Tag: ವೈರಲ್ ವಿಡಿಯೋ

  • ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

    ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

    ಬೆಂಗಳೂರು: ಐ ಲವ್ ಯು ಸಿನಿಮಾದಲ್ಲಿ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸದ್ದು ಮಾಡಿದ್ದರು. ಈಗ ಮತ್ತೆ ತಮ್ಮ ಹೊಸ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳ ಪಾತ್ರದಲ್ಲಿ ನಟಿಸಿ ಮತ್ತೆ ಎಲ್ಲೆಡೆ ಸುದ್ದಿಯಾಗಿದ್ದಾರೆ.

    ಹೌದು. ರಚಿತಾ ತಮ್ಮ ಹೊಸ ಚಿತ್ರ `ಏಕ್ ಲವ್ ಯಾ’ ಸಿನಿಮಾದಲ್ಲಿ ಮತ್ತೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅದರಲ್ಲೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ರಚಿತಾ ಸಿಗರೇಟ್ ಸೇದಿ, ಹೀರೋಗೆ ಲಿಪ್ ಕಿಸ್ ಕೊಟ್ಟ ದೃಶ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

    ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯದ ಮೂಲಕ ಟೀಸರ್ ಆರಂಭವಾಗುತ್ತದೆ. ನಾಯಕ ರಾಣಾಗೆ ರಚಿತಾ ಲಿಪ್ ಕಿಸ್ ಮಾಡುವ ದೃಶ್ಯದೊಂದಿಗೆ ಟೀಸರ್ ಮುಗಿಯುತ್ತದೆ. 1 ನಿಮಿಷ 40 ಸೆಕೆಂಡ್‍ಗಳ ಟೀಸರ್ ನಲ್ಲಿ ರಾಣಾ ಆ್ಯಕ್ಷನ್ ಹಾಗೂ ರಚಿತಾ ಲುಕ್ ಎಲ್ಲರ ಗಮನ ಸೆಳೆದಿದೆ.

    `ಏಕ್ ಲವ್ ಯಾ’ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದು, ಅವರ ಸಹೋದರ ರಾಣಾ ನಾಯಕನಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿದ್ದು, ಟೀಸರ್ ಆರಂಭದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಲಾಗಿದೆ.

    ಐ ಲವ್ ಯು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ನಂತರದ ದಿನಗಳಲ್ಲಿ ಸ್ವತಃ ರಚಿತಾ ಅವರೇ, ‘ಇನ್ನುಮುಂದೆ ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ’ ಎಂದು ಹೇಳಿಕೊಂಡಿದ್ದರು. ಈಗ ರಚಿತಾ ಬಿಂದಾಸ್ ಆಗಿ ಸಿಗರೇಟ್ ಸೇದುತ್ತಿರುವ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ಈ ಕುರಿತು ಪ್ರೇಮ್ ಸಹ ಖಚಿತಪಡಿಸಿದ್ದು, ಇದು ನಮ್ಮ ಏಕ್ ಲವ್ ಯಾ ಚಿತ್ರದ ಸ್ಟಿಲ್. ಹೇಗೆ ಹೊರಬಂತೋ ನಮಗೂ ಗೊತ್ತಿಲ್ಲ. ಈ ಚಿತ್ರದಲ್ಲಿ ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯವಿದೆ. ಟೀಸರ್‍ನಲ್ಲಿ ಇನ್ನಷ್ಟು ಅಚ್ಚರಿಗಳು ಕಾದಿವೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದರು.

  • ‘ನೀನು ಕಳ್ಳಿ’ – ಪತ್ನಿಯನ್ನು ಕಿಚಾಯಿಸಿದ ಮಾಹಿ

    ‘ನೀನು ಕಳ್ಳಿ’ – ಪತ್ನಿಯನ್ನು ಕಿಚಾಯಿಸಿದ ಮಾಹಿ

    ರಾಂಚಿ: ಸೋಷಿಯಲ್ ಮೀಡಿಯಾದಲ್ಲಿ ಮಾಹಿ ದಂಪತಿ ದಿನೇ ದಿನೇ ಸಖತ್ ಆಕ್ಟಿವ್ ಆಗ್ತಿದ್ದಾರೆ. ಫನ್ನಿ ಫನ್ನಿ ಫೋಟೋಸ್ ವಿಡಿಯೋಗಳನ್ನು ಶೇರ್ ಮಾಡ್ತಾ ಮಸ್ತ್ ಎಂಜಾಯಿ ಮಾಡ್ತಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ ಗಳನ್ನು ಹೆಚ್ಚಿಸಿಕೊಳ್ಳೋಕೆ ಸಾಕ್ಷಿ ನನ್ನ ವೀಡಿಯೋಗಳನ್ನ ಪೋಸ್ಟ್ ಮಾಡುತ್ತಿದ್ದಾರೆ. ಇಂತಹ ವೈರಲ್ ವಿಡಿಯೋವೊಂದರಲ್ಲಿ ಧೋನಿ ತಮ್ಮ ಪತ್ನಿಯನ್ನು, ‘ಸಾಕ್ಷಿ ಕಳ್ಳಿ’ ಅಂತ ಕಿಚಾಯಿಸಿ ಧೋನಿ ಕಾಲೆಳೆದಿದ್ದಾರೆ.

    ಧೋನಿ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸಾಕ್ಷಿ, ನಾನು ನಿನ್ನ ಅರ್ಧಾಂಗಿ ರಾಜ, ಬೇಬಿ ಸ್ವೀಟಿ ಅಂತೆಲ್ಲಾ ಹೊಗಳಿ ಅಟ್ಟಕೇರಿಸಿದ್ದಾರೆ. ಅಲ್ಲದೇ ನಿಮ್ಮ ಫಾಲೋವರ್ಸ್ ಎಲ್ಲಾ ನನ್ನ ಸಿಕ್ಕಾಪಟ್ಟೆ ಇಷ್ಟ ಪಡ್ತಾರೆ ಗೊತ್ತಾ? ಯಾರಾದ್ರು ನಿಮ್ಮನ್ನು ನೋಡ್ಬೇಕು ಅಂದ್ರೆ ನನ್ನ ಅಕೌಂಟಿನಲ್ಲಿ ನೋಡ್ತಾರೆ. ನನ್ನ ಹೀರೋ ಧೋನಿ ಎಲ್ಲೋದ್ರು, ‘ಮಾಹಿ ಬಾಯಿ, ಧೋನಿ ತಲಾ’ ಅಂತೆಲ್ಲಾ ಕರೆಯುತ್ತಾರೆ. ಈ ವೀಡಿಯೋಗಳನ್ನ ನೋಡಿ ಖುಷಿ ಪಡ್ತಾರೆ ಎಂದಿದ್ದಾರೆ. ಇಬ್ಬರ ತಮಾಷೆಯ ವೀಡಿಯೋ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

  • ಬಸ್ ನಿಲ್ದಾಣದಲ್ಲೇ ಕಾಲೇಜು ವಿದ್ಯಾರ್ಥಿನಿಯರ ಹೊಡೆದಾಟ

    ಬಸ್ ನಿಲ್ದಾಣದಲ್ಲೇ ಕಾಲೇಜು ವಿದ್ಯಾರ್ಥಿನಿಯರ ಹೊಡೆದಾಟ

    ತುಮಕೂರು: ಕಾಲೇಜು ವಿದ್ಯಾರ್ಥಿನಿಯರಿಬ್ಬರು ಬಸ್ ನಿಲ್ದಾಣದಲ್ಲೇ ಜಗಳ ಮಾಡಿಕೊಂಡು ಬಳಿಕೊಂಡು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಇಂದು ಮಧ್ಯಾಹ್ನ 3:30ರ ಸುಮಾರಿಗೆ ಘಟನೆ ನಡೆದಿದ್ದು, ಸಾರ್ವಜನಿಕ ಎದುರೇ ಜಗಳವಾಡಿ ಕೊನೆಗೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಜುಟ್ಟು ಹಿಡಿದುಕೊಂಡು ನೂಕಾಟ ತಳ್ಳಾಟ ಮಾಡಿಕೊಂಡು ಕಿತ್ತಾಟ ನಡೆಸಿದ್ದು, ಈ ದೃಶ್ಯಗಳು ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ವಿಡಿಯೋ ವೈರಲ್: ವಿದ್ಯಾರ್ಥಿನಿಯರು ಜಗಳ ನಡೆಸುತ್ತಿರುವ ವಿಡಿಯೋವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಹಾಗೂ ವಾಟ್ಸಾಪ್ ಗಳಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್ ಆಗಿದೆ. ‘ಏನ್ ಗುರು ನಮ್ ತುಮಕೂರಲ್ಲಾ?, ನಾವಿದ್ದಾಗ ಇಂತಹದ್ಯಾವದೂ ಕಾಣಲಿಲ್ಲ.’ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ವಿಡಿಯೋ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿದ್ಯಾರ್ಥಿನಿಯರು ಯಾವ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾರೆ ಎಂಬುವುದು ತಿಳಿದು ಬಂದಿಲ್ಲ. ವಿದ್ಯಾರ್ಥಿನಿರ ಜಗಳ ಕಂಡ ಕೆಲ ಹಿರಿಯರು ಇಬ್ಬರಿಗೂ ಬುದ್ಧಿವಾದ ಹೇಳಿ ಸ್ಥಳದಿಂದ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇಬ್ಬರೂ ಒಂದೇ ಕಾಲೇಜು ವಿದ್ಯಾರ್ಥಿನಿಯರು ಎನ್ನಲಾಗಿದೆ.

  • ಸೋಮಶೇಖರ್ ರೆಡ್ಡಿ ಯೂ ಟರ್ನ್

    ಸೋಮಶೇಖರ್ ರೆಡ್ಡಿ ಯೂ ಟರ್ನ್

    ಬೆಂಗಳೂರು: ಸಿಎಎ ಸಂಬಂಧ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದ ಶಾಸಕ ಸೋಮಶೇಖರ್ ರೆಡ್ಡಿ ಈಗ ಯು ಟರ್ನ್ ಹೊಡೆದಿದ್ದಾರೆ. ಬಳ್ಳಾರಿಯಲ್ಲಿ ಶ್ರೀರಾಮುಲು ಸಮ್ಮುಖದಲ್ಲಿ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿದ ವಿಡಿಯೋ ಈಗ ವೈರಲ್ ಆಗಿದೆ.

    ಬಳ್ಳಾರಿಯಲ್ಲಿ ಮುಸ್ಲಿಂ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮುಖಂಡರು ಹಾಗೂ ಸೋಮಶೇಖರ್ ರೆಡ್ಡಿ ನಡುವೆ ಶ್ರೀರಾಮುಲು ಸಂಧಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಸೋಮಶೇಖರ್ ಪ್ರಚೋದನಾಕಾರಿ ಹೇಳಿಕೆ ತಪ್ಪು: ಡಿಸಿಎಂ ಅಶ್ವಥ್ ನಾರಾಯಣ್

    ಶ್ರೀರಾಮುಲು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿರುವವರು ನಿಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ, ಆತಂಕ ಬೇಡ. ದೇಶದಲ್ಲಿರುವರಿಗೆ ಯಾವುದೇ ದಾಖಲೆ ಕೇಳಲ್ಲ. ಅಕ್ರಮವಾಗಿ ಬಂದವರಿಗೆ ಮಾತ್ರ ದಾಖಲೆ ಕೇಳುತ್ತಾರೆ. ನೀವು ಹಿರಿಯರು, ಇದನ್ನು ಮನವರಿಕೆ ಮಾಡಬೇಕು ಎಂದು ಮುಸ್ಲಿಂ ಧರ್ಮಗುರುವೊಬ್ಬರೊಂದಿಗೆ ಮಾತಾಡಿದ್ದಾರೆ. ಇದನ್ನೂ ಓದಿ: ಸೋಮಶೇಖರ್ ರೆಡ್ಡಿ ಶಾಸಕತ್ವ ಸ್ಥಾನ ಅಮಾನತ್ತಿಗೆ ಆಗ್ರಹಿಸಿ ರಾಯಚೂರಿನಲ್ಲಿ ಹೋರಾಟ

    ಅದಕ್ಕೆ ಮುಸ್ಲಿಂ ಧರ್ಮಗುರು ಜನರ ಮನಸ್ಸು ಕಲುಷಿತವಾಗುವಂತೆ ಬಿಂಬಿತವಾಗಿದೆ. ನಿಮ್ಮ ಶರೀರ ರೋಗಗ್ರಸ್ತವಾಗಿಲ್ಲ. ನಿಮ್ಮ ಮನಸ್ಸುಗಳು ರೋಗಗ್ರಸ್ಥವಾಗಿದೆ ಎಂದು ಸೋಮಶೇಖರ್ ರೆಡ್ಡಿ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ:  ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ- ರಾಯಚೂರಿನಲ್ಲಿ ಸೋಮಶೇಖರ್ ರೆಡ್ಡಿ ವಿರುದ್ಧ ದೂರು

    ಶಾಸಕ ಸೋಮಶೇಖರ್ ರೆಡ್ಡಿ ನಾವು 130 ಕೋಟಿ ಜನರನ್ನೂ ಭಾರತೀಯರು ಎಂದು ಹೇಳುತ್ತೇವೆ. ಹಿಂದೂಗಳು ಬೇರೆ, ಮುಸ್ಲಿಮರು ಬೇರೆ ಎಂದಿಲ್ಲ ಎಂದು ಸಮಜಾಯಿಶಿ ನೀಡಿದ್ದಾರೆ. ಜನರಲ್ಲಿ ಪ್ರತಿದಿನ ಗೊಂದಲ ಮೂಡಿಸುತ್ತಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಶಾ ಒಳ್ಳೆಯ ಆಡಳಿತ ನಡೆಸುವುದನ್ನು ಸಹಿಸಲಾರದವರು ಮಾಡುತ್ತಿರುವ ಅಪಪ್ರಚಾರ. ಒಂದೆರಡು ದಿನ ಈ ವಿಚಾರದಲ್ಲಿ ಮೌನವಾದರೆ ಎಲ್ಲವೂ ಸರಿಹೋಗುತ್ತೆ ಎಂದು ರಾಮುಲು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಮುಸ್ಲಿಂ ಧರ್ಮಗುರು ಈಗ ನಿಮಗಾಗಿರುವುದು ದೇಹಕ್ಕೆ ಆಗಿರುವ ರೋಗವಲ್ಲ. ನಿಮ್ಮ ಮನಸ್ಸಿಗೆ ಅಂಟಿರುವ ರೋಗ ಎಂದಿದ್ದಾರೆ. ಶ್ರೀರಾಮುಲು, ಸೋಮಶೇಖರ ರೆಡ್ಡಿ ಇಬ್ಬರು ಗುರುಗಳೇ ನೀವು ಸತ್ಯವನ್ನು ಜನರಿಗೆ ಹೇಳಿ ಎಂದು ಕೇಳಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.

  • ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಸೆಂಚೂರಿಯನ್: ಇಂಗ್ಲೆಂಡ್ ತಂಡದ ಆಲ್‍ರೌಂಡರ್, ಉಪನಾಯಕ ಬೆನ್ ಸ್ಟೋಕ್ಸ್ ಬಿರುಸಿನಿಂದ ಮಾತನಾಡುವುದು ಸ್ವಲ್ಪ ಹೆಚ್ಚು. ಈ ಹಿಂದೆಯೂ ಕೂಡ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕೂಡ ಕೇಳಿ ಬಂದ ಹಿನ್ನೆಲೆಯಲ್ಲಿ ತಂಡದಿಂದ ಕೆಲ ಸಮಯ ದೂರ ಉಳಿದಿದ್ದರು. ಮೈದಾನದಲ್ಲೂ ಎದುರಾಳಿ ಆಟಗಾರನನ್ನು ಸ್ಲೆಡ್ಜಿಂಗ್ ಮಾಡುವುದರಲ್ಲೂ ಸ್ಟೋಕ್ಸ್ ಮುಂದು. ಈಗ ಬ್ರಾಡ್ ಜೊತೆ ವಾಗ್ವಾದ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯಾವ ಕಾರಣದಿಂದ ಇಬ್ಬರು ಆಟಗಾರರು ವಾಗ್ವಾದಕ್ಕೆ ಮುಂದಾಗಿದ್ದಾರೆ ಎಂಬುವುದು ಮಾತ್ರ ಈವರೆಗೂ ಸ್ವಷ್ಟವಾಗಿಲ್ಲ. ಆದರೆ ತಂಡದ ಆಟಗಾರರ ನಡುವೆಯೇ ಇಬ್ಬರು ಆಟಗಾರರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಜೋ ರೂಟ್, ಜೋಸ್ ಬಟ್ಲರ್ ನಡುವೆ ಬಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 3ನೇ ದಿನದಾಟದ ಬ್ರೇಕ್ ವೇಳೆ ಘಟನೆ ನಡೆದಿದೆ. ಸ್ಟೋಕ್ಸ್‍ಗೆ ಬ್ರಾಡ್ ಏನೋ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೂ ಮುನ್ನ ಸ್ಟೋಕ್ಸ್ ಏನೋ ಅಂದ ಕಾರಣ ಬ್ರಾಡ್ ವಾಗ್ವಾದಕ್ಕಿಳಿದರು ಎನ್ನಲಾಗಿದೆ. ಈ ಘಟನೆಯೊಂದಿಗೆ ಇಂಗ್ಲೆಂಡ್ ತಂಡದ ಆಟಗಾರರ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    ಆಟಗಾರರು ಮೈದಾನದಲ್ಲೇ ವಾಗ್ವಾದಕ್ಕೆ ಇಳಿದಿರುವ ಕುರಿತು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ. ಅಲ್ಲದೇ ಯಾವುದೇ ಅತೃಪ್ತಿ ಇದ್ದರೆ ಆಟಗಾರರು ಕುಳಿತು ಬಗೆಹರಿಸಿಕೊಳ್ಳಬೇಕಿದೆ ಎಂಬ ಸಲಹೆಯನ್ನು ನೀಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಈ ಕುರಿತು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ಕ್ಯಾಚ್ ಹಿಡಿಯಲು ಹೋಗಿ ಡಿಕ್ಕಿ – ಸಾವು ಬದುಕಿನ ನಡುವೆ ಆಟಗಾರರು

    ಕ್ಯಾಚ್ ಹಿಡಿಯಲು ಹೋಗಿ ಡಿಕ್ಕಿ – ಸಾವು ಬದುಕಿನ ನಡುವೆ ಆಟಗಾರರು

    ಕೋಲಾರ: ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಯ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಬ್ಬರು ಆಟಗಾರರು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಪರಸ್ಪರ ಡಿಕ್ಕಿಯಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯಲ್ಲಿ ನಡೆದಿದ್ದು, ಮೈದಾನದಲ್ಲಿ ಪ್ರಜ್ಞೆ ಕಳೆದುಕೊಂಡ ಆಟಗಾರರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

    ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿಯಲ್ಲಿ ಇಂದು ನಡೆದಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಘಟನೆ ನಡೆದಿದೆ. ಬ್ಯಾಟ್ಸ್ ಮನ್ ಸಿಡಿಸಿದ ಚೆಂಡನ್ನು ಕ್ಯಾಚ್ ಹಿಡಿಯಲು ಹೋದ ಸಂದರ್ಭದಲ್ಲಿ ಡೀಪ್ ಸ್ಕ್ವೇರ್ ಲೇಗ್ ಹಾಗೂ ಡೀಪ್ ಮೀಡ್ ವಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾನು ಪ್ರಕಾಶ್, ಶ್ರೀನಿವಾಸ್ ಕ್ಯಾಚ್ ಹಿಡಿಯಲು ಯತ್ನಿಸಿದ್ದರು. ಈ ವೇಳೆ ಆಟಗಾರ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಕ್ಷಣ ಮಾತ್ರದಲ್ಲಿ ಇಬ್ಬರು ಮೈದಾನದಲ್ಲೇ ಪ್ರಜ್ಞೆ ತಪ್ಪಿಬಿದ್ದಿದ್ದರು.

    ಇಬ್ಬರು ಆಟಗಾರರು ಪ್ರಜ್ಞೆ ಕಳೆದುಕೊಂಡ ಕಾರಣ ಸಹ ಆಟಗಾರಲ್ಲಿ ಆತಂಕ ಸೃಷ್ಟಿಯಾಗಿತ್ತು. ಕೂಡಲೇ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಪಡೆದ ಬಳಿಕ ಶ್ರೀನಿವಾಸ್ ಚೇತರಿಕೆ ಕಂಡಿದ್ದು, ಭಾನು ಪ್ರಕಾಶ್‍ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಆಟದ ವೇಳೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಟೂರ್ನಿಯನ್ನು ವೆಬ್ ಚಾನಲ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿತ್ತು. ಟೂರ್ನಿಯಲ್ಲಿ ರೈಸಿಂಗ್ ಸ್ಟಾರ್ಸ್ ಹಾಗೂ ಎಸ್‍ಎಎಸ್ ಕ್ರಿಕೆಟರ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಭಾನು ಹಾಗೂ ಶ್ರೀನಿವಾಸ್ ರೈಸಿಂಗ್ ಸ್ಟಾರ್ಸ್ ತಂಡದ ಪರ ಆಡುತ್ತಿದ್ದರು.

  • ರಣ್‍ವೀರ್ ಬಾತ್‍ರೂಂ ಡ್ಯಾನ್ಸ್ ವಿಡಿಯೋ ವೈರಲ್

    ರಣ್‍ವೀರ್ ಬಾತ್‍ರೂಂ ಡ್ಯಾನ್ಸ್ ವಿಡಿಯೋ ವೈರಲ್

    ಮುಂಬೈ: ಬಾಲಿವುಡ್‍ನ ಬಾಜೀರಾವ್, ರಣ್‍ವೀರ್ ಸಿಂಗ್ ಸದಾ ತಮ್ಮ ವಿಭಿನ್ನ ಡ್ರೆಸ್‍ಗಳಿಂದಲೇ ಸುದ್ದಿ ಆಗುತ್ತಿರುತ್ತಾರೆ. ಇದೀಗ ಕಾಜೋಲ್ ನಟನೆಯ ಹಾಡಿಗೆ ಬಾತ್‍ರೂಮಿನಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಬಾಲಿವುಡ್‍ನ ಸೂಪರ್ ಹಿಟ್ ಡಿಡಿಎಲ್‍ಜೆ (ದಿಲ್ ವಾಲೇ ದುಲ್ಹನಿಯಾ ಲೇ ಜಾಯೇಂಗೇ) ಸಿನಿಮಾದ ‘ಆಯೇ ಮೇರೆ ಖಾಬೋ’ ಹಾಡಿಗೆ ರಣ್‍ವೀರ್ ಬಾತ್‍ರೂಮಿನಲ್ಲಿ ಸಖತ್ ಹೆಜ್ಜೆ ಹಾಕಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು, ಸದ್ಯ ವೈರಲ್ ಆಗುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ವಿಡಿಯೋವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

    ರಣ್‍ವೀರ್ ಸಿಂಗ್ ನಟನೆ ’83’ ಸಿನಿಮಾ ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ. ಚಿತ್ರತಂಡ ಪೋಸ್ಟ್ ಪ್ರೊಡೆಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ. ಸಿನಿಮಾದಲ್ಲಿ ರಣ್‍ವೀರ್ ಗೆ ಜೊತೆಯಾಗಿ ಪತ್ನಿ ದೀಪಿಕಾ ಜೋಡಿಯಾಗಿದ್ದಾರೆ. ಮದುವೆ ಬಳಿಕ ಇಬ್ಬರು ಜೊತೆಯಾಗಿ ನಟಿಸಿರುವ ಮೊದಲ ಚಿತ್ರ ಇದಾಗಿದೆ. ಈ ಹಿಂದೆ ರಾಮ್‍ಲೀಲಾ, ಬಾಜೀರಾವ್ ಮಸ್ತಾನಿ, ಪದ್ಮಾವತ್ ಚಿತ್ರಗಳಲ್ಲಿ ದೀಪಿಕಾ ಮತ್ತು ರಣ್‍ವೀರ್ ಜೊತೆಯಾಗಿ ನಟಿಸಿದ್ದರು. ಇತ್ತ ದೀಪಿಕಾ ನಟನೆಯ ಛಪಾಕ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ ಬಾಲಿವುಡ್ ಲೋಕದಲ್ಲಿ ಸಂಚಲನ ಮೂಡಿಸಿದೆ.

    https://www.instagram.com/p/B6XJvb8BGjr/

  • ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಮರಿಗೆ ಅರಿವು ಮೂಡಿಸಿದ ಇನ್ಸ್‌ಪೆಕ್ಟರ್- ವಿಡಿಯೋ ವೈರಲ್

    ಪೌರತ್ವ ಕಾಯ್ದೆ ಬಗ್ಗೆ ಮುಸ್ಲಿಮರಿಗೆ ಅರಿವು ಮೂಡಿಸಿದ ಇನ್ಸ್‌ಪೆಕ್ಟರ್- ವಿಡಿಯೋ ವೈರಲ್

    ಬೆಂಗಳೂರು: ಪೌರತ್ವ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಅದರಲ್ಲೂ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಇದರ ಮಧ್ಯದಲ್ಲಿ ಇಬ್ಬರು ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ಹೆಚ್ ಎಸ್ ಆರ್ ಲೇಔಟ್ ಇನ್ಸ್‌ಪೆಕ್ಟರ್ ಪೌರತ್ವ ಕಾಯ್ದೆ ಬಗ್ಗೆ ಅರಿವು ಮೂಡಿಸುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಬೆಂಗಳೂರಿನ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಘವೇಂದ್ರ ಹೆಚ್‍ಎಸ್‍ಆರ್ ಲೇ ಔಟ್ ಮಸೀದಿಗಳಿಗೆ ತೆರಳಿ ಕಾಯ್ದೆಯ ಬಗ್ಗೆ ಅರಿವು ಮೂಡಿಸಿದ್ದಾರೆ. ಗಲಭೆ, ಹಿಂಸಾಚಾರವಾಗುತ್ತಿದ್ದರೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಂತ ಉತ್ತಮ ಪರಿಹಾರ ಎಂಬುದನ್ನ ಅರಿತ ಇವರು, ಎರಡು ಮಸೀದಿಗಳಿಗೆ ಹೋಗಿ ಮುಸ್ಲಿಮರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಖಾಕಿ ಧಿರಿಸಿನಲ್ಲಿ ಹೋಗಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ, ಏನೇ ಮಾಡುವುದಿದ್ದರೂ ಮೊದಲು ನಿಜವಾದ ಸಂಗತಿಯೇನೆಂದು ತಿಳಿದುಕೊಂಡು ಮುಂದುವರಿಯಿರಿ. ಏನಾದರೂ ಸಂದೇಹಗಳು ಬಂದರೆ ಬಂದು ನಮ್ಮ ಬಳಿ ಬಂದು ಮೊದಲು ವಿಷಯ ತಿಳಿದುಕೊಳ್ಳಿ, ತಪ್ಪು ದಾರಿಗಿಳಿಯಬೇಡಿ ಎಂದರು.

    ಮುಸಲ್ಮಾನರು, ಹಿಂದೂಗಳು, ಕ್ರಿಶ್ಚಿಯನ್ ರು ಎಲ್ಲಾ ಧರ್ಮದವರು ಒಂದೇ ನಾವೆಲ್ಲಾ ಸಹೋದರರು ಇದ್ದಂಗೆ. ನಾವೆಲ್ಲರೂ ಭಾರತೀಯರು ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಅಡಿ ನಾವೆಲ್ಲಾ ಸಂತೋಷವಾಗಿ ಇದ್ದೀವಿ ಕೂಡಿ ಬಾಳೋಣ ಪೌರತ್ವ ನಿಷೇಧದ ಕಾಯ್ದೆ ಮುಸ್ಲಿಮರಿಗೆ ಆಗಲಿ, ಹಿಂದೂಗಳಿಗೆ ಆಗಲಿ ತೊಂದರೆ ಆಗಲ್ಲ ಇದಕ್ಕೆಲ್ಲಾ ಕಿವಿಗೊಡಬೇಡಿ. ಯಾವ ರೀತಿಯ ಸಂದೇಶ ವಾಟ್ಸಾಪ್ ಆಗಲಿ, ಫೇಸ್ ಬುಕ್ ಆಗಲಿ ಬಂದರೆ ನನಗೆ ತಿಳಿಸಿ ಅದರ ಬಗ್ಗೆ ನಾನು ಮಾಹಿತಿ ಕೊಡುತ್ತೇನೆ. ಹಾಗಾಗಿ ಗಲಭೆ ಗೊಂದಲ ಬೇಡ ಎಲ್ಲರೂ ಒಟ್ಟಾಗಿ ಕೂಡಿ ಬಾಳೋಣ ಎಂದಿರುವ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ.

    ಮೂಲತಃ ಚಿಕ್ಕಮಗಳೂರಿನವರಾದ ರಾಘವೇಂದ್ರ ಅವರು, 2003ರಲ್ಲಿ ಪೊಲೀಸ್ ಸೇವೆಗೆ ಸೇರಿ ಅನೇಕ ಕಡೆಗಳಲ್ಲಿ ಇದುವರೆಗೆ ಕೆಲಸ ಮಾಡಿದ್ದಾರೆ. ಕಳೆದ ಜನವರಿಯಲ್ಲಿ ಹೆಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ.

    https://www.facebook.com/pavagada.soori.9/videos/119806289499343/

  • ಬೀದಿ ನಾಯಿಗೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ

    ಬೀದಿ ನಾಯಿಗೆ ಬೊಗಸೆಯಲ್ಲಿ ನೀರು ಕುಡಿಸಿದ ವ್ಯಕ್ತಿ

    ಬೆಳಗಾವಿ/ಚಿಕ್ಕೋಡಿ: ವ್ಯಕ್ತಿಯೊಬ್ಬರು ಬೀದಿ ನಾಯಿಗಳಿಗೆ ತಮ್ಮ ಬೊಗಸೆಯಲ್ಲಿ ನೀರು ಕುಡಿಸಿರುವ ವಿಡಿಯೋ ಬೆಳಗಾವಿ ಭಾಗದಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಶ್ರೀಮಂತರು, ಸಿನಿಮಾ ನಟ ನಟಿಯರು ಲಕ್ಷಗಟ್ಟಲೇ ಹಣ ಖರ್ಚು ಮಾಡಿ ನಾಯಿಗಳನ್ನು ಸಾಕುತ್ತಾರೆ. ಸಾಕಿದ ನಾಯಿಗಳನ್ನು ಮಕ್ಕಳ ರೀತಿಯಲ್ಲಿ ನೋಡಿಕೊಳ್ಳುವುದನ್ನು ನೋಡಿರುತ್ತವೆ. ಆದರೆ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವ್ಯಕ್ತಿ ಬೀದಿ ನಾಯಿಗಳಿಗೆ ಬೊಗಸೆಯಲ್ಲಿ ನೀರು ಕುಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

    ಸಾವಿರಾರು ರೂಪಾಯಿ ಖರ್ಚು ಮಾಡಿ ನಾಯಿಗಳನ್ನು ಸಾಕುವರಿಗೆ ಈ ವ್ಯಕ್ತಿ ಮಾದರಿಯಾಗಿದ್ದಾರೆ. ಅದೇ ಹಣದಿಂದ ಬೀದಿ ನಾಯಿಗಳಿಗಾಗಿ ಬಳಸಿದ್ರೆ ಪ್ರಾಣಿ ಸಂಕುಲ ಉಳಿಯುತ್ತದೆ ಎಂದು ಬರೆದುಕೊಂಡು ನೆಟ್ಟಿಗರು ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ವ್ಯಕ್ತಿ ಯಾರು ಏನು ಎಂಬ ಬಗ್ಗೆ ಮಾಹಿತಿ ಲಭಿಸಿಲ್ಲವಾದರೂ ಸಹ ಇವರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  • ‘ಹೌದು ಹುಲಿಯಾ’ ಡೈಲಾಗ್ ವೈರಲ್- ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

    ‘ಹೌದು ಹುಲಿಯಾ’ ಡೈಲಾಗ್ ವೈರಲ್- ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ

    ರಾಯಚೂರು: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗಿರುವ ‘ಹೌದು ಹುಲಿಯಾ’ ಡೈಲಾಗ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.

    ಜಿಲ್ಲೆಯ ಸಿಂಧನೂರು ತಾಲೂಕಿನ ಒಳಬಳ್ಳಾರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ‘ಹೌದು ಹುಲಿಯಾ’ ಎಲ್ಲೆಡೆ ತುಂಬಾ ವೈರಲ್ ಅಗಿದೆ. ಚುನಾವಣಾ ಪ್ರಚಾರದಲ್ಲಿ ನಡೆದದ್ದು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ ಈಗ ಹೇಳಬಾರದು ಎಂದು ನಗುತ್ತಲೇ ನೆರದಿದ್ದ ಜನರಿಗೆ ಹೇಳಿದರು. ಕಾರ್ಯಕ್ರಮದಲ್ಲಿದ್ದ ಕಾರ್ಯಕರ್ತರು ‘ಹೌದು ಹುಲಿಯಾ’ ಎನ್ನುತ್ತಿದ್ದಂತೆ ನಕ್ಕ ಸಿದ್ದರಾಮಯ್ಯ ಹಾಗೇ ಅನ್ನಬಾರದು ಎಂದರು. ಸಿದ್ದರಾಮಯ್ಯ ಹೋದಲ್ಲೆಲ್ಲಾ ಕಾರ್ಯಕರ್ತರು ‘ಹೌದು ಹುಲಿಯಾ’ ಎನ್ನುವ ಘೋಷವಾಕ್ಯವನ್ನು ಕೂಗುತ್ತಿದ್ದಾರೆ.

    ಇತ್ತೀಚೆಗಷ್ಟೇ ಕಾಗವಾಡ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ‘ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ವೇದಿಕೆಯ ಮುಂಭಾಗದಲ್ಲೇ ಇದ್ದ ಕುಡುಕನೋರ್ವ `ಹೌದು ಹುಲಿಯಾ’ ಎಂದಿದ್ದರು. ಆ ಬಳಿಕ ಕುಡುಕನ `ಹೌದು ಹುಲಿಯಾ’ ಡೈಲಾಗ್ ಸಖತ್ ಟ್ರೆಂಡ್ ಆಗಿತ್ತು.