Tag: ವೇಗ

  • ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು

    ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಇಬ್ಬರು ಸಾವು

    ನವದೆಹಲಿ: ವೇಗವಾಗಿ ಬಂದ ಕಾರು ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಬಡಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರದಲ್ಲಿ ನಡೆದಿದೆ.

    ಈ ಘಟನೆಯಲ್ಲಿ ಮಲ್ಕಾಗಂಜ್ ಮೂಲದ 18 ವರ್ಷದ ಪ್ರಬ್ಬೋತ್ ಸಿಂಗ್ ಮತ್ತು ಹರ್ಯಾಣ ಸಿರ್ಸಾ ಮೂಲದ 20 ವರ್ಷದ ರುಬಲ್ ಸಾವನ್ನಪ್ಪಿದ್ದು, ಕಮಲಾ ನಗರ್ ನಿವಾಸಿ ಕೇಶವ್ (21) ಮತ್ತು ಅರ್ಷ್‍ಪ್ರೀತ್‍ಗೆ ಗಂಭೀರವಾಗಿ ಗಾಯವಾಗಿದೆ.

    ತುಂಬಾ ವೇಗದಲ್ಲಿ ಬಂದ ಹೋಂಡಾ ಸಿಟಿ ಕಾರು ವಿದ್ಯುತ್ ಕಂಬಕ್ಕೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರು ಬಡಿದ ರಭಸಕ್ಕೆ ಕಂಬ ಕೂಡ ಬಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ. ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿ ಮೇಘನಾ ಯಾದವ್, ತೀವ್ರವಾಗಿ ಗಾಯಗೊಂಡವರನ್ನು ಹತ್ತಿರದ ಜಿಟಿಬಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ತುಂಬಾ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಚಾಲಕ ತುಂಬಾ ವೇಗವಾಗಿ ಕಾರು ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಕಂಬಕ್ಕೆ ಬಡಿದಿದ್ದಾನೆ ಅದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಿದ್ದಾರೆ.

  • ನೋಡ ನೋಡುತ್ತಿದ್ದಂತೆ ಪಾದಚಾರಿ ಮೇಲೆ ಹರಿದ ಲಾರಿ- ವ್ಯಕ್ತಿ ಸ್ಥಳದಲ್ಲೇ ಸಾವು

    ನೋಡ ನೋಡುತ್ತಿದ್ದಂತೆ ಪಾದಚಾರಿ ಮೇಲೆ ಹರಿದ ಲಾರಿ- ವ್ಯಕ್ತಿ ಸ್ಥಳದಲ್ಲೇ ಸಾವು

    ಮಂಡ್ಯ: ಸಾರ್ವಜನಿಕರು ನೋಡ ನೋಡುತ್ತಿದ್ದಂತೆ ಲಾರಿ ಹರಿದು ಪಾದಚಾರಿ ಒಬ್ಬರು ಮೃತಪಟ್ಟಿರುವ ಭಯಾನಕ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.

    ಶಂಕರ್ (40) ಮೃತ ದುರ್ದೈವಿ. ಶಂಕರ್ ಪಾಂಡವಪುರ ಪಟ್ಟಣದ ರಾಜ್‍ಕುಮಾರ್ ವೃತ್ತದ ಬಳಿ ರಸ್ತೆ ದಾಟಲು ಹೋಗಿದ್ದಾರೆ. ಈ ವೇಳೆ ತಿರುವಿನಲ್ಲಿ ವೇಗವಾಗಿ ಬಂದ ಲಾರಿ ಪಾದಾಚಾರಿ ಮೇಲೆ ಹರಿದು ಮೃತಪಟ್ಟಿದ್ದಾರೆ.

    ನೋಡ ನೋಡುತ್ತಿದ್ದಂತೆ ನೂರಾರು ಜನ ಸಾರ್ವಜನಿಕರೆದುರೇ ನಡೆದ ಅಪಘಾತ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಲಾರಿ ಹರಿದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.