Tag: ವೈಯಕ್ತಿಕ ಡೇಟಾ

  • ಯುರೋಪ್ ಕನಸಿನ ಪ್ರಯಾಣಕ್ಕೆ ಹೊಸ ನಿಯಮ – ಭಾರತೀಯರಿಗೆ ಅನ್ವಯಿಸುತ್ತಾ?

    ಯುರೋಪ್ ಕನಸಿನ ಪ್ರಯಾಣಕ್ಕೆ ಹೊಸ ನಿಯಮ – ಭಾರತೀಯರಿಗೆ ಅನ್ವಯಿಸುತ್ತಾ?

    ಗತ್ತಿನಲ್ಲಿ ಹೊಸ ಬದಲಾವಣೆಗಳು ಆಗುತ್ತಿದ್ದಂತೆ ಅದರ ಜೊತೆ ಜೊತೆಗೆ ವಂಚನೆ, ಮೋಸ ಮಾಡುವ ವಿಧಾನವು ಕೂಡ ಬದಲಾಗುತ್ತಿದೆ.. ಒಂಥರ ಅಪಹಾಸ್ಯ ಎನಿಸಬಹುದು, ಆದರೆ ನಿಜ. ಆದರೆ ಅದರಂತೆ ಮುಂದಾಲೋಚನೆ ದೃಷ್ಟಿಯಿಂದ ತಾಂತ್ರಿಕ ಅಭಿವೃದ್ಧಿಯು ಹೆಚ್ಚಾಗುತ್ತಿದೆ. ಅದೇ ರೀತಿ ಇದೀಗ ಯುರೋಪ್ ಪ್ರವಾಸಿಗರಿಗೆ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. 

    ಹೌದು, ಯುರೋಪ್ ಖಂಡವು ಇದೀಗ ಶೇಂಜಿನ್ ವಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಅದೇ EES ವ್ಯವಸ್ಥೆ. ಎಂಟ್ರಿ ಹಾಗೂ ಎಕ್ಸಿಟ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಅಕ್ಟೋಬರ್ 12ರಿಂದ ಈ ವ್ಯವಸ್ಥೆ ಯುರೋಪ್ ನ ಎಲ್ಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಜಾರಿಯಾಗಿದೆ. ಏನು ಈ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

    EES ವ್ಯವಸ್ಥೆ ಎಂದರೇನು? 

    ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯು ಡಿಜಿಟಲ್ ಮೂಲಕ ದಾಖಲಾಗಲಿದೆ. ಅಂದರೆ ನೀವು ಪ್ರವೇಶಿಸುವ ಹಾಗೂ ನಿರ್ಗಮಿಸುವುದೆಲ್ಲವೂ ಡಿಜಿಟಲೀಕರಣಗೊಳ್ಳಲಿದೆ. ಯುರೋಪ್ ನ ಶೇಂಜಿನ್ ವಲಯಕ್ಕೆ ಪ್ರವೇಶಿಸುವ ಎಲ್ಲಾ ಪ್ರವಾಸಿಗರು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶಿಸಿದಾಗ ಈ ವ್ಯವಸ್ಥೆಯ ಮೂಲಕ ಅವರ ದಾಖಲೆಗಳು ಡಿಜಿಟಲೀಕರಣ ಗೊಳ್ಳುತ್ತವೆ. ಈ ಮೊದಲು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಅಲ್ಲಿನ ಅಧಿಕಾರಿಗಳು ಪಾಸ್ಪೋರ್ಟ್ ಸಂಗ್ರಹಿಸಿ, ಅದಕ್ಕೆ ಮುದ್ರೆ ಹಾಕುತ್ತಾರೆ. ಈ ಎಲ್ಲಾ ಹಂತಗಳು ಇನ್ನು ಮುಂದೆ ಡಿಜಿಟಲೀಕರಣಗೊಳ್ಳಲಿವೆ.

    ವೈಯಕ್ತಿಕ ಡೇಟಾ, ಬಯೋಮೆಟ್ರಿಕ್ (ಬೆರಳಚ್ಚು ಹಾಗೂ ಫೇಸ್ ರಿಕಗ್ನಿಷನ್) ಹಾಗೂ ಪ್ರವೇಶ ಮತ್ತು ನಿರ್ಗಮನಗಳನ್ನು ಈ ವ್ಯವಸ್ಥೆಯು ದಾಖಲಿಸುತ್ತದೆ. ಒಂದು ಬಾರಿ ಶೇಂಜಿನ್ ವಲಯವನ್ನು ಪ್ರವೇಶಿಸಿದಾಗ ಎಲ್ಲಾ ಮಾಹಿತಿಗಳು ಸಂಗ್ರಹವಾದ ಬಳಿಕ, ಪ್ರತಿ ಬಾರಿ ಶೇಂಜಿನ್ ವಲಯದ ಯಾವುದೇ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಪ್ರವೇಶ ಹಾಗೂ ನಿರ್ಗಮನವನ್ನು ಸ್ವಯಂ ಚಾಲಿತವಾಗಿ ಈ ವ್ಯವಸ್ಥೆ ದಾಖಲಿಸಿಕೊಳ್ಳುತ್ತದೆ. 

    ಪ್ರವಾಸಿಗರು ಒಂದು ದೇಶದಲ್ಲಿ ಎಷ್ಟು ಸಮಯಗಳ ಕಾಲ ಇರುತ್ತಾರೆ ಹಾಗೂ ಯಾವಾಗ ಅಲ್ಲಿಂದ ಹೊರ ಹೋಗುತ್ತಾರೆ ಎನ್ನುವ ಎಲ್ಲಾ ಮಾಹಿತಿಯನ್ನು ಇದು ತನ್ನಲ್ಲಿ ದಾಖಲಿಸಿಕೊಳ್ಳುತ್ತದೆ. ಈ ನಿಯಮ ಯುರೋಪ್ ಒಕ್ಕೂಟದ ಹೊರಗಿನ ಎಲ್ಲಾ ಪ್ರಯಾಣಿಕರಿಗೆ ಅನಿಸುತ್ತದೆ. ಕಡಿಮೆ ಸಮಯದ ಪ್ರವಾಸಕ್ಕಾಗಿ ವೀಸಾ ಇಲ್ಲದೆ ಆಗಮಿಸುವವರಿಗೂ ಕೂಡ ಇದು ಅನ್ವಯಿಸುತ್ತದೆ.

    ಈ ವ್ಯವಸ್ಥೆಗೆ ಕಾರಣ? 

    ಇತ್ತೀಚಿನ ವರ್ಷಗಳಲ್ಲಿ ಯುರೋಪ್ ಗಡಿಗಳಲ್ಲಿ ಕೆಲವು ಸಮಸ್ಯೆಗಳು ಉಂಟಾಗುತ್ತಿದ್ದು, ಅದರ ನಿರ್ವಹಣೆ ತುಂಬಾ ಕಷ್ಟವಾಗಿದೆ. ಅದಲ್ಲದೆ ಯುರೋಪ್ ಒಕ್ಕೂಟದ ಹೆಚ್ಚಿನ ಪ್ರದೇಶದಲ್ಲಿ ಪಾಸ್ಪೋರ್ಟ್ ಇಲ್ಲದೆ ಪ್ರಯಾಣಿಸಿರುವುದು ಹಾಗೂ ಶೇಂಜಿನ್ ಪ್ರದೇಶದಿಂದ ಲಕ್ಷಾಂತರ ಜನರು ಪಾಸ್ಪೋರ್ಟ್ ಇಲ್ಲದೆ ಗಡಿ ದಾಟಿರುವುದು ಕಂಡು ಬಂದಿದೆ. 

    EES ವ್ಯವಸ್ಥೆಯ ಗುರಿ ಏನು?

    – ಹಳೆಯ ಪಾಸ್ಪೋರ್ಟ್ ಮೇಲೆ ಸ್ಟ್ಯಾಂಪಿಂಗ್‌ ವ್ಯವಸ್ಥೆಯನ್ನು ತೆಗೆದು, ದೋಷಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.

    – ಪ್ರವಾಸಿಗರು ದೇಶಕ್ಕೆ 90 ದಿನಗಳಿಗೆ ಮಾತ್ರ ಪ್ರವೇಶಿಸುವಂತೆ ಮಾಡುವುದು 

    – ಬಯೋಮೆಟ್ರಿಕ್ ಹಾಗೂ ಫೇಸ್ ರಿಕಗ್ನಿಷನ್ ಮೂಲಕ ಕ್ರಮ ಪ್ರವೇಶ ಹಾಗೂ ವಂಚನೆ ನ ತಡೆಯುವ ಉದ್ದೇಶವನ್ನು ಹೊಂದಿದೆ.

    ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡಲಿದೆ?

    ಯುರೋಪಿನ ಯಾವುದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪಾಸ್‌ಪೋರ್ಟ್‌ ನೀಡುವ ಸೆಕ್ಷನ್ ಅಲ್ಲಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಲಾಗುವುದು. ಅದಾದ ಬಳಿಕ  ಪಾಸ್‌ಪೋರ್ಟ್‌ ಅನ್ನು ಸ್ಕ್ಯಾನ್ ಮಾಡಿ ಬಳಿಕ ಬೆರಳಚ್ಚು ಹಾಗೂ ಫೇಸ್ ರಿಕಗ್ನಿಷನ್ ಮಾಡಲಾಗುತ್ತದೆ. ಈ ಮೂಲಕ EES ವ್ಯವಸ್ಥೆಗೆ ಡೇಟಾ ದಾಖಲಾಗುತ್ತದೆ. ಇಲ್ಲಿ ವ್ಯಕ್ತಿಯ ಪ್ರಯಾಣದ ಪ್ರೊಫೈಲ್ ರಚನೆಯಾಗುತ್ತದೆ. ಇದಾದ ನಂತರ ಪ್ರವೇಶ ದಾಖಲಾಗುತ್ತದೆ. 

    ಇದಾದ ಬಳಿಕ ಇನ್ನೊಮ್ಮೆ ಯುರೋಪ್ ಪ್ರವಾಸಕ್ಕೆ ಹೋದಾಗ  ಈ ಎಲ್ಲಾ ಹಂತಗಳನ್ನು ವಿಮಾನ ನಿಲ್ದಾಣದಲ್ಲಿ ಪುನರಾವರ್ತಿಸುವ ಅಗತ್ಯವಿರುವುದಿಲ್ಲ. ಕೇವಲ ಬೆರಳಚ್ಚು ಹಾಗೂ ಫೇಸ್ ರಿಕಗ್ನಿಶನ್ ಮಾಡಿದರೆ ಸುಲಭವಾಗಿ ಪ್ರವೇಶಿಸಬಹುದು.

    ಈ ವ್ಯವಸ್ಥೆಯು ಯುರೋಪ್ ಒಕ್ಕೂಟದ ಹೊರಗಿನ ಎಲ್ಲಾ ಪ್ರಯಾಣಿಕರಿಗೂ ಅನ್ವಯಿಸುತ್ತದೆ. ಶೇಂಜಿನ್ ವೀಸಾ ಹೊಂದಿರುವ ಭಾರತೀಯ ನಾಗರಿಕರಿಗೂ ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಇದು ಅನ್ವಯಿಸುತ್ತದೆ. ಅಮೆರಿಕ, ಯುಕೆ ಹಾಗೂ ಕೆನಡಾದಂತಹ ವಿಚಾರ ಹಿತ ದೇಶದ ನಾಗರಿಕರಿಗೂ ಇದು ಅನ್ವಯಿಸುತ್ತದೆ. 

    ಇನ್ನು ಯುರೋ ಒಕ್ಕೂಟದ ನಾಗರಿಕರಿಗೆ ಹಾಗೂ ದೀರ್ಘಕಾಲಿನ ವೀಸಾ ಹೊಂದಿರುವವರಿಗೆ ಈ ವ್ಯವಸ್ಥೆ ಅನ್ವಯಿಸುತ್ತದೆ. 12 ವರ್ಷದೊಳಗಿನ ಮಕ್ಕಳಿಗೆ ಫಿಂಗರ್ ಪ್ರಿಂಟ್‌ನಿಂದ ವಿನಾಯಿತಿ ನೀಡಲಾಗುತ್ತದೆ. ಈ ಮೂಲಕ ಯುರೋಪ್ ನಲ್ಲಿ ಕ್ರಮೇಣವಾಗಿ ಪಾಸ್‌ಪೋರ್ಟ್‌ ಸ್ಟ್ಯಾಂಪಿಂಗ್ ವ್ಯವಸ್ಥೆಯು ಕಡಿಮೆಯಾಗುತ್ತಿದೆ.

  • ಮಕ್ಕಳ ಮಾಹಿತಿ ಅಕ್ರಮವಾಗಿ ಸಂಗ್ರಹ – 165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್

    ಮಕ್ಕಳ ಮಾಹಿತಿ ಅಕ್ರಮವಾಗಿ ಸಂಗ್ರಹ – 165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್

    ವಾಷಿಂಗ್ಟನ್: ದೈತ್ಯ ಟೆಕ್ ಕಂಪನಿ ಮೈಕ್ರೋಸಾಫ್ಟ್ (Microsoft) ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳ ವೈಯಕ್ತಿಕ ಮಾಹಿತಿಯನ್ನು (Children’s Personal Data) ಅಕ್ರಮವಾಗಿ ಸಂಗ್ರಹಿಸಿದೆ ಎಂದು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (FTC) ಆರೋಪಿಸಿದೆ. ಇದನ್ನು ಇತ್ಯರ್ಥಗೊಳಿಸಲು ಇದೀಗ ಮೈಕ್ರೋಸಾಫ್ಟ್ ಬರೋಬ್ಬರಿ 20 ಮಿಲಿಯನ್ ಡಾಲರ್ (ಸುಮಾರು 165 ಕೋಟಿ ರೂ.) ಪಾವತಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

    ಮೈಕ್ರೋಸಾಫ್ಟ್‌ನ ಎಕ್ಸ್‌ಬಾಕ್ಸ್ (Xbox) ಗೇಮಿಂಗ್ ಸಿಸ್ಟಂಗೆ ಸೈನ್‌ಅಪ್ ಆಗಿರುವ ಮಕ್ಕಳು ತಮ್ಮ ಪೋಷಕರಿಗೆ ತಿಳಿಸದೇ ಅಥವಾ ಪೋಷಕರ ಒಪ್ಪಿಗೆ ಪಡೆಯದೇ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದೆ. ಇದು ಅಮೆರಿಕದ ಮಕ್ಕಳ ಆನ್‌ಲೈನ್ ಗೌಪ್ಯತೆ ಸಂರಕ್ಷಣಾ ಕಾಯಿದೆಯನ್ನು (COPPA) ಉಲ್ಲಂಘಿಸಿದೆ ಎಂದು ಎಫ್‌ಟಿಸಿ ಆರೋಪಿಸಿದೆ.

    ಮೈಕ್ರೋಸಾಫ್ಟ್ ತನ್ನ ಎಕ್ಸ್‌ಬಾಕ್ಸ್ ಸಿಸ್ಟಮ್‌ನ ಮಕ್ಕಳ ಬಳಕೆದಾರರಿಗೆ ಗೌಪ್ಯತೆಯ ರಕ್ಷಣೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಮೈಕ್ರೋಸಾಫ್ಟ್ ಮಕ್ಕಳ ಡೇಟಾವನ್ನು ಹಂಚಿಕೊಳ್ಳುವ ಮೂರನೇ ವ್ಯಕ್ತಿಯ ಗೇಮಿಂಗ್ ಪಬ್ಲಿಷರ್‌ಗಳಿಗೆ ಇದು ಸಿಒಪಿಪಿಎ ರಕ್ಷಣೆಯನ್ನು ಒದಗಿಸುತ್ತದೆ ಎಂದು ಎಫ್‌ಟಿಸಿ ಹೇಳಿದೆ. ಇದನ್ನೂ ಓದಿ: 100 ಭೂಕಂಪಗಳಾದ್ರೂ ಜಗ್ಗದೇ ನಿಂತಿದೆ 10 ಅಂತಸ್ತಿನ ಮರದ ಕಟ್ಟಡ – ಎಲ್ಲಿದೆ ಕಟ್ಟಡ, ಏನಿದರ ವಿಶೇಷತೆ!?

    13 ವರ್ಷದೊಳಗಿನ ಮಕ್ಕಳಿಗೆ ನಿರ್ದೇಶಿಸಲಾದ ಆನ್‌ಲೈನ್ ಸೇವೆಗಳು ಹಾಗೂ ವೆಬ್‌ಸೈಟ್‌ಗಳು ಸಂಗ್ರಹಿಸುವ ಮಾಹಿತಿಗಳ ಕುರಿತು ಪೋಷಕರಿಗೆ ತಿಳಿಸಲು ಹಾಗೂ ಮಕ್ಕಳ ವೈಯಕ್ತಿಕ ಮಾತಿಗಳನ್ನು ಸಂಗ್ರಹಿಸುವುದಕ್ಕೂ ಮೊದಲು ಪರಿಶೀಲಿಸಿ ಒಪ್ಪಿಗೆಯನ್ನು ಪಡೆಯುವ ಕಾನೂನಿನ ಅಗತ್ಯವಿದೆ.

    2015 ರಿಂದ 2020 ರವರೆಗೆ ಪೋಷಕರು ಒಪ್ಪಿಗೆ ನೀಡಲು ವಿಫಲರಾಗಿದ್ದರೂ ಸಹ ಖಾತೆ ರಚನೆ ಪ್ರಕ್ರಿಯೆಯಲ್ಲಿ ಮಕ್ಕಳಿಂದ ಸಂಗ್ರಹಿಸಲಾದ ಡೇಟಾವನ್ನು ಮೈಕ್ರೋಸಾಫ್ಟ್ ಇನ್ನೂ ಉಳಿಸಿಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ