸಕ್ರಿಯ ಪ್ರಕರಣಗಳಿವೆ. ಇಂದು 23,150 ಮಂದಿಯನ್ನು (9,335 ರ‍್ಯಾಪಿಡ್ ಆಂಟಿಜನ್, 13,815 RTPCR) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೇ ಇಂದು 85,475 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಬೆಂಗಳೂರು ನಗರದಲ್ಲೇ 1,198 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 19, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 15, ಬೆಳಗಾವಿ 12, ಬೀದರ್ ನಲ್ಲಿ 4, ಚಾಮರಾಜನಗರದಲ್ಲಿ 5, ಚಿಕ್ಕಬಳ್ಳಾಪುರದಲ್ಲಿ 4, ದಕ್ಷಿಣ ಕನ್ನಡದಲ್ಲಿ 12, ದಾವಣಗೆರೆಯಲ್ಲಿ 4, ಧಾರವಾಡದಲ್ಲಿ 17, ಕಲಬುರಗಿ ಹಾಗೂ ಕೊಡಗಿನಲ್ಲಿ ತಲಾ 7, ಕೋಲಾರದಲ್ಲಿ 8, ಮಂಡ್ಯದಲ್ಲಿ 5, ಮೈಸೂರಿನಲ್ಲಿ 53, ರಾಯಚೂರಿನಲ್ಲಿ 3, ಶಿವಮೊಗ್ಗ 9, ತುಮಕೂರಿನಲ್ಲಿ 18, ಉಡುಪಿಯಲ್ಲಿ 3, ಉತ್ತರ ಕನ್ನಡದಲ್ಲಿ 7, ವಿಯಪುರದಲ್ಲಿ 12 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ದಾಖಲಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ಮಂಕಿಪಾಕ್ಸ್ 2ನೇ ಕೇಸ್ ದೃಢ – ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕಿ!

    ತಿರುವನಂತಪುರಂ: ದೇಶದ 2ನೇ ಮಂಕಿಪಾಕ್ಸ್ ಪ್ರಕರಣ ಕೇರಳದ ಕಣ್ಣೂರಿನಲ್ಲಿ ದೃಢವಾಗಿದೆ. 31 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡುಬಂದಿದ್ದು, ಇದೀಗ ಸೋಂಕು ದೃಢವಾಗಿದೆ.

    ಕೇರಳದ ಕಣ್ಣೂರು ಜಿಲ್ಲೆಯ ವ್ಯಕ್ತಿ ಜುಲೈ 13 ರಂದು ದುಬೈನಿಂದ ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಬಳಿಕ ರೋಗದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತದ ಮಾದರಿಗಳನ್ನು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‌ಐವಿ)ಗೆ ಕಳುಹಿಸಲಾಗಿತ್ತು. ಇದೀಗ ಅವರಿಗೆ ಮಂಕಿಪಾಕ್ಸ್ ಸೋಕು ಇರುವುದು ದೃಢವಾಗಿದೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ

    MONKEY

    ಸದ್ಯ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಯ ಸ್ಥಿತಿ ಸ್ಥಿರವಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿದೆ. ಆದರೂ ನೆರೆಯ ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ದೃಢವಾಗುತ್ತಿರುವುದು ಕಾರ್ನಾಟಕದಲ್ಲೂ ಭೀತಿ ಹುಟ್ಟಿಸಿದೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ- ಸಾಲ ಮರುಪಾವತಿ ಮಾಡಲ್ಲ ಎಂದ ರೈತರು

    ಪಶ್ಚಿಮ ಹಾಗೂ ಮಧ್ಯ ಆಫ್ರಿಕಾ ದೇಶಗಳಲ್ಲಿ ಮಂಕಿಪಾಕ್ಸ್ ದೀರ್ಘಕಾಲದಿಂದ ಕಂಡುಬಂದಿದ್ದು, ಈ ವರ್ಷದ ಮೇ ತಿಂಗಳಿನಿಂದ ಇತರ ದೇಶಗಳಲ್ಲೂ ಕಂಡುಬರಲು ಪ್ರಾರಂಭವಾಯಿತು. ಅತಿಯಾದ ಜ್ವರ ಹಾಗೂ ಚಿಕನ್‌ಪಾಕ್ಸ್ನಂತಹ ಗುಳ್ಳೆಗಳು ದೇಹದಲ್ಲಿ ಕಾಣಿಸಿಕೊಳ್ಳುವುದು ಮಂಕಿಪಾಕ್ಸ್‌ನ ಸಾಮಾನ್ಯ ಆರಂಭಿಕ ಲಕ್ಷಣಗಳು.

    Live Tv
    [brid partner=56869869 player=32851 video=960834 autoplay=true]

  • ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ಅಸ್ಸಾಂನಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ – ಹಂದಿ ಮಾಂಸ ಸೇವಿಸದಂತೆ ಸರ್ಕಾರ ಸೂಚನೆ

    ದಿಸ್ಪುರ್: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ (ASF) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿದೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ, ಇಲ್ಲಿನ ಹಂದಿಯೊಂದರಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆಯಾಗಿದ್ದು, ಆ ಪ್ರದೇಶದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ಜೊತೆಗೆ ವ್ಯಾಪ್ತಿ ಪ್ರದೇಶವನ್ನು ಸೋಂಕಿತ ಪ್ರದೇಶವೆಂದು ಘೋಷಿಸಿದ್ದು ಕೊಂದ ಹಂದಿಗಳನ್ನು ಹೂಳಲಾಗಿದೆ. ಅದೇ ಸಮಯದಲ್ಲಿ, ನಾವು ಇಡೀ ಪ್ರದೇಶವನ್ನು ಸ್ಯಾನಿಟೈಸ್ ಮಾಡಿ, ಏಕಕಾಲದಲ್ಲಿ ಶುಚಿಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಆಫ್ರಿಕನ್ ಹಂದಿ ಜ್ವರವು ಹಂದಿಗಳಿಗೆ ಮಾರಣಾಂತಿಕ ಅಷ್ಟೇ, ಹೆಚ್ಚು ಸಾಂಕ್ರಾಮಿಕವಾಗಿದ್ದರೂ ಮನುಷ್ಯರಿಗೆ ಸೋಂಕು ಹರಡುವುದಿಲ್ಲ. ಹೀಗಾಗಿ ಆತಂಕಕೊಳ್ಳಕಾಗಬಾರದೆಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – ಇಲಿ ಪಾಷಾಣ ಸೇವಿಸಿ ಗೃಹಿಣಿ ಆತ್ಮಹತ್ಯೆ

    ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2020 ರಿಂದ 2022ರ ಜುಲೈ 11ರ ವರೆಗೆ ರಾಜ್ಯದಲ್ಲಿ ಸುಮಾರು 40,159 ಹಂದಿಗಳು ಜ್ವರದಿಂದ ಸಾವನ್ನಪ್ಪಿವೆ. 1,181 ಹಂದಿಗಳನ್ನು ಕೊಲ್ಲಲಾಗಿದೆ ಎಂದಿದ್ದಾರೆ.

    ಎಲ್ಲೆಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ?
    ಅಸ್ಸಾಂ, ಮಿಜೋರಾಂ, ಸಿಕ್ಕಿಂ, ನಾಗಾಲ್ಯಾಂಡ್, ತ್ರಿಪುರಾ, ಉತ್ತರಾಖಂಡ ಹಾಗೂ ಬಿಹಾರ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪ್ರಕರಣಗಳು ವರದಿಯಾಗಿವೆ.

    ಈ ಜ್ವರವು ಸಾಂಕ್ರಾಮಿಕವಾಗಿದ್ದು, ಮನುಷ್ಯರಿಗೆ ಹರಡುವುದಿಲ್ಲ. ಆದರೆ ಇದಕ್ಕೆ ಸೂಕ್ತ ಲಸಿಕೆಯೂ ಇಲ್ಲದಿರುವುದರಿಂದ ಹಂದಿ ಮಾಂಸ ತಿನ್ನುವುದನ್ನು ತಪ್ಪಿಸುವಂತೆ ಸರ್ಕಾರವು ನಿವಾಸಿಗಳನ್ನು ಒತ್ತಾಯಿಸಿದೆ. ಇದನ್ನೂ ಓದಿ: ಟ್ವಿಟ್ಟರ್ ಡೀಲ್ ರದ್ದು ಮಾಡುವ ಮೊದಲೇ ಪರಾಗ್‍ಗೆ ಮೆಸೇಜ್ ಮಾಡಿದ್ದ ಮಸ್ಕ್

    ಕೇಂದ್ರ ಸರ್ಕಾರವು ಆಫ್ರಿಕನ್ ಹಂದಿ ಜ್ವರದ ಕ್ರಿಯಾ ಯೋಜನೆ ರೂಪಿಸಿದ್ದು, ಇದನ್ನು ಎಲ್ಲಾ ಜಿಲ್ಲಾ ಪಶುಸಂಗೋಪನೆ ಅಧಿಕಾರಿಗಳು ಅನುಸರಿಸಬೇಕು, ಆರೋಗ್ಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು. ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿ ಜ್ವರ ಅಥವಾ ಜ್ವರದಿಂದ ಸಾವನ್ನಪ್ಪಿದ ಪ್ರಕರಣಗಳ ಬಗ್ಗೆ ನಿಗಾ ವಹಿಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

    Live Tv
    [brid partner=56869869 player=32851 video=960834 autoplay=true]