Tag: ವೇಶ್ಯಾವಟಿಕೆ

  • ಹೊಸಪೇಟೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ನಾಲ್ವರು ಮಹಿಳೆಯರ ರಕ್ಷಣೆ

    ಹೊಸಪೇಟೆಯ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ- ನಾಲ್ವರು ಮಹಿಳೆಯರ ರಕ್ಷಣೆ

    ಬಳ್ಳಾರಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೊಸಪೇಟೆಯ ಲಾಡ್ಜ್ ಮೇಲೆ ದಾಳಿ ನಡೆದಿದ್ದು, ನಾಲ್ವರು ಮಹಿಳೆಯರನ್ನು (Women Rescued) ರಕ್ಷಣೆ ಮಾಡಲಾಗಿದೆ. ವಿಜಯನಗರದ (Vijayanagar) ಹೊಸಪೇಟೆಯ ರಾಣಿಪೇಟ್‍ನಲ್ಲಿ ಒಡನಾಡಿ ಸಂಸ್ಥೆ ಮತ್ತು ಹೊಸಪೇಟೆ ಪಟ್ಟಣ ಪೊಲೀಸರಿಂದ ಜಂಟಿ ದಾಳಿ ನಡೆದಿದೆ.

    ಲಾಡ್ಜ್ ನ ನೆಲಮಹಡಿಯಲ್ಲಿ ವೇಶ್ಯಾವಾಟಿಕೆ (Prostitution) ನಡೆಯುತ್ತಿತ್ತು. ಇದನ್ನು ಅರಿತಿದ್ದ ಪೊಲೀಸರ ತಂಡ ಲಾಡ್ಜ್ ಮೇಲೆ ದಾಳಿ ಮಾಡಿದೆ. ಈ ವೇಳೆ ಲಾಡ್ಜ್‍ನಲ್ಲಿದ್ದ 6ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಬಳಿಕ ದಂಧೆಯಲ್ಲಿ ತೊಡಗಿದ ಸಂತ್ರಸ್ತ ಮಹಿಳೆಯರ ರಕ್ಷಣೆ ಮಾಡಲಾಗಿದೆ.

    ಕೂಡ್ಲಿಗಿ ಮೂಲದ ಓರ್ವ ಮಹಿಳೆ, ಕೋಲ್ಕತ್ತಾದ ಇಬ್ಬರು ಮಹಿಳೆಯರು ಹಾಗೂ ಆಂಧ್ರ ಮೂಲದ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ. ಕೋಲ್ಕತ್ತಾ ಪುರುಷರು ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಹೆಚ್ಚುವರಿ ಮೋಮೊ ಸಾಸ್ ಕೇಳಿದ್ದಕ್ಕೆ‌ ಮುಖಕ್ಕೆ ಚಾಕುವಿನಿಂದ ಇರಿದ!

    ಈ ಘಟನೆ ಹೊಸಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಅಮ್ಮನ ವೇಶ್ಯಾವಾಟಿಕೆ ದಂಧೆಗೆ ಮಕ್ಕಳ ಸಾಥ್- ಐವರು ಯುವತಿಯರು ಸೇರಿದಂತೆ 10 ಜನ ಅರೆಸ್ಟ್

    ಅಮ್ಮನ ವೇಶ್ಯಾವಾಟಿಕೆ ದಂಧೆಗೆ ಮಕ್ಕಳ ಸಾಥ್- ಐವರು ಯುವತಿಯರು ಸೇರಿದಂತೆ 10 ಜನ ಅರೆಸ್ಟ್

    -ಜನನಿಬಿಡ ಪ್ರದೇಶದಲ್ಲಿಯೇ ಸೆಕ್ಸ್ ದಂಧೆ
    -ಗ್ರಾಹಕರನ್ನ ಕರೆ ತರೋದು ಮಕ್ಕಳ ಕೆಲಸ
    -ಹುಡ್ಗಿಯರ ಫೋಟೋ ತೋರಿಸಿ ರೇಟ್ ಫಿಕ್ಸ್

    ಲಕ್ನೋ: ಉತ್ತರ ಪ್ರದೇಶದ ಲಖೀಮಪುರ ಜಿಲ್ಲೆಯ ಕೋತವಾಲಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, 10 ಜನರನ್ನ ಬಂಧಿಸಿದ್ದಾರೆ. ಅಮ್ಮ ನಡೆಸುತ್ತಿದ್ದ ವೇಶ್ಯಾವಾಟಿಕೆಗೆ ಮಕ್ಕಳೇ ಗ್ರಾಹಕರನ್ನ ಕರೆ ತರುತ್ತಿರುವ ವಿಷಯ ಬೆಳಕಿಗೆ ಬಂದಿದೆ.

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಐವರು ಯುವತಿಯರು ಸೇರಿದಂತೆ 10 ಜನರನ್ನ ಕಂಬಿ ಹಿಂದೆ ತಳ್ಳಿದ್ದಾರೆ. ಪೊಲೀಸರು ಬಂಧಿತರ ಬಳಿಯಲ್ಲಿದ್ದ ಒಂದು ಕಾರ್ ವಶಕ್ಕೆ ಪಡೆದಿದ್ದಾರೆ.

    ಸರಗನಾ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ. ಸರಗನಾ ಆದೇಶದಂತೆ ಆಕೆಯ ಇಬ್ಬರು ಮಕ್ಕಳು ಗ್ರಾಹಕರನ್ನ ಹುಡುಕಿ ತರುತ್ತಿದ್ದರು. ಇತ್ತ ಗ್ರಾಹಕರ ಸಿಗುತ್ತಿದ್ದಂತೆ ಸರಗನಾ ಹುಡುಗಿಯರನ್ನ ಮನೆಗೆ ಕರೆಸಿಕೊಳ್ಳುತ್ತಿದ್ದಳು. ಇತ್ತ ದಲ್ಲಾಳಿಗಳಾದ ಮಕ್ಕಳು ಗ್ರಾಹಕರಿಗೆ ಮೊಬೈಲಿನಲ್ಲಿಯೇ ಫೋಟೋ ತೋರಿಸಿ ದರ ನಿಗದಿ ಮಾಡುತ್ತಿದ್ದರು. ಸರಗನಾ ಯುವತಿಯರನ್ನ ನೆರೆಯ ಗ್ರಾಮಗಳಿಂದ ಕರೆಸುತ್ತಿದ್ದಳು. ಹಾಗೆ ನಗರದ ಹಲವು ಯುವತಿಯರು ಸರಗನಾ ಸಂಪರ್ಕದಲ್ಲಿರುವ ವಿಷಯ ಬೆಳಕಿಗೆ ಬಂದಿದೆ.

    ನಮಗೆ ಗಂಗೋತ್ರಿ ನಗರದ ಬೀದಿಯೊಂದರ ಮನೆಯಲ್ಲಿ ಸೆಕ್ಸ್ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಹೊರಗಿನಿಂದ ಯುವತಿಯರನ್ನ ಕರೆಸಿ ದೇಹದ ವ್ಯಾಪಾರ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಮಹಿಳಾ ಠಾಣೆಯ ಅಧಿಕಾರಿಗಳ ತಂಡ ದಾಳಿ ನಡೆಸಿ 10 ಜನರನ್ನ ಬಂಧಿಸಿದ್ದಾರೆ ಎಂದು ಲಖಿಮಪುರದ ಸರ್ಕಲ್ ಆಫೀಸರ್ ಎಸ್.ಎನ್.ತಿವಾರಿ ತಿಳಿಸಿದ್ದಾರೆ.