Tag: ವೈಭವ್ ಜೈನ್

  • ಹೆಂಡ್ತಿಗೆ ಫೋನ್ ಮಾಡ್ಬೇಕು ಅಂತ ಲವ್ವರ್‌ಗೆ ಕಾಲ್ – ತಗ್ಲಾಕ್ಕೊಂಡ ವೈಭವ್

    ಹೆಂಡ್ತಿಗೆ ಫೋನ್ ಮಾಡ್ಬೇಕು ಅಂತ ಲವ್ವರ್‌ಗೆ ಕಾಲ್ – ತಗ್ಲಾಕ್ಕೊಂಡ ವೈಭವ್

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣದ ಆರೋಪಿಯಾಗಿರುವ ವೈಭವ್ ಜೈನ್ ಹೆಂಡತಿಗೆ ಫೋನ್ ಮಾಡಬೇಕು ಎಂದು ಲವ್ವರ್‌ಗೆ ಕಾಲ್ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದನ್ನೂ ಓದಿ: ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ಡ್ರಗ್ಸ್ ಕೇಸ್ ಆರೋಪಿ ವೈಭವ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಹೆಂಡತಿಗೆ ಫೋನ್ ಮಾಡಬೇಕು ಎಂದು ಹೇಳಿ ಸಿಕ್ಕಿಬಿದ್ದಿದ್ದಾನೆ. ಇವತ್ತು ನಾನು ಮದುವೆಯಾದ ದಿನ. ಹೀಗಾಗಿ ನನ್ನ ಪತ್ನಿಗೆ ಫೋನ್ ಮಾಡಿ ಶುಭಾಶಯ ತಿಳಿಸಬೇಕು. ದಯವಿಟ್ಟು ನಿಮ್ಮ ಫೋನ್ ಕೊಡಿ ಸಾರ್ ಎಂದು ಪೊಲೀಸರ ಬಳಿ ಮೊಬೈಲ್ ಕೇಳಿದ್ದನು. ಇದಕ್ಕೆ ಒಪ್ಪಿದ ಪೊಲೀಸರು ಆತನಿಗೆ ಫೋನ್ ಕೊಟ್ಟಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

    ಆರೋಪಿ ವೈಭವ್ ಜೈನ್ ಪೊಲೀಸರ ಮೊಬೈಲ್‍ನಿಂದಲೇ ಫೋನ್ ಮಾಡಿದ್ದನು. ಈ ವೇಳೆ ಆರೋಪಿ ವೈಭವ್ ಪೊಲೀಸರ ಮೊಬೈಲ್‍ನಿಂದ ಹೆಂಡತಿ ಬದಲು ಪ್ರಿಯತಮೆಗೆ ಫೋನ್ ಮಾಡಿದ್ದಾನೆ. ಮರುದಿನ ವೈಭವ್ ಪತ್ನಿ ಬಟ್ಟೆ ತೆಗೆದುಕೊಂಡು ಸಿಸಿಬಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಕಳೆದ ದಿನ ನೀವು ಮದುವೆ ಆಗಿ ವರ್ಷ ಆಯ್ತಂತೆ, ಫೋನ್ ಮಾಡಿದ್ನಲ್ವಾ? ಎಂದು ವೈಭವ್ ಜೈನ್ ಕರೆಯ ಬಗ್ಗೆ ಆತನ ಪತ್ನಿಗೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ.

    ಆಗ ಆತನ ಪತ್ನಿ, “ಇಲ್ಲ ಸಾರ್, ನನಗೆ ಫೋನ್ ಮಾಡಿಲ್ಲ. ನಮ್ಮ ಮದುವೆ ವಾರ್ಷಿಕೋತ್ಸವ ಇಲ್ಲ” ಎಂದು ಉತ್ತರಿಸಿದ್ದಾರೆ ಪತ್ನಿಯ ಉತ್ತರದಿಂದ ಪೊಲೀಸರ ಕೈಯಲ್ಲಿ ವೈಭವ್ ಜೈನ್ ರೆಡ್‍ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

    ವೈಭವ್ ಜೈನ್ ಲವ್ವರ್?
    ‘ಮಿಸ್ ಸೌತ್’ ಆಗಿದ್ದ ದಕ್ಷಿಣದ ಸುಂದರಿಯೇ ವೈಭವ್ ಪ್ರಿಯತಮೆ ಎಂದು ಹೇಳಲಾಗಿದೆ. ಆರೋಪಿ ಮದುವೆ ಆಗಿದ್ದರೂ ಸೌತ್ ಸುಂದರಿ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎನ್ನಲಾಗುತ್ತಿದೆ. ಪ್ರಿಯತಮಗೆ ವಿಚಾರದಲ್ಲಿ ವೈಭವ್ ಪತ್ನಿಯ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ವೈಭವ್ ಜೈನ್ ಫೋನ್ ಹಿನ್ನೆಲೆಯಲ್ಲಿ ಸೌತ್ ಸುಂದರಿಗೂ ಕ್ರೈಂ ಬ್ರ್ಯಾಂಚ್ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ.

  • ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    ರಾಗಿಣಿ ಡ್ರಗ್ಸ್ ಸೇವಿಸಿರೋದಕ್ಕೆ ‘ಬಿಗ್’ ಸಾಕ್ಷ್ಯ – ಆರೋಪಿ ರವಿಶಂಕರ್ ತಪ್ಪೊಪ್ಪಿಗೆ

    -ರಾಗಿಣಿ ನಂಟು, ಡ್ರಗ್ಸ್ ಸೇವನೆ, ನೈಟ್ ಪಾರ್ಟಿ ಲೈಫ್ ಖುಲಂ ಖುಲ್ಲಾ

    ಬೆಂಗಳೂರು: ಚಂದನವನದ ಡ್ರಗ್ಸ್ ನಶೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಬಂಧಿತ ನಟಿ ರಾಗಿಣಿ ದ್ವಿವೇದಿ ಆಪ್ತ ರವಿಶಂಕರ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಪ್ಪೊಪ್ಪಿಗೆ ವೇಳೆ ರವಿಶಂಕರ್, ಡ್ರಗ್ಸ್ ನಂಟು ಮತ್ತು ರಾಗಿಣಿ ಜೊತೆಗಿನ ಒಡನಾಟದ ಎಲ್ಲ ಮಾಹಿತಿಯನ್ನ ಬಾಯಿಬಿಟ್ಟಿದ್ದಾನೆ.

    ತಪ್ಪೊಪ್ಪಿಕೊಂಡಿರುವ ರವಿಶಂಕರ್ ಡ್ರಗ್ಸ್ ದಂಧೆಯ ಕರಾಳಮುಖ ತೆರೆದಿಟ್ಟಿದ್ದಾನೆ. ತನ್ನ ಪ್ರೇಮ ವಿವಾಹ ಮುರಿದಿದ್ದು ಹೇಗೆ? ರಾಗಿಣಿ ಮತ್ತು ಡ್ರಗ್ ಪೆಡ್ಲರ್ ಗಳ ಸಂಪರ್ಕಕ್ಕೆ ಬಂದಿದ್ದೇಗೆ? ಹೀಗೆ ಪ್ರತಿಯೊಂದನ್ನು ರವಿಶಂಕರ್ ಇಂಚಿಂಚಾಗಿ ಹೇಳಿಕೊಂಡಿದ್ದಾನೆ. ಆರೋಪಿ ರವಿಶಂಕರ್ ತಪ್ಪೊಪ್ಪಿಗೆಯ ನಾಲ್ಕು ಪುಟಗಳ ಸಾಕ್ಷ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ರವಿಶಂಕರ್ ತಪ್ಪೊಪ್ಪಿಗೆ:
    2010ರಲ್ಲಿ ನಾನು ಪ್ರೇಮ ವಿವಾಹವಾಗಿದ್ದೆ, ನಮಗೆ ಎಂಟು ವರ್ಷದ ಹೆಣ್ಣು ಮಗುವಿದೆ. 2013-14ರಲ್ಲಿ ನಿರ್ಮಾಪಕ ಶಿವಪ್ರಕಾಶ್ ಮೂಲಕ ನಟಿ ರಾಗಿಣಿ ದ್ವಿವೇದಿಯ ಪರಿಚಯವಾಯ್ತು. ಶಿವಪ್ರಕಾಶ್ ಕಲ್ಲು ಕ್ವಾರಿ ಸಹ ನಡೆಸುತ್ತಿದ್ದು, ಕೌಟುಂಬಿಕ ಸ್ನೇಹಿತರಾಗಿದ್ದರು. ಶಿವಪ್ರಕಾಶ್, ರಾಗಿಣಿ ಜೊತೆ ಸೇರಿ ಬ್ರಿಗೇಡ್ ರೋಡ್ ಗಳಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಭೇಟಿಯಾಗಿ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದೆ. ರಾಗಿಣಿಗೆ ತನ್ನನ್ನು ಮದುವೆಯಾಗುವಂತೆ ಶಿವಪ್ರಕಾಶ್ ಪ್ರಪೋಸ್ ಇಟ್ಟಿದ್ದರು. ಆದ್ರೆ ರಾಗಿಣಿ ತಮಗೆ ಸಮಯಾವಕಾಶ ಬೇಕೆಂದು ಹೇಳಿ ಶಿವಪ್ರಕಾಶ್ ನಿಂದ ದೂರವಾದಾಗ ನನ್ನ ಸ್ನೇಹ ನಟಿ ಜೊತೆ ಬೆಳೆಯಿತು.

    ಪತ್ನಿಗೂ ಮತ್ತು ನನಗೂ ಮನಸ್ಥಾಪಗಳು ಉಂಟಾಗಿ ಗಲಾಟೆಗಳು ನಡೆದವು. ಆಗ ಸ್ನೇಹಿತೆ ರಾಗಿಣಿ ದ್ವಿವೇದಿ ಸಲಹೆ ಪಡೆದು 2018ರಲ್ಲಿ ಪತ್ನಿಯಿಂದ ವಿಚ್ಛೇಧನ ಪಡೆದೆ. ವೀರೇನ್ ಖನ್ನಾ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ನಮಗೆ ಹೋಟೆಲ್ ನಲ್ಲಿ ವೈಭವ್ ಜೈನ್ ಪರಿಚಯವಾದನು. ವೈಭವ್ ಜೈನ್ ಹೋಂಸ್ಟೇ ಪಾರ್ಟಿಗಳನ್ನು ಆಯೋಜಿಸುತ್ತಿದ್ದನು. ಈ ಪಾರ್ಟಿಗಳಿಗೆ ವೈಭವ್ ಸ್ನೇಹಿತರಾದ ವಿನಯ್, ರಚನ್, ಅರುಣ್, ಪ್ರಶಾಂತ್ ರಂಕಾ ಸೇರಿದಂತೆ ಹಲವು ಶ್ರೀಮಂತರು ಬರುತ್ತಿದ್ದರು.

    ಪಾರ್ಟಿಗಳಿಗೆ ಬರುತ್ತಿದ್ದ ಶ್ರೀಮಂತ ಪರಿಚತರಿಗೆ ECSTASY PILL ಮಾತ್ರೆಗಳನ್ನು ವೈಭವ್ ಸರಬರಾಜು ಮಾಡುತ್ತಿದ್ದನು. ಆದಿತ್ಯ ಆಳ್ವಾಗೆ ಸೇರಿದ ಹೌಸ್ ಆಫ್ ಲೈಫ್ ಮಾನ್ಯತಾ ಟೆಕ್ ಪಾರ್ಕ್ ಪಕ್ಕದ ಫಾರಂ ಹೌಸ್ ಮತ್ತು ಕಿಟಿಕೊ ಕ್ಲಬ್ ಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗುತ್ತಿತ್ತು. ಪಾರ್ಟಿ ಆಯೋಜನೆ ಸ್ಥಳ, ಬರೋರ ಹೆಸರುಗಳನ್ನ ವಾಟ್ಸಪ್ ಮೂಲಕ ಮೊದಲೇ ತಿಳಿಸಲಾಗುತ್ತಿತ್ತು.

    ಏರ್ ಲೈನ್ಸ್ ಹೋಟೆಲ್ ಬಳಿಯಲ್ಲಿದ್ದ ಕಬಾಬ್ ಕಾರ್ನರ್ ಹತ್ತಿರ ಸೇಂಟ್ ಮಾರ್ಕ್ಸ್  ರೋಡ್‍ನಲ್ಲಿ ವೈಭವ್ ಜೈನ್ ನನಗೆ ECSTASY PILL ಮಾತ್ರೆ ನೀಡಿದ್ದನು. ಆ ಮಾತ್ರೆ ತೆಗೆದುಕೊಂಡಿದ್ದ ವೇಳೆ ಕರೆ ಮಾಡಿದ್ದ ರಾಗಿಣಿ ಊಟಕ್ಕೆ ಕರೆದಿದ್ದರು.

    ಏರ್ ಲೈನ್ಸ್ ಹೋಟೆಲ್ ನಲ್ಲಿ ಪರಿಚತರಾಗಿದ್ದ ಪ್ರಶಾಂತ್ ರಾಜು ಅವರ ಹುಟ್ಟುಹಬ್ಬದ ಪಾರ್ಟಿಗೆ ಜೂನ್ 28ರಂದು ಯಲಹಂಕದ ನ್ಯೂ ಟೌನ್ ಬಳಿ ಇರುವ ಲೇ-ರೋಮಾಗೆ ನಾನು, ರಾಗಿಣಿ, ಪ್ರಶಾಂತ್ ರಾಜು, ಅವರ ಸ್ನೇಹಿತ ಹನುಮಂತು, ಸಂತೋಷ್, ರವಿನಾ, ಸುನಿಲ್ ಹೋಗಿದ್ದೇವು. ಆಗ ಪಕ್ಕದ ಕೊಠಡಿಯಲ್ಲಿ ವೈಭವ್ ಜೈನ್ ಮತ್ತು ಆತನ ಸಂಗಡಿಗರು ಉಳಿದುಕೊಂಡಿದ್ದರು. ನಾವು ಕೇಕ್ ಕಟ್ ಮಾಡಿದ ಬಳಿಕ ರಾತ್ರಿ 12.30ಕ್ಕೆ ವೈಭವ್ ಜೈನ್ ನನಗೆ ECSTASY PILL ಅರ್ಧ ಮಾತ್ರೆ ನೀಡಿದ. ಆ ಮಾತ್ರೆಯನ್ನ ನಾನು, ರಾಗಿಣಿ ಮತ್ತು ರವಿನಾ ಸ್ವಲ್ಪ ಸ್ವಲ್ಪ ತೆಗದುಕೊಂಡೆವು.

    ಅದೇ ದಿನ ರಾತ್ರಿ ಕನಕಪುರ ರಸ್ತೆಯಲ್ಲಿರುವ ಪ್ರಶಾಂತ್ ಸ್ನೇಹಿತರ ಕುಟುಂಬಸ್ಥರ ಹುಟ್ಟುಹಬ್ಬ ಇದ್ದಿದ್ದರಿಂದ ರಾತ್ರಿ 3.30ಕ್ಕೆ ಅವರ ರೆಸಾರ್ಟ್ ಗೆ ಹೋದೆವು. ಅಲ್ಲಿಯೇ ಎರಡಿ ದಿನ ಊಟ ಮತ್ತು ಮದ್ಯದ ಪಾರ್ಟಿಯಲ್ಲಿ ಭಾಗಿಯಾಗಿದ್ದೇವು. ನನ್ನ ಬಳಿ ಸ್ವಲ್ಪ ಉಳಿದಿದ್ದ ಡ್ರಗ್ಸ್ ಮಾತ್ರೆ ತೆಗೆದುಕೊಂಡೆ. ಪ್ರತೀಕ್ ಶೆಟ್ಟಿ ನನಗೆ ಮೂರ್ನಾಲ್ಕು ವರ್ಷಗಳಿಂದ ಪರಿಚಯ. ವೈಭವ್ ಜೈನ್ ಮತ್ತು ಶ್ರೀಗೂ ಪ್ರತೀಕ್ ಶೆಟ್ಟಿ ಪರಿಚಯಸ್ಥ. ವೈಭವ್ ಶೆಟ್ಟಿ ಮತ್ತು ಶ್ರೀ ಇಬ್ಬರು ವ್ಯಾಪಾರದಲ್ಲಿ ಪಾಲುದಾರರು. ಶ್ರೀ ನಗರದ ಹೊರ ವಲಯದಲ್ಲಿ ಮನೆಗಳನ್ನು ಹೊಂದಿದ್ದ. ಅಲ್ಲಿ ವೈಭವ್ ಜೈನ್ ಪಾರ್ಟಿ ಆಯೋಜಿಸಿ ಊಟ, ಮದ್ಯ, ಡ್ರಗ್ಸ್ ಸರಬರಾಜು ಮಾಡುತ್ತಿದ್ದನು.

    ನನ್ನ ಪಿಯುಸಿ ಗೆಳೆಯ ಅಶ್ವಿನ್ ಅಲಿಯಾಸ್ ಬೂಗಿಯ ಸ್ನೇಹಿತ ಅಭಿಸ್ವಾಮಿ ಎಂಬಾತ ನೈಜಿರಿಯಾ ವ್ಯಕ್ತಿಯ ಮೊಬೈಲ್ ನಂಬರ್ ನೀಡಿದ್ದನು. ನೈಜರಿಯನ್ ವ್ಯಕ್ತಿಯನ್ನ ಸಂಪರ್ಕಿಸಿದ್ರೆ ಪಿಲ್ಸ್ ಮತ್ತಯ ಕೋಕೇನ್ ಪೌಡರ್ ನೀಡುತ್ತಾನೆಂದು ಹೇಳಿದ್ದನು. ಪ್ರಶಾಂತ್ ರಾಜು ಗೆಳೆಯ ದೆಹಲಿಯಿಂದ ಬೆಂಗಳೂರಿಗೆ ಬಂದಾದ ಡ್ರಗ್ ಬೇಕೆಂದಾಗ ನೈಜಿರೀಯನ್ ವ್ಯಕ್ತಿಯನ್ನ ಸಂಪರ್ಕ ಮಾಡಿದ್ದೆ, ಆದ್ರೆ ಆತ ಸ್ಟಾಕ್ ಇಲ್ಲ ಅಂತ ಹೇಳಿದ್ದನು.

    ನನ್ನ ಸ್ನೇಹಿತ ಶ್ರೇಯಸ್ ಪಾಟೀಲ್, ಪಬ್ ಮಾಲೀಕನಾಗಿದ್ದು, ಆತನ ಬಿಎಂಡಬ್ಲ್ಯೂ ಕಾರ್ ಪಡೆದು ರಾಗಿಣಿ ಜೊತೆ ಊಟಕ್ಕೆ ಹೋಗುತ್ತಿದ್ದೆ. ರಾಹುಲ್ ತಾನ್ಸೆ ಸಹ ನನಗೆ ನಾಲ್ಕು ವರ್ಷಗಳಿಂದ ಚಿರಪರಿಚಿತ. ರಾಗಿಣಿ ಅವರಿಗೆ ಮೊದಲಿನಿಂದಲೂ ಶ್ರೀ ಮತ್ತು ಆತನ ಪತ್ನಿ ಸೋನಲ್ ಪರಿಚಯ. ಆಗಾಗ್ಗೆ ಅವರ ಮನೆಗೆ ಹೋಗುವುದು, ಬರೋದು ಮಾಡುತ್ತಿದ್ದರು ಎಂದು ಸಿಸಿಬಿ ಎಸಿಬಿ ಗೌತಮ್ ಮುಂದೆ ರವಿಶಂಕರ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

  • ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ವೈಭವ್ ಜೈನ್ ವೈಭವಕ್ಕೆ ತುಪ್ಪದ ಹುಡ್ಗಿ ಫುಲ್ ಸೈಲೆಂಟ್

    ಬೆಂಗಳೂರು: ಸಿಸಿಬಿ ಪೊಲೀಸರು ಶನಿವಾರ ಡ್ರಗ್ಸ್ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿ ವೈಭವ್ ಜೈನ್ ಅನ್ನು ವಶಕ್ಕೆ ಪಡೆದುಕೊಂಡಿದ್ದು, ಇದರಿಂದ ನಟಿ ರಾಗಿಣಿಗೆ ಸಂಕಷ್ಟ ಶುರುವಾಗಿದೆ.

    ಸ್ಯಾಂಡಲ್‍ವುಡ್ ಡ್ರಗ್ಸ್ ಮಾಫಿಯಾ ವಿಚಾರವಾಗಿ ಈಗಾಗಲೇ ನಟಿಮಣಿಯಾರದ ರಾಗಿಣಿ ಮತ್ತು ಸಂಜನಾ ಗಲ್ರಾನಿ ಅರೆಸ್ಟ್ ಆಗಿದ್ದಾರೆ. ಇದರ ಜೊತೆಗೆ ನಟಿಯರ ಜೊತೆ ನಂಟು ಹೊಂದಿದ್ದ ವ್ಯಕ್ತಿಗಳನ್ನು ಪೊಲೀಸರು ಖೆಡ್ಡಾಗೆ ಬೀಳಿಸುತ್ತಿದ್ದಾರೆ. ಅಂತೆಯೇ ಶನಿವಾರ ವೈಭವ್ ಜೈನ್ ಎಂಬ ಚಿನ್ನದ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

    ಶನಿವಾರ ನಡೆದ ಸಿಸಿಬಿ ತನಿಖೆಯಲ್ಲಿ ವೈಭವ್ ಜೈನ್ ರವಿಶಂಕರ್ ಮತ್ತು ರಾಗಿಣಿಗೆ ನಾನೇ ಎಲ್‍ಎಸ್‍ಡಿ ಪಿಲ್ಸ್ ತಂದುಕೊಟ್ಟಿದ್ದೇ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಜೊತೆಗೆ ನಟಿ ರಾಗಿಣಿ, ರವಿಶಂಕರ್, ವೀರೇನ್ ಖನ್ನಾ ಹಾಗೂ ಇತರ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದೆ. ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಪಾರ್ಟಿಗಳು ನಡೆದಿದ್ದವು ಎಂದು ವೈಭವ್ ಜೈನ್ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ಈಗಾಗಲೇ ಪೊಲೀಸರು ಪಾರ್ಟಿ ಮಾಡಿರುವ ಬಗ್ಗೆ ಮೊಬೈಲ್ ತಾಂತ್ರಿಕ ತಜ್ಞರಿಂದ ವರದಿ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ನಾನು ಏನೂ ಮಾಡೇ ಇಲ್ಲ ಎಂದು ನಾಟಕವಾಡುತ್ತಿದ್ದ ರಾಗಿಣಿಗೆ ವೈಭವ್ ಜೈನ್ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನು ಪೊಲೀಸರು ತೋರಿಸಿದ್ದಾರೆ. ಇದನ್ನು ಕಂಡು ರಾಗಿಣಿ ಫುಲ್ ಸೈಲೆಂಟ್ ಆಗಿ ಹೋಗಿದ್ದಾರೆ. ಈ ಸಾಕ್ಷಿಗಳೇ ತುಪ್ಪದ ಹುಡ್ಗಿಗೆ ಮುಳುವಾಗಲಿವೆ ಎಂದು ಹೇಳಲಾಗಿದೆ.

    ಈ ಹಿಂದೆ ವಿದೇಶಿ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಬಗ್ಗೆ ಕೇಳಿದಾಗಲೂ ರಾಗಿಣಿ ನನಗೆ ಏನೂ ಗೊತ್ತೇ ಇಲ್ಲ ಎಂದು ಡ್ರಾಮಾ ಮಾಡಿದ್ದರು. ಆದರೆ ಸಿಸಿಬಿ ಪೊಲೀಸರು ಲೂಮ್ ಪೆಪ್ಪರ್ ರಾಗಿಣಿ ಮಾಡಿರುವ ಮೆಸೇಜ್‍ಗಳ ಕಾಪಿ ತೋರಿಸಿದಾಗ ಸೈಲೆಂಟ್ ಆಗಿದ್ದರು. ರಾಗಿಣಿ ತನಿಖೆಗೆ ಸಹಕರಿಸದಿರುವುದೇ ಆಕೆಗೆ ಮುಳುವಾಗಲಿದೇ ಎಂದು ಹೇಳಲಾಗಿದೆ. ಇಂದು ಸಿಸಿಬಿ ಪೊಲೀಸರು ರಾಗಿಣಿಯನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಿದ್ದಾರೆ.