Tag: ವೇಟರ್

  • ನನಗೇನು ಗೊತ್ತಿಲ್ಲ, ಈಗಲೇ ಗೊತ್ತಾಗಿದ್ದು: ಸಂದೇಶ್ ನಾಗರಾಜ್

    ನನಗೇನು ಗೊತ್ತಿಲ್ಲ, ಈಗಲೇ ಗೊತ್ತಾಗಿದ್ದು: ಸಂದೇಶ್ ನಾಗರಾಜ್

    ಬೆಂಗಳೂರು: ನನಗೇನು ಗೊತ್ತಿಲ್ಲ, ನನಗೆ ಈ ಬಗ್ಗೆ ಕೇಳಬೇಡಿ ಎಂದು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ ನಾಗರಾಜ್ ಹೇಳಿದ್ದಾರೆ.

    ದರ್ಶನ್ ಮತ್ತು ಸ್ನೇಹಿತರು ದಲಿತ ವೇಟರ್‍ರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಆರೋಪಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನನಗೇನು ಗೊತ್ತಿಲ್ಲ. ನನಗೆ ಈ ಬಗ್ಗೆ ಕೇಳಬೇಡಿ. ಈ ಬಗ್ಗೆ ಇವತ್ತೇ ಟಿವಿಯಲ್ಲಿ ನೋಡುತ್ತಿದ್ದೇನೆ. ನಾನು ಹೋಟೆಲ್‍ನಲ್ಲಿ ಅಂದು ಇರಲಿಲ್ಲ. ಪ್ರಕರಣ ನಡೆದಿದೆ ಎಂದು ಹೋಟೆಲ್‍ನವರು ಅಥವಾ ಹೋಟೆಲ್‍ನಲ್ಲಿ ಹೊಡೆಸಿಕೊಂಡವರಾದರು ಹೇಳಬೇಕು. ಆದರೆ ಇಬ್ಬರೂ ಕೂಡ ಆ ಬಗ್ಗೆ ಹೇಳಿಲ್ಲ. ಇಂದ್ರಜಿತ್ ಲಂಕೇಶ್‍ರವರು ಮಾಡುತ್ತಿರುವ ಆರೋಪದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

    ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಇಂದ್ರಜಿತ್ ಲಂಕೇಶ್, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೇಟರ್ ಕಣ್ಣುಗಳಿಗೆ ಹಾನಿಯಾಗಿದೆ. ಈ ಘಟನೆಯ ಸಂದರ್ಭದಲ್ಲಿ ದರ್ಶನ್, ರಾಕೇಶ್, ಹರ್ಷ ಮೇಲಾಂಟ, ಮತ್ತು ಪವಿತ್ರ ಗೌಡ ಇರುತ್ತಾರೆ. ಘಟನೆಯ ಬಳಿಕ 50 ಸಾವಿರ ರೂ. ನೀಡಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ:ಇಂದ್ರಜಿತ್ ಮನವಿಯಂತೆ ತನಿಖೆ ನಡೆಸುವಂತೆ ಮೈಸೂರು ಎಸ್‍ಪಿಗೆ ಸೂಚನೆ: ಬೊಮ್ಮಾಯಿ

  • ಹೋಟೆಲಿನಲ್ಲಿ ತಿಂಡಿ ಸರ್ವ್ ಮಾಡಿದ್ದ ಮಹಿಳೆಗೆ ದಂಪತಿ ಕಾರ್ ಗಿಫ್ಟ್

    ಹೋಟೆಲಿನಲ್ಲಿ ತಿಂಡಿ ಸರ್ವ್ ಮಾಡಿದ್ದ ಮಹಿಳೆಗೆ ದಂಪತಿ ಕಾರ್ ಗಿಫ್ಟ್

    – ಪ್ರತಿ ದಿನ 22.5 ಕಿ.ಮೀ ನಡ್ಕೊಂಡೇ ಬರ್ತಿದ್ದ ಮಹಿಳಾ ವೇಟರ್
    – ಕಾರು ಗಿಫ್ಟ್ ನೀಡಿದ್ದರ ಕಾರಣ ಇಲ್ಲಿದೆ

    ಟೆಕ್ಸಾಸ್: ಧನ್ಯವಾದ ಹೇಳುವ ರೂಪದಲ್ಲಿ ಇಲ್ಲೊಂದು ಜೋಡಿ ಹೋಟೆಲಿನ ಮಹಿಳಾ ವೇಟರ್ ನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಕಾರ್ ಉಡುಗೊರೆಯಾಗಿ ನೀಡಿದ್ದಾರೆ.

    ಅಮೆರಿಕದ ಟೆಕ್ಸಾಸ್‍ನ ಗ್ಯಾಲ್ವೆಸ್ಟನ್‍ನಲ್ಲಿ ಘಟನೆ ನಡೆದಿದ್ದು, ಆಟ್ರಿಯಾನ್ನಾ ಎಡ್ವರ್ಡ್ಸ್ ಅವರು ಅಮೆರಿಕನ್ ರೆಸ್ಟೋರೆಂಟ್ ಚೈನ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹೋಟೆಲಿಗೆ ತಿಂಡಿ ತಿನ್ನಲು ದಂಪತಿ ಬರುತ್ತಾರೆ. ಆಗ ಎಡ್ವರ್ಡ್ಸ್ ಅವರು ದಂಪತಿಗೆ ತಿಂಡಿಯನ್ನು ಸರ್ವ್ ಮಾಡುತ್ತಾರೆ. ಆದರೆ ರಾತ್ರಿ ಊಟದ ಹೊತ್ತಿಗೆ ಈ ದಂಪತಿ ಎಡ್ವರ್ಡ್ಸ್ ಅವರಿಗೆ ಕಾರ್ ಗಿಫ್ಟ್ ನೀಡಿ ಆಶ್ಚರ್ಯವಾಗುವಂತೆ ಮಾಡುತ್ತಾರೆ.

    ಅಷ್ಟಕ್ಕೂ ದಂಪತಿ ಏಕೆ ಎಡ್ವರ್ಡ್ಸ್ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದರು ಎಂಬ ಕಥೆ ಇಲ್ಲಿದೆ. ಹೋಟೆಲಿನಲ್ಲಿ ತಿಂಡಿ ತಿನ್ನುವ ವೇಳೆ ದಂಪತಿ ತಮಗೆ ಆಹಾರ ಸರ್ವ್ ಮಾಡಿದ ಮಹಿಳೆ ಎಡ್ವರ್ಡ್ಸ್ ಅವರ ಬಗ್ಗೆ ತಿಳಿಯುತ್ತಾರೆ. ಈ ವೇಳೆ ಎಡ್ವರ್ಡ್ಸ್ ಅವರು ಕೆಲಸಕ್ಕಾಗಿ ಪ್ರತಿ ನಿತ್ಯ 14 ಮೈಲಿ(22.5 ಕಿ.ಮೀ.) ನಡೆಯುತ್ತಾರೆ. ಇವರು ಇಷ್ಟು ನಡೆಯಲು ಕಾರಣ ತಾವೂ ಕಾರುಕೊಳ್ಳಬೇಕೆಂಬ ಮಹದಾಸೆ. ಇದಕ್ಕಾಗಿ ಹಣ ಉಳಿಸಲು ನಿತ್ಯ 14 ಮೈಲಿ ನಡೆದುಕೊಂಡೇ ಕೆಲಸಕ್ಕೆ ಬರುತ್ತಾರೆ ಎಂಬುದು ದಂಪತಿ ಅರಿವಿಗೆ ಬರುತ್ತದೆ.

    ತಕ್ಷಣವೇ ದಂಪತಿ ಬ್ರೋಡ್ ವೇ ರಸ್ತೆಯಲ್ಲಿರುವ ಕ್ಲಾಸಿಕ್ ಗ್ಯಾಲ್ವೆಸ್ಟನ್ ಆಟೋ ಗ್ರೂಪ್‍ಗೆ ತೆರಳಿ ಅಡ್ವಡ್ರ್ಸ್‍ಗಾಗಿ ಕಾರು ಖರೀದಿಸುತ್ತಾರೆ. ಹಲವು ಗಂಟೆಗಳ ನಂತರ ದಂಪತಿ ಡೆನ್ನೀಸ್ ಹೋಟೆಲ್‍ಗೆ ಆಗಮಿಸಿ ಅಡ್ವಡ್ರ್ಸ್ ಅವರಿಗೆ 2011 ನಿಸ್ಸಾನ್ ಸೆಂಟ್ರಾ ಕಾರನ್ನು ಉಡುಗೊರೆಯಾಗಿ ನೀಡುತ್ತಾರೆ.

    ಎಡ್ವರ್ಡ್ಸ್ ತುಂಬಾ ಅಳುತ್ತಿದ್ದಳು, ಇದನ್ನು ನನಗೆ ಸಹಿಸಲಾಗಲಿಲ್ಲ. ಹೀಗಾಗಿ ಕಾರ್ ಉಡುಗೊರೆಯಾಗಿ ನೀಡಿದೆ ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಎಂದು ಕಾರು ಖರೀದಿಸಿ ಉಡುಗೊರೆಯಾಗಿ ನೀಡಿದ ಮಹಿಳೆ ತಿಳಿಸಿದ್ದಾರೆ.

    ಈ ಉಡುಗೊರೆಯಿಂದಾಗಿ ಎಡ್ವರ್ಡ್ಸ್ ಅವರ ಪ್ರಯಾಣ 5 ಗಂಟೆಯಿಂದ 30 ನಿಮಿಷಕ್ಕೆ ಇಳಿದಿದೆ. ಯಾವುದೇ ಸಂಬಂಧವಿಲ್ಲದಿದ್ದರೂ, ಅವರು ಕೇಳದಿದ್ದರೂ ಸಹ ಅವಳ ಒಳ್ಳೆಯ ಗುಣವನ್ನು ಹಾಗೂ ಆಕೆಯ ಛಲವನ್ನು ನೋಡಿ ದಂಪತಿ ಈ ಉಡುಗೊರೆಯನ್ನು ನೀಡಿದ್ದಾರೆ. ಎಡ್ವರ್ಡ್ಸ್ ನಮಗೆ ಆಭಾರಿಯಾಗಿದ್ದರೆ ಅಷ್ಟೇ ಸಾಕು ಎಂದು ದಂಪತಿ ತಿಳಿಸಿದ್ದಾರೆ.

    ನಾನಿನ್ನೂ ಕನಸು ಕಾಣುತ್ತಿದ್ದೇನೆ ಎಂದು ನನಗನ್ನಿಸುತ್ತಿದೆ. ಯಾರಿಗಾದರೂ ಸಹಾಯ ಮಾಡುವುದು ನನ್ನ ಸ್ವಭಾವ. ಸಹಾಯ ಮಾಡಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಎಡ್ವರ್ಡ್ಸ್ ಸಂತಸ ವ್ಯಕ್ತಪಡಿಸಿದ್ದಾರೆ.

    ಕಳೆದ ವರ್ಷ ಅಲಬಾಮಾ ವ್ಯಕ್ತಿಯೊಬ್ಬ ಕೆಲಸದ ಮೊದಲ ದಿನದಂದು ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು 32 ಕಿ.ಮೀ.ನಡೆದಿದ್ದ. ಕೆಲಸದ ಮೊದಲ ದಿನವೇ ಕಂಪನಿ ಮಾಲೀಕ ಅವನಿಗೆ ಕಾರ್ ಉಡುಗೊರೆಯಾಗಿ ನೀಡಿದ್ದ.

  • ಕೇಕ್ ಕತ್ತರಿಸಲು ಚಾಕು ಕೇಳಿದ್ದಕ್ಕೆ ಮಹಿಳೆ ಮೇಲೆ ವೇಟರ್ ಹಲ್ಲೆ!

    ಕೇಕ್ ಕತ್ತರಿಸಲು ಚಾಕು ಕೇಳಿದ್ದಕ್ಕೆ ಮಹಿಳೆ ಮೇಲೆ ವೇಟರ್ ಹಲ್ಲೆ!

    ಮುಂಬೈ: ಹೋಟೆಲಿನಲ್ಲಿ ಮಹಿಳೆಯೊಬ್ಬರು ತನ್ನ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದ್ದ ವೇಳೆ ಕೇಕ್ ಕತ್ತರಿಸಲು ಚಾಕು ಕೇಳಿದ್ದಕ್ಕೆ ವೇಟರ್ ಆಕೆಯ ಮೇಲೆ ಹಲ್ಲೆ ಮಾಡಿರುವ ಘಟನೆ ಮುಂಬೈನ ಜೆ.ಬಿ ನಗರದಲ್ಲಿ ನಡೆದಿದೆ.

    ನಿಶಾಂತ್ ಗೌಡ(23) ಹಲ್ಲೆ ಮಾಡಿರುವ ವೇಟರ್ ಎಂದು ಗುರುತಿಸಲಾಗಿದೆ. ಫರ್ಜಾನಾ ಮಿರಾತ್(30) ಹಲ್ಲೆಗೊಳಗಾದ ಮಹಿಳೆ. ಭಾನುವಾರ ಬೆಳಗ್ಗೆ ಫರ್ಜಾನಾ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದರು. ಈ ವೇಳೆ ಜೆ.ಬಿ ನಗರದಲ್ಲಿರುವ ಹೋಟೆಲ್‍ಗೆ ತನ್ನ ತಾಯಿಯ ಜೊತೆಗೆ ಫರ್ಜಾನಾ ಹೋಗಿದ್ದಾರೆ. ಆಗ ಅಲ್ಲಿ 6ರಿಂದ 7 ಬಾರಿ ವೇಟರ್‍ನನ್ನು ಪದೇ ಪದೇ ಕರೆದು ತಿಂಡಿ ಆರ್ಡರ್ ಮಾಡಿದ್ದಾರೆ. ಅಲ್ಲದೆ ತನ್ನ ಮದುವೆ ವಾರ್ಷಿಕೋತ್ಸವದ ಆಚರಣೆ ಮಾಡಲು ಫರ್ಜಾನಾ ಕೇಕ್ ಕೂಡ ಆರ್ಡರ್ ಮಾಡಿದ್ದಾರೆ.

    ಬಳಿಕ ಕೇಕ್ ಕತ್ತರಿಸಲು ಚಾಕು ನೀಡದ್ದಕ್ಕೆ ಮತ್ತೆ ನಿಶಾಂತ್‍ನನ್ನು ಕರೆದು ಚಾಕು ನೀಡುವಂತೆ ಕೇಳಿದ್ದಾರೆ. ಮೊದಲೇ ಕೋಪದಲ್ಲಿದ್ದ ವೇಟರ್ ಪದೇ ಪದೇ ಈ ಮಹಿಳೆ ಹಿಂಸೆ ನೀಡುತ್ತಿದ್ದಾಳೆಂದು ಚಾಕು ತಂದು ನೇರವಾಗಿ ಫರ್ಜಾನಾನ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಗೈದ ಪರಿಣಾಮ ಮಹಿಳೆಯ ಕತ್ತಿನ ಮೇಲೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆ ಕುರಿತು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಆರೋಪಿಯನ್ನು ಜೆ.ಬಿ ನಗರ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv