Tag: ವೈಜಯಂತಿ ಮಾಲಾ

  • ನಟಿ ವೈಜಯಂತಿ ಮಾಲಾ ಆರಾಮಾಗಿದ್ದಾರೆ: ಸಾವಿನ ವದಂತಿಗೆ ತೆರೆ ಎಳೆದ ಪುತ್ರ

    ನಟಿ ವೈಜಯಂತಿ ಮಾಲಾ ಆರಾಮಾಗಿದ್ದಾರೆ: ಸಾವಿನ ವದಂತಿಗೆ ತೆರೆ ಎಳೆದ ಪುತ್ರ

    ಹಿರಿಯ ನಟಿ ವೈಜಯಂತಿ ಮಾಲಾ (Vyjayanthimala) ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅವರ ಪುತ್ರ (Son) ಸುಚಿಂದ್ರ ಬಾಲಿ ಅವರು ವದಂತಿಗೆ ಬ್ರೇಕ್ ಹಾಕಿದ್ದಾರೆ. ವೈಜಯಂತಿ ಮಾಲಾ ಆರಾಮಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್ ಜೊತೆ ಬರ್ತ್‌ಡೇ ಆಚರಿಸಿದ ರಾಧಿಕಾ ಪಂಡಿತ್

    ವೈಜಯಂತಿ ಮಾಲಾ ಸಾವಿನ ಬಗ್ಗೆ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾ ತುಂಬೆಲ್ಲಾ ವೈರಲ್ ಆಗಿದೆ. ಈ ಹಿನ್ನೆಲೆ ನಟಿಯ ಪುತ್ರ ಸುಚಿಂದ್ರ ಅವರು ತಾಯಿ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ವೈಜಯಂತಿ ಕುಟುಂಬಕ್ಕೆ ಆಪ್ತರಾದ ಸಂಗೀತಗಾರ ಗಿರಿಜಾಶಂಕರ್ ಸುಂದರೇಶನ್ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಶೇರ್ ಮಾಡಿ, ಡಾ. ವೈಜಯಂತಿ ಬಾಲಿ ಆರೋಗ್ಯವಾಗಿದ್ದಾರೆ, ಈಗ ಹರಿದಾಡುತ್ತಿರುವ ವಿಚಾರ ಸುಳ್ಳು. ಸುದ್ದಿ ಹಂಚಿಕೊಳ್ಳುವ ಮುನ್ನ ದಯವಿಟ್ಟು ಒಮ್ಮೆ ಪರಿಶೀಲಿಸಿ ನೋಡಿ. ಸುಳ್ಳು ವದಂತಿಯನ್ನು ಹರಡೋದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.

    ಅಂದಹಾಗೆ, ವೈಜಯಂತಿ ಮಾಲಾ ಅವರು 1940ರ ಸಂದರ್ಭದಲ್ಲಿ ಚಿತ್ರರಂಗ ಆಳಿದ ಖ್ಯಾತ ನಟಿ. ರಾಜ್ ಕಪೂರ್, ದಿಲೀಪ್ ಕುಮಾರ್, ಕಿಶೋರ್ ಕುಮಾರ್ ಹೀಗೆ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡವರು. ತಮಿಳಿನಲ್ಲಿ 2 ಹಿಟ್ ಸಿನಿಮಾ ನೀಡುತ್ತಿದ್ದಂತೆ ಬಾಲಿವುಡ್‌ನಲ್ಲಿ ವೈಜಯಂತಿಗೆ ಬಂಪರ್ ಸಿನಿಮಾ ಅವಕಾಶಗಳು ಒಲಿದು ಬಂತು. ಅವರು ಉತ್ತಮ ನಟಿ ಮಾತ್ರವಲ್ಲ, ನೃತ್ಯಗಾರ್ತಿಯೂ ಕೂಡ ಹೌದು.

  • ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

    ನಟಿ ವೈಜಯಂತಿ ಮಾಲಾರನ್ನು ಭೇಟಿಯಾಗಿ ನಮಿಸಿದ ನರೇಂದ್ರ ಮೋದಿ

    ದ್ಮವಿಭೂಷಣ ಪುರಸ್ಕೃತೆ ಹಾಗೂ ಖ್ಯಾತ ನಟಿ ವೈಜಯಂತಿ ಮಾಲಾ (Vyjayanthimala) ಅವರನ್ನು ಪಿಎಂ ನರೇಂದ್ರ ಮೋದಿ (Narendra Modi) ಅವರು ಭೇಟಿಯಾಗಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಭೇಟಿಯಾಗಿದ್ದು, ಹಿರಿಯ ನಟಿಯನ್ನು ನಮಿಸಿರುವ ಫೋಟೋವನ್ನು ಮೋದಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಚೆನ್ನೈನಲ್ಲಿ ವೈಜಯಂತಿ ಮಾಲಾ (Vyjayanthimala) ಅವರನ್ನು ಭೇಟಿ ಮಾಡಿದ್ದು, ಖುಷಿ ನೀಡಿದೆ. ಅವರು ಪದ್ಮ ವಿಭೂಷಣ ಪ್ರಶಸ್ತಿ ಪಡೆದಿದ್ದಾರೆ ಮತ್ತು ಭಾರತೀಯ ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ ಎಂದು ಮೋದಿ ಬರೆದಿದ್ದಾರೆ. ಇದನ್ನೂ ಓದಿ:ಕನ್ನಡತಿಯರ ಜಡೆ ಜಗಳದ ಮಧ್ಯೆ ಮೀನಾಕ್ಷಿಗೆ ಸಿಕ್ತು ಬಂಪರ್‌ ಆಫರ್‌`

    ಅಂದಹಾಗೆ, ಜನವರಿಯಲ್ಲಿ ಪದ್ಮ ಪ್ರಶಸ್ತಿ ಪಡೆದವರ ಹೆಸರನ್ನು ಅನೌನ್ಸ್ ಮಾಡಿದ್ದರು. ಅದರಲ್ಲಿ ಹಿರಿಯ ನಟಿ ವೈಜಯಂತಿ ಮಾಲಾ ಹೆಸರಿತ್ತು. ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ಅನೇಕರಿಗೆ ಈ ಪ್ರಶಸ್ತಿ ಸಿಕ್ಕಿದೆ.

    ವೈಜಯಂತಿ ಮಾಲಾ ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡವರು. 1949ರಲ್ಲಿ ವಾಳ್ಕೈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.