Tag: ವೇತನ

  • ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ

    ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ- ಗೂಗಲ್ ನಿರ್ಧಾರ

    ವಾಷಿಂಗ್ಟನ್: ಕೋವಿಡ್ ನಿಯಮಗಳನ್ನು ಅನುಸರಿಸದ ಹಾಗೂ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಗೂಗಲ್ ವೇತನ ನೀಡುವುದನ್ನು ನಿಲ್ಲಿಸಿದೆ. ಮಾತ್ರವಲ್ಲದೇ ಗೂಗಲ್ ಉದ್ಯೋಗಿಗಳಿಗೆ ಕೆಲಸದಿಂದ ವಜಾ ಗೊಳಿಸುವುದಾಗಿ ಎಚ್ಚರಿಕೆ ನೀಡಿದೆ.

    ಹೌದು, ಗೂಗಲ್ ತನ್ನ ಉದ್ಯೋಗಿಗಳಿಗೆ ಡಿಸೆಂಬರ್ 3ರ ಒಳಗಾಗಿ ತಮ್ಮ ಲಸಿಕೆಗಳ ವಿವರವನ್ನು ಸಲ್ಲಿಸ ಬೇಕೆಂಬ ಸೂಚನೆ ನೀಡಿತ್ತು. ಡಿಸೆಂಬರ್ 3ರ ಬಳಿಕವೂ ಯಾವುದೇ ವಿವರಗಳನ್ನು ಸಲ್ಲಿಸದ ಉದ್ಯೋಗಿಗಳನ್ನು ಗೂಗಲ್ ವೈಯಕ್ತಿಕವಾಗಿ ಸಂಪರ್ಕಿಸುವುದೆಂದು ಸೂಚನೆಯಲ್ಲಿ ತಿಳಿಸಿತ್ತು. ಇದನ್ನೂ ಓದಿ: ಭಾರತೀಯನಿಗೆ 3.5ಲಕ್ಷ ರೂ. ನೀಡಿದ ಗೂಗಲ್

    ಇದೀಗ ಗೂಗಲ್ ಲಸಿಕೆಯನ್ನು ಪಡೆಯದೇ ಇರುವ ಉದ್ಯೋಗಿಗಳಿಗೆ ಜನವರಿ 18ರ ವರೆಗೆ ಸಮಯಾವಕಾಶ ನೀಡಿದೆ. ಉದ್ಯೋಗಿಗಳು ಲಸಿಕೆಯನ್ನು ಪಡೆಯದೇ ಹೋದಲ್ಲಿ ಅವರಿಗೆ ವೇತನದೊಂದಿಗೆ 30 ದಿಗಳ ರಜೆಯನ್ನು ನೀಡಲಾಗುವುದು, ನಂತರ 6 ತಿಂಗಳ ವರೆಗೆ ವೇತನವಿಲ್ಲದ ವೈಯಕ್ತಿಕ ರಜೆಯಲ್ಲಿ ಇರಿಸಲಾಗುತ್ತದೆ ಎಂದಿದೆ.

    ಒಂದುವೇಳೆ ಈ ಸಮಯಾವಕಾಶದಲ್ಲಿಯೂ ಉದ್ಯೋಗಿಗಳು ಲಸಿಕೆಯನ್ನು ತೆಗೆದುಕೊಂಡಿಲ್ಲವಾದಲ್ಲಿ ಕೆಲಸದಿಂದಲೇ ಅವರನ್ನು ವಜಾ ಗೊಳಿಸುವುದಾಗಿ ತಿಳಿಸಿದೆ. ಇದನ್ನೂ ಓದಿ: ಅಮ್ಮನ ಫೋಟೋ ಹಿಡಿದುಕೊಂಡು ಹೆಜ್ಜೆ ಇಟ್ಟ ವಧು – ವೀಡೀಯೋ ವೈರಲ್‌

    ಗೂಗಲ್ ಜನವರಿ 2022ರ ಒಳಗಾಗಿ ತಮ್ಮ ಉದ್ಯೋಗಿಗಳನ್ನು ಆಫಿಸ್‌ಗೆ ಕರೆಸಿಕೊಳ್ಳುವ ಯೋಜನೆ ಮಾಡಿತ್ತು. ಆದರೆ ಓಮಿಕ್ರಾನ್ ಪ್ರಕರಣಗಳ ಹಠಾತ್ತನೆ ಏರಿಕೆಯಿಂದಾಗಿ ಗೂಗಲ್ ಸೇರಿದಂತೆ ಎಲ್ಲಾ ದೊಡ್ಡ ಟೆಕ್ ಕಂಪನಿಗಳು ಉದ್ಯೋಗಿಗಳನ್ನು ಆಫೀಸ್‌ಗೆ ಕರೆಸಿಕೊಳ್ಳುವ ಯೋಜನೆಯನ್ನು ಮುಂದೂಡಿದೆ.

  • ಸಾರಿಗೆ ನೌಕರರ ವೇತನ ವಿಳಂಬ – ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೆಚ್‍ಡಿಕೆ

    ಸಾರಿಗೆ ನೌಕರರ ವೇತನ ವಿಳಂಬ – ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೆಚ್‍ಡಿಕೆ

    – ಕೂಡಲೇ ವೇತನ ಬಿಡುಗಡೆ ಮಾಡುವಂತೆ ಆಗ್ರಹ

    ಬೆಂಗಳೂರು: ರಾಜ್ಯ ಸಾರಿಗೆ ನೌಕರಿಗೆ ವೇತನ ವಿಳಂಬ ಮಾಡುತ್ತಿರುವ ಸರ್ಕಾರದ ನಡೆಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

    ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕೂಡಲೇ ಸಾರಿಗೆ ನೌಕರರಿಗೆ ವೇತನ ಪಾವತಿ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಒತ್ತಾಯ ಮಾಡಿದ್ದಾರೆ.

    ಹೆಚ್‍ಡಿಕೆ ಹೇಳಿದ್ದೇನು?
    ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ KSRTC ಮತ್ತು BMTC ನೌಕರರ ಮೇಲೆ ಸರ್ಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಅರ್ಧ ಸಂಬಳವೇ ಆಗಿದ್ದು, ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎನ್ನುವ ಮಾಹಿತಿ ನನಗೆ ಬಂದಿದೆ. ಇದನ್ನೂ ಓದಿ:  ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್

    ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ ತಾಯಿ ಸ್ಥಾನದಲ್ಲಿರುವ ಸರ್ಕಾರ ಕ್ಷಮಿಸಿ ಔದಾರ್ಯ ತೋರಿಸುವ ದೊಡ್ಡ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು, ಮಹಾಮಾರಿಯನ್ನು ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಸಾರಿಗೆ ನೌಕರರ ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಲು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಕೂಡಲೇ ಕ್ರಮ ವಹಿಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಸುಸ್ಸಾನೆ ಖಾನ್, ಮಿಕಾ ಸಿಂಗ್!

  • 1.5 ಕೋಟಿ ಆದಾಯ ಗಳಿಸುತ್ತಿದ್ದ ಆರೋಪದಡಿ ಬಿಗ್‍ಬಿ ಬಾಡಿ ಗಾರ್ಡ್ ವರ್ಗಾವಣೆ

    1.5 ಕೋಟಿ ಆದಾಯ ಗಳಿಸುತ್ತಿದ್ದ ಆರೋಪದಡಿ ಬಿಗ್‍ಬಿ ಬಾಡಿ ಗಾರ್ಡ್ ವರ್ಗಾವಣೆ

    ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಬಾಡಿಗಾರ್ಡ್ ಜಿತೇಂದ್ರ ಶಿಂಧೆಗೆ ವಾರ್ಷಿಕ 1.5 ಕೋಟಿ ವೇತನ ನೀಡುತ್ತಾರೆ. ಇದು ದೇಶದ ಅನೇಕ ಖಾಸಗಿ ಕಂಪನಿಗಳ ಸಿಇಒಗಳ ಸಂಬಳಕ್ಕಿಂತ ಹೆಚ್ಚಾಗಿದೆ ಎಂಬ ಆರೋಪ ಬಳಿಕ ಇದೀಗ ಜಿತೇಂದ್ರ ಶಿಂಧೆರನ್ನು ವರ್ಗಾಯಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಮುಂಬೈ ಪೊಲೀಸ್ ಇಲಾಖೆಗೆ ಕಾನ್ಸ್‌ಸ್ಟೇಬಲ್‌ ಆಗಿ ಸೇರಿಕೊಂಡ ಜಿತೇಂದ್ರ ಶಿಂಧೆ ಅವರನ್ನು ಅಮಿತಾಬ್ ಬಚ್ಚನ್ ಅಂಗರಕ್ಷಕರಾಗಿ ನೇಮಿಸಲಾಯಿತು. ಕಳೆದ ಹಲವು ವರ್ಷಗಳಿಂದ ಜೀತೆಂದ್ರ ಶಿಂಧೆ ಬಿಗ್‍ಬಿ ಅಂಗ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಜೀತೆಂದ್ರ ಶಿಂಧೆಯವರ ವಾರ್ಷಿಕ ಆದಾಯ 1.5 ಕೋಟಿ ಎಂಬ ಸುದ್ದಿ ಹೊರಬಂದಿದ್ದು, ಜೀತೆಂದ್ರ ಶಿಂಧೆ ಅಮಿತಾಬ್ ಬಚ್ಚನ್ ಅಥವಾ ಬೇರೆಯವರಿಂದ ಹಣ ಸಂಪಾದಿಸುತ್ತಿದ್ದಾರೆಯೇ ಎಂದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್

    ಈ ಬಗ್ಗೆ ಶಿಂಧೆ ತಮ್ಮ ಪತ್ನಿ ಭದ್ರತಾ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ. ಈ ಭದ್ರತಾ ಏಜೆನ್ಸಿ ಮೂಲಕ ಹಲವಾರು ಸೆಲಬ್ರೆಟಿಗಳಿಗೆ ಮತ್ತು ಹೆಸರಾಂತ ಗಣ್ಯರಿಗೆ ಭದ್ರತೆಯನ್ನು ಒದಗಿಸಲಾಗುತ್ತಿದೆ. ಅಲ್ಲದೇ ತಮ್ಮ ಪತ್ನಿಯ ಹೆಸರಿನಲ್ಲಿ ಭದ್ರತಾ ವ್ಯವಹಾರಗಳನ್ನು ನಡೆಸುತ್ತಿದ್ದೇನೆ. ಜೊತೆಗೆ ಅಮಿತಾಬ್ ಬಚ್ಚನ್ 1.5 ಕೋಟಿ ರೂಪಾಯಿ ವೇತನ ಪಾವತಿಸುತ್ತಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ:ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ

    ಮುಂಬೈ ಪೊಲೀಸರ ಪ್ರಕಾರ ಒಬ್ಬ ಪೊಲೀಸನ್ನು ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ನಿಯೋಜಿಸಲಾಗುವುದಿಲ್ಲ. ಜಿತೇಂದ್ರ ಶಿಂಧೆ 2015ರಿಂದ ಅಮಿತಾಬ್ ಬಚ್ಚನ್‍ಗಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಚ್ಚನ್ ಸೆಕ್ಯೂರಿಟಿಗಾಗಿ ಇಬ್ಬರು ಕಾನ್ಸ್‌ಸ್ಟೇಬಲ್‌ಗಳನ್ನು ಯೋಜಿಸಲಾಗಿದ್ದು, ಅದರಲ್ಲಿ ಜಿತೇಂದ್ರ ಶಿಂಧೆ ಅಮಿತಾಬ್ ಬಚ್ಚನ್‍ರವರ ನೆಚ್ಚಿನ ಬಾಡಿಗಾರ್ಡ್ ಆಗಿದ್ದರು. ಅಮಿತಾಬ್ ಬಚ್ಚನ್ ಹೋದ ಕಡೆಯಲೆಲ್ಲಾ ಜಿತೇಂದ್ರ ಶಿಂಧೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಅವರನ್ನು ದಕ್ಷಿಣ ಮುಂಬೈನ ಪೊಲೀಸ್ ಸ್ಟೇಷನ್‍ಗೆ ವರ್ಗಾಯಿಸಲಾಗಿದೆ.

  • 6 ತಿಂಗಳ ವೇತನ ಬಿಡುಗಡೆ ಮಾಡಿ- ಸಿಎಂಗೆ ದಿ ಮೈಸೂರು ಪೇಪರ್ ಮಿಲ್ಸ್ ಅರಣ್ಯ ನೌಕರರ ಮನವಿ

    6 ತಿಂಗಳ ವೇತನ ಬಿಡುಗಡೆ ಮಾಡಿ- ಸಿಎಂಗೆ ದಿ ಮೈಸೂರು ಪೇಪರ್ ಮಿಲ್ಸ್ ಅರಣ್ಯ ನೌಕರರ ಮನವಿ

    ಬೆಂಗಳೂರು: ಕಳೆದ 6 ತಿಂಗಳಿನಿಂದ ವೇತನ ದೊರಕದೆ ತೀವ್ರ ತೊಂದರೆಗೆ ಸಿಲುಕಿಕೊಂಡಿರುವ ದಿ ಮೈಸೂರು ಪೇಪರ್ ಮಿಲ್ಸ್ ಅರಣ್ಯ ನೌಕರರ ವೇತನ ಬಿಡುಗಡೆಗೆ ಸೂಚನೆ ನೀಡುವಂತೆ ದಿ ಮೈಸೂರು ಪೇಪರ್ ಮಿಲ್ಸ್ ಫಾರೆಸ್ಟ್ ಎಂಪ್ಲಾಯೀಸ್ ಅಸೋಸಿಯೇಷನ್ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.

    ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯಿಂದ ತೊಂದರೆಗೆ ಈಡಾಗಿರುವ ಕಾರ್ಮಿಕರುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಅವರ ನೆರವಿಗೆ ಸ್ಪಂದಿಸಿರುತ್ತೀರಿ. ಆದರೆ, ಎಂ.ಪಿ.ಎಂ ಅರಣ್ಯ ಇಲಾಖೆಯಲ್ಲಿ ರಾತ್ರಿ-ಹಗಲು ಎನ್ನದೇ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ 6 ತಿಂಗಳಿನಿಂದ ವೇತನ ನೀಡದಿರುವುದು ಮತ್ತು 2010 ರಿಂದ ನೌಕರರಿಗೆ ಬರಬೇಕಾದ ವೇತನ ಬಾಕಿಯನ್ನು ನೀಡದೇ ಇರುವುದು ಬಹಳ ದುಖಃಕರ ಸಂಗತಿಯಾಗಿದೆ.

    ಎಂ.ಪಿ.ಎಂ ಅರಣ್ಯ ನೌಕರರು ವೇತನವಿಲ್ಲದೆ ಸಂಸಾರ ಸಾಗಿಸಲು ಆಗದೇ ಅವರ ಬದುಕು ಬೀದಿಪಾಲಾಗಿರುತ್ತದೆ. ನೌಕರರು ಮನನೊಂದು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ಅರಣ್ಯ ನೌಕರರ 6 ತಿಂಗಳ ವೇತನ ಮತ್ತು 2010 ರಿಂದ ಬರಬೇಕಾದ ಹಳೇ ಬಾಕಿ ವೇತನವನ್ನು ನೀಡಲು ಕೂಡಲೇ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಂಘದ ಅಧ್ಯಕ್ಷರಾದ ಜಗನ್ನಾಥ ಬಂಗೇರ ಅವರು ವಿನಂತಿಸಿಕೊಂಡಿದ್ದಾರೆ.

  • ಇನ್ನೆರಡು ದಿನಗಳಲ್ಲಿ ಸಾರಿಗೆ ನೌಕರರ ಸಂಬಳ ಹಾಕ್ತೇವೆ: ಸವದಿ

    ಇನ್ನೆರಡು ದಿನಗಳಲ್ಲಿ ಸಾರಿಗೆ ನೌಕರರ ಸಂಬಳ ಹಾಕ್ತೇವೆ: ಸವದಿ

    ಬೆಂಗಳೂರು: ಶೀಘ್ರವೇ ಸಾರಿಗೆ ನೌಕರರ ಡಿಸೆಂಬರ್, ಜನವರಿಯ 15 ದಿನಗಳ ಸಂಬಳವನ್ನು ಹಾಕುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದರು.

    ಬುಧವಾರ ಸಾರಿಗೆ ನೌಕರರು ಪ್ರತಿಭಟನೆ ಮಾಡುವ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರು ನಾಳೆ ಪ್ರತಿಭಟನೆ ಮಾಡುವ ಖಚಿತ ಮಾಹಿತಿ ಇಲ್ಲ. ನಾನು ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ. ಹಿಂದೆ ಪ್ರತಿಭಟನೆ ಮಾಡಿದಾಗ 9 ಬೇಡಿಕೆ ಇಟ್ಟಿದ್ದರು. ಇದರಲ್ಲಿ 4 ಬೇಡಿಕೆ ಇಡೇರಿಸಿದ್ದೇವೆ, 5 ಸಭೆ ನಡೆಸಿದ್ದೇವೆ ಅದು ಅವರಿಗೆ ಗೊತ್ತು. ಡಿಸೆಂಬರ್ ನ ಸಂಬಳವನ್ನು ಇನ್ನೆರಡು ದಿನಗಳಲ್ಲಿ ಹಾಕುತ್ತೇವೆ. ಜನವರಿಯ 15 ದಿನದ ಸಂಬಳವನ್ನು ಶೀಘ್ರ ಹಾಕುತ್ತೇವೆ ಎಂದು ಭರವಸೆ ನೀಡಿದರು.

    ಆದಾಯ, ಇಂಧನ ಮತ್ತು ಸಂಬಳಕ್ಕೆ ಸರಿಯಾಗಿತ್ತಿದೆ. ಹಣಕಾಸು ಇಲಾಖೆ ಒಪ್ಪಿಕೊಂಡಿದೆ ಅದು ಎರಡು ದಿನದಲ್ಲಿ ಸರಿಯಾಗುತ್ತೆ. ಯಾವುದೇ ಅಡ್ಡಿ ಆತಂಕ ಇಲ್ಲದೆ ನಿಮ್ಮ ಸಂಬಳ ಕೊಡುವ ಕೆಲಸ ಮಾಡುತ್ತೇವೆ. ಅಲ್ಲದೆ ಇನ್ನು 15 ದಿನದಲ್ಲಿ ನೌಕರರ ಜೊತೆ ಸಭೆ ನಡೆಸಿ 6ನೇ ವೇತನ ಪರಿಷ್ಕರಣೆ ಬಗ್ಗೆಯೂ ಮಾತನಾಡುತ್ತೇನೆ. ಪ್ರತಿಭಟನೆ ನಡೆಸುವ ಬಗ್ಗೆ ಯಾರೂ ನನ್ನನ್ನು ಭೇಟಿ ಮಾಡಿಲ್ಲ, ಮನವಿ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ನೋಡಿಯಷ್ಟೇ ನನಗೆ ಮಾಹಿತಿ ತಿಳಿದಿದೆ ಎಂದು ಸ್ಪಷ್ಟಪಡಿಸಿದರು.

    ಯಾವುದೇ ಸಾಲಪಡೆಯಲು ಆಸ್ತಿ ಅಡ ಇಡಬೇಕು, ಶ್ಯೂರಿಟಿ ಕೊಡಬೇಕು ಅದಕ್ಕೆ ಬಿಎಂಟಿಸಿ ಶಾಂತಿನಗರ ಕಟ್ಟಡ ಅಡಮಾನ ಮಾಡಲಾಗಿದೆ. ಎಲೆಕ್ಟ್ರಿಕ್ ಬಸ್ ಕೊಳ್ಳುತಿಲ್ಲ ಕೇಂದ್ರ ಸರ್ಕಾರದ ಸಬ್ಸಿಡಿ ಹಣದಲ್ಲಿ ಕಡಿಮೆ ದರದಲ್ಲಿ ಬಸ್‍ಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ.

    ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಸಹ ಹೊರಡಿಸಿರುವ ಸಚಿವರು, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಸಿಬ್ಬಂದಿಯ ಬೇಡಿಕೆಗಳ ಪೂರೈಕೆಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ನಾಳೆ ಕೆಲ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ನಾಳೆ ಯಾವುದೇ ಬಸ್ ವ್ಯತ್ಯಯ ಆಗಲ್ಲ. ಡಿಸೆಂಬರ್ ಹಾಗೂ ಜನವರಿ ತಿಂಗಳ ಅರ್ಧ ವೇತನ ನೀಡಿದ್ದೇವೆ. ಶೀಘ್ರದಲ್ಲೇ ಉಳಿದ ಬಾಕಿ ವೇತನ ನೀಡತ್ತೇವೆ. ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ದಯವಿಟ್ಟು ಸಿಬ್ಬಂದಿ ಸಹಕರಿಸಬೇಕು ಎಂದು ಸಾರಿಗೆ ಸಚಿವರು ಮನವಿ ಮಾಡಿದ್ದಾರೆ.

  • ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಮೂಹೂರ್ತ ಫಿಕ್ಸ್

    ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಮೂಹೂರ್ತ ಫಿಕ್ಸ್

    ಬೆಂಗಳೂರು: ಸಾರಿಗೆ ನೌಕರರು ಡಿಸೆಂಬರ್ ನಲ್ಲಿ ವೇತನ ಪರಿಷ್ಕರಣೆ ಸೇರಿ 10 ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿದ್ದರು. ಈ ವೇಳೆ ಬೇಡಿಕೆ ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಜೊತೆಗೆ ಸರ್ಕಾರ ಸಾರಿಗೆ ನಿಗಮಗಳಿಗೆ, ಬೇಡಿಕೆಗಳ ಸಾಧಕ- ಭಾದಕ ಅಧ್ಯಯನ ನಡೆಸಿ ವರದಿ ನೀಡುವಂತೆ ತಿಳಿಸಿತ್ತು.

    ಈ ಹಿನ್ನೆಲೆ ವೇತನ ಪರಿಷ್ಕರಣೆ ಸಂಬಂಧ ಆರನೇ ವೇತನ ಆಯೋಗದ ಶಿಫಾರಸುಗಳ ಅಂಶಗಳನ್ನು ಪರಿಶೀಲಿಸಲು ಕೆಎಸ್‍ಆರ್‍ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯ ಮಹತ್ವದ ಸಭೆಯನ್ನು ಇದೇ 27ರಂದು ಕರೆಯಲಾಗಿದೆ.

    ದಿನಾಂಕ 27 ರಂದು ಶಾಂತಿನಗರದ ಕೆಎಸ್ ಆರ್ ಟಿಸಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 11.30 ಈ ಸಭೆ ಜರುಗಲಿದ್ದು, 4 ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ನೌಕರರ ವೇತನಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳೊಂದಿಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

  • ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ- ಕಲ್ಲು ತೂರಿ, ಬೆಂಕಿ ಹಚ್ಚಿ ಕಾರ್ಮಿಕರು ಆಕ್ರೋಶ

    ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ- ಕಲ್ಲು ತೂರಿ, ಬೆಂಕಿ ಹಚ್ಚಿ ಕಾರ್ಮಿಕರು ಆಕ್ರೋಶ

    ಕೋಲಾರ: ಕಳೆದ 4 ತಿಂಗಳಿನಿಂದ ವೇತನ ನೀಡಿಲ್ಲವೆಂದು ಆರೋಪಿಸಿ ಕಾರ್ಮಿಕರು  ಐಫೋನ್‌ ಉತ್ಪಾದನೆ ಮಾಡುವ ವಿಸ್ಟ್ರಾನ್ ಕಂಪನಿಗೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕೋಲಾರ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ವೇತನ ನೀಡದ ಆರೋಪದಿಂದಾಗಿ ಈ ಕಂಪನಿಯ ಮೇಲೆ ಕಾರ್ಮಿಕರು ಕಲ್ಲು ತೂರಾಟ ಮಾಡಿ ಕಿಡಿಕಾರಿದ್ದಾರೆ.

    ಕಂಪನಿ ಕಳೆದ ನಾಲ್ಕು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ. ಅಲ್ಲದೆ ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಇಂದು ಕಂಪನಿಯ ಗಾಜು ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಕಿಟಕಿ ಗಾಜು, ಪೀಠೋಪಕರಣಗಳು ಸಂಪೂರ್ಣ ಧ್ವಂಸಗೊಂಡಿವೆ. ಅಲ್ಲದೆ ಬೆಂಕಿ ಕೂಡ ಹಚ್ಚಿದ್ದಾರೆ.

    ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಆಗಮಸಿ ಪರಿಸ್ಥಿತಿ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಕಾರ್ಮಿಕರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ.

  • ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ಬೆಳಗಾವಿ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಈ ಕುರಿತು ಸಾರಿಗೆ ನೌಕರರು ಅಳಲು ತೋಡಿಕೊಂಡಿದ್ದು ನಾನು ಒಪ್ಪಿಕೊಳ್ಳುತ್ತೇನೆ. ದುರ್ದೈವದಿಂದ ಸಂಬಳ ನೀಡಲು ಆಗಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಹೇಳಿದ್ದಾರೆ.

    ಎಂಟು ತಿಂಗಳಿಂದ ಕೊರೊನಾ ಬಂದಿದ್ದು, ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಬಸ್‍ನಲ್ಲಿ ಸಾರ್ವಜನಿಕರು ಪ್ರಯಾಣಿಸುತ್ತಿಲ್ಲ, ಹೀಗಾಗಿ ಬರುತ್ತಿರುವ ಆದಾಯದಲ್ಲಿ ಬರಿ ಡೀಸೆಲ್‍ಗೆ ಸಾಕಾಗುತ್ತಿದೆ. ಈ ಕಾರಣಕ್ಕೆ ಸರ್ಕಾರಕ್ಕೆ ಸಂಬಳ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದೇವು. ಪ್ರತಿ ತಿಂಗಳು 325 ಕೋಟಿ ರೂ. ಸಂಬಳಕ್ಕೆ ಹಣ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ಕೊಡಬೇಕು ಅಂತಾ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

    ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟು ಸಂಬಳ ನೀಡಲು ಮನವಿ ಮಾಡುತ್ತೇನೆ. ಮೂರು ತಿಂಗಳಿಂದ ಸಂಬಳಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೇವು. ಎರಡು ಬಾರಿ ಪ್ರಸ್ತಾವನೆ ವಾಪಾಸ್ ಬಂದಿದೆ. ಮತ್ತೆ ಈಗ ಪ್ರಸ್ತಾವನೆ ಕಳುಹಿಸಿದ್ದೇವೆ. ಶೇಕಡಾ 70 ರಷ್ಟಾದ್ರೂ ಸರ್ಕಾರ ಹಣ ಕೊಟ್ಟರೆ ಉಳಿದ ಹಣವನ್ನು ಸಾಲ ಪಡೆದುಕೊಂಡಾದರೂ ಸಂಬಳ ನೀಡುತ್ತೇವೆ. ಸರ್ಕಾರದಲ್ಲಿ ಆದಾಯದ ಕೊರತೆ ಇರುವುದಕ್ಕೆ ಮುಂದಕ್ಕೆ ಹಾಕುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಂಬಳ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಈ ತಿಂಗಳ ಸಂಬಳವೇ ಆಗಿಲ್ಲ. ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ ಎಂದು ಸಾರಿಗೆ ನಿಗಮ ಇನ್ನೂ ವೇತನ ಪಾವತಿ ಮಾಡಿಲ್ಲ. ಪ್ರತಿ ತಿಂಗಳು 4 ರಿಂದ 10ನೇ ದಿನಾಂಕದೊಳಗ ವೇತನ ಆಗುತ್ತಿತ್ತು. ಆದರೆ ಈಗಾಗಲೇ ಅರ್ಧ ತಿಂಗಳು ಕಳೆದಿದ್ದರೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನೂ ಸಂಬಳವಾಗಿಲ್ಲ. ಸಂಬಳವಿಲ್ಲದೇ ಹಬ್ಬ ಮಾಡೋಕೆ ಕಷ್ಟ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಅಳಲು ತೊಡಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿತ್ತು. ಕಳೆದ ಸೆಪ್ಟೆಂಬರ್ ತಿಂಗಳ ತನಕ ರಾಜ್ಯ ಸರ್ಕಾರವೇ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಸಂಬಳ ನೀಡಿತ್ತು. ಆದರೆ ಈಗ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯೇ ತನ್ನ ಸಿಬ್ಬಂದಿಗೆ ವೇತನ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

  • ಕೋವಿಡ್‌ 19 ಸಂಸದರ ವೇತನ,ಭತ್ಯೆ ಕಡಿತ- ಮೊದಲು ಎಷ್ಟಿತ್ತು? ಈಗ ಎಷ್ಟು ಕಡಿತಗೊಂಡಿದೆ?

    ಕೋವಿಡ್‌ 19 ಸಂಸದರ ವೇತನ,ಭತ್ಯೆ ಕಡಿತ- ಮೊದಲು ಎಷ್ಟಿತ್ತು? ಈಗ ಎಷ್ಟು ಕಡಿತಗೊಂಡಿದೆ?

    ನವದೆಹಲಿ: ಕೋವಿಡ್‌ 19 ಹಿನ್ನೆಲೆಯಲ್ಲಿ ಸಂಸದರ ಒಂದು ವರ್ಷದ ವೇತನ ಮತ್ತು ಭತ್ಯೆ ಕಡಿತಗೊಂಡಿದೆ. ಒಂದು ವರ್ಷದ ಅವಧಿಗೆ ಸಂಸದರ ವೇತನ ಶೇ.30ರಷ್ಟು ಕಡಿತಗೊಂಡರೆ, ಸಚಿವರ ಭತ್ಯೆ ಶೇ.30ರಷ್ಟು ಕಡಿತಗೊಂಡಿದೆ.

    ಈ ಬದಲಾವಣೆ ಈ ವರ್ಷದ ಏಪ್ರಿಲ್‌ 1ರಿಂದ ಒಂದು ವರ್ಷದವರಗೆ ಇರಲಿದೆ. ವೇತನ ಮತ್ತು ಭತ್ಯೆ ಕಡಿತದಿಂದ ಒಟ್ಟು 54 ಕೋಟಿ ರೂ. ಉಳಿತಾಯವಾಗಲಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್‌ 6 ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವೇತನ ಕಡಿತದ ನಿರ್ಧಾರ ಕೈಗೊಳ್ಳಲಾಗಿತ್ತು.1954 ರ ತಿದ್ದುಪಡಿ ಪ್ರಕಾರ ಸಂಸತ್ತಿನ ಸದಸ್ಯರಿಗೆ ನೀಡುತ್ತಿದ್ದ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಶೇ.30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತ್ತು. ಈ ಸುಗ್ರೀವಾಜ್ಞೆಗೆ ಈ ಬಾರಿಯ ಕಲಾಪದಲ್ಲಿ ಅನುಮೋದನೆ ಸಿಕ್ಕಿದೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್, ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಲ್‍ಎಡಿಎಸ್)ಯನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಲಾಗಿದೆ. ಈ ಹಣವನ್ನು ಕೊರೊನಾ ವಿರುದ್ಧದ ಹೋರಾಟದ ನಿಧಿಗೆ ವರ್ಗಾಯಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಎಂಪಿಎಲ್‍ಎಡಿಎಸ್ ಅಡಿಯಲ್ಲಿರುವ ಹಣವು ಎರಡು ವರ್ಷಗಳವರೆಗೆ ಸುಮಾರು 7,900 ಕೋಟಿ ರೂ. ಆಗಲಿದೆ ಎಂದು ತಿಳಿಸಿದ್ದರು.

    ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ರಾಜ್ಯಪಾಲರು ಸಹ ಶೇ.30 ರಷ್ಟು ಸಂಬಳ ಕಡಿತಕ್ಕೆ ಒಪ್ಪಿಗೆ ಸೂಚಿಸಿದ್ದರು.

    ಮೊದಲು ಎಷ್ಟಿತ್ತು? ಈಗ ಎಷ್ಟು ಕಡಿತಗೊಂಡಿದೆ?
    ತಿಂಗಳಿಗೆ ವೇತನ 1 ಲಕ್ಷ ರೂ. ಇದ್ದರೆ ಈಗ 70,000 ರೂ.ಗೆ ಇಳಿಕೆಯಾಗಿದೆ. ಕ್ಷೇತ್ರ ಭತ್ಯೆ 70,000 ರೂ. ಇದ್ದರೆ ಈಗ ಇದು 49,000 ರೂ.ಗೆ ಇಳಿಕೆಯಾಗಿದೆ.

    ಸರ್ಕಾರಿ ಕಚೇರಿ ಖರ್ಚುಗಳ ಭತ್ಯೆ ಈಗ 54,000 ರೂ.ಗಳಿಗೆ ಇಳಿಕೆಯಾಗಿದ್ದರೆ ಮೊದಲು 60,000 ರೂ. ಇತ್ತು. ಇದರಲ್ಲಿ 20,000 ರೂ. ಇದ್ದ ಕಚೇರಿ ಖರ್ಚು 14,000 ರೂ. ಗಳಿಗೆ ಇಳಿಕೆಯಾಗಿದೆ. ಕಾರ್ಯದರ್ಶಿಗಳ ಅನುದಾನ 40,000 ರೂ. ಹಾಗೆಯೇ ಮುಂದುವರಿಯಲಿದೆ.

    3,000 ರೂ. ಇದ್ದ ಪ್ರಧಾನಮಂತ್ರಿಗಳ ಭತ್ಯೆ 2,100 ರೂ., ಸಂಪುಟ ಸಚಿವರುಗಳ ಭತ್ಯೆ 2,000 ರೂ. ಗಳಿಂದ 1,400 ರೂ.ಗಳಿಗೆ ಇಳಿಕೆಯಾಗಿದೆ. ರಾಜ್ಯ ಖಾತೆ ಸಚಿವರುಗಳ ಭತ್ಯೆ 1,000 ರೂ. ನಿಂದ 700 ರೂ.ಗಳಿಗೆ ಇಳಿಕೆಯಾಗಿದೆ. ಉಪ ಸಚಿವರುಗಳ ಭತ್ಯೆ 600 ರೂ. ನಿಂದ 420 ರೂ.ಗಳಿಗೆ ಇಳಿದಿದೆ.

  • ಶಾಸಕರನ್ನ ಖರೀದಿಸಿ ಸರ್ಕಾರ ನಡೆಸಲಾಗುತ್ತೆ, ಸಿಬ್ಬಂದಿ ವೇತನ ನೀಡಲು ಆಗಲ್ವಾ – ಬಿಸಿಯೂಟ ನೌಕರರ ಪ್ರತಿಭಟನೆ

    ಶಾಸಕರನ್ನ ಖರೀದಿಸಿ ಸರ್ಕಾರ ನಡೆಸಲಾಗುತ್ತೆ, ಸಿಬ್ಬಂದಿ ವೇತನ ನೀಡಲು ಆಗಲ್ವಾ – ಬಿಸಿಯೂಟ ನೌಕರರ ಪ್ರತಿಭಟನೆ

    ಶಿವಮೊಗ್ಗ: ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಸಿಯೂಟ ಸಿಬ್ಬಂದಿ ಜಿಲ್ಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದರು.

    ನಗರದ ಕೋರ್ಟ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಸಿಬ್ಬಂದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊರೊನಾ ಬಂದ ದಿನದಿಂದ ಬಿಸಿಯೂಟ ಸಿಬ್ಬಂದಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಬಿಸಿಯೂಟ ಸಿಬ್ಬಂದಿಗೆ ವೇತನ ನೀಡುವಂತೆ ಹಲವು ದಿನದಿಂದ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ. ಅಲ್ಲದೇ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದೇವೆ. ಆದರೂ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದರು.

    ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದಾದರೆ ಸರ್ಕಾರ ಏಕೆ ನಡೆಸುತ್ತೀರಾ? ಶಾಸಕರುಗಳನ್ನು ಖರೀದಿ ಮಾಡಲು ಹಣವಿದೆ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಬಳಿ ಹಣ ಇಲ್ಲವೇ? ಎಂದು ಪ್ರಶ್ನಿಸಿದರು.

    ಇನ್ನಾದರೂ ಬಿಸಿಯೂಟ ಸಿಬ್ಬಂದಿಗೆ ವೇತನ ನೀಡಲು ಕ್ರಮ ಕೈಗೊಳ್ಳಿ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಬಿಸಿಯೂಟದ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.