Tag: ವೈಯಕ್ತಿಕ ಮಾಹಿತಿ

  • ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

    ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕೇಳುವಂತಿಲ್ಲ – ಕೇಂದ್ರ ಸರ್ಕಾರ

    ನವದೆಹಲಿ: ಅಂಗಡಿಗಳಲ್ಲಿ ಸೇವೆಗಳನ್ನು ಒದಗಿಸುವ ಸಲುವಾಗಿ ಗ್ರಾಹಕರ ವೈಯಕ್ತಿಕ ಸಂಪರ್ಕ ವಿವರಗಳನ್ನು ಕೊಡಲು ಒತ್ತಾಯಿಸದಂತೆ ಗ್ರಾಹಕರ ವ್ಯವಹಾರಗಳ ಸಚಿವಾಲಯವು (Consumer Affairs Ministry) ಚಿಲ್ಲರೆ ವ್ಯಾಪಾರಿಗಳಿಗೆ (Retailers) ಸೂಚನೆ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಯಾವುದೇ ಅಂಗಡಿಗಳಿಗೆ ಹೋದರೂ ಬಿಲ್ ಕೊಡುವ ಮೊದಲು ಮೊಬೈಲ್ ನಂಬರ್ ಕೊಡುವಂತೆ ಕೇಳುತ್ತಾರೆ. ಗ್ರಾಹಕರು ತಮ್ಮ ವೈಯಕ್ತಿಕ ನಂಬರ್ ಕೊಡಲು ಒಪ್ಪದಿದ್ದಾಗ ಅವರಿಗೆ ಸೇವೆಗಳನ್ನು ಒದಗಿಸಲಿಲ್ಲ ಎಂದು ಹಲವು ಗ್ರಾಹಕರು ದೂರು ನೀಡಿದ್ದರು. ಗ್ರಾಹಕರು ನೀಡಿದ ದೂರಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಬ್ಯಾಂಕ್‌ಗಳಲ್ಲಿ ಶುರುವಾಯ್ತು ಪಿಂಕ್ ನೋಟ್ ವಿನಿಮಯ – RBI ಆದೇಶದ ವಿರುದ್ಧ ಹೈಕೋರ್ಟ್‌ಗೆ ಅರ್ಜಿ

    ವೈಯಕ್ತಿಕ ಸಂಪರ್ಕ ವಿವರಗಳನ್ನು ಕೊಡುವವರೆಗೆ ಬಿಲ್ ಕೊಡಲಾಗುವುದಿಲ್ಲ ಎಂದು ಮಾರಾಟಗಾರರು ಹೇಳುತ್ತಾರೆ. ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿಯಲ್ಲಿ (Consumer Protection Act) ಇದು ನಿರ್ಬಂಧಿತ ವ್ಯಾಪಾರ ಪದ್ಧತಿಯಾಗಿದ್ದು, ಮಾಹಿತಿ ಸಂಗ್ರಹಿಸಲು ಗ್ರಾಹಕರನ್ನು ಒತ್ತಾಯಿಸುವಂತಿಲ್ಲ. ಅಲ್ಲದೇ ಗೌಪ್ಯತೆ ಕಪಾಡುವ ಸಲುವಾಗಿ ಚಿಲ್ಲರೆ ಉದ್ಯಮ ಮತ್ತು ಉದ್ಯಮ ಚೇಂಬರ್‌ಗಳಾದ ಸಿಐಐ (CII) ಹಾಗೂ ಎಫ್‌ಐಸಿಸಿಐಗಳಿಗೆ (FICCI) ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: IT ಕ್ಷೇತ್ರದಲ್ಲಿ ಒಂದೇ ವರ್ಷಕ್ಕೆ 60 ಸಾವಿರ ಜಾಬ್‌ ಕಟ್‌

    ಬಿಲ್ ಪಡೆದುಕೊಳ್ಳುವ ಸಲುವಾಗಿ ಚಿಲ್ಲರೆ ವ್ಯಾಪಾರಿಗಳಿಗೆ ತಮ್ಮ ಮೊಬೈಲ್ ನಂಬರ್ ನೀಡುವುದು ಭಾರತದಲ್ಲಿ ಕಡ್ಡಾಯವಲ್ಲ. ಈ ರೀತಿ ಮೊಬೈಲ್ ನಂಬರ್ ನೀಡುವುದರಿಂದ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಗ್ರಾಹಕರು ಮೊಬೈಲ್ ನಂಬರ್ ನೀಡಲು ಹಿಂಜರಿಯುತ್ತಾರೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಈ ಸೂಚನೆ ಜಾರಿಗೆ ತರಲಾಗಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ರಫ್ತಿಗೂ ಮುನ್ನ ಪರೀಕ್ಷೆ ಕಡ್ಡಾಯಗೊಳಿಸಿದ ಕೇಂದ್ರ

  • ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ಆಕಾಶ ಏರ್ ಪ್ರಯಾಣಿಕರ ವೈಯಕ್ತಿಕ ಡೇಟಾಗೆ ಕನ್ನ – ಸಂಸ್ಥೆಯಿಂದ ಕ್ಷಮೆ

    ನವದೆಹಲಿ: ಈ ತಿಂಗಳ ಆರಂಭದಲ್ಲಷ್ಟೇ ಕಾರ್ಯಾಚರಣೆ ಆರಂಭಿಸಿದ್ದ ದೇಶೀಯ ವಿಮಾನಯಾನ ಸಂಸ್ಥೆ ಆಕಾಶ ಏರ್‌ನ ಡೇಟಾಗೆ ಹ್ಯಾಕರ್‌ಗಳು ಕನ್ನ ಹಾಕಿರುವುದಾಗಿ ವರದಿಯಾಗಿದೆ. ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವುದಕ್ಕೆ ಸಂಸ್ಥೆ ಕ್ಷಮೆ ಕೇಳಿದೆ.

    ಸಂಸ್ಥೆಯ ಲಾಗ್‌ಇನ್ ಹಾಗೂ ಸೈನ್ ಅಪ್ ಸೇವೆಗಳಿಗೆ ಸಂಬಂಧಿಸಿದ ದೋಷಗಳು ಉಂಟಾಗಿರುವುದು ತಿಳಿದುಬಂದಿದೆ ಎಂದು ಆಕಾಶ ಏರ್ ಭಾನುವಾರ ತಿಳಿಸಿದೆ. ಇದರ ಪರಿಣಾಮವಾಗಿ ಪ್ರಯಾಣಿಕರ ಹೆಸರು, ಲಿಂಗ, ಇ-ಮೇಲ್ ವಿಳಾಸ ಹಾಗೂ ಫೋನ್ ನಂಬರ್‌ಗಳು ಸೋರಿಕೆಯಾಗಿವೆ. ಈ ವಿವರಗಳನ್ನು ಹೊರತುಪಡಿಸಿ ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಗಳು ಅಥವಾ ಪಾವತಿಯ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಕಂಪನಿ ಖಚಿತಪಡಿಸಿದೆ. ಇದನ್ನೂ ಓದಿ: ಗಾಡಿ ಕದಿಯಲು ಹ್ಯಾಂಡಲ್‍ಗೆ ಒದ್ದು ಲಾಕ್ ಮುರಿಯಲು ಪ್ರಯತ್ನ!

     

    ಡೇಟಾ ಸೋರಿಕೆ ಬಗ್ಗೆ ನಮಗೆ ತಿಳಿದು ಬಂದ ತಕ್ಷಣವೇ ನಾವು ಸರಿಯಾದ ಕ್ರಮಗಳನ್ನು ತೆಗೆದುಕೊಂಡು ಅನಧಿಕೃತ ಪ್ರವೇಶವನ್ನು ನಿಲ್ಲಿಸಿದ್ದೇವೆ. ಹೆಚ್ಚಿನ ಭದ್ರತೆಗಳನ್ನು ಸೇರಿಸಿ, ಈಗ ನಾವು ಲಾಗ್ ಇನ್ ಹಾಗೂ ಸೈನ್ ಅಪ್ ಸೇವೆಗಳನ್ನು ಪುನರಾರಂಭಿಸಿದ್ದೇವೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ

    ಸುಮಾರು ಒಂದು ದಶಕದ ಬಳಿಕ ಪ್ರಾರಂಭವಾದ ಮೊದಲ ಭಾರತೀಯ ವಿಮಾನಯಾನ ಸಂಸ್ಥೆ ಆಕಾಶ ಏರ್ ಆಗಸ್ಟ್ 7 ರಂದು ಉದ್ಘಾಟನೆಗೊಂಡು ಮುಂಬೈನಿಂದ ಅಹಮದಾಬಾದ್‌ಗೆ ತನ್ನ ಮೊದಲ ಹಾರಾಟವನ್ನು ಪ್ರಾರಂಭಿಸಿತು. ಈ ತಿಂಗಳ ಆರಂಭದಲ್ಲಿ ನಿಧನರಾದ ಬಿಲಿಯನೇರ್ ಮತ್ತು ಷೇರು ಮಾರುಕಟ್ಟೆ ತಜ್ಞ ರಾಕೇಶ್ ಜುಂಜುನ್‌ವಾಲಾ ಅವರು ಆಕಾಶ ಏರ್‌ನಲ್ಲಿ ಗಣನೀಯ ಹೂಡಿಕೆ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]