Tag: ವೈದ್ಯಕೀಯ ವಿದ್ಯಾರ್ಥಿ

  • Mandya | ಕಾಲೇಜು ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

    Mandya | ಕಾಲೇಜು ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

    ಮಂಡ್ಯ: ವೈದ್ಯಕೀಯ ವಿದ್ಯಾರ್ಥಿ (Medical Student) ಹಾಸ್ಟೆಲ್‌ನಲ್ಲಿ (Hostel) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯಲ್ಲಿ ನಡೆದಿದೆ.

    ಕೊಪ್ಪಳ (Koppal) ಮೂಲದ ಭರತ್ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಓದಿನ ಬಗ್ಗೆ ನಿರಾಸಕ್ತಿ ಹೊಂದಿದ್ದ ಭರತ್ ಮೊದಲ ವರ್ಷದ ಪರೀಕ್ಷೆಗಳಿಗೆ ಗೈರಾಗಿದ್ದ. ಅಲ್ಲದೇ ಕಾಲೇಜಿಗೂ ಸಹ ಭರತ್ ಸರಿಯಾಗಿ ಹೋಗುತ್ತಿರಲಿಲ್ಲ. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ಗೆ ಟ್ವಿಸ್ಟ್‌ – ಪ್ರಮುಖ ಆರೋಪಿಯಿಂದ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್

    ಫುಟ್ಬಾಲ್ ಆಟದಲ್ಲಿ ಭರತ್ ಹೆಚ್ಚಿನ ಆಸಕ್ತಿ ಹೊಂದಿದ್ದ. ಮೊದಲ ವರ್ಷ ಗೈರು ಆಗಿದ್ದ ಪರೀಕ್ಷೆಗಳನ್ನು ಈ ಬಾರಿ ಪಾಸ್ ಮಾಡಿಕೊಳ್ಳಬೇಕೆಂದು ಪರೀಕ್ಷಾ ಶುಲ್ಕವನ್ನು ಕಟ್ಟಲು ಭರತ್ ಮುಂದಾಗಿದ್ದ. ಭಾನುವಾರ ರಾತ್ರಿ 12 ಗಂಟೆವರೆಗೆ ಹಾಸ್ಟೆಲ್‌ನ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದಾನೆ. ಬಳಿಕ ತನ್ನ ಕೊಠಡಿಗೆ ಬಂದು ನೇಣು ಬಿಗಿದುಕೊಂಡು ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮುಡಾ ಕೇಸ್ | ಇಡಿ-ಬಿಜೆಪಿ ಪಾಲುದಾರಿಕೆಯ ಪ್ರಚಾರವನ್ನು ಸುಪ್ರೀಂ ರದ್ದುಗೊಳಿಸಿದೆ: ಸುರ್ಜೇವಾಲಾ

    ಇಂದು ಬೆಳಗ್ಗೆ ಸಹಪಾಠಿಗಳು ನೋಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಮಂಡ್ಯ ಪೂರ್ವ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿ ಹರಿಬಿಟ್ಟ ಆರೋಪ – ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ರದ್ದುಗೊಳಿಸಿದ ಸುಪ್ರೀಂ

  • ವಿಜಯಪುರದ MBBS ವಿದ್ಯಾರ್ಥಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು

    ವಿಜಯಪುರದ MBBS ವಿದ್ಯಾರ್ಥಿ ತಮಿಳುನಾಡಿನಲ್ಲಿ ಹೃದಯಾಘಾತದಿಂದ ಸಾವು

    ವಿಜಯಪುರ: 26 ವರ್ಷದ ವೈದ್ಯಕೀಯ ವಿದ್ಯಾರ್ಥಿ ಹೃದಯಾಘಾತಕ್ಕೆ (Heart Attack) ಬಲಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿಯನ್ನು ವಿಜಯಪುರ (Vijayapura) ಜಿಲ್ಲೆಯ ಆಲಮೇಲ (Almel) ತಾಲೂಕಿನ ಕುಮಸಗಿ (Kumasagi) ಗ್ರಾಮದ ವೈಭವ ಕುಲಕರ್ಣಿ (26) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಹಾಸನ| ಇಂದು ಒಂದೇ ದಿನ ಗೃಹಿಣಿ, ಪ್ರೊಫೆಸರ್‌, ಸರ್ಕಾರಿ ನೌಕರ ಹೃದಯಾಘಾತಕ್ಕೆ ಬಲಿ

    ಮೃತ ವೈಭವ ಬಾಗಲಕೋಟೆಯ (Bagalkote) ವಿವಿಎಸ್ ಮೆಡಿಕಲ್ ಕಾಲೇಜಿನಲ್ಲಿ (VVS Medical College)  ಎಂಬಿಬಿಎಸ್ (MBBS) ಓದುತ್ತಿದ್ದ. ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವೈಭವ ತಮಿಳುನಾಡು (Tamilnadu) ಪ್ರವಾಸಕ್ಕೆಂದು ಹೋಗಿದ್ದ. ಪ್ರವಾಸದಿಂದ ವಾಪಸ್ ಬರುವಾಗ ಉಸಿರಾಟದ ತೊಂದರೆಯಾಗಿತ್ತು. ಹೀಗಾಗಿ ಆತನ ಗೆಳೆಯರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಸದ್ಯ ಸಂಬಂಧಿಕರು ಮೃತದೇಹವನ್ನು ಆಲಮೇಲ ತಾಲೂಕಿನ ಸ್ವಗ್ರಾಮ ಕುಮಸಗಿಗೆ ಕೊಂಡೊಯ್ಯುತ್ತಿದ್ದಾರೆ.ಇದನ್ನೂ ಓದಿ: ನಾನೂ ಸುರ್ಜೇವಾಲಾ ಭೇಟಿಗೆ ಸಮಯ ಕೇಳಿದ್ದೇನೆ: ಪರಮೇಶ್ವರ್

  • ಖಾಸಗಿ ಅಂಗವನ್ನೇ ಕತ್ತರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿ

    ಖಾಸಗಿ ಅಂಗವನ್ನೇ ಕತ್ತರಿಸಿಕೊಂಡು ಆತ್ಮಹತ್ಯೆಗೆ ಶರಣಾದ ವೈದ್ಯಕೀಯ ವಿದ್ಯಾರ್ಥಿ

    ಹೈದರಾಬಾದ್: ಖಿನ್ನತೆಯಿಂದ ಬಳಲುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ (Medical Student) ತನ್ನ ಖಾಸಗಿ ಅಂಗವನ್ನೇ (Private Part) ಕತ್ತರಿಸಿಕೊಂಡು ತನ್ನ ಜೀವನವನ್ನೇ ಅಂತ್ಯಗೊಳಿಸಿರುವ ಆಘಾತಕಾರಿ ಘಟನೆ ತೆಲಂಗಾಣದ (Telangana) ಸಿಕಂದರಾಬಾದ್‌ನಲ್ಲಿ ನಡೆದಿದೆ.

    ಮೃತ ವೈದ್ಯಕೀಯ ವಿದ್ಯಾರ್ಥಿಯನ್ನು ದೀಕ್ಷಿತ್ ರೆಡ್ಡಿ (21) ಎಂದು ಗುರುತಿಸಲಾಗಿದೆ. ಆತ ಕಳೆದ 4 ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಭಾನುವಾರ ಲೇಸರ್ ಬ್ಲೇಡ್ ಬಳಸಿ ತನ್ನ ಖಾಸಗಿ ಅಂಗವನ್ನೇ ಕತ್ತರಿಸಿಕೊಳ್ಳುವ ಮೂಲಕ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ದೀಕ್ಷಿತ್ ರೆಡ್ಡಿ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರೂ ಕಳೆದ 2-3 ತಿಂಗಳಿನಿಂದ ಔಷಧ ಸೇವಿಸುವುದನ್ನು ನಿಲ್ಲಿಸಿದ್ದ ಎನ್ನಲಾಗಿದೆ. ಆದರೆ ವಿದ್ಯಾರ್ಥಿ ಆತ್ಮಹತ್ಯೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಮನಾಲಿ ಪ್ರವಾಸಕ್ಕೆಂದು ತೆರಳಿದ್ದ ಮೈಸೂರಿನ ಪ್ರವಾಸಿಗರು ನಾಪತ್ತೆ

    ಈ ಬಗ್ಗೆ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಜ್ಯುವೆಲರಿ ಶಾಪ್‌ನಲ್ಲಿ ಕೈಚಳಕ – ಆಭರಣ ಖರೀದಿ ನೆಪದಲ್ಲಿ ನೆಕ್ಲೇಸ್ ಎಗರಿಸಿದ ಮಹಿಳೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರು, ಲಾರಿ ಮುಖಾಮುಖಿ ಡಿಕ್ಕಿ – ವೈದ್ಯಕೀಯ ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ಕಾರು, ಲಾರಿ ಮುಖಾಮುಖಿ ಡಿಕ್ಕಿ – ವೈದ್ಯಕೀಯ ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ಹಾವೇರಿ: ಕಾರು (Car) ಮತ್ತು ಲಾರಿ (Lorry) ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲನೆ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ (Medical Student) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಶಿಗ್ಗಾಂವಿ (Shiggavi) ತಾಲೂಕಿನ ಬಂಕಾಪುರ (Bankapura) ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದ್ದು, ಅಖಿಲ್ ಕುಂಬಾರ (27) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿ ಅಖಿಲ್ ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ಬೆಳಗಾವಿಯಲ್ಲಿ ಎಂಬಿಬಿಎಸ್ ಮುಗಿಸಿದ್ದು, ಎಂ.ಡಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಫ್ಲೈಓವರ್‌ನಿಂದ ರೈಲ್ವೇ ಹಳಿಗೆ ಬಿದ್ದ ಕಾರು – ಐವರಿಗೆ ಗಂಭೀರ ಗಾಯ

    ಭಾನುವಾರ ಬೆಳಗಾವಿಯಿಂದ (Belagavi) ದಾವಣಗೆರೆಗೆ (Davanagere) ಹೋಗುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬಂಕಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಕಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು – ಹೊರಬರಲಾರದೆ ಚಾಲಕ ಸಜೀವದಹನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ವಿದ್ಯಾರ್ಥಿ ಕೆರೆಯಲ್ಲೇ ಮುಳುಗಿ ಸಾವು

    ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ವಿದ್ಯಾರ್ಥಿ ಕೆರೆಯಲ್ಲೇ ಮುಳುಗಿ ಸಾವು

    ಹಾವೇರಿ: ಕೆರೆಯ ಆಳ ಗೊತ್ತಿಲ್ಲದೆ ಐವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದ ವೈದ್ಯಕೀಯ ಕಾಲೇಜು (Medical College) ವಿದ್ಯಾರ್ಥಿ (Student) ಕೆರೆಯಲ್ಲೇ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ನಗರದ ಹೊರ ವಲಯದಲ್ಲಿ ನಡೆದಿದೆ.

    ಹೊಸ ವೈದ್ಯಕೀಯ ಕಾಲೇಜು ಪ್ರಾರಂಭವಾಗಿ, ಮೊದಲ ಬ್ಯಾಚ್‌ಗೆ ತರಗತಿ ಆರಂಭವಾಗಿತ್ತು. 15 ದಿನಗಳು ಕಳೆಯೋದ್ರಲ್ಲೆ ಇಂತಹ ದುರಂತ ಸಂಭವಿಸಿದೆ. ಕಾಲೇಜಿಗೆ ಪ್ರವೇಶ ಪಡೆದಿದ್ದ ಮೈಸೂರು ಮೂಲದ ವಿದ್ಯಾರ್ಥಿ ನೋಮನ್ ಪಾಷಾ ತಾನು ತಂಗಿರುವ ಹಾಸ್ಟೆಲ್ (Hostel) ಬಳಿಯ ಕೆರೆಗೆ ಈಜಲು ಹೋದಾಗ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಚಡ್ಡಿ ಹಾಕೊಂಡು ಬರೋರೂ ನನ್ನ ನೇರವಾಗಿ ಮಾತಾಡಿಸ್ಬೋದು – ಸಿದ್ದರಾಮಯ್ಯ

    ಭಾನುವಾರ ರಜಾದಿನ ಹಿನ್ನೆಲೆ ನೋಮನ್ ಪಾಷಾ ಮತ್ತು ಸ್ನೇಹಿತರು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಚೌಡಮ್ಮನ ಕೆರೆಗೆ ಈಜಲು ಹೋಗಿದ್ದಾರೆ. ಕೆರೆಯಲ್ಲಿ ಯಾವ ಪ್ರದೇಶದಲ್ಲಿ ಎಷ್ಟು ಆಳ ಇದೆ ಎನ್ನುವುದನ್ನು ತಿಳಿದುಕೊಳ್ಳದೇ ಈಜಲು ಹಾರಿದ್ದಾರೆ. ಕೆರೆಯ ಆಳ ಹಾಗೂ ಕಲ್ಲು ಬರಿತ ಪ್ರದೇಶದಲ್ಲಿ ಜಿಗಿದ ಪರಿಣಾಮ ನೋಮನ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಇಂದು ಮೃತದೇಹ ಪತ್ತೆಯಾಗಿದೆ.

    ಗ್ರಾಮ ಪಂಚಾಯಿತಿ (Gram Panchayat) ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆರೆಯ ಸುತ್ತಲೂ ಸೂಚನಾ ಫಲಕ ಹಾಗೂ ಕಬ್ಬಿಣದ ತಂತಿ ಬೇಲಿಯನ್ನು ಹಾಕಿಸಿ ಸುರಕ್ಷತೆ ಕಾಪಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ಕಳೆದ 6 ತಿಂಗಳ ಹಿಂದೆಯಷ್ಟೇ ತಂದೆಯನ್ನು ಕಳೆದುಕೊಂಡಿದ್ದ ನೋಮನ್ ಪಾಷಾ, ಡಾಕ್ಟರ್ ಆಗಿ ತಾಯಿ, ತಮ್ಮ ಹಾಗೂ ತಂಗಿಯನ್ನು ಸಾಕಬೇಕು ಅಂತಾ ಕನಸು ಕಂಡಿದ್ದ. ತನ್ನ ತಾಯಿ ಮಗನ ಓದಿಗಾಗಿ ಸಾಲ ಮಾಡಿ 68 ಸಾವಿರ ಹಣ ಕೊಟ್ಟಿದ್ದರು. ಆದ್ರೆ ಈಗ ಸಾಲ ಮಾಡಿದ ಹಣದ ಜೊತೆಗೆ ಮಗನೂ ಇಲ್ಲವಾಗಿದ್ದಾನೆ. ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ಬೇಕಿದೆ: ಉಕ್ರೇನ್‌ನಲ್ಲಿ ಗುಂಡೇಟು ತಿಂದಿದ್ದ ಭಾರತದ ವಿದ್ಯಾರ್ಥಿ

    1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ಬೇಕಿದೆ: ಉಕ್ರೇನ್‌ನಲ್ಲಿ ಗುಂಡೇಟು ತಿಂದಿದ್ದ ಭಾರತದ ವಿದ್ಯಾರ್ಥಿ

    ನವದೆಹಲಿ: ಉಕ್ರೇನ್‌ ಯುದ್ಧದಲ್ಲಿ ಗುಂಡೇಟು ತಗುಲಿ ಗಾಯಗೊಂಡಿದ್ದ ಭಾರತದ ವೈದ್ಯಕೀಯ ವಿದ್ಯಾರ್ಥಿಯು ದೆಹಲಿಯ ಸೇನಾ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾನೆ.

    ತನ್ನ ಆರೋಗ್ಯ ಹಾಗೂ ಚಿಕಿತ್ಸೆ ಕುರಿತು ಮಾತನಾಡಿದ ಗಾಯಾಳು ವಿದ್ಯಾರ್ಥಿ ಹರ್ಜೋತ್‌ ಸಿಂಗ್‌, ಸುಮಾರು 1 ವರ್ಷ ನನ್ನ ಕೈ, ಕಾಲುಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಆರ್ಥಿಕ ಸ್ಥಿತಿ ಸರಿಯಿಲ್ಲ. ನನ್ನ ತಂದೆ ನಿವೃತ್ತರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಭಾರತ ಸರ್ಕಾರ ನನಗೆ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಇಂದು ಭಾರತಕ್ಕೆ ವಾಪಸ್‌

    ಮಗನ ಆರೋಗ್ಯ ಕುರಿತು ಪ್ರತಿಕ್ರಿಯಿಸಿದ ಕೇಸರ್ ಸಿಂಗ್, ಈಗ ನನ್ನ ಮಗ ಚೇತರಿಸಿಕೊಳ್ಳುತ್ತಿದ್ದಾನೆ. ಚೇತರಿಸಿಕೊಂಡ ನಂತರ ಅವನು ಏನು ಮಾಡಬೇಕೆಂದು ಯೋಚಿಸುತ್ತಾನೆ. ಯಾವುದೇ ದೇಶವು ಒಳ್ಳೆಯದು ಅಥವಾ ಕೆಟ್ಟದ್ದಲ್ಲ. ಇದು ಎರಡು ಅಹಂಕಾರಗಳ ನಡುವಿನ ಹೋರಾಟವೇ ಹೊರತು ದೇಶಗಳ ನಡುವಿನ ಹೋರಾಟವಲ್ಲ. ಅವನಿಗೆ ಮತ್ತೆ ಅವಕಾಶ ಸಿಕ್ಕರೆ, ಅವನು ಖಂಡಿತವಾಗಿಯೂ ಅಧ್ಯಯನಕ್ಕಾಗಿ ಉಕ್ರೇನ್‌ಗೆ ಹೋಗುತ್ತಾನೆ ಎಂದು ತಿಳಿಸಿದ್ದಾರೆ.

    ಉಕ್ರೇನ್‌ ಮೇಲೆ ರಷ್ಯಾ ಸೇನಾ ಕಾರ್ಯಾಚರಣೆ ವೇಳೆ ಕೀವ್‌ ನಗರದಲ್ಲಿ ಭಾರತದ ವಿದ್ಯಾರ್ಥಿ ಹರ್ಜೋತ್‌ ಸಿಂಗ್‌ಗೆ ಗುಂಡೇಟು ಬಿದ್ದಿತ್ತು. ನಂತರ ಆತನಿಗೆ ಉಕ್ರೇನ್‌ನಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಯುದ್ಧಪೀಡಿತ ರಾಷ್ಟ್ರದಿಂದ ʼಆಪರೇಷನ್‌ ಗಂಗಾʼ ಕಾರ್ಯಾಚರಣೆಯಡಿ ಭಾರತಕ್ಕೆ ವಾಪಸ್‌ ಕರೆಸಿಕೊಳ್ಳಲಾಯಿತು. ಇದನ್ನೂ ಓದಿ: ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಸಿಕೊಳ್ಳಿ: ಉಕ್ರೇನ್‍ನಲ್ಲಿ ಗುಂಡು ತಗುಲಿದ ವಿದ್ಯಾರ್ಥಿ

    ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ವಿದ್ಯಾರ್ಥಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾನೆ. ಆದರೆ ಆತ ಪೂರ್ಣ ಚೇತರಿಸಿಕೊಳ್ಳಲು ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

  • ಉಕ್ರೇನ್‍ನಲ್ಲಿ ಸಿಲುಕಿಕೊಂಡಿರೋ ಬೀದರ್ ಮೂಲದ ವಿದ್ಯಾರ್ಥಿ – ಸೆಲ್ಫಿ ವೀಡಿಯೋ ವೈರಲ್

    ಉಕ್ರೇನ್‍ನಲ್ಲಿ ಸಿಲುಕಿಕೊಂಡಿರೋ ಬೀದರ್ ಮೂಲದ ವಿದ್ಯಾರ್ಥಿ – ಸೆಲ್ಫಿ ವೀಡಿಯೋ ವೈರಲ್

    ಬೀದರ್: ಉಕ್ರೇನ್‍ನ ಮೆಟ್ರೋದಲ್ಲಿ ಸಿಲುಕಿಕೊಂಡಿರುವ ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಸೆಲ್ಫಿ ವೀಡಿಯೋ ಮಾಡಿ ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

    ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋ ಮಾಡಿ ಮೆಟ್ರೋದಲ್ಲಿ ಸೇಫಾಗಿರುವ ಕನ್ನಡಗರನ್ನು ತೋರಿಸಿದ್ದಾರೆ. ನಾವೆಲ್ಲ ಮೆಟ್ರೋದಲ್ಲಿ ಸೇಫಾಗಿ ಇದ್ದು ಪೋಷಕರು, ಸ್ನೇಹಿತರು, ಸಂಬಂಧಿಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ದೇಶದಲ್ಲಿ ಸಿಲುಕಿದ ಹಾವೇರಿಯ 9 ವೈದ್ಯಕೀಯ ವಿದ್ಯಾರ್ಥಿಗಳು – ಪೋಷಕರಲ್ಲಿ ಆತಂಕ

    Bidar

    ಎಂಬ್ಯೇಸಿ ಮತ್ತು ಉಕ್ರೇನ್ ಸರ್ಕಾರ ನಮ್ಮ ಜೊತೆಗೆ ಇದೆ. ನಿಮ್ಮ ಮೆಸೇಜಿಗೆ ನಾನು ರಿಪ್ಲೇ ಮಾಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಇಂಟರ್​ನೆಟ್ ಹಾಗೂ ಬ್ಯಾಟರಿ ಚಾರ್ಜ್ ಇಲ್ಲ. ಜೊತೆಗೆ ಹತ್ತಿರದ ಮೆಟ್ರೋ ಸ್ಟೇಷನ್‍ಗೆ ಹೋಗಿ ಸೇಫಾಗಿರಿ ಎಂದು ಭಾರತ ಸರ್ಕಾರ ಹೇಳಿದೆ ಎಂದು ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋದಲ್ಲಿ ಹೇಳಿದ್ದಾರೆ.  ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?

  • ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

    ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!

    ಮುಂಬೈ: ಬಿಜೆಪಿ ಶಾಸಕನ ಪುತ್ರ ಸೇರಿದಂತೆ 7 ವೈದ್ಯಕೀಯ ವಿದ್ಯಾರ್ಥಿಗಳು ಕಾರು ಅಪಘಾತದಲ್ಲಿ ದುರ್ಮರಣವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ನಿನ್ನೆ ರಾತ್ರಿ ಮಹಾರಾಷ್ಟ್ರದ ಸೆಲ್ಸೂರ ಬಳಿ ಬ್ರಿಡ್ಜ್ ನಿಂದ ಕಾರು ಕೆಳಗೆ ಬಿದ್ದ ಪರಿಣಾಮ ಬಿಜೆಪಿ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ರಹಾಂಗದಲೆ ಸೇರಿದಂತೆ ಏಳು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೋಂ ಐಸೋಲೇಷನ್‍ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ: ತ್ರಿಲೋಕ್ ಚಂದ್ರ

    ಘಟನೆಯ ವಿವರ: ಮಹೀಂದ್ರಾ  XUV 500 ಕಾರಿನಲ್ಲಿ ಆವಿಷ್ಕಾರ್ ಮತ್ತು ಆತನ ಸ್ನೇಹಿತರು ಡಿಯೋಲಿಯಿಂದ ವಾರ್ಧಾಗೆ ತೆರಳುತ್ತಿದ್ದರು. ಈ ವೇಳೆ ಇವರ ಕಾರಿಗೆ ಕಾಡು ಹಂದಿ ಡಿಕ್ಕಿ ಹೊಡೆದಿದ್ದು, ನಂತರ ಚಾಲಕ ನಿಯಂತ್ರಣ ತಪ್ಪಿದ್ದಾನೆ. ಪರಿಣಾಮ ಕಾರು ಬ್ರಿಡ್ಜ್ ನಿಂದ ಕೆಳಗೆ ಬಿದ್ದು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

    ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಹೋಳ್ಕರ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಿನ್ನೆ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.

    ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ ಗೊಂಡಿಯಾ ಜಿಲ್ಲೆಯ ತಿರೋರಾ ಕ್ಷೇತ್ರದ ಶಾಸಕ ವಿಜಯ್ ರಹಾಂಗದಲೆ ಅವರ ಪುತ್ರ ಆವಿಷ್ಕಾರ್ ಎಂದು ಗುರುತಿಸಲಾಗಿದೆ. ನೀರಜ್ ಚೌಹಾಣ್ (ಪ್ರಥಮ ವರ್ಷದ ಎಂಬಿಬಿಎಸ್), ನಿತೇಶ್ ಸಿಂಗ್ (2015 ಇಂಟರ್ನ್ ಎಂಬಿಬಿಎಸ್), ವಿವೇಕ್ ನಂದನ್ (2018, ಎಂಬಿಬಿಎಸ್ ಫೈನಲ್), ಪ್ರತ್ಯುಷ್ ಸಿಂಗ್ (2017 ಎಂಬಿಬಿಎಸ್), ಶುಭಂ ಜೈಸ್ವಾಲ್ (2017 ಎಂಬಿಬಿಎಸ್) ಮತ್ತು ಪವನ್ ಶಕ್ತಿ (2020 ಎಂಬಿಬಿಎಸ್) ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ AAP ಅಧಿಕಾರಕ್ಕೆ ಬಂದ್ರೆ ಜನರ ಸಲಹೆ ಮೇರೆಗೆ ಬಜೆಟ್: ಅರವಿಂದ್ ಕೇಜ್ರಿವಾಲ್

    ಮೃತ ವಿದ್ಯಾರ್ಥಿಗಳು ಸಾವಂಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.

  • ಈಜಲು ಹೋದ ವೈದ್ಯಕೀಯ ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಸಾವು

    ಈಜಲು ಹೋದ ವೈದ್ಯಕೀಯ ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಸಾವು

    – ನಿರಂತರ ಸಾವಿಗೆ ಸಾಕ್ಷಿಯಾದ ಗೋಕರ್ಣ ಕಡಲತೀರ

    ಕಾರವಾರ: ಸಮುದ್ರದಲ್ಲಿ ಈಜಲು ಹೋದ ಯುವಕ ಅಲೆಗಳ ಅಬ್ಬರಕ್ಕೆ ಮುಳಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇಂದು ಸಂಜೆ ನಡೆದಿದೆ.

    ಬೀದರ್ ಜಿಲ್ಲೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ವಿಕ್ರಮ್ ಸಾವು ಕಂಡದ್ದಾನೆ. ಆರು ಜನ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಕುಡ್ಲೆ ಕಡಲತೀರದಲ್ಲಿ ಈಜುವಾಗ ಅಲೆಗೆ ಸಿಕ್ಕು ವಿಕ್ರಮ್ ಸಾವು ಕಂಡಿದ್ದಾನೆ. ಇದನ್ನೂ ಓದಿ: ಮೂಳೆ ಮುರಿತ – ಆಟ ನಿಲ್ಲಿಸಿದ ವಿಶ್ವದ ವೇಗದ ರೋಲರ್ ಕೋಸ್ಟರ್

    ಈತನ ಶವವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

    ಗೋಕರ್ಣ ಕಡಲತೀರ ಅಪಾಯ!
    ಇದೇ ತಿಂಗಳಲ್ಲಿ ಪ್ರವಾಸಕ್ಕೆಂದು ಬಂದ 10 ಜನ ಕಡಲಿನ ಅಲೆಗಳಿಗೆ ಕೊಚ್ಚಿ ಹೋಗಿ ಸಾವು ಕಂಡಿದ್ದಾರೆ. ಗೋಕರ್ಣದ ಕಡಲ ತೀರದಲ್ಲಿ ಲೈಫ್ ಗಾರ್ಡ್, ಪ್ರವಾಸಿ ಮಿತ್ರ ಹಾಗೂ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ. ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ ಸಮುದ್ರದಲ್ಲಿ ಈಜಾಡಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತಿದ್ದಾರೆ.

    ಲೈಫ್ ಗಾರ್ಡ್ ಗಳು ತಮ್ಮ ಜೀವ ಒತ್ತೆ ಇಟ್ಟು ಸಾಕಷ್ಟು ಪ್ರವಾಸಿಗರನ್ನು ಬದುಕಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಗೆ ಸಹ ಈಗಾಗಲೇ ಕಡಲ ತೀರ ಭಾಗದಲ್ಲಿ ಗೋವಾ ಮಾದರಿಯಲ್ಲಿ ಪೆಟ್ರೋಲಿಂಗ್ ಮಾಡಲು ಬೋಟ್ ಗಳನ್ನು ನೀಡುವಂತೆ ಕೇಳಿಕೊಂಡು ವರ್ಷಗಳೇ ಗತಿಸಿವೆ. ಗೋಕರ್ಣದ ಓಂ ಬೀಚ್ ನಲ್ಲಿ ಸಮುದ್ರ ಶಾಂತವಾಗಿರುವಂತೆ ಕಂಡರೂ ಬಲಭಾಗದ ಸಮುದ್ರ ಭಾಗದಲ್ಲಿ ಸುಳಿಗಳಿವೆ.

    ಸೆಲ್ಫಿ ಕ್ರೇಜ್ ನಲ್ಲಿ ಜನ ಇಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಜವರಾಯನಿಗೆ ಆಹಾರವಾಗುತ್ತಿದ್ದಾರೆ. ಗೋಕರ್ಣದ ಮುಖ್ಯ ಕೆಲತೀರ, ಕುಡ್ಲೆ ಕಡಲತೀರಗಳಲ್ಲಿ ರಭಸದ ಅಲೆಗೆ ಸಿಲುಕಿ ಪ್ರವಾಸಿಗರು ಪ್ರಾಣ ಕಳೆದುಕೊಳ್ಳುತಿದ್ದಾರೆ. ಹೆಚ್ಚು ಜನರು ಆಗಮಿಸುವ ಹಿನ್ನೆಲೆ ಪ್ರವಾಸಿಗರ ಪ್ರಾಣ ರಕ್ಷಣೆಗೆ ವಿಶೇಷ ಗಮನ ಹಾಗೂ ಲೈಫ್ ಗಾರ್ಡ್ ಗಳಿಗೆ ಹೆಚ್ಚಿನ ಸೌಲಭ್ಯವನ್ನು ಜಿಲ್ಲಾಡಳಿತ ನೀಡಬೇಕಿದೆ. ಇಲ್ಲವಾದರೆ ತಿಂಗಳಲ್ಲಿ ಅದೆಷ್ಟು ಜೀವಗಳು ಬಲಿಯಾಗಲಿದೆಯೋ ಊಹಿಸಲು ಸಾಧ್ಯವಾಗದು.

  • ವಿದ್ಯಾರ್ಥಿಗಳು ತಂಗಿದ್ದ ಕಟ್ಟಡದ ಮೇಲೆ ಕಲ್ಲು ತೂರಾಟ

    ವಿದ್ಯಾರ್ಥಿಗಳು ತಂಗಿದ್ದ ಕಟ್ಟಡದ ಮೇಲೆ ಕಲ್ಲು ತೂರಾಟ

    ಹುಬ್ಬಳ್ಳಿ:  ಕಿಮ್ಸ್‌ನ ವೈದ್ಯಕೀಯ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ತಂಗಿದ್ದ ಕಟ್ಟಡದ ಮೇಲೆ ಕಿಡಗೇಡಿಗಳು ತಡರಾತ್ರಿ ಕಲ್ಲು ತೂರಿದ ಘಟನೆ ನಡೆದಿದೆ.

    ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಇನ್ಫೋಸಿಸ್ ಧರ್ಮಶಾಲಾ ಕಟ್ಟಡದಲ್ಲಿ ವೈದ್ಯ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಿಮ್ಸ್ ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ. ಆದರೆ ತಡರಾತ್ರಿ ಏಕಾಏಕಿಯಾಗಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿ ಗ್ಲಾಸ್ ಒಡೆದು ಓರ್ವ ಮೆಡಿಕಲ್ ವಿದ್ಯಾರ್ಥಿಯ ಮೊಣಕಾಲಿಗೆ ಗಾಯವಾಗಿದೆ.

    ಕಿಮ್ಸ್ 136 ವೈದ್ಯಕೀಯ ವಿದ್ಯಾರ್ಥಿಗಳ ತಾತ್ಕಾಲಿಕ ಈ ಕಟ್ಟಡದಲ್ಲಿದ್ದಾರೆ ಎಂದಿನಂತೆ ಊಟ ಮಾಡಿ ಮಲಗಿದ್ದ ವಿದ್ಯಾರ್ಥಿಗಳ ಮೆಲೆ ಕಲ್ಲು, ಇಟ್ಟಿಗೆ ತೂರಿದ್ದು, ಕಿಟಕಿಯ ಗಾಜುಗಳು ಪುಡಿಪುಡಿಯಾಗಿ ಹಾಸಿಗೆಯಲ್ಲಿ ಬಿದ್ದಿದ್ದು, ವಿದ್ಯಾರ್ಥಿಗಳಿಗೆ ಆತಂಕದಲ್ಲಿದ್ದಾರೆ. ಕಿಮ್ಸ್ ಭದ್ರತಾ ಸಿಬ್ಬಂದಿ ಹಾಗೂ ಪಕ್ಕದಲ್ಲಿರುವ ಕಿಮ್ಸ್ ಕ್ವಾಟರ್ಸ್ ನಿವಾಸಿಗಳು ಆಗಮಿಸಿ ಗಾಯಾಳು ವಿದ್ಯಾರ್ಥಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.