Tag: ವೈರಲ್ ವಿಡಿಯೋ

  • ಶಾಲೆಯ ಶೌಚಾಲಯ ಕ್ಲೀನ್ ಮಾಡಿದ ಬಿಜೆಪಿ ಸಂಸದ – ವಿಡಿಯೋ ವೈರಲ್

    ಶಾಲೆಯ ಶೌಚಾಲಯ ಕ್ಲೀನ್ ಮಾಡಿದ ಬಿಜೆಪಿ ಸಂಸದ – ವಿಡಿಯೋ ವೈರಲ್

    ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸಂಸದರೊಬ್ಬರು ಶಾಲೆಯ ಶೌಚಾಲಯವನ್ನ ಸ್ವಚ್ಛಗೊಳಿಸಿದ್ದು, ಭಾರೀ ಸುದ್ದಿಯಾಗಿದೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಸಂಸದರದ ಜನಾರ್ದನ ಮಿಶ್ರಾ ಕೈಯಲ್ಲೇ ಟಾಯ್ಲೆಟ್ ಸ್ವಚ್ಛಗೊಳಿಸಿದ್ದು, ಕಮೋಡ್‍ನಲ್ಲಿ ಕಟ್ಟಿದ್ದ ಮಣ್ಣು ಹಾಗೂ ಕಸವನ್ನ ತೆಗೆದಿದ್ದಾರೆ. ಮಿಶ್ರಾ ಅವರ ಕಾರ್ಯಕ್ಕೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ. ರಾಜಸ್ಥಾನ ಸಚಿವ ಕಾಳಿಚರಣ್ ಶರಾಫ್ ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಿದ್ದ ಘಟನೆಯನ್ನ ಇದರ ಜೊತೆ ಜನ ಹೋಲಿಕೆ ಮಾಡ್ತಿದ್ದಾರೆ.

    ಕಳೆದ ವಾರ ಮಿಶ್ರಾ ಅವರು ತನ್ನ ಕ್ಷೇತ್ರದ ಶಾಲೆಯೊಂದಕ್ಕೆ ಭೇಟಿ ನೀಡಿದ್ದರು. ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯವನ್ನ ಬಳಸದೇ ಹೊರಗಡೆ ಹೋಗ್ತಿದ್ದಿದ್ದು ಕಂಡುಬಂದಿತ್ತು. ಇದರಿಂದ ಕೋಪಗೊಂಡ ಮಿಶ್ರಾ ಶಾಲೆಯ ಶೌಚಾಲಯಗಳಿಗೆ ಹೋಗಿ ಪರಿಶೀಲಿಸಿದ್ರು. ತುಂಬಾ ಸಮಯದಿಂದ ಶೌಚಾಲಯವನ್ನ ಸ್ವಚ್ಛ ಮಾಡದೇ ಇದ್ದಿದ್ದು ಕಾಣಿಸಿತ್ತು.

    ಶಾಲೆಯವರು ಟಾಯ್ಲೆಟ್‍ಗಳನ್ನ ಸರಿಯಾಗಿ ನಿರ್ವಹಣೆ ಮಾಡದಿರೋದನ್ನ ಕಂಡು ಅಸಮಾಧಾನಗೊಂಡ ಮಿಶ್ರಾ, ಸ್ವತಃ ತಾವೇ ಕ್ಲೀನ್ ಮಾಡಿದ್ರು. ಸಂಸದರು ಎಡಗೈ ಮೂಲಕ ಟಾಯ್ಲೆಟ್‍ನಲ್ಲಿ ಸಿಲುಕಿಕೊಂಡಿದ್ದ ಕಸವನ್ನು ತೆಗೆಯೋದನ್ನ ವಿಡಿಯೋದಲ್ಲಿ ಕಾಣಬಹುದು.

    ಸ್ವತಃ ಸಂಸದರೇ ವಿಡಿಯೋವನ್ನ ಟ್ವೀಟ್ ಮಾಡಿದ್ದು, ಇದೀಗ ವೈರಲ್ ಆಗಿದೆ. ಇದನ್ನೂ ಓದಿ: ಬಿಜೆಪಿ ಮಂತ್ರಿಯಿಂದಲೇ ರಸ್ತೆ ಬದಿ ಮೂತ್ರ ವಿಸರ್ಜನೆ – ಫೋಟೋ ವೈರಲ್

  • 60 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಗೆಳೆಯನ ಕಾರಿನಿಂದ ಜಿಗಿದ ಮಹಿಳೆ-ಮುಂದೆ ನಡೆದಿದ್ದು ರೋಚಕ

    60 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಗೆಳೆಯನ ಕಾರಿನಿಂದ ಜಿಗಿದ ಮಹಿಳೆ-ಮುಂದೆ ನಡೆದಿದ್ದು ರೋಚಕ

    ತೈನಾನ್: ಗೆಳೆಯನೊಂದಿಗೆ ಜಗಳ ಮಾಡಿಕೊಂಡು ಚಲಿಸುತ್ತಿರುವ ಕಾರಿನಿಂದ ಪತ್ನಿ ಜಿಗಿದಿರುವ ಘಟನೆ ನೈರುತ್ಯ ತೈವಾನ್ ದೇಶದ ತೈನಾನ್ ನಗರದಲ್ಲಿ ನಡೆದಿದೆ.

    ಈ ಘಟನೆ ಮಧ್ಯಾಹ್ನ 2 ಗಂಟೆಗೆ ಕ್ಷಿನಿಯಿಂಗ್ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆ ಕಾರಿನಿಂದ ಜಿಗಿಯುವ ಎಲ್ಲ ದೃಶ್ಯಗಳು ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ದಂಪತಿ ಕಾರಿನಲ್ಲಿ ಪ್ರಯಾಣಿಸುವಾಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಮಹಿಳೆ ಕಾರು ನಿಲ್ಲುವರೆಗೂ ಕಾಯದೇ ಬಾಗಿಲು ತೆರೆದು ಇಳಿಯಲು ಪ್ರಯತ್ನಿಸಿದ್ದು, ಕಾರು ಒನ್ ವೇ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರಣ ಹಿಂದೆ ಬರುತ್ತಿರುವ ವಾಹನಗಳು ಆಕೆಯ ಹರಿಯುವ ಸಾಧ್ಯತೆಗಳಿದ್ದವು.

    ಮಹಿಳೆ ಕಾರಿನಿಂದ ಇಳಿಯುವ ಪ್ರಯತ್ನ ಮಾಡುತ್ತಿದ್ದ ಆಕೆಯ ಗೆಳೆಯ ಕಾರನ್ನು ರಸ್ತೆಯ ಒಂದು ಬದಿಗೆ ತಂದ ಕಾರಣ ಯಾವುದೇ ಅಪಾಯವಾಗಲಿಲ್ಲ. ಈ ಘಟನೆ ನಡೆಯುವಾಗ ಕಾರು ಗಂಟೆಗೆ 60 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿತ್ತು ಎಂದು ವರದಿಯಾಗಿದೆ.

    ಕಾರು ಚಲಿಸುತ್ತಿದ್ದಂತೆ ಬದಿಯ ಬಾಗಿಲು ತೆರೆದುಕೊಳ್ಳುತ್ತದೆ. ಕಾರಿನಿಂದ ಹೊರ ಬಂದ ಮಹಿಳೆ ಭಯಬೀತಳಾಗಿ ಡೋರನ್ನು ಆಸರೆಯಾಗಿ ಹಿಡಿದುಕೊಂಡು ನೇತಾಡುವುದನ್ನು ಕಾಣಬಹುದು. ಕಾರು ಸ್ವಲ್ಪ ಮುಂದೆ ಚಲಿಸಿದ ಕೂಡಲೇ ಮಹಿಳೆ ಹಾರಿದ್ದು, ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಪೊಲೀಸರ ಮುಂದೆ ತಾನಾಗಿಯೇ ಕೋಪಗೊಂಡು ಕಾರಿನಿಂದ ಹೊರ ಜಿಗಿಯುವ ಪ್ರಯತ್ನ ಮಾಡಿದ್ದೇನೆ ಎಂದು ಮಹಿಳೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ ಇಬ್ಬರ ಜಗಳವನ್ನು ಬಗೆಹರಿಸಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

    https://www.youtube.com/watch?v=rpRDuCG3yhE

  • ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಕೂಗಿದ್ರೂ ಕೇಳಲಿಲ್ಲ, 1 ನಿಮಿಷ… ಅಂತ ಸ್ಮೈಲ್ ಕೊಟ್ಟು ಸೆಲ್ಫಿಗೆ ನಿಂತ ಯುವಕನಿಗೆ ರೈಲು ಡಿಕ್ಕಿ

    ಹೈದರಾಬಾದ್: ಸಖತ್ತಾಗಿ ಸೆಲ್ಫಿ ತೆಗೆಯಬೇಕು ಅಂತ ಹುಚ್ಚು ಸಾಹಸಗಳನ್ನ ಮಾಡಲು ಹೋಗಿ ಅನೇಕ ಜನ ಪ್ರಾಣ ಕಳೆದುಕೊಂಡಿರೋ ಬಗ್ಗೆ ವರದಿಯಾಗ್ತಾನೆ ಇದ್ದರೂ ಅಂತಹ ಘಟನೆಗಳು ಮರುಕಳಿಸುತ್ತಲೇ ಇವೆ. ಸೆಲ್ಫಿ ವಿಡಿಯೋ ಯುವಕನೊಬ್ಬನಿಗೆ ಮಾರಣಾಂತಿಕವಾಗಿ ಪರಿಣಮಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ.

     

    ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗಲೇ ರೈಲು ಡಿಕ್ಕಿಯಾಗಿ ಶಿವ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿವೆ. ಹೈದರಾಬಾದ್‍ನ ಭರತ್‍ನಗರ ರೈಲ್ವೆ ನಿಲ್ದಾಣದಲ್ಲಿ ಭಾನುವಾರದಂದು ಈ ಘಟನೆ ನಡೆದಿದ್ದು, ಬುಧವಾರದಂದು ವಿಡಿಯೋ ವೈರಲ್ ಆದ ಬಳಿಕ ಬೆಳಕಿಗೆ ಬಂದಿದೆ.

    ಯುವಕ ಶಿವಾ ರೈಲ್ವೆ ಹಳಿಯ ಬಳಿ ತನ್ನ ಸ್ಮಾರ್ಟ್‍ಫೋನ್ ಹಿಡಿದು ಸೆಲ್ಫಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಅದೇ ಹಳಿಯಲ್ಲಿ ಎಮ್‍ಎಮ್‍ಟಿಎಸ್(ಮಲ್ಟಿ ಮೋಡಲ್ ಟ್ರಾನ್ಸ್‍ಪೋರ್ಟ್ ಸಿಸ್ಟಮ್) ರೈಲು ಬಂದಿದೆ. ರೈಲು ಬರುತ್ತಿರೋದನ್ನ ನೋಡಿ ಹಿಂದಿನಿಂದ ಒಬ್ಬರು ಏಯ್ ಏಯ್ ಎಂದು ಯುವಕನನ್ನು ಕೂಗಿದ್ದಾರೆ. ಆದ್ರೆ ಆತ ಅದಕ್ಕೆ ಸೊಪ್ಪು ಹಾಕದೆ, ಒಂದು ನಿಮಿಷ ಎಂದು ಹೇಳಿ, ರೈಲು ಸಮೀಪ ಬರುತ್ತಿದ್ದಂತೆ ಸ್ಮೈಲ್ ಕೊಟ್ಟು ನಿಂತಿದ್ದಾನೆ.

    ಜೊತೆಗೆ ತನ್ನ ಕೈ ರೈಲಿನ ಕಡೆ ತೋರಿಸುತ್ತಾ ವಿಡಿಯೋ ಮಾಡುವುದನ್ನ ಮುಂದುವರೆಸಿದ್ದಾನೆ. ರೈಲು ವೇಗವಾಗಿ ಬಂದಿದ್ದು, ಯುವಕನ ಸಮೀಪ ಬಂದಾಗ ಆತನ ಕೈಗೆ ಎಂಜಿನ್ ತಾಗಿ ಆತ ಕೆಳಗೆ ಬಿದ್ದಿದ್ದಾನೆ. ಇವೆಲ್ಲವೂ ಯುವಕನ ಸೆಲ್ಫಿ ವಿಡಿಯೋದಲ್ಲೇ ಸೆರೆಯಾಗಿದೆ. ರೈಲು ಯುವಕನಿಗೆ ಡಿಕ್ಕಿಯಾಗಿ ಆತ ಕೆಳಗೆ ಬೀಳೋದನ್ನ ನೋಡಿದ್ರೆ ಎದೆ ಜಲ್ಲೆನಿಸುವಂತಿದೆ.

    ಈ ಬಗ್ಗೆ ವಿಷಯ ತಿಳಿದ ಕೂಡಲೇ ಆರ್‍ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಯುವಕನನ್ನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆತನ ಸ್ಥಿತಿ ಸುಧಾರಿಸಿದೆ ಎಂದು ಪೊಲಿಸರು ಹೇಳಿದ್ದಾರೆ. ರೈಲ್ವೆ ಪೊಲೀಸರು ಯುವಕನ ವಿರುದ್ಧ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಆದರೂ ಯುವ ಜನಾಂಗ ಈ ರೀತಿಯ ಹುಚ್ಚು ಸಾಹಸ ಮಾಡೋ ಮುನ್ನ ಎಚ್ಚರಿಕೆ ವಹಿಸಬೇಕು ಅನ್ನೋದಕ್ಕೆ ಇದೊಂದು ಸೂಕ್ತ ಉದಾಹರಣೆಯಾಗಿದೆ. ಇದನ್ನೂ ಓದಿ: ರೈಲ್ವೆ ಹಳಿ ಮೇಲೆ ಮಲಗಿ ಸ್ಟಂಟ್ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

    https://www.youtube.com/watch?v=9cEbK3v-0EE

  • ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

    ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡಲ್ಲ: ಬ್ಯಾರಿ ಭಾಷೆಯ ಆಡಿಯೋ ವೈರಲ್

    ಮಂಗಳೂರು: ಉಳ್ಳಾಲ ಟಾರ್ಗೆಟ್ ಗ್ರೂಪ್ ರೂವಾರಿ, ನಟೋರಿಯಸ್ ರೌಡಿ ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿಕೊಳ್ಳುವ ಆಡಿಯೋ ಈಗ ವೈರಲ್ ಆಗಿದೆ.

    ಮೊನ್ನೆ ಶನಿವಾರ ಬೆಳಗ್ಗೆ ಟಾರ್ಗೆಟ್ ಇಲ್ಯಾಸ್ ನ್ನು ಮಂಗಳೂರಿನ ಜೆಪ್ಪು ಕುದ್ಪಾಡಿಯಲ್ಲಿರುವ ಆತನ ಫ್ಲಾಟ್ ಗೆ ಸ್ನೇಹಿತರ ನೆಪದಲ್ಲಿ ನುಗ್ಗಿದ ಆಗಂತುಕರಿಬ್ಬರು ಚೂರಿಯಿಂದ ಇರಿದು ಹತ್ಯೆ ಮಾಡಿದ್ದರು. ಟಾರ್ಗೆಟ್ ಗ್ಯಾಂಗಿನಲ್ಲಿ ಒಂದು ಕಾಲದಲ್ಲಿ ಒಟ್ಟಿಗಿದ್ದವರೇ ಕೃತ್ಯ ನಡೆಸಿದ್ದರೆಂಬ ಶಂಕೆ ವ್ಯಕ್ತವಾಗಿತ್ತು.

    ಇಲ್ಯಾಸ್ ಕಾಂಗ್ರೆಸ್ ಪಕ್ಷದಲ್ಲಿ ಮತ್ತು ಉಳ್ಳಾಲ ಭಾಗದಲ್ಲಿ ಸಕ್ರಿಯವಾಗಿದ್ದರಿಂದ ಮುಸ್ಲಿಂ ಯುವಕರ ಬೆಂಬಲಗಳಿಸಿದ್ದ. ಇದೀಗ ಮಂಗಳೂರು ಮುಸ್ಲಿಮರ ಆಡು ಭಾಷೆ ಬ್ಯಾರಿ ಭಾಷೆಯಲ್ಲಿರುವ ಆಡಿಯೋದಲ್ಲಿ ಇಲ್ಯಾಸ್ ಹಂತಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

    ಇಷ್ಟೇ ಅಲ್ಲದೆ ಇಲ್ಯಾಸ್ ಹತ್ಯೆಗೆ ಪ್ರತೀಕಾರ ತೀರಿಸದೇ ಬಿಡುವುದಿಲ್ಲ. ಮಲಗಿದ ಹೆಣಕ್ಕೆ ಹೊಡೆದು ಸಾಯಿಸಿದ್ದರಲ್ಲ. ಬಿಡುವುದಿಲ್ಲ. ನಿಮ್ಮನ್ನೂ ನಾಯಿ ಕೊಂದ ಹಾಗೆ ಕೊಲ್ತೀವಿ. ಯಾರನ್ನೂ ಉಳಿಸುವುದಿಲ್ಲ ಅಂತ ಇಲ್ಯಾಸ್ ಗೆಳೆಯನೊಬ್ಬ ಹೇಳುತ್ತಿರುವ ಆಡಿಯೋ ಈಗ ಮುಸ್ಲಿಂ ವಾಟ್ಸಪ್ ಗ್ರೂಪ್ ಗಳಲ್ಲಿ ಭಾರೀ ವೈರಲ್ ಆಗಿದೆ. ಇಲ್ಯಾಸ್ ನೇತೃತ್ವದ ಟಾರ್ಗೆಟ್ ಗ್ಯಾಂಗ್ ಸಕ್ರಿಯವಾಗಿತ್ತು ಎಂಬುದಕ್ಕೆ ಅವರೇ ಮಾಡಿಕೊಂಡಿದ್ದ ಎಕ್ಸ್ ಕ್ಲೂಸಿವ್ ವಿಡಿಯೋಗಳು ಲಭ್ಯವಾಗಿದೆ.

    https://www.youtube.com/watch?v=2zDo8oHyHWI

    https://www.youtube.com/watch?v=nu7UjCAWt8o

  • ರೋಗಿಗೆ ಶರ್ಟ್ ಮೇಲೆಯೇ ಇಂಜೆಕ್ಷನ್ ಕೊಡ್ತಾರೆ ಈ ಡಾಕ್ಟರ್- ವಿಡಿಯೋ ವೈರಲ್

    ರೋಗಿಗೆ ಶರ್ಟ್ ಮೇಲೆಯೇ ಇಂಜೆಕ್ಷನ್ ಕೊಡ್ತಾರೆ ಈ ಡಾಕ್ಟರ್- ವಿಡಿಯೋ ವೈರಲ್

    ಮೈಸೂರು: ರೋಗಿಗಳ ಕೈಗೆ ಇಂಜೆಕ್ಷನ್ ನೀಡಬೇಕಾದರೆ ವೈದ್ಯರು ಬಟ್ಟೆಯನ್ನು ಎಳೆದು ಕೊಡುತ್ತಾರೆ. ಆದ್ರೆ ಈ ವೈದ್ಯರು ಮಾತ್ರ ತುಂಬಾ ಡಿಫೆರೆಂಟ್. ರೋಗಿಯ ಧರಿಸಿದ್ದ ಉಡುಪಿನ ಮೇಲಿಂದಲೇ ಇಂಜೆಕ್ಷನ್ ಚುಚ್ಚುತ್ತಾರೆ. ಪ್ಯಾಂಟ್, ಪಂಚೆ, ಶರ್ಟ್, ಟೀ ಶರ್ಟ್ ಏನೇ ಹಾಕಿದ್ರೂ ಅದ್ರ ಮೇಲೆನೇ ಇಂಜೆಕ್ಷನ್ ಚುಚ್ತಾರೆ, ಇದು ವಿಚಿತ್ರ ಅನ್ನಿಸಿದ್ರೂ ಸತ್ಯ.

    ಈ ಡಾಕ್ಟರ್ ಬೇರೆ ಯಾರೂ ಅಲ್ಲ, ಅರಣ್ಯ ಸಚಿವ ರಮಾನಾಥ್ ರೈರ ಖಾಸ ಅಣ್ಣ ಡಾ.ಸತೀಶ್ ಬೆಳ್ಳಪಾಡಿ. ಮೈಸೂರಿನಲ್ಲಿ ಡಾ.ಸತೀಶ್ ಬೆಳ್ಳಪಾಡಿ ‘ಮಂಜುನಾಥ್ ಕ್ಲಿನಿಕ್’ ನಡೆಸುತ್ತಿದ್ದಾರೆ. ರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುವ ಮೂಲಕ ಕಾಮನ್‍ಮ್ಯಾನ್ ಡಾಕ್ಟ್ರು ಅಂತಾನೇ ಫೇಮಸ್ ಆಗಿದ್ದಾರೆ.

    ಡಾ. ಸತೀಶ್ ರೋಗಿಗಳಿಗೆ ನೀಡುವ ಇಂಜೆಕ್ಷನ್ ಸ್ಟೈಲ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    https://youtu.be/iBQI8TlnN4I

  • ಕಪಾಳಕ್ಕೆ ಹೊಡೆದಿದ್ದಕ್ಕೆ ಕಾಂಗ್ರೆಸ್ ಶಾಸಕಿಯ ಕೆನ್ನೆಗೆ ಬಾರಿಸಿದ ಮಹಿಳಾ ಪೊಲೀಸ್ ಪೇದೆ: ವಿಡಿಯೋ ವೈರಲ್

    ಕಪಾಳಕ್ಕೆ ಹೊಡೆದಿದ್ದಕ್ಕೆ ಕಾಂಗ್ರೆಸ್ ಶಾಸಕಿಯ ಕೆನ್ನೆಗೆ ಬಾರಿಸಿದ ಮಹಿಳಾ ಪೊಲೀಸ್ ಪೇದೆ: ವಿಡಿಯೋ ವೈರಲ್

    ಶಿಮ್ಲಾ: ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕಿ ಆಶಾ ಕುಮಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರಿಗೆ ಕಪಾಳಕ್ಕೆ ಹೊಡೆದಿದ್ದು, ಇದರಿಂದ ಕೋಪಗೊಂಡ ಪೇದೆ ಪುನಃ ಕ್ಷಣ ಮಾತ್ರದಲ್ಲೇ ಶಾಸಕಿಯ ಕಪಾಳಕ್ಕೆ ಏಟು ಕೊಟ್ಟಿದ್ದು ವಿಡಿಯೋ ವೈರಲ್ ಆಗಿದೆ.

    ಇಂದು ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಹಿಮಾಚಲ ಪ್ರದೇಶ ಚುನಾವಣೆಯಲ್ಲಿನ ಪಕ್ಷದ ನಿರ್ವಹಣೆ ಕುರಿತ ಪರಾಮರ್ಶನ ಸಭೆಯಲ್ಲಿ ಭಾಗವಹಿಸಲು ಆಶಾಕುಮಾರಿ ಆಗಮಿಸಿದ್ದರು. ಆದರೆ ಸಭೆಯಲ್ಲಿ ಭಾಗವಹಿಸಲು ಪೊಲೀಸರು ತಡೆ ಒಡ್ಡಿದ್ದಕ್ಕೆ ಸಿಟ್ಟಾದ ಆಶಾ ಕುಮಾರಿ ಮಹಿಳಾ ಪೇದೆಯ ಮೇಲೆ ಹಲ್ಲೆ ನಡೆಸಿದ್ದಾರೆ.

    ಆಶಾ ಕುಮಾರಿ ಪಂಜಾಬ್ ರಾಜ್ಯದ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿದ್ದು, ದಾಲ್‍ಹೌಸಿ ಕ್ಷೇತ್ರದ ಶಾಸಕಿಯಾಗಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಆಶಾ ಕುಮಾರಿ, ಪೊಲೀಸ್ ಪೇದೆ ನನ್ನನ್ನು ನಿಂದಿಸಿದಲ್ಲದೇ ತಳ್ಳಿದಳು. ನಾನು ಒಳಗಡೆ ಪ್ರವೇಶಿಸಲು ತಡೆ ಒಡ್ಡಲಾಯಿತು. ನಾನು ಆಕೆಯ ತಾಯಿಯ ವಯಸ್ಸಿನ ಮಹಿಳೆ. ಆದ್ರೆ ನಾನು ಆ ವೇಳೆ ಕೋಪವನ್ನು ನಿಯಂತ್ರಿಸಿಕೊಳ್ಳಬೇಕಿತ್ತು. ಈ ಘಟನೆ ಸಂಬಂಧ ನಾನು ಮಹಿಳಾ ಪೇದೆಯಲ್ಲಿ ಕ್ಷಮೆ ಕೇಳುತ್ತೇನೆ ಅಂತಾ ಅಂದ್ರು.

    ಹಿಮಚಾಲಪ್ರದೇಶ ಚುನಾವಣೆ ಬಳಿಕ ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಚುನಾವಣೆಯ ಫಲಿತಾಂಶದ ಪರಮಾರ್ಶನ ಸಭೆ ನಡೆಸುತ್ತಿದ್ದಾರೆ. ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದು ರಾಹುಲ್ ಗಾಂಧಿಗೆ ಅಸಮಧಾನ ತರಿಸಿದ್ದು, ಬೇರೆಯೊಬ್ಬರ ಮೇಲೆ ಕೈ ಎತ್ತುವುದು ತಪ್ಪಾಗುತ್ತದೆ. ಇದು ಕಾಂಗ್ರೆಸ್ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 68 ಕ್ಷೇತ್ರಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 20 ಮತ್ತು ಪಕ್ಷೇತರ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದರು.

    https://www.youtube.com/watch?v=j1YQrDgW4dM

  • ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕ್ತಿದ್ದ ಸಚಿವರ ವಿಡಿಯೋ ವೈರಲ್

    ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕ್ತಿದ್ದ ಸಚಿವರ ವಿಡಿಯೋ ವೈರಲ್

    ಮುಂಬೈ: ಕೈಯಲ್ಲಿ ಪಿಸ್ತೂಲ್ ಹಿಡಿದು ಚಿರತೆಯನ್ನ ಹುಡುಕುತ್ತಿದ್ದ ತಂಡದ ಜತೆ ಸೇರಿಕೊಂಡು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ವಿವಾದಕ್ಕೆ ಸಿಲುಕಿದ್ದಾರೆ.

    ಇಲ್ಲಿನ ಜಲ್‍ಗಾಂವ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಚಿರತೆಯನ್ನ ಹುಡುಕಲಾಗ್ತಿತ್ತು. ಈ ವೇಳೆ ಗನ್ ಹಿಡಿದು ತಾವೂ ಚಿರತೆಗಾಗಿ ಹುಡುಕಾಡಿದ ಸಚಿವರ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಚಿವರು, ಚಿರತೆಗೆ ಹಾನಿ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಅದನ್ನ ಹೆದರಿಸಿ ಓಡಿಸಬೇಕೆಂದಿದ್ದೆವು ಎಂದು ಹೇಳಿದ್ದಾರೆ.

    ಮಂಗಳವಾರದಂದು ಮಹಾಜನ್ ಅವರು ಚಿರತೆ ದಾಳಿಯಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಸಾಂತ್ವನ ಹೇಳಿ ಹಿಂದಿರುಗುತ್ತಿದ್ದರು. ಈ ವೇಳೆ ವಾರ್ಖೇಡೆ ಗ್ರಾಮದ ನವೇಗಾಂವ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದ ಮಾಹಿತಿ ಅವರಿಗೆ ತಲುಪಿತ್ತು.

    ನಾಮ್ಮ ವಾಹನಗಳಿದ್ದ 400 ಅಡಿ ದೂರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಶೋಧ ಕಾರ್ಯದಲ್ಲಿ ಭಾಗಿಯಾದೆ ಎಂದು ಮಹಾಜನ್ ಹೇಳಿದ್ದಾರೆ. ಸಚಿವರು ಪಿಸ್ತೂಲ್ ಹಿಡಿದು ಚಿರತೆಗಾಗಿ ಹುಡುಕಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಸ್ಥಳೀಯ ಮಾಧ್ಯಮಗಳಲ್ಲೂ ಈ ಬಗ್ಗೆ ವರದಿಯಾಗಿದೆ.

    ಚಿರತೆಯನ್ನು ಕೊಲ್ಲುವ ಉದ್ದೇಶ ಇರಲಿಲ್ಲ, ಆದ್ರೆ ಗಾಳಿಯಲ್ಲಿ ಗುಂಡು ಹಾರಿಸಬೇಕೆಂದಿದ್ದೆ ಅಷ್ಟೆ. ನಾನು ಹೊರತೆಗೆದ ಗನ್‍ಗೆ ಲೈಸೆನ್ಸ್ ಇದೆ. ಜನರನ್ನ ಕೊಂದಿರೋ ಚಿರತೆ ಕಂಡ ಕೂಡಲೇ ಕೊಲ್ಲುವಂತೆ ಅರಣ್ಯ ಸಚಿವ ಸುಧೀರ್ ಮುಂಗಾಂತಿವಾರ್ ಆದೇಶಿಸಿದ್ದರು ಎಂದು ಅರಣ್ಯ ಅಧಿಕಾರಿಗಳು ನಮಗೆ ಹೇಳಿದ್ರು ಎಂದು ಮಹಾಜನ್ ಹೇಳಿದ್ದಾರೆ.

    ನಾನು ಇದುವರೆಗೂ ಒಂದು ಪಾರಿವಾಳವನ್ನೂ ಕೊಂದಿಲ್ಲ. ಅದು ನನ್ನ ಲೈಸೆನ್ಸ್‍ಯುಕ್ತ ಗನ್. ಅದನ್ನ ಕಳೆದ 20 ವರ್ಷಗಳಿಂದ ಜೊತೆಯಲ್ಲಿಟ್ಟುಕೊಂಡು ಓಡಾಡ್ತಿದ್ದೀನಿ. ನಿಯಮಿತವಾಗಿ ಲೈಸೆನ್ಸ್ ನವೀಕರಣ ಮಾಡಿದ್ತೀನಿ ಎಂದು ಹೇಳಿದ್ದಾರೆ.

    ಕೊನೆಗೂ ಈ ತಂಡ ಚಿರತೆಯನ್ನ ಪತ್ತೆಹಚ್ಚುವಲ್ಲಿ ವಿಫಲವಾಗಿದೆ.

  • ಒಂದೇ ಕಾಲಿದ್ರೂ ಕೊಹ್ಲಿಯಂತೆ ಬ್ಯಾಟ್ ಬೀಸ್ತಾರೆ ಈ ಕ್ರಿಕೆಟಿಗ- ವಿಡಿಯೋ ನೋಡಿ

    ಒಂದೇ ಕಾಲಿದ್ರೂ ಕೊಹ್ಲಿಯಂತೆ ಬ್ಯಾಟ್ ಬೀಸ್ತಾರೆ ಈ ಕ್ರಿಕೆಟಿಗ- ವಿಡಿಯೋ ನೋಡಿ

    ಶ್ರೀನಗರ: ಕ್ರಿಕೆಟ್ ಎಲ್ಲಾ ಯುವಕರು ಇಷ್ಟಪಡುವ ಆಟ. ಎಲ್ಲರೂ ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಇನ್ನು ಕೆಲವರು ತಾವು ಬ್ಯಾಟಿಂಗ್ ಮಾಡುವ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ.

    ಕೊಹ್ಲಿ ತಮ್ಮ ಆಕರ್ಷಕ ಹೊಡೆತಗಳ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ನಾವು ಹೇಳಲು ಹೊರಟಿರುವ ಕಾಶ್ಮೀರಿ ಕ್ರಿಕೆಟ್ ಪಟು ಕೇವಲ ಒಂದೇ ಕಾಲನ್ನು ಹೊಂದಿದ್ದರೂ ಆಕರ್ಷಕ ಹೊಡೆತಗಳ ಮೂಲಕ ಸಿಕ್ಸ್, ಫೋರ್ ಬಾರಿಸುತ್ತಾರೆ.

    ಎಲ್ಲರೂ ಈ ಕ್ರಿಕೆಟಿಗನನ್ನು ಕೈಫ್ ಎಂದು ಕರೆಯುತ್ತಾರೆ. ಈ ಹೊಸ ಕಾಶ್ಮೀರಿ ಕ್ರಿಕೆಟಿಗ ಬ್ಯಾಟ್ ಬೀಸುವ ವಿಡಿಯೋವನ್ನು `Whole About Kashmir’ ಎಂಬ ಟ್ವಿಟರ್ ಪೇಜಿನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಈಗ ವೈರಲ್ ಆಗಿದೆ. ಈ ಕ್ರಿಕೆಟಿಗ ಇತರರಿಗೆ ಸ್ಫೂರ್ತಿ, ನಿಮಗೆ ಸಲ್ಯೂಟ್ ಎಂದು ಟ್ವೀಟ್ ಮಾಡಿದ್ದಾರೆ. ವಿಡಿಯೋ ನೋಡಿದವರು ಕ್ರಿಕೆಟಿಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ವಿಡಿಯೋ: ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಇಂಡಿಗೋ ಸಿಬ್ಬಂದಿ

    ವಿಡಿಯೋ: ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಇಂಡಿಗೋ ಸಿಬ್ಬಂದಿ

     

    ಹೈದರಾಬಾದ್: ಅಸಭ್ಯವಾಗಿ ವರ್ತಿಸಿದ್ದಕ್ಕೆ ಯುವಕನನ್ನ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಯೊಬ್ಬರು ತನ್ನ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದ್ದು, ಇದರ ವಿಡಿಯ ಈಗ ವೈರಲ್ ಆಗಿದೆ.

    ಶನಿವಾರದಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಸಿಬ್ಬಂದಿಯ ಕಾಲಿಗೆ ಬಿದ್ದ ಯುವಕ ಮದ್ಯಪಾನ ಮಾಡಿದ್ದ ಎಂದು  ಏರ್ ಲೈನ್ಸ್ ಆರೋಪಿಸಿದೆ. ಮಹಿಳೆ ಆತನಿಗೆ “ನನ್ನ ಕಾಲಿಗೆ ಬೀಳು” ಎಂದು ತೆಲುಗಿನಲ್ಲಿ ಹೇಳೋದನ್ನ ವಿಡಿಯೋದಲ್ಲಿ ಕಾಣಬಹುದು.

    ನಡೆದಿದ್ದೇನು: ಮಹಿಳೆ ತನ್ನ ಬೆಳಗ್ಗಿನ ಶಿಫ್ಟ್ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಲು ಪಾರ್ಕಿಂಕ್‍ನಿಂದ ವಿಮಾನ ನಿಲ್ದಾಣದ ಒಳಗೆ ಹೋಗುತ್ತಿದ್ರು. ಈ ವೇಳೆ ಯುವಕ ಮತ್ತು ಆತನ ಗೆಳೆಯ ಆಕೆಯನ್ನು ಹಿಂಬಾಲಿಸಿದ್ದಾರೆ. ನಂತರ ಮಹಿಳೆ ಟ್ರಾಫಿಕ್ ಪೊಲೀಸ್‍ಗೆ ಈ ಬಗ್ಗೆ ದೂರು ನೀಡಿದ್ದಾರೆ. ಆಗ ಟ್ರಾಫಿಕ್ ಪೊಲೀಸ್ ಇಬ್ಬರನ್ನೂ ವಿಮಾನ ನಿಲ್ದಾಣದ ಪೊಲೀಸ್ ಪೋಸ್ಟ್ ಗೆ ಎಳೆದೊಯ್ದಿದ್ದಾರೆ. ಈ ವೇಳೆ ಒಬ್ಬಾತ, ನಿಮ್ಮ ಕಾಲಿಗೆ ಬೇಕದ್ರೂ ಬೀಳ್ತೀನಿ, ಬಿಟ್ಟುಬಿಡಿ ಎಂದು ಮಹಿಳೆಯ ಬಳಿ ಮನವಿ ಮಾಡಿಕೊಂಡಿದ್ದಾನೆ.

    ಇಬ್ಬರೂ ವಿದ್ಯಾರ್ಥಿಗಳು ಎಂದು ಗೊತ್ತಾದ ಬಳಿಕ ಮಹಿಳೆ ಯಾವುದೇ ದೂರು ದಾಖಲಿಸಲಿಲ್ಲ. ಆದರೆ ಸಾರ್ವನಿಕ ಸ್ಥಳದಲ್ಲಿ ಈ ರೀತಿ ಮಾಡಿದ್ದರಿಂದ ಅವರನ್ನ ಕೆಲವು ಗಂಟೆಗಳ ಕಾಲ ವಶದಲ್ಲಿರಿಸಿಕೊಂಡು ನಂತರ ಬಿಟ್ಟು ಕಳಿಸಲಾಯ್ತು ಎಂದು ಪೊಲೀಸ್ ಅಧಿಕಾರಿ ರಮೇಶ್ ನಾಯ್ಕ್ ಹೇಳಿದ್ದಾರೆ.

    ಮಹಿಳಾ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದರಿಂದ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಲಾಯ್ತು ಎಂದು ಇಂಡಿಗೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    https://www.youtube.com/watch?v=-d9rlBdRhpA

  • ಟ್ರಕ್ ಮುಂದೆ ಓಡಿದ ಬಾಲಕ ಕೂದಲೆಳೆ ಅಂತರದಲ್ಲಿ ಪಾರಾದ- ಎದೆ ಜಲ್ಲೆನಿಸೋ ವಿಡಿಯೋ ನೋಡಿ

    ಟ್ರಕ್ ಮುಂದೆ ಓಡಿದ ಬಾಲಕ ಕೂದಲೆಳೆ ಅಂತರದಲ್ಲಿ ಪಾರಾದ- ಎದೆ ಜಲ್ಲೆನಿಸೋ ವಿಡಿಯೋ ನೋಡಿ

    ಓಸ್ಲೋ: ಬಾಲಕನೊಬ್ಬ ರಸ್ತೆ ದಾಟುವಾಗ ಟ್ರಕ್‍ಗೆ ಅಡ್ಡವಾಗಿ ಓಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ನಾರ್ವೇಯಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಮತ್ತೊಂದು ವಾಹನದ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ. ಜೂನ್‍ನಲ್ಲಿ ಈ ಘಟನೆ ನಡೆದಿದ್ದು, ಡ್ಯಾಶ್‍ಕ್ಯಾಮ್ ಹೊಂದಿದ್ದ ವಾಹನದ ಮಾಲೀಕ ಪಾದಚಾರಿಗಳಿಗೆ ಎಚ್ಚರಿಕೆ ನೀಡೋ ಸಲುವಾಗಿ ಈಗ ವಿಡಿಯೋವನ್ನ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

    ಶಾಲಾ ಬಸ್‍ವೊಂದು ರಸ್ತೆಯಲ್ಲಿ ನಿಲುಗಡೆಯಾಗಿ 5 ಮಕ್ಕಳು ಬಸ್‍ನಿಂದ ಕೆಳಗಿಳಿದಿದ್ದಾರೆ. ನಂತರ ಬಾಲಕನೊಬ್ಬ ಟ್ರಕ್ ಬರುತ್ತಿದ್ದುದು ನೋಡದೆ ರಸ್ತೆ ದಾಟಲೆಂದು ಹೋಗಿದ್ದಾನೆ. ಬಾಲಕನ ಹಿಂದೆಯೇ ಮತ್ತೊಬ್ಬ ವಿದ್ಯಾರ್ಥಿಯೂ ಓಡೋದನ್ನ ಕಾಣಬಹುದು. ದೊಡ್ಡ ಟ್ರಕ್ ಬಂದಿದ್ದನ್ನು ನೋಡಿ ಎರಡನೇ ವಿದ್ಯಾರ್ಥಿ ಅಲ್ಲೇ ನಿಂತಿದ್ದು, ಮೊದಲು ಓಡಿದ ಬಾಲಕ ಮಾತ್ರ ಟ್ರಕ್‍ನಿಂದ ಮುಂದೆ ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ. ಈ ವೇಳೆ ಟ್ರಕ್ ಚಾಲಕನೂ ಬ್ರೇಕ್ ಹಾಕಿದ್ದರಿಂದ ದುರಂತವಾಗೋದು ತಪ್ಪಿದೆ.

    ಒಂದು ವೇಳೆ ಬಾಲಕ ಓಡದೇ ಭಯದಿಂದ ಅಲ್ಲೇ ನಿಂತಿದ್ದರೆ ಅನಾಹುತವೇ ಆಗುತ್ತಿತ್ತು. ಹೀಗಾಗಿ ರಸ್ತೆ ದಾಟುವಾಗ ಪಾದಚಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಮನದಟ್ಟು ಮಾಡಲು ವಾಹನ ಮಾಲೀಕ ಈ ವಿಡಿಯೋ ಹಂಚಿಕೊಂಡಿದ್ದಾರೆ.

    https://www.youtube.com/watch?v=BGc5El65eWY