ಬೆಂಗಳೂರು: ಇಲ್ಲಿನ ಕಾಡುಗೋಡಿ ಅರಣ್ಯ ಪ್ರದೇಶದಲ್ಲಿ ಭಾರೀ ಅಗ್ನಿ ದುರಂತ (Fire Accident )ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
ವೈಟ್ ಫೀಲ್ಡ್ ಮುಖ್ಯರಸ್ತೆಯ ಐಟಿಪಿಎಲ್ ಮುಂಭಾಗದಲ್ಲಿರುವ ಕಾಡುಗೋಡಿ (Kadugodi) ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸುಮಾರು ನೂರಾರು ಎಕರೆ ವ್ಯಾಪ್ತಿಯಲ್ಲಿರೋ ಅರಣ್ಯ ಪ್ರದೇಶದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಮದುವೆ ಆರತಕ್ಷತೆಗೆ ತೆರಳುತ್ತಿದ್ದ ಸಿಎಂ ಕಾರನ್ನೇ ತಡೆದು ಪರಿಶೀಲಿಸಿದ ಪೊಲೀಸರು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Bengaluru) ಐದನೇ ಬಾರಿಗೆ ಬಾಂಬ್ ಸ್ಫೋಟ (Bomb Blast) ಸಂಭವಿಸಿದೆ. ವೈಟ್‌ಫೀಲ್ಡ್ ಬಳಿಯ ಬ್ರೂಕ್‌ಫೀಲ್ಡ್ ಕುಂದಲನಹಳ್ಳಿ ಮುಖ್ಯರಸ್ತೆಯಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಶುಕ್ರವಾರ ಬಾಂಬ್ ಸ್ಫೋಟ ನಡೆದಿದೆ.
ಈ ಹಿಂದೆ ಬೆಂಗಳೂರಿನಲ್ಲಿ ಯಾವಾಗ ಬಾಂಬ್ ಸ್ಫೋಟವಾಗಿತ್ತು? 2008
ಜುಲೈ 25 ರಂದು ಮಧ್ಯಾಹ್ನ ಬೆಂಗಳೂರಿನ 7 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಮಡಿವಾಳ ಬಸ್ ಡಿಪೋ, ಮೈಸೂರು ರಸ್ತೆ, ಆಡುಗೋಡಿ, ಕೋರಮಂಗಲ, ವಿಠಲ್ ಮಲ್ಯ ರಸ್ತೆ, ಲ್ಯಾಂಗ್‌ಫೋರ್ಡ್ ಟೌನ್, ರಿಚ್ಮಂಡ್ ಟೌನ್‌ನಲ್ಲಿ ನಡೆದಿತ್ತು.
2010
ಏಪ್ರಿಲ್ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯುವ ಮೊದಲು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾಂಬ್ ಸ್ಫೋಟ ನಡೆದಿತ್ತು. ಗೇಟ್ ಬಳಿ ಎರಡು ಬಾಬ್ ಸ್ಫೋಟಗೊಂಡರೆ ಒಂದು ಬಾಂಬ್ ಅನ್ನು ಕ್ರೀಡಾಂಗಣದ ಹೊರಗಡೆ ನಿಷ್ಕ್ರಿಯಗೊಳಿಸಲಾಗಿತ್ತು.
2014
ಹೊಸ ವರ್ಷದ ಸಂಭ್ರಮಾಚರಣೆಕ್ಕೆ ಸಿದ್ದಗೊಂಡಿದ್ದ ಚರ್ಚ್ ಸ್ಟ್ರೀಟ್‌ನಲ್ಲಿ ಡಿಸೆಂಬರ್ 28 ರಂದು ಸ್ಫೋಟ ಸಂಭವಿಸಿತ್ತು. ಸುಧಾರಿತ ಸ್ಫೋಟಕ ಸಾಧನವನ್ನು ಹೂವಿನ ಕುಂಡದಲ್ಲಿ ಇರಿಸಲಾಗಿತ್ತು.
ಬೆಂಗಳೂರು: ವಿದ್ಯುತ್ ತಂತಿ (Electric Wire) ತುಳಿದು ತಾಯಿ-ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರ್ತವ್ಯ ಲೋಪ ಪತ್ತೆಯಾದ ಹಿನ್ನೆಲೆ ಐವರು ಬೆಸ್ಕಾಂ (BESCOM) ಅಧಿಕಾರಿಗಳನ್ನು ಅಮಾನತು (Suspend) ಮಾಡಲಾಗಿದೆ.
ಇಬ್ಬರು ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇಂಧನ ಇಲಾಖೆಯ ನಿರ್ದೇಶನ ಹಿನ್ನೆಲೆ ಅಮಾನತುಗೊಳಿಸಲಾಗಿದೆ. ನಾಲ್ಕನೇ ಪೂರ್ವ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸುಬ್ರಮಣ್ಯ.ಟಿ, ಸಹಾಯಕ ಎಂಜಿನಿಯರ್ ಚೇತನ್ ಎಸ್, ಹಿರಿಯ ಎಂಜಿನಿಯರ್ ರಾಜಣ್ಣ, ಕಿರಿಯ ಪವರ್ ಮ್ಯಾನ್ ಮಂಜುನಾಥ್ ರೇವಣ್ಣ, ಲೈನ್‌ಮ್ಯಾನ್ ಬಸವರಾಜು ಎಂಬವರನ್ನು ಅಮಾನತು ಮಾಡಲಾಗಿದೆ. ಪೂರ್ವ ವಿಭಾಗದ ಅಧೀಕ್ಷಕ ಎಂಜಿನಿಯರ್ ಲೋಕೇಶ್ ಬಾಬು ಮತ್ತು ಬೆಸ್ಕಾಂ ವೈಟ್ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀರಾಮು ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ
ಭಾನುವಾರ ಬೆಂಗಳೂರಿನ (Bengaluru) ವೈಟ್ ಫೀಲ್ಡ್‌ನ (Whitefield) ಕಾಡುಗೋಡಿಯಲ್ಲಿ (Kadugodi) ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ತಾಯಿ ಸೌಂದರ್ಯ ಹಾಗೂ ಮಗಳು ಲಿಯಾ ಸಾವನ್ನಪ್ಪಿದ ದುರ್ದೈವಿಗಳು. ತಮಿಳುನಾಡು (Tamil Nadu) ಮೂಲದ ಇವರು ಕಾಡುಗೋಡಿಯ ಗೋಪಾಲ್ ಕಾಲೋನಿಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಆಟಿಕೆ ವಸ್ತುಗಳಿದ್ದ ಗೋದಾಮು ಧಗಧಗ – ಕಟ್ಟಡದಲ್ಲಿ ಸಿಲುಕಿದ್ದ ಮಹಿಳೆ ರೆಸ್ಕ್ಯೂ
ದೀಪಾವಳಿ ಹಬ್ಬಕ್ಕೆ ಚೆನ್ನೈಗೆ ಹೋಗಿದ್ದ ಸೌಂದರ್ಯ, ಪತಿ ಸಂತೋಷ್ ಹಾಗೂ 9 ತಿಂಗಳ ಕಂದಮ್ಮ ಲಿಯಾ ಭಾನುವಾರ ಮುಂಜಾನೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ದಾರಿಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೇ ಸೌಂದರ್ಯ ಅದನ್ನು ತುಳಿದಿದ್ದರು. ಈ ವೇಳೆ ಪತಿ ಸಂತೋಷ್ ಕೈಗೆ ವಿದ್ಯುತ್ ಶಾಕ್ ಹೊಡೆದು ಅದೃಷ್ಟವಶಾತ್ ಅವರು ಪಕ್ಕಕ್ಕೆ ಬಿದ್ದಿದ್ದರು. ಆದರೆ ಪತಿ ಎದುರೇ ಪತ್ನಿ ಹಾಗೂ ಕಂದಮ್ಮ ವಿದ್ಯುತ್ ಶಾಕ್‌ಗೆ ಸುಟ್ಟು ಕರಕಲಾಗಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೂಕಂಪ – ಭಯಭೀತರಾದ ಜನ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಂದಲೇ ನೈತಿಕ ಪೊಲೀಸ್ ಗಿರಿ (Moral Policing) ನಡೆದಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಸಾರ್ವಜನಿಕ ಸ್ಥಳದಲ್ಲಿ ಕೂರಲು ಅನುಮತಿ ಬೇಕಾ ಎಂಬ ಪ್ರಶ್ನೆಯೊಂದು ಎದ್ದಿದೆ.
ಹೌದು. ಶನಿವಾರ ಮಧ್ಯಾಹ್ನದ ವೇಳೆ ಯುವತಿ ತನ್ನ ಸ್ನೇಹಿತನ ಜೊತೆ ವೈಟ್‍ಫೀಲ್ಡ್ (Whitefield) ಕುಂದಲಹಳ್ಳಿ ಪಾರ್ಕ್ (Kundalahalli Park) ನಲ್ಲಿ ಕುಳಿತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸ್ ಪೇದೆ, ಇಲ್ಲಿ ಹಾಗೇ ಕುಳಿತುಕೊಳ್ಳುವ ಹಾಗಿಲ್ಲ ಅಂತಾ ಫೊಟೋ ತೆಗೆದುಕೊಂಡಿದ್ದಾರೆ. ಅಲ್ಲದೆ 1 ಸಾವಿರ ದಂಡ ಹಾಕಿದ್ದಾರಂತೆ. ಇದೀಗ ಹಣ ಪಡೆದ ಪೇದೆ ವಿರುದ್ಧ ಹಾಗೂ ಪೇದೆ ಬಂದಿದ್ದ ಬೈಕ್ ಫೋಟೋ ಸಮೇತ ಟ್ಯಾಗ್ ಮಾಡಿ ಯುವತಿ ಟ್ವಿಟ್ಟರ್ ನಲ್ಲಿ ದೂರು ನೀಡಿದ್ದಾರೆ.
ಯುವತಿ ಟ್ವಿಟ್ಟರ್ (Twitter) ನಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದೇನು..?: ನಾನು ಬೆಂಗಳೂರಿಗೆ ಭೇಟಿ ನೀಡಿದಾಗ ಆಘಾತಕಾರಿ ಅನುಭವ ಆಯ್ತು. ಜನವರಿ 29 ರಂದು ಮಧ್ಯಾಹ್ನ, ನಾನು, ನನ್ನ ಸ್ನೇಹಿತ ವೈಟ್ ಫೀಲ್ಡ್ ಬಳಿಯ ಕುಂದಲಗಳ್ಳಿ ಕೆರೆಗೆ ಭೇಟಿ ನೀಡಿದ್ದವು. ಅಲ್ಲಿ ನೆರಳಿನಲ್ಲಿ ಕುಳಿತು, ಪ್ರಕೃತಿ ವಿಕ್ಷಣೆ ಮಾಡುತ್ತಿದ್ದೆವು. ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಒಬ್ಬರು ನಮ್ಮ ಫೋಟೋಗಳನ್ನು ತೆಗೆಯೋದಕ್ಕೆ ಶುರುಮಾಡಿದರು. ಇಲ್ಲಿ ಕುಳಿತುಕೊಳ್ಳಲು ಅನುಮತಿ ಇಲ್ಲ, ಹೇಗೆ ಒಳಗೆ ಬಂದಿದ್ದೀರಿ, ನಡೀರಿ ಪೊಲೀಸ್ ಠಾಣೆಗೆ ಅಂತಾ ಕಿರುಕುಳ ನೀಡಲು ಪ್ರಾರಂಭಿಸಿದರು. ಇದನ್ನೂ ಓದಿ: ಸ್ಕೂಟರ್‌ನಲ್ಲಿ ಬಂದು ಮಹಿಳೆಗೆ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
ಕೊನೆಗೆ ನಮ್ಮ ಬಳಿ ಒಂದು ಸಾವಿರ ಹಣ ತೆಗೆದುಕೊಂಡು ಅಲ್ಲಿಂದ ಕಳುಹಿಸಿದರು. ಈ ಘಟನೆಯಿಂದ ನಮಗೆ ದಿಗ್ಭ್ರಮೆಯಾಗಿದೆ. ಯಾವುದೇ ತಪ್ಪು ಮಾಡದ ನಾವು ಈ ನೈತಿಕ ಪೊಲೀಸ್‍ಗಿರಿಯನ್ನು ಏಕೆ ಸಹಿಸಿಕೊಳ್ಳಬೇಕು..? ಸಾರ್ವಜನಿಕ ಕೆರೆಯೊಂದರಲ್ಲಿ `ಅನುಮತಿ ಇಲ್ಲದೆ ಕುಳಿತಿದ್ದಕ್ಕಾಗಿ’ ಇಬ್ಬರಿಗೆ ಕಿರುಕುಳ ನೀಡುವ ಹಕ್ಕು ಮತ್ತು ಅವರು ಒಂದೇ ಲಿಂಗದವರಲ್ಲ ಎಂಬ ಕಾರಣಕ್ಕಾಗಿ ಹಣವನ್ನು ಪಡೆದುಕೊಳ್ಳುವ ಹಕ್ಕು ತನಗೆ ಇದೆ ಎಂದು ಈ ಪೊಲೀಸರು ಏಕೆ ಭಾವಿಸಿದರು..? ಅವರ ನಂಬರ್ ಪ್ಲೇಟ್‍ನ ಚಿತ್ರವನ್ನು ಲಗತ್ತಿಸಲಾಗಿದೆ. @BIrCityPolice ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ 6,100 ಮಂದಿ ಕನ್ನಡಿಗರನ್ನು ಕ್ವಾರಂಟೈನ್ ಮಾಡಲು ಸರ್ಕಾರ ಹೋಟೆಲ್ ಗಳನ್ನು ಬುಕ್ ಮಾಡಿದೆ.
ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತರು ಈ ವ್ಯವಸ್ಥೆ ಮಾಡಿದ್ದಾರೆ. 18 ಫೈವ್ ಸ್ಟಾರ್, 23 ತ್ರಿಸ್ಟಾರ್, 18 ಬಜೆಟ್ ಹೋಟೆಲ್ ಸೇರಿದಂತೆ ಒಟ್ಟು 6,008 ರೂಂ ಗಳನ್ನು ಬುಕ್ ಮಾಡಲಾಗಿದ್ದು, ಕ್ವಾರಂಟೈನ್ ವೆಚ್ಚವನ್ನು ಅವರೇ ತುಂಬಬೇಕಾಗುತ್ತದೆ.
ಮೊದಲು ಬಂದವರು ತಮ್ಮ ಆಯ್ಕೆ ಅನ್ವಯ ಹೋಟೆಲಿಗೆ ಕರೆದುಕೊಂಡು ಹೋಗಲಾಗುತ್ತದೆ. ಒಂದು ಹೋಟೆಲ್ ಭರ್ತಿಯಾದ ಬಳಿಕ ಮತ್ತೊಂದು ಹೋಟೆಲ್ ಬಳಕೆ ಮಾಡಲಾಗುತ್ತದೆ. ಊಟ ತಿಂಡಿ ಎಲ್ಲಾ ಸೇರಿ ಒಂದು ದಿನಕ್ಕೆ ಸರ್ಕಾರವೇ ದರವನ್ನು ನಿಗದಿ ಪಡಿಸಿದೆ. ಒಟ್ಟು 14 ದಿನಗಳ ಕಾಲ ಕನ್ನಡಿಗರು ಈ ಹೋಟೆಲಿನಲ್ಲಿ ಕ್ವಾರಂಟೈನ್ ಆಗಲಿದ್ದು, ಡಬಲ್ ಬೆಡ್ ದರ ಹೆಚ್ಚಾಗಲಿದೆ.
ಫೈವ್ ಸ್ಟಾರ್ ಹೋಟೆಲ್
ತಿಂಡಿ+ಬಾಡಿಗೆ – 3 ಸಾವಿರ ರೂ.
ಮಧ್ಯಾಹ್ನದ ಊಟ – 550
ರಾತ್ರಿಯ ಊಟ – 550
ಒಟ್ಟು 1 ದಿನಕ್ಕೆ – 4,100
ದಂಪತಿಗೆ ಡಬಲ್ ಬೆಡ್ ರೂಂ ನಿಗದಿಯಾಗಿದ್ದು ಒಂದು ದಿನಕ್ಕೆ ಒಟ್ಟು 5,900 ರೂ.(3,700+1,100+1,100) ಆಗಲಿದೆ.
ತ್ರಿಸ್ಟಾರ್ ಹೋಟೆಲ್
ತಿಂಡಿ+ಬಾಡಿಗೆ – 1,500 ರೂ.
ಮಧ್ಯಾಹ್ನದ ಊಟ – 175 ರೂ.
ರಾತ್ರಿಯ ಊಟ – 175 ರೂ.
ಒಟ್ಟು 1 ದಿನಕ್ಕೆ – 1,850 ರೂ.
ದಂಪತಿಗೆ ಡಬಲ್ ಬೆಡ್ ರೂಂ ನಿಗದಿಯಾಗಿದ್ದು ಒಂದು ದಿನಕ್ಕೆ ಒಟ್ಟು 2,450 ರೂ.(1,500+350+350) ಆಗಲಿದೆ.
ಬಜೆಟ್ ಹೋಟೆಲ್
ಬಜೆಟ್ ಹೋಟೆಲ್ 1,200 ರೂ. ದರವನ್ನು ನಿಗದಿ ಪಡಿಸಲಾಗಿದೆ. ಬಾಡಿಗೆ, ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲವೂ ಸೇರಿ 1,200 ರೂ. ಆಗಲಿದೆ.
ಇಂಗ್ಲೆಂಡಿನಿಂದ ಬಂದ 323 ಮಂದಿಯನ್ನು ನಗರದ ವಿವಿಧ ಹೋಟೆಲಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇಂದು ಬೆಳಗ್ಗೆ 80 ಮಂದಿಯನ್ನು ಫೈವ್ ಸ್ಟಾರ್ ಯಶವಂತಪುರದ ತಾಜ್ ಹೋಟೆಲಿನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಬಿಎಂಟಿಸಿ ಬಸ್ ನಲ್ಲಿ ಬಂದ ಕೂಡಲೇ ಇವರ ಲಗೇಜ್ ಗಳಿಗೆ ರಾಸಾಯನಿಕ ಸಿಂಪಡನೆ ಮಾಡಲಾಯಿತು. ಬಳಿಕ ಥರ್ಮಲ್ ಸ್ಕ್ರೀನಿಂಗ್ ಮಾಡಿ ಹೋಟೆಲ್ ಒಳಗಡೆ ಕಳುಹಿಸಲಾಯಿತು.
ಹೋಟೆಲ್ ಆಯ್ಕೆಯನ್ನು ಕನ್ನಡಿಗರಿಗೆ ಬಿಡಲಾಗಿದ್ದು, ಯಶವಂತಪುರದ ತಾಜ್ ವಿವಾಂತ್ 108 ಕೊಠಡಿ, ವೈಟ್ ಫೀಲ್ಡ್ ನಲ್ಲಿರುವ ಕೀಸ್ ಹೋಟೆಲಿನಲ್ಲಿ 158 ಕೊಠಡಿ, ಮಾರತ್ ಹಳ್ಳಿಯಲ್ಲಿರುವ ಲೋಟಸ್ ಪಾರ್ಕ್ ಹೋಟೆಲಿನ 41 ಕೊಠಡಿಯನ್ನು ಕಾಯ್ದಿರಿಸಲಾಗಿದೆ.
ಬೆಂಗಳೂರು: ಪೊಲೀಸ್ ಪೇದೆಯೊಬ್ಬರ ಐಡಿ ಕಾರ್ಡ್ ಕದ್ದು ಲೋನ್ ಪಡೆದಿರೋ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‍ನಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಪೊಲೀಸ್ ಠಾಣೆಯ ಪೇದೆ ಸೋಮಶೇಖರ್ ಅವರ ಐಡಿ ಕಾರ್ಡ್ ಕದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಜಾಜ್ ಫೈನಾನ್ಸ್ ಕಂಪನಿಯಿಂದ 53,570 ರೂ ಮೊತ್ತದ ಲೋನ್ ಪಡೆಯಲಾಗಿದೆ. ಮಾರ್ಚ್‍ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲೋನ್ ಪಡೆದಿದ್ದು, ಕಳೆದ ಶುಕ್ರವಾರ ಪೊಲೀಸ್ ಪೇದೆಗೆ ಫೈನಾನ್ಸ್ ಕಂಪನಿಯಿಂದ ಲೋನ್ ಹಣ ಪಾವತಿ ಮಾಡುವಂತೆ ಕರೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಫೈನಾನ್ಸ್ ಕಂಪನಿ ಲೋನ್ ನೀಡುವುದಕ್ಕೆ ಮುಂಚೆ ದಾಖಲಾತಿಗಳ ಪರಿಶೀಲನೆ ನಡೆಸದೆ ಲೋನ್ ಮಂಜೂರಾತಿ ಮಾಡಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಬಳಸಿ ಲೋನ್ ಪಡೆಯಲಾಗಿದೆ. ಹೀಗಾಗಿ ಸೋಮಶೇಖರ್ ಅವರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.
ಫೈನಾನ್ಸ್ ಕಂಪನಿ ಹಾಗೂ ಲೋನ್ ಪಡೆದ ವ್ಯಕ್ತಿ ವಿರುದ್ಧ ವೈಟ್ ಫಿಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.