ಲಕ್ನೋ: ಮನುಷ್ಯನಿಗಿಂತ ಪ್ರಾಣಿಗಳೇ ಹೆಚ್ಚು ಬುದ್ಧಿವಂತವಾಗಿರುತ್ತವೆ ಎಂಬುದಾಗಿ ಕೆಲವೊಮ್ಮೆ ನಾವು ಮಾತನಾಡಿಕೊಳ್ಳುತ್ತೇವೆ. ಇದಕ್ಕೆ ಪೂರಕವೆಂಬಂತೆ ಪ್ರಾಣಿಗಳ ಕೆಲವೊಂದು ಕೆಲಸಗಳು ಮನುಷ್ಯನಿಗೆ ಮಾದರಿಯಾಗಿರುತ್ತವೆ. ಹೀಗೆ ಕೋತಿಯೊಂದು ಪೊಲೀಸ್ ಒಬ್ಬರ ಹೆಗಲ ಮೇಲೆ ಕುಳಿತು ಹೇನು ಹುಡುಕುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಉತ್ತರ ಪ್ರದೇಶದ ಪಿಲಿಭಿಟ್ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗುತ್ತಿರುವ ವಿಡಿಯೋಗೆ ಸಾಕಷ್ಟು ಜನ ಕಮೆಂಟ್ ಮಾಡುತ್ತಿದ್ದು, ಹೆಗಲ ಮೇಲೆ ಕುಳಿತಿದ್ದರೂ ಪೊಲೀಸ್ ತಮ್ಮ ಕೆಲಸದಲ್ಲಿ ನಿರತರಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಡಿಯೋದಲ್ಲೇನಿದೆ..?
53 ಸೆಕೆಂಡಿನ ಈ ವಿಡಿಯೋದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಕಾಂತ್ ದ್ವಿವೇದಿ ತಮ್ಮ ಕಚೇರಿಯಲ್ಲಿ ಕುಳಿತು ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಪೊಲೀಸ್ ತಮ್ಮ ಕೆಲಸದ ಬ್ಯುಸಿಯಲ್ಲಿದ್ದರೆ ಇತ್ತ ಕೋತಿಯೊದು ತನ್ನ ಪಾಡಿಗೆ ಅವರ ಹೆಗಲ ಮೇಲೆ ಕುಳಿತುಕೊಂಡು ಹೇನು ಹೆಕ್ಕುವ ಮೂಲಕ ತಲೆ ಮಸಾಜ್ ಮಾಡುತ್ತಿದೆ. ಶ್ರೀಕಾಂತ್ ಕೂಡ ಕೋತಿಗೆ ಯಾವುದೇ ತೊಂದರೆ ನೀಡದಂತೆ ಕೆಲಸದಲ್ಲೇ ನಿರತಾಗಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು.
https://twitter.com/anilnagar3/status/1181568804347887616?ref_src=twsrc%5Etfw%7Ctwcamp%5Etweetembed%7Ctwterm%5E1181568804347887616&ref_url=https%3A%2F%2Fwww.news18.com%2Fnews%2Fbuzz%2Fwatch-monkey-sits-on-inspectors-shoulder-to-give-him-a-hair-care-while-he-works-undisturbed-2338803.html
ಈ ವಿಡಿಯೋವನ್ನು ಪೊಲೀಸ್ ಉಪ ಆಯುಕ್ತ ರಾಹುಲ್ ಶ್ರೀವಾತ್ಸವ್ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ಅಪ್ಲೋಡ್ ಆಗುತ್ತಿದ್ದಂತೆಯೇ 13 ಸಾವಿರ ವ್ಯೂವ್ಸ್ ಬಂದಿದೆ. ಅಲ್ಲದೆ ಒಂದೂವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 30ಕ್ಕೂ ಹೆಚ್ಚು ರಿಟ್ವೀಟ್ ಆಗಿದೆ.
ಆದರೆ ಈ ವಿಡಿಯೋ ಮಾಡಿದವರು ಯಾರು ಎಂಬುದು ತಿಳಿದುಬಂದಿಲ್ಲ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೆಲವರು ಶಾಂಪೂಗಳ ಹೆಸರನ್ನು ಸೂಚಿಸಿ, ಅದನ್ನು ಬಳಸುವಂತೆ ಪೊಲೀಸ್ ಗೆ ಸಲಹೆ ನೀಡಿದ್ದಾರೆ.