Tag: ವೈರಲ್ ವಿಡೀಯೋ

  • ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಅನಾಥ ಶವದ ಅಂತ್ಯಕ್ರಿಯೆ ನೆರವೇರಿಸಿದ ಮಹಿಳಾ ಎಸ್‍ಐ

    ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಅನಾಥ ಶವದ ಅಂತ್ಯಕ್ರಿಯೆ ನೆರವೇರಿಸಿದ ಮಹಿಳಾ ಎಸ್‍ಐ

    ಅಮರಾವತಿ: ಅಂತ್ಯಕ್ರಿಯೆಗಾಗಿ ಅನಾಥ ಶವವವನ್ನು ಮಹಿಳಾ ಎಸ್‍ಐ ತನ್ನ ಭುಜದ ಮೇಲೆ ಇಟ್ಟು 2 ಕೀಲೋಮೀಟರ್ ದೂರ ಹೊತ್ತು ಸಾಗಿ ಮಾನವೀಯತೆ ಮೆರೆದಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

    ಅನಾಥ ಶವವನ್ನು ಹೊತ್ತು ಸಾಗಿದ ಮಹಿಳಾ ಎಸ್‍ಐ ಶಿರೀಶಾ ಆಗಿದ್ದಾರೆ. ಇವರು ಕಾನಿಗುಬ್ಬ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಅನಾಥ ಶವವನ್ನು ಹೊತ್ತು ಹೋಗಿ ಅಂತ್ಯಕ್ರಿಯೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋ ನೋಡಿದ ನೆಟ್ಟಿಗರು ಎಸ್‍ಐ ಮಾನವೀಯತೆ ಕಂಡು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಶವವೊಂದು ಅವಿಕೊತ್ತೂರು ಗ್ರಾಮದ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಸ್ಥಳ ಪರಿಶೀಲನೆಗೆ ಹೋದಾಗ ಗ್ರಾಮಸ್ಥರು ಈ ಅನಾಥ ಶವವನ್ನು ಹೊತ್ತು ಅಂತ್ಯಕ್ರಿಯೆ ಮಾಡಲು ಮುಂದೆ ಬರಲಿಲ್ಲ. ಆಗ ಎಸ್‍ಐ ತಾವೇ ಶವವವನ್ನು ಹೊತ್ತುಕೊಂಡು ಹೋಗಲು ಮುಂದಾಗಿದ್ದಾರೆ. ಓರ್ವ ವ್ಯಕ್ತಿ ಮತ್ತು ಎಸ್‍ಐ ಶಿರೀಶಾ ತಮ್ಮ ಹೆಗಲ ಮೇಲೆ ಹೊತ್ತು ಜಮೀನಿನಿಂದ ವಾಹನವಿದ್ದ ಸ್ಥಳದವರೆಗೆ ಸುಮಾರು 2 ಕೀಲೋಮೀಟರ್ ದೂರ ನಡೆದುಕೊಂಡು ಹೋಗಿ ಅಂತ್ಯಕ್ರಿಯೆಯನ್ನು ನರೆವೆರಿಸಿದ್ದಾರೆ. ಪೊಲೀಸ್ ಮಾನವೀಯತೆ ಕಂಡು ಮೆಚ್ಚುಗೆ ವ್ಯಕ್ತವಾಗುತ್ತಿದೆ.

     

  • 80ರ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ- ವಿಡಿಯೋ ವೈರಲ್

    80ರ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ- ವಿಡಿಯೋ ವೈರಲ್

    – ಚಳಿಯಲ್ಲಿ ನಡುಗುತ್ತಾ ಮನೆ ಮುಂದೆ ಮಲಗಿದ ವೃದ್ಧೆ

    ಚಂಡೀಗಢ: ಸೊಸೆಯೊಬ್ಬಳು 80 ವರ್ಷದ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿ ವೃದ್ಧೆಯ ವಸ್ತುಗಳನ್ನು ಹೊರಗೆ ಎಸೆದಿರುವ ಘಟನೆ ಹರಿಯಾಣದ ಹಿಸಾರ್‍ನ ಆಜಾದ್ ನಗರದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ವೃದ್ಧೆಯನ್ನು ಚನ್ನೋ (80) ಎಂದು ಗುರುತಿಸಲಾಗಿದೆ. ಸೊಸೆ ಶಕುಂತಲಾ ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾಳೆ ಮತ್ತು ವಸ್ತುಗಳನ್ನು ಮನೆಯಿಂದ ಹೊರಗೆ ಎಸೆದಿದ್ದಾಳೆ. ಈ ಚಳಿ ವಾತಾವರಣದಲ್ಲಿ ವಯಸ್ಸಾದ ಮಹಿಳೆ ಮನೆಯ ಹೊರಗೆ ಮಲಗಿರುವ ಸ್ಥಿತಿ ಕರುಣಾಜನಕವಾಗಿತ್ತು.

    ವಸ್ತುಗಳನ್ನು ಸಹ ಹೊರಗೆ ಎಸೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಆರೋಪಿ ಮಹಿಳೆ ಶಕುಂತಲಾಳನ್ನು ಸೆಕ್ಷನ್ 323(ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು, ಸೆಕ್ಷನ್ 506(ಬೆದರಿಕೆ), 509 ಸೆಕ್ಷನ್( ಮಹಿಳೆಗೆ ಸನ್ನೆ, ಶಬ್ದ, ವಸ್ತು ಬಳಸಿ ಅವಮಾನಿಸುವುದು) ಅಡಿಯಲ್ಲಿ ಬಂಧಿಸಿದ್ದಾರೆ. ಡಿಎಸ್ಪಿ ಜೋಗೇಂದ್ರ ಶರ್ಮಾ ಆರೋಪಿ ಮಹಿಳೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರರಿಗೆ ಆದೇಶಿಸಿದ್ದಾರೆ.

    ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಹೊಡೆಯುವ ವಿಡಿಯೋ ವೈರಲ್ ಆಗಿತ್ತು. ನಾವು ವಿಚಾರಣೆ ನಡೆಸಿದಾಗ ಈ ಸಂದರ್ಭದಲ್ಲಿ, ವೃದ್ದೆ ಸೊಸೆ ತನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಓಡಿಸಿದಳು ಮತ್ತು ತನ್ನ ಸಾಮಾನುಗಳನ್ನು ಸಹ ರಸ್ತೆಗೆ ಎಸೆದಳು ಎಂದು ತಿಳಿಸಿದ್ದಾಳೆ. ನಾವು ಸ್ಥಳಕ್ಕೆ ಹೋದಾಗ ವೃದ್ಧೆ ಮನೆಯ ಹೊರಗೆ ಇದ್ದಳು. ಈಗ ತನ್ನ ಎರಡನೇ ಮಗನ ಮನೆಗೆ ಕರೆದೊಯ್ಯಲಾಗಿದೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ರೋಹ್ತಾಶ್ ತಿಳಿಸಿದ್ದಾರೆ.

    https://youtu.be/DWbFXH3cSbs