Tag: ವೇತನ

  • 41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಸಾಕಷು ಹಣವನ್ನು ಉಳಿತಾಯ ಮಾಡಲು ಹಾಗೂ ಹೂಡಿಕೆ (Investment) ಮಾಡಲು ಬಯಸುತ್ತಾರೆ. ಈ ಮೂಲಕ ಬೇಗನೆ ನಿವೃತ್ತರಾಗಲು ಬಯಸುತ್ತಾರೆ. ಇಲ್ಲೊಬ್ಬ ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ (Google Software Engineer) ತನ್ನ 22 ವಯಸ್ಸಿನಲ್ಲಿ ವೃತ್ತಿಯನ್ನು ಪ್ರಾರಂಭಿಸುತ್ತಲೇ ತಮ್ಮ 35ನೇ ವಯಸ್ಸಿನೊಳಗೆ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ.) ಹೂಡಿಕೆ ಮಾಡಿ, ನಿವೃತ್ತಿ (Retirement) ಹೊಂದುವ ಗುರಿಯನ್ನು ಹೊಂಡಿದ್ದಾರೆ. ಅವರ ಫ್ಯೂಚರ್ ಪ್ಲ್ಯಾನ್ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

    ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 22 ವರ್ಷದ ಎಥಾನ್ ನ್ಗುನ್ಲಿ (Ethan Nguonly) ಇಂತಹ ಒಂದು ಯೋಜನೆಯನ್ನು ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯಲ್ಲಿ ವಾಸವಿರೋ ಟೆಕ್ಕಿ ತನ್ನ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರ ಮಹತ್ವದ ಬಗ್ಗೆ ತನ್ನ ಹೆತ್ತವರು ಹೇಗೆ ಪ್ರೋತ್ಸಾಹ ನೀಡಿದರು ಎಂದು ವಿವರಿಸಿದ್ದಾರೆ.

    ನೀವು ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟು ಬಿಟ್ಟರೆ ಅದು ಯಾವುದೇ ಕೆಲಸಕ್ಕೂ ಬರಲ್ಲ. ಕಾಲಾನಂತರ ಅದು ನಿಷ್ಪ್ರಯೋಜಕ ಆಗಿಬಿಡುತ್ತದೆ. ಆದರೆ ನಿಮ್ಮ ಹಣದಿಂದ ಏನಾದರೂ ಪ್ರಯೋಜನ ಆಗಬೇಕೆಂದರೆ ಅದನ್ನು ಹೂಡಿಕೆ ಮಾಡಿ ಎಂದು ಪೋಷಕರು ತನಗೆ ತಿಳಿಸಿದ್ದಾಗಿ ನ್ಗುನ್ಲಿ ಹೇಳಿದ್ದಾರೆ.

    ನಾನು ಚಿಕ್ಕವನಿದ್ದಾಗಲೇ ಯೋಚಿಸುತ್ತಿದ್ದ ಮುಖ್ಯ ವಿಷಯವೆಂದರೆ, ಈ ಹಣ ಎಲ್ಲಾ ದೊಡ್ಡದಾಗುತ್ತಾ ಹೋಗುತ್ತದೆ, ಬೆಳೆಯುತ್ತಲೇ ಇರುತ್ತದೆ. ಆದರೆ ಇದಕ್ಕಾಗಿ ನಾವು ಯಾವುದೇ ಕೆಲಸ ಮಾಡುವ ಅಗತ್ಯವೇ ಇಲ್ಲ. ಇದು ನಿಜವಾಗಿಯೂ ನನ್ನ ಹಣವನ್ನು ಹೂಡಿಕೆಗಳಲ್ಲಿ ವಿನಿಯೋಗಿಸಬಹುದು ಎಂಬ ನನ್ನ ಕಲ್ಪನೆಯನ್ನು ಬಹಿರಂಗಪಡಿಸಿತು. ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡೋ ಬದಲು ಅದನ್ನು ಹೂಡಿಕೆ ಮಾಡುವುದೇ ಉತ್ತಮ ಎಂದು ಹೇಳಿದರು.

    ನ್ಗುನ್ಲಿ ಇಂತಹ ಯೋಜನೆಯೊಂದಿಗೆಯೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇದಕ್ಕಾಗಿ ಅವರು ಯಾವುದೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನಂತರ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ಮಾಹಿತಿ ಹಾಗೂ ಡೇಟಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದರು. 2022ರ ಆಗಸ್ಟ್‌ನಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆಯುವುದಕ್ಕೂ ಮೊದಲೇ ನ್ಗುನ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

    ನ್ಗುನ್ಲಿ ವಾರ್ಷಿಕ ಆದಾಯ 194,000 ಡಾಲರ್ (ಸುಮಾರು 1.60 ಕೋಟಿ ರೂ.). ಪ್ರಸ್ತುತ ಅವರು ತಮ್ಮ ನಿವೃತ್ತಿ ಹಾಗೂ ಇತರ ಹೂಡಿಕೆ ಖಾತೆಗಳಲ್ಲಿ ಹಾಗೂ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದ ಮನೆಗಳಲ್ಲಿ 135,000 ಡಾಲರ್ (ಸುಮಾರು 1.11 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ತಮ್ಮ ವೇತನದಲ್ಲಿ ಅವರು 35% ರಷ್ಟು ಹೂಡಿಕೆಗಳಲ್ಲಿ ವಿನಿಯೋಗಿಸಲು ಮುಂದಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಯೋಜಿಸಿದ್ದಾರೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ನ್ಗುನ್ಲಿ ಊಟಕ್ಕಾಗಿ ಹೆಚ್ಚೇನೂ ಖರ್ಚು ಮಾಡಲ್ಲ. ಏಕೆಂದರೆ ಗೂಗಲ್ ಉಚಿತ ಊಟ, ಉಪಹಾರ ನೀಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳಿಗಾಗಿ ಹೆಚ್ಚಿನ ಖರ್ಚು ಮಾಡಲ್ಲ. ಬದಲಿಗೆ ಸರಳ ಹಾಗೂ ಕೈಗೆಟಕೋ ಬೆಲೆಯಲ್ಲಿ ಸಿಗುವ ಬಟ್ಟೆಗಳಲ್ಲಿ ಧರಿಸಲು ಇಷ್ಟ ಪಡುತ್ತಾರೆ. ಪ್ರಯಾಣವನ್ನು ಹೆಚ್ಚು ಇಷ್ಟಪಡೋ ಅವರು ವರ್ಷಕ್ಕೆ 3-4 ಬಾರಿ ಪ್ರವಾಸ ಹೋಗುತ್ತಾರೆ. ಐಷಾರಾಮಿ ವಸತಿಗೆ ಹಣ ವ್ಯಯಿಸುವ ಬದಲು ಕಡಿಮೆ ವೆಚ್ಚದ ಆಯ್ಕೆಗಳನ್ನು ಮಾಡುತ್ತಾರೆ.

    5 ಮಿಲಿಯನ್ ಡಾಲರ್‌ನೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯೋ ಗುರಿಯನ್ನು ತಲುಪಲು ನ್ಗುನ್ಲಿ ತಮ್ಮ ನಿವೃತ್ತಿ ಖಾತೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲು ಯೋಜಿಸಿದ್ದಾರೆ. ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಆಸ್ತಿಯನ್ನು ಖರೀದಿ ಮಾಡುವ ಮೂಲಕ ತಮ್ಮ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೋಗೆ ಸೇರಿಸುತ್ತಾರೆ. ನಾನು 67ನೇ ವಯಸ್ಸಿನಲ್ಲಿ ಪರ್ವತ ಏರಲು ಬಯಸಲ್ಲ. ಬದಲಿಗೆ ಎಲ್ಲಿಯವರೆಗೆ ಯುವಕನಾಗಿ, ಆರೋಗ್ಯವಾಗಿರುತ್ತೇನೋ ಅಲ್ಲಿಯವರೆಗೆ ಪ್ರಯಾಣವನ್ನು ಮಾಡಿ ಅನುಭವ ಪಡೆಯುತ್ತೇನೆ ಎಂದು ನ್ಗುನ್ಲಿ ಹೇಳುತ್ತಾರೆ. ಇದನ್ನೂ ಓದಿ: ದೇಶದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • KPTCL ನೌಕರರಿಗೆ ಶೇ. 20ರಷ್ಟು ವೇತನ ಪರಿಷ್ಕರಣೆ

    KPTCL ನೌಕರರಿಗೆ ಶೇ. 20ರಷ್ಟು ವೇತನ ಪರಿಷ್ಕರಣೆ

    ಬೆಂಗಳೂರು: ಕೆಪಿಟಿಸಿಎಲ್ (KPTCL) ನೌಕರರು ವೇತನ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದರು. ನಮ್ಮ ಮಂತ್ರಿಗಳು ಸುದೀರ್ಘವಾಗಿ ಚರ್ಚಿಸಿ ಶೇ. 20ರಷ್ಟು ವೇತನ (Salary) ಪರಿಷ್ಕರಣೆಗೆ ಒಪ್ಪಿದ್ದು, ಇಂದು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ (Basavaraj Bommai) ತಿಳಿಸಿದರು.

    ಇದೇ ವೇಳೆ ಸಾರಿಗೆ ನೌಕರರಿಗೆ ಶೇ. 15ರಷ್ಟು ವೇತನ ಪರಿಷ್ಕರಣೆ ಬಗ್ಗೆಯೂ ಮಾತನಾಡಿದರು. ಸಾರಿಗೆ ಇಲಾಖೆ ನೌಕರರಿಗೆ ಶೇ. 15ರಷ್ಟು ವೇತನ ಪರಿಷ್ಕರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಈ ಎರಡೂ ಆಜ್ಞೆ ಇಂದು ಹೊರಡಿಸಲಾಗುವುದು ಎಂದರು. ಇದನ್ನೂ ಓದಿ: ಬಿಜೆಪಿ ನಾಯಕರ ವಿರುದ್ಧ ಸೋಮಣ್ಣ ಚಾರ್ಜ್‌ಶೀಟ್‌- ಇತ್ಯರ್ಥ ಮಾಡ್ತೀವಿ ಎಂದ ಶಾ

    ಕಾಡ್ಗಿಚ್ಚು ನಿಯಂತ್ರಣಕ್ಕೆ ಕ್ರಮ: ಬೇಸಿಗೆ ಕಾಲದಲ್ಲಿ ಅಲ್ಲಲ್ಲಿ ಕಾಡ್ಗಿಚ್ಚು ಆಗುತ್ತಿದೆ. ಸಾಧ್ಯತೆ ಇರುವೆಡೆಯಲ್ಲಿ ಪೂರ್ವಭಾವಿ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರಸ್ತುತ ಕಾಡ್ಗಿಚ್ಚನ್ನು ನಂದಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಸಚಿವ ಹಾಲಪ್ಪ ಆಚಾರ್ ಸೀರೆ ಹಂಚಿಕೆ – ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್

  • ಮಾ. 1ರಿಂದ ಸರ್ಕಾರಿ ನೌಕರರ ಮುಷ್ಕರ

    ಮಾ. 1ರಿಂದ ಸರ್ಕಾರಿ ನೌಕರರ ಮುಷ್ಕರ

    ಬೆಂಗಳೂರು: ಮಾ. 1ರಿಂದ ಸರ್ಕಾರಿ ನೌಕರರು (Government Employees) ಮುಷ್ಕರ (Indefinite Strike) ಆರಂಭಿಸುವುದಾಗಿ ಸರ್ಕಾರಕ್ಕೆ ಎಚ್ಚರ ನೀಡಿದ್ದಾರೆ.

    ಸಿಎಂ ಬೊಮ್ಮಾಯಿ (CM Basavaraj Bommai) ವಿಧಾನಸಭೆಯಲ್ಲಿ ಮಾತನಾಡುತ್ತಾ, ಏಳನೇ ವೇತನ ಆಯೋಗ (7th Pay Commission) ನೀಡುವ ಮಧ್ಯಂತರ ವರದಿ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡುವುದಾಗಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯನ್ನು ಸರ್ಕಾರಿ ನೌಕರರು ನಂಬುವ ಸ್ಥಿತಿಯಲ್ಲಿ ಇಲ್ಲ. ಅಧಿಕೃತ ಆದೇಶಕ್ಕೆ ಪಟ್ಟು ಹಿಡಿದಿರುವ ರಾಜ್ಯ ಸರ್ಕಾರಿ ನೌಕರರ ಸಂಘ ನಿಗದಿಯಂತೆ ಮಾರ್ಚ್ ಒಂದರಿಂದ ಮುಷ್ಕರ ಆರಂಭಿಸಲು ಮುಂದಾಗಿದೆ.

    ಇಂದು ಸಭೆ ನಡೆಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದೆ. ನಿಗಮ,ಪ್ರಾಧಿಕಾರ ಸೇರಿ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳನ್ನು ಬಂದ್ ಮಾಡಲು ಸೂಚನೆ ಕೊಟ್ಟಿದ್ದೇವೆ. ಈಗಾಗಲೇ ಒಂಭತ್ತು ತಿಂಗಳು ತಡವಾಗಿದೆ. ನಮ್ಮ ಬೇಡಿಕೆ ಈಡೇರಲೇ ಬೇಕು.. ಅಲ್ಲಿಯವರೆಗೂ ವಿರಮಿಸಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸ್ಪಷ್ಟಪಡಿಸಿದೆ.

    ರಾಜ್ಯ ಸರ್ಕಾರಿ ನೌಕರರ ಸಂಘ ಹೇಳಿದಂತೆಯೇ ಮಾಡಿದರೆ ತುರ್ತು ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿವೆ. ರಾಜ್ಯದ ಜನ ನಾನಾ ಸಮಸ್ಯೆ ಅನುಭವಿಸಬೇಕಾಗುತ್ತದೆ. ಈಗ ಸರ್ಕಾರದ ಬಳಿ ಒಂದೇ ದಿನದ ಸಮಯ ಉಳಿದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ

    ಯಾವ ಯಾವ ಇಲಾಖೆ ಬಂದ್?
    * ವಿಧಾನಸೌಧದ ಎಲ್ಲಾ ಕಚೇರಿ
    * ಸಚಿವಾಲಯದ ಎಲ್ಲಾ ಕಚೇರಿ
    * ಬಿಬಿಎಂಪಿ/ಪುರಸಭೆ/ನಗರಸಭೆ
    * ಡಿಸಿ ಕಚೇರಿ/ತಾಲೂಕು ಕಚೇರಿ
    * ಗ್ರಾಮ ಪಂಚಾಯಿತಿ
    * ಸರ್ಕಾರಿ ಶಾಲೆ-ಕಾಲೇಜು, ಹಾಸ್ಟೆಲ್
    * ಕಂದಾಯ ಇಲಾಖೆ
    * ಜಲಮಂಡಳಿ

  • ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ – 7ನೇ ವೇತನ ಆಯೋಗ ಜಾರಿ

    ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ – 7ನೇ ವೇತನ ಆಯೋಗ ಜಾರಿ

    ಬೆಂಗಳೂರು: ಎಲೆಕ್ಷನ್ ಸನಿಹದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರ್ಕಾರ(Karnataka Government) ಗುಡ್ ನ್ಯೂಸ್ ಕೊಟ್ಟಿದೆ. ಸರ್ಕಾರಿ ನೌಕರರ ಬಹಳ ದಿನಗಳಿಂದ ಎದಿರು ನೋಡುತ್ತಿದ್ದ ಏಳನೇ ವೇತನ ಆಯೋಗದ(7th Pay Commission) ರಚನೆ ಮಾಡಿದೆ.

    ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಆಯೋಗದ ಸಮಿತಿ ರಚಿಸಲಾಗಿದೆ. ಈ ಆಯೋಗ ರಚನೆಯಿಂದ 5.40 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ, ವಿವಿಗಳ ಸಿಬ್ಬಂದಿ ಮತ್ತು 4 ಲಕ್ಷ ನಿವೃತ್ತ ನೌಕರರಿಗೆ ಅನುಕೂಲ ಆಗಲಿದೆ. ಇದನ್ನೂ ಓದಿ:  ನನ್ನ ತೇಜೋವಧೆ ಆಗ್ತಿದೆ – ವಿವಾದಿತ ಹೇಳಿಕೆಯನ್ನು ಹಿಂಪಡೆದ ಸತೀಶ್ ಜಾರಕಿಹೊಳಿ

    ಈ ಸಂಬಂಧ ಸರ್ಕಾರ ಇನ್ನಷ್ಟೇ ಅಧಿಸೂಚನೆ ಹೊರಡಿಸಬೇಕಿದೆ. ಈ ಆಯೋಗ ಫೆಬ್ರವರಿ ಹೊತ್ತಿಗೆ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಎಲೆಕ್ಷನ್‍ಗೂ ಮೊದಲೇ ಏಳನೇ ವೇತನ ಆಯೋಗದ ಅನ್ವಯ ವೇತನ ಪರಿಷ್ಕರಣೆ ಆಗುವ ಸಂಭವ ಇದೆ.

    Live Tv
    [brid partner=56869869 player=32851 video=960834 autoplay=true]

  • ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಏಕಾಏಕಿ ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ – ಕಾರಣವೇನು?

    ಮುಂಬೈ: ಸ್ಪೈಸ್ ಜೆಟ್ (SpiceJet) ಏರ್‌ಲೈನ್ (AirLine) ಇಂದು ಏಕಾ ಏಕಿ ತನ್ನ 80 ಪೈಲಟ್‌ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ದೀರ್ಘ ರಜೆಯಲ್ಲಿರುವಂತೆ (Leave Without Pay) ಸೂಚಿಸಿದೆ.

    ಸ್ಪೈಸ್‌ಜೆಟ್ ಹೆಚ್ಚಿನ ಸಂಖ್ಯೆಯ ಪೈಲಟ್‌ಗಳನ್ನು (Pilots) ಹೊಂದಿದ್ದು, ನಿರ್ವಹಣಾ ವೆಚ್ಚ ಸರಿದೂಗಿಸಲು ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿಯ ವಿಮಾನಯಾನ (AirLine) ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ತಾಜ್ ಮಹಲ್ ನೋಡಲು ಬಂದಿದ್ದವಳ ಮೇಲೆ ಕೋತಿ ದಾಳಿ- ಗಳಗಳನೆ ಅತ್ತ ಸ್ಪೇನ್ ಸುಂದರಿ

    ಬೋಯಿಂಗ್-737 ವಿಭಾಗದ 40 ಪೈಲಟ್‌ಗಳು ಹಾಗೂ ಕ್ಯೂ-400 ವಿಭಾಗದ 40 ಪೈಲಟ್‌ಗಳು (Pilots) ಸೇರಿ ಒಟ್ಟು 80 ಪೈಲಟ್‌ಗಳನ್ನು ಧೀರ್ಘ ರಜೆ ಮೇಲೆ ಮನೆಗೆ ತೆರಳುವಂತೆ ಸೂಚಿಸಿದೆ. ಡಿಸೆಂಬರ್‌ನಲ್ಲಿ 7 ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್‌ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್‌ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    2021ರ ಆರಂಭದಲ್ಲಿ ಸ್ಪೈಸ್ ಜೆಟ್ (Spice Jet) 95 ವಿಮಾನಗಳನ್ನು ಹೊಂದಿತ್ತು. ಆದರೆ ಈಗ 50 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಳಿದ ವಿಮಾನಗಳನ್ನು ಲೀಸ್‌ಗೆ ನೀಡಿದೆ. ಇನ್ನೂ ಕೆಲವು ನಿರ್ವಹಣಾ ಸಮಸ್ಯೆಯಿಂದ ಹಾರಾಟ ನಡೆಸುತ್ತಿಲ್ಲ. ಜೊತೆಗೆ ಸಂಸ್ಥೆಯು ಆರ್ಥಿಕತೆಯ (Economy Problem) ಒತ್ತಡದಲ್ಲಿದೆ. ಹೆಚ್ಚಿನ ಪೈಲಟ್‌ಗಳನ್ನು ಇರಿಸಿಕೊಂಡು ಸಂಸ್ಥೆ ನಷ್ಟದಲ್ಲಿ ಮುನ್ನಡೆಸುವುದಲ್ಲಿ ಯಾವುದೇ ಅರ್ಥವಿಲ್ಲ ಎಂದು ಈ ನಿರ್ಧಾರ ಕೈಗೊಂಡಿದೆ. ಹೊಸ ವಿಮಾನಗಳು ಆಗಮಿಸಿದ ನಂತರ ಪೈಲಟ್‌ಗಳನ್ನು ಮತ್ತೆ ಕರೆಸಲಾಗುವುದು ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಾರಿಗೆ ಇಲಾಖೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ಧ – ಶ್ರೀರಾಮುಲು

    ಸಾರಿಗೆ ಇಲಾಖೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ಧ – ಶ್ರೀರಾಮುಲು

    ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ (Transport Employees) ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು (B.Sriramulu) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ನಿಗಮದ ಸಿಬ್ಬಂದಿಯ ವೇತನ ಪರಿಷ್ಕರಣೆ ಕಳೆದ ನಾಲ್ಕು ವರ್ಷದಿಂದ ಆಗಿಲ್ಲ. ಆದರೆ ವೇತನ ಪರಿಷ್ಕರಣೆಗೆ ಸರ್ಕಾರ ಬದ್ದವಾಗಿದೆ. ಪರಿಷ್ಕರಣೆ ಸಂಬಂಧ ನಾಲ್ಕು ನಿಗಮಗಳ ಎಂಡಿಗಳ ಜೊತೆ ಸಭೆ ನಡೆಸಿ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್

    ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ 2016 ರ ನಂತರ ಪರಿಷ್ಕರಣೆ ಆಗಿಲ್ಲ. 2020-21 ರಲ್ಲಿ ಬಹಳ ಜನ ನೌಕರರು ಮುಷ್ಕರಕ್ಕೆ ಹೋದಾಗ ವೇತನ ಪರಿಷ್ಕರಣೆ ಬೇಡಿಕೆ ಇರಿಸಿ ಬೀದಿಗಿಳಿದು ಹೋರಾಡಿದ್ದರು. ಮಾತುಕತೆ ಮೂಲಕ ಅಂದು ಸಮಸ್ಯೆ ಪರಿಹರಿಸಲಾಗಿತ್ತು ಎಂದು ಹೇಳಿದರು.

    ಕಳೆದ ಎರಡು ವರ್ಷದಲ್ಲಿ ನಮಗೆ ಸಾಕಷ್ಟು ತೊಂದರೆಯಾಗಿದೆ. ಕೋವಿಡ್ ನಂತರ ಪ್ರಯಾಣ ದರ ಹೆಚ್ಚಿಸಲಾಗಲಿಲ್ಲ. ಡೀಸೆಲ್ ದರ ಹೆಚ್ಚಾಗಿದೆ. ಪ್ರತಿದಿನ 15 ಕೋಟಿ ಹಣ ಡೀಸೆಲ್‌ಗೆ ವ್ಯಯವಾಗುತ್ತಿದೆ. ಹಾಗಾಗಿ ಕಷ್ಟದ ಸ್ಥಿತಿ ಇದೆ. ಆದರೂ ಸಿಎಂ ಕೂಡ ವೇತನ ಪರಿಷ್ಕರಣೆ ಚಿಂತನೆ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಸಮಸ್ಯೆ ಇತ್ಯರ್ಥ ಮಾಡಲಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಾಕಿಸ್ತಾನ, ಹಿಂದೂಸ್ತಾನ ಒಂದಾಗಬೇಕು: ಕೆ.ಎಸ್‌.ಈಶ್ವರಪ್ಪ

    ನಾಲ್ಕು ನಿಗಮ ಲಾಭಕ್ಕೆ ಬರಲು ಪೂರಕವಾಗಿ ವರದಿ ನೀಡಲು ರಚಿಸಿದ್ದ ಶ್ರೀನಿವಾಸಮೂರ್ತಿ ಸಮಿತಿ ವರದಿ ಈಗಾಗಲೇ ಬಂದಿದೆ. ಎಲ್ಲವನ್ನೂ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನದಲ್ಲಿ ಸಿಎಂ ಜೊತೆ ಚರ್ಚಿಸಿ ವೇತನ ಪರಿಷ್ಕರಣೆ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ವೇತನ ಸರಿಯಾಗಿ ನೀಡದ ಮಾಲೀಕನ ಮರ್ಸಿಡಿಸ್ ಕಾರನ್ನೇ ಸುಟ್ಟ ಕಾರ್ಮಿಕ

    ವೇತನ ಸರಿಯಾಗಿ ನೀಡದ ಮಾಲೀಕನ ಮರ್ಸಿಡಿಸ್ ಕಾರನ್ನೇ ಸುಟ್ಟ ಕಾರ್ಮಿಕ

    ಲಕ್ನೋ: ಸಂಬಳವನ್ನು ಸರಿಯಾಗಿ ನೀಡದ ಮಾಲೀಕನಿಗೆ ಬುದ್ಧಿ ಕಲಿಸಲು ಮಾಲೀಕನ ಮರ್ಸಿಡಿಸ್(Mercedes) ಕಾರನ್ನೇ ಕಾರ್ಮಿಕನೊಬ್ಬ(Labourer) ಸುಟ್ಟ ಘಟನೆ ನೋಯ್ಡಾದಲ್ಲಿ ನಡೆದಿದೆ.

    ಉತ್ತರ ಪ್ರದೇಶದ ಗೌತಮ್ ಬುದ್ಧ ನಗರದಲ್ಲಿ ನೋಯ್ಡಾದಿಂದ(Noida) ಈ ಘಟನೆ ನಡೆದಿದೆ. ರಣವೀರ್ ಐಷಾರಾಮಿ ಕಾರನ್ನು(Car) ಸುಟ್ಟ ವ್ಯಕ್ತಿ. ಈತ ಮಾಲೀಕನ ಮನೆಗೆ ಟೈಲ್ಸ್ ಅಳವಡಿಸಿದ್ದನು. ಆದರೆ ರಣವೀರ್‌ಗೆ ಮಾಲೀಕ ಪೂರ್ಣ ಸಂಬಳ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡ ರಣವೀರ್ ಮಾಲೀಕನ ಐಷಾರಾಮಿ ಕಾರನ್ನು ಸುಟ್ಟು ತನ್ನ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಕಾರಿಗೆ ಬೆಂಕಿ ಹಚ್ಚಿ ರಣವೀರ್ ಪರಾರಿಯಾಗಿದ್ದಾನೆ. ಇದೀಗ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೀಡಿಯೋದಲ್ಲಿ ಏನಿದೆ?: ರಣವೀರ್ ಬೈಕ್‍ನಲ್ಲಿ ಬಂದು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಕಾರಿಗೆ ಹತ್ತುದ್ದಿದ್ದಂತೆ ರಣವೀರ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ನೋಯ್ಡಾದ ಸದರ್‍ಪುರದಲ್ಲಿ ನಡೆದಿದ್ದು, ಇಡೀ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಮೇಲ್ಜಾತಿಯ ಜನರಿಗೆ ಸೇರಿದ ಮಡಿಕೆಯಿಂದ ನೀರು ಕುಡಿದ ದಲಿತನ ಮೇಲೆ ಹಲ್ಲೆ

    ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಘಟನೆಗೆ ಸಂಬಂಧಿಸಿ ರಣವೀರ್‌ನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮರ್ಸಿಡಿಸ್ ಮಾಲೀಕರು ನೀಡಿದ ದೂರಿನ ನಂತರ ಅವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಶಾಲೆಗೆ ನುಗ್ಗಿ ಶಿಕ್ಷಕಿ ಮೇಲೆ ಕುಡುಕನಿಂದ ಹಲ್ಲೆ

    Live Tv
    [brid partner=56869869 player=32851 video=960834 autoplay=true]

  • ಹೆಂಡತಿ ಆಗಲು ನಟಿ ನೀತುಗೆ ತಿಂಗಳಿಗೆ 25 ಲಕ್ಷ ವೇತನದ ಆಫರ್ ನೀಡಿದ್ದ ಉದ್ಯಮಿ

    ಹೆಂಡತಿ ಆಗಲು ನಟಿ ನೀತುಗೆ ತಿಂಗಳಿಗೆ 25 ಲಕ್ಷ ವೇತನದ ಆಫರ್ ನೀಡಿದ್ದ ಉದ್ಯಮಿ

    ಬಾಲಿವುಡ್ ಹೆಸರಾಂತ ನಟಿ ನೀತು ಚಂದ್ರ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ. ತಾವು ಆ ಉದ್ಯಮಿಯನ್ನು ಮದುವೆಯಾದರೆ, 25 ಲಕ್ಷ ರೂಪಾಯಿ ವೇತನ ಕೊಡುವುದಾಗಿ ಅವನು ಆಫರ್ ನೀಡಿದ್ದನಂತೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ಸಿನಿಮಾವೊಂದರ ಆಡಿಷನ್  ಗೆ ಹೋಗಿದ್ದ ನೀತು ಅವರಿಗೆ ಆ ಸಿನಿಮಾದ ನಿರ್ದೇಶಕರು ನೀವು ಈ ಚಿತ್ರಕ್ಕೆ ಆಯ್ಕೆ ಆಗುವುದಿಲ್ಲ. ಆದರೆ, ನಿಮಗೊಂದು ಆಫರ್ ಕೊಡುತ್ತೇನೆ. ಒಬ್ಬ ಉದ್ಯಮಿಯನ್ನು ನೀವು ಮದುವೆಯಾದರೆ, ವೇತನ ಸಹಿತ ಪತ್ನಿಯಾಗಿ ಅವರು ನಿಮ್ಮನ್ನು ಇಟ್ಟುಕೊಳ್ಳಲಿದ್ದಾರೆ ಎಂದು ಹೇಳಿದ್ದರಂತೆ. ಆದರೆ, ನೀತು ಅದಕ್ಕೆ ಒಪ್ಪಿಲ್ಲವಂತೆ.

    ಆ ಸಿನಿಮಾ ಯಾವುದು? ನಿರ್ದೇಶಕರು ಯಾರು ಎನ್ನುವುದನ್ನು ನಾನು ಹೇಳುವುದಿಲ್ಲ. ಆದರೆ, ಅವತ್ತು ಅವರು ನನಗೆ ಇಂಥದ್ದೊಂದು ಆಫರ್ ನೀಡಿ, ಕೋಪಕ್ಕೆ ತುತ್ತಾಗಿದ್ದರು. ಅವರು ನನಗೆ ವೇತನ ಕೊಡುತ್ತಿದ್ದರೋ ಇಲ್ಲವೋ, ನಾನು ಒಪ್ಪಿಕೊಳ್ಳುತ್ತೇನೆ ಎಂದು ಅವರು ಹೇಗೆ ಅಂದುಕೊಂಡಿದ್ದರು ಎಂದು ಪ್ರಶ್ನೆ ಮಾಡಿದ್ದಾರೆ ನೀತು.

    Live Tv
    [brid partner=56869869 player=32851 video=960834 autoplay=true]

  • ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಗುತ್ತಿಗೆ, ಹೊರ ಗುತ್ತಿಗೆ ನೌಕರರ ವೇತನ ಪರಿಷ್ಕರಣೆಗೆ ಯತ್ನ, ಆರೋಗ್ಯ ವಿಮೆ ವಿಸ್ತರಣೆ: ಸುಧಾಕರ್

    ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ವೇತನವನ್ನು ಹೆಚ್ಚಳ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಆರೋಗ್ಯ ವಿಮೆ ವಿಸ್ತರಿಸಲು ಕೂಡ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಷ್ಕರ ನಡೆಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಸುಧಾಕರ್, ಸರ್ಕಾರದ ಇತಿಮಿತಿಯೊಳಗೆ ಎಲ್ಲಾ ಬೇಡಿಕೆಗಳನ್ನು ಆದಷ್ಟು ಶೀಘ್ರದಲ್ಲಿ ಈಡೇರಿಸಲಾಗುವುದು. ಶ್ರೀನಿವಾಸಾಚಾರಿಯವರ ವರದಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಭ್ರಷ್ಟಾಚಾರದ ಇನ್ನೊಂದು ಮುಖವೇ ಕಾಂಗ್ರೆಸ್: ರೇಣುಕಾಚಾರ್ಯ

    ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಖಾಯಂ ನೌಕರರಿಗೆ ಕೊಡುವಷ್ಟೇ ವೇತನವನ್ನು ನಮಗೂ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 49 ಕಾರ್ಯಕ್ರಮಗಳನ್ನು ನಿರ್ದಿಷ್ಟ ಸಮಯದ ತನಕ ಮಾಡಲಿದೆ. ಹೀಗಾಗಿ ಅವರನ್ನು ಖಾಯಂ ನೌಕರರನ್ನಾಗಿ ಮಾಡಿಕೊಳ್ಳಲು ಅಡಚಣೆಗಳಿವೆ. ಅಷ್ಟೇ ಅಲ್ಲದೆ, ಖಾಯಂ ನೌಕರರಂತೆ ಸಮಾನ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ಈಗಿರುವ ವೇತನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

    ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಆರೋಗ್ಯ ವಿಮೆ ವಿಸ್ತರಣೆ, 10 ದಿನಗಳ ವೇತನ ಸಹಿತ ರಜೆಯ ಬೇಡಿಕೆಗಳನ್ನು ಇಟ್ಟಿದ್ದಾರೆ. ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಲಿದೆ. ಪ್ರತಿಭಟನಾ ನಿರತ ನೌಕಕರು ಕೇಳಿರುವ ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ಪ್ರಮಾಣಿಕ ಪ್ರಯತ್ನ ಮಾಡಲಿದ್ದೇವೆ. ಸರ್ಕಾರ ಅವರ ಪರವಾಗಿ ಕೆಲಸ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ಪತ್ತೆಹಚ್ಚಿದ ತಾಯಿ!

    ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನರು ಬಹಳ ವಿಶ್ವಾಸ ಇಟ್ಟಿದ್ದಾರೆ. ಕೇವಲ ಮೂಲಭೂತ ಸೌಲಭ್ಯಗಳಿಂದ ಮಾತ್ರ ಜನರಿಗೆ ವಿಶ್ವಾಸ ಬರುವುದಿಲ್ಲ. ಬದಲಾಗಿ ಇಂತಹ ನೌಕರರಿಂದ ಆರೋಗ್ಯ ಸೇವೆಗೆ ಉತ್ತಮ ಹೆಸರು ಬಂದಿದೆ. ಅವರಿಗೆ ನೋವು ಕೊಟ್ಟು ನಾವು ಮುಂದುವರಿಯುವುದು ಅಸಾಧ್ಯ. ಕೆಲವು ಬೇಡಿಕೆ ಈಡೇರಿಸಲು ಕಾನೂನಾತ್ಮಕ, ತಾಂತ್ರಿಕ ತೊಡಕುಗಳಿವೆ. ಇವೆಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಿ, ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ. ದೇಶದಲ್ಲೇ ಆರೋಗ್ಯ ಸೇವೆ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದಕ್ಕೆ ಪೂರಕವಾಗಿ ಕೆಲಸ ನಡೆಯಬೇಕು. ನೌಕರರು ಮುಷ್ಕರ ಕೈ ಬಿಟ್ಟು ಶೀಘ್ರದಲ್ಲೇ ಸೇವೆಗೆ ಹಿಂದಿರುಗಬೇಕು ಎಂದು ಸಚಿವರು ಮನವಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

  • ವೇತನಕ್ಕೆ ಆಗ್ರಹಿಸಿ ಖಾಸಗಿ ಐಟಿಐ ಒಕ್ಕೂಟದಿಂದ ಬೆಂಗಳೂರಿಗೆ ಪಾದಯಾತ್ರೆ

    ವೇತನಕ್ಕೆ ಆಗ್ರಹಿಸಿ ಖಾಸಗಿ ಐಟಿಐ ಒಕ್ಕೂಟದಿಂದ ಬೆಂಗಳೂರಿಗೆ ಪಾದಯಾತ್ರೆ

    ಹುಬ್ಬಳ್ಳಿ: ಸಿಬ್ಬಂದಿ ವೇತನ ಅನುದಾನಕ್ಕೆ ಒತ್ತಾಯಿಸಿ ಖಾಸಗಿ ಐಟಿಐ ಸಂಘಟನೆಯಿಂದ ಬೆಂಗಳೂರು ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ.

    ಸಂಘಟನೆ ನೂರಾರು ಸದಸ್ಯರು ವಿವಿಧ ಬೇಡಿಕೆಗೆ ಆಗ್ರಹಿಸಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದಾರೆ. ನಗರದ ಮೂರುಸಾವಿರ ಮಠದಿಂದ ಆರಂಭಗೊಂಡಿರುವ ಈ ಪಾದಯಾತ್ರೆ ಒಟ್ಟು 15 ದಿನಗಳ ಕಾಲ ನಡೆಯಲಿದೆ. ಮಾರ್ಗ ಮಧ್ಯೆ ವಿವಿಧ ಜಿಲ್ಲೆಯ ಸಿಬ್ಬಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಇದನ್ನೂ ಓದಿ: ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

    ಈ ಬಗ್ಗೆ ಮಾತನಾಡಿದ ಒಕ್ಕೂಟದ ರಾಜ್ಯ ಸಂಚಾಲಕ ಪ್ರದೀಪ್, ಸರ್ಕಾರ ಈ ಹಿಂದೆ ಐಟಿಐ ಕಾಲೇಜುಗಳಿಗೆ ಹಾಗೂ ಸಿಬ್ಬಂದಿಗೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿದೆ. ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಈ ಪಾದಯಾತ್ರೆ ಬೆಂಗಳೂರು ತಲುಪುವುದರೊಳಗಾಗಿ ಸರ್ಕಾರ ನಮ್ಮ ಬೇಡಿಕೆಯನ್ನು ಪೂರೈಸಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಮೈಕ್ರೋಸಾಫ್ಟ್ ಸಿಇಒ ಪುತ್ರ ನಿಧನ!