Tag: ವೇದಾಂತ

  • ಚಿಪ್ ಘಟಕ ತೆರೆಯಲ್ಲ- ವೇದಾಂತ ಜೊತೆಗಿನ 1.61 ಲಕ್ಷ ಕೋಟಿ ಒಪ್ಪಂದವನ್ನ ರದ್ದುಗೊಳಿಸಿದ ಫಾಕ್ಸ್‌ಕಾನ್‌

    ಚಿಪ್ ಘಟಕ ತೆರೆಯಲ್ಲ- ವೇದಾಂತ ಜೊತೆಗಿನ 1.61 ಲಕ್ಷ ಕೋಟಿ ಒಪ್ಪಂದವನ್ನ ರದ್ದುಗೊಳಿಸಿದ ಫಾಕ್ಸ್‌ಕಾನ್‌

    ನವದೆಹಲಿ: ಭಾರತದ ವೇದಾಂತ (Vedanta) ಕಂಪನಿ ಜೊತೆಗೂಡಿ ಗುಜರಾತ್‌ನಲ್ಲಿ 1.61 ಲಕ್ಷ ಕೋಟಿ ರೂ.(19 ಶತಕೋಟಿ ಡಾಲರ್‌) ಹೂಡಿಕೆಯೊಂದಿಗೆ ಆರಂಭವಾಗಬೇಕಿದ್ದ ಸೆಮಿಕಂಡಕ್ಟರ್‌ (Semiconductor) ಘಟಕದ ಒಪ್ಪಂದವನ್ನ ತೈವಾನ್‌ನ ಫಾಕ್ಸ್‌ಕಾನ್‌ (Foxconn) ಕಂಪನಿ ರದ್ದು ಮಾಡಿದೆ.

    ಭಾರತದಲ್ಲಿ ವೇದಾಂತ ಜೊತೆ ಜಂಟಿ ಉದ್ಯಮವಾಗಿ ಸೆಮಿ ಕಂಡಕ್ಟರ್‌ ತಯಾರಿಸುವುದಿಲ್ಲ ಎಂದು ಫಾಕ್ಸ್‌ಕಾನ್‌ ಹೇಳಿದ ನಂತರ ಪರಸ್ಪರ ಉದ್ಯಮವನ್ನು ಕೊನೆಗೊಳಿಸುವ ನಿರ್ಧಾರವನ್ನ ಎರಡೂ ಸಂಸ್ಥೆಗಳಿಂದ ಪ್ರಕಟಿಸಲಾಗಿದೆ. ಇದನ್ನೂ ಓದಿ: Rafale Deal: 90,000 ಕೋಟಿ ವೆಚ್ಚ, 26 ರಫೇಲ್‌ ಖರೀದಿಸಲು ಭಾರತ ಸರ್ಕಾರ ಮೆಗಾ ಪ್ಲ್ಯಾನ್‌!

    ಫಾಕ್ಸ್‌ಕಾನ್‌ ಮತ್ತು ವೇದಾಂತ ಕಂಪನಿ ಗುಜರಾತ್‌ನಲ್ಲಿ 1.61 ಲಕ್ಷ ಕೋಟಿ ರೂ. ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ (Semiconductor Unit) ಸ್ಥಾಪನೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದವು. ಎರಡೂ ಕಂಪನಿಗಳು ಜಂಟಿಯಾಗಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಿತ್ತು. ಇದೀಗ ಒಪ್ಪಂದ ರದ್ದಾಗಿದ್ದು, ಭಾರತದ ಸೆಮಿ ಕಂಡಕ್ಟರ್‌ ಕ್ಷೇತ್ರಕ್ಕೆ ಭಾರೀ ಪೆಟ್ಟು ಬಿದ್ದಿದೆ.

    ಈ ಬಗ್ಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಪ್ರತಿಕ್ರಿಯಿಸಿ, ಜಂಟಿ ಉದ್ಯಮದ ಸ್ಥಗಿತವು ಭಾರತವನ್ನು ಸೆಮಿಕಂಡಕ್ಟರ್ ಚಿಪ್ ಹಬ್ ಮಾಡುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

    ಈ ನಡುವೆ ಸೆಮಿಕಂಡಕ್ಟರ್‌ಗಳ ಪೂರೈಕೆಗೆ ಸ್ಥಳೀಯ ಪಾಲುದಾರರ ಮೂಲಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಒಪ್ಪಂದವನ್ನು ಮುರಿಯಲು ಫಾಕ್ಸ್‌ಕಾನ್ ಕಾರಣವನ್ನು ನೀಡಿಲ್ಲ. ಜಂಟಿ ಉದ್ಯಮದಿಂದ ಬೇರೆ ಬೇರೆಯಾದ ನಂತರ ವೇದಾಂತ ಕಂಪನಿ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಸ್ಥಾಪಿಸಲು ಇತರ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

    ಕಳೆದ ವರ್ಷ ವೇದಾಂತ ಲಿಮಿಟೆಡ್‌ (Vedanta Ltd.) ಮತ್ತು ತೈವಾನ್‌ನ ಫಾಕ್ಸ್‌ಕಾನ್‌ (Foxconn) ಕಂಪನಿಯು ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಜಾಗ ನೀಡಲು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌ ಮುಂದಾಗಿದ್ದವು. ರಾಜ್ಯಗಳು ಪೈಪೋಟಿಗೆ ಇಳಿದ ಹಿನ್ನೆಲೆಯಲ್ಲಿ ಕಂಪನಿ ಭಾರೀ ರಿಯಾಯಿಯಿತಿಯನ್ನು ಬಯಸಿತ್ತು. ಮುಖ್ಯವಾಗಿ 1000 ಎಕ್ರೆ ಭೂಮಿಯನ್ನು ಯಾವುದೇ ಶುಲ್ಕವಿಲ್ಲದೇ 99 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಬೇಕು. ಇದರ ಜೊತೆ 20 ವರ್ಷಗಳ ಅವಧಿಗೆ ನೀರು ಮತ್ತು ವಿದ್ಯುತ್‌ ಅನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಬೇಡಿಕೆ ಇಟ್ಟಿತ್ತು. ಈ ಬೇಡಿಕೆಗೆ ಗುಜರಾತ್‌ ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಹೊಸ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉತ್ಪಾದನಾ ಘಟಕ ಆರಂಭಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು.

    ಪ್ರಸ್ತುತ ವಿಶ್ವದ ಚಿಪ್‌ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್‌ ಕಂಪನಿಗಳೇ ಹೆಚ್ಚು ಪ್ರಾಬಲ್ಯ ಹೊಂದಿದೆ. ಭಾರತವನ್ನ ಚಿಪ್‌, ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿತ್ತು. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ ನಿಗದಿತ ವೆಚ್ಚದಲ್ಲಿ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನ ಉತ್ಪಾದಿಸುವ ಗುರಿಯನ್ನು ಹಾಕಿಕೊಂಡಿತ್ತು.

    2020ರ ವೇಳೆಗೆ ಕೇವಲ 1.12 ಲಕ್ಷ ಕೋಟಿ ರೂ. ನಷ್ಟಿದ್ದ ಭಾರತದ ಸೆಮಿಕಂಡಕ್ಟರ್‌ ವಲಯ 2026ರ ವೇಳೆಗೆ 5 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆಯನ್ನು ಹೊಂದಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

    ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಕರ್ನಾಟಕವನ್ನು ಬಿಟ್ಟು ಗುಜರಾತ್‌ ಆಯ್ಕೆ ಮಾಡಿದ್ದು ಯಾಕೆ – ಪ್ರಶ್ನೆಗೆ ಉತ್ತರ ಕೊಟ್ಟ ವೇದಾಂತ ಕಂಪನಿ

    ನವದೆಹಲಿ: ಫಾಕ್ಸ್‌ಕಾನ್‌(Foxconn) ಜೊತೆಗೂಡಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಗೆ ಗುಜರಾತ್‌(Gujarat) ರಾಜ್ಯವನ್ನು ಆಯ್ಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ವೇದಾಂತ(Vedanta Ltd.) ಕಂಪನಿಯ ಮುಖ್ಯಸ್ಥ ಅನಿಲ್‌ ಅಗರ್‌ವಾಲ್‌(Anil Agarwal) ಉತ್ತರ ನೀಡಿದ್ದಾರೆ.

    ಮಾಧ್ಯಮ ಕೇಳಿದ ಪ್ರಶ್ನೆಗೆ, ಉನ್ನತ ನಿರ್ವಹಣಾ ಸಲಹಾ ಸಂಸ್ಥೆ, ಅಕೌಂಟೆನ್ಸಿ ಸಂಸ್ಥೆ ಮತ್ತು ಫಾಕ್ಸ್‌ಕಾನ್ ಪರಿಣಿತರು ಐದಾರು ರಾಜ್ಯಗಳಿಗೆ ಭೇಟಿ ನೀಡಿದರು. ಗುಜರಾತ್ ಅನ್ನು ಆಯ್ಕೆ ಮಾಡುವುದು ʼವೃತ್ತಿಪರ ನಿರ್ಧಾರʼ ಎಂದು ಅಗರ್‌ವಾಲ್‌ ಉತ್ತರಿಸಿದರು.

    ನಮಗೆ ಬೇಗನೆ ಘಟಕ ಆರಂಭಿಸಬೇಕಿತ್ತು ಮತ್ತು ಸಮಯದ ನಿರ್ಬಂಧವಿತ್ತು. ಮತ್ತಷ್ಟು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ಅವರಿಗೆ ಇನ್ನೆರಡು ತಿಂಗಳು ಕಾಲಾವಕಾಶ ನೀಡಲು ನಾವು ಬಯಸಿರಲಿಲ್ಲ. ಹೀಗಾಗಿ ಕೂಡಲೇ ರಾಜ್ಯಗಳ ಮೌಲ್ಯಮಾಪನಕ್ಕೆ ಪೂರ್ಣವಿರಾಮ ಹಾಕಿ ಶಿಫಾರಸು ಮಾಡಿ. ನೀವು ಯಾವುದನ್ನು ಅಂತಿಮವಾಗಿ ಹೇಳುತ್ತಿರೋ ಅದನ್ನು ನಾವು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ್ದೆವು. ಅವರು ನಮಗೆ ಗುಜರಾತ್‌ಗೆ ಹೋಗಬೇಕೆಂದು ಶಿಫಾರಸು ಮಾಡಿದರು ಎಂದು ತಿಳಿಸಿದರು.

    ಈ ವೇಳೆ ಗುಜರಾತ್‌ ರಾಜ್ಯವನ್ನು ಫೈನಲ್‌ ಮಾಡಿದ ಆ ಸಲಹೆಗಾರರು ಯಾರು ಎಂಬ ಪ್ರಶ್ನೆಗೆ ಅನಿಲ್‌ ಅಗರ್‌ವಾಲ್‌ ಉತ್ತರ ನೀಡಲಿಲ್ಲ. ಇದನ್ನೂ ಓದಿ: ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌, ವೇದಾಂತ ಕಂಪನಿಯ ಷರತ್ತು ಏನಿತ್ತು?

    ಎರಡು ಹಂತದಲ್ಲಿ ಈ ಘಟಕ ಆರಂಭವಾಗಲಿದೆ. ಮೊದಲ ಹಂತದಲ್ಲಿ ನಾವು ಸುಮಾರು 10 ಬಿಲಿಯನ್ ಡಾಲರ್‌ ಹೂಡಿಕೆ ಮಾಡಲಾಗುವುದು. ಹಣ ಎಂದಿಗೂ ಸಮಸ್ಯೆಯಾಗುವುದಿಲ್ಲ ಎಂದರು.

    ಈ ಘಟಕದಲ್ಲಿ ಸ್ಮಾರ್ಟ್‌ಫೋನ್ ಮತ್ತು ಎಲೆಕ್ಟ್ರಿಕ್ ವಾಹನಗಳು ತಯಾರಾಗಲಿದೆ ಎಂಬ ವರದಿಯನ್ನು ನಿರಾಕರಿಸಿದ ಅವರು, ಈ ಸಮಯದಲ್ಲಿ ನಾವು ಕಚ್ಚಾ ವಸ್ತುಗಳ ತಯಾರಿಕೆಯತ್ತ ಗಮನಹರಿಸಿದ್ದೇವೆ ಎಂದು ಹೇಳಿದರು.

    ವೇದಾಂತ ಲಿಮಿಟೆಡ್‌ ಮತ್ತು ತೈವಾನ್‌ನ ಫಾಕ್ಸ್‌ಕಾನ್‌ ಕಂಪನಿಯ ಸೆಮಿಕಂಡಕ್ಟರ್‌ ಘಟಕಕ್ಕೆ ಸ್ಥಾಪನೆಗೆ ಜಾಗ ನೀಡಲು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್‌ ಮುಂದಾಗಿದ್ದವು. ಆದರೆ ವೇದಾಂತ ಷರತ್ತನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಯಾಗಲಿದೆ. ವೇದಾಂತ ಕಂಪನಿ ಶೇ.60, ಫಾಕ್ಸ್‌ಕಾನ್‌ ಕಂಪನಿ ಶೇ.40 ರಷ್ಟು ಬಂಡವಾಳವನ್ನು ಹೂಡಲಿದೆ. ಎರಡು ವರ್ಷದಲ್ಲಿ ಈ ಘಟಕ ಸ್ಥಾಪನೆಯಾಗಲಿದೆ.

    ಸೆಮಿಕಂಡಕ್ಟರ್ ಚಿಪ್‌ಗಳು ಅಥವಾ ಮೈಕ್ರೋಚಿಪ್‌ಗಳು ಕಾರು, ಮೊಬೈಲ್ ಫೋನ್‌ಗಳಿಂದ ಹಿಡಿದು ಎಟಿಎಂ ಕಾರ್ಡ್‌, ಅನೇಕ ಡಿಜಿಟಲ್ ಗ್ರಾಹಕ ಉತ್ಪನ್ನಗಳಿಗೆ ಅತ್ಯಗತ್ಯ. ಭಾರತೀಯ ಸೆಮಿಕಂಡಕ್ಟರ್ ಮಾರುಕಟ್ಟೆಯು 2021 ರಲ್ಲಿ 27.2 ಶತಕೋಟಿ ಡಾಲರ್‌ ಮೌಲ್ಯ ಹೊಂದಿದರೆ 2026ರಲ್ಲಿ 64 ಶತಕೋಟಿ ಡಾಲರ್‌ಗೆ ಬೆಳವಣಿಗೆಯಾಗಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ ಚಿಪ್‌ ತಯಾರಾಗುತ್ತಿರಲಿಲ್ಲ. ಚಿಪ್‌ ಕ್ಷೇತ್ರದಲ್ಲಿ ಚೀನಾ, ತೈವಾನ್‌ ಮುಂಚೂಣಿಯಲ್ಲಿದೆ. ಈಗ ಭಾರತ ಈ ಕ್ಷೇತ್ರದತ್ತ ಗಮನ ಹರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌

    ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌

    ನವದೆಹಲಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಯ ಪೈಪೋಟಿಯಲ್ಲಿ ಕರ್ನಾಟಕಕ್ಕೆ(Karnataka) ಸೋಲಾಗಿದೆ. ಮೂರು ರಾಜ್ಯಗಳನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ರೂ. ಹೂಡಿಕೆ ಘಟಕವನ್ನು ತನ್ನದಾಗಿಸಿಕೊಳ್ಳುವಲ್ಲಿ ಗುಜರಾತ್‌(Gujarat) ಯಶಸ್ವಿಯಾಗಿದೆ.

    ವೇದಾಂತ ಲಿಮಿಟೆಡ್‌ (Vedanta Ltd.) ಮತ್ತು ತೈವಾನ್‌ನ ಫಾಕ್ಸ್‌ಕಾನ್‌ (Foxconn) ಕಂಪನಿಯ ಸೆಮಿಕಂಡಕ್ಟರ್‌ ಘಟಕಕ್ಕೆ ಸ್ಥಾಪನೆಗೆ ಜಾಗ ನೀಡಲು ಕರ್ನಾಟಕ, ಮಹರಾಷ್ಟ್ರ, ತೆಲಂಗಾಣ, ಗುಜರಾತ್‌ ಮುಂದಾಗಿದ್ದವು.

    ರಾಜ್ಯಗಳು ಪೈಪೋಟಿಗೆ ಇಳಿದ ಹಿನ್ನೆಲೆಯಲ್ಲಿ ಕಂಪನಿ ಭಾರೀ ರಿಯಾಯಿಯಿತಿಯನ್ನು ಬಯಸಿತ್ತು. ಮುಖ್ಯವಾಗಿ 1000 ಎಕ್ರೆ ಭೂಮಿಯನ್ನು ಯಾವುದೇ ಶುಲ್ಕವಿಲ್ಲದೇ 99 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಬೇಕು. ಇದರ ಜೊತೆ 20 ವರ್ಷಗಳ ಅವಧಿಗೆ ನೀರು ಮತ್ತು ವಿದ್ಯುತ್‌ ಅನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಬೇಡಿಕೆ ಇಟ್ಟಿತ್ತು.

    ಈ ಬೇಡಿಕೆಗೆ ಗುಜರಾತ್‌ ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಹೊಸ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉತ್ಪಾದನಾ ಘಟಕ ಆರಂಭವಾಗಲಿದೆ. ಇದನ್ನೂ ಓದಿ: ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ?

    ವೇದಾಂತ ಕಂಪನಿಯ ಮುಖ್ಯಸ್ಥ ಅನಿಲ್‌ ಅಗರ್‌ವಾಲ್‌ ಈ ಬಗ್ಗೆ ಟ್ವೀಟ್‌ ಮಾಡಿ, ಇತಿಹಾಸ ನಿರ್ಮಾಣವಾಗುತ್ತದೆ! ಹೊಸ ವೇದಾಂತ-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರವನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಲು ಸಂತೋಷವಾಗುತ್ತಿದೆ. ವೇದಾಂತದ 1.54 ಲಕ್ಷ ಕೋಟಿಗಳ ರೂ. ಹೂಡಿಕೆಯು ಭಾರತದ ಆತ್ಮನಿರ್ಭರ್ ಸಿಲಿಕಾನ್ ವ್ಯಾಲಿಯ ಕನಸನ್ನು ನನಸು ಮಾಡಲಿದೆ ಎಂದಿದ್ದಾರೆ.

    ಇದು ನಮ್ಮ ಎಲೆಕ್ಟ್ರಾನಿಕ್ಸ್ ಆಮದುಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಜನರಿಗೆ 1 ಲಕ್ಷ ನೇರ ಕೌಶಲ್ಯದ ಉದ್ಯೋಗಗಳನ್ನು ಒದಗಿಸುತ್ತದೆ . ಗುಜರಾತ್ ಸರ್ಕಾರ ಮತ್ತು ಕೇಂದ್ರ ಐಟಿ ಸಚಿವರಿಗೆ ನನ್ನ ಧನ್ಯವಾದಗಳು. ಹೊಸ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರಗಳ ಮೂಲಕ ಪ್ರತಿ ರಾಜ್ಯವೂ ಪ್ರಯೋಜನ ಪಡೆಯುವುದರೊಂದಿಗೆ ಭಾರತದ ಟೆಕ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತದೆ. ಭಾರತ ಸಿಲಿಕಾನ್‌ ವ್ಯಾಲಿಯಾಗುವ ಹೆಜ್ಜೆ ಹತ್ತಿರವಾಗಿದೆ. ಚಿಪ್ ಟೇಕರ್‌ನಿಂದ ಚಿಪ್ ಮೇಕರ್‌ನತ್ತ ಪ್ರಯಾಣ ಅಧಿಕೃತವಾಗಿ ಪ್ರಾರಂಭವಾಗಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

    ಆಪಲ್‌ ಕಂಪನಿಯ ಐಫೋನ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಫಾಕ್ಸ್‌ಕಾನ್‌ ತಯಾರಿಸುತ್ತಿವೆ. ಈಗಾಗಲೇ ಫಾಕ್ಸ್‌ಕಾನ್‌ ತಮಿಳುನಾಡಿನಲ್ಲಿ ತನ್ನ ಘಟಕವನ್ನು ತೆರೆದಿದೆ.

    ಪ್ರಸ್ತುತ ವಿಶ್ವದ ಚಿಪ್‌ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್‌ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್‌, ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಆಯ್ಕೆಯಾಗಿವೆ.

    ಭಾರತದ ಸರ್ಕಾರದ ಪಿಎಲ್ಐ ಅಡಿ ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಅಲ್ಲದೇ ವೇದಾಂತ-ಫಾಕ್ಸ್‌ಕಾನ್‌ ಮತ್ತು ಸಿಂಗಾಪೂರ ಮೂಲದ ಐಜಿಎಸ್‌ಎಸ್‌ ಆಯ್ಕೆಯಾಗಿವೆ. ಚಿಪ್‌ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ರಾಜ್ಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವಾಲಯದ ಸೆಮಿಕಂಡಕ್ಟರ್‌ ಸಲಹಾ ಸಮಿತಿಯ ಸದಸ್ಯರು ಈ ಹಿಂದೆ ತಿಳಿಸಿದ್ದರು.

    2020ರ ವೇಳೆಗೆ ಕೇವಲ 1.12 ಲಕ್ಷ ಕೋಟಿ ರೂ. ನಷ್ಟಿದ್ದ ಭಾರತದ ಸೆಮಿಕಂಡಕ್ಟರ್‌ ವಲಯ 2026ರ ವೇಳೆಗೆ 5 ಲಕ್ಷ ಕೋಟಿ ರೂ. ಗೆ ತಲುಪುವ ನಿರೀಕ್ಷೆ ಇದೆ.

    Live Tv
    [brid partner=56869869 player=32851 video=960834 autoplay=true]