Tag: ವೈರಲ್ ವಿಡಿಯೋ

  • ಕರ್ತವ್ಯನಿರತ ಎಸ್‍ಪಿಗೆ ಅವಾಜ್ ಹಾಕಿದ ಬಿಜೆಪಿ ಎಂಎಲ್‍ಎ

    ಕರ್ತವ್ಯನಿರತ ಎಸ್‍ಪಿಗೆ ಅವಾಜ್ ಹಾಕಿದ ಬಿಜೆಪಿ ಎಂಎಲ್‍ಎ

    ಲಕ್ನೋ: ಉತ್ತರಪ್ರದೇಶ ರಾಜ್ಯದ ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಕರ್ತವ್ಯ ನಿರತ ಎಸ್‍ಪಿಗೆ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಪೊಲೀಸ್ ಅಧಿಕಾರಿ ಶಾಸಕರನ್ನು ಗುರುತಿಸಲು ವಿಫಲವಾಗಿದ್ದರಿಂದ ಸಿಎಂ ಯೋಗಿ ಆದಿತ್ಯನಾಥ್‍ರ ನಿವಾಸ ಪ್ರವೇಶಕ್ಕೆ ನಿರ್ಬಂಧ ಹಾಕಿದ್ರು. ಇದರಿಂದ ಕೋಪಗೊಂಡ ಶಾಸಕ ಹರ್ಷವರ್ಧನ್ ‘ತುಮ್ ಲಾತೋ ಕೆ ಭೂತ್ ಹೋ, ಲಾತೋಂ ಸೇ ಹಿ ಮಾನತೇ ಹೈ’ (ಕೇವಲ ಅಹಿಂಸೆಯ ಮಾತುಗಳು ಮಾತ್ರ ನಿಮಗೆ ಅರ್ಥವಾಗುತ್ತದೆ) ಎಂದು ನಿಂದಿಸುವ ಮೂಲಕ ಅವಾಜ್ ಹಾಕಿದ್ದಾರೆ.

    ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ (ಉತ್ತರ) ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಹರ್ಷವರ್ಧನ್ ಬಾಜಪೇಯಿ ಪೊಲೀಸ್ ಅಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಗೇಟ್ ಬಳಿಯೇ ತಮ್ಮನ್ನು ತಡೆದಿದ್ದರಿಂದ ಕೋಪಗೊಂಡ ಶಾಸಕರು ಸಾರ್ವಜನಿಕವಾಗಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ನಿಂದಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

  • ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ವಧು ಎಸೆದ ಹೂಗುಚ್ಛಕ್ಕೆ ಮದ್ವೆಗೆ ಬಂದಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲು-ವಿಡಿಯೋ ನೋಡಿ

    ಬೀಜಿಂಗ್: ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ ವಧು ಮೇಲೆ ಹೂಗುಚ್ಛ ಎಸೆಯುವುದು ಒಂದು ಸಂಪ್ರದಾಯ. ಆದ್ರೆ ಚೀನಾದಲ್ಲಿ ನಡೆದ ಮದುವೆಯಲ್ಲಿ ವಧು ಮೇಲೆಸೆದ ಹೂ ಗುಚ್ಛ ಮೇಲ್ಚಾವಣಿಗೆ ತಾಗಿದೆ. ಮೇಲ್ಚಾವಣಿಗೆ ಅಲಂಕಾರಿಕವಾಗಿ ಜೋಡಿಸಲಾಗಿದ್ದ ಟೈಲ್ಸ್ ಗಳು ಕುಸಿದು ಬಿದ್ದಿದೆ.

    ವಧು ಹೂಗುಚ್ಛ ಎಸೆದ ಮೇಲ್ಚಾವಣಿ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ಸಾಂದರ್ಭಿಕ ಚಿತ್ರ

    ಟೈಲ್ಸ್ ಗಳು ಕುಸಿದು ಬೀಳುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ನಿಂತಿದ್ದ ಅತಿಥಿಗಳೆಲ್ಲಾ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಟೈಲ್ಸ್ ಗಳು ಬಿದ್ದಿದರಿಂದ ಕೆಲವು ಅತಿಥಿಗಳು ಗಾಯಗೊಂಡಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವರದಿಯಾಗಿದೆ.

    ಕ್ರಿಶ್ಚಿಯನ್ ಮದುವೆ ಸಂಪ್ರದಾಯದಲ್ಲಿ, ವಧು ಕೈಯಲ್ಲಿ ಸುಂದರವಾದ ಹೂವಿನ ಗುಚ್ಛವೊಂದು ಇರುತ್ತದೆ. ವಧು ತನ್ನ ಮದುವೆ ಬಳಿಕ ಕೈಯಲ್ಲಿರುವ ಹೂಗುಚ್ಛವನ್ನು ಮೇಲೆಸೆಯುತ್ತಾರೆ. ಮೇಲೆಸೆದ ಹೂಗುಚ್ಛವನ್ನು ಹಿಡಿದವರ ಮದುವೆ ಅದೇ ವರ್ಷದಲ್ಲಿ ಆಗುತ್ತೆ ಎಂಬ ನಂಬಿಕೆ ಇದೆ.

    https://www.facebook.com/shanghaiist/videos/10156905046776030/

  • ಆರೋಪಿಯನ್ನ ಹಿಡಿಯಲು ಸಿಂಪಲ್ ಟೆಕ್ನಿಕ್ ಬಳಸಿದ ವಯೋವೃದ್ಧ-ವಿಡಿಯೋ ನೋಡಿ

    ಆರೋಪಿಯನ್ನ ಹಿಡಿಯಲು ಸಿಂಪಲ್ ಟೆಕ್ನಿಕ್ ಬಳಸಿದ ವಯೋವೃದ್ಧ-ವಿಡಿಯೋ ನೋಡಿ

    ಕೊಲಂಬೊ: ಪೊಲೀಸರು ಶಂಕಿತ ಆರೋಪಿಯನ್ನು ಬೆನ್ನಟ್ಟಿ ಬರುವಾಗ ಮಾರ್ಗ ಮಧ್ಯೆ ನಿಂತಿದ್ದ ವೃದ್ಧ ವ್ಯಕ್ತಿಯೊಬ್ಬ ಆತನನ್ನು ಬಂಧಿಸಲು ಸಿಂಪಲ್ ಟೆಕ್ನಿಕ್ ಬಳಸುವ ಮೂಲಕ ಸುದ್ದಿಯಲ್ಲಿದ್ದಾರೆ.

    ಬಿಲ್ ಎಂಬವರೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರಿಗೆ ಸಹಕರಿಸಿದ ವಯೋವೃದ್ಧರು. ಏಪ್ರಿಲ್ 3ರಂದು ಬಿಲ್ ತಮ್ಮ ಮೊಮ್ಮಗಳೊಂದಿಗೆ ನಗರದ ಗೃಂಥಾಲಯಕ್ಕೆ ಆಗಮಿಸಿದ್ದರು. ಗೃಂಥಾಲಯದಿಂದ ಹಿಂದಿರುವ ವೇಳೆ ಪೊಲೀಸ್ ವಾಹನದ ಸೈರನ್ ಕೇಳಿಸಿದ್ದರಿಂದ ರಸ್ತೆ ದಾಟದೇ ಅಲ್ಲಿಯೇ ನಿಂತುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಬಿಲ್ ಪೊಲೀಸ್ ವಾಹನದ ಸೈರನ್ ಕೇಳುತ್ತಿದ್ದಂತೆ ಗೃಂಥಾಲಯದ ಕಟ್ಟಡದ ಮುಂಭಾಗದಲ್ಲಿಯೇ ನಿಂತಿದ್ದಾರೆ. ಎಡಗಡೆಯಿಂದ ಯುವಕನೊಬ್ಬ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದನ್ನು ನೋಡಿದ್ದಾರೆ. ಯುವಕ ತಮ್ಮ ಹತ್ತಿರ ಬರುತ್ತಿದ್ದಂತೆ ಒಂದು ಹೆಜ್ಜೆ ಹಿಂದೆ ಬಂದು ಅವನಿಗೆ ಕಾಲು ಅಡ್ಡ ಹಾಕಿ ಬೀಳಿಸಿದ್ದಾರೆ. ವೇಗದಲ್ಲಿ ಓಡಿ ಬರ್ತಿದ್ದ ಆರೋಪಿ ಆಯತಪ್ಪಿ ಕೆಲ ದೂರ ಹೋಗಿ ಬಿದ್ದಿದ್ದಾನೆ. ಕೂಡಲೇ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಿದ್ದಾರೆ.

    ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಿಲ್, ಗೃಂಥಾಲಯದಿಂದ ಹೊರ ಬಂದಾಗ ಪೊಲೀಸ್ ಸೈರನ್ ಕೇಳಿಸಿತು. ಎಡಗಡೆಯಿಂದ ಒಬ್ಬ ಓಡಿ ಬುರತ್ತಿದ್ದನ್ನು ನೋಡಿ ಪೊಲೀಸರಿಗೆ ಸಹಾಯ ಮಾಡುವ ಉದ್ದೇಶಕ್ಕಾಗಿ ಕಾಲನ್ನು ಅಡ್ಡ ಹಾಕಿ ಆತನನ್ನು ಬೀಳಿಸಿದೆ. ಎಲ್ಲರೂ ಕಳ್ಳರನ್ನು ಬಂಧಿಸಲು ಪೊಲೀಸರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಬಿಲ್ ಆರೋಪಿಯನ್ನು ಹಿಡಿಯಲು ಬಳಸಿರುವ ಟೆಕ್ನಿಕ್ ಗೃಂಥಾಲಯದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಏಪ್ರಿಲ್ 3ರಂದು ಈ ಘಟನೆ ನಡೆದಿದ್ದು, ಗುರುವಾರ (ಮೇ 3)ದಂದು ಕೊಲಂಬೊದ ಓಹಿಯೋ ಪೊಲೀಸರು ವಿಡಿಯೋವನ್ನು ಯೂಟ್ಯೂಬ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಬಂಧಿತ ಶಂಕಿತ ಆರೋಪಿಯಿಂದ ಗ್ಲಾಕ್ 9 ಎಂ.ಎಂ ಪಿಸ್ತೂಲ್ ನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಇನ್ನು ವಿಡಿಯೋ ನೋಡಿದ ಜನರು ಅಜ್ಜನ ಸಿಂಪಲ್ ಟೆಕ್ನಿಕ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಶಾಲೆಗೆ ಹೋಗಲ್ಲ ಅಂದ ಮಗಳನ್ನು ಬೈಕಿನಲ್ಲಿ ಕಟ್ಟಿಕೊಂಡು ಹೋದ ತಂದೆ-ವಿಡಿಯೋ ವೈರಲ್

    ಶಾಲೆಗೆ ಹೋಗಲ್ಲ ಅಂದ ಮಗಳನ್ನು ಬೈಕಿನಲ್ಲಿ ಕಟ್ಟಿಕೊಂಡು ಹೋದ ತಂದೆ-ವಿಡಿಯೋ ವೈರಲ್

    ಬೀಜಿಂಗ್: ಮೊದಲಿಗೆ ಚಿಕ್ಕ ಮಕ್ಕಳು ಶಾಲೆಗೆ ಹೋಗಲು ಹಠ ಮಾಡೋದು ಸಹಜ. ಮಕ್ಕಳ ಮನವೊಲಿಸಿ ಅವರನ್ನು ಶಾಲೆಗೆ ಕಳುಹಿಸಲು ಪೋಷಕರು ನಾನಾ ಕಸರತ್ತು ಮಾಡ್ತಾರೆ. ಅಂತೆಯೇ ಕೆಲ ಮಕ್ಕಳು ದೊಡ್ಡವರಾದ ಮೇಲೆಯೂ ಶಾಲೆ ಅಂದರೆ ದೂರ ಓಡಿ ಹೋಗುವುದುಂಟು.

    ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಮುಖ್ಯವಾಗಿದ್ದರಿಂದ ಪೋಷಕರು ಶಿಕ್ಷೆ ನೀಡಲು ಆರಂಭಿಸುತ್ತಾರೆ. ಕೆಲವೊಮ್ಮೆ ಪೋಷಕರು ನೀಡುವ ಶಿಕ್ಷೆಗಳು ವಿಚಿತ್ರವಾಗಿದ್ದು, ಸಾರ್ವಜನಿಕರ ಟೀಕೆಗೆ ಒಳಪಡುತ್ತವೆ. ಇದನ್ನೂ ಓದಿ: ಚಲಿಸುತ್ತಿದ್ದ ಸ್ಕೂಟಿ ಹಿಂಬದಿಯಲ್ಲಿ ಕುಳಿತು ಹೋಮ್‍ವರ್ಕ್ ಬರೆದ ಬಾಲಕ: ವಿಡಿಯೋ ನೋಡಿ

    ಏಪ್ರಿಲ್ 23ರಂದು ದಕ್ಷಿಣ ಚೀನಾದ ಯುನ್ಫು ಎಂಬಲ್ಲಿ ತಂದೆಯೊಬ್ಬ ತನ್ನ ಮಗಳು ಶಾಲೆಗೆ ಹೋಗ್ತಿಲ್ಲ ಅಂತಾ ಕೋಪದಿಂದ ಆಕೆಯನ್ನು ಬೈಕಿನ ಹಿಂಬದಿಯ ಸೀಟಿಗೆ ಹಗ್ಗದಿಂದ ಕಟ್ಟಿ ಕರೆದುಕೊಂಡು ಹೋಗಿದ್ದಾನೆ. ಜನನಿಬಿಡ ರಸ್ತೆಯಲ್ಲಿ ಮಗಳನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ಜನರು ಮೊಬೈಲ್‍ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ವಿಡಿಯೋ ನೋಡಿದ ಜನರು ತಂದೆಯ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರು ತಂದೆಯನ್ನು ಕರೆಸಿ ಇನ್ನ್ಮುಂದೆ ಈ ರೀತಿ ಆಗಬಾರದೆಂದು ಮೌಖಿಕವಾಗಿ ಎಚ್ಚರಿಕೆ ನೀಡಿ ಕಳು ಹಿಸಿದ್ದಾರೆ ಎಂದು ವರದಿಯಾಗಿದೆ.

    https://youtu.be/EdHAUNaBNpY

  • 4 ವರ್ಷದ ಮಗುವಿಗೆ ಬುದ್ಧಿ ಕಲಿಸಲು ಗರ್ಭಿಣಿಯಿಂದ ನೀಚ ಕೃತ್ಯ- ವಿಡಿಯೋ

    4 ವರ್ಷದ ಮಗುವಿಗೆ ಬುದ್ಧಿ ಕಲಿಸಲು ಗರ್ಭಿಣಿಯಿಂದ ನೀಚ ಕೃತ್ಯ- ವಿಡಿಯೋ

    ಬೀಜಿಂಗ್: 7 ತಿಂಗಳ ಗರ್ಭಿಣಿ ಬಾಲಕನೊಬ್ಬನಿಗೆ ಬುದ್ಧಿ ಕಲಿಸಲು ಕಾಲನ್ನು ಅಡ್ಡವಿಟ್ಟು ಆತನನ್ನು ಬೀಳಿಸಿದ ಘಟನೆ ಚೀನಾದಲ್ಲಿ ನಡೆದಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದ ಜನರು ಗರ್ಭಿಣಿಯನ್ನು ಟೀಕಿಸಿದ್ದಾರೆ.

    4 ವರ್ಷದ ಅಪರಿಚಿತ ಬಾಲಕ ರೆಸ್ಟೋರೆಂಟ್ ಬಳಿ ಓಡಿ ಬರುತ್ತಿದ್ದ. ಓಡಿ ಬಂದು ಬಾಗಿಲಿಗೆ ಹಾಕಿದ ಪ್ಲಾಸ್ಟಿಕ್ ಕರ್ಟ್‍ನ್ ನನ್ನು ತಳ್ಳಿ ಒಳಗೆ ಪ್ರವೇಶಿಸಿದಾಗ ಅಲ್ಲಿಯೇ ತನ್ನ ಪತಿ ಜೊತೆ ಕುಳಿತ್ತಿದ್ದ ಗರ್ಭಿಣಿಗೆ ತಾಗಿ ಆಕೆಯ ಊಟ ಮೈಮೇಲೆ ಚೆಲ್ಲಿತ್ತು. ಆದರೆ ಬಾಲಕನಿಗೆ ಇದರ ಬಗ್ಗೆ ಅರಿವಿರಲಿಲ್ಲ.

    ಬಾಲಕ ಓಡಿ ಹೋಗುವಾಗ ಆತನನ್ನು ಮಹಿಳೆ ಹಾಗೂ ಆಕೆಯ ಪತಿ ಗಮನಿಸುತ್ತಿದ್ದರು. ನಂತರ ಮತ್ತೆ ಬಾಲಕ ರೆಸ್ಟೋರೆಂಟ್‍ನಿಂದ ಹೊರ ಹೋಗುವಾಗ ಮಹಿಳೆ ತನ್ನ ಬಲಗಾಲನ್ನು ಅಡ್ಡವಿಟ್ಟು ಆತನನ್ನು ಬೀಳಿಸಿದ್ದಾಳೆ. ಮಹಿಳೆ ಕಾಲನ್ನು ಅಡ್ಡವಿಟ್ಟಿದ್ದನ್ನು ಬಾಲಕ ಗಮನಿಸದೇ ಓಡಿ ಹೋಗುವಾಗ ಬಿದ್ದಿದ್ದಾನೆ.

    ಬಾಲಕ ಬಿದ್ದಿದ್ದರೂ ಮಹಿಳೆ ಹಾಗೂ ಆಕೆಯ ಪತಿ ಆತನಿಗೆ ಸಹಾಯ ಮಾಡದೇ ಊಟ ಮಾಡಿದ್ದಾರೆ. ನಂತರ ಬಾಲಕನ ಕಿರುಚಿದ ಧ್ವನಿ ಕೇಳಿ ತಾಯಿ ಓಡಿ ಬಂದು ಆತನನ್ನು ಎತ್ತಿದ್ದಾರೆ.

    ಮಾಧ್ಯಮಗಳ ಪ್ರಕಾರ ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ರೆಸ್ಟೋರೆಂಟ್‍ನಲ್ಲಿ ಬಿದ್ದ ಮೇಲೆ ಆಸ್ಪತ್ರೆಯಲ್ಲಿ ಎರಡು ದಿನ ದಾಖಲಾಗಿದ್ದನು. ಘಟನೆ ಹೇಗಾಯ್ತು ಎಂದು ಕೇಳಿದಾಗ, ಬಾಲಕ ಕಾಲನ್ನು ಅಡ್ಡ ಇರಿಸಿ ಬೀಳಿಸಿದ ವಿಚಾರವನ್ನು ತಿಳಿಸಿದ್ದಾನೆ.

    ಮಗನ ಮಾತು ಕೇಳಿ ತಾಯಿ ರೆಸ್ಟೋರೆಂಟ್‍ನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದಾಗ ವಿಡಿಯೋ ನೋಡಿ ದಂಗಾಗಿ ಹೋಗಿದ್ದಾರೆ. ಸತ್ಯಾಂಶ ತಿಳಿದಾಗ ಬಾಲಕನ ತಾಯಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾರೆ.

    ಪೊಲೀಸರು 7 ತಿಂಗಳ ಗರ್ಭಿಣಿಯನ್ನು 10 ದಿನ ಬಂಧಿಸಿ 1000 ಯುವಾನ್ (10,500 ರೂ)ದಂಡ ವಿಧಿಸಿದ್ದಾರೆ. ಮಹಿಳೆ ಗರ್ಭಿಣಿಯಾಗಿದ್ದ ವಿಚಾರ ಮೊದಲೇ ತಿಳಿದಿದ್ದರೆ, ನಾನು ದೂರು ದಾಖಲಿಸುತ್ತಿರಲಿಲ್ಲ. ನನಗೂ ಮಕ್ಕಳಿದ್ದು, ಆಕೆಯ ಮಗುವಿಗೆ ನೋವು ಮಾಡಲು ಇಷ್ಟಪಡುತ್ತಿರಲಿಲ್ಲ ಎಂದು ಬಾಲಕನ ತಾಯಿ ತಿಳಿಸಿದ್ದಾರೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ವಿರುದ್ಧ ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ಮಹಿಳೆ ಬಾಲಕನ ತಾಯಿಯ ಹತ್ತಿರ ಕ್ಷಮೆ ಕೇಳಿ, ಆಸ್ಪತ್ರೆಯ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ತಿಳಿಸಿದ್ದಾಳೆ.

  • ನೋಡನೋಡುತ್ತಿದ್ದಂತೆ ಗೆಳತಿಯನ್ನ ಚಲಿಸ್ತಿದ್ದ ಬಸ್ಸಿನಡಿ ನೂಕಿದ ಯುವತಿ

    ನೋಡನೋಡುತ್ತಿದ್ದಂತೆ ಗೆಳತಿಯನ್ನ ಚಲಿಸ್ತಿದ್ದ ಬಸ್ಸಿನಡಿ ನೂಕಿದ ಯುವತಿ

    ವಾರ್ಸಾ: ಮನುಷ್ಯನಿಗೆ ಸಾವು ಹೇಗೆ ಬರುತ್ತೆ ಎಂಬುದನ್ನು ಹೇಳುವುದು ಅಸಾಧ್ಯ. ಹಾಗೆ ಕೆಲವರು ಸಾವಿನ ಅಂಚಿನವರೆಗೂ ಹೋಗಿ ಬದುಕಿ ಉಳಿದಿರುವ ಘಟನೆಗಳು ನಮ್ಮ ಮುಂದೆ ಸಾಕಷ್ಟು ಇವೆ. ಸಾವಿನ ಮನೆಯ ಬಾಗಿಲು ತಟ್ಟಿ ಬರುವವರಿಗೆ ಅದೃಷ್ಟವಂತರೂ ಎನ್ನಬಹುದು. ಅದೇ ರೀತಿಯಲ್ಲಿ ಯುವತಿಯೊಬ್ಬಳು ಬಸ್ಸಿನ ಅಡಿ ಸಿಲುಕಿದ್ರೂ ಬದುಕಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಏಪ್ರಿಲ್ 12ರಂದು ಯುರೋಪ್ ಖಂಡದ ಪೋಲಂಡ್ ದೇಶದ ಜೆಕೋವಿಸ್-ಡಿಜೈಡಿಸ್ ಎಂಬಲ್ಲಿ ಈ ಘಟನೆ ನಡೆದಿದ್ದು, ಬಸ್ಸಿನಡಿ ಸಿಲುಕಿದ ಯುವತಿ ಬದುಕಿ ಬಂದಿದ್ದಾಳೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸರು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ಇಬ್ಬರು ಯುವತಿಯರು ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದರು. ಈ ವೇಳೆ ರಸ್ತೆ ಪಕ್ಕ ಬರ್ತಿದ್ದ ಯುವತಿಗೆ ಆಕೆಯ ಗೆಳತಿ ಭುಜದಿಂದ ನೂಕಿದ್ದಾಳೆ. ಈ ಸಮಯದಲ್ಲಿ ನಿಂತಿದ್ದ ಬಸ್ ಚಲಿಸಲಾರಂಭಿಸಿದೆ. ಬಸ್ಸಿನ ಕೊನೆಯ ಚಕ್ರಕ್ಕೂ ಕೇವಲ ಒಂದು ಇಂಚಿನಷ್ಟು ಅಂದ್ರೆ ಕೂದಲೆಳೆಯ ಅಂತರದಲ್ಲಿ ಯುವತಿ ಬಚಾವ್ ಆಗಿದ್ದಾಳೆ.

    ಗೆಳತಿ ಬಸ್ ಕೆಳಗೆ ಬಿದ್ದಿದ್ದನ್ನು ನೋಡಿದ ಆಕೆಯ ಗೆಳತಿ ಕೂಡಲೇ ಮೇಲಕ್ಕೆ ಎಬ್ಬಿಸಿ ಅಪ್ಪಿಕೊಂಡು ಸಮಾಧಾನ ಹೇಳಿದ್ದಾಳೆ. ಈ ದೃಶ್ಯಗಳನ್ನು ನೋಡಿದ ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿ ಸಹ ವಾಹನವನ್ನು ನಿಲ್ಲಿಸಿ ಯುವತಿಯ ಯೋಗಕ್ಷೇಮವನ್ನು ವಿಚಾರಿಸಿದ್ದಾರೆ.

    ಯುವತಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಯುವತಿಯನ್ನು ಬಸ್ ಕೆಳಗಡೆ ನೂಕಿದ ಆಕೆಯ ಗೆಳತಿಗೆ ದಂಡ ವಿಧಿಸಲಾಗಿದೆ. ಗೆಳತಿ ಸಲುಗೆಯಿಂದ ತಳ್ಳಿದಳೋ ಅಥವಾ ಉದ್ದೇಶಪೂರ್ವಕವಾಗಿ ನೂಕಿದಳೋ ಎಂಬುವುದು ಖಚಿತವಾಗಿಲ್ಲ. ಈ ಸಂಬಂಧ ತನಿಖೆ ನಡೆಸಲಾಗುತ್ತಿದ್ದು, ಒಂದು ವೇಳೆ ಆರೋಪ ಸಾಬೀತಾದ್ರೆ ನೂಕಿದ ಯುವತಿಗೆ ಒಂದು ವರ್ಷದ ಜೈಲು ಶಿಕ್ಷೆ ಆಗಲಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.

    https://youtu.be/bKAvlgryNSU

  • ಮೊಬೈಲ್ ಕದ್ದನೆಂದು ತಲೆ ಬೋಳಿಸಿ, ಕ್ರೈನ್ ಮೂಲಕ ತಲೆಕೆಳಗಾಗಿಸಿ ಹಲ್ಲೆಗೈದ್ರು

    ಮೊಬೈಲ್ ಕದ್ದನೆಂದು ತಲೆ ಬೋಳಿಸಿ, ಕ್ರೈನ್ ಮೂಲಕ ತಲೆಕೆಳಗಾಗಿಸಿ ಹಲ್ಲೆಗೈದ್ರು

    ಪಾಟ್ನಾ: ಯುವಕನೋರ್ವ ಮೊಬೈಲ್ ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬಿಹಾರ ರಾಜ್ಯದ ದರ್ಬಾಂಗ್ ಜಿಲ್ಲೆಯ ಹಿನ್‍ಗೊಲಿ ಗ್ರಾಮದಲ್ಲಿ ನಡೆದಿದೆ.

    ಅಮರೇಶ್ ಕುಮಾರ್ ಹಲ್ಲೆಗೊಳಗಾದ ಯುವಕ. ಅಮರೇಶ್ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದು, ವಿಕಾಸ್ ಮಿಶ್ರಾ ಎಂಬವರ ಮೊಬೈಲ್ ಕಳ್ಳತನ ಮಾಡಿದ್ದಾನೆ ಅಂತಾ ಆರೋಪಿಸಲಾಗಿತ್ತು. ಮೊಬೈಲ್ ಮಾಲೀಕ ವಿಕಾಸ್ ಯುವಕನ ತಲೆ ಬೋಳಿಸಿ ಕ್ರೈನ್ ಮೂಲಕ ತಲೆಕೆಳಗಾಗಿಸಿ ಹಲ್ಲೆ ನಡೆಸಿದ್ದಾನೆ.

    ಅಮರೇಶ್ ಮೇಲೆ ಹಲ್ಲೆ ನಡೆಯುವ ವೇಳೆ ಸ್ಥಳದಲ್ಲಿ ಗ್ರಾಮಸ್ಥರು ಯಾರು ಆತನ ಸಹಾಯಕ್ಕೆ ಮುಂದಾಗಿಲ್ಲ. ಈ ವೇಳೆ ಕೆಲ ಯುವಕರು ಎಲ್ಲ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರಿಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋ ನೋಡಿದ ಜನರು ವಿಕಾಸ್ ಮಿಶ್ರಾನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

  • ವಧುವಿನ ಮುಖ ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ವರ-ವಿಡಿಯೋ ನೋಡಿ

    ವಧುವಿನ ಮುಖ ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತ ವರ-ವಿಡಿಯೋ ನೋಡಿ

    ಸಾಮನ್ಯವಾಗಿ ಮದುವೆ ಮನೆಯಲ್ಲಿ ಮದುಮಗಳು ಅಳೋದನ್ನು ನಾವು ನೋಡಿರುತ್ತೇವೆ. ತವರು ಮನೆಯಿಂದ ಪತಿಯ ಮನೆಗೆ ಹೊರಡುವ ವಧು ದುಃಖದಿಂದ ಅಳುತ್ತಾರೆ. ವಧುವಿನ ಪೋಷಕರು ಸಹ ಮಗಳನ್ನು ಕಳುಹಿಸಿಕೊಡುವಾಗ ಅಳುತ್ತಾರೆ. ಆದ್ರೆ ವರನೊಬ್ಬ ವಧುವನ್ನು ನೋಡುತ್ತಿದ್ದಂತೆ ಬಿಕ್ಕಿ ಬಿಕ್ಕಿ ಅಳುತ್ತಿರುವ ಹಳೆಯ ವಿಡಿಯೋ ಮತ್ತೆ ವೈರಲ್ ಆಗಿದೆ.

    ವಧುವನ್ನು ವೇದಿಕೆಯ ಮೇಲ್ಗಡೆ ಕರೆತರಲಾಗುತ್ತಿತ್ತು. ವಧುವಿಗಿಂತ ಮುಂಚೆಯೇ ಸ್ಟೇಜ್ ಮೇಲೆ ನಿಂತಿದ್ದ ವರ ತನ್ನ ಪತ್ನಿಯನ್ನು ನೋಡುತ್ತಿದ್ದಂತೆ ಖುಷಿಯಲ್ಲಿ ಕಣ್ಣೀರು ಹಾಕಿದ್ದಾನೆ. ವರ ದಿಡೀರ್ ಅಂತಾ ಅಳುತ್ತಿರೋದನ್ನ ಗಮನಿಸದ ಜನರು ಒಂದು ಕ್ಷಣ ಶಾಕ್ ಆಗಿರುವದಂತೂ ಸತ್ಯ.

    ಈ ವಿಡಿಯೋವನು ಕೋಡಿ ಎಲಸ್ವಿಕ್ ಎಂಬವರು ಜೂನ್ 01, 2015ರಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ರು. ಈ ವಿಡಿಯೋ ಇದೂವರೆಗೂ 4.5 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಕೆಲವು ದಿನಗಳಿಂದ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಒಂದರ ಮೇಲೊಂದರಂತೆ  ಏಳು ಮೊಟ್ಟೆ ಹೊರ ಹಾಕಿದ ನಾಗರಾಜ!

    ಒಂದರ ಮೇಲೊಂದರಂತೆ ಏಳು ಮೊಟ್ಟೆ ಹೊರ ಹಾಕಿದ ನಾಗರಾಜ!

    ತಿರುವನಂತಪುರ : ನಾಗರಹಾವೊಂದು ಕೋಳಿ ಗೂಡಿಗೆ ನುಗ್ಗಿ 8 ಮೊಟ್ಟೆಗಳನ್ನು ನುಂಗಿದ್ದು, ಅದರಲ್ಲಿ 7 ಮೊಟ್ಟೆಗಳನ್ನು ಹೊರ ಹಾಕಿರುವ ವಿಡಿಯೋ ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಏಪ್ರಿಲ್ 12ರಂದು ಕೇರಳದ ಮನಂತವಾಡಿ ತಾಲೂಕಿನ ತಲಪ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಗಿರೀಶ್ ಎಂಬವರ ಮನೆಯ ಕೋಳಿ ಗೂಡಿಗೆ ನಾಗರಹಾವು ನುಗ್ಗಿತ್ತು. ಗೂಡಿನಲ್ಲಿದ್ದ ಕೋಳಿಯನ್ನು ಸಾಯಿಸಿದ ನಾಗರಹಾವು ಅಲ್ಲಿದ್ದ 8 ಮೊಟ್ಟೆಗಳನ್ನು ನುಂಗಿದೆ. ಕೂಡಲೇ ಭಯಬೀತರಾದ ಗಿರೀಶ್ ಉತ್ತರ ವಯನಾಡ್ ಬೇಗೂರು ಅರಣ್ಯ ಪ್ರದೇಶದ ವನ್ಯಜೀವಿ ರಕ್ಷಕರಾಗಿರುವ ವಿ.ಪಿ ಸುಜಿತ್ ಗೆ ವಿಷಯ ತಿಳಿಸಿದ್ದಾರೆ.

    ಮೊಟ್ಟೆಗಳನ್ನು ನುಂಗಿದ ಹಾವು ಚಲಿಸಲಾರದೇ ಗೂಡಿನಲ್ಲಿ ಉಳಿದುಕೊಂಡಿತ್ತು. ಸ್ಥಳಕ್ಕಾಗಮಿಸಿದ ಸುಜಿತ್, ಹಾವನ್ನು ಗೂಡಿನಿಂದ ಹೊರ ತೆಗೆದಿದ್ದಾರೆ. ಗೂಡಿನಿಂದ ಹೊರ ಬಂದ ನಾಗರಾಜ ನುಂಗಿದ 8 ಮೊಟ್ಟೆಗಳ ಪೈಕಿ 7 ನ್ನು ಹೊರಹಾಕಿದ್ದಾನೆ.

    ನಾಗರಹಾವುಗಳು ಮೊಟ್ಟೆಗಳನ್ನು ನುಂಗಿದಾಗ ಅವುಗಳಿಗೆ ಚಲಿಸಲು ಕಷ್ಟವಾಗುತ್ತದೆ. ಈ ವೇಳೆ ಹಾವುಗಳಿಗೆ ಜನರು ತೊಂದರೆ ನೀಡಬಾರದು. ರಕ್ಷಿಸಿರುವ ಹಾವನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಅಂತಾ ಸುಜಿತ್ ತಿಳಿಸಿದ್ದಾರೆ.

  • ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನ ಮರಕ್ಕೆ ಕಟ್ಟಿ ಅರೆನಗ್ನಗೊಳಿಸಿ ಥಳಿಸಿದ ಪತಿ – ವಿಡಿಯೋ ವೈರಲ್

    ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನ ಮರಕ್ಕೆ ಕಟ್ಟಿ ಅರೆನಗ್ನಗೊಳಿಸಿ ಥಳಿಸಿದ ಪತಿ – ವಿಡಿಯೋ ವೈರಲ್

    ಜೈಪುರ: ಪತ್ನಿಯೊಂದಿಗೆ ಸಿಕ್ಕಿಬಿದ್ದ ಯುವಕನನ್ನು ಪತಿ ಗ್ರಾಮದ ಮರವೊಂದಕ್ಕೆ ಕಟ್ಟಿ ಹಾಕಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಬಾಂಸವಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಜೊತೆ ಯುವಕ ಇರೋದನ್ನ ಕಂಡ ಪತಿ ಕೋಪಗೊಂಡು ಆತನನ್ನು ಹೊರತಂದು ಮರಕ್ಕೆ ಕಟ್ಟಿ ಅರೆ ನಗ್ನಗೊಳಿಸಿ ಹೊಡೆದಿದ್ದಾನೆ.

    ಯುವಕನಿಗೆ ಥಳಿಸುತ್ತಿರುವ ಸುದ್ದಿ ಕೆಲವೇ ಕ್ಷಣಗಳಲ್ಲಿ ಗ್ರಾಮದ ತುಂಬೆಲ್ಲಾ ಹರಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಯುವಕನನ್ನು ಬಿಡಿಸಲು ಮುಂದಾಗಿಲ್ಲ. ಈ ವೇಳೆ ಗ್ರಾಮದ ಕೆಲ ಯುವಕರು ತಮ್ಮ ಮೊಬೈಲ್ ನಲ್ಲಿ ಹಲ್ಲೆಯ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ರಕ್ಷಣೆ ಮಾಡಿದ್ದಾರೆ. ಪೊಲೀಸ್ ವಿಚಾರಣೆಯಲ್ಲಿ ಪಂಚಾಯಿತಿ ವಿವಾದಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಯುವಕನನ್ನು ಥಳಿಸಲಾಗಿದೆ. ಈ ಸಂಬಂಧ ಗ್ರಾಮದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ ಅಂತಾ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಹಲ್ಲೆ ಮಾಡಿರುವ ವ್ಯಕ್ತಿ ಮಾತ್ರ ಯುವಕ ನನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಅಂತಾ ದೂರು ನೀಡಿದ್ದರೆ ಇತ್ತ ಯುವಕ ಸಹ ಹಲ್ಲೆ ಮಾಡಿದವರ ವಿರುದ್ಧ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.