Tag: ವೇಶ್ಯಾವಾಟಿಕೆ

  • ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಇಬ್ಬರು ಮಹಿಳೆಯರು ಸೇರಿ 6 ಜನ ವಶಕ್ಕೆ

    ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಇಬ್ಬರು ಮಹಿಳೆಯರು ಸೇರಿ 6 ಜನ ವಶಕ್ಕೆ

    – 30 ದಿನಗಳಿಗೊಮ್ಮೆ ಮನೆ ಬದಲಿಸಿ ವೇಶ್ಯಾವಾಟಿಕೆ

    ಮೈಸೂರು: ವೇಶ್ಯಾವಾಟಿಕೆ (Prostitution) ನಡೆಯುತಿದ್ದ ಮನೆಯ ಮೇಲೆ ಪೊಲೀಸರು ದಾಳಿ ಮಾಡಿ 6 ಜನ ಪುರುಷರು, ಇಬ್ಬರು ಮಹಿಳೆಯರನ್ನ ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಮೈಸೂರು ತಾಲೂಕಿನ ದಾಸನಕೊಪ್ಪಲು ಗ್ರಾಮದ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ (Police Raid) ನಡೆಸಿದ್ದಾರೆ. ಈ ವೇಳೆ 6 ಜನ ಪುರುಷರು ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ. ಮತ್ತೊಬ್ಬ ಮುಖ್ಯ ಆರೋಪಿ ಮಂಜು ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌-1 ಪೋಸ್ಟರ್‌ ವಿಶೇಷತೆ ಏನು? – ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಬಿಗ್‌ ಅಪ್ಡೇಟ್‌

    ಬಂಧಿತರು ಇಬ್ಬರು ಹೆಣ್ಣು ಮಕ್ಕಳನ್ನು ಕರೆದಂದು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪಿಗಳು 30 ದಿನಗಳಿಗೆ ಒಮ್ಮೆ ಮನೆ ಬದಲಾಯಿಸಿ ವೇಶ್ಯಾವಾಟಿಗೆ ದಂಧೆ ನಡೆಸುತ್ತಿದ್ದರು. ಬೇರೆ ಬೇರೆ ಕಡೆಗಳಿಂದ ಯುವತಿಯರಿಗೆ ಹಣ ಕೊಟ್ಟು ಕರೆಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಇದನ್ನೂ ಓದಿ: ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು? – ಮೊಬೈಲ್ ವಿಕಿರಣದಿಂದಲೂ ಹೃದಯಕ್ಕೆ ಘಾಸಿ ಆಗ್ತಿದ್ಯಾ?

    ಪೊಲೀಸರು ಖಚಿತ ಮಾಹಿತಿ ತಿಳಿದು ದಾಳಿ ಮಾಡಿದ ವೇಳೆ ರೆಡ್ ಹ್ಯಾಂಡ್ ಆಗಿ ಇಬ್ಬರು ಯುವತಿಯರು 6 ಪುರುಷರು ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: 100 ವರ್ಷಗಳಲ್ಲಿ ಇದೇ ಮೊದಲು – ಟೆಕ್ಸಾಸ್‌ನಲ್ಲಿ ಭೀಕರ ಪ್ರವಾಹಕ್ಕೆ 78 ಮಂದಿ ಬಲಿ, 41 ಜನ ಮಿಸ್ಸಿಂಗ್‌

  • ಪತಿ ಇಲ್ಲ ಅಂತ ಹೇಳಿ ಹೈಫೈ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ – ಇಬ್ಬರು ಅರೆಸ್ಟ್‌

    ಪತಿ ಇಲ್ಲ ಅಂತ ಹೇಳಿ ಹೈಫೈ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ – ಇಬ್ಬರು ಅರೆಸ್ಟ್‌

    ಬೆಂಗಳೂರು: ಉದ್ಯೋಗದಾಸೆ ತೋರಿಸಿ ಯುವತಿಯರನ್ನು ವೇಶ್ಯಾವಟಿಕೆಗೆ (Prostitution) ಬಳಕೆ ಮಾಡುತ್ತಿದ್ದ ಇಬ್ಬರು ಮಹಿಳೆಯನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ.

    ಉಮಾ, ಪುಷ್ಪಲತಾ ಬಂಧಿತ ಆರೋಪಿಗಳು. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಬಿಇಎಲ್ ಬಡವಾಣೆಯಲ್ಲಿ ಹೈ ಫೈ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು ಈ ಕೃತ್ಯ ನಡೆಸುತ್ತಿದ್ದರು.

    ಮನೆ ಮಾಲೀಕರ ಬಳಿ ಪತಿ ಇಲ್ಲಎಂದು ಮನೆಯನ್ನು ಬಾಡಿಗೆಗೆ ಪಡೆಯುತ್ತಿದ್ದ ಇವರು ಹೊರ ರಾಜ್ಯದಿಂದ ಬರುವ ಯುವತಿಯರಿಗೆ ಉದ್ಯೋಗದ (Job) ಆಸೆ ತೋರಿಸಿ ವೇಶ್ಯವಾಟಿಕೆ ದಂಧೆಗೆ ದೂಡುತ್ತಿದ್ದರು. ಗಿರಾಕಿಗಳನ್ನ ಫೋನ್ ಮೂಲಕ ಸಂಪರ್ಕ ಮಾಡಿ ಫೋಟೋಗಳನ್ನು ಕಳುಹಿಸಿ ಡೀಲ್ ಮಾಡುತ್ತಿದ್ದರು. ಇದನ್ನೂ ಓದಿ: ಹಾಸನದಲ್ಲಿ ಪುಡಿ ರೌಡಿಯ ಕಾಟ | ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ

    ಖಚಿತ ಮಾಹಿತಿ ಪಡೆದ ಸಿಸಿಬಿ ಮಹಿಳಾ ಸಂರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿ ಓರ್ವ ಯುವತಿಯನ್ನು ರಕ್ಷಿಸಿ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.

    ಬೆಂಗಳೂರಿನ ಅನೇಕ ಭಾಗಗಳಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿದೆ. ಸಂಪಿಗೇಹಳ್ಳಿ, ಕೆಆರ್ ಪುರಂ, ರಾಮಮೂರ್ತಿ ನಗರ, ಹನುಮಂತ ನಗರ ಠಾಣಾ ವ್ಯಾಪ್ತಿಯ ಐಷಾರಾಮಿ ಹೋಟೆಲ್, ಅಪಾರ್ಟ್‌ಮೆಂಟ್‌ ಮನೆಗಳಲ್ಲಿ ದಂಧೆ ನಡೆಸುತ್ತಿದ್ದ 4 ಆರೋಪಿಗಳನ್ನು ಬಂಧಿಸಿ 9 ಮಹಿಳೆಯರನ್ನು ರಕ್ಷಿಸಿದ್ದಾರೆ.

  • Mysuru | ಥೈಲ್ಯಾಂಡ್‌ ಬ್ಯೂಟಿ ಇಟ್ಕೊಂಡು ಹೈಟೆಕ್‌ ವೇಶ್ಯಾವಾಟಿಕೆ ದಂಧೆ – ಕೇಸ್‌ ದಾಖಲು

    Mysuru | ಥೈಲ್ಯಾಂಡ್‌ ಬ್ಯೂಟಿ ಇಟ್ಕೊಂಡು ಹೈಟೆಕ್‌ ವೇಶ್ಯಾವಾಟಿಕೆ ದಂಧೆ – ಕೇಸ್‌ ದಾಖಲು

    ಮೈಸೂರು: ನಗರದಲ್ಲಿ ಥೈಲ್ಯಾಂಡ್‌ ಬ್ಯೂಟಿ (Thailand Beauty) ಇಟ್ಟುಕೊಂಡು ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು (Saraswathipuram Police) ಪತ್ತೆಹಚ್ಚಿದ್ದಾರೆ.

    ಹೌದು. ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿಯೇ ಥೈಲ್ಯಾಂಡ್ ಯುವತಿಯನ್ನ ಕರೆತಂದು ಮೈಸೂರಿನ ಹೋಟೆಲ್‌ವೊಂದರಲ್ಲಿ (Mysuru Private Hotel) ವೇಶ್ಯೆವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ನೌಕರ ರತನ್ ಥೈಲ್ಯಾಂಡ್ ಬ್ಯೂಟಿ ಇಟ್ಕೊಂಡು ದಂಧೆ ಮಾಡ್ತಿದ್ದ. ಆರೋಪಿ ರತನ್ ಜೊತೆ ರೇವಣ್ಣ ಎಂಬಾತನೂ ಸಾಥ್ ಕೊಟ್ಟಿದ್ದ. ಥೈಲ್ಯಾಂಡ್ ಬ್ಯೂಟಿ ಬಳಸಿ ಓರ್ವ ಗಿರಾಕಿಯಿಂದ 8 ರಿಂದ 10,000 ರೂ. ವಸೂಲಿ ಮಾಡುತ್ತಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಬೋಗಾದಿ ಬಳಿ ಇರುವ ಹೋಟೆಲ್‌ನಲ್ಲಿ ವಾಸವಿದ್ದ ಥೈಲ್ಯಾಂಡ್ ಯುವತಿ ಜೊತೆ ಮತ್ತೊಬ್ಬ ಯುವತಿಯೂ ವೇಶ್ಯೆವಾಟಿಕೆಯಲ್ಲಿ ತೊಡಗಿದ್ದಳು. ವೇಶ್ಯಾವಾಟಿಕೆ ನೆಡೆಯುತಿದ್ದ ಸ್ಥಳಕ್ಕೆ ಒಡನಾಡಿ ಸೇವಾ ಸಂಸ್ಥೆ, ಪೊಲೀಸರು ದಾಳಿ ಮಾಡಿ ಇಬ್ಬರು ಯುವತಿಯರ ರಕ್ಷಣೆ ಮಾಡಿದ್ದಾರೆ. ಜೊತೆಗೆ ಪೊಲೀಸರು 7 ಜನರನ್ನ ವಶಕ್ಕೆ ಪಡೆದಿದ್ದಾರೆ.

    ಪೊಲೀಸರು ಕೇಳಿದ್ದಕ್ಕೆ ಬ್ಯುಸಿನೆಸ್ ಪರ್ಪಸ್‌ಗೆ ಬಂದಿದ್ದೇನೆ ಎಂದ ಥೈಲ್ಯಾಂಡ್ ಯುವತಿ. 1 ದಿನದ ಹಿಂದಷ್ಟೇ ಮೈಸೂರಿಗೆ ಬಂದಿದ್ದೆ ಎಂಬ ಮಾಹಿತಿ ನೀಡಿದ್ದಾಳೆ. ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ – ಲಕ್ಷುರಿ ಸ್ಪಾದಲ್ಲಿದ್ದ 7 ಥಾಯ್‌ ಯುವತಿಯರ ರಕ್ಷಣೆ

    ಮಸಾಜ್ ಪಾರ್ಲರ್ ಹೆಸರಲ್ಲಿ ವೇಶ್ಯಾವಾಟಿಕೆ – ಲಕ್ಷುರಿ ಸ್ಪಾದಲ್ಲಿದ್ದ 7 ಥಾಯ್‌ ಯುವತಿಯರ ರಕ್ಷಣೆ

    ಬೆಂಗಳೂರು: ಮಸಾಜ್ ಪಾರ್ಲರ್ (Massage Parlor) ಹೆಸರಲ್ಲಿ ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿದ್ದ ಸ್ಪಾ ಮೇಲೆ ಯಲಹಂಕ ನ್ಯೂ ಟೌನ್‌ ಪೊಲೀಸರು ದಾಳಿ ನಡೆಸಿ 7 ಮಂದಿ ಯುವತಿಯರನ್ನು ರಕ್ಷಣೆ ಮಾಡಿ ಮೂವರನ್ನು ಬಂಧಿಸಿದ್ದಾರೆ.

    ಆಂಜನೇಯ ಗೌಡ ಹಾಗೂ ಹರೀಶ್ ಬಂಧಿತ ಆರೋಪಿಗಳು. ಯಲಹಂಕ ನ್ಯೂ ಟೌನ್‌ನಲ್ಲಿ (Yelahanka New Town) ರೋರಾ ಲಕ್ಸುರಿ ಥಾಯ್ ಸ್ಪಾದಲ್ಲಿ ವಿದೇಶದಿಂದ ಯುವತಿಯರನ್ನು ಕರೆ ತಂದು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಈಶಾನ್ಯ ವಿಭಾಗದ ಡಿಸಿಪಿ ಸಿಕ್ಕಿತ್ತು. ಈ ಮಾಹಿತಿಯನ್ನು ಆಧಾರಿಸಿ ಪೊಲೀಸರು ದಾಳಿ ನಡೆಸಿದ್ದರು. ಇದನ್ನೂ ಓದಿ: ಮೊದಲ 100 ದಿನ ಏನು ಮಾಡಬೇಕು? – ಹೊಸ ಸರ್ಕಾರದ ಕೆಲಸಕ್ಕೆ ಈಗಲೇ ತಯಾರಿ ಆರಂಭಿಸಿದ ಮೋದಿ

     

    ದಾಳಿ ವೇಳೆ ವೇಶ್ಯಾವಾಟಿಕೆ ನಡೆಸುತ್ತಿರುವುದು ಗೊತ್ತಾಗಿದೆ. ಟೂರಿಸ್ಟ್ ವೀಸಾ ಹಾಗೂ ಬಿಸಿನೆಸ್ ವೀಸಾ ಮೂಲಕ ಬೆಂಗಳೂರಿಗೆ ಥಾಯ್ಲೆಂಡ್‌ ಮೂಲದ ಯುವತಿಯರನ್ನು ಆರೋಪಿಗಳು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.

     

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ಮೂವರು ಮಹಿಳೆಯರ ರಕ್ಷಣೆ

    ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ಮೂವರು ಮಹಿಳೆಯರ ರಕ್ಷಣೆ

    ಕಾರವಾರ: ವೇಶ್ಯಾವಾಟಿಕೆ (Prostitute) ಅಡ್ಡೆಮೇಲೆ ದಾಳಿ ನಡೆಸಿ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಫಾರ್ಮ್ ಹೌಸ್‍ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

    ಫಾರ್ಮ್ ಹೌಸ್ ನಡೆಸುತ್ತಿದ್ದ ಗೋಕರ್ಣದ ಸಚಿನ್ ಆಚಾರಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ರಫೀಕ್, ಹರ್ಷಿದಾ ಬಾನು ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಬೆಂಗಳೂರು, ಚಿತ್ರದುರ್ಗದ ಮೂವರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಗಂಡನನ್ನು ಕಳೆದುಕೊಂಡಿದ್ದ ಡಿಸಿ ಕಚೇರಿ ಎಸ್‍ಡಿಎ ಆತ್ಮಹತ್ಯೆ!

    ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ (Gokarna Police Station) ಪ್ರಕರಣ ದಾಖಲಾಗಿದೆ.

  • ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ ಎಂದ ಕಿರಾತಕ ನಟಿ ಓವಿಯಾ

    ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ ಎಂದ ಕಿರಾತಕ ನಟಿ ಓವಿಯಾ

    ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕಿರಾತಕ’ (Kirataka) ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ನಟಿ ಓವಿಯಾ (Oviya) ಇದೀಗ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು ಆಡಿದ ಈ ಮಾತು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಕೆಲವರು ಓವಿಯಾ ಮಾತಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.

    ಅತ್ಯಾಚಾರ ಕುರಿತಂತೆ ಮಾತನಾಡಿರುವ ಓವಿಯಾ, ‘ವೇಶ್ಯಾವಾಟಿಕೆಯನ್ನು (Prostitution) ಕಾನೂನುಬದ್ಧ ಮಾಡಿದರೆ, ಅತ್ಯಾಚಾರವನ್ನು ತಡೆಗಟ್ಟಬಹುದು. ಅತ್ಯಾಚಾರಕ್ಕೆ ಕಡಿವಾಣ ಹಾಕಲು ಇದೊಂದು ಸೂಕ್ತ ಮಾರ್ಗ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಲೈಂಗಿಕ ಶಿಕ್ಷಣದ ಬಗ್ಗೆಯೂ ಅವರು ಮಾತನಾಡಿದ್ದಾರೆ.

     

    ಎಲ್ಲರಿಗೂ ಲೈಂಗಿಕ ಆಸಕ್ತಿಗಳು ಇವೆ. ಅದನ್ನು ಅದುಮಿಟ್ಟುಕೊಂಡು ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಮನುಷ್ಯರಿಗೆ ಸಹಜವಾದದ್ದು ಇರಲೇಬೇಕು ಎಂದು ಓವಿಯಾ ಮಾತನಾಡಿದ್ದಾರೆ. ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆಗಿದೆ. ಓವಿಯಾಗೆ ಅವಕಾಶಗಳು ಕಡಿಮೆ ಆಗುತ್ತಿವೆ. ಹಾಗಾಗಿ ಈ ರೀತಿ ಮಾತನಾಡಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೋಲಾರದ ರೆಸಾರ್ಟ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 14 ಜನರ ಬಂಧನ, 6 ಮಹಿಳೆಯರ ರಕ್ಷಣೆ

    ಕೋಲಾರದ ರೆಸಾರ್ಟ್‌ನಲ್ಲಿ ಹೈಟೆಕ್ ವೇಶ್ಯಾವಾಟಿಕೆ – 14 ಜನರ ಬಂಧನ, 6 ಮಹಿಳೆಯರ ರಕ್ಷಣೆ

    ಕೋಲಾರ: ರೆಸಾರ್ಟ್‌ನಲ್ಲಿ (Resort) ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ಮೇಲೆ ಕೋಲಾರ (Kolar) ಪೊಲೀಸರು ಭರ್ಜರಿ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಜನರನ್ನು ಬಂಧಿಸಿ, 6 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

    ಕೋಲಾರ ಜಿಲ್ಲೆ ಮುಳಬಾಗಿಲು (Mulabagilu) ತಾಲೂಕು ರಾಕ್ ವ್ಯಾಲಿ ರೆಸಾರ್ಟ್ (Rock Valley Resort) ಮೇಲೆ ಕಳೆದ ರಾತ್ರಿ ದಾಳಿ ಮಾಡಿದ ಕೋಲಾರ ಪೊಲೀಸರು, ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಜನರನ್ನು ಬಂಧಿಸಿ 6 ಮಹಿಳೆಯರನ್ನ ರಕ್ಷಣೆ ಮಾಡಿದ್ದಾರೆ. ಕೋಲಾರ ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬೈರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಕಳೆದ ಹಲವು ದಿನಗಳಿಂದ ಈ ದಂಧೆ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇದನ್ನೂ ಓದಿ: ಮಕ್ಕಳೆದುರೇ ಪತ್ನಿಯ ಗುಪ್ತಾಂಗಕ್ಕೆ ಚಾಕು ಇರಿದು ವಿಕೃತಿ ಮೆರೆದ ರೌಡಿಶೀಟರ್!

    ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ರೆಸಾರ್ಟ್ ಮಾಲೀಕ ಸೇರಿ ಹೈದರಾಬಾದ್ (Hyderabad) ಮೂಲದ ಆರು ಜನ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಹೈದರಾಬಾದ್ ಮೂಲದ ಅಜಯ್ ಎಂಬ ವ್ಯಕ್ತಿ ಮಹಿಳೆಯರನ್ನು ಕೆರೆತರುತ್ತಿದ್ದ ಎನ್ನಲಾಗಿದೆ. ದಾಳಿ ವೇಳೆ ಸುಮಾರು ಹತ್ತಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕಾರಿನಲ್ಲಿ ಗೋಮಾಂಸ ಸಾಗಾಟ- ವ್ಯಕ್ತಿಯನ್ನು ಹೊಡೆದು ಕೊಂದ ಸಾರ್ವಜನಿಕರು

    ಕಳೆದ ಒಂದು ವರ್ಷದಲ್ಲಿ ಈ ರೆಸಾರ್ಟ್ ಮೇಲೆ ಇದು ಎರಡನೇ ದಾಳಿ ಆಗಿದ್ದು, ಈ ಹಿಂದೆ ಕೂಡ ದಾಳಿ ಮಾಡಿ ಹೈಟೆಕ್ ಜೂಜು ಅಡ್ಡ ಹಾಗೂ ವೇಶ್ಯಾವಾಟಿಕೆಗೆ ಪೊಲೀಸರು ಕಡಿವಾಣ ಹಾಕಿದ್ದರು. ಆದರೆ ಮತ್ತೆ ಇದು ಮುಂದುವರಿಯುತ್ತಿದ್ದು, ಪ್ರಭಾವಿಗಳ ಕೈವಾಡ ಸೇರಿದಂತೆ ವಿವಿಧ ರಾಜ್ಯಗಳ ಗಣ್ಯರು ಸಹ ಇದರಲ್ಲಿ ಭಾಗಿಯಾಗಿರುವ ಸಾಧ್ಯತೆ ಹೆಚ್ಚಾಗಿದೆ. ಕೋಲಾರದ ನಂಗಲಿ ಹಾಗು ಮಹಿಳಾ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಕೋಲಾರ ಎಸ್ಪಿ ನಾರಾಯಣ ಅವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹೋಟೆಲ್ ನಲ್ಲಿ ವೇಶ್ಯಾವಾಟಿಕೆ : ಖ್ಯಾತನಟಿ ಜೊತೆ ಮಾಡೆಲ್ ಬಂಧನ

    ಹೋಟೆಲ್ ನಲ್ಲಿ ವೇಶ್ಯಾವಾಟಿಕೆ : ಖ್ಯಾತನಟಿ ಜೊತೆ ಮಾಡೆಲ್ ಬಂಧನ

    ಮೊನ್ನೆಯಷ್ಟೇ ಮುಂಬೈನಲ್ಲಿ ಹಿಂದಿ ಕಿರುತೆರೆ ನಟಿಯನ್ನು (Actress)  ವೇಶ್ಯಾವಾಟಿಕೆಯ (Prostitute) ಅಪರಾಧದ ಅಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು ಪೊಲೀಸ್ ಅಧಿಕಾರಿಗಳು. ಆ ಘಟನೆ ಮಾಸುವ ಮುನ್ನವೇ ಇಂಥದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಫೈವ್ ಸ್ಟಾರ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖ್ಯಾತ ನಟಿ ಹಾಗೂ ಮಡೆಲ್ (Model) ಒಬ್ಬರನ್ನು ಬಂಧಿಸಲಾಗಿದೆ.

    ಅಕ್ರಮ ಚಟುವಟಿಕೆಯ ಖಚಿತ ಮಾಹಿತಿ ಮೇರೆಗೆ ಪುಣೆಯ (Pune) ವಾಕಡ್ ಏರಿಯಾದ ಫೈವ್ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು ಖ್ಯಾತ ಭೋಜ್ ಪುರಿ (Bhoj Puri) ನಟಿ ಮತ್ತು ಓರ್ವ ಮಾಡೆಲ್ ಹಾಗೂ ಏಜೆಂಟ್ ನನ್ನು ಬಂಧಿಸಿದ್ದಾರೆ. ಶುಕ್ರವಾರ ಸಂಜೆ ನಟಿಯ ಬಂಧನವಾಗಿದ್ದು, ಪಿಂಪ್ರಿ ಚಿಂಚವಾಡ್ ಕ್ರೈಂ ಬ್ರ್ಯಾಂಚ್ ತಂಡ ಈ ಕಾರ್ಯಚರಣೆ ನೆಡೆಸಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಗ್ರಾಹಕರಿಂದ ಈ ನಟಿ ಒಂದು ರಾತ್ರಿಗೆ 25 ಸಾವಿರ ಹಾಗೂ ಮಧ್ಯಾಹ್ನದವರೆಗೆ 15 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಮಾಯಕ ಮಹಿಳೆಯರಿಗೆ ಆಮಿಷ ಒಡ್ಡಿ ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಹೋಟೆಲ್ ಮೇಲೆ ದಾಳಿ ನಡೆದಾಗಿ ಖ್ಯಾತ ನಟಿ ಹಾಗೂ ಇಬ್ಬರು ದಂಧೆಯಲ್ಲಿ ತೊಡಗಿದ್ದವರು ಕಂಡು ಬಂದಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

  • ವೇಶ್ಯಾವಾಟಿಕೆ ದಂಧೆ ಮತ್ತೋರ್ವ ನಟಿ ಅರೆಸ್ಟ್: ಮುಂಬೈ ಪೊಲೀಸರ ಕಾರ್ಯಾಚರಣೆ

    ವೇಶ್ಯಾವಾಟಿಕೆ ದಂಧೆ ಮತ್ತೋರ್ವ ನಟಿ ಅರೆಸ್ಟ್: ಮುಂಬೈ ಪೊಲೀಸರ ಕಾರ್ಯಾಚರಣೆ

    ರಡು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ ಅವರನ್ನು ವೇಶ್ಯಾವಾಟಿಕೆ (Prostitution) ಆರೋಪದ ಅಡಿ ದೆಹಲಿ ಪೊಲೀಸರು ಬಂಧಿಸಿದ್ದರು. ರೆಡ್ ಹ್ಯಾಂಡ್ ಆಗಿಯೇ ಆ ನಟಿ ಪೊಲೀಸರ ಬಲೆಗೆ ಬಿದ್ದಿದ್ದರು. ಇದೀಗ ಮುಂಬೈ (Mumbai) ಪೊಲೀಸರು ಮತ್ತೋರ್ವ ನಟಿಯನ್ನು ಇದೇ ಆರೋಪದಡಿ ಬಂಧಿಸಿದ್ದಾರೆ (arrested). ಈ ದಂಧೆಗೆ ನಟಿ ಮಾಡೆಲ್ ಗಳನ್ನು ಬಳಸಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ.

    ಭೋಜಪುರಿ (Bhojpuri) ನಟಿ ಸುಮನ್ ಕುಮಾರಿ (Suman Kumari) ಬಂಧಿತ ಆರೋಪಿಯಾಗಿದ್ದು, ಮುಂಬೈನ ಪೊಲೀಸ್ ಸೋಷಿಯಲ್ ಸರ್ವೀಸ್ ಶಾಖೆಯ ಅಧಿಕಾರಿಗಳು ಈಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಮುಂಬೈನ ಗೋರೆಗಾಂವ್ ನ ಹೋಟೆಲ್ ವೊಂದರಲ್ಲಿ ಈ ನಟಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:ನಯನತಾರಾ ಬಗ್ಗೆ ಕನ್ನಡದ ‘ಗೂಳಿ’ ನಟಿ ಶಾಕಿಂಗ್ ಹೇಳಿಕೆ

    ತಮಗೆ ಖಚಿತವಾದ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮೇಲೆ ದಾಳಿ ಮಾಡಿದ ಪೊಲೀಸರು ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ. ದಂಧೆಯ ಮುಖ್ಯ ಆರೋಪಿ ನಟಿ ಸುಮನ್ ಕುಮಾರಿಯನ್ನು ವಶಕ್ಕೆ ಪಡೆದಿದ್ದಾರೆ. ಸಿನಿ ಜಗತ್ತಿಗೆ ಕನಸುಹೊತ್ತು ಬರುವ ನಟಿಯರೇ ಈಕೆಯ ಟಾರ್ಗೆಟ್ ಎಂದು ಹೇಳಲಾಗುತ್ತಿದ್ದು, ಒಂದು ಹುಡುಗಿಗೆ ಐವತ್ತು ಸಾವಿರದಿಂದ ಎಂಬತ್ತು ಸಾವಿರ ತನಕ ಚಾರ್ಜ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

     ಪಂಜಾಬಿ, ಭೋಜಪುರಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಸುಮನ್ ಕುಮಾರಿ ನಟಿಸಿದ್ದು, ಹಲವು ಆಲ್ಬಂಗಳಲ್ಲೂ ಕಾಣಿಸಿಕೊಂಡಿದ್ದಾರೆ. ಲೈಲಾ ಮಜ್ನು, ಬೇಟಾ ದಸ್ ನಂಬರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಯುವಕನೊಬ್ಬನ ಸಹಾಯ ಪಡೆದುಕೊಂಡು ಈಕೆ ಅಡ್ಡದಾರಿ ಹಿಡಿದ್ದರು ಎಂದು ಹೇಳಲಾಗುತ್ತಿದೆ. ಆ ಯುವಕ ಸದ್ಯ ನಾಪತ್ತೆಯಾಗಿದ್ದಾನೆ.

  • ವೇಶ್ಯಾವಾಟಿಕೆ ದಂಧೆ ಕಾರಣಕ್ಕೆ ಅರೆಸ್ಟ್ ಆದ ನಟಿ ಆರತಿ ಹಿನ್ನೆಲೆ ಭಯಂಕರ

    ವೇಶ್ಯಾವಾಟಿಕೆ ದಂಧೆ ಕಾರಣಕ್ಕೆ ಅರೆಸ್ಟ್ ಆದ ನಟಿ ಆರತಿ ಹಿನ್ನೆಲೆ ಭಯಂಕರ

    ವೇಶ್ಯಾವಾಟಿಕೆ (Prostitution) ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ (Arrested) ಕಿರುತೆರೆ ನಟಿ ಆರತಿ ಹರೀಶ್ ಚಂದ್ರ ಮಿತ್ತಲ್ (Aarti Harish Chandra Mittal) ಹಿನ್ನೆಲೆ ಭಯಂಕರವಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಆಕೆ ಕೇವಲ ನಟಿಯಾಗಿ ಗುರುತಿಸಿಕೊಂಡಿಲ್ಲ, ವಯಸ್ಕರ ಚಿತ್ರಗಳಲ್ಲೂ ನಟಿಸಿದ್ದಾರಂತೆ. ಅಲ್ಲದೇ ಬಾಲಿವುಡ್ (Bollywood) ನ ಸಾಕಷ್ಟು ಜನರೊಂದಿಗೆ ಈಕೆ ಪರಿಚಿತಳಂತೆ. ಅವರು ಬೇಕು ಬೇಡಿಕೆಗಳನ್ನು ಈವರೆಗೂ ಪೂರೈಸುತ್ತಾ ಬಂದಿದ್ದಾರೆ ಎನ್ನುವ ರೋಚಕ ಮಾಹಿತಿಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

    ಆರತಿ ಹರೀಶ್ ಚಂದ್ರ ಮಿತ್ತಲ್  ಮಾಡೆಲ್ ಗಳನ್ನು ಬಳಕೆ ಮಾಡಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಗೊತ್ತಾಗಿದೆ. ಅಲ್ಲದೇ ಸಾಕಷ್ಟು ಮಾಡೆಲ್ ಗಳು ಈಕೆಯ ಸಂಪರ್ಕದಲ್ಲಿದ್ದಾರೆ ಎನ್ನುವ ಮಾಹಿತಿ ಸಿಗುತ್ತಿದ್ದಂತೆಯೇ ಆರತಿಯನ್ನು ಬೆನ್ನತ್ತಿದ್ದ ಪೊಲೀಸರು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದರು. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ‘ಬ್ರಹ್ಮಕಮಲ’ ಚಿತ್ರ

    ಅಪ್ನಾಪನ್ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ಆರತಿ, ಕಾಸ್ಟಿಂಗ್ ಡೈರೆಕ್ಟರ್ ಆಗಿಯೂ ಗುರುತಿಸಿಕೊಂಡವರು. ಇವುಗಳ ಜೊತೆಗೆ ಮುಂಬೈನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಗ್ರಾಹಕರ ಮಾರುವೇಶದಲ್ಲಿ ಆರತಿಯನ್ನು ಸಂಪರ್ಕಿಸಿರುವ ಪೊಲೀಸರು ನಂತರ ಆರತಿಯನ್ನು ಬಂಧಿಸಿದ್ದಾರೆ. ಇವರ ಜೊತೆ ರಾಕೆಟ್ ನಲ್ಲಿ ಇಬ್ಬರು ಮಾಡೆಲ್ ಗಳು ಇದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.

    ಪೊಲೀಸ್ ಅಧಿಕಾರಿ ಮನೋಜ್ ಸುತಾರ್ ಅವರಿಗೆ ಆರತಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಬಗ್ಗೆ ಸುಳಿವು ಸಿಕ್ಕಿತ್ತು. ಕೂಡಲೇ ಎಚ್ಚೆತ್ತುಕೊಂಡ ಅಧಿಕಾರಿ ತಮಗೆ ಇಬ್ಬರು ಹುಡುಗಿಯನ್ನು ಕಳುಹಿಸುವಂತೆ ಆರತಿಯನ್ನು ಸಂಪರ್ಕಿಸಿದ್ದಾರೆ. 60 ಸಾವಿರ ಬೇಡಿಕೆ ಇಟ್ಟು, ಹುಡುಗಿಯರನ್ನು ಕಳುಹಿಸುವುದಾಗಿ ಆರತಿ ತಿಳಿಸಿದ್ದರು. ಹಣ ಕೊಡುವುದಾಗಿಯೂ ಅಧಿಕಾರಿ ತಿಳಿಸಿದ್ದರು.

    ಹೋಟೆಲ್ ರೂಮ್ ಗೆ ತೆರಳುವ ಮುನ್ನ ಸ್ವತಃ ಆರತಿಯೇ ಅಧಿಕಾರಿಗಳಿಗೆ ಕಾಂಡೋಮ್ ನೀಡಿದ್ದಾರೆ. ಇವೆಲ್ಲವನ್ನೂ ಪೊಲೀಸರು ರೆಕಾರ್ಡ್ ಮಾಡಿಕೊಂಡೇ ಆರತಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆರತಿ ಜೊತೆ ಯಾರೆಲ್ಲ ಇದ್ದಾರೆ ಎನ್ನುವುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.