Tag: ವೈಯ್ಯಾಲಿಕಾವಲ್

  • ವೈಯಾಲಿಕಾವಲ್‌ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ವಿರೋಧ

    ವೈಯಾಲಿಕಾವಲ್‌ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ವಿರೋಧ

    – ಪೊಲೀಸ್‌ ಭದ್ರತೆಯಲ್ಲಿ ನಡೆಯಿತು ಕಾರ್ಯಕ್ರಮ

    ಬೆಂಗಳೂರು: ಆರ್‌ಎಸ್‌ಎಸ್‌ (RSS) ಕಾರ್ಯಕ್ರಮಕ್ಕೆ ಕಾಂಗ್ರೆಸ್‌ (Congress) ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿ ನಡೆದಿದೆ.

    ಯುಗಾದಿ (Ugadi) ಹಬ್ಬದ ಹಿನ್ನೆಲೆ ಹಾಗೂ ಏಪ್ರಿಲ್ 1 ರಂದು ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೇವಾರ್ (Keshav Baliram Hedgewar) ಅವರ ಹುಟ್ಟಿದ ದಿನ ಪ್ರಯುಕ್ತ ಇಂದು ಸಂಜೆ 6 ಗಂಟೆಗೆ ವೈಯಾಲಿಕಾವಲ್ ನಲ್ಲಿ ಕ್ರಿಯಾ ಸಿದ್ಧಿ ಸತ್ವೇ ಭವತಿ ಮಹಾತಂ ನೋಪಕರಣೆ ಎನ್ನುವ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿತ್ತು. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖಿಸಲು ಭಯ – ಕಾಂಗ್ರೆಸ್‌ ವಿರುದ್ಧ ಪಿಣರಾಯಿ ಕಿಡಿ

    ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ಚುನಾವಣಾ ನೀತಿ ಸಂಹಿತೆ (Model Code of Conduct) ಇರುವಾಗ ಈ ರೀತಿ ಸಭೆಗೆ ಅವಕಾಶ ಕೊಡಬಾರದು. ವೈಯಾಲಿಕಾವಲ್ ಮತ್ತು ಮಲ್ಲೇಶ್ವರಂ ಮೈದಾನಗಳನ್ನ ಕ್ರೀಡೆ ಬಿಟ್ಟು ಬೇರೆ ಕಾರ್ಯಕ್ರಮಗಳಿಗೆ ನೀಡುವಂತಿಲ್ಲ ಎಂಬ ಆದೇಶ ಇರುವಾಗ ಈ ಅನುಮತಿ ನೀಡಿದ್ದು ಹೇಗೆ? ಈ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಪೊಲೀಸರ ಮಧ್ಯಪ್ರವೇಶದ ಬಳಿಕ ಕಾರ್ಯಕರ್ತರು ಸ್ಥಳದಿಂದ ತೆರಳಿದರು.

    ಸಂಜೆ 6 ಗಂಟೆಯ ವೇಳೆಗೆ 200ಕ್ಕೂ ಹೆಚ್ಚು ಆರ್‌ಎಸ್‌ಎಸ್‌ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾದರು. ಹೆಡ್ಗೆವಾರ್ ಅವರ ಜೀವನ, ಹೋರಾಟದ ಬಗ್ಗೆ ಹಾಗೂ ಹಿಂದೂಗಳ ಒಗ್ಗಟ್ಟಿನ ವಿಚಾರ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಸಂದರ್ಭಗಳ ಬಗ್ಗೆ ಬೆಂಗಳೂರಿನ ಜಿಲ್ಲಾ ಸಂಚಾಲಕರು ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಶ್ವಥ್ ನಾರಾಯಣ್ ಭಾಗಿಯಾಗಿದರು.  ಇದನ್ನೂ ಓದಿ: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ದಿವ್ಯಾ ಉರುಡುಗ

     

  • ಮುಂಜಾನೆ ರಾಡ್ ಹಿಡಿದು ರೋಡ್‍ಗೆ  ಇಳಿಯುವ ಕಳ್ಳರು-ಪುಟ್ಟ ಪುಟ್ಟ ಅಂಗಡಿಗಳೇ ಟಾರ್ಗೆಟ್

    ಮುಂಜಾನೆ ರಾಡ್ ಹಿಡಿದು ರೋಡ್‍ಗೆ ಇಳಿಯುವ ಕಳ್ಳರು-ಪುಟ್ಟ ಪುಟ್ಟ ಅಂಗಡಿಗಳೇ ಟಾರ್ಗೆಟ್

    ಬೆಂಗಳೂರು: ಒಂದು ವಾರದಿಂದ ನಿರಂತರವಾಗಿ ಸರಣಿ ಕಳ್ಳತನ ಮಾಡಿ ಒಂದೇ ಪ್ರದೇಶದ 7 ಅಂಗಡಿಗಳಲ್ಲಿ ಹಣ, ವಸ್ತುಗಳನ್ನು ದೋಚಿರುವ ಘಟನೆ ನಗರದ ವೈಯ್ಯಾಲಿಕಾವಲ್ ಬಳಿ ನಡೆದಿದೆ.

    ಕಳೆದ ಒಂದು ವಾರದಿಂದಲೂ ವೈಯ್ಯಾಲಿ ಕಾವಲ್ ಪ್ರದೇಶದ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಈ ಕೃತ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ದೊರೆತಿರುವ ದೃಶ್ಯಗಳಲ್ಲಿ ಬೆಳ್ಳಂಬೆಳಗ್ಗೆ ಕೈಯಲ್ಲಿ ರಾಡ್ ಹಿಡಿದು, ತಲೆಗೆ ಟೋಪಿ ಹಾಕಿ ಹೊರಡುವ ಖದೀಮರು ಸಣ್ಣ ಸಣ್ಣ ಅಂಗಡಿಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ನಡೆಸಿದ್ದಾರೆ.

    ಕಳ್ಳತನ ಮಾಡುವ ವೇಳೆ ಜಾಗಿಂಗ್ ಹೋಗುವವರನ್ನು ಗಮನಿಸಿ ಅಂಗಡಿ ಮಾಲೀಕನಂತೆ ವರ್ತಿಸುವ ಖದೀಮರು ಬಳಿಕ ರಸ್ತೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಳಿಕ ರಾಡ್ ನಿಂದ ಅಂಗಡಿ ಲಾಕ್ ಒಡೆದು ಒಳಗೆ ಪ್ರವೇಶ ಮಾಡಿ ಹಣ, ಬೆಲೆ ಬಾಳುವ ವಸ್ತುಗಳನ್ನು ಕೊಂಡ್ಯೊಯುತ್ತಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರು ಈ ಕುರಿತು ದೂರು ನೀಡಿದರೂ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ. ಅಲ್ಲದೇ ಎಷ್ಟೇ ಬಾರಿ ದೂರು ನೀಡಲು ಹೋದರೂ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ. ಈ ಪ್ರದೇಶದಲ್ಲಿ ಚೀಟಿ ಹಾಕಿ ಅಂಗಡಿ ಮಾಡಿದ್ದ ವ್ಯಕ್ತಿಯ ಅಂಗಡಿಯಲ್ಲೂ ಕಳ್ಳತನ ಮಾಡಿರುವ ಖದೀಮರು ಎಸ್ಕೇಪ್ ಆಗಿದ್ದಾರೆ. ಇದರಿಂದ ಹಣವೂ ಇಲ್ಲದೆ ಅಂಗಡಿಯಲ್ಲಿ ವಸ್ತುವೂ ಇಲ್ಲದೇ ಹತಾಶರಾಗಿದ್ದಾಗಿ ಮಾಲೀಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.