Tag: ವೈರ

  • ನಟ ದೇವರಾಜ್ ಕಿರಿಯ ಪುತ್ರನ ‘ವೈರಂ’ ಚಿತ್ರದ ಟೀಸರ್ ರಿಲೀಸ್

    ನಟ ದೇವರಾಜ್ ಕಿರಿಯ ಪುತ್ರನ ‘ವೈರಂ’ ಚಿತ್ರದ ಟೀಸರ್ ರಿಲೀಸ್

    ಹಿರಿಯನಟ ದೇವರಾಜ್ ಪುತ್ರ ಪ್ರಣಾಮ್ (Pranam) ದೇವರಾಜ್ ಅಭಿನಯದ ವೈರಂ (Vairam) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಗಿದೆ.  ನಟ ದೇವರಾಜ್, ಚಂದ್ರಕಲಾ ದೇವರಾಜ್ ಹಾಗೂ ರಾಗಿಣಿ ಪ್ರಜ್ವಲ್ (Ragini Prajwal) ಟೀಸರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೀಸರ್ ಬಿಡುಗಡೆ ಮಾಡಿದ ದೇವರಾಜ್ ಅವರು ಮಾತನಾಡುತ್ತಾ,  ಕನ್ನಡ ಚಿತ್ರರಂಗ ಈಗ ಮತ್ತೆ ಬ್ಯುಸಿಯಾಗಿದೆ. ಇಂತಹ  ಸಮಯದಲ್ಲಿ ನನ್ನ ಮಗನ 2ನೇ  ಸಿನಿಮಾ ಬರುತ್ತಿದೆ. ನಿರ್ದೇಶಕ ಸಾಯಿಶಿವನ್  ಒಳ್ಳೆಯ ಸಿನಿಮಾ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಕೇಳಿದ್ದೇನೆ. ಚೆನ್ನಾಗಿದೆ. ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು.

    ಚಿಕ್ಕ ವಯಸಿನಿಂದ ಅಪ್ಪ, ಅಣ್ಣನ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. 4 ವರ್ಷಗಳ ನಂತರ ಈ ಸ್ಟೇಜ್ ಮೇಲೆ ನಿಂತು ಮಾತನಾಡುತ್ತಿದ್ದೇನೆ.. ಹಿಂದಿನ  ಚಿತ್ರದಲ್ಲಿ ಚಾಕೊಲೇಟ್ ಬಾಯ್ ಆಗಿದ್ದೆ. ಈ ಸಿನಿಮಾದಲ್ಲಿ ಆಕ್ಷನ್ ಹೀರೋ ಆಗಿದ್ದೇನೆ. ಸಾಯಿ ಶಿವನ್ ಅವರಲ್ಲಿ ತುಂಬಾ ಕಾನ್ಫಿಡೆನ್ಸ್ ಇದೆ. ನಿರ್ಮಾಪಕರಾಗಿ ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ. ಡಿ.ಓ.ಪಿ. ಕೆಲಸವೂ ಅದ್ಭುತವಾಗಿದೆ. ನಾನು ಇಷ್ಟು ಚೆನ್ನಾಗಿ ತೆರೆಮೇಲೆ ಕಾಣಿಸಲು ಅವರೇ ಕಾರಣ. ಒಬ್ಬ ಹೀರೋ ಗುರುತಿಸಿಕೊಳ್ಳೋದು ಅವನೆದುರು ಸ್ಟ್ರಾಂಗ್ ವಿಲನ್ ಇದ್ದಾಗ, ನನಗೆ ಎರಡನೇ ಚಿತ್ರದಲ್ಲೇ ಗರುಡರಾಮ್ ರಂಥ ಖಳನಟರೆದುರು ಅಭಿನಯಿಸುವ ಅವಕಾಶ ಸಿಕ್ತು. ಶಂಕರ್ ಅಶ್ವಥ್ ಹಾಗೂ ವೀಣಾಸುಂದರ್ ನನ್ನ ತಂದೆ, ತಾಯಿ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಎಂಜಾಯ್ ಮಾಡುವಂಥ ೪ ಹಾಡುಗಳಿದ್ದು, ಕವಿರಾಜ್, ನಾಗೇಂದ್ರ ಪ್ರಸಾದ್, ರಾಮ್ ನಾರಾಯಣ್ ಹಾಡುಗಳನ್ನು ಬರೆದಿದ್ದಾರೆ ಎಂದು ನಾಯಕ ಪ್ರಣಾಮ್ ದೇವರಾಜ್ ತಿಳಿಸಿದರು.  ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಚಿತ್ರದ ನಾಯಕಿ ಮೋನಾಲ್ ಮಾತನಾಡುತ್ತ ಇದು ನನ್ನ ಮೊದಲ ಕನ್ನಡ ಚಿತ್ರ. ಒಬ್ಬ ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಒಂದೊಳ್ಳೆ ಲವ್ ಸ್ಟೋರಿ ಚಿತ್ರದಲ್ಲಿದೆ ಎಂದರು.  ಚಿತ್ರದಲ್ಲಿ ಜನರಿಗೆ ಒಂದು ಯೂನಿವರ್ಸಲ್ ಮೆಸೇಜ್ ಇದೆ. ಜನ ಬದಲಾಗಬೇಕು ಎಂದು ಹೇಳಲಾಗಿದೆ. ಜನ ಸಪೋರ್ಟ್ ಮಾಡುತ್ತಾರೆಂಬ ನಂಬಿಕೆಯಿದೆ ಎಂದರು ಖಳನಾಯಕ ಗರುಡಾರಾಮ್.

     ಚಿತ್ರದಲ್ಲಿ ಹೀರೋ ಡೆಡಿಕೇಶನ್, ಇನ್ವಾಲ್ ಮೆಂಟ್ ತುಂಬಾ ಚೆನ್ನಾಗಿತ್ತು. ಆತ ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ನಿರ್ದೇಶಕ ಸಾಯಿಶಿವನ್,  ಪ್ರಣಾಮ್ ದೇವರಾಜ್ ಅವರನ್ನು ಹೊಗಳಿದರು. ನಿರ್ಮಾಪಕರಾದ ಜೆ.ಮಲ್ಲಿಕಾರ್ಜುನ ಹಾಗೂ ವೇಮಾರೆಡ್ಡಿ ಅವರು ಚಿತ್ರದ ಬಗ್ಗೆ ಮಾತನಾಡಿದರು. ಗೋಪಿನಾಥ್ ಅವರ ಛಾಯಾಗ್ರಹಣ ಹಾಗೂ ಮಹತಿ ಸ್ವರಸಾಗರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಿಮ್ಮೆಲ್ಲರನ್ನು ಬೆಚ್ಚಿ ಬೀಳಿಸಲು ಬರಲಿದೆ ಹಾರರ್ `ವೈರ’

    ನಿಮ್ಮೆಲ್ಲರನ್ನು ಬೆಚ್ಚಿ ಬೀಳಿಸಲು ಬರಲಿದೆ ಹಾರರ್ `ವೈರ’

    ಬೆಂಗಳೂರು: ತನ್ನ ಟ್ರೇಲರ್ ನಿಂದ ಕುತೂಹಲ ಹುಟ್ಟುಹಾಕಿರುವ ಹಾರರ್ ಮತ್ತು ಸಸ್ಪೆನ್ಸ್ ಕಥಾನಕವುಳ್ಳ ವೈರ ಶುಕ್ರವಾರ ಬಿಡುಗಡೆಯಾಗಲಿದೆ.

    ಸಿನಿಮಾ ಒಂದು ಕೊಲೆಯ ರಹಸ್ಯವನ್ನು ಬೇಧಿಸುವ ಕಥೆಯನ್ನು ಹೊಂದಿದೆ. ಕೊಲೆಯಾದ ಯುವತಿಯ ರಹಸ್ಯವನ್ನು ಬೆನ್ನತ್ತುವ ನಾಯಕನಿಗೆ ಆಗುವ ವಿಭಿನ್ನ ಅನುಭವಗಳು ಚಿತ್ರದಲ್ಲಿ ತೋರಿಸಲಾಗಿದೆ.

    ಈ ಭಯಾನಕ ಅನುಭವಗಳ ಜೊತೆಯಲ್ಲಿ ತಬಲಾ ನಾಣಿಯವರ ಕಾಮಿಡಿ ನಿಮ್ಮನ್ನು ನಗಿಸಲಿದೆ. ನಾಯಕ ನಟರಾಗಿರುವ ನವರಸನ್ ಅವರೇ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ನವರಸನ್ ಗೆ ನಾಯಕಿಯಾಗಿ ಪ್ರಿಯಾಂಕಾ ಬಲ್ಲಾಳ್ ಜೊತೆಯಾಗಿದ್ದಾರೆ.

    ಸಿನಿಮಾದ ಹೆಚ್ಚಿನ ಚಿತ್ರೀಕರಣ ಮಡಿಕೇರಿಯಲ್ಲಿ ನಡೆದಿದೆ. ನಿತಿನ್ ಮಡಿಕೇರಿ ಚಿತ್ರಣವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ರವಿ ಬಸ್ಸೂರ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಶರಣ್, ಅಜಯ್, ತಬಲಾನಾಣಿ, ಭರತ್ ಸಿಂಗ್, ಹ್ಯಾರಿ, ಕೃಷ್ಣಶ್ರೀ, ಸುಜಿತ್ ಮುಂತಾದ ತಾರಾಗಣವನ್ನು ಚಿತ್ರತಂಡ ಹೊಂದಿದೆ.

  • ಸೆಲೆಬ್ರಿಟಿಗಳ ಜೊತೆ ವೈರ ಸಿನಿಮಾ ನೋಡಿ ಸ್ಕೂಟಿ ಗೆಲ್ಲಿ

    ಸೆಲೆಬ್ರಿಟಿಗಳ ಜೊತೆ ವೈರ ಸಿನಿಮಾ ನೋಡಿ ಸ್ಕೂಟಿ ಗೆಲ್ಲಿ

    ಬೆಂಗಳೂರು: ಇದೇ ಅಕ್ಟೋಬರ್ 6 ರ ಶುಕ್ರವಾರ ತೆರೆಗೆ ಬರಲಿರುವ ಬಹುನಿರೀಕ್ಷಿತ ಚಿತ್ರ ‘ವೈರ’ ಈಗಾಗಲೇ ಚಿತ್ರರಸಿಕರಲ್ಲಿ ಬಹಳಷ್ಟು ಕುತೂಹಲ ಹೆಚ್ಚಿಸಿದೆ. ಅದಕ್ಕೂ ಮುನ್ನ ಚಿತ್ರತಂಡದವರು ಪೇಯ್ಡ್ ಪ್ರೀಮಿಯರ್ ಶೋ ವನ್ನು ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಪ್ರದರ್ಶನ ಮಾಡಲಿದ್ದು, ಅಭಿಮಾನಿಗಳಿಗೆ ಹಲವು ಸೆಲೆಬ್ರಿಟಿಗಳ ಜೊತೆಗೆ ಸಿನಿಮಾ ನೋಡುವ ಅವಕಾಶವನ್ನು ಕಲ್ಪಿಸಿರುವುದಲ್ಲದೇ, ಬಹುಮಾನ ಗೆಲ್ಲುವ ಸುವರ್ಣಾವಕಾಶವನ್ನು ಕಲ್ಪಿಸಿದೆ.

    ಹೌದು, ಅಕ್ಟೋಬರ್ 4 ರ ಸಂಜೆ 6 ಗಂಟೆಗೆ ರಾಜಾಜಿನಗರದ ಒರಿಯನ್ ಮಾಲ್ ನಲ್ಲಿ ಪ್ರಿವ್ಯೂ ಶೋ ನೋಡುವ ಭಾಗ್ಯವನ್ನು ವೈರ ಚಿತ್ರತಂಡ ಒದಗಿಸಲಿದೆ. ಚಿತ್ರ ಬಿಡುಗಡೆಯಾದ ಒಂದುವಾರದ ನಂತರ ನಡೆಯುವ ಲಕ್ಕಿಡಿಪ್ ನಲ್ಲಿ ಅದೃಷ್ಟಶಾಲಿಗಳ ಆಯ್ಕೆ ಲಕ್ಕಿಡಿಪ್ ಮೂಲಕ ನೆಡೆಯಲಿದೆ. ವಿಜೇತರಿಗೆ ಪ್ರಥಮ ಬಹುಮಾನವಾಗಿ ಸ್ಕೂಟಿ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಮೊಬೈಲ್ ದೊರೆಯಲಿದೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.

    ಆ ಅದೃಷ್ಟಶಾಲಿಗಳು ನೀವೂ ಆಗಬೇಕಿದ್ದಲ್ಲಿ ಮಾಡಬೇಕಾದ್ದಿಷ್ಟೇ!!! ಪೇಯ್ಡ್ ಪ್ರೀಮಿಯರ್ ಶೋ ನೋಡಿದ ಟಿಕೇಟ್ ನ ಅರ್ಧಭಾಗವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಇನ್ನುಳಿದ ಅರ್ಧಭಾಗ ಲಕ್ಕಿಡಿಪ್ ನ ಬಾಕ್ಸ್ ನಲ್ಲಿರುತ್ತದೆ. ಆರಿಸಿದ ಆಯ್ಕೆ ನಿಮ್ಮ ನಂಬರ್ ಆಗಿದ್ದರೆ ನೀವೇ ವಿಜೇತರು. ಹಾಗಿದ್ದರೆ ತಡವೇಕೆ?? ಈಗಲೇ ನಿಮ್ಮ ಟಿಕೇಟನ್ನು ಪ್ರೀಮಿಯರ್ ಶೋ ಗಾಗಿ ಕಾಯ್ದಿರಿಸಿ…ಬಹುಮಾನ ಗೆಲ್ಲಿ…