ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೇ, ಇದು ಅವರ 125ನೇ ಸಿನಿಮಾವಾಗಿದ್ದರಿಂದ ಚಿತ್ರದ ವಿಶೇಷತೆ ಕುರಿತು ಮಾತನಾಡಲು ಪಬ್ಲಿಕ್ ಟಿವಿ ಆಫೀಸಿಗೆ ಬಂದಿದ್ದರು ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್. ಪಬ್ಲಿಕ್ ಟಿವಿ ಮಖ್ಯಸ್ಥ ಹೆಚ್.ಆರ್. ರಂಗನಾಥ್ ಜೊತೆಗಿನ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಅವರು ಹಂಚಿಕೊಂಡಿದ್ದು, ತಾಯಿಯ ನೆನಪಿಸಿಕೊಂಡು ಕಣ್ಣೀರಿಟ್ಟರು.

ನಿಮ್ಮ ಮೇಲೆ ನಿಮ್ಮ ತಾಯಿ ಎಷ್ಟು ಪ್ರಭಾವ ಬೀರಿದ್ದಾರೆ ಎಂದು ಕೇಳಲಾದ ಪ್ರಶ್ನೆಗೆ ಅಕ್ಷರಶಃ ಶಿವರಾಜ್ ಕುಮಾರ್ ಮಗುವಿನಂತೆ ಅತ್ತೆ ಬಿಟ್ಟರು. ಸಣ್ಣ ಸಣ್ಣ ಸಂಗತಿಗಳಿಗೂ ನನಗೆ ಅಮ್ಮ ನೆನಪಾಗುತ್ತಾರೆ. ಪುಟ್ಟ ನೋವಾದರೂ, ಅಲ್ಲಿ ಅಮ್ಮ ಇರಬೇಕಿತ್ತು ಅಂತ ಅನಿಸುತ್ತದೆ. ಎಂದಿಗೂ ಅವರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ತಾಯಿ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡರು ಶಿವರಾಜ್ ಕುಮಾರ್. ಇದನ್ನೂ ಓದಿ:BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

ಶಿವರಾಜ್ ಕುಮಾರ್ ವೃತ್ತಿ ಜೀವನದಲ್ಲಿ ಅವರ ತಾಯಿಯ ಪಾತ್ರ ದೊಡ್ಡದು. ಶಿವರಾಜ್ ಕುಮಾರ್ ಸಿನಿಮಾ ರಂಗಕ್ಕೆ ಬರುವುದರಿಂದ ಹಿಡಿದು, ಅವರ ಸಿನಿಮಾಗಳ ಕಥೆಯನ್ನು ಕೇಳುವುದು, ನಿರ್ಮಾಣ ಮಾಡುವುದು, ವಿತರಿಸುವುದು ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಪಾರ್ವತಮ್ಮ ರಾಜಕುಮಾರ್. ಜೊತೆಗೆ ತಾಯಿ ಪ್ರೀತಿಯನ್ನು ಹಿಡಿಹಿಡಿಯಾಗಿ ನೀಡಿದ್ದಾರೆ. ಈ ಎಲ್ಲವನ್ನೂ ನೆನಪಿಸಿಕೊಂಡು ಶಿವರಾಜ್ ಕುಮಾರ್ ಭಾವುಕರಾದರು.



ಕಿರುತೆರೆಯ ಸೂಪರ್ ಹಿಟ್ `ಮಗಳು ಜಾನಕಿ’ ಸೀರಿಯಲ್‌ನಿಂದ ಬಣ್ಣದ ಲೋಕಕ್ಕೆ ಪರಿಚಿತರಾದ ನಟಿ, `ನೆನಪಿನ ಹುಡುಗಿಯೇ’ ಅಂತಾ ಹೀರೋ ರಿಷಬ್ ಶೆಟ್ಟಿಗೆ ಹೀರೋಯಿನ್ ಆಗಿ ಗಮನ ಸೆಳೆದರು. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ ನಾಯಕಿಯಾಗಿ ವೇದಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. `ವೇದ’ ಚಿತ್ರದ ಜೊತೆಗೆ ತೆಲುಗಿನ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಚಿಕ್ಕಮಗಳೂರಿನ ಪ್ರತಿಭೆ ಗಾನವಿ ಇದೀಗ `ವೇದ’ ಚಿತ್ರದ ಜೊತೆ ಟಾಲಿವುಡ್‌ನಲ್ಲೂ ಡೆಬ್ಯೂ ಮಾಡ್ತಿದ್ದಾರೆ. ಸ್ಟಾರ್ ನಟ ಜಗಪತಿ ಬಾಬು ಸಿನಿಮಾದಲ್ಲಿ ಆಶಿಶ್ ಗಾಂಧಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರೋ ಗಾನವಿ ಜತೆಗೆ ಮಮತಾ ಮೋಹನ್ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗಿನ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಸದ್ಯ ಚಿತ್ರದ ಕುರಿತು ಅಪ್‌ಡೇಟ್ ಸಿಗಲಿದೆ. ಇದನ್ನೂ ಓದಿ:
`ವೇದ’ ಚಿತ್ರದ ಪೋಸ್ಟರ್‌ನಲ್ಲಿ ಶಿವಣ್ಣ ಲುಕ್ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿತ್ತು. `ವೇದ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ರಿಲೀಸ್ ಮುಂಚೆ ಸಾಕಷ್ಟು ವಿಚಾರಗಳಿಂದ ವೇದ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗುತ್ತಿದೆ.ಚಿತ್ರ ರಿಲೀಸ್ ಆದಮೇಲೆ ಶಿವರಾಜ್‌ಕುಮಾರ್ ಮತ್ತು ಗಾನವಿ ಜೋಡಿ ಅದೆಷ್ಟರ ಮಟ್ಟಿಗೆ ಮೋಡಿ ಮಾಡಬಹುದು ಅಂತಾ ಕಾದು ನೋಡಬೇಕಿದೆ.



