Tag: ವೇಷ

  • ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

    ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

    ಹಂಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿಯಲ್ಲಿ ರಾಘವೇಂದ್ರ ಡಿ.ಜಿ ನಿರ್ಮಿಸಿ ನಾಯಕನಟನಾಗಿ ಅಭಿನಯಿಸಿರುವ, ಕ್ರಷ್ಣ ನಾಡ್ಪಾಲ್ ನಿರ್ದೇಶನದ ‘ವೇಷ’ (Vesha)  ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ‌. ಮರಿಟೈಗರ್ ವಿನೋದ್ ಪ್ರಭಾಕರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಹಾಗೂ ಸಂಭಾಷಣೆಕಾರ ಮಾಸ್ತಿ ವೇಷ ಚಿತ್ರದ ಟ್ರೈಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರತಂಡದ ಸದಸ್ಯರು ವೇಷದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.

    ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ವೇಷ ಹಾಕುತ್ತಾರೆ. ನಮ್ಮ ಚಿತ್ರದಲ್ಲೂ ಹಾಗೆ, ನಾಯಕನಿಗೆ ಯಾವುದೊ ಒಂದು ಸಂದರ್ಭ ವೇಷ ಹಾಕುವ ಹಾಗೆ ಮಾಡುತ್ತದೆ. ಟ್ರೈಲರ್ ಮೂಲಕ ಹೊರಬಂದಿರುವ ವೇಷ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬರಲಿದೆ. ಈತನಕ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ನಿರ್ದೇಶನದ ಚಿತ್ರ ಎನ್ನುತ್ತಾರೆ ನಿರ್ದೇಶಕ ಕೃಷ್ಣ ನಾಡ್ಪಾಲ್. ಇದನ್ನೂ ಓದಿ:ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು

    ನಾನು ಮೂಲತಃ ರಂಗಭೂಮಿ ಕಲಾವಿದ. ನಟನೆ ನನ್ನ ಹವ್ಯಾಸ. ವೇಷ ಚಿತ್ರ ಆರಂಭವಾದಾಗ ನಾಯಕನ ಹುಡುಕಾಟದಲ್ಲಿದ್ದೆವು. ಆನಂತರ ಅನಿರೀಕ್ಷಿತವಾಗಿ ನಾನೇ ಈ ಚಿತ್ರದ ನಾಯಕನಾಗಿ ನಟಿಸಿದ್ದೇನೆ. ನಿರ್ಮಾಣವನ್ನು ಮಾಡಿದ್ದೇನೆ. ವಿನೋದ್ ಪ್ರಭಾಕರ್ ಅವರು ನಮಗೆ ಮೊದಲಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ವಿನೋದ್ ಪ್ರಭಾಕರ್ ಅವರಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು ನಾಯಕ – ನಿರ್ಮಾಪಕ ರಾಘವೇಂದ್ರ.

    ನಾಯಕಿ ನಿಧಿ ಮಾರೋಲಿ, ಸೌಖ್ಯ ಗೌಡ, ಚಿತ್ರದಲ್ಲಿ ಖಳನಾಯಕನಾಗಿ ನಟಿಸಿರುವ ಜಯ್ ಶೆಟ್ಟಿ, ರಾಜ ಅಲಿ, ಶಿಲ್ಪ ಕುಮಟಾ, ಸಾಹಸ ನಿರ್ದೇಶಕ ಜಾಗ್ವಾರ್ ಸಣ್ಣಪ್ಪ, ಸಂಗೀತ ನಿರ್ದೇಶಕ ಉತ್ತಮ್ ಸಾರಂಗ್ ಹಾಗೂ ಕ್ರಿಯೇಟಿವ್ ಹೆಡ್ ಕೀರ್ತನ್ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ವೇಷ ಚಿತ್ರದ ಕುರಿತು ಮಾತನಾಡಿದರು. ಚಿತ್ರದ ವಿತರಣೆಯನ್ನ ಕೃಷಿ ಸ್ಟುಡಿಯೋಸ್ ಮತ್ತು ಸಚಿತ್ ಫಿಲ್ಮ್ಸ್ ನ ಮಾಲೀಕರಾದ ವೆಂಕಟ್ ಗೌಡ ಅವರು ಮಾಡಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನಾರೋಗ್ಯ ಪೀಡಿತರ ಸಹಾಯಕ್ಕೆ ವೇಷ ಧರಿಸಿ ಮಾನವೀಯತೆಯ ಮೆರೆದ ಯುವಕ

    ಅನಾರೋಗ್ಯ ಪೀಡಿತರ ಸಹಾಯಕ್ಕೆ ವೇಷ ಧರಿಸಿ ಮಾನವೀಯತೆಯ ಮೆರೆದ ಯುವಕ

    ಮಂಗಳೂರು: ಅನಾರೋಗ್ಯ ಪೀಡಿತರ ಸಹಾಯಕ್ಕಾಗಿ ನಗರದ ಹೊರವಲಯದ ಸುರತ್ಕಲ್ ಸಮೀಪದ ಜನತಾ ಕಾಲೋನಿಯ ನಿವಾಸಿ ಧನಂಜಯ(ಧನು) ಪೂಜಾರಿಯವರು ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿ ಹಣ ಸಂಗ್ರಹಿಸಿದ್ದಾರೆ.

    ನಗರದ ಹೊರವಲಯದ ಸುರತ್ಕಲ್ ಸಮೀಪದ ಜನತಾ ಕಾಲೋನಿಯ ನಿವಾಸಿ ಧನಂಜಯ(ಧನು) ಪೂಜಾರಿಯವರು ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿ ತನ್ನ ಬಂಧು-ಬಳಗ, ಗೆಳೆಯರ ಹಾಗೂ ಸಾರ್ವಜನಿಕರ ಸಹಕಾರದಿಂದ 26,994 ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣವನ್ನು 3 ಜನ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೀಡಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ವೇಷಧರಿಸಿ 72 ಲಕ್ಷ ರೂ. ದಾನ ಮಾಡಿದ್ದ ರವಿ ಕಟಪಾಡಿ ಈ ಬಾರಿ ಡಾರ್ಕ್ ಅಲೈಟ್ ಲುಕ್‍ನಲ್ಲಿ ಪ್ರತ್ಯಕ್ಷ

    ಇವರು ಕಲೆಗಾರರಾಗಿದ್ದು, ಸುರತ್ಕಲ್ ಆಪತ್ಬಾಂಧವ ಸಮಾಜ ಸೇವಾ ಸಂಘದ ಸದಸ್ಯರಾಗಿದ್ದಾರೆ. ಸದಾ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಹೃದಯವಂತಿಕೆಯವರು. ಇವರ ಹೃದಯವಂತಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಗುಂಬೆ ಘಾಟ್ ತಿರುವಿನಲ್ಲಿ ಧರೆಗುರುಳಿದ ಮರ – ಎರಡು ಗಂಟೆ ರಸ್ತೆ ಬ್ಲಾಕ್

  • ಗರ್ಲ್‍ಫ್ರೆಂಡ್ ಭೇಟಿಯಾಗಲು ವಧುವಿನ ವೇಷದಲ್ಲಿ ಮದುವೆ ಮನೆಗೆ ಬಂದ ಬಾಯ್‍ಫ್ರೆಂಡ್

    ಗರ್ಲ್‍ಫ್ರೆಂಡ್ ಭೇಟಿಯಾಗಲು ವಧುವಿನ ವೇಷದಲ್ಲಿ ಮದುವೆ ಮನೆಗೆ ಬಂದ ಬಾಯ್‍ಫ್ರೆಂಡ್

    – ಹುಡುಗಿಯ ಕುಟುಂಬಸ್ಥರಿಗೆ ಸಿಕ್ಕಿಬಿದ್ದು ಫಜೀತಿ

    ಲಕ್ನೋ: ಕೆಲವರು ಪ್ರೀತಿಗಾಗಿ ಏನೂ ಬೇಕಿದ್ದರೂ ಮಾಡುತ್ತಾರೆ. ಇಂತಹ ಹಲವು ನಿದರ್ಶನಗಳನ್ನು ಸಹ ನಾವು ನೋಡಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ಯುವಕ ತನ್ನ ಲವರ್ ಮದುವೆಗೆ ಸೀರೆಯುಟ್ಟು, ಮೇಕಪ್ ಮಾಡಿಕೊಂಡು, ಬಳೆ, ಆಭರಣ ತೊಟ್ಟು ವಧುವಿನ ವೇಷದಲ್ಲೇ ಹೋಗುವ ಮೂಲಕ ಗಮನ ಸೆಳೆದಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಉತ್ತರ ಪ್ರದೇಶದ ಬದೋಹಿಯಲ್ಲಿ ಘಟನೆ ನಡೆದಿದ್ದು, ಯುವಕ ತನ್ನ ಲವರ್ ನೋಡಲು ವಧುವಿನ ವೇಷ ಧರಿಸಿಕೊಂಡು ಮದುವೆ ಮನೆಗೆ ಪ್ರವೇಶಿಸಿದ್ದಾನೆ. ವ್ಯಕ್ತಿಯ ಚಲನವಲನ ಗಮನಿಸಿದ ಕುಟುಂಬಸ್ಥರು, ಅನುಮಾನಗೊಂಡಿದ್ದಾರೆ. ಬಳಿಕ ಯುವಕನ ಪ್ಲಾನ್ ಉಲ್ಟಾ ಆಗಿದ್ದು, ಹುಡುಗಿಯ ಕುಟುಂಬಸ್ಥರು ಪತ್ತೆಹಚ್ಚಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

    ವ್ಯಕ್ತಿ ಕೆಂಪು ಸೀರೆಯುಟ್ಟು ಹುಡುಗಿಯಂತೆ ಸಿಂಗಾರಗೊಂಡಿದ್ದು, ತಲೆಗೆ ವಿಗ್, ಕೈಗೆ ಬಳೆ, ಆಭರಣ ಮಾತ್ರವಲ್ಲದೆ ಮೇಕಪ್ ಸಹ ಮಾಡಿಕೊಂಡಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ ಹುಡುಗಿ ಸಹ ಬೇರೊಬ್ಬ ವ್ಯಕ್ತಿಯನ್ನು ವಿವಾಹವಾಗಲು ಸಿದ್ಧವಾಗಿದ್ದಳು. ಬಾಯ್‍ಫ್ರೆಂಡ್ ಆಕೆಯನ್ನು ಭೇಟಿಯಾಗಲು ಬಂದಾಗ ವಿವಾಹದ ಸಿದ್ಧತೆಗಳು ಭರದಿಂದ ಸಾಗಿದ್ದವು.

    ಆರಂಭದಲ್ಲಿ ಹುಡುಗಿಯ ರೂಮ್‍ಗೆ ಹೋಗಬಹುದೆಂದು ವ್ಯಕ್ತಿ ಯೋಚಿಸಿದ್ದ. ಆದರೆ ಅಷ್ಟರಲ್ಲೇ ಹುಡುಗಿಯ ಕುಟುಂಬಸ್ಥರಿಗೆ ಸಿಕ್ಕಿಬಿದ್ದ. ಆದರೆ ಪೊಲೀಸರಿಗೆ ಮಾಹಿತಿ ನೀಡುವಷ್ಟರಲ್ಲಿ ತನ್ನ ಇಬ್ಬರು ಸ್ನೇಹಿತರೊಂದಿಗೆ ಎಸ್ಕೇಪ್ ಆಗಿದ್ದಾನೆ ಎಂದು ವರದಿಯಾಗಿದೆ.

    ಸೀರೆ ಧರಿಸಿದ್ದ ಯುವಕನನ್ನು ಪತ್ತೆಹಚ್ಚುತ್ತಿದ್ದಂತೆ ಕುಟುಂಬಸ್ಥರು ಸುತ್ತುವರೆದಿದ್ದು, ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ ಕೋಪದಿಂದ ಸೀರೆಯನ್ನು ಎಳೆಯಲು ಯತ್ನಿಸಿ, ಮುಖದ ಮುಸುಕನ್ನು ತೆರೆಯಲು ನೋಡಿದ್ದಾರೆ. ಆದರೆ ಯುವಕ ಮಾತ್ರ ಸೀರೆಯನ್ನು ಬಿಟ್ಟಿಲ್ಲ.

  • ಕೋ-ವಿಧ ಮೂಲಕ ಭವಿಷ್ಯದ ಅನಾವರಣ- ರಾಮಾಂಜಿ ಗೆಳೆಯರ ಕಲ್ಪನೆಗೆ ಭಾರೀ ಮೆಚ್ಚುಗೆ

    ಕೋ-ವಿಧ ಮೂಲಕ ಭವಿಷ್ಯದ ಅನಾವರಣ- ರಾಮಾಂಜಿ ಗೆಳೆಯರ ಕಲ್ಪನೆಗೆ ಭಾರೀ ಮೆಚ್ಚುಗೆ

    ಉಡುಪಿ: ಕೊರೊನಾ ಕಠಿಣ ನಿಯಮ ಮತ್ತು ಭಾರೀ ಮಳೆಯ ನಡುವೆ ಉಡುಪಿ ಶ್ರೀಕೃಷ್ಣನ ಉತ್ಸವ ನಡೆದಿದೆ. ಮಹೋತ್ಸವದಲ್ಲಿ ಪ್ರತಿವರ್ಷ ನೂರಾರು ವೇಷಗಳು ವಿಟ್ಲಪಿಂಡಿ ಮೆರುಗನ್ನು ಹೆಚ್ಚಿಸುತ್ತವೆ. ಆದರೆ ಈ ಬಾರಿ ಬೆರಳೆಣಿಕೆಯಲ್ಲಿ ಮಾತ್ರ ವೇಷಗಳು ಕಂಡುಬಂದವು.

    ಉಡುಪಿಯ ರಾಮಾಂಜಿ ಕೋ-ವಿಧ ಎಂಬ ವಿಭಿನ್ನ ಸಂದೇಶ ಸಾರುವ ವೇಷವನ್ನು ಧರಿಸಿ ಗಮನ ಸೆಳೆದಿದ್ದಾರೆ. ಕೊರೊನಾ.. ಕೊರೋನ ಕಾಲ ಮತ್ತು ಕೊರೊನಾ ನಂತರ ಎಂಬ ಪರಿಕಲ್ಪನೆಯಲ್ಲಿ ವೇಷ ಮೂಡಿಬಂದಿತು. ಪ್ರತಿವರ್ಷ ವೇಷಹಾಕಿ ಧನಸಂಗ್ರಹ ಮಾಡಿ ಕಷ್ಟದಲ್ಲಿದ್ದವರಿಗೆ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುತ್ತಿದ್ದರು.

    ಎಂಟನೇ ವರ್ಷದ ಈ ವೇಷವನ್ನು ಹರಕೆ ರೂಪದಲ್ಲಿ ದೇವರಿಗೆ ಸಮರ್ಪಿಸಿದ್ದಾರೆ. ಜೊತೆಗೆ ಕೊರೊನಾ ಕಾಲದ ಸಂದೇಶವನ್ನು ರವಾನಿಸಿದ್ದಾರೆ. ಉಪನ್ಯಾಸಕ, ಕಲಾವಿದ ಪ್ರಶಾಂತ್ ಉದ್ಯಾವರ ಮತ್ತು ತಂಡ ಪ್ರತಿವರ್ಷದಂತೆ ಈ ಬಾರಿಯೂ ವಿಭಿನ್ನ ವಿನ್ಯಾಸದ ಮೂಲಕ ವೇಷವನ್ನು ಸೆಳೆಯುವಂತ ಮಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಲಾವಿದ ರಾಮಾಂಜಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾಳಜಿಯಿಂದ ಕಳೆದ ಎಂಟು ವರ್ಷಗಳಿಂದ ವೇಷ ಹಾಕಿದ್ದೇನೆ. ಒಟ್ಟುಗೂಡಿದ ಹಣದಿಂದ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿದ್ದೇನೆ. ಈ ಬಾರಿ ಇಡೀ ದೇಶವೇ ಸಂಕಷ್ಟದಲ್ಲಿದೆ. ಈ ಕಾಲದಲ್ಲಿ ಜನರು ಆರ್ಥಿಕವಾಗಿ ಸದೃಢವಾಗಿಲ್ಲ. ಆದರೆ ಎಂಟು ವರ್ಷಗಳಿಂದ ಮಾಡಿಕೊಂಡು ಬಂದ ಕಲಾಸೇವೆ ಎಂಬ ತಪಸ್ಸನ್ನು ಈ ಬಾರಿ ಬಿಡುವ ಮನಸ್ಸಾಗಲಿಲ್ಲ. ಹರಕೆಯ ರೂಪದಲ್ಲಿ ವೇಷವನ್ನು ಧರಿಸಿದ್ದೇನೆ. ಸುಮಾರು ಹತ್ತು ಸಾವಿರ ರೂಪಾಯಿ ಖರ್ಚಾಗಿದೆ.

    ವಿನ್ಯಾಸಕ ಪ್ರಶಾಂತ್ ಉದ್ಯಾವರ ಮಾತನಾಡಿ, ಕೊರೊನಾ ಸಾಂಕ್ರಾಮಿಕಕ್ಕೆ ಇಡೀ ಜಗತ್ತೇ ತತ್ತರಿಸಿದೆ. ಉಡುಪಿ ಜಿಲ್ಲೆಯ ದೊಡ್ಡ ಹಬ್ಬ ಕೃಷ್ಣಜನ್ಮಾಷ್ಟಮಿ ತಮ್ಮ ಘಮವನ್ನೇ ಕಳೆದುಕೊಂಡಿದೆ. ಈಗ ಕೊರೊನಾ ಅಟ್ಟಹಾಸ ತೋರುತ್ತಿದೆ. ಆದರೆ ಪರಿಸ್ಥಿತಿ ಹೀಗೆ ಇರುವುದಿಲ್ಲ. ಮಹಾಮಾರಿ ಪ್ಲೇಗ್ ಬಂದಾಗಲೂ ಜನರು ಸಾಕಷ್ಟು ಕಷ್ಟ ಪಟ್ಟಿದ್ದರು ಮುಂದೆ ಎಲ್ಲ ತೊಂದರೆಗಳು ನಿವಾರಣೆಯಾಗಲಿದೆ. ಇದನ್ನು ಕೋ- ವಿಧ ಎಂಬ ವೇಷದ ಮೂಲಕ ಜನತೆಯ ಮುಂದೆ ಇಟ್ಟಿದ್ದೇವೆ. ಕೊರೋನಾದ ನಂತರ ಒಂದು ಹೊಸ ಜಗತ್ತು ನಿರ್ಮಾಣ ಆಗುತ್ತದೆ ಇದನ್ನು ಕಲ್ಪಿಸಿ ವೇಷದ ವಿನ್ಯಾಸ ಮಾಡಿದ್ದೇವೆ ಎಂದು ಹೇಳಿದರು.

  • ಜನರಿಗೆ ಜಾಗೃತಿ ಮೂಡಿಸಲು ರೋಡಿಗಿಳಿದ ಯಮ, ಕಿಂಕರರು

    ಜನರಿಗೆ ಜಾಗೃತಿ ಮೂಡಿಸಲು ರೋಡಿಗಿಳಿದ ಯಮ, ಕಿಂಕರರು

    ಹಾವೇರಿ: ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷ ಹಾಕಿಕೊಂಡು ಸ್ಥಳೀಯರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುತ್ತಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಹೊಸಪೇಟೆ ಓಣಿಯ ನಾಲ್ವರಲ್ಲಿ ಓರ್ವ ಯಮನ ವೇಷ, ಇಬ್ಬರು ಕಿಂಕರರ ವೇಷ ಹಾಗೂ ಮತ್ತೊಬ್ಬ ಕೊರೊನಾ ವೈರಸ್ ನ ವೇಷ ಹಾಕಿಕೊಂಡು ಪಟ್ಟಣದಲ್ಲಿ ಜನರಿಗೆ ಕೊರೊನಾ ವೈರಸ್ ಮತ್ತು ಲಾಕ್‍ಡೌನ್ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

    ಯಮ ಕೊರೊನಾ ವೈರಸ್ ವೇಷಧಾರಿಯ ಕೊರಳಿಗೆ ಹಗ್ಗ ಹಾಕಿಕೊಂಡು ಹಿಡ್ಕೊಂಡು ಓಡಾಡುತ್ತಿದ್ದರೆ, ಇಬ್ಬರು ಕಿಂಕರರು ರಸ್ತೆ ತುಂಬ ಓಡಾಡುತ್ತಾ ಮನೆಬಿಟ್ಟು ಹೊರಗಡೆ ಓಡಾಡೋರಿಗೆ ಎಚ್ಚರಿಕೆ ನೀಡಿತ್ತಿದ್ದಾರೆ. ಯಮ, ಕಿಂಕರರು ಹಾಗೂ ಕೊರೊನಾ ವೈರಸ್ ವೇಷಧಾರಿಗಳಿಗೆ ಬ್ಯಾಡಗಿ ಠಾಣೆ ಪೊಲೀಸರು ಸಹ ಸಾಥ್ ನೀಡುತ್ತಿದ್ದಾರೆ. ವೇಷಧಾರಿಗಳ ಮೂಲಕ ಮನೆಬಿಟ್ಟು ಹೊರಬರದೆ, ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡದಂತೆ ತಡೆಯಲು ಸಹಕರಿಸಿ ಎಂದು ಜನರಿಗೆ ಮನವಿ ಮಾಡಲಾಗುತ್ತಿದೆ.

  • ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬದಲಾವಣೆಗಾಗಿ ಶರತ್ ಹಾಕಿದ್ದಾರೆ ‘ವೇಷ’

    ಬೆಂಗಳೂರು ನಗರ ಸೇರಿದಂತೆ ಕೆಲವೊಂದು ಸಿಟಿಗಳಲ್ಲಿ ಸ್ವಚ್ಚತೆ ಅನ್ನೋದು ಮರಿಚಿಕೆಯಾಗಿದೆ. ಅದರಲ್ಲೂ ಕನ್ನಡದಲ್ಲಿ, ಇಂಗ್ಲಿಷ್ ನಲ್ಲಿ ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸ್ವಚ್ಛತೆ ಕಾಪಾಡಿ ಅಂತ ದೊಡ್ಡದಾಗಿ ಬರೆದ್ರೂ ಓದಿದವರಿಗೂ ಅದು ಕಾಣಿಸಲ್ಲ. ಕಾಪಾಡಬೇಕಾದವರೇ ಗಲೀಜು ಮಾಡಿ, ವಾತಾವರಣವನ್ನು ಕಲುಷಿತಗೊಳಿಸಿಬಿಡ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸೋದು ತುಂಬಾ ಮುಖ್ಯವಾಗಿದೆ. ಆ ಜವಾಬ್ದಾರಿಯನ್ನು ಹೊತ್ತಿದ್ದಾರೆ ಶರತ್.

    ಎಸ್, ಕಥೆ ಚಿತ್ರಕಥೆ ಬರೆದು ತಾವೇ ನಿರ್ದೇಶನ ಮಾಡಿ ನಟನೆಯಲ್ಲೂ ಮೊದಲ ಪ್ರಯೋಗದಲ್ಲೇ ಸೈ ಎನಿಸಿಕೊಂಡಿದ್ದಾರೆ ಶರತ್. G-Studios Media ಯೂಟ್ಯೂಬ್ ಚಾನೆಲ್ ನಲ್ಲಿ ‘ವೇಷ’ ಕಿರುಚಿತ್ರ ಇಂದು ರಿಲೀಸ್ ಆಗಿದೆ. ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ ಸಖತ್ ವ್ಯೂವ್ ಪಡೆದಿದೆ.

    ಈ ಕಿರುಚಿತ್ರದಲ್ಲಿರುವ ವಿಷಯ ತುಂಬಾ ಸಿಂಪಲ್. ನಮ್ಮ ಸುತ್ತಮುತ್ತಲಿನಲ್ಲಿರುವ ಸಮಸ್ಯೆಯನ್ನೇ ಕಥೆಯನ್ನಾಗಿ ಎಣೆದಿದ್ದಾರೆ. ನೋಡಿದವರಿಗೆ ವಾವ್ ಈ ಸಮಸ್ಯೆಯನ್ನ ಈ ರೀತಿಯೂ ಸಾಲ್ವ್ ಮಾಡಬಹುದಾ ಎಂಬ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಕೇವಲ ಭಿಕ್ಷೆಗೆ ಮತ್ತೊಂದಕ್ಕೆ ಮಾತ್ರ ಸೀಮಿತರಾಗಿರುವ, ಸಮಾಜದಲ್ಲಿ ಎಲ್ಲರಿಂದ ದೂರ ನಿಂತಿರುವ ಮಂಗಳ ಮುಖಿಯರಿಂದ ಇಂಥ ಕೆಲಸವೂ ಸಾಧ್ಯ ಎಂಬುದನ್ನು ಈ ಕಿರು ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ. ಅವರು ಹಾಕುವ ಒಂದೇ ಶಾಪಕ್ಕೆ ಹೆದರಿ ಹಣ ಕೊಡುವವರು ಅವರ ಮಾತಿಗೆ ಹೇಗೆ ಸ್ವಚ್ಛತೆಗೆ ಇಳಿಯುತ್ತಾರೆ ಎಂಬುದನ್ನು ಶರತ್ ಪ್ರೂವ್ ಮಾಡಿದ್ದಾರೆ. ಆ ಅದ್ಭುತ ನಿರೂಪಣೆಯನ್ನ ಕಿರುಚಿತ್ರದಲ್ಲೇ ನೋಡಿದರೆ ಖುಷಿ ಕೊಡುತ್ತೆ.

    ನಟನಾಗಿ ಅನುಭವ ಇರುವ ಶರತ್, ಕಿರುಚಿತ್ರದ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ್ದಾರೆ. ಮೊದಲ ಕಿರುಚಿತ್ರದಲ್ಲೇ ಒಬ್ಬ ಒಳ್ಳೆ ಡೈರೆಕ್ಟರ್ ಸಾಮಾಥ್ರ್ಯವಿರುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸಲ್ಲ. ಸಮಾಜದಲ್ಲಿ ಇರುವ ಕೆಲವೊಂದು ಸಮಸ್ಯೆಗಳನ್ನು ಇಟ್ಟುಕೊಂಡು ಜನರಿಗೆ ಇಷ್ಟವಾಗುವ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ. 10 ನಿಮಿಷ 40 ಸೆಕೆಂಡ್ ಈ ಕಿರುಚಿತ್ರ ಇದೆ. ಶರತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಗೋಪಿ ಸ್ನೇಹಿತ ಪಾತ್ರದಲ್ಲಿ ಅಭಿನಯಿಸಿದ್ದು, ಸರಳ ಸೇರಿದಂತೆ ಅನೇಕ ಮಂಗಳಮುಖಿಯರು ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿರುವಂತೆ ಕ್ವಾಲಿಟಿ ಇದ್ದು ಎಲ್ಲೂ ಕಾಂಪ್ರೊಮೈಸ್ ಆಗಿಲ್ಲ ಅಂತಾರೆ ನಿರ್ದೇಶಕ ಕಂ ನಟ ಶರತ್.

    ಒಟ್ಟಾರೆ ಸಮಸಾಜಕ್ಕೆ ಬೇಕಾದ ಒಂದೊಳ್ಳೆ ಮೆಸೇಜ್ ಈ ಕಿರುಚಿತ್ರದಲ್ಲಿದ್ದು, ಆ ಸಣ್ಣ ತಪ್ಪನ್ನ ಮಾಡುವಾಗ ಮನದ ಮೂಲೆಯಲ್ಲಿ ಅರಿವು ಮೂಡಿಸುವಂತ ಕೆಲಸ ಮಾಡುತ್ತೆ ‘ವೇಷ’ ಸಿನಿಮಾ. ಜೊತೆಗೆ ಕೊನೆಯಲ್ಲಿ ಬರುವ ದೇಶಕ್ಕಾಗಿ ಯಾವ ‘ವೇಷ’ ಬೇಕಾದ್ರೂ ಹಾಕ್ತಿನೋ ಅನ್ನೋ ಮಾತು ಎಲ್ಲರನ್ನು ಎಚ್ಚರಗೊಳಿಸುವಂತೆ ಮಾಡಿದೆ.

  • ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಭೂಮಿಗಾಗಿ ಹುಡ್ಗಿ ವೇಷ ಹಾಕಿದ ಶೈನ್, ವಾಸುಕಿ, ಪ್ರತಾಪ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಕೊನೆಯ ಹಂತ ತಲುಪಿದ್ದು, ಇನ್ನೂ ಎರಡು ದಿನಗಳು ಬಿಗ್‍ಬಾಸ್‍ನ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ನಡುವೆ ಭೂಮಿ ಶೆಟ್ಟಿಗಾಗಿ ವಾಸುಕಿ, ಶೈನ್ ಮತ್ತು ಕುರಿ ಪ್ರತಾಪ್ ಹುಡುಗಿಯರ ವೇಷ ಹಾಕಿಕೊಂಡು ಬಿಗ್‍ಮನೆಯಲ್ಲಿ ಓಡಾಡಿದ್ದಾರೆ.

    ಸ್ಪರ್ಧಿಗಳು ಈ ವಾರ ಮಾತ್ರ ಬಿಗ್‍ಬಾಸ್ ಮನೆಯಲ್ಲಿರುತ್ತಾರೆ. ಹೀಗಾಗಿ ಬಿಗ್ ಮನೆಯಲ್ಲಿ ನಿಮಗೆ ಈಡೇರಬೇಕಾದ ಯಾವುದಾದರೂ ಆಸೆ ಇದ್ದರೆ ತಿಳಿಸಿ ಎಂದು ಬಿಗ್‍ಬಾಸ್ ಹೇಳಿದ್ದರು. ಆಗ ಭೂಮಿ ಹುಡುಗರು ಹುಡುಗಿಯರ ರೀತಿ ಬಟ್ಟೆ ಧರಿಸಿಕೊಂಡು ಮನೆಯಲ್ಲಿ ಓಡಾಡಬೇಕು, ಹುಡುಗಿಯರು ಹುಡುಗರ ರೀತಿ ಡ್ರೆಸ್ ಮಾಡಿಕೊಂಡು ಓಡಾಡಬೇಕು ಎಂಬ ಆಸೆಯನ್ನು ಬಿಗ್‍ಬಾಸ್‍ಗೆ ತಿಳಿಸಿದ್ದರು.

    ಅದರಂತಯೇ ಬಿಗ್‍ಬಾಸ್ ಒಂದು ಗಂಟೆಯ ಕಾಲ ಪುರುಷರು ಮಹಿಳೆಯರ ರೀತಿ ಉಡುಪು ಧರಿಸಿಕೊಂಡು ಬಿಗ್‍ಬಾಸ್ ಮನೆಯಲ್ಲಿ ಓಡಾಡಬೇಕು ಎಂದು ತಿಳಿಸಿದ್ದರು. ಭೂಮಿಗಾಗಿ ಕುರಿ ಪ್ರತಾಪ್, ಶೈನ್ ಶೆಟ್ಟಿ ಮತ್ತು ವಾಸುಕಿ ಮೂವರು ಹುಡುಗಿಯ ರೀತಿ ಉಡುಪು ಧರಿಸಿಕೊಂಡು, ಧ್ವನಿ ಬದಲಾಯಿಸಿಕೊಂಡು ಮಾತನಾಡಿದ್ದಾರೆ. ಆಗ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು, ಮೀಸೆ ಬರೆದುಕೊಂಡು ಹುಡುಗಿಯರ ವೇಷದಲ್ಲಿದ್ದ ಮೂವರು ಹುಡುಗರನ್ನು ರೇಗಿಸುತ್ತಿದ್ದರು.

    ಸೋಫಾ ಮೇಲೆ ಕುಳಿತು ಮಾತನಾಡುತ್ತಿದ್ದಾಗ ವಾಸುಕಿ ಯಾರೋ ಒಬ್ಬರ ಚಟಕ್ಕೆ ನಾವು ಎಷ್ಟು ಜನ ಬಲಿಯಾಗಿದ್ದೀವಿ ನೋಡಿ ಎಂದು ಬೇಸರದಿಂದ ಹೇಳಿದ್ದಾರೆ. ಒಂದು ಗಂಟೆಯಾದ ತಕ್ಷಣ ಕುರಿ ಪ್ರತಾಪ್, ಶೈನ್, ವಾಸುಕಿ ಮೂವರು ಭೂಮಿಗೆ ತಮಾಷೆಯಿಂದ ಹೊಡೆದಿದ್ದಾರೆ. ಇದೊಂದು ಆಸೆನಾ, ನಮ್ಮ ಪರಿಸ್ಥಿತಿ ನೋಡು ಹೇಗಿದೆ, ನೀನು ಬೇಕಿದ್ದರೆ ಇಡೀ ದಿನ ಹುಡುಗರ ರೀತಿ ಬಟ್ಟೆ ಧರಿಸಿಕೊಂಡು ಓಡಾಡಬೇಕಿತ್ತು ಎಂದು ಬೈದಿದ್ದಾರೆ.

  • ಕಾಡು ಮನುಷ್ಯರ ವೇಷದಲ್ಲಿ ಬರ್ತ್ ಡೇ ಆಚರಿಸಿಕೊಂಡ ಯುವಕ

    ಕಾಡು ಮನುಷ್ಯರ ವೇಷದಲ್ಲಿ ಬರ್ತ್ ಡೇ ಆಚರಿಸಿಕೊಂಡ ಯುವಕ

    ಕಾರವಾರ: ಹಲವು ಜನರಿಗೆ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಳ್ಳಬೇಕು ಅನ್ನುವ ಆಸೆ ಇರುತ್ತದೆ. ಕೆಲವರು ಗೆಳೆಯರ ಜೊತೆ ಸೇರಿ ಭರ್ಜರಿ ಗುಂಡು-ತುಂಡಿನ ಪಾರ್ಟಿ ಮಾಡಿ ಆಚರಿಸಿಕೊಳ್ಳುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಯುವಕನೊಬ್ಬ ಕಾಡು ಮನುಷ್ಯರ ವೇಷದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ.

    ಕಾರವಾರದ ದೇವಲಿವಾಡದ ವಿಘ್ನೇಶ್ ಪೆಡ್ನೇಕರ್ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ವಿಘ್ನೇಶ್ ತಮ್ಮ ಜಿಲ್ಲೆಯ ಹೆಮ್ಮೆಯ ಸಿದ್ದಿ ಜನಾಂಗದ ಸಾಂಪ್ರದಾಯಿಕ ಕಾಡು ಜನರ ಉಡುಗೆ ತೊಟ್ಟು ತನ್ನ 18ನೇ ವಯಸ್ಸಿನ ಜನ್ಮದಿನವನ್ನು ತನ್ನ ಗೆಳೆಯರೊಂದಿಗೆ ಆಚರಿಸಿಕೊಂಡಿದ್ದಾನೆ.

    ವಿಘ್ನೇಶ್ ಪೆಡ್ನೇಕರ್ ಪ್ರತಿ ವರ್ಷ ಬರುವ ಸುಗ್ಗಿ ಹಬ್ಬದಲ್ಲಿ ಹೆಣ್ಣಿನ ವೇಷ ತೊಟ್ಟು ಸುಗ್ಗಿ ಕುಣಿತ ಮಾಡುತ್ತಾನೆ. ಈತನಿಗೆ ತನ್ನ ಜನುಮ ದಿನದಂದು ತಮ್ಮ ಊರಿನ ಕಾಡು ಜನರ (ಸಿದ್ದಿ ಜನಾಂಗ) ವೇಷ ತೊಟ್ಟು ವಿಶಿಷ್ಟವಾಗಿ ಜನುಮದಿನ ಆಚರಿಸುವ ಹಂಬಲವಿತ್ತು.

    ಹೀಗಾಗಿ ತನ್ನ 18ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಈ ವಿಶಿಷ್ಟ ಉಡುಪನ್ನು ಧರಿಸಿ ನೃತ್ಯ ಮಾಡುವ ಮೂಲಕ ಗೆಳೆಯರೊಂದಿಗೆ ತನ್ನ ಜನುಮದಿನವನ್ನು ಸಂಭ್ರಮಿಸಿದ್ದಾನೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸರ್ಕಾರಿ ಅಧಿಕಾರಿಗಳು, ವೈದ್ಯರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಐಜಿಪಿ ಸೆರೆ

    ಸರ್ಕಾರಿ ಅಧಿಕಾರಿಗಳು, ವೈದ್ಯರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಐಜಿಪಿ ಸೆರೆ

    ಬೆಂಗಳೂರು: ಸರ್ಕಾರಿ ವೈದ್ಯರು ಹಾಗೂ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಐಜಿಪಿಯೊಬ್ಬನನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

    ಜಯನಗರ ನಿವಾಸಿ ರಮಾನಂದಸಾಗರ್ ಬಂಧಿತ ನಕಲಿ ಪೊಲೀಸ್ ಅಧಿಕಾರಿ. ಆರೋಪಿ ರಮಾನಂದಸಾಗರ್ ಆರ್‍ಟಿಐ ಕಾರ್ಯಕರ್ತ, ಐಪಿಎಸ್ ಹಾಗೂ ಪತ್ರಕರ್ತ ಹೀಗೆ ವಿವಿಧ ಸ್ಥಾನದಲ್ಲಿ ಇರುವುದಾಗಿ ಹೇಳಿಕೊಂಡು ಅಧಿಕಾರಿಗಳನ್ನು ಮೊಸ ಮಾಡುತ್ತಿದ್ದ.

    ರಮಾನಂದಸಾಗರ್ ಜಯನಗರದ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಪರಿಸ್ಥಿತಿ ಪರೀಕ್ಷೆ ಮಾಡಿ, ಅಲ್ಲಿನ ಅಧಿಕಾರಿಗಳ ವಿರುದ್ಧ ವಿವಿಧ ಮೊಕದ್ದಮೆ ಹುಡುವುದಾಗಿ ಹೆದರಿಸುತ್ತಿದ್ದ. ಅಲ್ಲದೇ ನಾನು ನಿವೃತ್ತ ಐಜಿಪಿ, ಖ್ಯಾತ ಪರ್ತಕರ್ತ, ಸಂಘಟನೆಯೊಂದರ ಮುಖ್ಯಸ್ಥ ಅಂತಾ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ. ತನ್ನ ವಿರುದ್ಧ ತಿರುಗಿಬಿದ್ದವರಿಗೆ ವಿವಿಧ ಅಪರಾಧದ ಮೇಲೆ ಪ್ರಕರಣ ದಾಖಲು ಮಾಡುವುದಾಗಿ ಹೆದರಿಸುತ್ತಿದ್ದ. ಅಲ್ಲದೇ ಕಚೇರಿಯ ಮಹಿಳಾ ಸಿಬ್ಬಂದಿಯನ್ನು ಮಂಚಕ್ಕೆ ಕರೆಯುತ್ತಿದ್ದನಂತೆ. ಜಯನಗರ ಸರ್ಕಾರಿ ಆಸ್ಪತ್ರೆ ವೈದ್ಯರು, ನರ್ಸ್‍ಗಳು ಸೇರಿದಂತೆ ಸಾಕಷ್ಟು ಜನರು ಪೊಲೀಸ್ ಕಮೀಷನರ್ ಹಾಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.

    ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ್ದ ಪೊಲೀಸರಿಂದ ತಪ್ಪಿಸಿಕೊಂಡು ರಮಾನಂದಸಾಗರ್ ಪರಾರಿಯಾಗಿದ್ದ. ಎರಡು ತಿಂಗಳ ಬಳಿಗ ಪತ್ತೆಯಾಗಿದ್ದ ಆತನನ್ನು ಬಂಧಿಸುವಲ್ಲಿ ತಿಲಕ್ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

  • ತಾನು ನಟಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡು ಬಂದ ಸ್ಯಾಂಡಲ್‍ವುಡ್ ನಟಿ!

    ತಾನು ನಟಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡು ಬಂದ ಸ್ಯಾಂಡಲ್‍ವುಡ್ ನಟಿ!

    ಬೆಂಗಳೂರು: ನಟಿ ಹರಿಪ್ರಿಯಾ ತಾವು ಅಭಿನಯಿಸಿದ ಸಿನಿಮಾ ನೋಡಲು ವೇಷ ಮರೆಸಿಕೊಂಡು ಸಿನಿಮಾ ಥಿಯೇಟರ್ ಗೆ  ಹೋಗಿದ್ದಾರೆ.

    ಸ್ಟಾರ್ ಗಳು ಸಾಮಾನ್ಯರಂತೆ ಎಂದಿಗೂ ಜೀವನ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವುದು, ತಾವು ಅಭಿನಯಿಸಿದ ಸಿನಿಮಾ ನೋಡುವುದು ಮತ್ತು ಸಾಮಾನ್ಯರಂತೆ ಶಾಪಿಂಗ್ ಮಾಡಲು ಸಾಧ್ಯವಿರುವುದಿಲ್ಲ. ಎಲ್ಲಿ ಹೋದರು ಅವರ ಅಭಿಮಾನಿಗಳು ಬರುತ್ತಾರೆ. ಹೀಗಾಗಿ ತಾವು ಅಭಿನಯಿಸಿದ ಸಿನಿಮಾದ ಬಗ್ಗೆ ಜನರಿಂದ ಸತ್ಯವಾದ ವಿಮರ್ಶೆ ಪಡೆಯಲು ನೀರ್ ದೋಸೆ ಬೆಡಗಿ ಹರಿಪ್ರಿಯಾ ಮಾರುವೇಷ ಧರಿಸಿ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದಾರೆ.

    ಹರಿಪ್ರಿಯಾ ಅಭಿನಯಿಸಿರುವ `ಜೈಸಿಂಹ’ ಸಿನಿಮಾ ಬಿಡುಗಡೆಯಾಗಿ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಹಲವಾರು ಚಿತ್ರಮಂದಿರದಲ್ಲಿ ಚಿತ್ರ ರಿಲೀಸ್ ಆಗಿದ್ದು, ಜೈಸಿಂಹ ಸಿನಿಮಾದಲ್ಲಿ ಹರಿಪ್ರಿಯಾ ಕೂಡ ಅಭಿನಯಿಸಿದ್ದಾರೆ. ಆದ್ದರಿಂದ ತಮ್ಮ ಪಾತ್ರಕ್ಕೆ ಹಾಗೂ ಸಿನಿಮಾ ಬಗ್ಗೆ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ತಿಳಿಯಲು ಮಾರುವೇಷದಲ್ಲಿ ಹರಿಪ್ರಿಯಾ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದಾರೆ.

    ಈ ಬಗ್ಗೆ ಹರಿಪ್ರಿಯಾ, “ಜೈಸಿಂಹ ಸಿನಿಮಾದ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ ಎಂಬುದನ್ನು ತಿಳಿಯಲು ನಾನು ಮಾರುವೇಷ ಹಾಕಿಕೊಂಡು ಸ್ಥಳಿಯ ಥಿಯೇಟರ್ ಗೆ ಬಂದಿದ್ದೇನೆ. ಈ ಹಿಂದೆ ಈ ರೀತಿಯ ಪ್ರಯತ್ನ ಮಾಡಿಲ್ಲ. ಆದರೆ ಖುಷಿ ಎನ್ನಿಸುತ್ತಿದೆ. ಇನ್ನೂ ಮುಂದೆ ಇದೇ ರೀತಿಯಲ್ಲಿ ಬಂದು ಸಿನಿಮಾ ನೋಡಬೇಕೆಂದು ಆಸೆ ಆಗುತ್ತಿದೆ” ಎಂದು ಟ್ವಿಟ್ಟರ್ ಮತ್ತು ಫೇಸ್‍ಬುಕ್‍ನಲ್ಲಿ ಬರೆದು ತಾವು ವೇಷ ಹಾಕಿಕೊಂಡು ಬಂದಿದ್ದ ಫೋಟೋ ಜೊತೆಗೆ ಫೋಸ್ಟ್ ಮಾಡಿದ್ದಾರೆ.