Tag: ವೈದ್ಯಕೀಯ ನೆರವು

  • ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವು: ಅರಿಂದಮ್ ಬಾಗ್ಚಿ

    ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವು: ಅರಿಂದಮ್ ಬಾಗ್ಚಿ

    ನವದೆಹಲಿ: ಉಕ್ರೇನ್‍ಗೆ ಭಾರತದಿಂದ ವೈದ್ಯಕೀಯ ನೆರವನ್ನು ಕಳುಹಿಸಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಸೋಮವಾರ ತಿಳಿಸಿದ್ದಾರೆ.

    ರಷ್ಯಾ ದಾಳಿಯಿಂದಾಗಿ ಉಕ್ರೇನ್ ತತ್ತರಿಸಿ ಹೋಗಿದೆ. ಸೈನಿಕರು ಮಾತ್ರವಲ್ಲದೇ ದೇಶವನ್ನು ರಕ್ಷಿಸಲು ಬಯಸುವ ನಾಗರಿಕರಿಗೂ ಉಕ್ರೇನ್ ಶಸ್ತ್ರಾಸ್ತ್ರ ನೀಡುತ್ತಿದೆ. ಇದೀಗ ಯುದ್ಧದಿಂದ ನಲುಗಿರುವ ದೇಶಕ್ಕೆ ಸಹಾಯ ಮಾಡಲು ಭಾರತ ವೈದ್ಯಕೀಯ ಹಾಗೂ ಮಾನವೀಯ ನೆರವನ್ನು ನೀಡಲು ಮುಂದಾಗಿದೆ. ಇದನ್ನೂ ಓದಿ: ಫಸ್ಟ್‌ ಟೈಂ ಸೆಬಿಗೆ ಮಹಿಳೆ ಬಾಸ್‌

    ಮಾಧ್ಯಮಗಳೊಂದಿಗೆ ಮಾತನಾಡಿದ ಬಾಗ್ಚಿ ಆಪರೇಷನ್ ಗಂಗಾ ಯೋಜನೆ ಅಡಿಯಲ್ಲಿ ಈಗಾಗಲೇ 6 ವಿಮಾನಗಳನ್ನು ಕಳುಹಿಸಿ 1,400 ಭಾರತೀಯರನ್ನು ಕರೆತರಲಾಗಿದೆ. ಭಾರತೀಯ ರಾಯಭಾರಿಯ ಆದೇಶ ಬರುತ್ತಿದ್ದಂತೆ ಸುಮಾರು 8,000 ಭಾರತೀಯರು ಉಕ್ರೇನ್ ತೊರೆದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

    ಉಕ್ರೇನ್ ಗಡಿಯಲ್ಲಿರುವ 4 ದೇಶಗಳಿಗೆ ವಿಶೇಷ ರಾಯಭಾರಿಗಳನ್ನು ಕಳುಹಿಸಲಾಗುವುದು. ಇಂದು ರಾತ್ರಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉಕ್ರೇನ್, ಕಿರಣ್ ರಿಜಿಜು ಸ್ಲೋವೆಕಿಯಾ ಗಣರಾಜ್ಯ, ಹರ್ದೀಪ್ ಸಿಂಗ್ ಪುರಿ ಹಂಗೇರಿ ಹಾಗೂ ಜನರಲ್ ವಿಕೆ ಸಿಂಗ್ ಪೋಲೆಂಡ್‍ಗೆ ಪ್ರಯಾಣಿಸಲಿದ್ದಾರೆ ಎಂದು ಬಾಗ್ಚಿ ತಿಳಿಸಿದರು.

  • ಅಫ್ಘಾನಿಸ್ತಾನಕ್ಕೆ ಭಾರತ ವೈದ್ಯಕೀಯ ನೆರವು – 3 ಟನ್ ಔಷಧಿ ರವಾನೆ

    ನವದೆಹಲಿ: ತಾಲಿಬಾನ್ ಆಡಳಿತದಿಂದಾಗಿ ತತ್ತರಿಸುವ ಅಫ್ಘಾನಿಸ್ತಾನಕ್ಕೆ ಭಾರತ ನೆರವು ನೀಡಲು ಮುಂದಾಗಿದೆ ಸತತ ನಾಲ್ಕನೇ ಬಾರಿಗೆ ಅಪ್ಘಾನಿಸ್ತಾನಕ್ಕೆ ಭಾರತ ವೈದ್ಯಕೀಯ ನೆರವು ನೀಡಿದೆ. ಶನಿವಾರ ಭಾರತ ಅಫ್ಘಾನಿಸ್ತಾನಕ್ಕೆ ಮೂರು ಟನ್‍ಗಳಷ್ಟು ಅಗತ್ಯ ಜೀವರಕ್ಷಕ ಔಷಧಿಗಳನ್ನು ಕಳುಹಿಸಿದೆ.

    ಯುದ್ಧ ಪೀಡಿತ ದೇಶಕ್ಕೆ ಭಾರತ ನಾಲ್ಕನೇ ಬ್ಯಾಚ್‍ನಲ್ಲಿ 3 ಟನ್‍ಗಳಷ್ಟು ವೈದ್ಯಕೀಯ ನೆರವನ್ನು ನೀಡಿದೆ. ಮುಂದಿನ ವಾರಗಳಲ್ಲಿ ಅಲ್ಲಿನ ಜನರಿಗೆ ಔಷಧ ಹಾಗೂ ಆಹಾರ ಧಾನ್ಯಗಳ ರೂಪದಲ್ಲಿ ಇನ್ನಷ್ಟು ಸಹಾಯ ಮಾಡಲಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ಶನಿವಾರ ತಿಳಿಸಿದೆ. ಇದನ್ನೂ ಓದಿ: ಆಕಾಶ ಬೆಳಗಿದವು 1,000 ಮೇಡ್ ಇನ್ ಇಂಡಿಯಾ ಡ್ರೋನ್‍ಗಳು

    ಅಫ್ಘಾನಿಸ್ತಾನ ಜನರೊಂದಿಗೆ ವಿಶೇಷ ಸಂಬಂಧವನ್ನು ಮುಂದುವರಿಸಲು ಹಾಗೂ ಮಾನವೀಯ ನೆರವನ್ನು ನೀಡಲು ಭಾರತ ಬದ್ಧವಾಗಿದೆ. ಮಾನವೀಯ ನೆರವಿನ ಭಾಗವಾಗಿ ಭಾರತ ಅಫ್ಘಾನಿಸ್ತಾನಕ್ಕೆ 3 ಟನ್‍ಗಳಷ್ಟು ಔಷಧಿಗಳನ್ನು ಒಳಗೊಂಡಿರುವ ನಾಲ್ಕನೇ ಬ್ಯಾಚ್ ವೈದ್ಯಕೀಯ ನೆರವನ್ನು ಪೂರೈಸಿದೆ. ಅದನ್ನು ಕಾಬೂಲ್‍ನ ಇಂದಿರಾ ಗಾಂಧಿ ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಇದಕ್ಕೂ ಮೊದಲು ಭಾರತ ಅಫ್ಘಾನಿಸ್ತಾನಕ್ಕೆ ಕೋವಿಡ್-19 ಲಸಿಕೆಯ 5 ಲಕ್ಷ ಡೋಸ್‍ಗಳನ್ನು ಸರಬರಾಜು ಮಾಡಿತ್ತು. ಇದರೊಂದಿಗೆ 2 ಬಾರಿ ಇತರ ಅಗತ್ಯ ಔಷಧಗಳ ಸರಬರಾಜನ್ನೂ ಭಾರತ ಮಾಡಿತ್ತು. ಅದನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕಾಬೂಲ್‍ನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗಿತ್ತು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಭಾರತ, ಪಾಕಿಸ್ತಾನದ ಮೂಲಕ ರಸ್ತೆಯ ಮಾರ್ಗವಾಗಿ ಅಫ್ಘಾನಿಸ್ತಾನಕ್ಕೆ 50 ಸಾವಿರ ಟನ್ ಗೋಧಿ ಹಾಗೂ ಔಷಧಿಗಳನ್ನು ಕಳುಹಿಸುವುದಾಗಿ ಘೋಷಿಸಿದೆ. ಇದಕ್ಕೆ ಇರಾನ್ ಸಹಾಯ ಮಾಡಿವುದಾಗಿಯೂ ತಿಳಿಸಿತ್ತು.