Tag: ವೈರಲ್ ವಿಡಿಯೋ

  • ಕುಟುಂಬಸ್ಥರ ಚಿಕಿತ್ಸೆಗಾಗಿ ಭಿಕ್ಷೆ ಬೇಡಿದ ಜನ – ಮೈಸೂರಲ್ಲೊಂದು ಮನಕಲಕುವ ಘಟನೆ

    ಕುಟುಂಬಸ್ಥರ ಚಿಕಿತ್ಸೆಗಾಗಿ ಭಿಕ್ಷೆ ಬೇಡಿದ ಜನ – ಮೈಸೂರಲ್ಲೊಂದು ಮನಕಲಕುವ ಘಟನೆ

    – ನೊಂದ ಕುಟುಂಬದ ಕಣ್ಣೀರಿಗೆ ಕರಗಿದ ಆಸ್ಪತ್ರೆ ಆಡಳಿತ ಮಂಡಳಿ

    ಮೈಸೂರು: ನಂಜನಗೂಡು (Nanjangud) ತಾಲ್ಲೂಕಿನ ಹೆಡತಲೆ ಗ್ರಾಮದಲ್ಲೊಂದು ಮನಕಲಕುವ ಘಟನೆ ನಡೆದಿದೆ. ಆಸ್ಪತ್ರೆ ಹಣಕ್ಕಾಗಿ ಗ್ರಾಮದ ಯುವಕರು, ಸಂಬಂಧಿಗಳ ಜೊತೆ ಸೇರಿ ಕುಟುಂಬವೊಂದು ಭಿಕ್ಷೆ ಬೇಡಿದೆ.

    ಹೌದು. ಇದೇ ತಿಂಗಳ 2ನೇ ತಾರೀಖು ಬದನವಾಳು ಬಳಿ 2 ಬೈಕ್ ನಡುವೆ ಅಪಘಾತ ಆಗಿದ್ದು, 6 ಜನ ಗಾಯಗೊಂಡಿದ್ದರು. ಅದರಲ್ಲಿ ಒಂದೇ ಕುಟುಂಬದ ತಂದೆ ಮಹೇಶ್ (38) ತಾಯಿ ರಾಣಿ (32) ಹಾಗೂ ಮಗಳು ಆದ್ಯ (5) ಗಾಯಗೊಂಡಿದ್ರು. ಇದನ್ನೂ ಓದಿ: ಚಾಮುಂಡಿ ಚಲೋ ಪಾದಯಾತ್ರೆಗೆ ಪೊಲೀಸರ ತಡೆ – ಬಿಜೆಪಿ, ಹಿಂದೂ ಕಾರ್ಯಕರ್ತರು ವಶಕ್ಕೆ

    ತಾಯಿ, ಮಗು ಒಂದೆಡೆ, ತಂದೆ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸದ್ಯ ಮಗು ಆದ್ಯಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗ್ತಿದೆ. 3 ದಿನದ ಚಿಕಿತ್ಸೆಗೆ 1,80,000 ಹಣ ಕಟ್ಟಬೇಕು ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಮಗು ನೋಡಬೇಕು, ವೆಂಟಿಲೇಟರ್‌ನಿಂದ ಹೊರ ತೆಗೆಯಬೇಕು ಅಂದ್ರೆ ಹಣ ಕಟ್ಟಿ ಅಂತಿದ್ದಾರೆ ಅಂತ ಸಂಬಂಧಿಕರು ಆರೋಪಿಸಿದ್ದಾರೆ. ಕೂಲಿ ಮಾಡುವ ಕುಟುಂಬಕ್ಕೆ ಅಷ್ಟು ಹಣ ನೀಡಲು ಆಗದ ಕಾರಣ ಬಡ ಕುಟುಂಬದ ನೆರವಿಗೆ ಗ್ರಾಮದ ಯುವಕರು, ಸಂಬಂಧಿಗಳು ಭಿಕ್ಷೆ ಬೇಡಿದ್ದಾರೆ. ಇದನ್ನೂ ಓದಿ: ಸಚಿವ ಹೆಚ್‌.ಸಿ ಮಹದೇವಪ್ಪ ಹೆಸರಿನಲ್ಲಿ ಬರೋಬ್ಬರಿ 27 ಲಕ್ಷ ರೂ. ವಂಚಿಸಿದ ಮಹಿಳೆ

    ದೊಡ್ಡಮ್ಮ ಮಂಗಳ ಅನ್ನೋವ್ರು ಭಿಕ್ಷೆ ಬೇಡೋ ವಿಡಿಯೋ ವೈರಲ್ ಆಗಿದೆ. ಆದರೆ, ಖಾಸಗಿ ಆಸ್ಪತ್ರೆ (ಬೃಂದಾವನ) ಆಡಳಿತ ಮಂಡಳಿಯ ಖಂಡೇಶ್ ಸ್ಪಷ್ಟನೆ ನೀಡಿದ್ದು, ಆಸ್ಪತ್ರೆ ಬಂದಾಗ ಇಲ್ಲಿನ ಚಿಕಿತ್ಸಾ ವೆಚ್ಚದ ಬಗ್ಗೆ ತಿಳಿಸಲಾಗಿತ್ತು. ಅವರು ಅದಕ್ಕೆ ಒಪ್ಪಿದ್ದರು. ಆ ಕುಟುಂಬದ ಆರ್ಥಿಕ ಪರಿಸ್ಥಿತಿ ನಮಗೆ ಗೊತ್ತಿರಲಿಲ್ಲ. ಭಿಕ್ಷೆ ಬೇಡಿ ಹಣ ತಂದಿದ್ದಾರೆ ಎಂಬುದು ನಮಗೆ ವಿಡಿಯೋ ಮೂಲಕ ತಿಳಿಯಿತು. ಹೀಗಾಗಿ ಈ ವಿಡಿಯೋ ನೋಡಿ ನಾವು ರಿಯಾಯಿತಿ ಕೊಡಲು ತೀರ್ಮಾನ ಮಾಡಿದ್ದೇವೆ. ಮಗು ಐಸಿಯುನಲ್ಲಿದ್ದರೂ ಡಿಸ್ಚಾರ್ಜ್ ಮಾಡಿ ಎನ್ನುತ್ತಿದ್ದಾರೆ ಅಂದಿದ್ದಾರೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ

  • ಕಾಳಿಮಾತೆಯ ಅವತಾರದಲ್ಲಿ ವಿಕೃತಿ ಮೆರೆದ ರ‍್ಯಾಪರ್, ಭುಗಿಲೆದ್ದ ಆಕ್ರೋಶ

    ಕಾಳಿಮಾತೆಯ ಅವತಾರದಲ್ಲಿ ವಿಕೃತಿ ಮೆರೆದ ರ‍್ಯಾಪರ್, ಭುಗಿಲೆದ್ದ ಆಕ್ರೋಶ

    ರ‍್ಯಾಪ್ ಸಾಂಗ್ ಹೆಸರಲ್ಲಿ ರ‍್ಯಾಪರ್ (Canadian Rapper) ಓರ್ವಳು ವಿಕೃತಿ ಮೆರೆದಿದ್ದಾರೆ. ಇಂಡೋ ಕೆನೆಡಿಯನ್ ರ‍್ಯಾಪರ್ ಟಾಮಿ ಜೆನೆಸಿಸ್ (Tommy Genesis) ಟ್ಯಾಲೆಂಟ್ ತೋರಿಸೋ ಬದಲು ವಿರೂಪ ಮನಸ್ಸನ್ನ ಪ್ರದರ್ಶಿಸಿದ್ದಾರೆ. ಕಾಳಿಮಾತೆಯ (Hindu Goddess Kali) ಅವತಾರದಲ್ಲಿ ವಿಕೃತವಾಗಿ ನಡೆದುಕೊಂಡಿದ್ದಾರೆ.

    `ಟ್ರ್ಯೂ ಬ್ಯೂʼ ಹೆಸರಿನ ರ‍್ಯಾಪ್ ಆಲ್ಬಂ ರಿಲೀಸ್ ಆಗಿದ್ದು ಇದೀಗ ಈ ಹಾಡನ್ನ ರಿಪೋರ್ಟ್ ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಹೆಚ್ಚಾಗಿದೆ. ಇಂಥಹ ವಿಕೃತಿಯನ್ನ ಪೋಷಿಸದಂತೆ ತಡೆಯಲು ಕರೆ ಕೊಡಲಾಗುತ್ತಿದೆ. ಇದನ್ನೂ ಓದಿ: ಮಾದಕ ವಸ್ತು ಸೇವನೆ ಆರೋಪ – ಹೆಸರಾಂತ ತಮಿಳು ನಟ ಶ್ರೀಕಾಂತ್ ಅರೆಸ್ಟ್

    ಪ್ರತಿಭೆ ತೋರಿಸೋ ನೆಪದಲ್ಲಿ ವಿಕೃತಿ ಮನಸ್ಸನ್ನ ಪ್ರದರ್ಶಿಸಿದ ಟಾಮಿ ವಿರುದ್ಧ ಆಕ್ರೋಶ ಜೋರಾಗಿದ್ದು ಈ ರ‍್ಯಾಪರ್ ಹಿಂದೂ ಹಾಗೂ ಕ್ರಿಶ್ಚಿಯನ್ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಆರೋಪ ಮಾಡಲಾಗುತ್ತಿದೆ. ಕಾಳಿ ಅವತಾರದಲ್ಲಿದ್ದುಕೊಂಡು ಧೂಮಪಾನ ಮಾಡುವುದು, ಕ್ರಿಶ್ಚಿಯನ್ ಕ್ರಾಸ್‌ನ್ನು ಪ್ರಾಪ್ ರೀತಿಯಲ್ಲಿ ಬಳಸಿ ನೆಕ್ಕಿದ್ದಾರೆ. ಇದನ್ನೂ ಓದಿ: ರಜನಿಕಾಂತ್‌ ʻಕೂಲಿʼ ಚಿತ್ರದ ಫಸ್ಟ್‌ ಸಾಂಗ್‌ಗೆ ಮುಹೂರ್ತ ಫಿಕ್ಸ್

    ಈಕೆಯ ಕೆಟ್ಟ ಮನಸ್ಥಿತಿಗೆ ಧಿಕ್ಕಾರದ ಕೂಗು ಜೋರಾಗಿದ್ದು ಶೀಘ್ರದಲ್ಲೇ ದೂರು ದಾಖಲಾಗುವ ಸಾಧ್ಯತೆ ಇದೆ. ಇಂಥಹ ಅರ್ಥವಿಲ್ಲದ ರ‍್ಯಾಪ್ ಹಾಡುಗಳನ್ನ ಬಹಿಷ್ಕಾರ ಮಾಡುವಂತೆ ಆಗ್ರಹ ಹೆಚ್ಚಾಗಿದ್ದು. ಕೂಡಲೇ ಸೋಶಿಯಲ್ ಮೀಡಿಯಾದಿಂದ ವೀಡಿಯೋ ಡಿಲೀಟ್ ಆಗಬೇಕು, ಜೊತೆಗೆ ವಿಕೃತಿ ಮರೆದ ಟಾಮಿ ವಿರುದ್ಧ ದೂರು ದಾಖಲಾಗಬೇಕು ಎಂಬ ಬೇಡಿಕೆ ಜೋರಾಗಿದೆ. ಇದನ್ನೂ ಓದಿ: ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟ ಸಲ್ಮಾನ್ ಖಾನ್

  • ಪಾಳೆಗಾರ ಓಬಣ್ಣ ನಾಯಕನ ಸಮಾಧಿ ಧ್ವಂಸ ವೇಳೆ ನಾಗರಹಾವು ಅಡ್ಡಿ – ವೀಡಿಯೋ ವೈರಲ್

    ಪಾಳೆಗಾರ ಓಬಣ್ಣ ನಾಯಕನ ಸಮಾಧಿ ಧ್ವಂಸ ವೇಳೆ ನಾಗರಹಾವು ಅಡ್ಡಿ – ವೀಡಿಯೋ ವೈರಲ್

    ಚಿತ್ರದುರ್ಗ: ಮದಿಸಿದ ಆನೆಯ ಮದವನ್ನಡಗಿಸಿ ಮದಕರಿ ಎಂಬ ಖ್ಯಾತಿಗೊಳಿಸಿರುವ ಕೋಟೆನಾಡು ಚಿತ್ರದುರ್ಗದ ರಾಜವೀರ ಮದಕರಿ ನಾಯಕರ ವಂಶಸ್ಥ ರಾಜ ಓಬಣ್ಣ ನಾಯಕರ ಸ್ಮಾರಕವನ್ನು ಚಿತ್ರದುರ್ಗ ತಾಲ್ಲೂಕಿನ ಹಳಿಯೂರು ಬಳಿ ಧ್ವಂಸ ಮಾಡಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ತಾಲೂಕಿನ ಹಳಿಯೂರು ಬಳಿ ಇತ್ತೀಚೆಗೆ ಚಿತ್ರದುರ್ಗ ಮಾಜಿ ನಗರಸಭೆ ಉಪಾಧ್ಯಕ್ಷೆ ರುದ್ರಾಣಿ ಗಂಗಾಧರ ಅವರು ನಿಧಿ ಆಸೆ ಹಾಗೂ ಆಸ್ತಿ ಸಮತಟ್ಟು ಮಾಡುವ ತರಾತುರಿಯಲ್ಲಿ ಪಾಳೆಗಾರ ಓಬಣ್ಣ ನಾಯಕನ ಸಮಾಧಿಯನ್ನು ಧ್ವಂಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರ ವಿರುದ್ಧ ನಾಯಕ ಸಮುದಾಯ ಸಮರ ಸಾರಿದ್ದೂ, ವಾಲ್ಮಿಕಿ ಸಮುದಾಯದ ಸ್ವಾಮೀಜಿ ಕೂಡ ಅವರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದರು. ಇದನ್ನೂ ಓದಿ: ರೈತನ ಮನೆಯಲ್ಲಿ ಕಡೆಗೋಲು ಹಿಡಿದು ಮಜ್ಜಿಗೆ ತಯಾರಿಸಿದ ಬಿ.ಸಿ ಪಾಟೀಲ್

    ಇದೀಗ ಅದರ ಬೆನ್ನಲ್ಲೇ ರುದ್ರಾಣಿ ಗಂಗಾಧರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರುದ್ರಾಣಿಯವರು ಖರೀಧಿಸಿದ್ದ ಜಮೀನಿನಲ್ಲಿದ್ದ ಸ್ಮಾರಕವನ್ನು ಧ್ವಂಸ ಮಾಡುವ ವೇಳೆ ನಾಗರಹಾವು ಪ್ರತ್ಯಕ್ಷವಾಗಿದ್ದು, ಸ್ಮಾರಕ ಧ್ವಂಸ ಮಾಡಲು ಅಡ್ಡಿ ಪಡಿಸಿದೆ. ಆದರೂ ರುದ್ರಾಣಿಯವರು ಹಾವು ಹಿಡಿಯುವವರನ್ನು ಕರೆಸಿ ಸಮಾಧಿಯೊಳಗಿದ್ದ ನಾಗರಹಾವನ್ನು ಹಿಡಿಸಿ ಬೇರೆಡೆಗೆ ಸ್ಥಳಾಂತರಿಸಿ ಸಮಾಧಿ ದ್ವಂಸ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ಮಾತಿನ ಮೇಲೆ ಹಿಡಿತ ಇಲ್ಲ: ವಿಶ್ವನಾಥ್ ಕಿಡಿ

    ಸಮಾಧಿಯೊಳಗಿದ್ದ ನಾಗರಹಾವು ಹಿಡಿಯುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮಾಧಿಯೊಳಗೆ ಸಿಕ್ಕಂತಹ ನಾಗರಹಾವನ್ನು ಸ್ನೇಕ್ ಚೇತನ್ ಅವರು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆಂದು ತಿಳಿದು ಬಂದಿದೆ.

  • ನೆಚ್ಚಿನ ನಟನನ್ನು ಮಾತಾಡಿಸುತ್ತಾ ವೀಡಿಯೋ ಕಾಲ್‍ನಲ್ಲೇ ಗಳಗಳನೇ ಅತ್ತ ವೃದ್ಧೆ!

    ನೆಚ್ಚಿನ ನಟನನ್ನು ಮಾತಾಡಿಸುತ್ತಾ ವೀಡಿಯೋ ಕಾಲ್‍ನಲ್ಲೇ ಗಳಗಳನೇ ಅತ್ತ ವೃದ್ಧೆ!

    – ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್
    – ಅಜ್ಜಿಯ ವೀಡಿಯೋ ನೋಡಿ ನೆಟ್ಟಿಗರೂ ಕಣ್ಣೀರು

    ಹೈದರಾಬಾದ್: ವೃದ್ಧೆ ಅಭಿಮಾನಿಯೊಬ್ಬರ ಆಸೆಯನ್ನು ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಈಡೇರಿಸಿದ್ದಾರೆ. ಈ ಮೂಲಕ ಅಭಿಮಾನಿಯ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

    ರುಕ್ಮಿಣಿ ಮಾಮಿಯವರು ಮೋಹನ್ ಲಾಲ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ನೋಡುವ ಬಯಕೆಯನ್ನು ವೀಡಿಯೋ ಮೂಲಕ ಹೊರಹಾಕಿದ್ದರು. ಈ ಅಜ್ಜಿಯ ವೀಡಿಯೋವನ್ನು ಅಭಿಮಾನಿಗಳು ನಟನಿಗೆ ತಲುಪಿಸಿದ್ದಾರೆ. ಈ ಹೃದಯ ಸ್ಪರ್ಶಿ ವೀಡಿಯೋ ನೋಡಿದ ನಟ ಮೋಹನ್‌ ಲಾಲ್‌, ರುಕ್ಮಿಣಿ ಮಾಮಿಯವರಿಗೆ ವೀಡಿಯೋ ಕಾಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: ನೀರಜ್ ಚೋಪ್ರಾ ಬ್ರ್ಯಾಂಡ್‍ನ ಜೆರ್ಸಿ ನೀರಿನ ಬಾಟಲಿ ಮಾರುಕಟ್ಟೆಗೆ

    https://twitter.com/MohanlalMFC/status/1439976831768150016

    ರುಕ್ಮಿಣಿ ಮಾಮಿ ಮೂಲತಃ ಕೇರಳ ತ್ರಿಶೂರಿನ ಪುಂಕನ್ನಂಲ್ಲಿರುವ ಅನಾಥಾಶ್ರಮದಲ್ಲಿ ನೆಲೆಸಿದ್ದಾರೆ. ದೇವಸ್ಥಾನದ ಅರ್ಚಕರಾಗಿದ್ದ ಆಕೆಯ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸದಾ ಮೋಹನ್ ಲಾಲ್ ಬಗ್ಗೆ ಮಾತನಾಡುತ್ತಿದ್ದ ಆಕೆಯನ್ನು ಜೊತೆಗಿದ್ದವರು ಚುಡಾಯಿಸುತ್ತಿದ್ದರು. ಇದರ ಬಗ್ಗೆ ಅಳಲು ತೋಡಿಕೊಂಡಿರುವ ರುಕ್ಮಿಣಿ ಮಾಮಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ಐಪಿಎಲ್‍ನಲ್ಲಿ ವಾರ್ನರ್ ದಾಖಲೆ ಹಿಂದಿಕ್ಕಿದ ಕನ್ನಡಿಗ ಕೆ.ಎಲ್ ರಾಹುಲ್

    ಇದನ್ನು ಅರಿತ ನಟ ಮೋಹನ್ ಲಾಲ್, ಅಜ್ಜಿಯ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತನಾಡಿ ಸಂತಸ ಮೂಡಿಸಿದ್ದಾರೆ. ಅಲ್ಲದೆ ಕೋವಿಡ್ ಕಡಿಮೆಯಾದ ನಂತರ ಅಜ್ಜಿಯನ್ನು ಭೇಟಿಯಾಗುವ ಭರವಸೆಯನ್ನು ಕೂಡ ನೀಡಿದ್ದಾರೆ. ಸದ್ಯ ಹೈದರಾಬಾದ್‍ನಲ್ಲಿ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ನಟ ಮೋಹನ್ ಲಾಲ್, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  • ಗಾಳಿಪಟದ ದಾರ ಸಿಲುಕಿ ವ್ಯಕ್ತಿಗೆ ಗಂಭೀರ ಗಾಯ – ವಿಡಿಯೋ ವೈರಲ್

    ಗಾಳಿಪಟದ ದಾರ ಸಿಲುಕಿ ವ್ಯಕ್ತಿಗೆ ಗಂಭೀರ ಗಾಯ – ವಿಡಿಯೋ ವೈರಲ್

    ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಹಠಾತ್ ಗಾಳಿಪಟದ ದಾರ ಸಿಲುಕಿ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ನಗರದ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದ್ದು, ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ತಡರಾತ್ರಿ ನಗರದ ಆಡುಗೋಡಿ ಸಮೀಪದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.

    https://twitter.com/ibharatbantanal/status/1408273265911422981

    ಈ ಸಂದರ್ಭದಲ್ಲಿ ಆಡುಗೋಡಿ ಸಂಚಾರ ಠಾಣೆ ಮುಂಭಾಗದ ರಸ್ತೆಯಲ್ಲಿ ಏಕಾಏಕಿ ಗಾಳಿಪಟದ ದಾರ ಕತ್ತಿಗೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಕತ್ತಿನ ಭಾಗಕ್ಕೆ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ಕತ್ತಿಗೆ ಸಿಲುಕಿದ ದಾರವನ್ನು ತಪ್ಪಿಸಲು ಕೈಯಿಂದ ದಾರ ಎಳೆದಾಗ ಕೈಗೂ ತೀವ್ರ ಸ್ವರೂಪದ ಗಾಯವಾಗಿದ್ದು, 2 ಬೆರಳುಗಳು ತುಂಡಾಗುವ ಹಂತಕ್ಕೆ ಬಂದಿವೆ.

    ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಡೆದಿರುವ ಘಟನೆಯ ಬಗ್ಗೆ ಗಾಯಗೊಂಡಿರುವ ವ್ಯಕ್ತಿ ವಿವರಿಸಿದ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಗಾಳಿಪಟದ ದಾರದಿಂದ ವ್ಯಕ್ತಿಗೆ ಗಾಯ, ನೆಲಕ್ಕೆ ಚಿಮ್ಮಿದ ನೆತ್ತರು

    ಗಾಯಾಳು ಘಟನೆ ಬಗ್ಗೆ ವಿವರಿಸಿದ ವೈರಲ್ ವಿಡಿಯೋದಲ್ಲಿ, ಅಧಿಕಾರಿಗಳು, ಜನಪ್ರತಿನಿಧಿಗಳು ದಯವಿಟ್ಟು ಎಚ್ಚೆತ್ತುಕೊಂಡು ಗಾಳಿಪಟವನ್ನು ನಿಷೇಧ ಮಾಡಿ. ಇದರಿಂದ ಮನುಷ್ಯರಿಗೂ, ಪ್ರಾಣಿ ಪಕ್ಷಿಗಳಿಗೂ ಅಪಾಯವಿದೆ. ನಾನು ಅಪಾಯದಿಂದ ಪಾರಾಗಿದ್ದೇನೆ, ಚಿಕ್ಕ ಹುಡುಗರಾಗಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಊಹಿಸಲು ಕಷ್ಟವಾಗುತ್ತದೆ. ನಾನು ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸಿಕೊಂಡೇ ಹೋಗುತ್ತಿದ್ದೆ. ಆದ್ದರಿಂದ, ಸಂಬಂಧಿಸಿದ ಅಧಿಕಾರಿಗಳು ಈ ವಿಷಯದ ಬಗ್ಗೆ ಗಮನಹರಿಸುವಂತೆ ಮನವಿ ಗಾಯಾಳು ಮನವಿ ಮಾಡಿದ್ದಾರೆ.

  • 6 ಅಡಿ ಅಂತರ ಇರೋ ಡ್ರೆಸ್ ತಯಾರಿಸಿದ ಡಿಸೈನರ್ – ವಿಡಿಯೋ ನೋಡಿ

    6 ಅಡಿ ಅಂತರ ಇರೋ ಡ್ರೆಸ್ ತಯಾರಿಸಿದ ಡಿಸೈನರ್ – ವಿಡಿಯೋ ನೋಡಿ

    ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಪಾರಾಗಲು ಸಾಮಾಜಿಕ ಅಂತರವೇ ಸದ್ಯಕ್ಕೆ ಇರುವ ಏಕೈಕ ಔಷಧಿ. ಇದನ್ನೇ ಸ್ಫೂರ್ತಿ ಪಡೆದ ಡಿಸೈನರ್ ಶೇ ಸಾಮಾಜಿಕ ಅಂತರದ ಉಡುಗೆಯನ್ನು ತಯಾರಿಸಿದ್ದಾರೆ.

    ಸಾಮಾಜಿಕ ಅಂತರ ಮಾನದಂಡಗಳಿಗೆ ಅನುಗುಣವಾಗಿ ಆರು ಅಡಿ ತ್ರಿಜ್ಯವನ್ನು ಹೊಂದಿರುವ ಉಡುಪನ್ನು ತಯಾರಿಸಲಾಗಿದೆ. ಈ ಉಡುಪು ಹಗುರ ಮತ್ತು ಚಕ್ರಗಳಲ್ಲಿ ಉರುಳುತ್ತದೆ. ಈ ಉಡುಪಿನ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by ♡ Shay ♡ (@crescentshay)

    12-ಅಡಿ ಹೂಪ್‍ಸ್ಕರ್ಟ್‍ಗಾಗಿ ಟ್ಯೂಲ್ ನೆಟಿಂಗ್ ಅನ್ನು ಬಳಸಲಾಗಿದೆ. ಏಕೆಂದರೆ ಹಗುರ ಮತ್ತು ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ನೆಟಿಂಗ್ ಬಟ್ಟೆಯನ್ನು ಬಳಸುವುದರಿಂದ ಸುತ್ತಲು ವೃತ್ತಾಕಾರದಲ್ಲಿ ಹರಡಿಕೊಳ್ಳುತ್ತದೆ. ಇಷ್ಟು ದೊಡ್ಡ ಗಾತ್ರದ ಸ್ಕರ್ಟ್ ಮಾಡಲು ಸಾಕಷ್ಟು ಫ್ಯಾಬ್ರಿಕ್ ನನ್ನು ಬಳಸಲಾಗಿದೆ. ಈ ಬಟ್ಟೆಯನ್ನು ತೊಟ್ಟು ನಡೆಯಲು ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ಉಡುಪಿನ ಕೆಳ ಭಾಗದಲ್ಲಿ ಚಕ್ರವನ್ನು ಅಳವಡಿಸಲಾಗಿದೆ.

    ಹೆಜ್ಜೆ ಹಾಕಿ ಮುಂದೆ ಹೋದಂತೆ ಬಟ್ಟೆಗೆ ಹಾಕಿರುವ ಚುಕ್ರಗಳು ಮುಂದೆ ಹೋಗುತ್ತವೆ. ಒಬ್ಬರಿಂದ ಇನ್ನೊಬ್ಬರು 6 ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬಹುದಾಗಿದೆ. ಅಷ್ಟೊಂದು ದೊಡ್ಡ ಗಾತ್ರದಲ್ಲಿ ಬಟ್ಟೆ ಹರಡಿಕೊಳ್ಳುತ್ತದೆ. ಎಡ ಭಾಗದಲ್ಲಿ 6 ಅಡಿ ಅಂತರ ಮತ್ತು ಬಲ ಭಾಗದಲ್ಲಿ 6 ಅಡಿ ಅಂತರವನ್ನು ಹೊಂದಿದೆ.

     

    View this post on Instagram

     

    A post shared by ♡ Shay ♡ (@crescentshay)

    ಶೇ ಉಡುಪನ್ನು ತಯಾರಿಸುವ ವಿಡಿಯೋ ಮತ್ತು ಫೋಟೋ ಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಉಡುಗೆ ತನ್ನ ಮನೆಯ ಒಳಗಡೆ ತಯಾರಿಸಲು ಆಗದ ಕಾರಣ ತನ್ನ ಮನೆಯ ಹೊರಗೆ ಉಡುಪನ್ನು ಜೋಡಿಸಿ ತೋರಿಸಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬೇಕಾಗುವ ಮಾದರಿಯನ್ನು ಈ ಉಡುಪು ಹೊಂದಿದೆ ಎಂದು ಶೀರ್ಷಿಕೆ ನೀಡುವ ಮೂಲಕವಾಗಿ ಶೇ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಬಟ್ಟೆಯನ್ನು ತಯಾರಿಸಲು ಎರಡು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಆದರೂ ಹಿಡಿದ ಕೆಲಸವನ್ನು ಬಿಡದೆ ಸಾಮಾಜಿಕ ಅಂತರ ಕಾಪಾಡುವ ಉಡುಪನ್ನು ಮಾಡುವಲ್ಲಿ ಮೂರನೇ ಪ್ರಯತ್ನದಲ್ಲಿ ಅಂತಿಮವಾಗಿ ಯಶಸ್ವಿಯಾಗಿದ್ದಾರೆ. ಸತತ 2 ತಿಂಗಳು ಸಮಯ ತೆಗೆದುಕೊಂಡು ಈ ಉಡುಪನ್ನು ತಯಾರಿಸಿದ್ದಾರೆ.

  • ಬಾವಿಯಲ್ಲಿ ಬಿದ್ದ ಬೆಕ್ಕಿನ ಪ್ರಾಣ ರಕ್ಷಿಸಿದ ರೈತ

    ಬಾವಿಯಲ್ಲಿ ಬಿದ್ದ ಬೆಕ್ಕಿನ ಪ್ರಾಣ ರಕ್ಷಿಸಿದ ರೈತ

    ಗದಗ : ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿ ನರಳುತ್ತಿದ್ದ ಬೆಕ್ಕಿನ ಪ್ರಾಣ ರೈತರೊಬ್ಬರು ಉಳಿಸಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಬಾವಿಯ ಪೊದೆಯಲ್ಲಿ ಬೆಕ್ಕು ಸಿಲುಕಿಕೊಂಡಿತ್ತು. ಮೂರು ದಿನಗಳಿಂದ ಬಾವಿಯಲ್ಲಿ ಸಿಲುಕಿ ನರಳುತ್ತಿದ್ದ ಬೆಕ್ಕಿನ ಧ್ವನಿ ಕೇಳಿ ರೈತ ಮಹಾಂತೇಶ ಬೆಕ್ಕನ್ನು ಕಾಪಾಡಿ ಮಾನವೀಯತೆ ಮೆರೆದಿದ್ದಾರೆ. ಮೂರು ದಿನಗಳಿಂದ ಬಾವಿಯಲ್ಲಿ ಬಿದ್ದಿರುವ ಬೆಕ್ಕು ಸಾವು ಬದಕಿನ ಮಧ್ಯೆ ಹೊರಾಟ ನಡೆಸುತ್ತಿತ್ತು. ಬಾವಿಯ ಒಳಗಿರುವ ಪೊದೆಗೆ ಬಂದು ತನ್ನ ಪ್ರಾಣ ಉಳಿಸಿಕೊಂಡಿತ್ತು. ಬಾವಿಯಿಂದ ಮೇಲೆ ಬರಲಾರದೇ ಬೆಕ್ಕು ನರಳಾಡುತ್ತಿತ್ತು.

    ರೈತ ಮಹಾಂತೇಶ್ ಪ್ರಾಣದ ಹಂಗು ತೊರೆದು ಬಾವಿ ಒಳಗೆ ಇಳಿದು ಬೆಕ್ಕಿನ ಪ್ರಾಣ ಉಳಿಸಿದ್ದಾರೆ. ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಪ್ರಾಣಿ ರಕ್ಷಣೆ ಮಾಡಿ ಮಾನವೀಯತೆ ಮೆರೆದಿರುವ ರೈತ ಮಾಹಂತೇಶ್ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಸಿನಿಮಾ ಡೈಲಾಗ್ ಹೇಳಿ ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿಯ ವೀಡಿಯೋ ವೈರಲ್

    ಸಿನಿಮಾ ಡೈಲಾಗ್ ಹೇಳಿ ಸಂಕಷ್ಟಕ್ಕೆ ಸಿಲುಕಿದ ಅಧಿಕಾರಿಯ ವೀಡಿಯೋ ವೈರಲ್

    ಭೋಪಾಲ್: ಶೋಲೆಯ ಗಬ್ಬರ್ ಸಿಂಗ್ ಡೈಲಾಗ್ ಹೇಳಿ ಪೊಲೀಸ್ ಅಧಿಕಾರಿಯೊಬ್ಬರು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಭೋಪಾಲ್‍ನ ಮಧ್ಯಪ್ರದೇಶದಲ್ಲಿ ನಡೆದಿದೆ.

    ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿ ಕೆ.ಎಲ್ ದಾಂಗಿ ಅವರು ಬಾಲಿವುಡ್ ಸಿನಿಮಾವಾದ ಶೋಲೆಯ ಗಬ್ಬರ್‍ಸಿಂಗ್ ಪಾತ್ರದ ಡೈಲಾಗ್ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 15 ಸೆಕೆಂಡ್‍ಗಳ ಈ ವಿಡಿಯೋ ಪೊಲೀಸ್ ಅಧಿಕಾರಿಗೆ ಸಂಕಷ್ಟ ತಂದಿದೆ.

    ಪೊಲೀಸ್ ಅಧಿಕಾರಿಯ ಈ ವಿಡಿಯೋ ಮೇಲಾಧಿಕಾರಿಗಳ ಗಮನಕ್ಕೆ ಬಂದಿದ್ದು, ದಾಂಗಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ವಿಚಾರವಾಗಿ ಪ್ರಾಥಮಿಕ ತನಿಖೆ ನಂತರ ಮುಂದಿನ ಕ್ರಮವನ್ನು ಕೈ ಗೊಳ್ಳಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ಸಿಂಗ್ ಹೇಳಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಜಾಬುವಾ ಜಿಲ್ಲೆಯ ಕಲ್ಯಾಣಪುರ ಠಾಣೆ ಪೊಲೀಸ್ ಅಧಿಕಾರಿ ಕೆ.ಎಲ್ ದಾಂಗಿ ಕರ್ತವ್ಯದಲ್ಲಿದ್ದ ವೇಳೆ ಪೊಲೀಸ್ ಜೀಪ್‍ನ ಮೆಗಾಫೋನ್‍ನಲ್ಲಿ ಗಬ್ಬರ್ ಸಿಂಗ್ ಡೈಲಾಗ್‍ನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ಮಲಗು ಮಗು, ಇಲ್ಲಾ ಅಂದ್ರೆ ಗಬ್ಬರ್ ಬರ್ತಾನೆ (ಸೋಜಾ ಬೇಟಾ, ನಹೀ ತೋ ಗಬ್ಬರ್ ಆಜಾಯೇಗಾ) ಎಂಬ ಬಾಲಿವುಡ್‍ನ ಶೋಲೆ ಸಿನಿಮಾದ ಫೇಮಸ್ ಡೈಲಾಗ್ ಅನ್ನು ಮಗು ಅತ್ತರೆ ಅಮ್ಮ ಹೇಳ್ತಾಳೆ. ಮಗು ಮಲಗು ಮಗು, ಇಲ್ಲಾಂದ್ರೆ ದಾಂಗಿ ಬರ್ತಾನೆ ಎಂದು ಬದಲಾಯಿಸಿಕೊಂಡು ಸ್ಪೀಕರ್ ಮೂಲಕ ಹೇಳಿದ್ದಾರೆ. ಇದೀಗ ಈ 15 ಸಕೆಂಡ್‍ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಟ್ರಕ್ ನಿಲ್ಲಿಸಿ ಸೊಂಡಿಲು ಹಾಕಿ ಬಾಳೆಹಣ್ಣು ತಿಂದ ಗಜರಾಜ

    ಟ್ರಕ್ ನಿಲ್ಲಿಸಿ ಸೊಂಡಿಲು ಹಾಕಿ ಬಾಳೆಹಣ್ಣು ತಿಂದ ಗಜರಾಜ

    ನವದೆಹಲಿ: ಆನೆಯೊಂದು ಚಲಿಸುತ್ತಿರುವ ಟ್ರಕ್‍ಗೆ ಅಡ್ಡಹಾಕಿ ತನ್ನ ಸೊಂಡಿಲಿನಿಂದ ಒಳಗೆ ಇರುವ ಬಾಳೆಹಣ್ಣನ್ನು ತೆಗೆದುಕೊಂಡು ತಿಂದಿರುವ ವಿಡಿಯೋ ವೈರಲ್ ಆಗಿದೆ.

    ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್ ಆನೆಯ ವಿಡಿಯೋವನ್ನು ಟ್ವೀಟ್ ಮಾಡಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆನೆಯ ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ವೈರಲ್ ವಿಡಿಯೋದಲ್ಲಿ ಏನಿದೆ?
    ಹೆದ್ದಾರಿಯಲ್ಲಿ ಆನೆಯನ್ನು ನೋಡುತ್ತಿದ್ದಂತೆ ಟ್ರಕ್ ಚಾಲಕ ವಾಹನವನ್ನು ನಿಲ್ಲಿಸುತ್ತಾನೆ. ನಂತರ ಆನೆಯು ತನ್ನ ಸೊಂಡಿಲನ್ನು ಒಳಗೆ ಹಾಕಿ ಟ್ರಕ್ ಒಳಗೆ ಇರುವ ಆಹಾರ ಪದಾರ್ಥಗಳನ್ನು ತಿನ್ನಲು ಪ್ರಯತ್ನಿಸುತ್ತದೆ.

    ಟ್ರಕ್ ಚಾಲಕನ ಸಹಚರರೊಬ್ಬರು ಆನೆಗೆ ಟ್ರಕ್‍ನಲ್ಲಿರುವ ಆಹಾರ ಪದಾರ್ಥಗಳಲ್ಲಿ ಕೆಲವು ಬಾಳೆಹಣ್ಣುಗಳನ್ನು ಆನೆಗೆ ಕೊಡುತ್ತಾನೆ. ಆಗ ಆನೆ ತನ್ನ ಸೊಂಡಿಲಿನಿಂದ ಬಾಳೆಹಣ್ಣನನ್ನು ಹೊರಗೆ ಎಳೆದುಕೊಂಡು ತಿನ್ನುತ್ತದೆ.

    ಕಾಡು ಪ್ರಾಣಿಗಳಿಗೆ ಆಹಾರವನ್ನು ನೀಡಬೇಡಿ ಎಂಬ ಸೂಚನೆಯ ಬೋರ್ಡ್ ಅನ್ನು ನೀವು ನೋಡುತ್ತೀರಿ. ಪ್ರಾಣಿಗಳಿಗೆ ಹೊಸ ರುಚಿಯ ಅಭ್ಯಾಸವಾಗುತ್ತವೆ. ರಸ್ತೆಗೆ ಮತ್ತು ಮನುಷ್ಯರ ಹತ್ತಿರ ಪ್ರಾಣಿಗಳು ಬರುತ್ತದೆ. ಇದು ಪ್ರಾಣಿಗಳಿಗೆ ತುಂಬಾ ಸಮಯದವರೆಗೆ ಸಹಾಯಕವಾಗುವುದಿಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಖತ್ ವೈರಲ್ ಆಗಿದೆ.

  • ಮಗುವಿಗೆ ಅಂಬೆಗಾಲು ಹಾಕುವುದನ್ನು ಕಲಿಸಿದ ನಾಯಿಮರಿ

    ಮಗುವಿಗೆ ಅಂಬೆಗಾಲು ಹಾಕುವುದನ್ನು ಕಲಿಸಿದ ನಾಯಿಮರಿ

    – ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

    ನವದೆಹಲಿ: ಸಾಕು ನಾಯಿಯೊಂದು ಮಗುವಿಗೆ ಅಂಬೆಗಾಲು ಹಾಕುವುದನ್ನು ಕಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಮುದ್ದಾದ ಸಾಕು ನಾಯಿಯೊಂದು ಮಗುವಿನ ಮುಂದೆ ಮಲಗಿ ನೆಲದ ಮೇಲೆ ತೆವಳುತ್ತಾ ಮುಂದೆ ಹೋಗಿದೆ. ಮಗು ಇದಕ್ಕೆ ಅನುಗುಣವಾಗಿ ನಾಯಿ ಮರಿಯ ಹಿಂದೆ ತೆವಳುತ್ತಾ ಮುಂದೆ ಸಾಗಿರುವ ವಿಡಿಯೋ ಮುದ್ದಾಗಿದೆ.

    ವಿಡಿಯೋದಲ್ಲಿ ಏನಿದೆ?
    ವೈರಲ್ ವಿಡಿಯೋದಲ್ಲಿರುವ ಈ ಪುಟ್ಟ ಮಗು ಸಾಕು ನಾಯಿ ಬರುವ ಮೊದಲು ಆಟಿಕೆಗಳೊಂದಿಗೆ ಆಟವಾಡುತ್ತಿತ್ತು. ನಾಯಿ ಬಂದು ಮಗುವನ್ನು ನೋಡುತ್ತದೆ. ಮಗುವಿಗೆ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಅರಿತುಕೊಂಡಿರುವ ನಾಯಿಮರಿ ಮಗುವಿನ ಮುಂದೆ ನೆಲಕ್ಕೆ ಮಲಗಿ ತೆವಳುತ್ತಾ ಮುಂದೆ ಹೋಗುತ್ತದೆ. ಇದನ್ನು ಗಮನಿಸಿದ ಮಗು ಕೂಡಾ ನಾಯಿ ಹಾಗೇ ತೆವಳುತ್ತಾ ಅಂಬೆಗಾಲು ಇಟ್ಟು ಮುಂದೆ ಸಾಗುತ್ತಿರುವ ವಿಡಿಯೋವನ್ನು ನೆಟ್ಟಿಗರು ನೋಡಿ ಫುಲ್ ಖುಷಿಯಾಗಿದ್ದಾರೆ.

    ನಾಯಿ ಮಗುವಿಗೆ ನಡೆಯಲು ಸಾಧ್ಯವಿಲ್ಲ ಎಂದು ಅರಿತುಕೊಂಡು ಮಗುವಿಗೆ ಹೇಗೆ ಅಂಬೆಗಾಲು ಹಾಕಬೇಕು ಎಂದು ಕಲಿಸಲಿಸಿದೆ ಎನ್ನುವಂತೆ ಕಾಣುತ್ತದೆ ಎಂಬು ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.