Tag: ವೈರಲ್ ವಿಡಿಯೋ

  • ಆಸ್ಪತ್ರೆಯಲ್ಲಿ ತನ್ನಷ್ಟಕ್ಕೇ ಚಲಿಸೋ ಸ್ಟ್ರೆಚ್ಚರ್ ವೀಡಿಯೋ ಮಂಗ್ಳೂರು ವಾಟ್ಸಪ್‍ಗಳಲ್ಲಿ ವೈರಲ್- ಇದರ ಅಸಲಿ ಕಥೆ ಏನು?

    ಆಸ್ಪತ್ರೆಯಲ್ಲಿ ತನ್ನಷ್ಟಕ್ಕೇ ಚಲಿಸೋ ಸ್ಟ್ರೆಚ್ಚರ್ ವೀಡಿಯೋ ಮಂಗ್ಳೂರು ವಾಟ್ಸಪ್‍ಗಳಲ್ಲಿ ವೈರಲ್- ಇದರ ಅಸಲಿ ಕಥೆ ಏನು?

    ಮಂಗಳೂರು: ಆಸ್ಪತ್ರೆಯೊಂದರಲ್ಲಿ ಸ್ಟ್ರೆಚ್ಚರ್ ತನ್ನಷ್ಟಕ್ಕೆ ತಾನೇ ಆಚೆ ಈಚೆ ಚಲಿಸುವ ವೀಡಿಯೋ ಮಂಗಳೂರಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ದೃಶ್ಯ ಎಂದೇ ಬಿಂಬಿಸಲಾಗಿದೆ.

    ಈ ವಿಡಿಯೋ ಕೆಲವು ದಿನಗಳಿಂದ ಮಂಗಳೂರು ಜನರ ಫೇಸ್‍ಬುಕ್ ಮತ್ತು ವಾಟ್ಸಪ್‍ಗಳಲ್ಲಿ ಹರಿದಾಡುತ್ತಿದೆ. ಭೂತ- ಪ್ರೇತಗಳ ಬಗ್ಗೆ ನಂಬಿಕೆ ಹೊಂದಿರುವ ಕರಾವಳಿಯಲ್ಲಿ ಈ ವಿಡಿಯೋ ಬಗ್ಗೆ ನಾನಾ ರೀತಿಯ ಮಾತುಗಳು ಕೇಳಿಬರುತ್ತಿದೆ.

    ಆದರೆ ಈ ವಿಡಿಯೋ ಎರಡು ವಾರಗಳ ಹಿಂದೆಯೇ ವೈರಲ್ ಆಗಿತ್ತು. ಮಾರ್ಚ್‍ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಆಗಿದ್ದ ಈ ವೀಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವೀಡಿಯೋ ಅರ್ಜೆಂಟಿನಾದ ಸಾಂತಾ ಫೇ ಯಲ್ಲಿನ ರೊಸಾರಿಯೋ ನಗರದಲ್ಲಿರುವ ಆಸ್ಪತ್ರೆಯೊಂದರ ದೃಶ್ಯಾವಳಿ ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದವು.

    ಈ ವೀಡಿಯೋವನ್ನ ಗಮನಿಸಿದ್ರೆ ಗಾಳಿಯಿಂದ ಸ್ಟ್ರೆಚ್ಚರ್ ಚಲಿಸಿರಲು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತದೆ. ಯಾಕಂದ್ರೆ ಅಲ್ಲಿರುವ ಮರಗಿಡಗಳು ಗಾಳಿಗೆ ಅತ್ತಿತ್ತ ವಾಲಾಡುವುದು ಕಾಣುವುದಿಲ್ಲ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸ್ಟ್ರೆಚ್ಚರ್ ತನ್ನಷ್ಟಕ್ಕೇ ಚಲಿಸುವುದನ್ನು ನೋಡಿ ಕೆಲವರು ದೆವ್ವ ಭೂತ ಎಂದು ಮಾತಾಡಿಕೊಂಡರೆ ಇನ್ನೂ ಕೆಲವರು ಇದು ಯಾರೋ ತಮಾಷೆಗಾಗಿ ಬೇಕಂತಲೇ ಮಾಡಿದ್ದಾರೆಂದು ಅಭಿಪ್ರಾಯ ಪಟ್ಟಿದ್ದರು. ಕೊನೆಗೆ ಇಲ್ಲಿನ ಆರೋಗ್ಯ ಇಲಾಖೆಯವರು ಈ ಎಲ್ಲಾ ವಾದಗಳಿಗೆ ತೆರೆಎಳೆದು, ಆಸ್ಪತ್ರೆಯ ಇಬ್ಬರು ನೌಕರರು ತೆಳುವಾದ ಅರೆಪಾರದರ್ಶಕ ದಾರವನ್ನ ಬಳಸಿ ಈ ರೀತಿ ಮಾಡಿದ್ದಾರೆ ಎಂದು ತಿಳಿಸಿದ್ದಾಗಿ ಮಿರರ್ ಪತ್ರಿಕೆ ಎರಡು ವಾರಗಳ ಹಿಂದೆಯೇ ವರದಿ ಮಾಡಿತ್ತು.

    https://www.youtube.com/watch?v=ApLB4L_-okw

  • 2 ದಿನದಲ್ಲಿ 39 ಲಕ್ಷ ವ್ಯೂ, 53 ಸಾವಿರ ಶೇರ್: ಗೆಳೆಯರ ಜೊತೆ ವರನ ಡ್ಯಾನ್ಸ್ ವೈರಲ್

    2 ದಿನದಲ್ಲಿ 39 ಲಕ್ಷ ವ್ಯೂ, 53 ಸಾವಿರ ಶೇರ್: ಗೆಳೆಯರ ಜೊತೆ ವರನ ಡ್ಯಾನ್ಸ್ ವೈರಲ್

    ಮದುವೆಯಲ್ಲಿ ವಧು ಡ್ಯಾನ್ಸ್ ಮಾಡಿರೋ ವಿಡಿಯೋಗಳು ಆಗಾಗ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರೋದು ಸಾಮಾನ್ಯವಾಗಿದೆ. ಆದ್ರೆ ಇದೀಗ ವಿವಾಹ ವೇದಿಕೆಯಲ್ಲೇ ಸ್ನೇಹಿತರ ಜೊತೆ ವರ ಕೂಡ ಡ್ಯಾನ್ಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

    `ದಿ ಬ್ಯಾಕ್ ಬೆಂಚರ್ಸ್’ ಎಂಬ ಫೇಸ್ಬುಕ್ ಪೇಜ್‍ನಲ್ಲಿ ಫೆ.26ರಂದು ಈ ವಿಡಿಯೋವನ್ನು ಹಾಕಲಾಗಿದ್ದು, ಅಪ್‍ಲೋಡ್ ಆದ 2 ದಿನದಲ್ಲೇ 39 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 52 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದು, ಸುಮಾರು ಏಳೂವರೆ ಸಾವಿರ ಮಂದಿ ಕಮೆಂಟ್ಸ್ ಹಾಕಿದ್ದಾರೆ. ಸುಮಾರು 2 ನಿಮಿಷಗಳ ಈ ವಿಡಿಯೋದಲ್ಲಿ ವರ ತನ್ನ ಸ್ನೇಹಿತರ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ.

    ವಿಡಿಯೋದಲ್ಲಿ ವರ ಬೂದು ಬಣ್ಣದ ಸೂಟ್, ಕತ್ತಿನಲ್ಲಿ ವರಮಾಲೆ ಹಾಕಿಕೊಂಡು ವೇದಿಕೆಗೆ ಬಂದಂತಹ ತನ್ನ ಆತ್ಮೀಯ ಗೆಳೆಯರ ಜೊತೆ ಅದ್ಭುತವಾಗಿ ಗಂಗ್ನಂ ಸ್ಟೈಲಿನಲ್ಲಿ ಸ್ಟೆಪ್ ಹಾಕಿದ್ದಾರೆ. ಇತ್ತ ವಧು ಮತ್ತು ನೆರೆದ ಸಂಬಂಧಿಕರು ಗೆಳೆಯರ ಜೊತೆ ವರ ಡ್ಯಾನ್ಸ್ ಮಾಡುತ್ತಿರುವುದನ್ನ ನೋಡಿಯೇ ಬಾಕಿಯಾಗಿದ್ದಾರೆ. ಕೊನೆಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ವರ ತನ್ನ ವಧುವಿನ ಪಕ್ಕ ಬಂದು ನಿಂತುಕೊಳ್ಳುತ್ತಾರೆ. ಈ ವೇಳೆ ಗೆಳೆಯರು ವೇದಿಕೆಯ ಮಧ್ಯಭಾಗಕ್ಕೆ ಬಂದು ಕುಣಿದು ಕುಪ್ಪಳಿಸಿದ್ದಾರೆ.

    ಮದುವೆ ಮಂಟಪದಲ್ಲೇ ಸಂಭ್ರಮದಲ್ಲಿ ಕುಣಿದ ಈ ವಿಡಿಯೋ ಇದೀಗ ಫೇಸ್ಬುಕ್‍ನಲ್ಲಿ ಭಾರೀ ಸದ್ದು ಮಾಡಿದೆ. ಮಾತ್ರವಲ್ಲದೇ ಕೆಲವರು ಗೇಳೆಯವರು ಅವರ ಗೆಳೆಯರಿಗೆ ಟ್ಯಾಗ್ ಮಾಡುವ ಮೂಲಕ ಅವರ ಮದುವೆಯಲ್ಲಿಯೂ ಇದೇ ರೀತಿ ಸ್ಟೆಪ್ ಹಾಕಬೇಕೆಂದು ಹೇಳಿಕೊಂಡಿದ್ದಾರೆ. ಇನ್ನು ಈ ಮದುವೆ ಎಲ್ಲಿ, ಯಾವಾಗ ನಡೆಯಿತು ಎಂಬುವುದರ ಬಗ್ಗೆ ಮಾಹಿತಿಯಿಲ್ಲ.

    https://www.facebook.com/thebackbenchersofficial/videos/1753254594691503/