Tag: ವೇದ ಕೃಷ್ಣಮೂರ್ತಿ

  • ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಅದಿತಿ ರಾಜೇಶ್ ಆಯ್ಕೆ

    ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಅದಿತಿ ರಾಜೇಶ್ ಆಯ್ಕೆ

    ಶಿವಮೊಗ್ಗ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ವೇದ ಕೃಷ್ಣಮೂರ್ತಿ ನೇತೃತ್ವದ ಕರ್ನಾಟಕ ಮಹಿಳಾ ಟಿ-20 ತಂಡಕ್ಕೆ ಶಿವಮೊಗ್ಗದ ಮಹಿಳಾ ಕ್ರಿಕೆಟರ್ ಕು.ಅದಿತಿ ರಾಜೇಶ್ ಆಯ್ಕೆಯಾಗಿದ್ದಾರೆ.

    ಅದಿತಿ ರಾಜೇಶ್ ಏಪ್ರಿಲ್ 18 ರಿಂದ ಗುಜರಾಜ್‍ನ ರಾಜ್‍ಕೋಟ್‍ನಲ್ಲಿ ನಡೆಯಲಿರುವ ಹಿರಿಯ ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಅದಿತಿ ರಾಜೇಶ್ ಪ್ರಸ್ತುತ ವಿನೋಬನಗರದ ಡಿ.ವಿ.ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಸಹ್ಯಾದ್ರಿ ಕಾಲೇಜಿನಲ್ಲಿರುವ ಕ್ರೀಡಾಂಗಣದಲ್ಲಿ ಕಳೆದ 8 ವರ್ಷಗಳಿಂದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕ್ರಿಕೆಟ್ ತರಬೇತುದಾರ ಪಿ.ವಿ.ನಾಗರಾಜ್ ಅವರ ಬಳಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಇದನ್ನೂ ಓದಿ: ಗ್ರಾಮ ಸಹಾಯಕರ ಮಾಸಿಕ ಸಂಬಳ ಏರಿಕೆ

    ಮಹಿಳಾ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿ ನಗರಕ್ಕೆ ಕೀರ್ತಿ ತಂದ ಪ್ರತಿಭಾವಂತ ಯುವತಿಗೆ ವಿಧಾನ ಪರಿಷತ್ ಸದಸ್ಯ, ಕೆಎಸ್‍ಸಿಎ ಶಿವಮೊಗ್ಗ ವಲಯದ ಸಂಚಾಲಕ ಡಿ.ಎಸ್.ಅರುಣ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಶುಭಹಾರೈಸಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಕೆಪಿಎಸ್‍ಸಿ ಸದಸ್ಯರಾಗಿ ಬಿ.ವಿ ಗೀತಾ ನೇಮಕ

  • ಪ್ರತಿಭಾವಂತ ಯುವ ಕಲಾವಿದ ಬಹಳ ಬಹಳ ಬೇಗ ಅಗಲಿದ್ದಾನೆ – ಕುಂಬ್ಳೆ

    ಪ್ರತಿಭಾವಂತ ಯುವ ಕಲಾವಿದ ಬಹಳ ಬಹಳ ಬೇಗ ಅಗಲಿದ್ದಾನೆ – ಕುಂಬ್ಳೆ

    ಬೆಂಗಳೂರು: ಪ್ರತಿಭಾವಂತ ಯುವ ಕಲಾವಿದ ಬಹಳ ಬಹಳ ಬೇಗ ಅಗಲಿದ್ದಾನೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ, ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಕಂಬನಿ ಮಿಡಿದಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚಿರಂಜೀವಿ ಸರ್ಜಾ ಮೃತಪಟ್ಟ ಸುದ್ದಿ ಕೇಳಿ ಶಾಕ್ ಆಯ್ತು ಮತ್ತು ಬೇಸರವಾಯ್ತು. ಬಹಳ ಬೇಗ ಪ್ರತಿಭಾವಂತ ಯುವ ಕಲಾವಿದ ಅಗಲಿದ್ದಾನೆ. ಅವರ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ದು:ಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

    ಟೀಂ ಇಂಡಿಯಾ ಆಟಗಾರ್ತಿ ವೇದ ಕೃಷ್ಣಮೂರ್ತಿ ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ. ಚಿರಂಜೀವ್ ಮೃತಪಟ್ಟಿರುವ ಸುದ್ದಿ ಕೇಳಿ ಶಾಕ್ ಆದೆ. ಬಹಳ ಉತ್ತಮ ವ್ಯಕ್ತಿಯಾಗಿದ್ದರು. ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ದು:ಖ ಬರಿಸುವ ಶಕ್ತಿ ನೀಡಲಿ ಎಂದು ಬರೆದುಕೊಂಡಿದ್ದಾರೆ.

    ಇಂದು ಮಧ್ಯಾಹ್ನದ ವೇಳೆ ಚೆನ್ನಾಗಿದ್ದ ನಟ ಚಿರಂಜೀವಿ ಸರ್ಜಾ, ತಮ್ಮ ನಿವಾಸದ ರಸ್ತೆಯಲ್ಲಿರುವ ನಿವಾಸಿಗಳ ಜೊತೆ ಮಾತನಾಡಿದ್ದರು. ಇದಾದ ನಂತರ ಚಿರು ದೇಹ ದಿಢೀರ್ ಬೆವರಲು ಆರಂಭಿಸಿದೆ. ಈ ವೇಳೆ ಉಸಿರಾಡಲು ತೊಂದರೆ ಆಗುತ್ತಿದೆ ಎಂದು ಸರ್ಜಾ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾರೆ. ನಂತರ ಅವರನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಚಿರು ಕೊನೆಯುಸಿರೆಳೆದಿದ್ದಾರೆ.

    ಚಿರು ಅವರ ಸಾವಿನ ಸುದ್ದಿ ಕೇಳಿ ಇಡೀ ಚಿತ್ರರಂಗವೇ ಶಾಕ್ ಆಗಿದೆ. ಜೊತೆಗೆ ನಟರಾದ ದರ್ಶನ್, ಪುನೀತ್ ರಾಜ್‍ಕುಮಾರ್, ಗಣೇಶ್, ನಟಿ ಅಮೂಲ್ಯ ಮುಂತಾದ ಕಲಾವಿದರ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಇನ್ನೂ ನಟಿ ತರಾ, ಸೃಜನ್ ಲೋಕೇಶ್, ಕಿಚ್ಚ ಸುದೀಪ್ ಅವರು ಆಸ್ಪತ್ರೆಗೆ ಬಂದು ಚಿರುವಿನ ಅಂತಿಮ ದರ್ಶನ ಪಡೆದಿದ್ದಾರೆ. ಚಿರು ಅವರ ಹುಟ್ಟೂರು ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.