Tag: ವೈಭವ್

  • ವೈಭವ್ ಕಣ್ಣಲ್ಲಿ ‘ಬಸ್ರಿಕಟ್ಟೆ’ ಹಾರರ್ ಕಥನ

    ವೈಭವ್ ಕಣ್ಣಲ್ಲಿ ‘ಬಸ್ರಿಕಟ್ಟೆ’ ಹಾರರ್ ಕಥನ

    ಸಾಮಾನ್ಯವಾಗಿ ಹಾರರ್ ಸಿನಿಮಾ ಎಂದಾಕ್ಷಣ ಕಾಡು, ಕತ್ತಲೆ, ದೆವ್ವ ಹೀಗೆ ಅನೇಕ ಅಂಶಗಳು ಕಣ್ಮುಂದೆ ಬರುತ್ತವೆ. ಆದರೆ, ಬಸ್ರಿಕಟ್ಟೆ ಸಿನಿಮಾ ಕೊಂಚ ವಿಭಿನ್ನ. ಇದೂ ಸಸ್ಪೆನ್ಸ್- ಹಾರರ್ ಸಿನಿಮಾವಾದರೂ ರಿಯಲಿಸ್ಟಿಕ್ ಆಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಅನಿಸಿಕೆ.

    ಬಸ್ರಿಕಟ್ಟೆ (Basrikate) ಸಿನಿಮಾಕ್ಕೆ ಯುವ ನಿರ್ದೇಶಕ ವೈಭವ್ ಎಂ (Vaibhav) ಆಕ್ಷನ್ ಕಟ್ ಹೇಳಿದ್ದಾರೆ. ಕರ್ನಾಟಕದಲ್ಲಿರುವ ಖ್ಯಾತ ಸ್ಥಳ ಬಸ್ರಿಕಟ್ಟೆಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತಾರೆ ವೈಭವ್. “ಈ ಚಿತ್ರದಲ್ಲಿ ಸಿನಿಮ್ಯಾಟಿಕ್ ಫೀಲ್ ಗಿಂತ ನ್ಯಾಚುರಲ್ ಆಗಿ ಮೂಡಿ ಬರಲಿ ಎಂಬ ಕಾರಣಕ್ಕೆ ರಿಯಲಿಸ್ಟಿಕ್ ಆಗಿಯೇ ಶೂಟಿಂಗ್ ಮಾಡಿದ್ದೇವೆ. ಮಂಗಳೂರು, ಚಿಕ್ಕಮಗಳೂರು, ಮೂಡುಬಿದಿರೆ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಮ್ಮ ಚಿತ್ರದ ಟ್ರೇಲರ್ ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಸ್ಟ್ರಾಂಗ್ ಆಗಿದೆ” ಎಂಬುದು ವೈಭವ್ ಅನಿಸಿಕೆ.

    ಕಳೆದ ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಬಳಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ವೈಭವ್, ಕೆಲವು ನಿರ್ಮಾಣ ಸಂಸ್ಥೆಗಳಲ್ಲಿ  ಸಾಕಷ್ಟು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ನಂತರ ಕೆಲವು ಕಿರುಚಿತ್ರಗಳನ್ನೂ ತಯಾರು ಮಾಡಿದ್ದಾರೆ. ಇಷ್ಟೆಲ್ಲ ಅನುಭವವನ್ನು ಬೆನ್ನಿಗೆ ಕಟ್ಟಿಕೊಂಡು ಈಗ ಬಸ್ರಿಕಟ್ಟೆ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ನಾಟಕ ಮತ್ತು ಬರವಣಿಗೆಯ ಗೀಳು ಹಚ್ಚಿಕೊಂಡಿದ್ದ ವೈಭವ್, ಆಗಲೇ ನಿರ್ದೇಶಕನಾಗುವ ಕನಸು ಕಟ್ಟಿಕೊಂಡಿದ್ದರು. ಆ ಕನಸು ಈಗ ನೆರವೇರಿದೆ. ತನ್ನದೇ ಯುವ ಪ್ರತಿಭೆಗಳ ತಂಡ ಕಟ್ಟಿಕೊಂಡು, ಕಂಟೆಂಟ್ ಸಿನಿಮಾಗಳನ್ನು ಮಾಡುವ ಯೋಜನೆ ವೈಭವ್ ಅವರಿಗಿದೆ. ಅನಾವಶ್ಯಕವಾಗಿ ಖರ್ಚು ಮಾಡದೇ, ಕಡಿಮೆ ಸಮಯದಲ್ಲಿ ಸಿನಿಮಾ ಮಾಡುವ ಕಲೆಗಾರಿಕೆ ಅವರಿಗೆ ಸಿದ್ಧಿಸಿರುವುದರಿಂದ, ಮುಂದೆಯೂ ಅದೇ ರೀತಿಯಲ್ಲಿ ಮುಂದುವರಿಯುವ ಆಲೋಚನೆಯಲ್ಲಿದ್ದಾರೆ ವೈಭವ್.

    ಐಟಿ ಕ್ಷೇತ್ರದ ಮಂದಿ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾನಾ ವರ್ಗದ ಜನರಿಗೆ ಟ್ರೇಲರ್ ಸಾಕಷ್ಟು ಇಷ್ಟವಾಗಿದ್ದು, ನವೆಂಬರ್ 3 ರಂದು ಸಿನಿಮಾ ತೆರೆ ಕಾಣಲಿದೆ. ಗೀತಾಂಜಲಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಎನ್ ಪೈ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ಕನ್ನಡದ ಕಿರಗೂರಿನ ಗಯ್ಯಾಳಿಗಳು, ಕಾಫಿ ತೋಟ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಮಾದೇವ್ (Rahul Madev)ನಾಯಕ. ಮುಂದಿನ ನಿಲ್ದಾಣ ಸಿನಿಮಾ ಖ್ಯಾತಿಯ ಅನನ್ಯ ಕಶ್ಯಪ್ (Ananya Kashyap) ನಾಯಕಿ. ಉಳಿದಂತೆ ಬಲರಾಜವಾಡಿ, ಕಿರಣ್ ನಾಯ್ಕ್, ಸಿದ್ಲಿಂಗು ಶ್ರೀಧರ್ ಮುಂತಾದವರು ತಾರಾಗಣದಲ್ಲಿದ್ದಾರೆ. ಅಶ್ವಿನ್ ಕೆನಡಿ ಛಾಯಾಗ್ರಹಣ, ಕದ್ರಿ ಮಣಿಕಾಂತ್ ಸಂಗೀತ ಹಾಗೂ ಉಮೇಶ್ ಸಂಕಲನ ಬಸ್ರಿಕಟ್ಟೆ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    ವೈಭವ್ ಬಗ್ಗೆ ಮೊದಲೇ ಗೊತ್ತಿದ್ರೆ ನಾನೇ ಆತನ ಕಪಾಳಕ್ಕೆ ಹೊಡಿತ್ತಿದ್ದೆ: ಸಂತೋಷ್

    – ವಿಚಾರಣೆಗೆ ಹಾಜರಾದ ಅಕುಲ್, ಸಂತೋಷ್

    ಬೆಂಗಳೂರು: ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೇ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ ಎಂದು ನಟ ಸಂತೋಷ ಹೇಳಿದರು. ಇದನ್ನೂ ಓದಿ: ಆಫ್ಟರ್ ಪಾರ್ಟಿಗೆ ಪ್ರತ್ಯೇಕ ಆಹ್ವಾನ ಇರುತ್ತೆ, ಭಾರೀ ಹಣ ಖರ್ಚು ಮಾಡ್ತಾರೆ- ನಟ ಸಂತೋಷ್ ಕುಮಾರ್

    ಸಿಸಿಬಿ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಸಂತೋಷ್, ವಾಟ್ಸಪ್ ಮೂಲಕ ಸಿಸಿಬಿ ಅವರು ನನಗೆ ನೋಟಿಸ್ ಕಳುಹಿಸಿದ್ದಾರೆ. ನನಗೂ ಈ ಡ್ರಗ್ಸ್ ವಿಚಾರದಲ್ಲಿ ಏನೂ ಸಂಬಂಧ ಎಂದು ಹುಡುಕುತ್ತಿದ್ದಾಗ ನಾಲ್ಕು ವರ್ಷದ ಹಿಂದೆ ಒಂದು ವಿಲ್ಲಾದಲ್ಲಿ ಉಳಿದುಕೊಂಡಿದ್ದೆ. ಆಗ ಆರೋಪಿ ಆಗಿರುವ ವೈಭವ್ ಜೈನ್ ಪರಿಚಯವಾಗಿತ್ತು. ವೈಭವ್ ವಯಕಾಲಿಕನಲ್ಲಿ ಒಂದು ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದನು. ಆತನಿಗೆ ಎರಡು ಮಕ್ಕಳಿವೆ, ಕುಟುಂಬಸ್ಥರ ಜೊತೆ ಶಬರಿಮಲೆ, ತಿರುಪತಿಗೆ ಬರುತ್ತಿದ್ದರು ಎಂದು ಹೇಳಿದರು. ಇದನ್ನೂ ಓದಿ: ಜನ್ರಿಂದ ಸೈ ಎನಿಸಿಕೊಳ್ಳೋದಕ್ಕಿಂತ ಬೆಸ್ಟ್ ಡ್ರಗ್ ಇಲ್ಲ: ಅಕುಲ್

    ನನಗೆ ದೂರವಾಗುತ್ತದೆ ಎಂದು ವಿಲ್ಲಾಯಿಂದ ಸಿಟಿಗೆ ಶಿಫ್ಟ್ ಆದೆ. ಕೆಲವು ಕಡೆ ಪಾರ್ಟಿ ಮಾಡಲು ವಿಲ್ಲಾ ಕೊಡುತ್ತಾರೆ. ಅದೇ ರೀತಿ ನನ್ನ ಮನೆಯನ್ನು ಮಾರ್ಕೆಟಿಂಗ್ ಮಾಡಲು ವೈಭವ್‍ಗೆ ವಿಲ್ಲಾ ಕೊಟ್ಟಿದ್ದೆ. ಆದರೆ 10ಕ್ಕಿಂತ ಹೆಚ್ಚು ಜನರನ್ನು ಸೇರಿಸಬಾರದೆಂದು ತಿಳಿಸಿದ್ದೆ. ಆದರೂ ಹೆಚ್ಚಿನ ಜನರನ್ನು ಕರೆಸುತ್ತಿದ್ದನು. ಇದೇ ವಿಚಾರಕ್ಕೆ ನನಗೂ ವೈಭವ್ ಜೈನ್‍ಗೂ ವ್ಯವಹಾರದ ವಿಚಾರದಲ್ಲಿ ಎರಡು ಬಾರಿ ಜಗಳವಾಗಿತ್ತು. ಯಾಕೆ ಜಗಳ ಆಗಿತ್ತು? ಆ ಎಲ್ಲಾ ಬಗೆಗಿನ ಡಾಕ್ಯುಮೆಂಟ್‍ಗಳನ್ನ ತೆಗೆದುಕೊಂಡು ಹೋಗುತ್ತಿದ್ದೇನೆ. ಸಿಸಿಬಿ ವಿಚಾರಣೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತೇನೆ ಎಂದರು.

    ನಾಲ್ಕು ಬಾರಿ ಜಗಳ ಮಾಡಿದ ನಂತರ ಅವನ ಹತ್ತಿರ ನನ್ನ ವ್ಯವಹಾರವನ್ನು ಕ್ಯಾನ್ಸಲ್ ಮಾಡಿದೆ. ಆದರೆ ವೈಭವ್ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ ಅಂತ ಈಗ ಗೊತ್ತಾಗಿದೆ. ಮೊದಲೆ ಗೊತ್ತಾಗಿದ್ದರೆ ದೇವರ ಮೇಲಾಣೆ ನಾನೇ ಅವನ ಕಪಾಳಕ್ಕೆ ಹೊಡೆಯುತ್ತಿದ್ದೆ. ಯಾಕೆಂದರೆ ಎರಡು ಮಕ್ಕಳ ತಂದೆ, ಜೀವನದಲ್ಲಿ ಮುಂದೆ ಬರಬೇಕು ಅಂದಕೊಂಡಿದ್ದ. ಆದರೆ ಈಗ ಸಿಸಿಬಿ, ಮಾಧ್ಯಮಗಳಿಂದ ಅವನ ಬಗ್ಗೆ ಗೊತ್ತಾಗುತ್ತಿದೆ ಎಂದು ಸಂತೋಷ್ ಹೇಳಿದರು.

    ಸಂಜನಾ, ಐಂದ್ರಿತಾ ಎಲ್ಲರೂ ನನ್ನ ಗೆಳೆಯರು. ಐದು ವರ್ಷದ ಹಿಂದೆ ಸಂಜನಾ ಹುಟ್ಟುಹಬ್ಬದ ಪಾರ್ಟಿಗೆ ಹೋಗಿದ್ದೆ. ಈ ವೇಳೆ ರಾಹುಲ್ ಸಿಕ್ಕಿದ್ದ. ಆತ ಸೆಲೆಬ್ರಿಟಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಫೇಸ್‍ಬುಕ್‍ಗೆ ಹಾಕುತ್ತಿದ್ದನು. ಮತ್ತೆ ಯುಬಿ ಸಿಟಿಯಲ್ಲಿ ರಾಹುಲ್ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ. ಎರಡು ಪಾರ್ಟಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದೆ. ಈಗ ಅದೇ ಫೋಟೋ ಸಿಕ್ಕಿರುವುದು ಎಂದರು.

    ಇನ್ನೂ ವಿಚಾರಣೆಗೆ ಬಂದು ಅಕುಲ್, ಸಿಸಿಬಿ ವಿಚಾರಣೆಗೆ ಕರೆದಿದ್ದಾರೆ. ಹೀಗಾಗಿ ಹೇಳಿದ್ದ ಸಮಯಕ್ಕೆ ಬಂದಿದ್ದೇನೆ. ನನ್ನ ಕಡೆಯಿಂದ ಸಹಕಾರ ಇರುತ್ತೆ. ನಾನು ವೈಭವ್ ಜೈನ್ ಹಾಯ್ ಬಾಯ್ ಫ್ರೆಂಡ್ಸ್ ಅಷ್ಟೇ. ದೊಡ್ಡಬಳ್ಳಾಪುರದಲ್ಲಿ ರೆಸಾರ್ಟ್ ಕೊಟ್ಟಿರುವ ಬಗ್ಗೆ ನಾನು ದಾಖಲೆಗಳೊಂದಿಗೆ ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯ, ಸಿಸಿಬಿಗೆ ನನ್ನ ಸಾಥ್ ಇದೆ. ವಿಚಾರಣೆಗೆ ನಾನು ಸ್ಪಂದಿಸಲಿದ್ದೇನೆ ಎಂದರು. ಪ್ರತೀಕ್ ಶೆಟ್ಟಿ ಪರಿಚಯವೇ ಎಂಬ ಪ್ರಶ್ನೆಗೆ ಸ್ಪಷ್ಟನೆ, ಆತ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಅಕುಲ್ ಸ್ಪಷ್ಟಪಡಿಸಿದರು.

    ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿದಂತೆ ವಿಚಾರಣೆಗೆ ಹಾಜರಾಗುವಂತೆ ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಇಂದು ಇಬ್ಬರೂ ಸಿಸಿಬಿ ಕಚೇರಿಗೆ ಹಾಜರಾಗಿದ್ದು, ಸಿಸಿಬಿ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

  • ನಾನು ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡಿದ್ವಿ- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರವಿಶಂಕರ್

    ನಾನು ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡಿದ್ವಿ- ಸ್ಫೋಟಕ ಮಾಹಿತಿ ಬಿಚ್ಚಿಟ್ಟ ರವಿಶಂಕರ್

    – ವಿಚಾರಣೆ ವೇಳೆ ಹಲವು ವಿಚಾರ ಬಹಿರಂಗ

    ಬೆಂಗಳೂರು: ನಾನು ಹಾಗೂ ರಾಗಿಣಿ ಒಟ್ಟಿಗೆ ಡ್ರಗ್ಸ್ ಸೇವನೆ ಮಾಡುತ್ತಿದ್ದೆವು ಎಂದು ಸಿಸಿಬಿ ಮುಂದೆ ಆರೋಪಿ ರವಿಶಂಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ.

    ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿ ರವಿಶಂಕರ್ ಬಾಯಿಬಿಡಿಸಿದ್ದಾರೆ. ಈ ವೇಳೆ ಆತ ನಾನು ರಾಗಿಣಿ ಒಟ್ಟಿಗೆ ಡ್ರಗ್ ಸೇವನೆ ಮಾಡಿದ್ವಿ. ಒಂದು ಮಾತ್ರೆಯ ‘ಕಾಲು ಭಾಗ’ ಇಬ್ಬರು ತಗೊಂಡಿದ್ವಿ. ವೈಭವ್ ಜೈನ್ ಮೂಲಕ ಡ್ರಗ್ಸ್ ತರಿಸಿಕೊಂಡಿದ್ವಿ ಎಂಬುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಸೆಂಟ್ ಮಾರ್ಕ್ಸ್ ರಸ್ತೆಯ ಏರ್ ಲೈನ್ಸ್ ಹೋಟೆಲ್‍ನಲ್ಲಿ ನಾನು ರಾಗಿಣಿ ಭೇಟಿಯಾಗಿದ್ವಿ. ಸೆಂಟ್ ಮಾರ್ಕ್ಸ್ ರಸ್ತೆಯ ಕಬಾಬ್ ಕಾರ್ನರ್ ಬಳಿ ಡ್ರಗ್ಸ್ ನೀಡಿದ್ದ. ಆನಂತರ ನಾವು ಅದನ್ನ ಪಡೆದುಕೊಂಡು ಊಟ ಮಾಡಿ ಹೋಗಿದ್ದೆವು. ಬಳಿಕ ನಾವು ಹೊಟೇಲ್‍ಗೆ ವಾಪಸ್ ಹೋದೆವು ಎಂಬ ಮಾಹಿತಿಯನ್ನು ರವಿಶಂಕರ್ ನೀಡಿದ್ದಾನೆ.

    ಕೊರೊನಾ ಲಾಕ್‍ಡೌನ್ ಟೈಂ ಸಮಯದಲ್ಲೂ ನಮ್ಮ ಬಿಸಿನೆಸಲ್ ನಿಲ್ಲಿಸಿರಲಿಲ್ಲ. ನಗರದಲ್ಲಿ ಎಲ್ಲಾ ಕ್ಲೋಸ್ ಆದ ಮೇಲೆ ಬೆಂಗಳೂರಿನ ಹೊರವಲಯಕ್ಕೆ ಶಿಫ್ಟ್ ಆಗಿತ್ತು. ಆ ನಂತರ ಪಾರ್ಟಿಗಳನ್ನ ನಗರದ ಹೊರವಲಯಕ್ಕೆ ಶಿಫ್ಟ್ ಮಾಡಲಾಯ್ತು. ಅಲ್ಲಿ ವಿನಯ್, ಅರುಣ್, ಚರಣ್ ಸಾಥ್ ನೀಡಿದ್ರು. ವೈಭವ್ ಅಲ್ಲಿಗೆ ಡ್ರಗ್ ಸಪ್ಲೈ ಮಾಡ್ತಾ ಇದ್ದ. ಅಲ್ಲದೆ ಸೋಷಿಯಲ್ ಮೀಡಿಯಾ ಮೂಲಕ ಶ್ರೀಮಂತರ ಮಕ್ಕಳಿಗೆ ಮೆಸೇಜ್ ಮಾಡಿ ಕೆಲ ಕೋಡ್ ವರ್ಡ್ ಗಳ ಮೂಲಕ ಕರೆಸಲಾಗ್ತಿತ್ತು. ಈ ವೇಳೆ ಜಿಮ್ಮರ್ ಪ್ರಶಾಂತ್ ರಾಂಕಾ ಆಯೋಜನೆಗೆ ಸಾಥ್ ನೀಡಿದ್ದ. ಇನ್ನೂ ಪಾರ್ಟಿ ಆಯೋಜನೆಗೆ ಪ್ರಶಾಂತ್ ರಾಜ್ ಫಾರಂ ಹೌಸ್ ವ್ಯವಸ್ಥೆ ಮಾಡ್ತಿದ್ದ. ಈ ಪಾರ್ಟಿಗಳಿಗೆ ಎಕ್ಟಸಿ ಪಿಲ್ಸ್ ಡ್ರಗ್ ಬಳಕೆ ಮಾಡಲಾಗ್ತಿತ್ತು ಎಂದು ರವಿಶಂಕರ್ ವಿವರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಆದಿತ್ಯ ಆಳ್ವಾ, ವೈಭವ್ ಪಾತ್ರವೇನು?:
    ಪ್ರಕರಣದಲ್ಲಿ ಆದಿತ್ಯ ಆಳ್ವಾ ಮತ್ತು ವೈಭವ್ ದಂಧೆ ಮಾಹಿತಿ ಏನು ಎಂಬುದರ ಬಗ್ಗೆಯೂ ಎಳೆ ಎಳೆಯಾಗಿ ರವಿಶಂಕರ್ ಬಿಚ್ಚಿಟ್ಟಿದ್ದಾನೆ. ಮಾಜಿ ಸಚಿವರ ಪುತ್ರನೊಬ್ಬ ಗೋಲ್ಡ್ ಬ್ಯುಸಿನೆಸ್ ಮ್ಯಾನ್ ವೈಭವ್‍ಗೆ ಸಾಥ್ ನೀಡಿದ್ದಾನೆ. ಹೌದು ಈ ವೈಭವ್ ಜೈನ್ ಗೆ ಸಾಥ್ ನೀಡಿದ್ದು ದಿ.ಜೀವರಾಜ್ ಆಳ್ವಾ ಪುತ್ರ ಆದಿತ್ಯಾ ಆಳ್ವಾ. ವೈಭವ್ ಪಾರ್ಟಿ ಆಯೋಜಿಸಲು ಆದಿತ್ಯ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಜಾಗದ ವ್ಯವಸ್ಥೆ ಮಾಡಿದ್ದ. ತನ್‍ನ ಹೌಸ್ ಆಫ್ ಲಿಫ್ಟ್ ಪಕ್ಕದ ಫಾರಂ ಹೌಸ್ & ಕಿಟ್ ಕ್ಲೋಕ್ಕನ್ ನಲ್ಲಿ ಆಯೋಜನೆ ಮಾಡಿದ್ದ. ಅದಕ್ಕೆ ನಾನು ಮತ್ತೆ ರಾಗಿಣಿ ಸಾಥ್ ನೀಡಲು ಶುರು ಮಾಡಿದ್ವಿ. ನಮ್ಮ ಮೊಬೈಲ್ ನಂಬರ್ ಕಾಂಟ್ಯಾಕ್ಟ್ ಬಳಸಿಕೊಂಡ್ವಿ. ದೊಡ್ಡ ದೊಡ್ಡವರ ಮಕ್ಕಳನ್ನ ಪಾರ್ಟಿಗೆ ಕರೆಸುತ್ತಿದ್ವಿ. ಆರೋಪಿಗಳೆಲ್ಲರೂ ಒಟ್ಟಿಗೆ ಸೇರಿ ಈ ಬ್ಯುಸಿನೆಸ್ ನಡೆಸುತ್ತಿದ್ದರು.

    ಪ್ರತೀಕ್ ಶೆಟ್ಟಿ ರೋಲ್ ಬಿಚ್ಚಿಟ್ಟ ರವಿಶಂಕರ್.!
    ಪ್ರತೀಕ್ ಶೆಟ್ಟಿ 2018ರ ಬಾಣಸವಾಡಿ ಕ್ರೈಂ ನಂಬರ್ 588ರ ಆರೋಪಿ. ಅದೇ ಪ್ರಕರಣದ ಮುಂದುವರಿದ ಭಾಗವಾಗಿಯೂ ಸದ್ಯ ತನಿಖೆ ನಡೆಯುತ್ತಿದೆ. ಈ ಪ್ರತೀಕ್ ಶೆಟ್ಟಿ ರವಿಶಂಕರ್ ಹೆಂಡತಿ ತಂಗಿಯ ಬಾಯ್ ಫ್ರೆಂಡ್. ಆತ ಟೆಕ್ಕಿಯಾಗಿದ್ದು, ಆತನಿಗೆ ಚಿನ್ನದ ವ್ಯಾಪಾರಿ ವೈಭವ್ ಜೈನ್ ಬ್ಯುಸಿನೆಸ್ ಪಾರ್ಟನರ್ ಆಗಿದ್ದ. ಹೀಗಾಗಿ ಈ ಡ್ರಗ್ಸ್ ಬ್ಯುಸಿನೆಸ್ ಮಾಡಲು ಕೂಡ ಪಾರ್ಟನರ್ ಆದ. ಇವರು ಮೂರು ನಾಲ್ಕು ವರ್ಷಗಳಿಂದ ಈ ಬ್ಯುಸಿನೆಸ್ ಮಾಡ್ತಿದ್ದಾರೆ. ವೀಕ್ ಎಂಡ್ ಪಾರ್ಟಿ ಆಯೋಜನೆ ಮಾಡಿ ಹಣ ಮಾಡ್ತಿದ್ದರು. ಬಂದವರಿಗೆ, ಊಟ, ಎಣ್ಣೆ ಮತ್ತು ಮಾದಕ ಮತ್ತು ಸಪ್ಲೆ ಮಾಡ್ತಿದ್ದರಂತೆ. ಹೀಗೆ ಮಾಡಲು ಹೋಗಿ 2018 ರಲ್ಲಿ ತಗ್ಲಾಕೊಂಡು ಜೈಲಿಗೆ ಹೋಗಿದ್ದ. ಈ ವೇಳೆ ವೈಭವ್ ಜೈನ್ ಹೆಸರು ಕೇಳಿ ಬಂದಿತ್ತು. ಆಗ ಮಾಜಿ ಮಿನಿಸ್ಟರ್ ಮಗ ಅಂತ ಆದಿತ್ಯ ಆಳ್ವಾ, ವೈಭವ್ ನ ಬಚಾವ್ ಮಾಡಿದ್ನಂತೆ. ಸದ್ಯ ಆ ಕೇಸ್ ತನಿಖೆ ಈಗ ನಡೆಯುತ್ತಿದೆ.

    ಒಟ್ಟಿನಲ್ಲಿ ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಆರೋಪ ಪ್ರಕರಣಕ್ಕೆ ಸಂಬಂಧಿಸದಂತೆ ವಿಚಾರಣೆಯ ವೇಳೆ ಆರೋಪಿಗಳ ಬಣ್ಣ ಬಯಲಾಗುತ್ತಿದೆ. ಅಲ್ಲದೆ ಈ ಮಧ್ಯೆ ಆರೋಪಿಗಳ ಇತರ ಕೆಲ ಪ್ರಕರಣಗಳು ಕೂಡ ಒಂದೊಂದಾಗಿ ಹೊರಬರುತ್ತಿದ್ದು, ಮುಂದೇನಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

  • ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಐವತ್ತನೇ ದಿನದಾಚೆಗೆ ಮುನ್ನುಗ್ಗಿದ ತಾರಕಾಸುರ!

    ಬೆಂಗಳೂರು: ನಮ್ಮ ನಡುವಿದ್ದೂ ನಾವ್ಯಾರೂ ಗಮನಿಸದ ರೋಚಕ ಕಥಾನಕ ಹೊಂದಿದ್ದ ಚಿತ್ರ ತಾರಕಾಸುರ. ಭರ್ಜರಿಯಾಗಿಯೇ ಓಪನಿಂಗ್ ಪಡೆದುಕೊಂಡು ಪ್ರೇಕ್ಷಕರನ್ನ ಆವರಿಸಿಕೊಂಡಿದ್ದ ಈ ಸಿನಿಮಾ ಈಗ ಐವತ್ತನೇ ದಿನ ಪೂರೈಸಿಕೊಂಡು ಯಶಸ್ಸಿನ ಓಟವನ್ನ ಮುಂದುವರೆಸಿದೆ. ಈ ಮೂಲಕ ಭರಪೂರವಾದ ಗೆಲುವೊಂದನ್ನು ತನ್ನದಾಗಿಸಿಕೊಂಡಿದೆ.

    ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಯಾರೂ ಮುಟ್ಟದ ಕಥಾವಸ್ತು `ತಾರಕಾಸುರ’ ಚಿತ್ರದ್ದು. ಈ ಹಿಂದೆ ಇದೇ ನಿರ್ದೇಶಕ ಬಂಡಿಯಪ್ಪ `ರಥಾವರ’ದಲ್ಲಿ ಮಂಗಳಮುಖಿಯರ ವಿಚಿತ್ರ ಜಗತ್ತನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು. ಈ ಬಾರಿ ಬುಡಬುಡಕೆ ಜನಾಂಗದವರ ವಿಚಾರವನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಇತಿಹಾಸವನ್ನು ಹೇಳುತ್ತಲೇ ವಾಸ್ತವದ ಜೊತೆಗೆ ಕಮರ್ಷಿಯಲ್ ಕತೆಯನ್ನು ಬೆರೆಸಿರುವುದು ಬಂಡಿಯಪ್ಪನವರ ಜಾಣ್ಮೆ. ಈ ಚಿತ್ರದ ಹೀರೋ ವೈಭವ್ ಹೊಸಬನಾದರೂ ಸಾಹಸ ದೃಶ್ಯಗಳಲ್ಲಿ ರೋಚಕವಾಗಿ ಅಭಿನಯಿಸಿದ್ದಾರೆ. ನಾಯಕಿ ಮಾನ್ವಿತಾ ಮುದ್ದುಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ನರಸಿಂಹಲು ನಿರ್ದೇಶನದ ಈ ಚಿತ್ರದಲ್ಲಿ ಅವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಡ್ಯಾನಿ ಸಫಾನಿಯಂಥಾ ರಾಕ್ಷಸ ಪ್ರತಿಭೆಯ ಮುಂದೆ ನಟಿಸಿ, ಥರ ಥರದ ಶೇಡುಗಳನ್ನು ಆವಾಹಿಸಿಕೊಂಡಿರೋ ವೈಭವ್ ಪಾಲಿಗೂ ಇದು ಮಹಾ ಗೆಲುವು. ಪ್ರತಿ ಸೀನುಗಳಲ್ಲಿಯೂ ಅಚ್ಚರಿಗಳನ್ನೇ ತೆರೆದಿಡುವ ಈ ಚಿತ್ರವನ್ನು ಪ್ರೇಕ್ಷಕರು ಒಪ್ಪಿಕೊಂಡು ಅಪ್ಪಿಕೊಂಡಿದ್ದಾರೆ. ಆದ್ದರಿಂದಲೇ ತಾರಕಾಸುರ ಐವತ್ತನೇ ದಿನದಾಚೆಗೂ ಗೆಲುವಿನ ಪಯಣ ಮುಂದುವರೆಸಿದ್ದಾನೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv