Tag: ವೇಶ್ಯಾವಾಟಿಕೆ ದಂಧೆ

  • ಕೊಡಗಿನಲ್ಲಿ ವೇಶ್ಯಾವಾಟಿಕೆ ದಂಧೆ – ಕೇರಳ ಮೂಲದ ಇಬ್ಬರು ಅರೆಸ್ಟ್‌

    ಕೊಡಗಿನಲ್ಲಿ ವೇಶ್ಯಾವಾಟಿಕೆ ದಂಧೆ – ಕೇರಳ ಮೂಲದ ಇಬ್ಬರು ಅರೆಸ್ಟ್‌

    ಕೊಡಗು: ಇಲ್ಲಿನ ವಿರಾಜಪೇಟೆಯಲ್ಲಿ ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.

    ಕೇರಳ ಮೂಲದ ಶಿಜು ಮತ್ತು ಪ್ರದೀಪ್ ಬಂಧಿತರು. ವಿರಾಜಪೇಟೆಯಲ್ಲಿ ಬ್ಯೂಟಿಪಾರ್ಲರ್‌ (Beauty Parlour) ನಡೆಸುತ್ತಿದ್ದ ಆರೋಪಿಗಳು ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರನ್ನ ಕರೆಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇದನ್ನೂ ಓದಿ: ವರ್ಷದ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಮಾತುಕತೆ – ಸ್ಫೋಟಕ ವಿಡಿಯೋ ರಿಲೀಸ್‌

    ಈ ಕುರಿತು ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಮಣಿಪುರ | ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ಗುಂಡಿನ ದಾಳಿ – ಇಬ್ಬರು ಯೋಧರು ಹುತಾತ್ಮ, ಐವರಿಗೆ ಗಾಯ

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಐವರು ಅರೆಸ್ಟ್

    ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಐವರು ಅರೆಸ್ಟ್

    ನವದೆಹಲಿ: ಪೊಲೀಸರು ವಿಶೇಷ ಸಿಬ್ಬಂದಿಯ ಜಂಟಿ ತಂಡವೊಂದನ್ನು ರಚಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯಿಂದ ಒಬ್ಬ ಪುರುಷ ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಘಟನೆಯು ನಗರದ ಈಶಾನ್ಯ ಭಾಗದ ದಿಲ್ಶಾದ್ ಕಾಲೋನಿ ಪ್ರದೇಶದ ಮನೆಯೊಂದರಲ್ಲಿ ನಡೆದಿದೆ.

    ಆರೋಪಿಯನ್ನು ಹಿಡಿಯಲು, ಪೊಲೀಸರು ತಮ್ಮ ಕಾನ್‍ಸ್ಟೆಬಲ್ ಅನ್ನು ಡಿಕಾಯ್ ಗಿರಾಕಿಯಾಗಿ ಕಳುಹಿಸಿದ್ದರು. ಆರೋಪಿಗಳ ಪೈಕಿ ದರ್ಶನ್ ಸೈನಿಯನ್ನು ಭೇಟಿಯಾಗಿ ಅವರು ಮಹಿಳೆಯರ ಬಗ್ಗೆ ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ – ಜಿಲ್ಲಾ ಪಂಚಾಯತ್‌ ಪತ್ರವೇ ನಕಲು

    ಈ ವೇಳೆ ಆರೋಪಿಯು ಮನೆಯ ನೆಲ ಮಹಡಿಗೆ ಕಾನ್‍ಸ್ಟೆಬಲ್ ಅನ್ನು ಕರೆದುಕೊಂಡು ಹೋಗಿ ಮಹಿಳೆಯೊಬ್ಬರಿಗೆ ಪರಿಚಯಿಸಿದನು. ಅವನು ಅದೇ ಅಡ್ಡೆಯಲ್ಲಿದ್ದ ಇನ್ನೂ ಮೂವರು ಹುಡುಗಿಯರನ್ನು ತಲಾ 1,500 ರೂ. ಪರಿಚಯಿಸಿದನು. ಈ ವೇಳೆ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸ್ ತಂಡಕ್ಕೆ ಸೂಚಿಸಲಾಯಿತು. ಇದನ್ನೂ ಓದಿ: ಯೋಗಿ ಸರ್ಕಾರವನ್ನು ಜನರೇ ಬಲ್ಡೋಜರ್‌ನಿಂದ ಕಿತ್ತೆಸೆಯುವ ದಿನ ಬರಲಿದೆ: ಅಖಿಲೇಶ್ ಯಾದವ್

    ತಂಡವು ಆವರಣದಲ್ಲಿ ದಾಳಿ ನಡೆಸಿ ಐವರನ್ನು ಸ್ಥಳದಲ್ಲೇ ಬಂಧಿಸಿದೆ. ಈ ಕುರಿತು ಸೀಮಾ ಪುರಿ ಪೊಲೀಸ್ ಠಾಣೆಯಲ್ಲಿ ಅನೈತಿಕ ಸಂಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮನೆಯ ಮಾಲೀಕ ದೀಪಾ ಇನ್ನೂ ತಲೆಮರೆಸಿಕೊಂಡಿದ್ದಾಳೆ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ – ಇಬ್ಬರು ಯುವತಿಯರ ರಕ್ಷಣೆ, ಮೂವರು ವಶಕ್ಕೆ

    ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ – ಇಬ್ಬರು ಯುವತಿಯರ ರಕ್ಷಣೆ, ಮೂವರು ವಶಕ್ಕೆ

    ಮಂಡ್ಯ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿ ಮೂವರು ಯುವಕರನ್ನು ವಶಕ್ಕೆ ಪಡೆದಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.

    ಮಂಡ್ಯ ನಗರದ ಗಾಂಧಿನಗರದ 5ನೇ ಕ್ರಾಸ್‍ವೊಂದರ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸ್ಥಳೀಯರು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮತ್ತು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಂದು ದೂರಿನ ಅನ್ವಯ ಸ್ಥಳೀಯರ ಖಚಿತ ಮಾಹಿತಿ ತೆಗೆದುಕೊಂಡು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ಬೆಳಕಿಗೆ ಬಂದಿದೆ.

    ಸ್ಥಳದಲ್ಲಿ ಇದ್ದ ಇಬ್ಬರೂ ಯುವತಿಯರನ್ನು ರಕ್ಷಣೆ ಮಾಡಿ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕಾರ್ಯಚಾರಣೆ ಡಿವೈಎಸ್‍ಪಿ ನವೀನ್‍ಕುಮಾರ್ ನೇತೃತ್ವದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.